ಕೀರ್ತನೆಗಳ ವಿಷಯಸೂಚಿ

ಯತಿಗಳು

ಪ್ರಾಚೀನ ಹರಿದಾಸರು

1. ಶ್ರೀರಾಮ – ಶ್ರೀಯೋಗೀಂದ್ರತೀರ್ಥರು

 1.ರಾಗ: ಮುಖಾರಿ	ತಾಳ: ತ್ರಿವಿಡಿ
ಸರಸೀ ಸಂಭವಾ ಸುಂದರ
ಚರಣಯುಗ ಶರಣೆಂಬೆ	ಪ
ಕರುಣೀಸಿ ಪದಾವಾ ಪರಿಪಾಲಿಸಿದೆ
ಪರಮಪುರುಷನನುಗ್ರಹವ ಪಡದೆ	1
ವೈರಿನಿಕರವಾ ದೂರೀಕರಿಸೀದೆ
ಗುರುರಾಘವೇಂದ್ರರಾಯ ಸ್ಮರಿಸೂವೆ ನಿಂಮಯ	2
ಶ್ರೀರಾಮ ಪದಾಂಭೋಜ ವರಪೂಜಾ ಬಲದಿಂ-
ದುರಿತಾವ್ಯನಗ ನೀ ಯಿರದಂತೆ ಮಾಡಿದೆ	3
ಪದಾ=ತುರಿಯಾಶ್ರಮ, ಸಂನ್ಯಾಸಾಶ್ರಮ
							

ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿ

ರಾಗ: ಕಾಂಬೋಜಿ/ಮುಖಾರಿ	ತಾಳ: ಝಂಪೆ
ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿ
ತಾನಾಗಿ ಶ್ರೀರಾಘವೇಂದ್ರಯತಿ ಒಲಿದ	ಪ
ಪೋರತನದವನು ಎರಡು ತೆರೆಗಳಲ್ಲಿ
ದೂರಾಗಿ ಮೊರೆಯು ಇಲ್ಲವೆಂದು
ಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿ
ಧೀರ ತಾ ಕರವನ್ನು ಪಿಡಿದ ಬಳಿಕ	1
ಜಗದೊಳಗೆ ಪದಾರ್ಥಗಳ ಗುಣದಿ ಭುಂಜಿಸುವಂಗೆ
ಅಗದಂಕರನು ತಾನು ಬಳಿಗೆ ಬಂದು
ಬಗೆಬಗೆಯಿಂದಲಿ ಸುರಸ ಪದಾರ್ಥಗಳು
ಸೊಗಸಾಗಿ ಉಣಿಸಲು ಚಿಂತೆಯುಂಟೆ	2
ಪೂರ್ಣಜಲ ಹರಿವ ವಾಹಿನಿ ಕಂಡು ಬೆದರುವಗೆ
ಕರ್ಣಧಾರನು ತಾನೆ ಬಂದು ನಿಂದು
ತೂರ್ಣದಲಿ ಕರಪಿಡಿದು ಹರಿಗೋಲ ಒಳಗಿಟ್ಟು
ಫೂರ್ಣಿಸಲು ಅವನಿಗೆ ಚಿಂತೆಯುಂಟೆ	3
ತನ್ನಯ ಹಿತವು ತಾ ವಿಚಾರಿಸಲವಂಗೆ
ಚೆನ್ನಾಗಿ ಪರಮ ಗುರು ತಾನೆ ಬಂದು
ಸನ್ಮಾರ್ಗವನು ತಾನೆ ಪೇಳುವೆನೆನಲು
ಇನ್ನು ಆಯಾಸವುಂಟೆ	4
ಏಸು ಜನ್ಮದಲಿ ಅರ್ಚಿಸಿದೆನೊ ನಾ ಇನ್ನು
ವಾಸುದೇವವಿಠಲ ಪಾದಪದುಮ
ಲೇಸಾಗಿ ಈ ಸುಕೃತದಿಂದೆನ್ನ ಹರಿದಾಸ
ಈ ಸುಗುಣ ಗುರುರಾಯ ಎನಗೆ ಒಲಿದ	5
							

3 ಮರೆವರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ

3.ರಾಗ: ಯದುಕುಲಕಾಂಬೋಜಿ	ತಾಳ: ತ್ರಿಪುಟ/ತ್ರಿವಿಡ
ಮರೆವರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ
ಕರೆದು ಕಾಮಿತಗಳ ಕರೆವೆ ನಾ ನಿಮಗೆಂದು	 ಪ
ದಾರಿಯ ತಪ್ಪಿ ಪೋಗುವ ಧೀರ ಪೋರನ್ನ
ದಾರಿಯ ಪಿಡಿಸಿನ್ನು ಪುರವನ್ನೆ ತೋರಿಸೆ
ಊರಿನವೊಳಗೆ ಅವನ ಆಗ
ದೂರ ನೋಡುವರೆ ದೋಷಗಳ ವಿಚಾರಮಾಡುವರೆ
ಧೀರರು ಆವ ಪರಿಯಲವನ ಪಾರುಗಾಣಿಪರಲ್ಲದೆ	1
ಹಸಿದು ಪರರ ಕೇಳದೆ ದ್ವಿಜವರಿಯನ್ನ
ಶಿಶುವಿನ ನೋಡಿ ದಯದಿಂದ ಕರದಿನ್ನು
ಹಸಿದ್ಯಾಕೊ ಎಂದು ಪಾಕವ ಮಾಡಿ
ಹಸನಾಗಿ ತಂದು ಬಡಿಸುವ ಅವಸರದಿ ನಿಂದು ಅವನ ದೋಷ
ಪಸರಿಸಿ ಉಣಿಸಿದ ಜನರುಂಟೆ ಧರೆಯೊಳು	2
ಜಲಪಾನಾತುರನಾಗಿ ಜಲವ ಕೇಳಿದ ವಿಪ್ರ-
ಕುಲ ತರುಳನನಳÀ ನೋಡಿ ಕೃಪೆಯಿಂದ ಸುರನದಿ
ಜಲವನೀವೆನೆಂದು ಬೇಗನೆ ದಿವ್ಯ
ಕಲಶವ ತಂದು ಬಾರೆಲೊ
ಬಲು ಆಲಸ್ಯವ್ಯಾಕೆಂದು ನಿನ್ನಯ ಪಂಕ
ತೊಳೆಯ ಕೊಡುವೆನೆಂದು ತಡವ ಮಾಡುವರೆ	3
ಸುಶರೀರತನವನ್ನು ಮನದಲಿ ಬಯಸಿ ತಾ
ಉಸರದ ಮುನಿತನಯನ ಕಂಡು ತಾವಾಗಿ
ಕುಶಲವವು ಕೇಳಿ ದೇವತ ವೈದ್ಯ
ಅಸಮರೆಂದ್ಹೇಳಿ (ರಸ ಮಾಡೆಂಧ್ಹೇಳಿ) ಅವಗೆ ದಿವ್ಯ
ರಸವನು ಪೇಳಿ (ಪಸಿ) ನಿನ್ನಲಿದ್ದಾ
ಕಿಸರು ಪೋದರೆ ಕೊಡುವೆವೆಂದು ನಿಲುವರೆ	4
ಆರ್ತಿಯ ಭಕುತನ್ನ ನೋಡೀಗ ನಿನ ದಿವ್ಯ
ಕೀರ್ತಿಯ ನೋಡಿಕೊ ವಾಸುದೇವವಿಠಲನ
ಮೂರ್ತಿಯ ಭಜಕ ಭಕ್ತರಾಭೀಷ್ಟ
ಪೂರ್ತಿಗೆ ಜನಕ ನಿನ್ನಯ ಗುಣ
ಸ್ಫೂರ್ತಿ ಉಳ್ಳನಕ ಪಾಪದ ಲೇಶ
ವಾರ್ತಿ ಎನಗೆ ಇಲ್ಲವೆಂದು ನಿಶ್ಚೈಸಿದೆ	5
							

3. ರಾಜೇಶಹಯಮುಖ – ಶ್ರೀ ವಿಶ್ವೇಂದ್ರತೀರ್ಥರು

3.ರಾಗ: [ನವರೋಜû]	ತಾಳ: [ಮಿಶ್ರನಡೆ]
ವರ ಮಂತ್ರಾಲಯದೊಳು ಘನವಾಗಿ ನೆಲಸಿರ್ಪ
ಪರಮ ಸದ್ಗುರುವರ್ಯ ಶ್ರೀ ರಾಘವೇಂದ್ರ 	 ಪ
ಭುವನಾದ್ರಿಯೊಳಗುದುಭವಿಸುತ್ತರವಿಯಂತೆ 
ತವಕದಿಂ ದಿನದಿನವು ತೇಜವನು ಬೆಳಗುವೆ	1
ನರನಂತೆ ಮೆರೆಯುವ ಜಯಮುನಿಕೃತಶಾಸ್ತ್ರ
ಪರಿಮಳವನು ನೀನು ಪಸರಿಸಿದೆಯಲ್ಲವೆ 	2
ಮಧ್ವಮತವೆಂಬ ದುಗ್ಧಸಾಗರದೊಳು 
ಉದ್ಭವಿಸಿದ ಪೂರ್ಣ ಹಿಮಕರ ತೇಜ 	3
ಅಸುರನಂದನನಾಗಿ ನರಹರಿಯನೆ ಕಂಡ
ವ್ಯಾಸರಿವರು ಸಿರಿ ಗುರುರಾಘವೇಂದ್ರ 	4
ರಾಜೇಶಹಯಮುಖ ಭಜಕರೊಳಗೆ ನೀನು
ರಾಜಿಪ ಸುರತರುವಂತಿರ್ಪೆ ಗುರುವೆ 	5
							

4. ನಾಮಗಿರೀಶ್ವರಸ್ವಾಮಿ – ಶ್ರೀ ವಿದ್ಯಾರತ್ನಾಕರತೀರ್ಥರು

ರಾಗ: [ಯಮನ್(ಯಮುನಾಕಲ್ಯಾಣಿ)]	ತಾಳ: [ಆದಿ]
ರಾಘವೇಂದ್ರ ಸಲಹೊ ಗುಣಸಾಂದ್ರ	 ಪ
ಭಗವದ್ಗೀತಾ ವಿವರಣ ತಂತ್ರದೀಪ
ನಿಗಮತತಿಗೆ ಖಂಡಾರ್ಥವ ರಚಿಸಿ
ಋಗರ್ಥಗಳನು ಅತಿ ಸ್ಫುಟವಾಗಿ ವಿವರಿಸಿ
ಖಗವಾಹನನ ತೋಷಪಡಿಸಿದ ಧೀರ	1
ಧರಣಿ ದಿವಿಜರರಿಗೆ ವರಗಳ ಕೊಡುವಂಥ
ಸುರತರುವೆ ನಿನಗೆ ಕರಗಳ ಮುಗಿದು
ಪರಮಪುರುಷ ಹರಿಚರಣ ಕಮಲದಲಿ
ಸ್ಥಿರವಾದ ಭಕುತಿಯ ಬೇಡುವೆ ಧೀರ	2
ಚಂಡ ಕುಮತಗಳ ಖಂಡಿಸಿ ಬುಧಜನ
ಮಂಡಲದೊಳಗೆ ಪ್ರಚಂಡನೆಂದೆನಿಸಿ
ಕುಂಡಲಿಶಯನ ಪಾದಮಂಡಿತ ಹೃದಯ ಭೂ-
ಮಂಡಲದೊಳಗೆ ಆಖಂಡಲನಾದ	3
ಶ್ರದ್ಧೆಯಿಂದಲಿ ವರ ಮಧ್ವಾಚಾರ್ಯರ ಮತ-
ಪದ್ಧತಿ ಬಿಡದಂತ ಬುದ್ಧಿಯನಿತ್ತು
ಉದ್ಧರಿಸಯ್ಯ ಕೃಪಾಬ್ಧಿಯೆ ಬುಧಜನಾ-
ರಾದ್ಯಚರಣ ಪರಿಶುದ್ಧ ಚರಿತ್ರ	4
ಕಾಮಜನಕನಾದ ನಾಮಗಿರೀಶ್ವರ
ಸ್ವಾಮಿ ನೃಹರಿಪಾದ ತಾಮರಸಂಗಳ
ಪ್ರೇಮದಿ ಪೂಜಿಪೆನೆಂಬೊ ಕಾಮಿತವರ ನೀಡೊ
ಶ್ರೀಮತ್ಸುಧೀಂದ್ರಕರ ತಾಮರಸಭವನೆ	5
							

5. ಪ್ರಸನ್ನ – ಶ್ರೀ ವಿದ್ಯಾಪ್ರಸನ್ನತೀರ್ಥರು

ರಾಗ: ಮೋಹನ	ತಾಳ: ಆದಿ
ಗುರುವರ್ಯರನು ಭಜಿಸೋ ರಾಘವೇಂದ್ರ
ಗುರುವರ್ಯರನು ಭಜಿಸೋ	 ಪ
ಧರೆತಲದಲಿ ಅವತರಿಸಿ ಸುಜನರನು
ಪರಿಪÀರಿ ವಿಧದಲಿ ಪೊರೆಯುತಲಿರುವ ಸದ್	ಅ.ಪ
ನಳಿನನಾಭ ಶ್ರೀರಾಮರ ರುಚಿರ ಪದಗಳ ಸಂತತದಿ ಭಜಿಸಿ
ಖಳರ ದುರ್ಮತಗಳನಳಿಸಿ ದಶಪ್ರಮತಿ-
ಗಳ ದಿವ್ಯ ಶಾಸ್ತ್ರಾರ್ಥಗಳನು ಸುಲಭದಲಿ
ಇಳೆಯೊಳು ಸುಜನಕೆ ತಿಳಿಯುವ ತೆರದಲಿ
ಬೆಳಗುತಿರುವ ಪರಿಮಳ ಮುಖವರಗ್ರಂಥ-
ಗಳನು ರಚಿಸುತ ಉಳಿಸಿ ಸುಮತಿಯನು
ಇಳೆಯೊಳು ವರಮಂತ್ರ ನಿಲಯದಿ ನೆಲೆಸಿದ	1
ಮಂಗಳಕರಳೆಂದು ಚರಿತೆಯುಳ್ಳ ತುಂಗಾತೀರದಿ ನೆಲೆಸಿ
ಕಂಗೊಳಿಸುತ ಚರಣಂಗಳ ಭಜಿಪರ
ಸಂಘಕ್ಕೆ ತಮ್ಮ ಅಪಾಂಗ ವೀಕ್ಷಣದಿಂದ
ಮಂಗಳ ತತಿಗಳ ನೀಡಿ ಅವರ ಅಘ
ಭಂಗವಗೈಯುತ ಅನುದಿನದಲಿ ದ್ವಿಜ-
ಪುಂಗವ ನಿಕರದಿ ಪೂಜೆಯಗೊಂಬ ಉ-
ತ್ತುಂಗಚರಿತ ರಥಾಂಗಧರ ಪ್ರಿಯ	2
ಮುನ್ನ ಪ್ರಹ್ಲಾದನೆನಿಸಿ ಶ್ರೀ ನರಹರಿಯನ್ನು ಸತತ ಭಜಿಸಿ
ಇನ್ನೊಂದು ಜನುಮದಿ ಮಾನ್ಯ ಶ್ರೀ ವ್ಯಾಸಮುನಿ
ಯೆನ್ನಿಸಿ ಖಳಮತವನ್ನು ಖಂಡಿಸುತಲಿ
ಚೆನ್ನ ಶ್ರೀಕೃಷ್ಣನ ಉನ್ನತ ಮಹಿಮೆಗ-
ಳನ್ನು ಬೋಧಿಸುತ ತನ್ನ ಭಕುತಜನ-
ರನ್ನು ಹರುಷದಲಿ ಧನ್ಯರೆನಿಸಿದ ಪ್ರ-
ಸನ್ನ ಶ್ರೀರಾಮರ ಭಕುತ ಶಿರೋಮಣಿ	3
							

ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ

ರಾಗ: ಶಹನ	ತಾಳ: ಆದಿ
ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ	ಪ
ಕ್ಷಿತಿಯೊಳಗೆ ದಶಪ್ರಮತಿಗಳ ಸುಖಕರ
ಮತದ ಪರಮ ಸಂಗತಿಗಳ ಹರಡಿದ	ಅ.ಪ
ಜಯ ಮುನಿಗಳವರ ಗ್ರಂಥಗಳಿಗೆ ಸುಖ-
ಮಯ ಟಿಪ್ಪಣಿಗಳನು ರಚಿಸಿ ಚಿನ್-
ಮಯ ರಾಮರ ಸೇವೆಯ ಸಂತಸದಲಿ-
ಗೈದು ಸುಮಂತ್ರಾಲಯದಲಿ ನೆಲೆಸಿದ	1
ಮಂಗಳಕರವಾದ ತುಂಗಾನದಿಯ ತ-
ರಂಗಗಳಲಿ ಮಿಂದು ನಿಮ್ಮನು
ಕಂಗಳಿಂ ನೋಡಿ ಗುಣಂಗಳ ಪಾಡಿ ನಿ-
ಸ್ಸಂಗರಾದ ಸಾಧು ಸಂಘವ ಪೊರೆಯುವ	2
ಪರಿಪರಿಯಲಿ ನಿಮ್ಮ ನಮಿಪ ಸೇವಕರಿಗೆ
ಸುರಧೇನುವಿನಂತೆ ಸಂತತ
ಹರುಷದಿಂದಲಿ ನಿಮ್ಮ ಭಜಿಪ ಸುಜನರಿಗೆ
ಸುರತರುವಂತೆ ಪ್ರಸನ್ನರಾಗುವಂಥ	3
							

ದುರಿತ ಜೀಮೂತವಾತ

8.ರಾಗ: ಸಾವೇರಿ	ತಾಳ: ಆದಿ
ದುರಿತ ಜೀಮೂತವಾತ
ಪೊರೆಯೈ ನಿನಗೆ ನಿರುತ
ಶರಣು ಪೋಗುವೆ ನೀತ ಕರವಪಿಡಿಯೋ ಪ್ರೀತ
ಧರಣಿಯೊಳಗೆ ವಿಸ್ತರಿಸಬಲ್ಲವರಾರು
ಗುರುವೆ ನಿಜ ನಮಿತರ ಸುರತರುವೆ	ಪ
ನಂಬಿದೆ ನಿನ್ನ ಪಾದವಂಬುಜವ ಅನುಗಾಲ
ಬೆಂಬಿಡದಲೆ ನಾನೆಂಬೋದು ಬಿಡಿಸಿಂದು
ಬೆಂಬಲವಾಗು ಆರೆಂಬ ಖಳರ ನೀಗು
ಇಂಬಾಗಿ ನೋಡು ದಿವ್ಯಾಂಬಕದಿಂದ 
ಡಿಂಬಾರೋಪಿರೆ ಡಂಬಕತನವೆಂಬುದು ಕೊಡದಲೆ
ಸಂಭ್ರಮದಲಿ ಹರಿಹಂಬಲ1 ಬಯಸುವ
ಹಂಬಲಿಗರ ಕೂಡ ಇಂಬು ತೋರು ಬಲು
ಗಂಭೀರ ಕರುಣಿ	1
ಎಣೆಗಾಣೆ ನಿಮಗೆ ಕುಂಭಿಣಿಯೊಳಗೆಲ್ಲ ಯತಿ
ಮಣಿಯೆ ರಾಮವ್ಯಾಸರ 
ಮಣಿಭೂಷಣ ಚರಣಾರ್ಚನೆ ಮಾಳ್ಪ ಮಹಿಮ
ಮನಸಿಜ ಶರಭೀಮ ಮನದಣಿಯೆ ಉಣಿಸಿ ಈ
ದಿನ ಮೊದಲು ಪಿಡಿದು ಜನುಮ ಜನುಮದÀ ಸಾ-
ಧನ ಫಲಿಸಿತೊ ಯೋಚನೆಗೊಳಲ್ಯಾತಕೆ
ಅನುಮಾನ ಸಲ್ಲದು ಘನತರ ಕೀರ್ತಿ ನೂರಾರಕೆ
ಎಣಿಕೆ ಇಲ್ಲದೆ ಮೆರೆವ ದಿನಕರ ಪ್ರಭಕಾಯ	2
ವರಹಜೆ ಸರಿತೆಯಲ್ಲಿ ಸ್ಥಿರವಾಗಿ ನಿಂದು 
ಧರಣಿಸುರರಿಂದಾರಾಧನೆ ಸರಸರನೆ ಹಗಲು
ಇರುಳು ಕೈಗೊಳುತ ವಕ್ಕಾರಗಳ ಹರಿಸಿ ಸುಂ-
ದರ ವರಗಳನಿತ್ತು ಚಿರಕಾಲ ಬಿಡದಲೆ
ಪರವಾದಿಯ ಬಲ ಉರುದಲ್ಲಣ ಪೂ-
ತುರೆ ಸುಧೀಂದ್ರರ ಕರಾರವಿಂದಜ
ಅರಸರಸರ ಪ್ರಿಯ ವಿಜಯವಿಠ್ಠಲನ
ಬಿರಿದು ಹೊಯಿಸುವ ಧೀರಾ ಗುರು ರಾಘವೇಂದ್ರ	3
1. ದೊಂಬಲ - ಪಾಠ
							

ನೋಡಿದೆ ಗುರುಗಳ ನೋಡಿದೆ

9.	ರಾಗ: ಭೈರವಿ	ತಾಳ: ತ್ರಿಪುಟ	
ನೋಡಿದೆ ಗುರುಗಳ ನೋಡಿದೆ	ಪ
ನೋಡಿದೆನು ಗುರುರಾಘವೇಂದ್ರರ
ಮಾಡಿದೆನು ಭಕುತಿಯಲಿ ವಂದನೆ
ಬೇಡಿದೆನು ಕೊಂಡಾಡಿ ವರಗಳ
ಈಡು ಇಲ್ಲದೆ ಕೊಡುವ1 ಗುರುಗಳ2	ಅ.ಪ
ಮೊದಲು ಗಾಂಗೇಯಶಯ್ಯಜನು ಈ
ನದಿಯ ತೀರದಲಿಲ್ಲಿ3 ಯಾಗವ
ಮುದದಿ ರಚಿಸಿ ಪೂರೈಸಿ ಪೋಗಿರ-
ಲದನು ತಮ್ಮೊಳು ತಿಳಿದು4 ತವಕದಿ
ಹೃದಯ ನಿರ್ಮಲರಾಗಿ ರಾಗದಿ
ಬುಧಜನರ ಸಮ್ಮೇಳದಲಿ ಸಿರಿ
ಸದನನಂಘ್ರಿಯ ತಿಳಿದು ನೆನೆವರ5 
ಉದಿತ ಭಾಸ್ಕರನಂತೆ ಪೊಳೆವರ6 	1
ಅಲವಬೋಧ ಮಿಕ್ಕಾದ ಮಹಮುನಿ-
ಗಳು ಸಾಂಶರು ಒಂದು ರೂಪದಿ
ನೆಲೆಯಾಗಿ ನಿತ್ಯದಲಿ ಇಪ್ಪರು
ಒಲಿಸಿಕೊಳುತಲಿ ಹರಿಯ ಗುಣಗಳ
ತಿಳಿದು ತಿಳಿಸುತ7 ತಮ್ಮ ತಮಗಿಂ-
ದಲಧಿಕರಿಂದುಪದೇಶ ಮಾರ್ಗದಿ 
ಕಲಿಯುಗದೊಳು8 ಕೇವಲ ಕ-
ತ್ತಲೆಯ ಹರಿಸುವ9 ಸೊಬಗ ಸಂತತ	2
ರಾಮ ನರಹರಿ ಕೃಷ್ಣ ಕೃಷ್ಣರ
ನೇಮದಿಂದೀ ಮೂರ್ತಿಗಳ ಪದ-
ತಾಮರಸ ಭಜನೆಯನು ಮಾಳ್ಪರು10 
ಕೋಮಲಾಂಗರು ಕಠಿನಪರವಾದಿ
ಸ್ತೋಮಗಳ ಮಹಮಸ್ತಕಾದ್ರಿಗೆ
ಭೂಮಿಯೊಳು ಪವಿಯೆನಿಸಿದ ಯತಿ
ಯಾಮಯಾಮಕೆ ಎಲ್ಲರಿಗೆ ಶುಭ
ಕಾಮಿತಾರ್ಥವ ಕರೆವ ಗುರುಗಳ11	3
ನೂರು ಪರ್ವತ ವರುಷ ಬಿಡದಲೆ
ಚಾರು ವೃಂದಾವನದಲಿ ವಿ-
ಸ್ತಾರ ಆರಾಧನೆಯು ತೊಲಗದೆ
ವಾರವಾರಕೆ ಆಗುತ್ತಿಪ್ಪುದು
ಸಾರೆ ಕಾರುಣ್ಯದಲಿ ಲಕುಮೀ-
ನಾರಾಯಣ ತಾ ಚಕ್ರರೂಪದಿ
ಸಾರಿದವರಘ ಕಳೆದು ಇವರಿಗೆ
ಕೀರುತಿಯ ತಂದಿಪ್ಪನನುದಿನ12	4
ಮಿತವು ಎನದಿರಿ ಇಲ್ಲಿ ದಿನದಿನ-
ಕತಿಶಯವೆ ಆಗುವುದು ಭೂಸುರ
ತತಿಗೆ ಭೋಜನ ಕಥಾಶ್ರವಣ ಭಾ-
ರತ ಪುರಾಣಗಳಿಂದಲೊಪ್ಪುತ
ಕ್ಷಿತಿಯೊಳಗೆ ಮಂಚಾಲೆ ಗ್ರಾಮಕೆ 
ಪ್ರತಿಯು ಇಲ್ಲವೆಂದೆನಿಸಿಕೊಂಬುದು
ಪತಿತಪಾವನ ವಿಜಯವಿಠಲನ
ತುತಿಸಿಕೊಳುತಲಿ ಮೆರೆವ ಗುರುಗಳ13	5
1 ಮೆರೆವ; 
2 ಮಹಿಮೆಯ; 
3 ತೀರದಿ ಇಲ್ಲಿ;
4 ತನ್ನೊಳಗರಿತು; 
5 ನೆನೆದು ಕಳೆವರ; 
6 ಭಾಸ್ಕರನಂತೆಯಿಪ್ಪರು, ಭಾಸ್ಕರನಂತೆ ಇಟ್ಟರ; 
7 ತಿಳಿಸಿ ತಿಳಿವರು; 
8 ಕಲಿಯುಗದೊಳಗಿದೇ; 
9 ಪರಿಹರಿಸುವ/ಪರಿಸುವ; 
10 ಮಾಡುವ; 
11 ನಂದವ; 
12 ತಂದಿತ್ತನನುದಿನ; 
13 ಮುನಿಗಳ;
							

ಪರಮ ಮಂಗಳ ಮೂರುತಿ ದಿವ್ಯಕೀರುತಿ

10.ರಾಗ: ಸೌರಾಷ್ಟ್ರ	ತಾಳ: ತ್ರಿವಿಡ/ತ್ರಿಪುಟ
ಪರಮ ಮಂಗಳ ಮೂರುತಿ ದಿವ್ಯಕೀರುತಿ 
ಧರೆಯೊಳಗಿದೆ ವಾರುತಿ	ಪ
ಕರುಣಾಪಯೋನಿಧಿಯೆ ಕರವ ಪಿಡಿದು ಎನ್ನ 
ಕರಣಶುದ್ಧನ ಮಾಡೊ ಕರವ ಮಸ್ತಕ ಬಾಗಿಪೆ 	1
ರಾಘವೇಂದ್ರರ ಪಾದ ಲಾಘವ ಮತಿಯಲ್ಲಿ 
ಶ್ಲಾಘನ ಮಾಡಿದ ಮಾಗಧಾರಿಯ ಪ್ರಿಯ	2
ನಿರುತ ಮಂತ್ರಾಲಯ ಪುರವಾಸ ಅಘನಾಶ
ಸಿರಿ ವಿಜಯವಿಠ್ಠಲನ ಚರಣ ಭಜಿಪ ಗುರುವೆ	3
							

11 ಮಂತ್ರಾಲಯನಿವಾಸ ಉತ್ತಮ ಹಂಸ

11.	ರಾಗ: ಕಾಂಬೋಜಿ	ತಾಳ: ಝಂಪೆ/ಆದಿ
ಮಂತ್ರಾಲಯ ನಿವಾಸ ಉತ್ತಮ ಹಂಸ 
ಸಂತಾಪ ಪರಿಹರಿಸಿ ಕೊಡು ಎನಗೆ ಲೇಸ 	 ಪ
ಯತಿಗಳ ಶಿರೋರನ್ನ ಯೋಗಸಂಪನ್ನ 
ಕ್ಷಿತಿಯೊಳಗೆ ನಿನಗೆ ಸರಿಗಾಣೆನೊ
ನುತಿಸುವೆ ಭಕ್ತಿಯಲಿ ಬಿಡದೆ 
ಮುಕುತಿಯಲಿ ಸತತಾನಂದದಲಿಪ್ಪ ಜ್ಞಾನವಿರಲಿ ತಪ್ಪ 	 1
ಕಪಿಲ ತೀರ್ಥದಲಿ ಶರಣ ಶುದ್ಧಿಯಲ್ಲಿ 
ತಪವ ಮಾಡುವ ಮೌನಿ ಸೌಮ್ಯe್ಞÁನಿ 
ಜಪಶೀಲ ಗುಣಾಂಬುಧಿ ಪುಣ್ಯದ ಬುದ್ಧಿ 
ಕೃಪೆಮಾಡಿ ಕೊಡು ಗುರುವೆ ಶಿಷ್ಯಸುರತರುವೆ	2
ತಮೋಗುಣ ಕಾರ್ಯ ಪೋಗಲಾಡು ವ್ಯಾಪ್ತಿಯಾ 
ಶಮೆದಮೆಯಲಿ ಉಳ್ಳ ಮಹಿಮೆಯಾ
ನಮಗೆ ಪೇಳುವ ವೇದಬಲ್ಲ ವಿನೋದ 
ಸುಮನ ಸುಗುಣವ ಮೆಚ್ಚೆ ದುರ್ಮತಕೆ ಕಿಚ್ಚೆ	3
ಕಾಶಿ ಸೇತುವೆ ಮಧ್ಯ ಮೆರೆವ ಭೇದ ವಿ- 
ದ್ಯ ಸಜ್ಜನಕೆ ತಿಳುಪ ಮನಸು ನಿಲಿಪೆ 
ಪೋಷಿಸುವೆ ಅವರ ಅಟ್ಟುವ ಮಹದುರ- 
ದೋಷವ ಕಳೆವಂಥ ವಿಮಲಬಲ ಶಾಂತ	4
ವರಹಜ ತೀರದಲಿದ್ದ ಸುಪ್ರಸಿದ್ಧ 
ಮರುತ ಮತಾಂಬುಧಿ ಸೋಮ ನಿಸ್ಸೀಮ 
ಸರಸಿಜಪತಿ ನಮ್ಮ ವಿಜಯವಿಠ್ಠಲನಂಘ್ರಿ 
ಸ್ಮರಿಸುವ ಸುಧೀಂದ್ರಸುತ ರಾಘವೇಂದ್ರ	5
							

ರಾಘವೇಂದ್ರ ಗುರುರಾಯ ರಮಣೀಯ ಕಾಯ

12.	ರಾಗ: ಮುಖಾರಿ	ತಾಳ: ಅಟ
ರಾಘವೇಂದ್ರ ಗುರುರಾಯ ರಮಣೀಯ ಕಾಯ
ರಾಘವೇಂದ್ರ ಪಾದಾಂಬುಜ ಭೃಂಗ ಭವ ಭಯ ಭಂಗ	ಪ
ನೋಡಿದೆ ನಿನ್ನ ಮಹಿಮೆ ಹಾಡಿ ಪಾಡುವೆನೊ ನಿತ್ಯ
ಆಡಿ ಕೊಂಡಾಡಲು ಬಲು ಗೂಢವಾಗಿದೆ
ನಾಡಿನೊಳಗೆ ಒಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನ
ಮೂಢ ಬುದ್ಧಿಯ ಬಿಡಿಸು ಕೂಡಿಸು ಸಜ್ಜನರೊಳಗೆ	1
ನಾಮಾಭಿಮಾನಿವಿಡಿದು ಉಮಾಪತಿ ಪರಿಯಂತ
ಈ ಮನ ಎರಗಲಿ ಯಾಮ ಯಾಮಕೆ
ಕಾಮಿಪೆ ಇದನೆ ಗುರುವೆ ವಾಮದಕ್ಷಿಣ ಭಾಗ ಮಾರ್ಗ
ನೇಮ ತಪ್ಪದಂತೆ ತಿಳಿಸಿ ಭ್ರಾಮಕ ಬುದ್ಧಿಯ ಓಡಿಸುವುದು	2
ಚಿಂತಾಮಣಿ ಕಂಡ ಮೇಲೆ ಭ್ರಾಂತಿಗೊಳಿಪ ವಿಷಯ
ಚಿಂತಿಸಿ ಬೇಡುವುದು ಲೋಕಾಂತದ ಸುಖವು
ಇಂತು ಬಾಗಿ ನಿಂತು ಕೇಳುವಂತೆ ಮಾಡದಿರು ಕರುಣಿ
ಸಂತತ ನಿನ್ನ ಪಾದಕ್ರಾಂತನಾಗಿ ತುತಿಸುವೆ	3
ಸಾರಿಸಾರಿಗೆ ಈ ಚಿತ್ರ ತಾರತಮ್ಯತತ್ತ್ವದ ವಿಚಾರಗೈದು ನಲಿದಾಡಿ
ಮೇರೆ ಇಲ್ಲದೆ ಕೋರಿ ಇಂದಿರೇಶನ್ನ ಹೃ-
ದ್ವಾರಿಜದೊಳು ನಿಲಿಸಿ
ಆರಾಧನೆ ಮಾಡುವ ವೈಕಾರಿಕ ಭಾಗ್ಯವೆ ಬರಲಿ	4
ನಮೋ ನಮೋ ಯತಿರಾಜ ಮಮತೆ ರಹಿತ ಅನು-
ಪಮ ಚರಿತ ಚಾರುಹಾಸನೆನಿಪ ನಿನ್ನ 
ಹೆಮ್ಮೆಯಿಂದಲಿಪ್ಪ ಪರಬೊಮ್ಮ ವಿಜಯವಿಠಲನಾ-
ತುಮ್ಮದೊಳರ್ಚಿಪ e್ಞÁನೋತ್ತಮ ತುಂಗಭದ್ರವಾಸ	5
							

13.ರಾಘವೇಂದ್ರ ಪಾವನ ಕಾಯ

 13.ರಾಗ: ಹಿಂದೋಳ	ತಾಳ: ಝಂಪೆ
ರಾಘವೇಂದ್ರ ಪಾವನ ಕಾಯ ರಾಘವೇಂದ್ರ
ರಾಘವೇಂದ್ರ ದುರಿತೌಫ ಪರಿಹಾರ
ರಾಘವೇಶನ ಪಾದವನಜಾರಾಧಕ	 ಪ
ಶರಣು ಪೊಕ್ಕೆನು ಇಂದುಕಿರಣಪೊಲುವ ಚರಣ
ಸ್ಮರಣೆ ಪಾಲಿಸುವುದು ಕರುಣದಿಂದಲಿ ಇಂದು	1
ವ್ಯಾಕುಲ ಹರಿಸಿ ಕಾಮಕ್ರೋಧ ಓಡಿಸಿ	
ಸಾಕುವುದು ಎನ್ನ ಅನೇಕ ಮಹಿಮ ಗುರು	2
ಸಿರಿವರವಿಜಯವಿಠ್ಠಲ ಪರದೈವವೆ ಎಂದು 
ಸ್ಥಿರವಾಗಿ ಸ್ಥಾಪಿಸಿ ಮೆರೆದ ನಿರ್ಮಲಕಾಯ	3
							

14.ಗುರು ರಾಘವೇಂದ್ರರ ಚರಣ ಕಮಲವನ್ನು

14.ರಾಗ: ಧನ್ಯಾಸಿ	ತಾಳ: ಆದಿ/ಏಕ
ಗುರು ರಾಘವೇಂದ್ರರ ಚರಣ ಕಮಲವನ್ನು
ಸ್ಮರಿಸುವ ಮನುಜರಿಗೆ1 	ಪ.
ಕರೆಕರೆಗೊಳಿಸುವ ದುರಿತ ದುಷ್ಕøತವೆಲ್ಲ2
ಕರಿಯು ಸಿಂಹನ ಕಂಡ ತೆರನಾಗುವುದಯ್ಯ	ಅ.ಪ.
ಗುರುಮಧ್ವಮತವೆಂಬ ವರ ಕ್ಷೀರಾಂಬುಧಿಯಲ್ಲಿ
ಹರ ಧರಿಸಿದ3 ಶಶಿಯಂತುದಿಸಿ ಪರಮತ ತಿ-
ಮಿರಕ್ಕೆ ತರಣಿಕಿರಣನೆನಿಸಿ ಪಿರಿದು
ಮೆರೆದ ಸಿರಿ ರಾಮನರ್ಚಕರಾದ4 	1 
ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿ
ಪರಮೇಷ್ಟಿ ಮರುತರೆ ಗುರುಗಳೆಂದು
ಗರುಡಶೇಷರುದ್ರ ಸಮರೆಂದು ಸ್ಥಾಪಿಸಿ
ಸ್ಥಿರ ತಾರತಮ್ಯ ಪಂಚಭೇದ ಸತ್ಯವೆಂಬ	2
ಅಂಧಕರಿಗೆ ಚಕ್ಷು ವಂಧ್ಯೆಯರಿಗೆ ಸುತರು
ಬಂದಬಂದವರಿಗಭೀಷ್ಟಗಳನಿತ್ತು
ಒಂದಾರುನೂರುವತ್ಸರ ವೃಂದಾವನದಲ್ಲಿ
ಚೆಂದಾಗಿ ನಿಂದು ಮೆರೆವ ಕೃಪಾಸಿಂಧು ದೇವಾಂಶರ	3
ರಾ ಎನ್ನೆ ದುರಿತರಾಶಿಗಳ ದಹಿಸುವ
ಘ ಎನ್ನೆ ಘನ e್ಞÁನ ಭಕುತಿ ಈವ
ವೇಂ ಎನ್ನೆ ವೇಗದಿ ಜನನಮರಣ ದೂರ5
ದ್ರ ಎನ್ನೆ ದ್ರವಿಣಾರ್ಥ ಶ್ರುತಿ ಪ್ರತಿಪಾದ್ಯನ ಕಾಂಬ	4
ದೇವಾಂಶರಾಗಿ ತುಂಗಾತೀರದಿ ನಿಂದು 
ಸೇವೆ ಭೂಸುರರಿಂದ ಬಹು ಕೊಳುತ
ಭಾವಜನಯ್ಯ ಗೋಪಾಲವಿಠಲನ್ನ
ಸೇವಿಸುತಿಹ ಯತಿಕುಲ ಶಿಖಾಮಣಿಯಾದ6	5
1 ಸುಜನರಿಗೆ; 
2 ರಾಶಿಗಳೆಲ್ಲ; 
3 ಪರಮಶೋಭಿತ; 
4 ನರಹರಿ ರಾಮಾರ್ಚಕರಾದ; 
5 ಗೆದ್ದು;
6 - 5ನೆಯ ನುಡಿಯ ಪಾಠಾಂತರ
: “ವರ ತುಂಗಾ ತೀರ ಮಂತ್ರಾಲಯ ಪುರದಲ್ಲಿ 
| ಪರಿಪರಿ ಸೇವೆ ಭೂಸುರರಿಂದ ಕೊಳುತ 
| ಸಿರಿಯರಮಣ ನಮ್ಮ ಗೋಪಾಲವಿಠಲನ 
| ಚರಣ ಸೇವಿಸುತಿಪ್ಪ ಗುರು ಶಿಖಾಮಣಿಯಾದ” 
							

15.ಧರೆಯೊಳಗೆ ನಮ್ಮ ಗುರು ರಾಘವೇಂದ್ರರಿನ್ನು

15.ಸುಳಾದಿ - ರಾಗ: ಭೈರವಿ	ಶ್ರೀ ಮಂತ್ರಾಲಯ ಸುಳಾದಿ
ಧ್ರುವತಾಳ
ಧರೆಯೊಳಗೆ ನಮ್ಮ ಗುರು ರಾಘವೇಂದ್ರರಿನ್ನು
ಇರುತಿಪ್ಪ ವಿವರವ ಅರಿತಷ್ಟು ವರ್ಣಿಸುವೆ
ಸ್ಥಿರವಾಗಿ ಮಂತ್ರಾಲಯಪುರ ತುಂಗಾತೀರದಿ
ಹರಿಭಕ್ತಪ್ರಹ್ಲಾದ ವರಯಾಗ ಇಲ್ಲಿ ಮಾಡಿ
ಸುರರಿಗಮೃತಉಣಿಸಿ ಪರಿಪರಿಕ್ರಿಯೆ ಮಾಡಿ
ಪರಿಶುದ್ಧ ಆದನೆಂದು ಅರಿತು ಈ ಸ್ಥಳದಲ್ಲಿ
ಗುರು ರಾಘವೇಂದ್ರರಾಯ ಶರೀರ ಪೋಗಾಡಿಸಿಲ್ಲಿ
ಪರಲೋಕಸಾಧನ ಪರಿಪೂರ್ತಿ ಮಾಡಿಕೊಂಡು
ಸಿರಿಕೃಷ್ಣನ ಚರಣಕ್ಕೆರಗಿ ಸಂತೋಷದಲ್ಲಿ
ಧರೆಯ ಮೇಲಿದ್ದ ಜನರ ಪೊರೆಯಬೇಕೆಂದೆನಲು
ಹರಿ ನೋಡಿದನಿವರ ಪರಮದಯಾಳುತನವ
ಗುರುವಂತರ್ಯಾಮಿಯಾಗಿ ವರವ ನೀಡಲು ಜಗಕೆ
ನರಹರಿ ತಾನೆ ನಿಂದು ನಿರುತ ಪೂಜೆಯಗೊಂಡು
ಸಿರಿವುಳ್ಳ ಕೀರುತಿಯ ಸುರರ ಪಾಲಕ ಚಕ್ರ-
ಧರ ನಾರಾಯಣ ತಾನಿವರ ಸನ್ನಿಧಾನನಾಗಿ-
ವರಿಗೆ ಫಲ ತಂದೀವ ಇಹಪರದಲ್ಲಿ ಇನ್ನು
ಕರುಣಾಕರ ರಂಗ ಗೋಪಾಲವಿಠಲ ತನ್ನ
ಶರಣರ ಪೊರೆವಂಥ ಚರಿಯ ಪರಿಪರಿವುಂಟು	1
ಮಠ್ಯತಾಳ
ನರಹರಿಕೃಷ್ಣರಾಮಸಿರಿ ವೇದವ್ಯಾಸ
ಎರಡೆರಡು ನಾಲ್ಕು ಹರಿಮೂರ್ತಿಗಳು
ಪರಿವಾರ ಸಹಿತವಾಗಿ ಸಿರಿಸಹಿತನಿಂದು
ಸುರಗುರು ಮಧ್ವಾಚಾರ್ಯರೆ ಮೊದಲಾಗಿ
ತರುವಾಯದಲ್ಲಿನ್ನು ತಾರತಮ್ಯಾನುಸಾರ
ಪರಿಪರಿಯತಿಗಳು ಇರುತಿಪ್ಪರು ಇಲ್ಲಿ
ಹರುಷದಿಂದಲಿ ವೇದ ಒರೆದು ಶಾಸ್ತ್ರಗಳಿನ್ನು 
ಪರಿಪರಿ ಪುರಾಣ ಭಾರತಾಗಮದಲ್ಲಿ
ಸರಿಸರಿ ಬಂದಂತೆ ಸರಿಗಮವೆನುತಲಿ
ಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನು
ಹರಿಯ ಪೂಜಿಸುತ ಇರುಳು ಹಗಲು ಬಿಡದೆ
ಪರಿಪರಿ ವಿವರವ ಪರಿಪರಿ ಕೇಳ್ವರು
ಗರುಡವಾಹನ ರಂಗ ಗೋಪಾಲವಿಠಲ ತನ್ನ
ಶರಣರ ಪಾಲಿಸುತಿರುತಿಪ್ಪನಿಲ್ಲಿ	2
ತ್ರಿಪುಟತಾಳ
ನರಹರಿ ರೂಪನಾಗಿ ವಾಸವಾಗಿ ಇಲ್ಲಿ
ದುರಿತದುಷ್ಕøತ ಬ್ರಹ್ಮತ್ಯಗಳ ದೂರೋಡಿಸುವ 
ಸಿರಿರಾಮನಾಗಿ ವಾಸವಾಗಿ ಇಲ್ಲಿ
ಪರಿಪರಿಯಿಂದ ದೇಶಾಂತರ ಅನ್ನಕಳಕೊಂಡು
ನರರಿಲ್ಲಿ ಬಂದರೆ ಸ್ಥಿರಪಟ್ಟಗಟ್ಟುವ
ಸಿರಿಕೃಷ್ಣನಾಗಿ ವಾಸವಾಗಿ ಇಲ್ಲಿ
ಪರಿಪರಿಯಲ್ಲಿ ಬಂದ ಪರಮಾತುರರಿಗೆ
ವರವೀವ ಪುತ್ರೋತ್ಸವ ಮದುವೆ ಮುಂಜಿ
ಹರಕೆಗಳ ಕೈಕೊಂಡು ಹರುಷಬಡಿಸುವ
ವರ ವೇದವ್ಯಾಸನಾಗಿ ವಾಸವಾಗಿ ಇಲ್ಲಿ
ಭರದಿಂದಲಿ ಬಂದ ದುರ್ವಾದಿಗಳನ್ನೆಲ್ಲ
ದೂರ ಓಡಿಸಿ ಮುರಿದು ಅವರ ಕುಶಾಸ್ತ್ರವ
ಹರಿ ಸರ್ವೋತ್ತಮನೆಂದು ಇರುವನಿಲ್ಲಿ ತೋರಿ
ಶರಣಜನಕೆ ಇನ್ನು ವರe್ಞÁನಸುಧೆಯ 
ಕರೆದುಕೊಡುತ ಇರುತಿಪ್ಪುವನಿಲ್ಲಿ
ಸಿರಿವಂದಿತಪಾದ ಗೋಪಾಲವಿಠಲ
ಪರಿಪರಿಯಲಿ ಓಲಗ ಕೈಕೊಳುತಿಪ್ಪ 	3
ಅಟತಾಳ
ರಾಘವೇಂದ್ರನೆಂಬ ರೂಪ ತಾನೆಯಾಗಿ
ರಾಘವೇಂದ್ರನೆಂಬ ನಾಮ ಇಡಿಸಿಕೊಂಡು
ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ
ಭೋಗವರಿತು ತನ್ನ ಭಾಗವತರ ಕೀರ್ತಿ
ಸಾಧಿಸಿ ಸಲಹಲು ಜಗದೊಳಗೆಲ್ಲ
ಮೇಘ ಸುರಿದಂತ ಅಮೋಘ ಕೀರುತಿಯನ್ನು
ರಾಘವ ಇವರಿಗೆ ರಾಜ್ಯದಿ ತಂದಿತ್ತ
ರಾಘವೇಂದ್ರಮೂರುತಿ ಗೋಪಾಲವಿಠಲ
ಭಾಗವತರಲ್ಲಿ ಬಹುಪೂಜೆಯನುಗೊಂಬ	4
ಆದಿತಾಳ
ದಿನದಿನಕಿಲ್ಲಿ ನೂತನ ಪೂಜೆಗಳಾಗುವುವು
ದಿನದಿನಕಿಲ್ಲಿ ನೂತನ ಉತ್ಸವಗಳಾಗುವುವು
ದಿನದಿನಕಿಲ್ಲಿ ನೂತನ ವಾರ್ತೆಗಳಾಗುವುವು
ಜನರ ಸಂದಣಿ ಪ್ರತಿದಿನ ವಿಪ್ರಭೋಜನ
ಜನರ ಕೈಯಿಂದ ಪ್ರತಿಜನರೀಪ್ಸಿತ ತುಂಬುವರು
ಜನುಮ ಸಫಲ ತಮ್ಮ ಜನನವ ನೀಗುವರು
ದಿನಸಪ್ತಶತವರುಷದಿನಪರಿಯಂತರ
ದಿನಕರಶತತೇಜ ಜಗನ್ನಾಥ ತಾನಿಲ್ಲಿ
ಅನುವಾಗಿ ತಾ ನಿಂದು ಜನರ ಪಾಲಿಪುದ-
ಕ್ಕನುಮಾನ ಸಲ್ಲದು ಗುಣಗಣ ಪರಿ-
ಪೂರ್ಣ ಗೋಪಾಲವಿಠಲ ಅಣೋ-
ರಣೀಯ ಎಂಬುವಗೆ ಎಣೆಯಾರೊ ಜಗದೊಳಗೆ	5
ಜತೆ
ಮಂತ್ರಸಿದ್ಧಿಯಕ್ಷೇತ್ರ ಇದು ನೋಡಿ ಕೋವಿದರು
ಮಂತ್ರಪ್ರತಿಪಾದ್ಯ ಗೋಪಾಲವಿಠಲನಿಂದ
							

16 ಮುನಿಯ ನೋಡಿರೊ ಮುಕುತಿಧನವ ಬೇಡಿರೊ

16.ರಾಗ: ಮುಖಾರಿ/ಕೇದಾರಗೌಳ	ತಾಳ: ಏಕ/ಖಂಡಛಾಪು
ಮುನಿಯ ನೋಡಿರೊ ಮುಕುತಿಧನವ ಬೇಡಿರೊ 	ಪ.
ಜನುಮರಹಿತನಾಗಿನಿಂದು ಘನವರವೀವ ರಾಘವೇಂದ್ರ 	ಅ.ಪ.
ಸಂತರಗೂಡಿ ಸಕಲ ಚಿಂತೆಯ ಬಿಡಿ ಕು-
ಪಂಥವಸುಡಿ ನಾನೆಂತೆಂಬೋದು ಬಿಡಿ
ಅಂತರಂಗದಲ್ಲಿ ಹರಿಯ ಚಿಂತಿಸಿ ಏಕಚಿತ್ತದಲ್ಲಿ	1
ಗೋಳಕತ್ರಯ ಇನ್ನು ಕೇಳು ನಿರ್ಣಯ
ಆಲೋಚನೆಯಲ್ಲಿ ಶೀಲಮೂರ್ತಿಯ
ಆಳು ಸಹಿತ ಇಪ್ಪನಿಲ್ಲಿ ಬಹಳ ಫಲವನೀವುತಲಿ	2
ಮಂದಜನರನು ಪೊರೆಯೆ ಒಂದು ರೂಪದಿ 
ಬಂದು ಹರಿಯು ತಾನಿಲ್ಲಿ ನಿಂದೀರೂಪದಿ 
ಸುಂದರಾಂಗ ಗೋಪಾಲವಿಠಲ ತಂದು ಫಲವನೀವುತಿಪ್ಪ	3
							

17 ರಥವನೇರಿದ ರಾಘವೇಂದ್ರರಾಯ ಗುಣಸಾಂದ್ರ

17.ರಾಗ: ಮಧ್ಯಮಾವತಿ/ಪೂರ್ವಿ	ತಾಳ: ಆದಿ
ರಥವನೇರಿದ ರಾಘವೇಂದ್ರರಾಯ ಗುಣಸಾಂದ್ರ 	ಪ.
ಸತುವ ಮಾರ್ಗದಿ ಸಂತತ ಸೇವಿಪರಿಗೆ
ಹಿತದಿಂದಲಿ ಮನೋರಥವ ಕೊಡುವೆನೆಂದು	ಅ.ಪ.
ಚತುರದಿಕ್ಕುವಿದಿಕ್ಕುಗಳಲ್ಲಿ ಚರಿಪಾ ಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ ವರವ ಬೇಡುತಲಿ 
ನುತಿಸುತ ಪರಿಪರಿ ನತರಾಗಿಹರಿಗೆ 
ಗತಿಪೇಳದೆ ಸರ್ವಥಾ ನಾ ಬಿಡೆನೆಂದು 	 1
ಅತುಳಮಹಿಮನೆ ಆ ದಿನದಲ್ಲಿ ದಿತಿಜವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮಮತಿಯಲ್ಲಿ
ಅತಿಶಯವಿರುತಿರೆ ಪಿತನ ಬಾಧೆಗೆ ಮನ್ಮಥ-
ಪಿತನೊಲಿಸಿದ ಜಿತ ಕರುಣದಲಿ	2
ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿ ರಾಘವೇಂದ್ರ
ಪತಿತರುದ್ಧರಿಪ ಪಾವನಕಾರಿಯೆ ಕೈಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ನೆನೆಯುತ ವರ
ಮಂತ್ರಾಲಯದೊಳು ಶುಭವೀಯುತ	3
							

18.ವಂದಿಸಿ ನೋಡುವ ಬಾರೆ ಇಂದುಮುಖಿಯಳೆ

18.ರಾಗ: ಮೋಹನ/ಹಿಂದೂಸ್ತಾನಿ ಕಾಪಿ	ತಾಳ: ತ್ರಿವಿಡ/ಆದಿ
ವಂದಿಸಿ ನೋಡುವ ಬಾರೆ ಇಂದುಮುಖಿಯಳೆ ರಾಘ-
ವೇಂದ್ರರ ವೃಂದಾವನವನು ಹಿಂದೆ ಮಾಡಿದ ಸುಕೃತ-
ದಿಂದ ಹರಿ ಇವರಲ್ಲಿ ನಿಂದು ತಾ ಪೂಜೆಯಗೊಂಬುದ	ಪ.
ಬಹುಜನುಮಗಳಲ್ಲಿ ಅಹಿಶಾಯಿ ಇವರಿಂದ
ರಹಸ್ಯ ಅರ್ಚನೆಯ ಕೊಂಡು ಇಹಲೋಕದಲ್ಲಿ ಇವರ
ಮಹಿಮೆ ವ್ಯಕುತಿ ಮಾಡ್ದ ಸಹಕಾರಿಗಳು ಸರ್ವರ
ಸಹಿತ ಒಂದಂಶದಿ ಶ್ರೀಹರಿ ತಾನಿಲ್ಲಿ ನಿಂದು
ಇಹಪರ ಫಲಂಗಳನು ಪಾಲಿಸಿ ನಮೋ ಎಂದು ಬಂದು
ದೇಹಿ ಎಂದವರಿಗಿನ್ನು ವಹಿಸಿ ವರಗಳನೀಡುವ	1
ನರಹರಿರೂಪ ತಾನಾಗಿ ಪರಿಪರಿಯಲಿ ಬಂದಂಥ
ದುರಿತ ಬ್ರಹ್ಮೇತಿಗಳು ದುಷ್ಟ ಕರೆಕರೆ ರಾಕ್ಷಸ
ಜನ್ಮ ಪಡೆದು ದಣಿಪೊ ಅವನೆಲ್ಲ ದೂರದಿ ಓಡಿಸುವ ಬಿಡದೆ
ಸಿರಿರಾಮರೂಪಾಗಿ ಅನ್ನ ದೊರೆಯದೆ ಬಂದವರಿಗೆ
ಸ್ಥಿರವಾದ ಪಟ್ಟವಗಟ್ಟುವ ಹರಿಕೇಕಿಗಳು (?) ಶುಭ ಉಚ್ಚ 
ವರಸಂಧಾನ ವೈಭೋಗವು ಸಿರಿಕೃಷ್ಣತಾನಾಗಿ ನೀಡುವ 	2 
ವ್ಯಾಸರೂಪನಾಗಿ ಇಲ್ಲಿ ವಾಸವಾಗಿ ಬಂದಬಂದ
ದಾಸಜನರ ಅe್ಞÁನವ ಲೇಶವಿಡದೆ ಪರಿಹರಿಸಿ 
ದೋಷಗಳ ತರಿದು ಉಪದೇಶ ಮಾಡುವನು ಸುತತ್ವ
ಶೇಷವೇಶ ಪ್ರಹ್ಲಾದ ವ್ಯಾಸಮುನಿಯೆ ರಾಘವೇಂದ್ರ-
ಗೀಸುಬಗೆ ಪುಣ್ಯ ಇವರಿಗೆ ಕೇಶವನೆ ತಾ ಮಾ-
ಡಿಸಿ ಈ ಸುಖ ಇಹಪರದಲ್ಲಿ ಶಾಶ್ವತವಾಗಿತ್ತು ಸಲಹುವ	3
ಅನಿರುದ್ಧಾದಿ ನಾಲ್ಕು ಮೂರ್ತಿ ಘನವಾಗಿ ತಾವಿದ್ದು ಪ್ರತಿದಿನ
ದಿನಕತಿಶಯವಾಗಿ ದಿನಕರನಂತೆ ಸರ್ವತ್ರ
ಮನೆಮನೆಯಲ್ಲಿ ತಾವಿದ್ದು ಅನುವಾಗಿ ಪೂಜೆಯಗೊಂಬರು
ಕನಸು ಜಾಗರದಿ ಬಂದು ಎಳ್ಳನಿತು ಪೂಜೆ ತಪ್ಪಿದರೆ
ದಣಿಸಿ ದಂಡಿಸಿ ಮಾಡಿಪ್ಪರು ಜನರು ಮಾಡಿದ ಸುಕೃತ
ಅನುಕೂಲ ಒದಗಿತು ಮುನಿಯ ಪುಣ್ಯವನು ಏನೆಂಬೆ	4
ಆವ ತೀರ್ಥದಲ್ಲಿ ಪೋಗಿ ಸೇವಿಸಿ ಬಂದುದಕಿಂತ
ತಾವಧಿಕವಾಗಿ ಫಲವ ಈವನು ಶ್ರೀಹರಿ ಲಕುಮಿ-
ದೇವಿಸಹಿತ ಇದ್ದು ಕೋವಿದಗಿನ್ನು ಬಿಡದೆ
ಪಾವನ ಮಂಗಳಕ್ಷೇತ್ರ ಆವಾವ ವರ್ಣಿಪನೊ ಇತ್ತ
ಭೂವಲಯದೊಳಗೆ ಮಹಿಮದೇವ-
ದೇವೇಶ ಕೃಷ್ಣ ಗೋಪಾಲವಿಠಲ ಇಲ್ಲಿ ಸೇವಿಸಿಕೊಳುತಿಪ್ಪ	5
8. ಮೋಹನವಿಠಲ 
ಈ ಕೀರ್ತನೆ ಮೋಹನವಿಠಲದಾಸರದೆಂದು 
ಕೆಲವು ಗ್ರಂಥಗಳಲ್ಲಿ ತಿಳಿಸಿದ್ದಾರೆ. 
ಮೋಹನದಾಸರ ರಚನೆಯೆಂಬುದು 
ಖಚಿತವಾಗಿ ಹೇಳಲು ಸಾಧ್ಯವಿಲ್ಲ. 
Sವಿಜಯಮೋಹನವಿಠಲಾಂಕಿತರ ಕೀರ್ತನೆ ಇರಬಹುದು
							

19 ಕಂಡು ಧನ್ಯನಾದೆ ಗುರುಗಳ

19.ರಾಗ: ಬೆಹಾಗ್	ತಾಳ: ಝಂಪೆ/ಆದಿ
ಕಂಡು ಧನ್ಯನಾದೆ ಗುರುಗಳ ಕಣ್ಣಾರೆ ನಾ 
ಕಂಡು ಧನ್ಯನಾದೆ (+ನಮ್ಮ) (+ಈ) ಗುರುಗಳ 	ಪ
ತುಂಗಾತಟದಿ ಬಂದು ನಿಂತ 
ಪಂಗು ಬಧಿರಾದ್ಯಂಗ ಹೀನರ
ಅಂಗಗೈಸಿ ಸಲಹುವಾ ನರ-
ಸಿಂಗನಂಘ್ರಿ ಭಜಕರಿವರ	1
ಗುರುವರ ಸುಗುಣೇಂದ್ರರಿಂದ
ಪರಿಪರಿಯಲಿ ಸೇವೆಗೊಳುತ
ವರಮಂತ್ರಾಲಯ ಪುರದಿ ಮೆರೆವ
ಪರಿಮಳಾಖ್ಯ ಗ್ರಂಥಕರ್ತರ	2
ಸೋಹಂ ಎನ್ನದೆ ಹರಿಯ ದಾ-
ಸೋಹಂ ಎನ್ನಲು ಒಲಿದು ವಿಜಯ 
ಮೋಹನವಿಠ್ಠಲನ್ನ ಪರಮ
ಸ್ನೇಹದಿಂದ ತೋರುವವರ	 3
ಶ್ರೀ ಮೋಹನದಾಸರ “ಕೋಲುಹಾಡು”ಯಿಂದ ಉಧೃತ
(49ರಿಂದ 53ನೆಯ ನುಡಿಗಳು)
							

20 ದಂಡಕಮಂಡಲುಧರ ಪಂಡಿತರಾಧಾರ

20.	ರಾಗ: ಕಾಂಬೋಜಿ	ತಾಳ: ಆದಿ
ದಂಡಕಮಂಡಲುಧರ ಪಂಡಿತರಾಧಾರ
ಕುಂಡಲಿಶಯನನ ಭಜಕರ ಕೋಲೆ
ಕುಂಡಲಿಶಯನನ ಭಜಕ ರಾಘವೇಂದ್ರರ
ಕೊಂಡಾಡಿ ಪದನ ಗುಣಿಸುವೆ ಕೋಲೆ	1
ತಂತ್ರಸಾರಗಳಿಗೆ ಅರ್ಥವನ್ನು ಸ್ವ-
ತಂತ್ರದಿಂದಲಿ ರಚಿಸಿದ ಕೋಲೆ
ಸ್ವತಂತ್ರದಲಿ ರಚಿಸಿದ ರಾಘವೇಂದ್ರರ
ಪಂಥವಿದ್ದಲ್ಲಿ ಬಲಗೊಂಬೆ ಕೋಲೆ	2
ವೇದಶಾಸ್ತ್ರಾಮೃತಸಾರ ಬಲ್ಲ ರಾಮ-
ವೇದವ್ಯಾಸರ ಭಜಕರ ಕೋಲೆ
ರಾಮವೇದವ್ಯಾಸ ಭಜಕ ರಾಘವೇಂದ್ರರ
ಪಾದವಿದ್ದಲ್ಲಿ ಬಲಗೊಂಬೆ ಕೋಲೆ	3
ತುಂಗಭದ್ರಾತೀರ ಮಂತ್ರಾಲಯದಲ್ಲಿ
ಮಂಗಳಮಹಿಮರೆನಿಪರೆ ಕೋಲೆ
ಮಂಗಳಮಹಿಮರೆನಿಪ ರಾಘವೇಂದ್ರ-
ರಂಘ್ರಿಕಮಲವ ಬಲಗೊಂಬೆ ಕೋಲೆ	4
ಗುರುರಾಘವೇಂದ್ರರ ಚರಣಪಂಕಜವನ್ನು
ಸ್ಥಿರಬುದ್ಧಿಯಿಂದ ಸ್ಮರಿಸುವೆ ಕೋಲೆ
ಸ್ಥಿರಬುದ್ಧಿಯಿಂದ ಸ್ಮರಿಸಿ ನಾ ಪೇಳ್ವೆನು
ಸರಸಿಜಾಕ್ಷನ್ನ ಚರಿತೆಯ ಕೋಲೆ	5
ಪದನ ಗುಣಿಸುವೆ=ಅವರ ಪಾದಗಳನ್ನು 
ಪುನಃ ಪುನಃ ಧ್ಯಾನಿಸುತ್ತೇನೆ; 
Sಪಂಥವಿದ್ದಲ್ಲಿ=ಅವರ ಅನುಯಾಯಿಗಳಿದ್ದಲ್ಲಿ;
9. ಪ್ರಸನ್ನವೆಂಕಟ 
							

21 ಏಳು ಶ್ರೀ ಗುರುರಾಯ ಬೆಳಗಾಯಿತಿಂದು

21.ರಾಗ: ಭೂಪಾಳಿ/ಉದಯ	ತಾಳ: ಝಂಪೆ
ಏಳು ಶ್ರೀ ಗುರುರಾಯ ಬೆಳಗಾಯಿತಿಂದು
ಧೂಳಿ ದರುಶನ ಕೊಡಿರಿ ಈ ವೇಳೆ ಶಿಷ್ಯರಿಗೆ	 ಪ.
ಏಳು ಗುರು ರಾಘವೇಂದ್ರ ಏಳು ದಯಾಗುಣಸಾಂದ್ರ
ಏಳು ವೈಷ್ಣವ ಕುಮುದಕೆಚಂದ್ರ ಶ್ರೀ ರಾಘವೇಂದ್ರ 	ಅ.ಪ.
ಅಶನ ವಸನಗಳಿಲ್ಲವೆಂಬ ವ್ಯಸನಗಳಿಲ್ಲ
ಮುಸುಕ್ಹಾಕಿ ಮೋಸದಲೆ ಮೋಹಿಸಿದೆನೆಲ್ಲ
ಅಸುರಾರಿಯ ಸ್ಮರಿಸದೆ ಪಶುವಿನೊಲು ಈ ದೇಹ
ವಸುಮತಿಯೊಳು ಬಹಳ್ಹಸಗೆಟ್ಟಿತಲ್ಲ	 1
ನಾನು ನನ್ನದು ಎಂದು ಹೀನಮನಸಿಗೆ ತಂದು
ಏನು ಮಾಡುವ ಕರ್ಮ ನಾನೆ ಅಹುದೆಂದು
ನಾನೊಂದು ಸ್ವಾಮಿಕರ್ತೃತ್ವವನು ತಿಳಿಯಲಿಲ್ಲ 
ನೀನೆ ಉದ್ಧರಿಸಯ್ಯ ದೀನ ದಯಾಸಿಂಧು	 2
ಅನ್ಯರ ಕೈಯಲ್ಲಿ ನಿನ್ನವರನಿರಿಸುವುದು 
ಅನ್ಯಾಯವಾಯ್ತು ಪಾವನ್ನ ಗುರುರಾಯ
ಎನ್ನ ಮಾತಲ್ಲವಿದು ನಿನ್ನ ಮಾತೆ ಸರಿ	
ಮನ್ನಿಸಿ ಸಲಹು ಪ್ರಸನ್ನ ಗುರುರಾಯ	 3
ವೇದ ಶಾಸ್ತ್ತ್ರಗಳನು ಓದಿ ಪೇಳ್ದವನಲ್ಲ
ಭೇದಾಭೇದವನು ತಿಳಿಯಲಿಲ್ಲ
ಸಾಧು ಸಜ್ಜನರ ಸಹವಾಸ ಮೊದಲಿಲ್ಲ
ಹಿಂದಾಗಿ ಮಾನ ಮಾರಿಸಿದಿ ಉಳಿಸಲಿಲ್ಲ	 4
ಆಸೆಗೊಳಗಾದೆನೊ ಹೇಸಿ ಮನುಜನು ನಾನು
ಕ್ಲೇಶ ಭವಸಾಗರದೊಳೀಸುತಿಹೆನೊ
ಏಸು ಜನ್ಮದಿ ಎನ್ನ ಘಾಸಿ ಮಾಡಿದಿ ಮುನ್ನ
ದಾಸನಾಗುವೆ ತೋರೊ ಪ್ರಸನ್ನವೆಂಕಟನ	 5
							

22 ಎಂದಿಗಾದರೂ ಒಮ್ಮೆ ವೃಂದಾವನದಿಂದ ಬಂದು

22.ರಾಗ: ಮಿಶ್ರಕಮಾಚ್	 ತಾಳ: ಝಂಪೆÀ
ಎಂದಿಗಾದರೂ ಒಮ್ಮೆ ವೃಂದಾವನದಿಂದ
ಬಂದು ಈ ಕಂದನನು ಕೂಗಲಾರೆಯ ಗುರುವೆ 	ಪ
ಮಂದರೋದ್ಧರನ ಮಹಾ ಮಂದಿರವ ತಂದಿಳಿಸಿ
ಚೆಂದ ಮುಕುತಿ ಜ್ಞಾನದಾನಂದವನೀಡಿ 	ಅ ಪ
ಅಪ್ರಮೇಯನೆ ನೀನು ಅಪರೂಪದಲಿ ಅಂದು
ಅಪ್ಪಣ್ಣಾಚಾರ್ಯರಿಗೆ ಪ್ರಕಟಗೊಂಡು
ಸ್ವಪದವಲಂಬಿತರ ಪೊರೆವ ಗುರು ನೀ ಎಂಬ
ಸುಪ್ರಸಿದ್ಧಿಯ ಕೇಳಿ ಒಪ್ಪಿಸಿ ಬಂದಿರುವೆ 	1
ಅಶನವಸನಗಳಾಶೆ ಹುಸಿಮಾತನಾಡಿಸಿ
ಘಾಸಿಗೊಳಿಸಿದೆ ಎನ್ನ ಮನಕೆ ಮುಸುಕ್ಹಾಕಿ
ಮೋಸಹೋದೆ ಗುರುವೆ ಭವಪಾಶದಲಿ ಸಿಲುಕಿ
ಆಸರೆಯ ನೀಡು ಬಾ ಹರಿದಾಸನೆನಿಸಿ 	2
ಧನಕನಕಗಳ ಬಯಸಿ ನಿನ್ನ ಕರೆಯುವನಲ್ಲ
ನಿನ್ನವರ ಮನೆಯಲ್ಲಿ ಕುನ್ನಿಯಾಗಿರಿಸೆನ್ನ
ಮನೋಜನಿತಜನಕ ಶ್ರೀ ಪ್ರಸನ್ನವೆಂಕಟನೊಲುಮೆ
ಸನ್ನುತವು ಕೊಡಿಸೆನ್ನ ಅನುಗ್ರಹಿಸು ಬಾ ತಂದೆ 	3
							

23 ರಾಘವೇಂದ್ರ ಮುನಿರಾಯರ ಸ್ಮರಣೆ

23.ರಾಗ: ಮ.ಸಾರಂಗ(?)	 ತಾಳ: ಭಜನ್‍ಟೇಕಾ
ರಾಘವೇಂದ್ರ ಮುನಿರಾಯರ ಸ್ಮರಣೆ
ಜಾಗಿಲ್ಲದೆ ಮಾಡಿ ನೀಗೊ ಬವಣೆ	ಪ
ಹಿಂದಿನ ಮೂರು ಜನುಮಗಳಲ್ಲೂ
ಇಂದಿರೇಶನನು ವಲಿಸಿ ಮೆರೆದು ಬಲು
ಕುಂದಿಲ್ಲದ ಪುಣ್ಯಗಳಿಸಿ ಸುರತರು
ಮಂದಭಾಗ್ಯರಿಗೆ ಹಂಚುತಲಿಹರು 	1
ಭೂತಪ್ರೇತ ಸಕಲಾದಿ ಶಕುನಭಯ
ಘಾತಚಕ್ರ ಜಾತಕದ ಪೀಡೆಗಳು
ಗತಿಸುವವೀಯತಿ ಕರುಣೆತೋರಲು
ನಿತ್ಯತುತಿಸೆ ನಿಜ ಮುಕುತಿ ನಿಶ್ಚಿತವು 	2
ಕಲಿಬಲ ಹೆಚ್ಚಿ ನಲುಗಿದ ಜನಕೆ
ಸುಲಭದ ಮುಕುತಿ ದಾರಿಲಿ ನಿಲ್ಲಿಸಿ
ನಳಿನನಾಭ ಪ್ರಸನ್ವೆಂಕಟನಾಜ್ಞೆಲಿ
ಸುಲಲಿತ ಮಹಿಮೆ ತೋರಿ ನಲಿವ ಗುರು 	3
10. ಗುರುಗೋಪಾಲವಿಠಲ 
							

24 ಕರುಣಿ ಕಾಯೊ ರಾಘವೇಂದ್ರ ಗುರುವೆ

24.	ರಾಗ: ಬೆಹಾಗ/ಕಾಪಿ	ತಾಳ: ಅಟ
ಕರುಣಿ ಕಾಯೊ ರಾಘವೇಂದ್ರ ಗುರುವೆ
ನೆರೆ ನಂಬಿದವರ ಕಾಮಿತಕಲ್ಪತರುವೆ	ಪ
ತೀರ್ಥಪಾದನ ಪಾದಪಂಕಜಭೃಂಗ
ಧೂರ್ತವಾದಿಅಂಧತಿಮಿರಪತಂಗ
ಕಾರ್ತಸ್ವರಲೋಷ್ಟಸಮಚಿತ್ತಸಂಗ
ಆರ್ತಜನರಪಾಲ ಅತಿದಯಾಪಾಂಗ	1
ಚಪಲಚಿತ್ತರು ತಮ್ಮ ಜಪತಪದಿಂದ
ವಿಪರೀತಕರ್ಮ ಪೋಗುವುದು ಹೀಗೆಂದು
ಅಪಹಾಸವಲ್ಲವೆ ಇದು ಏನು ಚೆಂದು
ಕೃಪಣವತ್ಸಲ ಕಾಯೊ ಅತಿದಯದಿಂದು	2
ಫಲ ಬೇಡಿ ಸೇವೆ ಮಾಡುವ ದಾಸನಲ್ಲ
ಫಲಕೆ ಸೇವೆಯ ಸ್ವೀಕರಿಪ ಸ್ವಾಮಿ ನೀನಲ್ಲ
ಹಲವು ಮಾತೇನು ಈ ವಿವರವನೆಲ್ಲ
ತಿಳಿದ ಸರ್ವಜ್ಞರಿಂ ಬಿನ್ನೈಸೊ ಸೊಲ್ಲ	3
ಸ್ವೋತ್ತಮರಾನಿಷ್ಟಪುಣ್ಯವೆಂಬುವುದು 
ಭೃತ್ಯರ ಸುಖಕೆ ಕಾರಣವಾಹುದೆಂದು
ಕ್ಲಿಪ್ತವಾಗಿದೆ ನಮಗೆ ಒಲಿದು ಭಕುತಿಯನಿಂದು
ಇತ್ತು ಪಾಲಿಸಬೇಕು ದೀನಜನಬಂಧು	4
ಮರುದಂಶ ಮಧ್ವಮತಾಬ್ಧಿಚಂದಿರನೆ
ಪರಮಕಲ್ಯಾಣ ಸದ್ಗುಣರತ್ನಾಕರನೆ
ದುರಿತ ಜೀಮೂತಕೆ ಚಂಡ ಮಾರುತನೆ
ಸಿರಿ ಗುರುಗೋಪಾಲವಿಠಲನ್ನ ಶರಣನೆ	5
							

25 ನಾಮದ ಘನತೆ ನಿಮಗೆ ಸಲ್ಲೋದೆ

25.ರಾಗ: ಕಾಂಬೋಜಿ	ತಾಳ: ಝಂಪೆ
ನಾಮದ ಘನತೆ ನಿಮಗೆ ಸಲ್ಲೋದೆ
ಶ್ರೀಮಂತ ರಾಘವೇಂದ್ರಸ್ವಾಮಿ ಎಂತೆಂಬ	ಪ
ಅಲವಬೋಧರ ಭಾಷ್ಯಾಂಬುಧಿಗೆ ಟೀಕೆಗಳೆಂಬ
ಲಲಿತ ಸೇತುವೆಗಟ್ಟಿ ಹರಿದಾಸರ
ಸುಲಭದಿಂದೈದಿಸಿ ದಶಕರಣಗಳ ಜೈಸಿ
ಒಲಿಸಿ ಸವಿದೆ ವಿಷ್ಣುಜ್ಞಾನಪ್ರಕೃತಿಯನು	1
ಹಲವು ದುರ್ಮತವಾದಿಗಳೆಂಬಾದ್ರಿಗಳ ವಾ-
ಕ್ಕುಲಿಶದಿಂದವರ ಪಕ್ಷವ ಛೇದಿಸಿ
ಅಲವಬೋಧರಮತ ಅಮರಾವತಿಯಲಿ ನಿ-
ಶ್ಚಲ ಸಾಮ್ರಾಜ್ಯವನಾಳ್ದೆ ಕವಿಗಳ ಪೊರೆದೆ	2
ಭಾಸುರಸಚ್ಛಾಸ್ತ್ರವದನದಿ ಒಪ್ಪುತ
ಪೂಶರಜಯಶಕ್ತಿಯನೆ ಧರಿಸಿದೆ
ವಾಸವಸಖಗುರುಗೋಪಾಲವಿಠಲನ ದಾಸ
ಶ್ರೀಸುಧೀಂದ್ರಕುಮಾರ ಸ್ವಾಮಿರಾಘವೇಂದ್ರ	3
							

26 ಮುನಿಗಳ ನೋಡಿರೊ

26.	ರಾಗ: ಭೈರವಿ	ತಾಳ: ಆದಿ
ಮುನಿಗಳ ನೋಡಿರೊ ಭಕುತಿ ಜ್ಞಾನ ಧನವ ಬೇಡಿರೊ
ಅನಿಲದೇವನಮತವನರಾಶಿಗೆ ಶುಭಚಂದ್ರ ಗುರು ರಾಘವೇಂದ್ರ	ಪ
ಮನದಲನವರತ ನೆನೆವ ಸುಜನರಿಗೆ ಒಲಿದು ಮುದದಲಿ ನಲಿದು
ಘನಮಣಿಕನಕಭೂಷಣಗಣ ಆಯುರಾರೋಗ್ಯ ಸಕಲಸೌಭಾಗ್ಯ
ವನಿತೆ ತನುಜ ಧನ ಮನೆ ಅಂದಣ ಸುಜ್ಞಾನ ಹರಿಭಕುತಿ ನಾನಾ
ಮನೋರಥ ನೆನೆದಾಕ್ಷಣವಿತ್ತು ಪಾಲಿಪ ಯೋಗಿ ಪರಮವೈರಾಗಿ	1
ಜನಕಜಾಮಾತನ ಗುಣಕ್ರಿಯ ರೂಪಗಳೆಲ್ಲ ಧೇನಿಸಬಲ್ಲ
ಜನಕಾದಿಗಳಂದದಿ ನಿಃಸಂಗದಿ ಮೌನಿ ಅಪರೋಕ್ಷಜ್ಞಾನಿ
ಜನಕಸುತರ ಪೊರೆವಂದದಿ ಭಕ್ತರ ಪೊರೆವ ಜಗದೊಳು ಮೆರೆವ
ಜನನರಹಿತ ಜಗಜ್ಜನನಾದಿಕಾರಣ ಹರಿಯ ಒಲಿಸಿದ ಪಿರಿಯ	2
ಭೂತಪ್ರೇತದ್ವಿಜಗ್ರಹಪೈಶಾಚಬೇತಾಳ ಉಗ್ರಗ್ರಹಗಳ
ಭೀತಿಯಿಂದ ಅನ್ಯತ್ರತರ ಕಾಣದೆ ಬಂದ ಜನರ ದಯದಿಂದ 
ತಾ ತವಕದಿ ಪಾದತೋಯದಿಂದೋಡಿಸಿ ಭಯವನು ಬಿಡಿಸಿ
ಶ್ವೇತ ಕುಷ್ಠ ಪಿತ್ತ ಶೀತ ವಾತರೋಗಗಳ ಕಳೆವ ಕೀರ್ತಿಲಿ ಪೊಳೆವ	3
ಗುರುಸುಧೀಂದ್ರರ ಕರಸರಸಿರುಹಜಾತಾ ಕೇವಲಪ್ರಖ್ಯಾತ
ಧರೆಯೊಳು ಜಯಮುನಿ ಒರೆದ ಶಾಸ್ತ್ರವ ಮಥಿಸಿ ಗ್ರಂಥವ ರಚಿಸಿ
ಪರಮಶಿಷ್ಯರಿಗುಪದೇಶವನು ಮಾಡಿ ಸಂಶಯ ಈಡ್ಯಾಡಿ
ನರಹರಿ ಸರ್ವೋತ್ತಮನೆಂದು ಮೆರೆವ ಭಕುತರ ಪೊರೆವ	4
ಸಿರಿವರ ಗುರುಗೋಪಾಲವಿಠಲನ ಶರಣ ಮುನಿಶಿರೋಭರಣ
ಮೊರೆಹೊಕ್ಕ ಜನರ ದುರಿತಗಜಕೆ ಭೇರುಂಡಾ ವರಯತಿ ಶೌಂಡ
ಪರಮತ ದುರುಳಕುವಾದಿಸಂಘಜೀಮೂತ ಝಂಝುವಾತ
ನೆರೆನಂಬಿದವರಿಗೆ ಸುರತರುಚಿಂತಾಮಣಿಯೋ ಶುಭೋದಯಖಣಿಯೋ	5
							

27 ಶರಣು ಶರಣು ರಾಘವೇಂದ್ರ ಗುರುರಾಯ

27.ರಾಗ: ನೀಲಾಂಬರಿ	ತಾಳ: ತ್ರಿವಿಡಿ/ಆದಿ
ಶರಣು ಶರಣು ರಾಘವೇಂದ್ರ ಗುರುರಾಯ
ಶರಣು ಶರಣು ಕವಿಗೇಯ
ಶರಣು ಮಾರುತಮತಶರಧಿ ಅತ್ರಿತನಯ
ಧರಣಿವಿಬುಧಜನಪ್ರಿಯ	ಪ
ಅನಾದಿಕಾಲದಿ ಎನೆಗೆ ಶ್ರೀಹರಿ ತಾನು
ನಾನಾದೇಹದೇಶಕಾಲದಲಿ
ತಾನೆ ಇಚ್ಛೈಸಿ ಮಾಡಿದ ಮರಿಯಾದಿಯು
ನಾನರಿತವನಲ್ಲ ಗುರುವೆ
ನೀನದು ಬಲ್ಲ ಕೋವಿದನೆಂದು ಮನಗಂಡು
ದೀನನಾಗಿ ಮೊರೆಯಿಡುವೆ
ಏನೇನು ವಿಘ್ನಗಳುಂಟು ಪರಿಹರಿಸಿ
ನೀನೆ ಪಾಲಿಸಬೇಕು ಕರುಣಿ	1
ಹಸ್ತಿಮಜ್ಜನದಂತೆ ಕರ್ಮಾದಿಕರ್ಮ ನಿ-
ರಸ್ತವಾದುದು ಅಬಲರಿಗೆ
ಗ್ರಸ್ತವಾಗಿದೆ ಮನವಿಷಯದಿ ಮೊದಲಿಂದು
ದುಸ್ತರವವನಿಗೆ ಗೆಲಲೊಶವೆ
ವಿಸ್ತಾರಮಹಿಮ ನೀನೊಲಿದು ಕರುಣಿಸಲು
ದುಸ್ತರವಲ್ಲ ಸುಲಭವೊ
ಹಸ್ತಿವರದನಂಘ್ರಿಯಲಿ ಭಕ್ತಿಯನಿತ್ತು
ಸ್ವಸ್ಥಚಿತ್ತನ ಮಾಡೊ ಕರುಣಿ	2
ಗುರುವೆ ಕಾಮಿತಕಲ್ಪತರುವೆ ತ್ರಿಕಾಲಜ್ಞ
ವರಯೋಗಿ ಅನಘ ನಿಸ್ಸಂಗ
ದುರಿತ ಅಕಾಲಮೃತ್ಯುವಿನ ಗಂಟಲಗಾಣ
ಪರಮಹಂಸರ ಕುಲತಿಲಕ
ಮರುತಾಂತರ್ಗತ ಗುರುಗೋಪಾಲವಿಠಲನ್ನ
ಸರುವಸ್ಥಾನದಿ ಸಮದರ್ಶಿ
ಕರವ ಮುಗಿದು ಬಿನ್ನೈಸುವೆನೊ ಲಾಲಿಸಿ ವೇಗ
ಪೊರೆವ ಭಾರ ನಿನ್ನದೊ ಕರುಣಿ	3
11. ವರದಗೋಪಾಲವಿಠಲ 
							

28 ಚಂದ್ರ ಗುಣಸಾಂದ್ರ ರಾಘವೇಂದ್ರ

28.ರಾಗ: ಪೂರ್ವಿಕಲ್ಯಾಣಿ	ತಾಳ: ಆದಿ
ಚಂದ್ರ ಗುಣಸಾಂದ್ರ ರಾಘ-
ವೇಂದ್ರ ಗುರು ಸದ್ವೈಷ್ಣವಕುಮುದಕೆ	ಪ
ಶ್ರೀ ರಘುರಾಮ ಪದಾಂಬುಜ ಭೃಂಗ
ಮಾರುತಮತ ಶುಭವಾರಿನಿಧಿಗೆ ಪೂರ್ಣ	1
ಶ್ರೀಕರ ಹರಿಯ ನಿರಾಕರಿಸುವ ದುಷ್ಟ
ಭೀಕರ ಮಾಯ್ಗಳ ಮುಖಕಮಲಕೆ ಪೂರ್ಣ	2
ವರದಗೋಪಾಲವಿಠಲನ ವಾರುತೆಗೆ
ಹರುಷ ಬಡುವ ಹರಿಭಕುತ ಚಕೋರಕೆ	3
12. ಜಗನ್ನಾಥವಿಠಲ 
							

29 ಕರುಣಿಗಳೊಳಗೆಣೆಗಾಣೆನೊ ನಾ ನಿನಗೆ

29.	ರಾಗ: ಮಾರವಿ/ಧನ್ಯಾಸಿ	ತಾಳ: ಅಟ/ತ್ರಿವಿಡ/ಆದಿ
ಕರುಣಿಗಳೊಳಗೆಣೆಗಾಣೆನೊ ನಾ ನಿನಗೆ ಸ- 
ದ್ಗುರುವರ ರಾಘÀವೇಂದ್ರ	ಪ
ಚರಣಕಮಲವನು ಮರೆಹೊಕ್ಕ ಸುಜನರ
ಹರಕೆಯ ನಿರುತದಲೀವೆ ನೀ ಕಾವೆ  	ಅ.ಪ
ರಾಘವೇಂದ್ರಗುರುವೆಗತಿಎಂದನು-
ರಾಗದಿಂದಲಿ ಭಜಿಪ
ಭಾಗವತರ ದುರಿತೌಘಗಳಳಿದು ಚೆ-
ನ್ನಾಗಿ ಸಂತೈಸುವೆ ನೀ ಸನ್ಮೌನಿ 	1 
ಸುಧೀಂದ್ರಯತಿಕರಪದುಮಸಂಭವ ಮಧು-
ವಧಪಾದಾಂಬುಜಮಧುಪ
ತ್ರಿದಶಭೂರುಹದಂತೆ ಬುಧಜನರಿಚ್ಚಿತ
ಒದಗಿ ಪಾಲಿಸಿ ಪೊರೆವೆ ಅಸ್ಮದ್ಗುರುವೆ 	2
ಕುಧರದೇವನ ದಿವ್ಯರದನದಿ ಜನಿಸಿದ
ನದಿಯ ತೀರದಿ ಶೋಭಿಪ
ಸದಮಲ ಘನಮಂತ್ರಸದನನಿಲಯ ಜಿತ
ಮದನ ಶ್ರೀ ಜಗನ್ನಾಥವಿಠಲನದೂತ 	 3
							

30 ನಮಿಸಿ ಬೇಡುವೆ ವರಗಳ ನಿನ್ನ

30.	ರಾಗ: ಶ್ರೀ/ಭೈರವಿ	ತಾಳ: ಅಟ
ನಮಿಸಿ ಬೇಡುವೆ ವರಗಳ ನಿನ್ನ ಸಂ-
ಯಮಿ ಕುಲೋತ್ತಮ ರಾಘವೇಂದ್ರ ರನ್ನ	ಪ
ವಿಮಲ ಸುಮತಿ ಜನರತಿಪ್ರೀಯಾ ಪಾದ
ಕಮಲಗಳಿಗೆರಗುವೆನೊ ಜೀಯಾ
ಶಮಲ ಮಾರ್ಗದಲಿ ನೀನೀಯದಿರೊ ಮತಿಯ
ಅಮಿತ ಕರುಣದಿ ಪಿಡಿಯೊ ಕೈಯ್ಯ	1
ಕಂಡ ಕಂಡವರನು ಬೇಡಿ ನೊಂದೆ ಕ-
ಮಂಡಲು ದಂಡಧಾರಿ ನೀನೆಗತಿ ಎಂದೆ
ಪಂಡಿತಾಗ್ರಗಣ್ಯ ಇನ್ನಾದರು ಮುಂದೆ ಕೋ-
ದಂಡಪಾಣಿಯ ಪಾದ ತೋರಿಸು ತಂದೆ	2
ಶ್ರೀ ಸುಧೀಂದ್ರ ಯತಿಕರ ಸಂಜಾತಾ ತುಂ-
ಗಾ ಸುನದಿ ನಿಲಯಾ ಅಘಾಂಬುಧಿ ಪೋತ
ವಾಸುಕಿ ಶಯನ ಗುರು ಜಗನ್ನಾಥವಿಠಲ
ದಾಸರ ಪೋಷಕ ಲಾಲಿಸೆನ್ನಮಾತಾ	3
							

31 ನಮೋ ನಮೋ ಶ್ರೀ ರಾಘವೇಂದ್ರ ಸದ್ಗುಣಸಾಂದ್ರ

31.	ರಾಗ: ನಾಟ 	ತಾಳ: ಝಂಪೆ
ನಮೋ ನಮೋ ಶ್ರೀ ರಾಘವೇಂದ್ರ ಸದ್ಗುಣಸಾಂದ್ರ
ಕಮಲನಾಭನ ದಾಸ ಕಮಲಾಪ್ತ ಭಾಸ	 ಪ
ದೇಶದೇಶಗಳಿಂದ ದೈನ್ಯದಿಂದಲಿ ಬಂದಾ- 
ಶೇಷ ಜನರುಗಳನ್ನು ಸಲಹುವ ವಿಶಿಷ್ಟ
ನಾ ಸೇರಿದೆನೊ ನಿನ್ನ ನಮಿತಜನರಪ್ರಸನ್ನ 
ಭಾಸುರಚರಿತ ಭಜಿಸುವೆನು ಅನವರತ 	1
ಭೇದಾರ್ಥ ಜಲಜಾರ್ಕ ಭೂರಿಬಲತರತರ್ಕ
ವಾದಿಶೈಲಕುಲಿಶ ವರಾಹಸುತಾವಾಸ
ಬಾಧಿಸುವ ಅಘ ಜೀರ್ಣ ಮಾಡು ಗುರುವರ ಪೂರ್ಣ-
ಬೋಧಮತಸಂಭೂತ ಭೂರಿಪ್ರಖ್ಯಾತ 	2
ನತಜನಾಶ್ರಯ ಪ್ರೀಯ ನೆರೆ ನಂಬಿದೆನೊ ಮಾಯ-
ಮತಕದಳಿಗಜೇಂದ್ರ ವಿಬುಧಾಬ್ಧಿಚಂದ್ರ
ಕ್ರತುಭುಕು ಜಗನ್ನಾಥವಿಠಲನ ನಿಜದೂತ
ಸ್ತುತಿಸಲಾಪೆನೆÉ ನಿನ್ನ ಯತಿಶಿರೋರನ್ನ 	3
							

32 ನಿನ್ನ ನಂಬಿದೆ ರಾಘವೇಂದ್ರ ನೀ ಎನ್ನ ಪಾಲಿಸು

32.	ರಾಗ: ಸಾವೇರಿ/ಅಹರಿ	ತಾಳ: ಅಟ
ನಿನ್ನ ನಂಬಿದೆ ರಾಘವೇಂದ್ರ ನೀ ಎನ್ನ ಪಾಲಿಸು ಸುಯಮೀಂದ್ರ	ಪ
ಸನ್ನುತ ಸರಸ ಕವೀಂದ್ರ ಪ್ರಪನ್ನ ಹೃತ್ಕುಮುದಸುಚಂದ್ರ	ಅ.ಪ
ಭಾರತೀಶ ಪದಾಬ್ಜಭೃಂಗ ಖರಾರಿಯ ಕರುಣಾಂತರಂಗ
ಸಾರಿದವರ ಭವಭಂಗ ಸಮೀರಮತಾಬ್ಜ ಪತಂಗ	1
ಭೇದಮತಾಬ್ಧಿವಿಹಾರ ಕುವಾದಿ ಮದವನ ಕುಠಾರ
ಸಾಧಿತಾಖಿಳ ತತ್ತ್ವಸಾರ ಮಧುಸೂದನ ಚಂದ್ರಚಕೋರ	2
ಸುಧೀಂದ್ರಕರಕಂಜಜಾತ ವಿಬುಧ ಸಂಘ ಸತತ ಸಮೇತ
ವಿಧಿಪಿತ ಗುರು ಜಗನ್ನಾಥವಿಠಲನಧಿಕನೆಂದೊರೆದ ವಿಖ್ಯಾತ	3
							

33 ಪೊಂದಿ ಬದುಕಿರೋ ರಾಘವೇಂದ್ರ ರಾಯರ

33.	ರಾಗ: ಸೌರಾಷ್ಟ್ರ	ತಾಳ: ಆದಿ
ಪೊಂದಿ1 ಬದುಕಿರೋ ರಾಘವೇಂದ್ರ ರಾಯರ 
ಕುಂದದೆಮ್ಮನು ಕರುಣದಿಂದ ಪೊರೆವರ 	ಪ
ನಂಬಿ ತುತಿಸುವ ಜನಕದಂಬಕಿಷ್ಟವ
ತುಂಬಿಕೊಡುವರು ಅನ್ಯರ್ಹಂಬಲೀಯರು	1
ಅಲವಬೋಧರ ಸುಮತಜಲಧಿಚಂದಿರ
ಒಲಿದು ಭಕ್ತರ ಕಾವ ಸುಲಭ ಸುಂದರ 	2
ಗುರುಸುಧೀಂದ್ರರ ವಿಮಲಕರಜರೆನಿಪರ
ಸ್ಮರಿಸಿ ಸುರುಚಿರ ಚರಣಯುಗಳ ಪುಷ್ಕರ 	3
ಫಾಲಲೋಚನವಿನುತ ಮೂಲರಾಮನ
ಶೀಲಸದ್ಗುಣತುತಿಪ ಶೀಲರನುದಿನ2	4
ಭೂತಭಾವನ ಜಗನ್ನಾಥವಿಠಲನ
ಪ್ರೀತಿಪಾತ್ರನ ನಂಬಿರೀತನನುದಿನ 	5
1 ಹೊಂದಿ (ಕೆಲವು ಗ್ರಂಥಗಳಲ್ಲಿ); 2 ಶೀಲ ಸದ್ಗುಣ ನುತಿಪ ಮೇಲು ಭಕ್ತನ - ಪಾಠ
							

34 ಬಾರೋ ರಾಘವೇಂದ್ರ ಬಾರೊ

34.	ರಾಗ: ಆನಂದಭೈರವಿ	ತಾಳ: ಆದಿ
ಬಾರೋ ರಾಘವೇಂದ್ರ ಬಾರೊ
ಕಾರುಣ್ಯವಾರಿಧಿಯೆ ಬಾರೊ	
ಆರಾಧಿಪಭಕ್ತರಭೀಷ್ಟ
ಪೂರೈಸುವ ಪ್ರಭುವೆ ಬಾರೊ	ಪ
ರಾಜವಂಶೋದ್ಭವನ ಪಾದ
ರಾಜೀವಭೃಂಗನೆ ಬಾರೊ
ರಾಜಾಧಿರಾಜರೊಳು ವಿ-
ರಾಜಿಸುವ ಚೆಲುವ ಬಾರೊ	1
ವ್ಯಾಸರಾಯನೆನಿಸಿ ನೃಪನ
ಕ್ಲೇಶ ಕಳೆದವನೆ ಬಾರೊ
ಶ್ರೀಸುಧೀಂದ್ರರಕರಸಂಜಾತ
ವಾಸುದೇವಾರ್ಚಕನೆ ಬಾರೊ	2
ಸಂನ್ಯಾಸಕುಲದೀಪ ಬಾರೊ
ಸನ್ನುತಸದ್ಗುಣನೆ ಬಾರೊ
ಮಾನ್ಯ ಜಗನ್ನಾಥವಿಠಲ
ಪ್ರಪನ್ನ ಜನರ ಪ್ರಿಯನೆ ಬಾರೊ	3
							

35 ಮಂಗಳ ಗುರು ರಾಘವೇಂದ್ರಗೆ ಜಯ

35.	ರಾಗ: ನಾದನಾಮಕ್ರಿಯ	ತಾಳ: ಅಟ
ಮಂಗಳ ಗುರು ರಾಘವೇಂದ್ರಗೆ ಜಯ 
ಮಂಗಳ ಸುಜನಾಂಬುಧಿಚಂದ್ರಗೆ  	ಪ
ಶ್ರೀಸುಧೀಂದ್ರಕುಮಾರಗೆ ಮಂಗಳ
ಭೂಸುರನುತಮಹಿಮಗೆ ಮಂಗಳ
ದೇಶಿಕಕುಲವನಜಾರ್ಕಗೆ ಮಂಗಳ
ಭಾಸುರಕೀರ್ತಿಯ ಪಡೆದವಗೆ 	1
ವೃಂದಾವನದಿ ಭುವಿಯೊಳಗೆ ಸುರದ್ರುಮ-
ದಂದದಿ ರಾಜಿಸುವಗೆ ಮಂಗಳ
ಅಂಧ ಪಂಗು ಮೂಕ ಬಧಿರರೀಪ್ಸಿತ
ಸಂದೋಹ ಸಲಿಸುವ ಮುನಿವರಗೆ 	2
ಭೂತಪ್ರೇತಬೇತಾಳಭಯ ವಿಪಿನ
ವೀತಿಹೋತ್ರನೆನಿಪಗೆ ಮಂಗಳ
ವಾತಜನುತ ಜಗನ್ನಾಥವಿಠ್ಠಲನ
ದೂತರ ಸಲಹುವ ದಾತನಿಗೆ 	3
							

36 ಯಾಕೆ ಮೂಕನಾದ್ಯೋ ಗುರುವೆ ನೀ

36.	ರಾಗ: ಪೂರ್ವಿಕಲ್ಯಾಣಿ	ತಾಳ: ಮಠ್ಯ
ಯಾಕೆ ಮೂಕನಾದ್ಯೋ ಗುರುವೆ ನೀ-
ನ್ಯಾಕ ಮೂಕನಾದ್ಯೋ	ಪ
ಲೋಕಪಾಲಕ ಎನ್ನ ಸಾಕುವರ್ಯಾರಯ್ಯ
ಶ್ರೀಕರ ರಾಘವೇಂದ್ರ 	 ಅ.ಪ
ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದೆ
ಮಂದಿಯೊಳಗೆನ್ನ ಮಂದನ್ನ ಮಾಡಿದ್ಯೊ	1
ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ
ಕಾಕುಜನರೊಳೆನ್ನ ನೂಕಿಬಿಟ್ಟು ನೀನು	2
ಹೀಂಗೆ ಪಾಲಿಸಿದರೆ ಯೋಗಿಕುಲವರ್ಯ ರಾಘ-
ವೇಂದ್ರನೆ ಭವ ಸಾಗುವದ್ಹ್ಯಾಂಗಯ್ಯ 	3
ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ
ಘನ್ನ ಮಹಿಮ ನೀ ಎನ್ನನು ಬಿಟ್ಟೀಗ 	4
ಜನನಿಯು ನೀ ಎನ್ನ ಜನಕನಯ್ಯ
ಮನ್ನಿಸೋ ನೀ ನಿತ್ಯಾನನ್ಯ ಶರಣನ 	5
ಎಂದಿಗಾದರು ನಿನ್ನ ಪೊಂದಿಕೊಂಡವನೆಲೊ
ಇಂದು ನೀ ಕೈ ಬಿಟ್ಟರೆನ್ನ ಮುಂದೆ ಕಾಯುವರ್ಯಾರೊ 	6
ನಾಥನು ನೀ ಅನಾಥನು ನಾನಯ್ಯ
ಪಾತಕರರಿ ಜಗನ್ನಾಥವಿಠಲ ದೂತ 	7
							

37 ಯೋಗಿ ಬಾರೊ ನೀ ತ್ಯಾಗಿ ಬಾರೊ

37.	ರಾಗ: ರಾಗಮಾಲಿಕೆ	ತಾಳ: ಆದಿ
ರಾಗ: ಭೀಮ್‍ಪಲಾಸ್
ಯೋಗಿ ಬಾರೊ ನೀ ತ್ಯಾಗಿ ಬಾರೊ
ಸಾಗಿ ಬಾರೊ ಯೋಗಿಗಳೊಡೆಯ ರಾಘವೇಂದ್ರ	ಪ
ಶ್ರುತಿಪುರಾಣಗಳರ್ಥ ಸೂಕ್ಷ್ಮದಿಂದ ತಿಳುಹಿದನೆ
ಅತಿ ಹರುಷದಲಿ ಆತ್ಮಜ್ಞಾನಿ
ಅತಿ ಹರುಷದಲಿ ಆತ್ಮಜ್ಞಾನಿ ರಾಘವೇಂದ್ರ
ಪ್ರತಿಗಾಣೆನಿನ್ನು ಕ್ಷಿತಿಯೊಳಗೆ ರಾಯ ಬಾರೊ	1
ರಾಗ: ಕಲ್ಯಾಣಿ
ಅದ್ವೈತಮತವೆಂಬ ಅರೆಬಂಡೆಯ ಮೇಲೆ
ಮಧ್ವಾಚಾರ್ಯಮತವೆಂಬ ಕಣಕವ
ಮಧ್ವಾಚಾರ್ಯಮತವೆಂಬ ಕಣಕವ ಕುಟ್ಟಿದನು
ಸಿದ್ಧಾಂತವನಕೇಳಿ ಶ್ರೀ ರಾಘವೇಂದ್ರ	2
ರಾಗ: ಪುನ್ನಾಗವರಾಳಿ
ರಾಮನ ಚರಣವ ಪ್ರೇಮದಿಂದಲಿ ಭಜಿಸಿ
ಕಾಮಿತಫಲಗಳ ಕೊಡುತಿಪ್ಪ
ಕಾಮಿತಫಲಗಳ ಕೊಡುತಿಪ್ಪ ರಾಘವೇಂದ್ರ
ಶ್ರೀಮಂತನೀನಹುದು ಅಷ್ಟದಿಕ್ಕಿನಲಿ	3
ರಾಗ: ಸಾರಂಗ
ಮಾರುತಿಮತವೆಂಬ ವಾರಿಧಿಚಂದ್ರ
ಕಾರುಣ್ಯದಿಂದಲಿ ಕಾಮಿತವೀವ
ಕಾರುಣ್ಯದಿಂದಲಿ ಕಾಮಿತವೀವ ಉ-
ದಾರಿ ನೀನಹುದೊ ಶ್ರೀ ರಾಘವೇಂದ್ರ ಜೋ ಜೋ	4
ರಾಗ: ಮಾಯಾಮಾಳವಗೌಳ
ಸಂಕರನ ಮತವೆಂಬೊ ಸದ್ದಡಗಿಸಿದವನೆ
ಪಂಕಜನಾಭನ ಪಾದಸೇವಕನೆ
ಪಂಕಜನಾಭನ ಪಾದಸೇವಕನೆ
ಅಂಕಿತದಿಂದಲಿ ದಂತಿ ರಾಘವೇಂದ್ರ ಕೋಲು ಕೋಲೆನ್ನಿರೆ	5
ರಾಗ: ಆನಂದಭೈರವಿ
ಎಷ್ಟು ವರ್ಣಿಸುವೆ ಯತಿಶಿರೋಮಣಿರನ್ನ
ಕಷ್ಟಪಡಿಸುವ ದುಷ್ಕರ್ಮ
ಕಷ್ಟಪಡಿಸುವ ದುಷ್ಕರ್ಮ ಬಿಡಿಸುವ
ಸೃಷ್ಟಿಯೊಳಗೆ ಕಾಣೆನಿನ್ನು	6
ರಾಗ: ಸುರಟಿ-ಮಂಗಳಂ
ಘನಯತಿ ಶಿರೋಮಣಿ ಕೇಳ್ದಿದನು
ಅನುದಿನವು ಸಕಲ ಸಂಪದವಿತ್ತು ಜ-
ಗನ್ನಾಥವಿಠಲನಂಘ್ರಿಗಳ ತೋರಿಸುವರು
ಜಯ ಮಂಗಳಂ ನಿತ್ಯ ಶುಭ ಮಂಗಳಂ	7
							

38 ರಾಘವೇಂದ್ರ ಯತಿಸಾರ್ವಭೌಮ

38.	ರಾಗ: ನಾಟ/ಶಂಕರಾಭರಣ	ತಾಳ: ಆದಿ/ಏಕ
ರಾಘವೇಂದ್ರ ಯತಿಸಾರ್ವಭೌಮ ದುರಿ
ತೌಘದೂರ ತೇ ನಮೋ ನಮೋ 
ಮಾಗಧರಿಪುಮತ ಸಾಗರಮೀನ ಮ-
ಹಾಘವಿನಾಶನ ನಮೋ ನಮೋ
ಶ್ಲಾಘಿತಗುಣಗಣ ಸೂರಿಪ್ರಸಂಗ ಸ-
ದಾಗಮಜ್ಞ ತೇ ನಮೋ ನಮೋ
ಮೇಘ ಶ್ಯಾಮಲ ರಾಮಾರಾಧಕ ಅ-
ಮೋಘ ಬೋಧ ತೇ ನಮೋ ನಮೋ 	1
ತುಂಗಭದ್ರ ಸುತರಂಗಿಣೀತೀರಗ
ಮಂಗಳಚರಿತ ಶುಭಾಂಗ ನಮೋ
ಇಂಗಿತಜ್ಞ ಕಾಳಿಂಗಮಥನ ಯದು-
ಪುಂಗವ ಹೃದಯ ಸುಸಂಗ ನಮೋ
ಸಂಗಿರ1ಚಿಹ್ನಿತ ಶೃಂಗಾರಾನನ
ತಿಂಗಳಕರುಣಾಪಾಂಗ ನಮೋ
ಗಾಂಗೇಯಾಸಮಭಾಂಗ ಕುಮತಮಾ-
ತಂಗಸಿಂಗ ಸಿತಾಪಾಂಗ ನಮೋ 	2
ಶ್ರೀ ಸುಧೀಂದ್ರಕರಜಾತ ನಮೋ ನಮೋ
ಭೂಸುರನುತವಿಖ್ಯಾತ ನಮೋ
ದೇಶಿಕವರಸಂಸೇವ್ಯ ನಮೋ ನಮೋ
ದೋಷವಿವರ್ಜಿತಕಾವ್ಯ ನಮೋ
ಕ್ಲೇಶಿತಜನಪರಿಪಾಲ ನಮೋ ನಮೋ
ಭಾಸಿತಕರುಣಾಶೀಲ ನಮೋ
ವ್ಯಾಸ ರಾಮಪದಭಕ್ತ ನಮೋ ನಮೋ
ಶಾಶ್ವತ ಧರ್ಮಾಸಕ್ತ ನಮೋ 	3
ಕೋವಿದ ಮಸ್ತಕಶೋಭಿತಮಣಿ ಸಂ-
ಭಾವಿತಸುಮಹಿಮ ಪಾಲಯಮಾಂ
ಸೇವಾಪರ ಸರ್ವಾರ್ಥಪ್ರದ ವೃಂ-
ದಾವನಮಂದಿರ ಪಾಲಯಮಾಂ
ಭಾವಜಮಾರ್ಗಣ ಭುಜಗವಿನಾಯ(ಶ)ಕ
ಭಾವಜ್ಞಪ್ರಿಯ ಪಾಲಯಮಾಂ
ಕೇವಲನತಜನ ಪಾವನರೂಪ ಸ-
ದಾವಿನೋದಿ ಹೇ ಪಾಲಯಮಾಂ 	4
ಸನ್ನುತಮಹಿಮ ಜಗನ್ನಾಥವಿಠಲ
ಸನ್ನಿಹಿತ ಸುಮಾನಸ ಜಯಜಯ ಭೋ
ಚಿಹ್ನಿತ ದಂಡಕಮಂಡಲಪುಂಡ್ರ ಪ್ರ-
ಪನ್ನ ಭಯಾಪಹ ಜಯಜಯ ಭೋ
ಮಾನ್ಯಮಹಾತ್ಮ ಪ್ರಸನ್ನವದನ ಕಾ-
ರುಣ್ಯಪಯೋನಿಧೆ ಜಯಜಯ ಭೋ
ಧನ್ಯ ಕ್ಷಮಾಸಂಪನ್ನ ಬುಧಜನಶ-
ರಣ್ಯ ಸದಾರ್ಚಿತ ಜಯಜಯ ಭೋ 	5 
1 ಸಂಗೀತ - ಪಾಠ (ಸೂಚನೆ: ಅಂಗಾರ)
							

39 ರಾಘವೇಂದ್ರ ರಾಜಿತ ಗುಣಸಾಂದ್ರ

39.	ರಾಗ: ಆರಭಿ/ಪೂರ್ವಿ	ತಾಳ: ಆದಿ/ಅಟ
ರಾಘವೇಂದ್ರ ರಾಜಿತ ಗುಣಸಾಂದ್ರ	ಪ
ರಾಘವೇಂದ್ರ ಗುರುರಾಯ ಘೋರ ಪಾ-
ಪೌಘಗಳೆಣಿಸದೆ ಪಾಲಿಸು ಬಿಡದೆ	ಅ.ಪ
ಪ್ರಕಟಿಸಿ ತೋರಿದೆ ಮುಕುತಿಯ ಬೇಡಿದ
ಭಕುತನ ಯೋಗ್ಯತೆ ನಿಖಿಳ ಜನರಿಗೆ	1
ಭೃತ್ಯಗೆ ಬಂದಪಮೃತ್ಯುಕಳೆದು ಸುಖ-
ವಿತ್ತು ಪೊರೆದೆ ಪುರುಷೋತ್ತಮದಾಸ	2
ಹುತವಹಗುಣಿಸಿದ ರತುನಮಾಲಿಕೆಯ
ಕ್ಷಿತಿಪತಿಗೆತಂದಿತ್ತತುಳಮಹಿಮನೆ	3
ಕನಲಿದ ಜನಪನ ಅನುನಯದಲಿ ನಿ-
ನ್ನಣುಗನಮಾಡಿದ ಘನತರಚರಿತ	4
ಚೂತಫಲರಸದಿ ಪೋತ ಮುಳುಗೆ ಮೃತ್ಯು
ಭೀತಿ ಬಿಡಿಸಿದ ಅನಾಥರಕ್ಷಕ	5
ಕ್ಷಿಪ್ರದಿತೋರಿದೆ ವಿಪ್ರರಮಹಿಮೆಯ
ಆ ಪೃಥಿವೀಶಗೆ ಅಪ್ರತಿಗುರುವೆ	6
ಪತಿತನ ನಿಜಯೋಗ್ಯತೆಯನರಿತು ಸ-
ದ್ಗತಿಯಪಾಲಿಸಿದೆ ಯತಿಕುಲವರ್ಯ	7
ಮಳಲಮಾರ್ಗದೊಳು ಲಲನೆ ಪ್ರಸೂತಿಸೆ
ಪುಲಿನ ಕಮಂಡಲದೊಳು ಜಲ ತೋರ್ದೆ	8
ಬಿಸಿಲಿಂದಳುವಾ ಶಿಶುವಿಗೆ ಚೈಲಾ-
ಗಸದಲಿ ನಿಲ್ಲಿಸಿದ ಅಸಮಮಹಿಮನೆ	9
ದ್ವಾದಶವರ್ಷ ಅನ್ನೋದಕ ಸಲಿಸಿದೆ
ಮೇದಿನಿಪತಿಗೆ ಮಹಾದಯವಂತ	10
ಸಾದರದಲಿ ಹಸ್ತೋದಕ ಕೊಡಲು ನಿ-
ಷೇಧಗೈಯದೆ ನಿವೇದಿಪೆ ಹರಿಗೆ	11
ಪಾದೋದಕವ ದಿನೇದಿನೇ ಸೇವಿಪ
ಸಾಧುಗಳಾಧಿವ್ಯಾಧಿಗಳಳಿವೆ	12
ಯತಿವರ ದೂರದಿ ಮೃತಗೈಯ್ಯಲಾಗಸ-
ಪಥದಲಿ ಕಂಡು ನುತಿಸಿದ ಮಹಿಮ	13
ವಿಪಿನದಿ ಚಂಡಾತಪದಿ ಬೆಂದ ಕಾ-
ಶ್ಯಪಿ ಸುರರುಳುಹಿದ ಕೃಪಣಜನಾಪ್ತ	14
ಅನಿವೇದಿತಭೋಜನ ವಸ್ತುಗಳಿಂ-
ದನುಭವ ಮಾಡಿಸಿದನುಪಮಚರಿತ	15
ಭಾಷಾತ್ರಯಯುತ ವ್ಯಾಸೋಕ್ತಿಗಳ ಪ್ರ-
ಕಾಶವಗೈಸಿದ ಭೂಸುರವಿನುತ	16
ದಾತಗುರು ಜಗನ್ನಾಥವಿಠಲನ
ದೂತನೆ ಮಂತ್ರನಿಕೇತನನಿಲಯ	17
							

40 ರಾಯ ಬಾರೋ ತಂದೆ ತಾಯಿ ಬಾರೋ

40.	ರಾಗ: ಆನಂದಭೈರವಿ	ತಾಳ: ಆದಿ
ರಾಯ ಬಾರೋ ತಂದೆ ತಾಯಿ ಬಾರೋ ನಮ್ಮ ಕಾಯಿ ಬಾರೊ
ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೊ 	ಪ
ವಂದಿಪ ಜನರಿಗೆ ಮಂದಾರ ತರುವಂತೆ
ಕುಂದದಭೀಷ್ಟವ ಸಲಿಸುತಿಪ್ಪ ರಾಯ ಬಾರೊ
ಕುಂದದಭೀಷ್ಟವ ಸಲಿಸುತಿಪ್ಪ ಸುರಮುನಿ1
ಮಂದನ ಮತಿಗೆ ರಾಘವೇಂದ್ರ ರಾಯ ಬಾರೊ 	1
ಆರು ಮೂರೇಳು ನಾಲ್ಕೆಂಟು ಗ್ರಂಥಸಾರಾರ್ಥ
ತೋರಿಸಿದೆ ನ್ಯಾಯದಿಂದ ಸರ್ವರಿಗೆ ರಾಯ ಬಾರೊ
ತೋರಿಸಿದೆ ನ್ಯಾಯದಿಂದ ಸರ್ವರಿಗೆ ಸರ್ವಜ್ಞ 
ಸೂರಿಗಳರಸನೆ ರಾಘವೇಂದ್ರ ರಾಯ ಬಾರೊ 	2
ರಾಮಪದಸರಸೀರುಹ2ಭೃಂಗ ಕೃಪಾಪಾಂಗ
ಭ್ರಾಮಕಜನರ ಮತÀಭಂಗÀ ರಾಯ ಬಾರೊ
ಭ್ರಾಮಕಜನರ ಮತಭಂಗ ಮಾಡಿದ
ಧೀಮಂತರೊಡೆಯನೆ ರಾಘವೇಂದ್ರ ರಾಯ ಬಾರೊ 	3
ಭಾಸುರ ಚರಿತನೆ ಭೂಸುರ ವಂದ್ಯನೆ
ಶ್ರೀ ಸುಧೀಂದ್ರಾರ್ಯರ ವರಪುತ್ರ ರಾಯ ಬಾರೊ
ಶ್ರೀ ಸುಧೀಂದ್ರಾರ್ಯರ ವರಪುತ್ರನೆನಿಸಿದ
ದೇಶಿಕರೊಡೆಯನೆ3 ರಾಘವೇಂದ್ರ ರಾಯ ಬಾರೊ 	4
ಭೂತಳನಾಥನÀ ಭೀತಿಯ ಬಿಡಿಸಿದೆ
ಪ್ರೇತತ್ವ ಕಳೆದೆ ಮಹಿಷಿಯ ರಾಯ ಬಾರೊ
ಪ್ರೇತತ್ವ ಕಳೆದೆ ಮಹಿಷಿಯ ಶ್ರೀಜಗ-
ನ್ನಾಥವಿಠ್ಠಲನ ಪ್ರೀತಿಪಾತ್ರ ರಾಘವೇಂದ್ರ ರಾಯ ಬಾರೊ 	5
1 ಸರ್ವಜ್ಞ; 2 ರಾಮಪದಾಂಬುಜ; 3 ದೈಶಿಕವರ್ಯನೆ
							

41 ರೋಗ ಹರನೆ ಕೃಪಾಸಾಗರ

41.ರಾಗ: ಬೆಹಾಗ್	ತಾಳ: ಆದಿ
ರೋಗ ಹರನೆ ಕೃಪಾಸಾಗರ ಶ್ರೀ ಗುರು
ರಾಘವೇಂದ್ರ ಪರಿಪಾಲಿಸೊ 	 ಪ
ಸಂತತ ದುರ್ವಾದಧ್ವಾಂತ1 ದಿವಾಕರ
ಸಂತವಿನುತ ಮಾತ ಲಾಲಿಸೊ 	 1
ಪಾವನಗಾತ್ರ ಭೂದೇವವರನೆ ತವ
ಸೇವಕಜನರೊಳಗಾಡಿಸೊ 	2
ಘನ್ನಮಹಿಮ ಜಗನ್ನಾಥವಿಠಲಪ್ರಿಯ
ನಿನ್ನಾರಾಧನೆ ಮಾಡಿಸೊ 	3
1 ದುರ್ಮತಧ್ವಾಂತ - ಪಾಠ;
							

42 ವಂದಿಸುವೆ ಗುರು ರಾಘವೇಂದ್ರಾರ್ಯರ

42.	ರಾಗ: ಕಾಂಬೋಜಿ / ವಸಂತಭೈರವಿ	ತಾಳ: ಝಂಪೆ/ಆದಿ
ವಂದಿಸುವೆ ಗುರು ರಾಘವೇಂದ್ರಾರ್ಯರ
ವೃಂದಾವನ ಪ್ರತೀಕದಿ ಪ್ರತಿದಿವಸಗಳಲಿ	 ಪ
ಸುವಿರೋಧಿವತ್ಸರ ಶ್ರಾವಣ ಪರದ್ವಿತೀಯ
ಕವಿವಾರ ತುಂಗಭದ್ರಾತೀರದ
ನವ ಸುಮಂತ್ರಾಲಯದಿ ದೇಹವನು ಬಿಟ್ಟು1 ಮಾ-
ಧವನ ಪುರಕೈದಿದ ಮಹಾತ್ಮರಿವರೆಂದು 	1
ಸ್ವಪದಾವಲಂಬಿಗಳಿಗುಪನಿಷತ್ ಖಂಡಾರ್ಥ
ಉಪದೇಶಗೈದು ಕಾಶ್ಯಪಿಸುರರನು 
ಪ್ರಪುನೀತರನ ಮಾಡಿ ಅಪವರ್ಗ ಮಾರ್ಗವನು
ಉಪದೇಶಿಸಿದ ಪರಮ ಉಪಕಾರಿಗಳ ಕಂಡು 	2
ದೇವತೆಗಳಿವರಿದಕೆ ಸಂದೇಹ ಬಡಸಲ್ಲ ವೃಂ-
ದಾವನವ ರಚಿಸಿ ಪೂಜಿಪ ಭಕ್ತರ	
ಸೇವೆ ಕೈಕೊಂಡು ಕೊಡುವರು ಮನೋರಥವ ಲ-
ಕ್ಷ್ಮೀವರ ಜಗನ್ನಾಥವಿಠಲಗೆ ಪ್ರಿಯರೆಂದು 	3
1 ಒಂದುರೂಪವನಿಟ್ಟು - ಪಾಠ
							

43 ಶ್ರೀ ರಾಘವೇಂದ್ರ ನಿಮ್ಮ ಚಾರು ಚರಣವ

43.	ರಾಗ: ನವರೋಜû	ತಾಳ: ಆದಿ
ಶ್ರೀ ರಾಘವೇಂದ್ರ ನಿಮ್ಮ ಚಾರು ಚರಣವ
ಸಾರಿದೆ ಶರಣಮಂದಾರ ಕರುಣವ	
ಬೀರು ಭವವನಧಿ ತಾರಿಸು ತವಕದಿ
ಸೂರಿ ಸುಧೀಂದ್ರಕುಮಾರ ಉದಾರ 	 ಪ
ಮುನಿರಾಯ ನಿಮ್ಮ ಪಾದವನರುಹಧ್ಯಾನ
ಪ್ರಣವಸ್ತವನಾರ್ಚನೆ ಮಾಳ್ಪ ನಾನಾ
ಜನರ ವಾಂಛಿತವೀವ ಗುಣಪೂರ್ಣ e್ಞÁನ-
ಧನವ ಪಾಲಿಸೆನಗೀಕ್ಷಣ ನಿನ್ನಾಧೀನ
ಮನುಜನ ಪ್ರತಿದಿನದಿ ದಣಿಸುವುದು
ಘನವೆ ಗುರುವೆ ಪಾವನತರಚರಿತ	1
ಮೂಲರಾಮನ ಪಾದಕೀಲಾಲಜಮಧುಪ
ಬಾಲಕನ ಬಿನ್ನಪ ಲಾಲಿಸೊ ಮುನಿಪ
ತಾಳಲಾರೆನೊ ತಾಪತ್ರಯದ ಸಂತಾಪ
ಕೇಳೋ ವಿಮಲe್ಞÁನ ಶೀಲ ಸ್ವರೂಪ
ಭೂಲಲನಾಧವ ಕೋಲನಂದನಾ
ಕೂಲಗ ವರಮಂತ್ರಾಲಯನಿಲಯ 	2
ಕಲಿಕಲ್ಮಷವಿದೂರ ಕುಜನಕುಠಾರ
ನಳಿನಾಕ್ಷ ವಿಮಲ ಶ್ರೀತುಲಸಿಯ ಹಾರ
ಗಳ ಸುಶೋಭಿತ ಕಮಂಡಲದಂಡಧರ
ಅಲವಬೋಧರಮತಜಲಧಿವಿಹಾರ
ಸುಲಲಿತ ಕರುಣಾಂಬುಧೇ ಜಗನ್ನಾಥವಿಠಲ- 
ನೊಲುಮೆಯ ಪಡೆದಿಳೆಯೊಳು ಮೆರೆದೆ	3
							

44 ಶ್ರೀ ರಾಘವೇಂದ್ರ ಬಾರೊ

44.	ರಾಗ: ಪೂರ್ವಿ/ಆನಂದಭೈರವಿ	ತಾಳ: ಆದಿ/ಕೆಹರವಾ
ಶ್ರೀ ರಾಘವೇಂದ್ರ ಬಾರೊ
ಕಾರುಣ್ಯವಾರಿಧಿಯೆ ಬಾರೊ	ಪ
ಆರಾಧಿಪಭಕ್ತರಭೀಷ್ಟವ ಪೂರೈಸುವ ಪ್ರಭುವೆ ಬಾರೊ 	ಅ.ಪ
ರಾಜವಂಶೋದ್ಭವನ ಪಾದರಾಜೀವಭೃಂಗನೆ ಬಾರೊ
ರಾಜಾಧಿರಾಜರೊಳು ವಿರಾಜಿಸುವ ಚೆಲುವ ಬಾರೊ 	1
ವ್ಯಾಸರಾಯನೆನಿಸಿ ನೃಪನ ಕ್ಲೇಶವ ಕಳೆದವನೆ ಬಾರೊ 
ಶ್ರೀ ಸುಧೀಂದ್ರಕರಕಂಜಜ ವಾಸುದೇವಾರ್ಚಕನೆ	2
ಸನ್ಯಾಸಕುಲದೀಪ ಬಾರೊ ಸನ್ನುತಸದ್ಗುಣನೆ ಬಾರೊ
ಮಾನ್ಯ ಜಗನ್ನಾಥವಿಠಲ ಪ್ರಪನ್ನ ಜನರ ಪ್ರಿಯನೆ	3
							

45 ಸುರಪನಾಲಯದಂತೆ ಮಂತ್ರಾಲಯ

 45.	ರಾಗ: ಕಾಂಬೋಜಿ	ತಾಳ: ಝಂಪೆ
ಸುರಪನಾಲಯದಂತೆ ಮಂತ್ರಾಲಯ
ಕರೆಸುವುದು ಕಂಗೊಳಿಸುವುದು ನೋಳ್ಪಜನಕೆ 	ಪ
ಕಾಮಧೇನುವಿನಂತೆ ಇಪ್ಪ ಗುರು ಸಾರ್ವ-
ಭೌಮ ಸುಧೀಂದ್ರಸುತ ಶ್ರೀ ರಾಘವೇಂದ್ರ
ಆಮಯಾದಿ ಖಳ ತಮಿಶ್ರ ಓಡಿಸುವ ಚಿಂ-
ತಾಮಣಿಪ್ರಕಾಶದಂತಿಪ್ಪ ವೃಂದಾವನದಿ  	1
ಸುರತರುವಿನಂತಿಪ್ಪ ಕೀರ್ತಿಸಚ್ಛಾಯ ಆಶ್ರಿ-
ತರ ಮನೋರಥವ ಪೂರೈಸುವ
ಧರಣಿಸುರಾಖ್ಯ ಷಟ್ಟದಗಳಿಗೆ ಸತ್ಸುಧಾ 
ಪರಿಮಳದಿ ತೃಪ್ತಿ ಪಡಿಸಿದ ಮರುತನಂತೆ 	2
ವಾರಾಹಿ ಎಂಬ ನಂದನವನದಿ ವಿ-
ಹಾರ ಮಾಳ್ಪರು ನತಜನ ಸ್ನಾನಪಾನದಿಂದ
ಶ್ರೀ ರಾಘವೇಂದ್ರರು ಇಲ್ಲಿಪ್ಪ ಕಾರಣ 
ಪರಮ ಕಾರುಣ್ಯ ನಿಧಿ ಜಗನ್ನಾಥವಿಠಲನಿಹನು 	3
							

46 ಸ್ಮರಿಸಿ ಬೇಡುವೆನು ನಾ ಹೇ ಗುರುಸಾರ್ವಭೌಮ

46.	ರಾಗ: ಕಾಂಬೋಜಿ	ತಾಳ: ಝಂಪೆ
ಸ್ಮರಿಸಿ ಬೇಡುವೆನು ನಾ ಹೇ ಗುರುಸಾರ್ವಭೌಮ 	ಪ
ನಿರುತ ನೀ ಪೊರೆ ಎನ್ನ ವಾದಿಗಜಸಿಂಹ	 ಅ.ಪ.
ದಿತಿಸುತಗೆಸುತನೆನಿಸಿ ಅತಿಮುದದಿ ಸುರಮುನಿಯ
ಮತ ಪಿಡಿದು ಹರಿಯ ಮಹಿಮೆ ಪಿತಗೆ ಪೇಳಿ
ಖತಿಗೊಂಡು ನಿನ್ನ ಮೂರುತಿ ತೋರೆನಲು ಶ್ರೀ- 
ಪತಿಯ ಸ್ತಂಭದಿ ಕರೆದ ಪ್ರಹ್ಲಾದರಾಜ 	1
ಬಾಲ್ಯದಲಿ ಯತಿಯಾಗಿ ಲೀಲೆಯಿಂದಲಿ ಭೂಮಿ-
ಪಾಲಗೊದಗಿರ್ದ ಕುಹುಯೋಗ ಬಿಡಿಸಿ
ಖೂಳಮಾಯ್ಗಳ ಜಯಿಸಿ ಚಂದ್ರಿಕಾ ಗ್ರಂಥವನು
ಪೇಳಿ ಹರಿಪೀಠವೇರಿದ ವ್ಯಾಸರಾಜ 	2
ಕಾಮರಿಪುನುತ ಮೂಲರಾಮಪದಯುಗಕುಮುದ
ಸೋಮನೆನಿಸುವ ಭಕ್ತಸ್ತೊಮಕ್ಕೆಲ್ಲ
ನೇಮದಿಂದಲಿ ವಿವಿಧ ಕಾಮಿತಾರ್ಥ ಸ್ಫುಟಿತ
ಹೇಮಸನ್ನಿಭಗಾತ್ರ ಪಾವನ ಚರಿತ್ರ	3
ಶಾಂತತೆಯ ಪೊಂದಿ ಮಂತ್ರಾಲಯದಿ ವೃಂದಾವ-
ನಾಂತರದೊಳಿರುತ ಸಿರಿಕಾಂತ ಹರಿಯ
ಚಿಂತಿಸುತಲಿಹ ಸರ್ವತಂತ್ರಸ್ವತಂತ್ರ ಕರು-
ಣಾಂತರಂಗನೆ ರಾಘವೇಂದ್ರಯತಿವರ್ಯ 	4
ಮೂಕಬಧಿರಾಂಧತ್ವಗಳ ಪೊಂದಿ ಧರಣಿಯೊಳು
ವ್ಯಾಕುಲವ ಪಡುವವರನುದ್ಧರಿಸುತ
ನಾಕಪತಿವಿನುತ ಜಗನ್ನಾಥವಿಠಲ ಮಧುಪ
ನೀ ಕೊಟ್ಟು ಸಲಹೆನ್ನಭೀಷ್ಟ ಸಮುದಾಯ 	5
13. ರಾಮಚಂದ್ರವಿಠಲ 
							

47 ಕರೆದು ಕೈ ಪಿಡಿಯೊ ಎನ್ನಾ

47.	ರಾಗ: ಮೋಹನ	ತಾಳ: ಆದಿ
ಕರೆದು ಕೈ ಪಿಡಿಯೊ ಎನ್ನಾ ಶ್ರೀ ರಾಘವೇಂದ್ರ
ಗುರುವೇ ಕರುಣಾಸಂಪನ್ನ	ಪ
ಗುರುವೆ ನಿಮ್ಮಯ ಚರಣಕಮಲಕೆ 
ಶರಣು ಹೊಕ್ಕೆನೊ ಅರೆಮರಿಲ್ಲದೆ
ಸುರತರುವೆ ನಿರುತದಲಿ ಎನ್ನನು
ಪೊರೆಯೊ ಬಾರಿಂದೆರೆವುಮಾಡದೆ	ಅ.ಪ
ಘೋರ ಸಂಸಾರವೆಂಬ ವಾರಿಧಿಯೊಳು
ಮೇರೆಗಾಣದಲಿಹೆನೋ
ಆರು ವರ್ಗಗಳೆಂಬ ವಾರಿಚರ ಮಕ-
ಮಾರಿಬಾಧೆಗೆ ಎದೆ ಆರೀ ಬಿದ್ದೆನಿಂದು
ದಾರಿ ನೋಡುವರಿಲ್ಲವೋ ಈ ಸಮಯದಿ
ದೂರ ನೋಡುವುದಲ್ಲವೋ ನಿನ್ಹೊರತು ಆ-
ಧಾರ ಒಬ್ಬರ ಕಾಣೆವೋ ನೀನೇ ದೀನೋ-
ದ್ಧಾರನೆಂಬುದ ಬಲ್ಲೆವೊ
ಧೀರಯತಿ ಪರೋದ್ಧಾರ ಭಯಹರ
ಸಾರಿದವರಿಗಪಾರಸುಖಕರ
ಸೇರಿದೆನೊ ಪರಿಚಾರಿಗನು
ಸಾರಿ ಎನ್ನನು ಬಾರಿಬಾರಿಗೆ	1
ಕಂಡಕಂಡವರ ಬಳಿಗೆ ಥಂಡಥಂಡದಿ ಹೋಗಿ
ದಿಂಡುತಿರುಗೀತೀ ದೇಹಾ
ಸಂಡಿಗ್ಹಾಯಿತೋ ಬೇಡಿಕೊಂಡೆ ಕೋಡಗನಂತೆ
ದಂಡವಾಯಿತೊ ಮಾನ ಅಂಡಲಿವೆನೊ ಈಗ
ಭಂಡುಮಾಡುವುದುಚಿತವೇ ದಾಸನ ದೋಷ
ಖಂಡ್ರಿಸದಿದು ಥರವೇ ಹೀನನ ಲಜ್ಜಾ
ಕಂಡುಬಿಡುವುದುಚಿತವೇ ನಾನೊಬ್ಬ ಭೂ-
ಮಂಡಲದೊಳಗಿರುವೆ
ಮಂಡಲಾಧಿಪ ಪಂಡಿತೋತ್ತಮ
ಚಂಡಖಳಕೃತ ಷಂಡತಮತಮಾ-
ರ್ತಾಂಡನೆ ಮುನಿವರೋದ್ದಂಡ ಸಜ್ಜನ
ಪಂಡಿತನೆ ನಾನುದ್ದಂಡ ನಮಿಸುವೆ	2
ಬಂದು ನಿನ್ನಯ ಪಾದವಾ ಹರುಷದಿಂದ
ವಂದಿಸುವಾ ಜನರ
ಮಂದಾರತರುವಂತೆ ಛಂದಛಂದದಿ ಮನ
ಬಂದಾವರನೆಲ್ಲ ಸಂದೇಹವಿಲ್ಲದೆ
ತಂದು ಕೊಡುವೆ ಬಿಡದೆ ಅವರ ದೋಷ
ಒಂದನೂ ನೀ ನೋಡದೆ ಅವರಂತ ನೋ-
ಡಿಂದೆನ್ನನು ಬಿಡದೆ ಎನ್ನ ತಾಯಿ
ತಂದೆಗಧಿಕ ನೋಡಿದೆ
ಇಂದಿರಾಮನಮಂದಿರಾ ಶ್ರೀಶ
ಸುಂದರಾ ರಾಮಚಂದ್ರವಿಠ-
ಲೇಂದೀವರ ಪದವೃಂದಸೇವಾ-
ನಂದಪೂರಿತ ಬಂದು ಮುಂದಕೆ	3
							

48 ರಾಘವೇಂದ್ರ ಗುರುರಾಯ ಸಲಹಬೇಕಯ್ಯ

48.	ರಾಗ: ಸಾವೇರಿ	ತಾಳ: ಆದಿ/ಮಟ್ಟ
ರಾಘವೇಂದ್ರ ಗುರುರಾಯ ಸಲಹಬೇಕಯ್ಯ	ಪ
ನೀಗಿಸು ಭವರೋಗ ನಿತ್ಯ ಬಾಗಿಸು ಸಜ್ಜನರ ಪಾದಕೆ	ಅ
ನೂರುಸಾವಿರಕೋಟಿ ಸಂಖ್ಯೆಗೆ
ಮೀರಿದ ಬಹುವಿಧ ಜನರಿಗೆ 
ಹಾರೈಸಿ ಬೇಡಿಕೊಂಡಂಥ ವರವಕೊಟ್ಟು ಅವರ 
ಸಾರೆಗೆರೆದು ಪಾಲಿಸುವಂಥ ಪರಿವಾರಜನರಿಗೆ 
ಆರುರಸದನ್ನವನೆ ಕೊಡುವಂಥ ಜಗದೊಳಗೆ ಅತಿಶಯ 
ವಾರಿಜಾಕ್ಷನೆಂಬಂಥ ಮಹಿಮೆ ನೋಡಿ
ಕೀರುತಿಗೆ ಮರುಳಾಗಿ ನಮಿಸಿದೆ 
ಗಾರುಮಾಡದೆ ಹತ್ತಿರಕರೆಯೊ	1
ರಾಮನೆ ನಿಮ್ಮೊಳು ನಿಂದು 
ಪ್ರೇಮದಿ ಪೂಜೆಯನುಕೊಂಡು
ಭೂಮಿಯೊಳು ನಿಮ್ಮನ್ನೆ ಮೆರೆಸುವ ಕಾಮಿತಜನರಿಗೆ 
ನೇಮದಿಂದಲಿ ವರವ ಕೊಡುವ ಸ್ವರ್ಗಾದಿಂದ 
ಕಾಮಧೇನ್ವಾದಿಗಳ ತಾ ತರಿಸುವನಾ ಬೇಡಿಕೊಂಬೆನೊ 
ಪ್ರೇಮದಿ ಕೊಡು ಎನಗೆ ನೀ ವರವ
ಧೀಮಂತನೆ ದಯವಂತನೆ ಶ್ರೀ-
ರಾಮಪದಸರಸಿಜಭೃಂಗನೆ	2
ಶ್ರೀಮನೋಹರನಂಘ್ರಿಕಮಲವ 
ನೇಮದಿಂದಲಿ ಸ್ತೋತ್ರ ಮಾಡುವ
ಧೀಮಂತರು ತಾವೆ ಕಾರುಣ್ಯ ಎನಗೊಲಿದು ಮಾಡಲು
ಈ ಮಹಾವರವೀಯಲು ಧನ್ಯಾ ನಾನೇನ ಬಲ್ಲೆನೊ
ಭೂಮಿಯಯೊಳಗಿದ್ದ ಧನಧಾನ್ಯ ಅಸ್ಥಿರವೆಂಬುವ
ನೇಮ ಬಲ್ಲೆನೊ ಕುಜನರೊಳು ಮಾನ್ಯ ನೀ ಕೊಡಲಿಬೇಡ
ರಾಮಚಂದ್ರವಿಠಲನಪದ 
ತಾಮರಸ ಹೃತ್ಕಮಲದಲಿ ತೋರೊ	3
14. ವೆಂಕಟೇಶವಿಠಲ (1)
							

49 ವಸುಧೆಯೊಳಗೆಣೆಗಾಣೆನೊ ಈ ಗುರುಗಳಿಗೆ

49.	ರಾಗ: ಮಧ್ಯಮಾವತಿ	ತಾಳ: ಅಟ
ವಸುಧೆಯೊಳಗೆಣೆಗಾಣೆನೊ ಈ ಗುರುಗಳಿಗೆ
ಅಸುಪತಿ ಸಮದಿಂದೈಶಸುವ(?) ಕುಶಲರಿಗೆ	ಪ
ಶ್ರೀರಮಣನ ಪಾದಸಾರಸಮಧುಪ
ಸೂರಿಜನವಿನುತ ಶ್ರೀ ರಾಘವೇಂದ್ರರಿಗೆ	1
ಬಂದ ಜನರಿಗಾನಂದಗರೆವ
ಕುಂದುರಹಿತ ಕರ್ಮಂದಿಗಳೊಡೆಯರಿಗೆ	2
ದಿಟ್ಟ ವೆಂಕಟೇಶವಿಠಲನಪಾದವ
ಮುಟ್ಟಿ ಭಜಿಪರೊಳು ಶ್ರೇಷ್ಠರೆನಿಸುವರಿಗೆ	3
15. ಪ್ರಾಣೇಶವಿಠಲ 
							

ಜಯ ಮಂಗಳಂ. . ಶ್ರೀ ರಾಮಚಂದ್ರಾಂಘ್ರಿ

50.	ರಾಗ: ಭೈರವಿ	ತಾಳ: ಝಂಪೆ
ಜಯ ಮಂಗಳಂ ನಿತ್ಯ ಶುಭಮಂಗಳಂ	ಪ
ಶ್ರೀರಾಮಚಂದ್ರಾಂಘ್ರಿ ಸರಸೀರುಹಭೃಂಗನಿಗೆ
ಧೀರ ಸುಧೀಂದ್ರಕರಸಂಭೂತಗೆ
ವಾರಾಹಿತೀರ ಮಂತ್ರಾಲಯನಿಕೇತನಿಗೆ
ಶ್ರೀ ರಾಘವೇಂದ್ರರಾಯರ ಚರಣಕೆ	1
ಪರಮತಧ್ವಾಂತ ಭಾಸ್ಕರಗೆ ಸ್ವರ್ಣಾಭಗೆ
ಶರಣರಭಿಲಾಷೆ ಪೂರೈಸುವರಿಗೆ
ದರುಶನಾದಿ ತ್ರಿಭಾಷಾದರ್ಥ ಬಲ್ಲವರಿಗೆ
ಮರುತಮತ ಕಡಲುಡುಪತಿಎನಿಪಗೆ	2
ಪ್ರಾಣೇಶವಿಠಲನವರೊಳು ಪ್ರೀತಿಯುಳ್ಳವಗೆ
ಕ್ಷೋಣಿಯೊಳು ಸರಿಯಿಲ್ಲದ ಮಹಿಮನಿಗೆ
ಧ್ಯಾನಕ್ಕೆ ಬಂದೊದಗುತಿಪ್ಪ ಗುರುರಾಯರಿಗೆ
ಮೀನಾಂಕಜಿತಗೆ ದೇಶಿಕವರ್ಯಗೆ	3
							

51 ಜಯ ಮಂಗಳಂ ನಿತ್ಯ. . ಯೋಗೀಂದ್ರತೀರ್ಥ

51.	ರಾಗ: ಭೈರವಿ	ತಾಳ: ಝಂಪೆ
ಜಯಮಂಗಳಂ ನಿತ್ಯ ಶುಭಮಂಗಳಂ	ಪ
ಯೋಗೀಂದ್ರತೀರ್ಥಕರರಾಜೀವಪೂಜಿತಗೆ
ಭಾಗವತಜನ ಪ್ರಿಯರೆನಿಸುವರಿಗೆ
ಯೋಗಿಗಳಧಿಪತಿ ಸುಧೀಂದ್ರಕರಜಾತರಿಗೆ
ಬಾಗಿ ವಂದಿಪರ ಸಲಹುವ ಸ್ವಾಮಿಗೆ	1
ವರಹಜಾತೀರ ಮಂತ್ರಾಲಯನಿಕೇತನಿಗೆ
ಧರಣಿಯೊಳಗಪ್ರತಿಮಚರಿತೆ ತೋರ್ವರಿಗೆ
ಕುರುಡ ಕಿವುಡಾದಿಗಳ ಬಯಕೆ ಪೂರೈಪರಿಗೆ
ವರಸುವೃಂದಾವನದಿ ಶೋಭಿಪರಿಗೆ	2
ಆರಾಧನೆಯ ಜನರು ಮಾಡುವುದು ನೋಡಲ್ಕೆ
ವಾರವಾರಕ್ಕಧಿಕವೆನಿಸುವರಿಗೆ
ಮಾರಮಣ ಪ್ರಾಣೇಶವಿಠಲನಂಘ್ರಿಜಲಜಕೆ
ಆರುಪದವೆನಿಪಗೆ ಕರುಣಾಜಲಧಿಗೆ	3
							

52 ಮಂಗಳಂ ಜಯ ಮಂಗಳಂ. . ರಾಘವೇಂದ್ರರಿಗೆ

52.	ರಾಗ: ಪೂರ್ವಿ	ತಾಳ: ಮಟ್ಟ
ಮಂಗಳಂ ಜಯ ಮಂಗಳಂ
ಮಂಗಳಂ ಶ್ರೀ ಗುರು ರಾಘವೇಂದ್ರರಿಗೆ	ಪ
ಕೋಲಜಕೂಲ ವಿಶಾಲಮಂತ್ರಮಂದಿ-
ರಾಲಯವಾಲಯ ಪಾಲಯಮಾಂ ಗುರು	1
ನಾಭಿಜ ನಾಭಿಜ ನಾಭಿಜ ಪದಪಂಕಜ(?)
ಶೋಭಿತ ಕೇಳಿ ಬಿಡದಮ್ಮ ಈ ಅಳಿ	2
ಏನೇನು ಮಾಡಲು ನೀನೊಲಿಯದಿರೆ
ಪ್ರಾಣೇಶವಿಠಲನ್ನ ಕಾಣರು ಜನರು	3
							

53 ರಾಘವೇಂದ್ರ ನಿನ್ನ ಪಾದ

53.	ರಾಗ: ವರಾಳಿ	ತಾಳ: ಅಟ
ರಾಘವೇಂದ್ರ ನಿನ್ನ ಪಾದಸರಸಿಜಕೆ
ಬಾಗುವೆ ಮನ್ಮನದ್ಹರಿಕೆ ಪೂರೈಸೊ 	ಪ
ವಾಸುದೇವಾರ್ಚಕ ಭೂಸುರವಂದಿತ
ದೋಷವಕಳೆವದು ದೇಶಿಕವರ್ಯ	1
ವಿಷಯಂಗಳೆಲ್ಲದಹಿಸಿ ಯೋಗಮಾರ್ಗದಿಂ
ವಸುದೇವ ಪುತ್ರನೊಲಿಸಿಕೊಂಡ ಶಕ್ತ	2
ಭೂತಪ್ರೇತಗಳ ಬಲಾತುರದಲಿ ಕಳೆ-
ವಾ ತುಂಗಮಹಿಮನೆ ಭೂತಲದೊಳಗೆ	3
ಅಂಗಜಶರದೂರ ಮಂಗಳವಿಗ್ರಹ
ತುಂಗಾತೀರವಾಸ ಪಿಂಗಳ ತೇಜ	4
ದಂಡ ಕಾಷಾಯ ಕಮಂಡಲಧರ ಪ್ರ-
ಚಂಡ ಮಹಾತ್ಮ ಸುಪಂಡಿತರೊಡೆಯ	5
ಸಾರುವ ಶರಣರ ಘೋರಿಸುತಿಪ್ಪ ಸಂ-
ಸಾರ ಕಡಲಿಗೆ ಕರೀರ ಸಂಭವನೆ	6
ಮೊರೆಹೊಕ್ಕ ದಾಸರ ಮರೆಯಾದೆ ಸಲಹಯ್ಯ
ಪರಮತ ಉರಗಕ್ಕೆ ಗರುಡನೆನಿಪನೆ	7
ತಂದೆ ಪಾಲಿಸೊ ದಯಾಸಿಂಧು ಜಗದ್ಗುರು
ಮಂದಮತಿಗಳೆಂಬ ಇಂಧನಕ್ಕನಲ	8
ವಟುವಪು ಪ್ರಾಣೇಶವಿಠಲನ ನಿಜದಾಸ
ಸಟೆಯಲ್ಲ ಸಂಸಾರ ಕಟಕಟಿ ಬಿಡಿಸೊ	9
ಸುವ್ವಾಲಿ ಪದ
							

54 ಸುವ್ವಿ ಸುವ್ವಾಲಿ ಸುವ್ವಿ ಸುವ್ವಾಲಿ

54.	ರಾಗ: ಕಾಂಬೋಜಿ	ತಾಳ: ಅಟ
ಸುವ್ವಿ ಸುವ್ವಾಲಿ ಸುವ್ವಿ ಸುವ್ವಾಲಿ 
ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ 	ಪ
ಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು 
ಅಂದದಿ ಟಿಪ್ಪಣಿ ಮಾಡಿದ ದೇವರಾರು ಸುವ್ವಿ 
ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ 
ಚಂದಿರ ವದನನೆ ಈತ ನಮ್ಮ ಗುರುವು ಸುವ್ವಿ	1
ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ 
ಕಿವಿಗೊಟ್ಟು ಕೇಳುವದು ಬುಧ ಜನರು ಸುವ್ವಿ 
ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ 
ಅವನಿಯ ಸುರರಿಂದರ್ಚನೆಗೊಂಬುವರು ಸುವ್ವಿ	2
ಅಷ್ಟಾಕ್ಷರ ಮಂತ್ರವನ್ನು ತಪ್ಪದಲೆ ನಿತ್ಯವಾಗಿ 
ನಿಷ್ಠೆಯಿಂದ ಭಜಿಸಲು ಭೂತ ಭಯವು ಸುವ್ವಿ 
ಕುಷ್ಠ ರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ 
ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುವು ಸುವ್ವಿ 	3
ಮೃತ್ತಿಕೆ ಮಾಲೆ ಅಂಗಾರ ದಿವ್ಯ ಮಂತ್ರಾಕ್ಷತೆಯು 
ಹತ್ತಿರವಿರಲು ಕ್ಲೇಶವ ಲೇಶ ಕಾಣರು ಸುವ್ವಿ 
ಎತ್ತ ಹೋದರು ಜನರಿಗೆ ಜಯಪ್ರದ ತೋರುವದು 
ಕತ್ತಲಿಲ್ಲ ಶತಸಿದ್ಧ ಮತ್ತೇನು ಕೇಳಿ ಸುವ್ವಿ 	 4
ಪಂಡಿತರು ಮೊದಲಾಗಿ ಹಸ್ತಿ ಉಷ್ಟ್ರ ಕುದುರೆಯ 
ಹಿಂಡುಗಳು ತೃಷೆಯಿಂದ ಬಳಲುತಿರೆ ಸುವ್ವಿ 
ದಂಡ ಜಗತಿಗೂರಿ ತೋಯ ತೆಗಿಸಿ ಅವನಿ-
ಮಂಡಲದೊಳಗೆ ಪೆಸರಾದವರಿವರು ಸುವ್ವಿ	5
ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ-
ಲಿಟ್ಟುಕೊಂಡು ಉಣಿಸಿ ಉತ್ತಮ ವರವ ಸುವ್ವಿ 
ಕೊಟ್ಟು ಕಳಿಸಿದ ಮೇಲೆ ಅವು ಕೊಂಚಿಯಾಗಲಿಲ್ಲ 
ಗಟ್ಟಿ ಸಂಕಲ್ಪರಿವರು ಮುನಿವರರು ಸುವ್ವಿ	6
ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ 
ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ ಸುವ್ವಿ 
ನೆಪ್ಪು ಧರೆಗಾಗಲೆಂದು ಗುರು ಸುಧೀಂದ್ರ ಕುಮಾರ 
ಸರ್ಪನ ತೋರಿಸಿ ಸುಪ್ರಖ್ಯಾತರಾದರು ಸುವ್ವಿ	7
ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ 
ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ ಸುವ್ವಿ 
ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ 
ಭಜಿಸಿರಿವರನ್ನು ಮಕ್ಕಳು ಬೇಡುವವರು ಸುವ್ವಿ	8
ಮುತ್ತಿನ ಮಾಲಿಕೆ ನೃಪ ಭಕ್ತಿಯಿಂದ ಕೊಡಲಾಗಿ 
ಸಪ್ತ ಜಿಹ್ವಗುಣಿಸಿದ ಸರ್ವರು ನೋಡೆ ಸುವ್ವಿ 
ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ 
ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು ಸುವ್ವಿ	9
ಹಿಂದೆ ಮಾಡಿದ ದುಷ್ಕರ್ಮ ತೀರ ಬಂದುದನು ನೋಡಿ 
ಬಂದಾಕ್ಷಣದಲ್ಲಿ ಅವನ ವಿಚಾರಿಸಿ ಸುವ್ವಿ 
ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ 
ಸಂದೇಹವಿಲ್ಲದೆ ಸುಲೋಕವನಿತ್ತರು ಸುವ್ವಿ	10
ತುಂಗಾತೀರ ಮಂತ್ರಾಲಯದಲ್ಲಿ ಶ್ರಾವಣ ಬಹುಳ 
ಮಂಗಳ ಬಿದಿಗೆಯಲ್ಲಿ ನಿವಾಸವಾದರು ಸುವ್ವಿ 
ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು 
ಕಂಗಳು ಸಾಲವು ನೋಡೆ ಹೊದ್ದ ಶಾಟಿಯ ಸುವ್ವಿ	11
ಅಂಧ ಬಧಿರ ಕುಂಟ ನಾನಾ ರೋಗಿಗಳು ಮತ್ತೆ 
ಕಂದವಜ್ರ್ಯ ಮೊದಲಾದವರಿಗೆ ಕಾಮ್ಯ ಸುವ್ವಿ 
ತಂದುಕೊಡುವರು ಬೇಗ ಇದಕೆ ಸಂಶಯವಿಲ್ಲ 
ಮಂದಭಾಗ್ಯರಿಗೆ ಇವರ ಸೇವೆ ದೊರೆಯದು ಸುವ್ವಿ	12
ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು 
ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ ಸುವ್ವಿ 
ಧಾತಪಿತನಿಲಯವಿದೇನೋಯೆಂದು ತೋರುವದು 
ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ ಸುವ್ವಿ	13
ಪಾಡ್ಯ ಪೂರ್ವಾರಾಧನೆ ಆರಾಧನೆ ಉತ್ತರಾರಾಧನೆಗೆ 
ಒಡ್ಡಿ ಬರುವರು ಎಂಟು ದಿಕ್ಕುಗಳಿಂದ ಜನವು ಸುವ್ವಿ 
ಕಡ್ಡಿ ಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ 
ದೊಡ್ಡ ರಥವೇರಿ ಮಠವ ಸುತ್ತುವರು ಸುವ್ವಿ	14
ಇಷ್ಟೇಎನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು 
ನಷ್ಟ ಮಾಡುವರು ದುರ್ಮತ ದಾರಿದ್ರ್ಯವ ಸುವ್ವಿ 
ಸೃಷ್ಟಿಗೊಡೆಯ ಪ್ರಾಣೇಶವಿಠ್ಠಲನೆಂದು ಪೇಳ್ದರು 
ಎಷ್ಟು ಪೇಳಿದರೂ ಎನ್ನಿಂದಲಿ ತೀರದು ಸುವ್ವಿ 	15
16. ಶ್ರೀದವಿಠಲ 
							

55 ರಾಘವೇಂದ್ರ ಗುರುರಾಯರ ಸೇವಿಸಿರೊ

55.	ರಾಗ: ಯದುಕುಲಾಂಬೋಜಿ	ತಾಳ: ಆದಿ
ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ	 ಪ
ಯೋಗದಿ ತುಂಗಾತೀರದಲ್ಲಿ ನಿಂದು ವಿಹರಿಸುತಿಹರಿಂದು1	ಅ.ಪ
ಶ್ರೀ ಸುಧೀಂದ್ರ ಕರ ಸರೋಜ ಸಂಜಾತ ಧರೆಯೊಳಗೆ ಪುನೀತಾ
ದಾಶರಥಿಯ ದಾಸತ್ವವ ತಾವಹಿಸಿ ದುರ್ಮತಗಳ ಜಯಿಸಿ 
ಶ್ರೀ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ 
ಭೂಸುರರಿಗೆ ಸಂಸೇವ್ಯಸದಾಚರಣಿ ಕಂಗೊಳಿಸುವ ಕರುಣಿ	1
ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ
ಸಂದರುಶನ ಮಾತ್ರದಲಿ ಮಹತ್ಪಾಪ ಪರಿದೋಡಿಸಲಾಪಾ
ವೃಂದಾವನಗತ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ
ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ	2 
ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ
ಮೋದಬಡಿಸುತಿಹ ತಾನಿಹಪರದಲ್ಲಿ ಈತಗೆ ಸರಿಯೆಲ್ಲಿ
ಮೇದಿನಿಯೊಳಗಿನ್ನರಸಲು ನಾ ಕಾಣೆ ಪುಸಿಯಲ್ಲೆನ್ನಾಣೆ
ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳುವೆ ಸ್ಥಾಪಿ 	3
1 ತುಂಗಾ ತೀರದಿ ರಘುರಾಮನ ಪೂಜಿಪರೋ ನರಸಿಂಗನ ಭಜಿಪರೋ - ಪಾಠ
17. ಶ್ರೀಶವಿಠಲ
							

56 ರಾಘವೇಂದ್ರ ಗುರುರಾಯರಂಘ್ರಿ

56.ರಾಗ: ಜಂಜೂಟಿ 	ತಾಳ: ಆದಿ
ರಾಘವೇಂದ್ರ ಗುರುರಾಯರಂಘ್ರಿ ಕಮಲಾರಾಧಿಸಿರೋ ವಿಮಲಾ	ಪ
ಯತಿವರ ಶ್ರೀಸುಧೀಂದ್ರಕರಜಾತಾ 
ಕ್ಷಿತಿಸುರ ಯತಿ ಈತ
ಸ್ತುತಿಪರಘ ನಿಮಿಷದೊಳು ನಿವಾರಿಸುವಾ ಸುಖವನು ತೋರಿಸುವ
ಶ್ರುತಿಸ್ಮೃತಿತತಿ ಸಮ್ಮತವಾಗಿ ಗ್ರಂಥ ರಚಿಸಿದ ಧೀಮಂತ	1
ಮಧ್ವಸುಮತದುಗ್ದಾಬ್ಧಿಗೆ ಉಡುರಾಜಾ ತರಣೀಸಮತೇಜ 
ಅದ್ವೈತ ಘೋರಾರಣ್ಯಕೆದಾವಾ ಸಜ್ಜನರಕಾವಾ
ಸದ್ವೈಷ್ಣವರಿಗೆ ಸತತ ಸುಧಾಕರವಾ ಕರವಿಡಿದು ಮೆರೆವಾ
ಉದ್ಯದ್ಭವಸಮ ಬುದ್ಧಿಶಾಲ್ಯನೀತಾ ಜಗದೊಳಗೆ ಪ್ರಖ್ಯಾತಾ	2
ವರಹಜತೀರದಿ ಸ್ಥಿರದಲಿ ನಿಂದು ಕರದಲ್ಲಿಗೆ ಬಂದು
ಸ್ಮರಿಸುವ ಜನರಿಗೆ ಸುಖಕರನೀತಾ ಮಿಥ್ಯಲ್ಲವು ಸತ್ಯಾ
ಕುರುಡ ಕಿವುಡ ಮೂಕರ ಮನದಭೀಷ್ಟಾ ಕೊಡುವಲಿ ಬಹು ಶ್ರೇಷ್ಠಾ
ಧೊರೆ ಶ್ರೀಶೀಶವಿಠಲನ ಶರಣಾಗ್ರಜನೀತಾ ಸುಫಲ ಪ್ರದಾತಾ	
							

57 ಕರುಣಿಸು ಹರಿಬಾಲ ಅರಳಿಸೊ ಹೃತ್ಕಮಲ

57.	ರಾಗ: [ಕುರಂಜಿ]	ತಾಳ: [ಆದಿ (ತಿಶ್ರನಡೆ)]
ಕರುಣಿಸು ಹರಿಬಾಲ ಅರಳಿಸೊಹೃತ್ಕಮಲ
ಕರಗಿಸುರಿಸೊವರ ಕರುಣಿ ವಿಶಾಲ	ಪ
ತಂದೆ ನಿಮ್ಮಯ ಹರಕೆ ತಂದು ಬರಲಿ ಶಿರಕೆ ಹಾ-
ಗೆಂದು ನಮಿಪೆ ಅಡಿಗೆ ಮುಂದಾಗಿರಿಸೊ ಜಗಕೆ	1
ಪ್ರಥಮ ಶ್ರೇಣಿಯಲಿ ಪಥವು ಜರಗುತಿರಲಿ
ಪತಿತರಾಗದೆ ಇಳೆಲಿ ಪ್ರಥಮ ಭಕ್ತ ನೀನೊಲಿ 	2
ಏಕಾಂತ ಭಕ್ತನೆ ಲೋಕದಿ ಗುರುವನೆ(?)
ವ್ಯಾಕುಲ ಕಳೆಯಿಸೊ ಶ್ರೀಕರಾರ್ಚಿತ ಪ್ರಿಯನೆ 	3
ಪಾದ ಸೇವಕಳಯ್ಯ ನಿನ್ನ ಪಾದ ನಂಬಿಹೆನಯ್ಯ ಶ್ರೀ-
ಪಾದರಾಯರ ಶಿಷ್ಯ ಸ್ವಾಪಾದ ಕರುಣಿಸಯ್ಯ 	4
ಸಿರಿ ಅಜವಿಠಲ ಕರುಣಿ ಭಕ್ತರಮಲ್ಲ
ಸಿರಿಯನೀಡಲು ಬಲ್ಲ ಸರಿ ನಿನಗ್ಯಾರಿಲ್ಲ 	5
							

58 ನೋಡಿದೆ ನಿಂದು ಗುರುರಾಜರಾ

58.	ರಾಗ: [ಕರ್ಣರಂಜಿನಿ]	ತಾಳ: [ಆದಿ]
ನೋಡಿದೆ ನಿಂದು ಗುರುರಾಜರಾ
ನಾಡಿನೊಳಗೆ ಪ್ರಖ್ಯಾತರಾದರ 	ಪ
ಪ್ರಹಲ್ಲಾದ ಮುನಿಯ ಅವತಾರ
ಅಹಲ್ಲಾದವನು ನೀಡುವರ
ಮೋಹಿನಿ ರೂಪನ ನೋಡಿದರ
ಮೋಹಭವಂಗಳ ನೀಗಿದರ 	1
ಮಂಚಾಲದಲಿ ನೆಲೆಸಿದರಾ
ಸಂಚಿತಾಗಮಗಳ ನೋಡಿ ಪರಾ
ವಂಚಿಸದೆಮಗೆ ಫಲ ನೀಡುವರಾ
ಪಂಚೇಂದ್ರಿಯಂಗಳ ಜೈಸಿದರಾ 	2
ಸಿರಿಅಜವಿಠಲನ ಜಪಿಸಿದರ
ನರಹರಿರೂಪನ ನೋಡಿದರ
ಕರದಲಿ ಜಪಮಣಿ ಎಣಿಸುವರ
ಮರುಕದಿ ಶರಣರಿಗೊಲಿಯುವರ 	3
19. ಅನಂತವಿಠಲ - ಅಪ್ರಕಟಿತ ಕೃತಿಗಳು
							

59 ಕರುಣಿಸೊ ರಾಘವೇಂದ್ರ ದಯಾಸಾಂದ್ರ

59.	ರಾಗ: ನಾಗಗಾಂಧಾರ/ಜೋನ್‍ಪುರಿ 	 ತಾಳ: ತಿಶ್ರ ಏಕ
ಕರುಣಿಸೊ ರಾಘವೇಂದ್ರ ದಯಾಸಾಂದ್ರ ಗುರುಕುಲಾಬ್ಧಿ ಚಂದ್ರ 	ಪ
ಚರಣದಿ ಶಿರವಿಡುತ ಕೋರುವೆ ಪೊರೆಯೆನ್ನುತ
ಮರುತಮತ ರಹಸ್ಯವರುಪುತ
ಹರಿಯ ಕಾಂಬುವ ಮಾರ್ಗ ತೋರುತ 	ಅ. ಪ
ದಾನವ ಕುಲಜಾತ ತಾನಾಗಿರುತ ಘನತರ ಭಾಗವತ
ಹೀನಜನಕನಿತ್ತಾನೇಕಾಪತ್ತುಗಳೆದಿರಿಸುತ
ತಾಣಸೂಚಿಸಲಲ್ಲಿರುವನೆನ್ನುತ
ತ್ರಾಣಿನೃಹರಿಯ ತೋರಿದಾತ 	1
ಕರಜ ಬ್ರಹ್ಮಣ್ಯತೀರ್ಥ ಗುರುವ್ಯಾಸತೀರ್ಥ ಉರುತರ ಜ್ಞಾನಯುತ
ಪರಮತ ತರಿಯುತ್ತ ಮೇರುಕೃತಿಗಳ ರಚಿಸುತ್ತ
ಹರಿಯ ದಾಸರ ಕೂಟ ಕಟ್ಟುತ
ಸಿರೀಶ ಕೃಷ್ಣನ ಕೀರ್ತಿಸಿದ ಮಹಿತ 	2
ಗುರುಸುಧೀಂದ್ರಸುತ ಪರಮವಿರಕ್ತ ಪರಿಮಳವನೀಡುತ
ಶರಣರೀಪ್ಸಿತ ತುಂಬುತ ನಿರುತ ಮಹಿಮೆಗಳ ತೋರುತ
ಪುರವರ ಮಂತ್ರಾಲಯಸ್ಥಿತ
ಮರುತಪಿತಾನಂತವಿಠಲದೂತ 	3
							

60 ಗುರುವಿಗೇ ಎರಗುವೇ

60.	ರಾಗ: ದ್ವಿಜಾವಂತಿ	ತಾಳ: ರೂಪಕ
ಗುರುವಿಗೇ ಎರಗುವೇ 	ಪ
ಪರಿಮಳ ಸುಧೆಗಿತ್ತು ಪರಿಸರಮತ ಕಾಯ್ದ 	ಅ ಪ 
ಹರಿಯುರು ಭಕುತಗೆ ನರಹರಿ ಪ್ರಿಯನಿಗೇ
ಕರುಣಿಗಳರಸಗೇ ಶರಣನ ಪೊರೆಯೆಂದು 	1
ತುಂಗೆಯ ತೀರವ ಸಿಂಗರಿಸಿರುವಗೇ
ರಂಗನದಾಸರ ಸಂಗದಲ್ಲಿಡಿರೆಂದು 	2
ಕುಂತಿಜ ಪ್ರಿಯಾನಂತವಿಠಲ ಕಿಂಕರನಿಗೇ
ಸಂತತ ಹರಿಪದ ಚಿಂತನೆ ಕೊಡಿರೆಂದು 	3
							

61 ತುಂಗಾತೀರಮಂದೀರ

61.	ರಾಗ: ಯಮುನಾ ಕಲ್ಯಾಣಿ 	ತಾಳ: ಆದಿ
ತುಂಗಾತೀರಮಂದೀರ
ರಾಘವೇಂದ್ರಸದ್ಗುರುವರ 	ಪ
ಸಿಂಗನರನ ಪದಕಿಂಕರ
ಕಂಗೊಳಿಸುವೆ ತರುಧೇನುಸುರ 	ಅ. ಪ
ಪೊಂಬಸಿರನ ಸೇವಕ ಅಮರ
ಕಂಬದಿ ತೋರಿದೆ ಹರಿಯ ತ್ವರ
ಸಂಭ್ರಮಿಸಿದನಾ ವೇಣುಧರ
ತುಂಬಿದೆ ಪರಿಮಳಾಹ್ಲಾದಕರ 	1
ಪುರಮಂತ್ರಾಲಯಸ್ಥಿತವಸಿತ
ಕರೆದಲ್ಲಿಗೆ ತಾಬರುತಿರುತ
ಶರಣರ ಕೋರಿಕೆ ಸಲ್ಲಿಸುತ
ಪೊರೆಯುವೆ ಪುಣ್ಯವ ವಿತರಿಸುತ 	2
ಶಿರಬಾಗಿಸಿ ಬೇಡುವೆ ನಿನ್ನ
ಕರುಣಿಸಿ ಪರಿಸರಮತ ಜ್ಞಾನ
ಮರುತಪಿತಾನಂತವಿಠಲನ 
ಚರಣವ ತೋರಿಸೊ ದಯಾ ಘನ 	3
							

62 ಪರಿಮಳಾರ್ಯರ ಭಜಿಸಿ ಕರತಾಡಿಸಿ

62.	ರಾಗ: ಬೇಹಾಗ್	ತಾಳ: ಆದಿ
ಪರಿಮಳಾರ್ಯರ ಭಜಿಸಿ ಕರತಾಡಿಸಿ 	ಪ
ಮಿರುಗವ ಸುರಧೇನು ಅಮರತರುವೆನಿಸಿ 	ಅ. ಪ
ಪುರಮಂತ್ರಮಂದಿರ ಗುರುಕರುಣಾಕರ
ಸ್ಮರಿಸಿಕರೆದಲ್ಲಿಗೆ ತ್ವರದಿಧಾವಿಸುವರ 	1
ಅನ್ಯಾಪೇಕ್ಷಿಸದೆ ಸನ್ನುತಿಸಲು ಜವ
ಉನ್ನತ ವೈರಾಗ್ಯ ಜ್ಞಾನ ಭಕ್ತಿಯನೀವ 	2
ನರಸಿಂಹನತೋರ್ದ ಪರಮಭಾಗವತ
ಮರುತಪಿತಾನಂತವಿಠಲಕಿಂಕರಪೂತ 	3
							

63 ರಾಘವೇಂದ್ರ ಗುರುರಾಯರ ಭಜಿಸಿರೊ

63.	ರಾಗ: ಹಂಸಾನಂದಿ 	ತಾಳ: ಆದಿ
ರಾಘವೇಂದ್ರ ಗುರುರಾಯರ ಭಜಿಸಿರೊ
ಅಘಸಂಕುಲ ಪರಿಹಾರ ಪಡೆಯಿರೊ 	ಪ
ಭಾಗವತರತುನನ ರಘುರಾಮಭಜಕನ
ನಿಗಮಾಗಮಜ್ಞನ ಅಗಣಿತಮಹಿಮನ 	ಅ. ಪ 
ನರಹರಿಯ ತೋರಿಸಿ ನರಪನಾಗಿ ಸೇವಿಸಿ
ಸಿರಿಕೃಷ್ಣನ ಒಲಿಸಿ ಮೆರೆದವ್ಯಾಸತಪಸಿ 	1
ಸರುವಜ್ಞರಮತ ಸಾರಸುಧೆಗೆಹಿತ
ಪರಿಮಳವೀಯುತ ಹರಹಿದಪ್ರಥಿತ 	2
ಖೇಟಪಿತಾನಂತವಿಠಲ ಪ್ರಿಯಸಂತ
ದಾಟಿಸಿಭವ ತ್ವರಿತ ದಿಟಪಾಲಿಪಮಹಿತ 	3
20. ಅನಂತಾದ್ರೀಶ
							

64 ಎಂದು ಕರುಣದಿಂದ ನೋಡುವಿ

64.	ರಾಗ: ಆನಂದಭೈರವಿ	ತಾಳ: ಏಕ	
ಎಂದು ಕರುಣದಿಂದ ನೋಡುವಿ ರಾಘ-
ವೇಂದ್ರಗುರುವೆ ಎಂದು ನಮಗಾನಂದನೀಡುವಿ 	ಪ
ಎಂದು ಕರುಣದಿಂದ ನೋಡುವಿ
ನೊಂದು ತಾಪದಿಂದ ಬಹಳ
ಬೆಂದು ನಿನ್ನ ಕಂದನೆಂತೆಂದು ಪಾದಕೆ
ಹೊಂದಿದವನ  	ಅ.ಪ
ದೀನನಾನು ಧೇನಿಸುವೆನೊ ಅನುದಿನ ಕಾಮ-
ಧೇನು ನೀನು ದಾನಶೂರನೊ
ದಾನದಲ್ಲಿ ನೀದಾನ ಕಾರಣ ದಾನಿ ನಿನ್ನಂದ
ಹೀನನಾದಾ ದಾನದಿಂದ ಇನ್ನೇನು ಫಲವು
ದಾನಮಾಡೊ ದೀನರೊಡಿಯ	 1
ಅಲ್ಪ ನಾನು ಜಲ್ಪಕೆಣಿಸುವೆ ಅ-
ನಲ್ಪ ನೀನು ಕಲ್ಪವೃಕ್ಷಕಲ್ಪನಲ್ಲವೆ
ಅಲ್ಪರಿಗೆ ಅನಲ್ಪ ಫಲ ಅಕಲ್ಪಿತಾಗಿ ಕಲ್ಪಿಸುವರೆ
ಆಲ್ಪನವÀರನಲ್ಪನೆಂದು
ಸ್ವಲ್ಪ ಮನೋವಿಕಲ್ಪವಿಲ್ಲದೆ	2
ಗುಣಿಯು ನೀನು ಅಣಿಯು ಇಲ್ಲದ ದು-
ರ್ಗುಣಿಯು ನಾನು ಹಣಿಯೋ ನೀನು
ಮಣಿಯೊ ಪಾಪವ
ಧಣಿಯೇ ಚಿನ್ನದ ಖಣಿಯೇ ಚಿಂತಾ-
ಮಣಿಯೆ ನಿನಗೆ ಎಣಿಯು ಇಲ್ಲ
ಗುಣಿ ಅನಂತಾದ್ರೀಶನ ತೋರಿಸು ದಣಿಯಲಾರೆ	3
							

65 ಭೋ ಯತಿವರದೇಂದ್ರಾ ಶ್ರೀಗುರುರಾಯ

65.	ರಾಗ: ಸುರಟಿ	ತಾಳ: ಆದಿ
ಭೋಯತಿವರದೇಂದ್ರಾ ಶ್ರೀಗುರುರಾಯ ರಾಘವೇಂದ್ರಾ	ಪ 
ಕಾಯೊಎನ್ನ ಶುಭಕಾಯ ಭಜಿಸುವೆನು ಕಾಯೊ
ಮಾಯತಮಕೆ ಚಂದ್ರ	ಅ.ಪ
ನೇಮವು ಎನಗೆಲ್ಲಿ ಇರುವುದು
ಕಾಮಾಧಮದಲ್ಲಿ
ಭೋಮಹಾಮಹಿಮನೆ ಪಾಮರ ನಾ-
ನಿಮ್ಮ ನಾಮ ಒಂದೆ ಬಲ್ಲೆ	1
ಕಂಡ ಕಂಡ ಕಡೆಗೆ ತಿರುಗಿ
ಬೆಂಡಾದೆನೊ ಕೊನೆಗೆ
ಕಂಡ ಕಂಡವರ ಕೊಂಡಾಡುತ ನಿಮ್ಮ
ಕಂಡೆ ಕಟ್ಟಕಡೆಗೆ	2
ಮಂತ್ರವ ನಾನರಿಯೆ ಶ್ರೀಮ-
ನ್ಮಂತ್ರಾಲಯ ದೊರೆಯೆ
ಅಂತರಂಗದದೊಳು ನಿಂತು ಪ್ರೇರಿಸುವ ಅ- 
ನಂತಾದ್ರೀಶನ ನಾನರಿಯೆ	3
21. ಅಭಿನವಜನಾರ್ದನವಿಠಲ
							

66 ಕಾಯೊ ಕಮಲಾಯತಾಕ್ಷನಪ್ರಿಯ ರಾಘವೇಂದ್ರ

66.	ರಾಗ: ಸುರಟಿ	ತಾಳ: ಆದಿ
ಕಾಯೊ ಕಮಲಾಯತಾಕ್ಷನಪ್ರಿಯ ರಾಘವೇಂದ್ರ	ಪ
ಹೇಮಕಶಿಪುಜಾತನೆನಿಸಿ
ನೀ ಮೆರೆದೆ ವಿಖ್ಯಾತ
ಶ್ರೀಮನೋಹರನ ಪ್ರೇಮದೊಳೊಲಿಸಿ ಮ-
ಹಾಮಹಿಮನೆ ಈ ಪಾಮರನನುದಿನ	1
ವ್ಯಾಸಮುನಿರನ್ನಾನೆನಿಸಿ ದೇಶಾಧಿಪರನ್ನ
ಘಾಸಿಗೊಳಿಸದಿನ್ನ ದುರಿತವನಾಶಗೈಸಿ ಮುನ್ನಾ 
ನೀಸಲಹಿದೆ ನಿನ್ನಾಶ್ರಯಿಸಿದೆ ಬಹು
ದಾಸರ ಪೊರೆಯುವ ವಾಸ್ಯತತ್ತ್ವಜ್ಞರ	2
ಶುಭಗುಣಗಣನಿಲಯ ಜನರಿಗೆ
ಶುಭವ ಕೊಡುವ ಜೀಯ
ಅಭಿವಂದಿಪೆನಯ್ಯ ಎನಗೆ ಅಭಯ ಪಾಲಿಸಯ್ಯ
ಅಭಿನವಜನಾರ್ದನವಿಠಲನ ಪಾದಾಂಬುಜಾಶ್ರಯದ್ಹಂಬಲಿರಿಸೆನ್ನ	3
							

67 ಕಾಯೊ ಗುರು ರಾಘವೇಂದ್ರ ನಮ್ಮನ್ನು

67.	ರಾಗ: ಪೂರ್ವಿ/ಆರಭಿ	ತಾಳ: ಏಕ/ಝಂಪೆ
ಕಾಯೊ ಗುರು ರಾಘವೇಂದ್ರ ನಮ್ಮನ್ನು	ಪ
ರಾಘವೇಂದ್ರ ಗುರುವೆ ಗತಿಯೊ ಭವ
ರೋಗ ಬ್ಯಾಗ ಕಳೆದೀಗ ಯೋಗಿವರ	1
ನಿನ್ನ ದಾಸ ನಾನನ್ಯನಲ್ಲವೊ ಈ
ಘನ್ನ ಬನ್ನ ಬಿಡಿಸ್ಯೆನ್ನನು ಮನ್ನಿಸಿ	2
ಅಭಿನವಜನಾರ್ದನವಿಠಲನವಿಠಲನಪ್ರಿಯ
ಶುಭಕರತರ ಅಭಯಪ್ರಬಲ ಅಬಲ ನಾ	3
							

68 ಗುರು ರಾಘವೇಂದ್ರರಾಯ

68.	ರಾಗ: ಸಾವೇರಿ	ತಾಳ: ಝಂಪೆ 
ಗುರು ರಾಘವೇಂದ್ರರಾಯ	ಪ
ಗುರುರಾಘವೇಂದ್ರ ತವಚರಣ ಭಜಿಸುವವರ ಭವ
ಶರಧಿ ದಾಟಿಸಿ ಇಹಪರಸೌಖ್ಯ ಕೊಡುವೆ	ಅ.ಪ
ಎಲ್ಲಿ ಕಾಶಿ ಪ್ರಯಾಗ ಎಲ್ಲಿ ಗಯ ಸೇತು ಮ-
ತ್ತೆಲ್ಲಿ ವೆಂಕಟಗಿರಿ ಕಂಚಿಯಿಂದ
ಎಲ್ಲೆಲ್ಲಿ ದೇಶದವರಲ್ಲೆಲ್ಲ ಜನರು ಬಂ-
ದಿಲ್ಲೆ ಸೇವಿಸಲು ಫಲ ನಿಲ್ಲದಲೆ ಕೊಡುವೆ	1
ಆವದೇಶದಲಿ ಆವಾಸಮಾಡಿ ವೃಂ-
ದಾವನದಿ ಮೆರೆವೆ ಭಕ್ತಾವಳಿಗಳ
ಆವಾವಯೋಗ್ಯತೆಯು ಆವರ್ಗೆಇಹುದು ತಿಳಿ-
ದಾವಾವುಗತಿಗಳನು ಕೊಡುವೆ	2
ದಂಡಕಮಂಡಲವಕೊಂಡು ಪಂಡಿತರೆಂಬ
ಪುಂಡರೀಕುದಯಮಾರ್ತಾಂಡನೆನಿಪ
ಚಂಡದುರ್ವಾದಿಮತ ಖಂಡ್ರಿಸಿ ಮೆರೆದು ಭೂ-
ಮಂಡಲದಿ ರಘುಪತಿಯ ಕಂಡು ಭಜಿಪ	3
ಉಬ್ರ್ಬಿಯೊಳು ಬಂದಿಲ್ಲಿ ಸಬ್ರ್ಬ ಜನರುಗಳು ಫಲ
ಲಭ್ಯವಿಲ್ಲದೆ ಪೋಪನೊಬ್ಬನಿಲ್ಲ
ಹಬ್ಬಿ ಸದ್ಭಕ್ತಿಯಿಂದುಬ್ಬಿ ಸೇವಿಸಲು ಭವ-
ದುಬ್ಬಳವ ದಾಟಿಸಿ ಸುಖಾಬ್ಧಿಯೊಳಗಿಡುವ	4
ವನಿತೆ ಧನ ಮನೆ ತನಯರನು ಬಯಸಿ ಭಜಿಸುವ
ಜನರಿಗಾಕ್ಷಣದಿ ಸತ್ಫಲ ಕೊಡುವೆ
ಘನ ಅಭಿನವಜನಾರ್ದನವಿಠಲ ಯದುಪತಿಯನೆ
ನೆನೆದುಪಾಸನೆ ಮಾಳ್ಪನೆ ನಮ್ಮ	5
							

69 ಗುರುವೆ ನೀ ಕರುಣಿಸದಿರಲು

69.	ರಾಗ: ಧನ್ಯಾಸಿ	ತಾಳ: ಅಟ
ಗುರುವೆ ನೀ ಕರುಣಿಸದಿರಲು ಉದ್ಧರಿಸುವ 
ದೊರೆಗಳೀ ಧರೆಯೊಳಗುಂಟೆ	ಪ
ಕರುಣಾಸಾಗರ ಎನ್ನ ಕರೆದು ಕೈಪಿಡಿದು ನೀ
ಕರುಣಿಸು ಸುಧೀಂದ್ರಕರಜ ರಾಘವೇಂದ್ರ	ಅ.ಪ
ತರುಣಿ ತರಳರು ಈ ಶರೀರ ಬಂಧುಗಳುಪ-
ಕರಿಸಲುದ್ಧರಿಪರಲ್ಲ ಚರಣವಿಲ್ಲದೆ ಪಕ್ಕ 
ಮುರಿದುಬಿದ್ದ ಗುಬ್ಬಿ
ಮರಿಯಂತೆ ಬಾಯ್ಬಿಡುತಿರಲು ನೋಳ್ಪರೆ ಅಸ್ಮತ್	1
ಕ್ಷಿತಿಯೊಳು ಭಕ್ತರ ವಾಂಛಿತವಿತ್ತು ಪೊರೆವ ಕೀ-
ರುತಿ ಕೇಳಿ ಪತಿತಪಾವನನೆಂದು 
ನತನಾಗಿ ಸ್ತುತಿಸಿ ತ್ವ-
ರಿತದಿ ಬಂದು ಶರಣಾಗತನಾದಮೇಲಿನ್ನು	2
ದಿನಕರಕುಲಜಾತನೆನಿಪ ರಾಮರ ಪಾದ
ವನಜಾರಾಧಕರೆನಿಪ
ಮುನಿಕುಲೋತ್ಹಂಸ ಸಜ್ಜನಶಿಖಾಮಣಿ ಗುಣ-
ಗಣ ಅಭಿನವಜನಾರ್ದನವಿಠಲನದೂತ	3
							

70 ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮಯ್ಯ

70.	ರಾಗ: ಮೋಹನ	ತಾಳ: ಆದಿ/ರೂಪಕ
ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮಯ್ಯ	ಪ
ಸಂಗೀತಪ್ರಿಯ ಮಂಗಳಸುಗುಣ ತ-
ರಂಗ ಮುನಿಕುಲೋತ್ತುಂಗ ಕಣಮ್ಮ	ಅ.ಪ
ಚೆಲುವಫಣೆಯಲಿ ತಿಲಕನಾಮಗಳು ನೋಡಮ್ಮಯ್ಯ
ಜಲಜಮಣಿ ಕೊರಳಲಿ ತುಳಸಿಮಾಲೆಗಳು ನೋಡಮ್ಮಯ್ಯ
ಸುಲಲಿತ ದಂಡಕಮಂಡಲ ಧರಿಸಿಹನ್ಯಾರೆ ಪೇಳಮ್ಮಯ್ಯ
ಖುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ	1
ಸುಂದರ ಚರಣಾರವಿಂದ ಸುಭಕುತಿಗಳಿಂದ ನೋಡಮ್ಮಯ್ಯ
ವಂದಿಸಿಸ್ತುತಿಸುವ ಭೂಸುರವೃಂದ ನೋಡಮ್ಮಯ್ಯ 
ಚಂದದಿಂದಲಂಕೃತರಾಗಿ ಶೋಭಿಸುವರ ನೋಡಮ್ಮಯ್ಯ
ಹಿಂದೆ ವ್ಯಾಸಮುನಿಯೆಂದೆನಿಸಿದ ಕರ್ಮಂದಿಗಳರಸ ಯತೀಂದ್ರ ಕಣಮ್ಮ	2
ಅಭಿನವಜನಾರ್ದನವಿಠಲನ ಧ್ಯಾನಿಸುವ ನೋಡಮ್ಮಯ್ಯ
ನಭಮಣಿಯಂದದಿ ತ್ರಿಭುವನದೊಳು ರಾಜಿಸುವ ನೋಡಮ್ಮಯ್ಯ
ಅಭಿವಂದಿಪರಿಗೆ ಅಖಿಳಾರ್ಥಗಳ ಸಲಿಸುವ ಕಾಣಮ್ಮಯ್ಯ
ಶುಭಗುಣನಿಧಿ ಶ್ರೀರಾಘವೇಂದ್ರ ಗುರು ಅಬ್ಜಭವಾಂಡದೊಳು ಪ್ರಬಲ ಕಣಮ್ಮ	3
							

71 ತುಂಗಾತೀರದಿ ರಾಜಿಪ ಯತಿಯ

71.	ರಾಗ: ಮಾಂಡ್	ತಾಳ: ಆದಿ
ತುಂಗಾತೀರದಿ ರಾಜಿಪ ಯತಿಯ
ನೀರೆ ನೋಡೋಣ ಬಾ	ಪ
ವೃಂದಾವನದೊಳಗಿರುವ
ವೃಂದಾರಕರನುಪೊರೆವ
ವೃಂದಗುಣಗಳಿಂಮೆರೆವ
ವೃಂದಾರಕತರುಎನಿಸಿದ ಸುಜನಕೆ	1
ಮರುತಮತಾಂಬುಧಿಚಂದ್ರ ದಿನ-
ಕರ ಅಘತಮಕೆ ರವೀಂದ್ರ
ದುರುಳಮತಾಹಿಖಗೇಂದ್ರ
ಗುರು ಕರುಣಾಕರ ಶ್ರೀರಾಘವೇಂದ್ರ	2
ರವಿಶಶಿಕುಜಬುಧಗುರುವೆ
ಕವಿರಾಹುಧ್ವಜಬಲವೆ
ಇವರ ದರುಶನಕೆ ಫಲವೆ ಅಭಿ-
ನವಜನಾರ್ದನವಿಠಲನ ದಯವೆ	3
							

72 ಪೊರೆಯಬೇಕೆನ್ನ ರಾಘವೇಂದ್ರ ಗುರುವೆ ಪಾವನ್ನ

72.	ರಾಗ: ಆಹರಿ	ತಾಳ: ಏಕ
ಪೊರೆಯಬೇಕೆನ್ನ ರಾಘವೇಂದ್ರ ಗುರುವೆ ಪಾವನ್ನ
ಶರಣನೆಂದು ನಿನ್ನ ಶರಣುಹೊಕ್ಕೆ ನಾ ಕರುಣಿ	ಪ
ಸದಮಲ ಕುಲಾಗ್ರಣಿ ಸುಧೀಂದ್ರಯತಿ ಪಾಣಿ
ಪದುಮದಿಂದ ಜನಿಸಿದ ದಿವ್ಯ ಘನಮೌನಿ
ಹೃದಯಾಬ್ಜದಲ್ಲಿ ಹರಿಯ ಪಾದ
ಪದುಮಾದರದಲಿ ಬಲುಪರಿ ನವ-
ವಿಧಭಕುತಿಯಲ್ಲಿ ಪೂಜಿಸುವ ಸುಗುಣ-
ವೊದಗಿ ನಿನ್ನ ಧ್ಯಾನ ಸ್ನೇಹದ ಬಗೆ ಬಲ್ಲಿ	1
ಜನನಿಜನಕರು ತಮ್ಮ ತನುಜನ ತಿಳಿಯದೆ
ಅನುಚಿತ ಕಾರ್ಯವ ಅನುಸರಿಸಲು ಅವನ
ಕನುಕಾರ(?) ಬಿಟ್ಟು ಅವನ ನಡತೆ
ಮನಸಿನೊಳಿಟ್ಟು ಪೋಷಿಸದಲೆ
ಮುನಿದಿನ್ನು ಸಿಟ್ಟು ಮಾಡುವರೇನೊ
ಅನಘ ತ್ವದ್ದಾಸನ ಘನದಯವಿಟ್ಟು	2
ಹಲವು ಮಾತೇನು ಶ್ರೀನಿಲಯಾನನುಗ್ರಹ-
ಬಲದಿ ವ್ಯಾಪಾರವ ಅಭಿನವಜನಾರ್ದನವಿ-
ಠಲನ ಭಕ್ತ ಭಕುತಿಜ್ಞಾನವಿರಕುತಿ ಇತ್ತು
ಸಲಹಬೇಕಯ್ಯ ಕರುಣಿಸಿ ಆರ್ತಜನರನು	3
							

73 ಬಂದದ್ದೆಲ್ಲ ಬರಲಿ ರಾಘವೇಂದ್ರರ ದಯವೊಂದಿರಲಿ

73.	ರಾಗ: ಸುರಟಿ	ತಾಳ: ಆದಿ
ಬಂದದ್ದೆಲ್ಲ ಬರಲಿ ರಾಘವೇಂದ್ರರ ದಯವೊಂದಿರಲಿ	ಪ
ಹಿಂದೆ ಬಹುಜನುಮದಿಂದ ಮಾಡಿದಘ-
ಸಂದಣಿ ಕಳೆವುದೊಂದರಿದೇನೈ	ಅ.ಪ
ದಾಶರಥಿ ವೇದವ್ಯಾಸ ನರಕೇಸರಿ ಶ್ರೀಯಾದವೇಶ
ಈಸುಮೂರ್ತಿಗಳುಪಾಸನೆಯ ಲೇಸಾಗಿಮಾಳ್ಪ ವಿಶೇಷ
ದಾಸಜನರ ಅಭಿಲಾಷೆಪೂರ್ತಿಸುವ
ಶ್ರೀಸುಧೀಂದ್ರಜ ಯತೀಶರ ದಯವಿರೆ	1
ಧರೆ ತಾವ್ ಕಳಕೊಂಡವರು ಉಡಲು ಅರಿವೆ ಇಲ್ಲದವರು
ತರಳಸಂಪದರಹಿತರು ಮಹದುರುತರ ಜ್ಞಾನಿಭಕುತರು
ತೆರಳಿಬಂದು ಸಂದರುಶನ ಮಾಡಲು
ಕರೆದೀಪ್ಸಿತವ ಕೊಡುವರ ದಯವಿರುತಿರೆ	2
ವಾತ ಪಿತ್ತ ಕಫ ಶೀತ ಸನ್ನಿಪಾತಕಜ್ವರ ಪ್ರಖ್ಯಾತ
ಭೂತಪ್ರೇತಭಯವ್ರಾತ ಕಳೆವಾತುರರಿಗೆ ಫಲದಾತ
ನಾಥ ಅಭಿನವಜನಾರ್ದನವಿಠಲನ
ಪ್ರೀತಿದೂತನ ದಯ ಅತಿಶಯವಾಗಿರೆ	3
							

74 ಬಾಗಿ ಭಜಿಸಿರೊ ರಾಘವೇಂದ್ರ ಯತಿಯ

74.	ರಾಗ: ಯದುಕುಲ ಕಾಂಬೋಜಿ	ತಾಳ: ಆದಿ
ಬಾಗಿ ಭಜಿಸಿರೊ ರಾಘವೇಂದ್ರ ಯತಿಯ ಕೊಡುವನು ಸನ್ಮತಿಯ	ಪ.
ಯೋಗಿಕುಲವರ್ಯ ಭಾಗವತರಪ್ರಿಯ ಸತ್ಕವಿಕುಲಗೇಯ	ಅ.ಪ
ಯತಿಸುಧೀಂದ್ರಕರಸುತಾದ್ಭುತಚರಿಯ ಪುಸಿಯಲ್ಲವು ಖರಿಯ
ಶ್ರಿತಜನನುತ ಕಾಮಿತತರು ಸುರಧೇನು ಚಿಂತಾಮಣಿ ತಾನು
ಶತಪರ್ವತವತ್ಸರ ವೃಂದಾವನದಿ ನಲಿವನು ಮುದದಿ
ಚತುರವಿಧಸುಪುರುಷಾರ್ಥಗಳನೆ ಕೊಡುವ ನಂಬಿದವರಘ ತಡೆವ	1
ವರಮಂತ್ರಾಲಯ ಸುರುಚಿರ ಗೃಹದಲ್ಲಿ ವರಹಜತೀರದಲಿ
ಮೆರೆವ ಮಂದರನು ಕರೆದು ಪಾಪ ಕಳೆವ ಮನದಲಿ ತಾ ಪೊಳೆವ
ಸರ್ವಜ್ಞರು ಮೊದಲಾದ ಮುನಿಗಳಲ್ಲಿ ಇಪ್ಪರು ಮುದದಲ್ಲಿ
ದುರಭಿಮಾನದಲಿ ಬಾರದವನೆ ಕೆಟ್ಟ ಬರಲವ ಸುಶ್ರೇಷ್ಠ	2
ಮಧ್ವಮುನಿಯಸುಮತಾಬ್ಧಿಪೂರ್ಣಚಂದ್ರ ಸದ್ಗುಣಸಾಂದ್ರ
ಸದ್ವೈಷ್ಣವಗುರು ಕುಮತಾದ್ರಿಗೆಕುಲಿಶ ಕಾಷಾಯವಾಸ
ಸಿದ್ಧಾಂತಸುಧೆಗೆ ಪರಿಮಳಾಖ್ಯ ಗ್ರಂಥ ಮಾಡಿದ ದಯವಂತ
ಮುದ್ದು ಅಭಿನವಜನಾರ್ದನವಿಠಲನ್ನ ಸದ್ಭಕ್ತವರೇಣ್ಯ	3
							

75 ಬೇಗ ಸಾಗಿ ಬಾರಯ್ಯ ರಾಘವೇಂದ್ರ

75.	ರಾಗ: ಸಾವೇರಿ	ತಾಳ: ಆದಿ
ಬೇಗ ಸಾಗಿ ಬಾರಯ್ಯ ರಾಘವೇಂದ್ರ ಗುರುವೆ
ಬಾಗಿ ಭಕುತಿಲಿ ಚೆನ್ನಾಗಿ ತುತಿಪೆ ನಿನ್ನ	ಪ
ಭಾಗವತಾಗ್ರಣಿ ಭಾಗವತರಪ್ರಿಯ
ಯೋಗಿಕುಲವರ್ಯ ಯೋಗೀಂದ್ರ ವಿನುತ	ಅ
ಗಿರಿಯವೆಂಕಟ ನರಹರಿ ರಾಮಕೃಷ್ಣ ವ್ಯಾಸ
ಸಿರಿನಾರಾಯಣ ತನ್ನ ವರಮೂರ್ತಿಗಳಿಂದ
ಸರಸಿಜಭವ ವಾಯು ಸರಸ್ವತಿ ಭಾರತಿ ತ್ರಿ-
ಪುರಹರ ಶೇಷ ವಿಪ ಸುರಪಾದ್ಯರ ಕೈಯಿಂದ
ಥರಥರದಲಿ ಪರಿಪರಿ ಸೇವೆಯ ವಿ-
ಸ್ತರವಾಗಿಕೊಳ್ಳುತ ಮೆರಗುತ ನಿಲಿಸಿಹ
ಸ್ಥಿರವಾಗಿ ನಿಂದು ಆಶ್ಚರ್ಯವ
ಧರೆಗೆ ತೋರ್ಪುದಕೆ ಮೆರೆವುತಲಿಹ	1
ರಥಾರೂಢನಾಗಿ ಬರುತಲಿರೆ ನಿನ್ನ 
ಕ್ಷಿತಿಸುರರೆಲ್ಲ ಭಾಗವತ ಪಂಚಮವೇದ ಭಾ-
ರತಪುರಾಣ ಮತ್ತೆ ಶ್ರುತಿಗಳಿಂದ ಬಲು
ತುತಿಸುತಲಿನ್ನು
ಅತಿಹರುಷದಿ ಬಾರೆ ಯತಿಗಳಗತಿ ಸಂ-
ಗತಿಯಿಂದಲಿ ನಲಿವುತ ಬಲುಪರಿ ಮೆರೆ-
ವುತ ಸದ್ಗತಿಯ ಕೊಡಲು ಅ-
ಚ್ಯುತ ಸುಚರಿತ ಆನತಜನ ಬಂಧು	2
ಸೂರಿಜನರುಗಳಪಾರಸಂದೋಹದಿ ಬರೆ ಗಂ-
ಭೀರ ಸ್ವರದಿ ಭಕುತರು ಪಾಡೆ 
ಬಾರಿಬಾರಿಗೆ ಮಂಗಳಾರತಿ ಎತ್ತಿ ಜನರು
ಹಾರ ಪರಿಮಳ ಶರೀರಕೆ ಗಂಧಪೂಸಿ
ಭೂರಿಜನರು ಕೈವಾರಿಸುತಿರಲು
ಭೇರಿಕಹಳೆ ಭೊಂಭೋರಿಡುತಿರೆ ಮುರವೈರಿ
ಅಭಿನವಜನಾರ್ದನವಿಠಲ 
ಸೇರಿ ಸುಖಿಪ ಗುರುಸಾರ್ವಭೌಮ	3
							

76 ಮಂತ್ರಾಲಯ ಮಂದಿರ ಮಾಂ ಪಾಹಿ

76.	ರಾಗ: ಮಧ್ಯಮಾವತಿ	ತಾಳ: ಆದಿ 
ಮಂತ್ರಾಲಯ ಮಂದಿರ ಮಾಂ ಪಾಹಿ	ಪ
ಮಧ್ವಾಭಿಧಮುನಿಸದ್ವಂಶೋದ್ಭವ
ಅದ್ವೈತಾರಣ್ಯಸದ್ವೀತಿಹೋತ್ರ	1
ಸುಧೀಂದ್ರಯತಿಕರಪದುಮೋದ್ಭವ- 
ಸುಧಿ ಗುರು ರಾಘವೇಂದ್ರ ಕೋವಿದ ಕುಲವರ್ಯ	2
ದಂಡಧರ ಕೋದಂಡಪಾಣಿ ಪದ-
ಪುಂಡರೀಕ ಧ್ಯಾನ ಉದ್ದಂಡಮತೇ ಹೇ	3
ಸುರಧೇನು ಕಲ್ಪತರು ವರಚಿಂತಾಮಣಿ
ಶರಣಾಗತಜನ ಪರಿಪಾಲತ್ವಮ್	4
ಅಭಿನವಜನಾರ್ದನವಿಠಲ ಪದಯುಗಳ
ಧ್ಯಾನಿಪ ಮುನಿಕುಲೋತ್ತಂಸ	5
 22. ಅಭಿನವಪ್ರಾಣೇಶವಿಠಲ 
							

77 ಗುರು ರಾಘವೇಂದ್ರರ ಪರಮಮಂಗಳ ಮೋದಚರಿತೆ (ಸುಳಾದಿ)

77.	ಸುಳಾದಿ ರಾಗ: [ಶಂಕರಾಭರಣ]	ಧೃವ ತಾಳ
ಗುರು ರಾಘವೇಂದ್ರರ ಪರಮಮಂಗಳ ಮೋದ
ಚರಿತೆ ಬರೆವೆ ಗುರು ವರದೇಂದ್ರರಾಯರ
ಕರುಣದಿಂದಾಪನಿತು ಹರುಷದಿಂದ 
ಪರಮೇಷ್ಟಿ ಚರಣಾಬ್ಜ ಮಧುಕರ ಶಂಕುಕರ್ಣ
ಶರಜಜನಾಜ್ಞದಿ ವರಕೃತಯುಗದಲ್ಲಿ
ಪುರುಟಶಯ್ಯನ ಸುತನಾಗಿ ಜನಿಸಿ
ಹರಿಭಕ್ತಾಗ್ರಣಿಯೆನಿಸಿ ಹರಿಭಕ್ತಸುಧೆ ಸುರಿಸಿ
ಹಿರಿಯನ ಛಲದಿಂದ ವರಸಭೆಸ್ಥಂಭದಿ
ನರಹರಿಯನು ತೋರ್ದ ಪ್ರಹ್ಲಾದನೆ
ಎರಡನೆಯ ಯುಗದಲ್ಲಿ ಶಿರದಶವರಜಾತ
ಧರಣಿಜಾಧವ ದೂತ ವಿಭೀಷಣ
ಎರಡೊಂದುಯುಗದಲ್ಲಿ ಕುರುಕುಲಸಂಜಾತ
ಮುರಹರಸೇವಕ ಬಾಹ್ಲೀಕ
ಖರಯುಗದಲ್ಲಿ ಪ್ರಥಮ ಬನ್ನೂರಾರ್ಯರ ಪುತ್ರ
ಸ್ವರ್ಣವರ್ಣರ ಛಾತ್ರ ವ್ಯಾಸತೀರ್ಥ
ಕರಿನಾಡಿನಲ್ಲಿ ಅವತರಿಸಿದ ಪುನರಪಿ
ಧರಿಜಪತಿಯ ಚರಣಾರ್ಚನೆಗೈಯ್ಯಲು
ನರಹರಿಯಭಿನವಪ್ರಾಣೇಶವಿಠಲನ
ಚರಣಕಿಂಕರಚಂದ್ರ ಗುರು ರಾಘವೇಂದ್ರ	1
ಮಟ್ಟ ತಾಳ
ಕರ್ನಾಟಕದಲ್ಲಿ ಧರೆಸುರವಂಶದಲಿ
ಗಿರಿರಾಜನ ವರದಿ ವೈಣಿಕ ಮನೆತನದಿ
ಧರೆಯೊಳುದಿಸಿ ಬೆಳೆದ ಶರಧಿಜಸಿತನಂತೆ
ಸರ್ವಮೂಲ ಗ್ರಹಿಸಿ ಪಂಡಿತವರನೆನಿಸಿ
ಗುರುವರ ಸುಧೀಂದ್ರಕರಕಮಲಗಳಿಂದ
ತುರ್ಯಾಶ್ರಮವಹಿಸಿ ರಾಘವೇಂದ್ರನೆನಿಸಿ
ಹರಿಮತಶರನಿಧಿಗೆ ರಾಕಾಬ್ಜನುಎನಿಸಿ
ದುರುಳಮತೇಂಧನಕೆ ಸುರಮುಖಸಮನೆನಿಸಿ
ಮೆರೆದರು ಶತಕಾಲ ಧರೆಯೊಳು ವಿಭವದಲಿ
ಹುರಿರಘು(?) ಅಭಿನವಪ್ರಾಣೇಶವಿಠಲನ
ಚರಣ ಧೂಳೀಗಾಕಾರ ಗುರುಸಾರ್ವಭೌಮ	2
ತ್ರಿವಿಡಿ ತಾಳ
ಭರತಖಂಡವಚರಿಸಿ ದುರ್ವಾದಿಗಳಜೈಸಿ
ಮರುತಮತಾಂಬುಧಿ ವಿಸ್ತರಿಸಿ
ಪರಿಮಳ ತಂತ್ರದೀಪಿಕೆಯಾದಿಗಳ ರಚಿಸಿ
ಹರಿಮತದರ್ಶನ ತಿರುಳ ತಿಳಿಸಿ
ನಿರುತದಿ ಪ್ರವಚನ ಪಾದಂಗಳನು ಪೇಳಿ
ಧರೆಸುರರಿಗೆ ಧರ್ಮಮರ್ಮವರುಹಿದ
ಪರಿಸರ ಶ್ರೀಮಧ್ವಮುನಿಮತಸಿಂಧುವ
ಧರೆಯೊಳು ಮೆರೆಸಿದ ಗುರುವರ್ಯನೆ
ತುರುಕ ಭೂಪತಿಯಿಂದ ವರಹಜತಟದಿಹ
ವರಕ್ಷೇತ್ರಮಂಚಾಲಿಗ್ರಾಮ ಪಡೆದು
ಸಿರಿರಘುಪತಿಚರಣಾರ್ಚನೆಗೈಯ್ಯುತ್ತ
ಹರ್ಷದಿ ನೆಲಸಿದನು ಸುಕ್ಷೇತ್ರದಿ
ಸಿರಿವರಅಭಿನವಪ್ರಾಣೇಶವಿಠಲನ
ಚರಣವಾರಿಜಭೃಂಗ ಶರಣಾಂತರಂಗ	3
ಅಟ್ಟತಾಳ
ನಿತ್ಯದಿ ನೂತನ ಮಹಿಮೆಯ ತೋರುವ
ಅತ್ಯಂತ ವಿಸ್ಮಯಕಾರಿ ಪವಾಡವ
ಸತ್ಪಥ ತೋರುವ ಭೃತ್ಯರ ಸಲಹುವ
ಕೃತ್ತಿವಾಸಯುತ ಕಿತ್ತೂರು ರಾಜನ
ಕೃತ್ಯಭೀಖವ ಮನ್ನಿಸಿ ಕರುಣದಿ
ಸತ್ಯಧರ್ಮ ಸನ್ಮಾರ್ಗವ ತೋರಿದ
ಮತ್ತ ಯವನ ಭೂಪ ಆವಿಫಲವನೀಯೆ
ಸತ್ವದ ಫಲಪುಷ್ಪಗಳ ಮಾಡಿ ತೋರಿಸಿ
ಮತ್ರ್ಯರಿಗಾಶ್ಚರ್ಯಗೊಳಿಸಿದ ಜಗದೊಳು
ಮತ್ತವಿಳಿದು ಭೂಪ ಪಾದಾಕ್ರಾಂತನಾಗೆ
ಮತ್ತನ ಮನ್ನಿಸಿ ಮಂಚಾಲಿ ಪಡೆದನು
ಚಿತ್ತಜಪಿತದೂತ ಗುರು ರಾಘವೇಂದ್ರರ
ಉತ್ತಮ ಮಹಿಮೆಗೆ ಎಣೆಗಾಣೆ ನಮೊ ನಮೊ
ಸತ್ಯಭಿನವಪ್ರಾಣೇಶವಿಠಲನ ದಯದಿ
ನಿತ್ಯ ನೂತನ ಮಹಿಮೆ ತೋರಿ ಮೆರೆಯುವ ಗುರುವೆ	4
ಆದಿತಾಳ
ವರುಷವರುಷ ಹರಿಮಾಸ ದ್ವಿತಿಯ ಪರ
ಗುರುಗಳ ಪುಣ್ಯದಿನೋತ್ಸವ ಸುಜನರು
ಧರೆಯೊಳು ಎಲ್ಲೆಡೆ ಹರುಷದಿ ಮಾಳ್ಪರು
ವರಮಂತ್ರಾಲಯಕ್ಷೇತ್ರದಿ ವಿಭವದಿ
ಗುರುವರ ರಜತ ರಥವನೇರಿ ಮೆರೆಯುವ
ತರತರ ನೂತನ ವಾದ್ಯ ವಾದನದಿ
ಕರಿಗಳ ಮೇಲಿಹ ಭೇರಿತಾಡನದಿ 
ಪರಿಕರ ಕರದಿಹ ಕುಡಿ ಕೊಡೆ ಛಡಿ ಚಾ-
ಮರದ ಡಿಂಡಿಮ ತುತ್ತೂರಿ ನಾದದಿ 
ಧರೆಸುರನಿಕರದಿ ವೇದಸುಘೋಷದಿ
ಹರಿದಾಸರ ಭಜನೆಯ ಸುಮೇಳದಿ
ಶರಣರ ನರ್ತನ ಗಾನ ವಿನೋದದಿ
ಹರುಶ ನಿರ್ಭರದ ಜಯ ಜಯಕಾರದಿ
ಸುರಪ ಮುಖ್ಯ ಎರಡೆರಡು ಬೀದಿಯೊಳು
ಮೆರೆಯುತ ಬರುತಿಹ ಗುರುಗಳ ದರುಶನ
ದುರಿತ ಪಲಾಯನ ಪರಗತಿ ಸಾಧನ-
ವಿರುವುದು ನಿಜನಿಜ ಸಂಶಯ ಸಲ್ಲದು
ವರಯತಿರಾಜರು ಇರುವ ಕಾರಣದಿ
ಸುರಪನಪುರದಂತೆ ತೋರುವುದೀಸ್ಥಳ
ವರಹಜಧುನಿ ನಂದನವೆನಿಪುದು
ಕರಿವರ ಅಭಿನವಪ್ರಾಣೇಶವಿಠಲನ
ಚರಣದೊಲುಮೆಯ ಪಡೆದ ಗುರುರಾಜರಿರುವರಿಲ್ಲಿ	5
ಜೊತೆ
ಮೌನಿಸುಜಯೀಂದ್ರತೀರ್ಥರಿಗೊಲಿದ ಯತಿನಾಥ
ಮಾನ್ಯಭಿನವಪ್ರಾಣೇಶವಿಠಲನದೂತ
							

78 ಮಂಗಲಂ ಮಂಗಲಂ . .ರಾಯರಿಗೆ

78.	ರಾಗ: [ಹುಸೇನಿ]	ತಾಳ: [ತ್ರಿಪುಟ]
ಮಂಗಲಂ ಮಂಗಲಂ ಜಯ
ಮಂಗಲ ಗುರು ರಾಘವೇಂದ್ರ ರಾಯರಿಗೆ	ಪ
ಶಾತಕುಂಭಶಯ್ಯಜಾತ ಖ್ಯಾತ ನರ-
ನಾಥಮೃಗಗೆ ಅತಿಪ್ರೀತ ಪ್ರಹ್ಲಾದಗೆ	1
ಕನ್ನಡರಾಜನ ಬನ್ನಬಡಿಪ ಯೋಗ-
ವನ್ನು ಕಳೆದ ಯತಿಮಾನ್ಯ ವ್ಯಾಸರಿಗೆ	2
ಮಂತ್ರಮಂದಿರವಾಸ ಸಂತಜನರ ಪೋಷಾ-
ನಂತಮಹಿಮ ಧೀಮಂತ ಪ್ರಶಾಂತಗೆ	3
ಭೋಗಿತಲ್ಪನಪಾದ ರಾಗದಿಭಜಿಸುವ
ಯೋಗಿವರ್ಯ ಗುರು ರಾಘವೇಂದ್ರರಿಗೆ	4
ಮಾನದ ಅಭಿನವಪ್ರಾಣೇಶವಿಠಲನ
ಪ್ರಾಣಪ್ರೀಯರಾದ ಮೌನಿವರ್ಯರಿಗೆ	5
23. ಆನಂದವಿಠಲ 
							

79 ತೇರಾನೇರಿ ಮೆರೆದು ಬರುವ ಭೂಸುರವಂದ್ಯ

79.	ರಾಗ: [ಹಿಂದೋಳ]	ತಾಳ: [ಆದಿ]
ತೇರಾನೇರಿ ಮೆರೆದು ಬರುವ ಭೂಸುರವಂದ್ಯ ಯಾರಕ್ಕ
ಗುರು ರಾಘವೇಂದ್ರರೆಂತೆಂಬೊ ಯತಿಕುಲತಿಲಕ ಕೇಳ್ತಂಗಿ	ಪ
ಛಂದದಿ ಕುಂದಣ ಮಕುಟವ ಧರಿಸಿದ ಸುಂದರನೀತ ಯಾರಕ್ಕ
ತಂದೆಯ ಅಘಹರಿದು ನರಹರಿಯ ತೋರಿದ ಪ್ರಹ್ಲಾದರಾಯ ಕೇಳ್ತಂಗಿ	1
ವಿಪ್ರರು ದಾಸರು ಯತಿತತಿಗಳ ಕೂಡಿ ಬರುತಿಹನೀತಯಾರಕ್ಕ
ಕಪ್ಪು ಕೃಷ್ಣನ ಒಪ್ಪಿಸಿ ಕುಣಿಸಿದ ವ್ಯಾಸರಾಯ ಕೇಳ್ತಂಗಿ	2
ವರಹಜ ನದಿಯ ತೀರದಿ ಇದ್ದು ಭಕುತರ ಪೊರೆವವ ಯಾರಕ್ಕ
ಹರುಷದಿ ಆನಂದವಿಠಲನ ಸಾರಿದ ಪರಿಮಳಾರ್ಯ ಕೇಳ್ತಂಗಿ	3
24. ಆನಂದಾನಂತವಿಠಲ 
							

80.ದಯಮಾಡಿ ಸಲಹೆನ್ನದಣೀ ಶ್ರೀ ರಾಘವೇಂದ್ರಾ

80.	ರಾಗ: [ಶ್ರೀರಂಜಿನಿ]	 ತಾಳ: [ಆದಿ]
ದಯಮಾಡಿ ಸಲಹೆನ್ನದಣೀ ಶ್ರೀ ರಾಘವೇಂದ್ರಾ 	ಪ
ದಯಮಾಡಿ ಕರುಣಿಸು ದೀನದಾಸನ ಸಂಯಮಿರಾಮಾ ಅ.ಪ.
ಭೂತಮಾತೇಂದ್ರಿಯ ವ್ರಾತ ವಾತಪಿತನಧೀನ-
ವೇತರವ ನಾನು ನಾ ಮಾಡಿದೆನೆಂದು ಅಲೆದಾಡಿದೆನೋ 	1
ಪೊರ್ವಜನ್ಮದ ಪಾಪಪುಣ್ಯಗಳನುಸರಿಸಿ
ಸರ್ವ ಮೂಡಿತು ಸಂಕರ್ಷಣನಿಂದರಿಯೆನೋ 	2
ನಯದಿ ನೀ ಕೊಟ್ಟಿದ್ದು ನನದೆಂದಹಂಕರಿಸಿ
ವ್ಯಯದ ಜೀವಿತದಲಿ ನಿರ್ಭಯದಿ ನಿನ್ನೆ ಹಂಗಿಸಿದೆ 	3
ಘನ್ನ ಮಹಿಮನ ತ್ರಿಗುಣಮಾಯೆ ತಿಳಿಯದೆ ನಾನು
ಹೊನ್ನುಮಣ್ಣು ಹೆಣ್ಣುಗಳಿಗೆ ಮರುಳಾದೆನೆಲ ಮನ್ನಿಸಯ್ಯ 	4
ನೀನೆ ಕೆತ್ತಿದ ಬೊಂಬೆ ನೀನೆ ಬೆಳೆಸಿದ ಮರವು
ನೀನೆ ಕೆಡಹುವುದೇ ನಿನೇಗೇನು ಸಮ್ಮತವೋ ಯತಿರನ್ನಾ 	5
ಗರ್ವವಳಿದು ಹಗಲಿರಳು ನಿರ್ವಿಣ್ಣ ಕುಗ್ಗಿದನೆನ್ನ
ಸರ್ಪೇಶನೊಲಿದ ಜ್ಞಾನಿಚಂದ್ರನೆ ಕೈಪಿಡಿದೆಬ್ಬಿಸು ಬೇಗ 	6
ಆನಂದಾನಂತವಿಠಲ ಹರಿಭಕ್ತ ಪ್ರಹ್ಲಾದರಾಯಪ್ರಿಯ
ಊನಗುಣ ಬಿಡಿಸು ವನಮಾಲಿ ಸುಧ್ಯೇಯಾ 	7
25. ಇಂದಿರೇಶ
							

81 ಆರುತಿ ಮಾಡುವೆ ನಾ ಪ್ರಹ್ಲಾದಗೆ

81.	ರಾಗ: [ಕಲ್ಯಾಣಿ]	ತಾಳ: [ಆದಿ]
ಆರುತಿ ಮಾಡುವೆ ನಾ ಪ್ರಹ್ಲಾದಗೆ 	ಪ
ಆರುತಿ ಮಾಡುವೆ ಧಾರುಣಿಯೊಳು ರಘು-
ವರನರ್ಚಿಪ ಯತಿವರ ವಂದಿಪಗೆ 	ಅ.ಪ.
ಸಾಲಿಯೊಳಗೆ ಕೂತು ಬಾಲಕರಿಗೆ ಹರಿ
ಲೀಲೆ ಪೇಳಿದ ಭಕ್ತ ಲೋಲನಾದವಗೆ 	 1
ಐದನೇ ವರುಷದಿ ಕಾದು ತಂದೆಯ ಕೂಡ
ಶ್ರೀಧರ ನರಹರಿ ಪಾದ ಕಂಡವಗೆ 	 2
ಬಂದು ಭೂಮಿಲಿ ರಾಘವೇಂದ್ರ ನಾಮದಿ ಪೂಜಿ
ಸಿಂದಿರೇಶ ಪುಟ್ಟ ಬೃಂದಾವನದಿ ಕೂತ 	3
							

82 ಗುರುರಾಜರೆ ಎನ್ನ ಪರಿಪಾಲಿಸೋದು ಬಿಟ್ಟು

82.	ರಾಗ: [ಅಠಾಣ]	ತಾಳ: [ತ್ರಿಪುಟ]
ಗುರುರಾಜರೆ ಎನ್ನ ಪರಿಪಾಲಿಸೋದು ಬಿಟ್ಟು
ವರ ಮಂತ್ರಾಲಯದೊಳು ಇರುವುದುಚಿತವೇನೊ 	ಪ
ಬಡವ ಭಕ್ತ ಕಷ್ಟಕಡಲೊಳಿರಿಸಿ ತುಂಗಾ
ದಡದಿ ನಿಂತೆನ್ನ ಕೈಪಿಡಿಯದೆ ಪೋಗುವರೇನೊ 	1 
ಕಡು ಸೇವಕನೊಳಿಂಥ ಕಡುಕೋಪವ್ಯಾತಕೊ
ನಡೆ ನುಡಿ ಎನ್ನ ತಪ್ಪು ಪಿಡಿದು ಪೋಗುವರೇನೊ 	2 
ಎಂದಿಗಾದರು ನಿನ್ನ ಪೊಂದಿದವನಲ್ಲೊ
ಮುಂದೇನುಗತಿ ಪೇಳೊ ಇಂದಿರೇಶನ ಪ್ರಿಯ 	 3
							

83 ಬಂದನೊ ಸುಜನರ ಸಂದಣಿಯೊಳಗತಿಸುಂದರ

83.	ರಾಗ: ಸಾವೇರಿ	ತಾಳ: ತ್ರಿವಿಡಿ
ಬಂದನೊ ಸುಜನರ ಸಂದಣಿಯೊಳಗತಿ-
ಸುಂದರ ರಥವೇರಿ ಗುರುವರ ಬಂದನೊ 	ಪ
ಬಂದಿ ಜನರು ಮುದದಿಂದ ಬಹುಪರಾ-
ಕೆಂದು ನುಡಿಯಲಾನಂದ ಬೀರುತ ಬಂದನೊ 	ಅ.ಪ.
ಕ್ಷಿತಿ ಸುರರತಿ ಶುಭಮತಿ ಬಲ್ಮತದವರೊ
ಯತಿ ಪರರತಿಶಯ ದಶಮತಿ ಮತದತಿ ಸಂ-
ಸ್ಕøತ ಭಾಷಣದವರೊ ಭಯಹರಣನೆಂಬೊ ವಾ-
ರುತಿಯ ಕೀರುತಿಯ ಪೂರುತಿಯ ಕೇ-
ಳುತ ಮಹಿಮಾಂಗಣದಿ
ಕಥಿಸುತ ಗ್ರಂಥಿಸುತ ತುತಿಸುತ
ನುತಿಸಿ ಯತಿ ಶಿರೋಮಣಿಗೆ
ರತುನ ಖಚಿತವಾದಾರುತಿಯ ಬೆಳಗಿರೆ 	1
ಶರಣರ ಸುರತರು ವರದ ಶಿಖಾಮಣಿಯೊ
ಮುರಹರ ಚರಣಾಂಬುಜ ವರ ಮಧುಕರ ಸಿರಿ
ಪರಮಹಂಸರ ಧಣಿಯೋ ಕೋವಿದ ಬುಧರೊಳು ಮದ-
ಕರಿಯೋ ಶುಭ ಧೊರೆಯೋ ವಾಗ್ಝರಿಯೊ
ಸರಸಾರ್ತಿ ಜನಗಳ ನೆರೆಸುತಾದರಿಸುತಾ
ದರಿದ್ರವ ತರಿದು ಬಲು ಸುಖ ಸುರಿಸುತಾ 
ಪೊರೆದು ಕರೆದವರಿಗೆ ಕೈ-
ಶರೆಯಾಗುವೆನೆಂದ್ಹರುಷದಿ ಗುರುವರ ಬಂದನೊ 	2
ಬಗೆ ಬಗೆ ಮಣಿಗಳು ಬಿಗಿದ ಬಿಳಿಗೋಡಿಗಳೊ ವಾ-
ಲಗ ಘೊರ್ಮಿಡೆ ಭಟರುಗಳ ಹೆಗಲ ಮ್ಯಾಲೆ
ಝಗಝಗಿಸುವ ಛಡಿಗಳೊ ಕುಣಿಕುಣಿದಾಡುವ-
ಹಿವೇಣಿಗಳೊ ವಾಣಿಗಳು ಶ್ರೀಣಿಗಳು ಶೋಭಿಸೆ
ಸುಜನರು ಕೈ ಮುಗಿವರು ನಗುವರು
ಸಂಭ್ರಮದಿಂದ ಬಿಗಿವರು ದೃ(ಮೃ?)ಗಾರೋಢನದಿ(?)
ಜಿಗಿದು ಅಘದೂರೊಗೆದ ಜನರೊಳು
ವೆಗ್ಗಳದಲಿಂದಿರೇಶನ ಭಕುತಾಗ್ರಣಿ ಬಂದನೊ 	3
							

84 ಮಂಗಳಂ ಜಯ ಮಂಗಳಂ

84.	ರಾಗ: [ಸೌರಾಷ್ಟ್ರ]	ತಾಳ: [ಆದಿ]
ಮಂಗಳಂ ಜಯ ಮಂಗಳಂ	ಪ
ಕೂರ್ಮಾಸನದೊಳಗೆ ಕೂತವಗೆ 
ನಾರದ ಮುಖವನು ನೋಡುವವಗೆ
ನಾರಸಿಂಹನ ಪಾದವಾರಿಜವನು ನಿಜ
ಚಾರು ಶರೀರದೊಳಿಟ್ಟಾರಾಧಿಪಗೆ	1
ದಂಡ ಕಮಂಡಲ ಭೂಷಿತಗೆ
ಪಂಡಿತಾಗ್ರಣಿ ಯತೀಂದ್ರನಿಗೆ	
ಹಿಂಡು ಶಿಷ್ಯರ ಮಧ್ಯ ಕುಳಿತು ಜಯೇಶ್ವರ ಅ-
ಖಂಡಬೋಧರ ಶಾಸ್ತ್ರ ಪೇಳುವಗೆ 	 2
ಮಂದಗಮನೆ ಪದಕೇಳಿದವಗೆ
ತಂದ ಮಂತ್ರಾಕ್ಷತೆ ಕೊಟ್ಟವಗೆ
ಇಂದಿರೇಶನ ಪದ ಪಾಡುವರನೆ ಕಂಡು
ಬಂದು ಮೋದಿಪ ಯತಿರಾಯಗೆ	3
							

85 ರಾಘವೇಂದ್ರ ಗುಣಸಾಗರ ನೋಡೆನ್ನ

85.	ರಾಗ: [ಖರಹರಪ್ರಿಯ]	ತಾಳ: [ಏಕ]
ರಾಘವೇಂದ್ರ ಗುಣಸಾಗರ ನೋಡೆನ್ನ ಹರಿಯ ತೋರಿನ್ನ 	 ಪ
ಮಂತ್ರಾಲಯದೊಳು ಮಂದಿರ ಮಾಡಿರುವಿ ಮನೆಮನೆಯಲ್ಲಿರುವಿ
ಸಂತತಿ ಸಂಪತ್ತುಗಳನು ನೀ ಕೊಡುವಿ ಸಂತರ ರಕ್ಷಿಸುವಿ
ತಂತ್ರ ದೀಪಿಕೆಯೆಂಬೊ ಗ್ರಂಥವ ರಚಿಸಿರುವಿ ಸೂತ್ರಾರ್ಥಗಳರುಹಿ 	1 
ಎಷ್ಟೊ ಗ್ರಂಥಗಳ ವ್ಯಾಖ್ಯಾನವ ಮಾಡಿ ವೇದಾರ್ಥವ ನೋಡಿ
ಕೆಟ್ಟವಾದಿಗಳ ವಾದದಿ ಜಯಮಾಡಿ ಸೂರಿಗಳನು ಕೂಡಿ
ಕುಷ್ಠಮದಾದಿ ರೋಗಗಳನು ಹರಿ ಬೇಡಿ ಕಳೆಯುವ ಗುರುಮೇಧಿ 	2
ಒಂದು ಚರಿತೆಯ ಪೇಳಲು ನಾನರಿಯೆ ಇರುವೆನು ಈ ಪರಿಯೆ
ನಂದಬಾಲನ ಪ್ರಿಯ ನೀ ಎನಗೊಲಿಯೆ ದುರಿತಾಬ್ಧಿಗೆ ಸರಿಯೆ
ಇಂದಿರೇಶನ ಪದ ಸಂದರುಶನ ದೊರೆಯೆ ನಿನ್ನನು ನಾ ಮರೆಯೆ 	3
							

86 ರಾಘವೇಂದ್ರ ಗುರು ನಮೋ ನಮೋ

86.	ರಾಗ: [ಭೈರವಿ]	ತಾಳ: [ಆದಿ]
ರಾಘವೇಂದ್ರ ಗುರು ನಮೋ ನಮೋ 
ಯೋಗಿಜನೇಡಿತ ನಮೋ ನಮೋ 	ಪ
ವಾದಿಜಯಪ್ರದ ನಮೋ ಸಾಧುಜನಾವನ ನಮೋ 
ಶ್ರೀಧರ ಬೋಧಕ ನಮೋ ಅಗಾಧ ತವಮಹಿಮ ನಮೋ ನಮೋ 	1 
ಎಷ್ಟು ದಿನವಾಯಿತು ನಮೋ ಶ್ರೀ ಕೃಷ್ಣನ ಕಾಣದೆ ನಮೋ
ಭೆಟ್ಟಿಯ ಮಾಡಿಸು ನಮೋ ವಿಷ್ಣು ದಾಸವರೇಣ್ಯನೆ ನಮೋ ನಮೋ	2
ತುಷ್ಟ ಮುಖಾಮಯ ನಮೋ ಶಿಷ್ಟರು ಸೇವಿಸೆ ನಮೋ
ದೃಷ್ಟಿಲಿ ಕಳೆಯುವಿ ನಮೋ ಸರ್ವೇಷ್ಟವರಪ್ರದ ನಮೋ ನಮೋ 	 3
ಚೂತರಸದಿ ಹರಿ ನಮೋ ಪೋತನು ಬೀಳಲು ನಮೋ
ಆತನ ತ್ಯಜಿಸಿದ ನಮೋ ಜೀವಾತು ನೀನಾದೆ ನಮೋ ನಮೋ 	 4 
ವರಜಯತೀರ್ಥರ ನಮೋ ಸುರಸ ಸುಗ್ರಂಥಕೆ ನಮೋ
ಪರಿಮಳ ಟೀಕೆಯ ನಮೋ ವಿರಚಿಸಿ ರಾಜಿಪೆ ನಮೋ ನಮೋ 	 5 
ರತುನಮಾಲಿಕೆಯ ನಮೋ ಹುತವಹಗಿತ್ತೆಯೋ ನಮೋ
ಅತಿಶಯ ಪ್ರಾರ್ಥಿಸೆ ನಮೋ ಪ್ರಥಮ ತೆಗೆದುಕೊಟ್ಟೆ ನಮೋ ನಮೋ 6 
ನಾರದ ಶಿಷ್ಯನೆ ನಮೋ ನಾರಸಿಂಹಾರ್ಚಕ ನಮೋ
ಸೇರಿ ಭಜಿಪೆ ನಿಮ್ಮ ನಮೋ ಎನ್ನ ಚಾರು ದೃಷ್ಟಿಲಿ ನೋಡು ನಮೋ	7
ನಾಕವತಾರನೆ ನಮೋ ಲೋಕನಾಥಾಶ್ರಯ ನಮೋ
ಕಾಕು ದುರ್ಮತ ಹರ ನಮೋ ಶ್ರೀಕರ ಸೇವಕ ನಮೋ ನಮೋ 	8
ವೃಂದಾವನದಲಿ ನಮೋ ನಮೋ ಭಕ್ತ ವೃಂದಾರಕರೇ ನಮೋ
ಬಂದು ಮಾತಾಡುವಿ ನಮೋ ಇಂದಿರೇಶನ ಪ್ರಿಯ ನಮೋ ನಮೋ	9
							

87 ರಾಘವೇಂದ್ರ ರಾಯರೆಂಬೋ

87.	ರಾಗ: ದ್ವಿಜಾವಂತಿ	ತಾಳ: ಆದಿ
ರಾಘವೇಂದ್ರ ರಾಯರೆಂಬೋ ಮಹಾ
ಯೋಗಿವರರ ನೋಡೈ 	ಪ
ಭಾಗವತರು ಶಿರಬಾಗಿ ಕರೆಯಲತಿ-
ವೇಗದಿ ರಥದೊಳು ಸಾಗಿಬರುವ ಶ್ರೀ 	ಅ.ಪ.
ಮಿನುಗುವ ಘನವಾಹನಗಳ ರಥ ಶೃಂಗಾರವೋ ಕರದೊಳು
ಕನಕಛಡಿ ಕೊಡಿಗಳನುಪಮ ಭಾರವೊ
ಅನಿಳ ನಿಗಮದಿ ನಿಪುಣ ಸುಜನರ ಪರಿವಾರವೋ ಪರಸ್ಪರ
ಪಣದ ವೇದ ಘೋಷಣ ಸುಸ್ವರ ಗಂಭೀರವೋ
ಘನ ಗುಣ ಗಣಮಣಿ ಮುನಿರಾಯನ ಮನ
ದಣಿಯ ಪಾಡಿ ಕುಣಿಕುಣಿದಾಡಿ ಶಿರವ
ಮಣಿಸುವರೋ ಗುಣವೆಣಿಸುವರೋ ದ-
ಕ್ಷಿಣದಿಂ ತೆರಳಿ ವರುಣನ ಬೀದಿಯೊಳು 	1 
ಧರಣಿ ಸುರವರನಿಕರ ಕುಮುದೋದಯ ಚಂದ್ರನ ಮದ(ನ)ದು-
ರ್ಧರ ದ್ವಿರದನ ತೆರದಿ ಮೆರೆದ ಅಪ್ರತಿಮ ಮುನೀಂದ್ರನ
ಸರಸ ಸುಧಾ ಪರಿಮಳ ಬರೆದ ಸುಗುಣಸಾಂದ್ರನ ಧರೆಯೊಳು
ಸಿರಿ ವಿಜಯೀಂದ್ರರ ಕುವರನೆನಿಪ ಸುಧೀಂದ್ರನ
ಸರಸಿಜ ಸಂಭವ ಶರಣ್ಯ ಸುಂ-
ದರ ನಿಜಾಂಘ್ರಿ ಭಜಕರ ಭಾಗ್ಯೋದಯ
ಸುರ ಸುರಭಿಗೆ ಸಮರೆಂದು ಸಾರಿ ಡಂ-
ಗುರ ಹೊಯಿಸುತ್ತ ಉತ್ತರ ಬೀದಿಯೊಳು 	2
ಹಲವು ಬಗೆಯ ವೆಗ್ಗಳ ವಾದ್ಯಗಳ ಸುವಾದ್ಯವೋ ಆರುತಿಯ
ಬೆಳಗುವರು ಹಗಲ ದೀಪಗಳಗಾಧವೋ
ಇಳೆಯೊಳು ಜನುಮ ಸಫಲವೆಂಬುವರ ವಿನೋದವೋ ಹಾಸ್ಯದ
ಲಲನೆಯರಡಿ ಘಿಲಘಿಲಕೆಂಬುವ ನಟನ ಭೇದವೋ
ಭಳಿರೆ ಭಳಿರೆ ಭಜಿಸುವರ ಭಕುತಿ
ಬಲಿಗೊಲಿದ ಇಂದಿರೇಶನ ಕರದರ-
ಗಿಳಿಯೊ ಅಳಿಯೊ ನಳಿನಾಂಘ್ರಿಯುಗಳದಿ
ನಲಿಯುತ ಸುರರಾಜನ ಬೀದಿಯೊಳು 	3
26. ಉದಯಾದ್ರೀಶವಿಠಲ 
							

88 ಬೇಡುವೆನೋ ನಿನ್ನ ಗುರು ರಾಘವೇಂದ್ರ

88.	ರಾಗ: ಮೋಹನ 	 ತಾಳ: ಆದಿ
ಬೇಡುವೆನೋ ನಿನ್ನ ಗುರು ರಾಘವೇಂದ್ರ 
ಬೇಡುವೆನೋ ನಿನ್ನ 	ಪ
ಕಾಡುವ ರೋಗವನೋಡಿಸಿ ನಿನ್ನನೆ
ನೋಡುವ ಸೌಭಾಗ್ಯ ನೀಡೋ ಪ್ರಸನ್ನ 	ಅ. ಪ
ಸುರಮುನಿ ಉಪದೇಶದೆ ಗರ್ಭದೊಳಿದ್ದು
ಪರಮ ವೈಷ್ಣವನೆನಿಸಿದೆ
ದುರುಳ ಪಿತನ ಬಾಧೆ ಸಹಿಸುತ ಇರಲಾಗೆ
ನರಸಿಂಹನನೇ ಕಂಬದಲಿ ತೋರ್ದೆ
ಧೃತ:
ಹರಿ ಸರ್ವೊತ್ತಮನೆಂಬುವ ಸತ್ಯವ
ಧರೆಯೋಳು ಸ್ಥಾಪಿಸಿ ಮೆರೆಸಿದೆ ಗುರುವೇ
ಮರುತನಾವೇಶದ ಬಲವನೇ ಪಡೆದು
ಎರಡೆರಡು ಕಕ್ಷೆ ಸೇರಿದ ಮಹಿಮ 	1
ಸಿರಿರಾಮಚಂದ್ರನ ಅರ್ಚಿಸಿದವನೇ
ನರಹರಿಯ ಪ್ರಿಯನೇ
ವರ ವೇದವ್ಯಾಸರಿಗತಿಪ್ರಿಯನಾದ
ಸಿರಿ ಕೃಷ್ಣನ ಪಾದ ಭಜಿಸಿ ಪಡೆದೆ ಮೋದ
ಧೃತ:
ಮರುತ ಮತದ ತತ್ತ್ವ ಭರದಿ ಸಂಗ್ರಹಿಸುತ
ಪರಿಮಳಾದಿ ಸುಗ್ರಂಥವ ರಚಿಸುತ
ವರಹಜೆ ತಟದ ಮಂಚಾಲೆಯಲಿರುತ
ಮೆರೆದಿಹೆ ಬೃಂದಾವನದಲಿ ನೆಲೆಸುತ 	 2
ಕರೆದಲ್ಲಿಗೆ ಬರುವೇ ಅಸ್ಮದ್ಗುರುವೇ 
ಶರಣು ಬಂದವರ ಪೋರೇವೆ
ನಿರುತ ಸ್ಮರಿಸುವರಘ ಪರಿಹರಿಸುತಲವರ
ಕರುಣದಿಂದಲಿ ಕಾವೇ ವರ ಕಲ್ಪತರುವೇ 
ಧೃತ:
ದುರಿತ ಶರಧಿಯೊಳು ಮುಳುಗಿರುವವನಿಗಾ-
ಸರೆಯೊಂದೇ ನಿನ್ನಯ ಸ್ಮರಣೆ 
ವರದ ಉದಯಾದ್ರೀಶವಿಠಲನ
ಚರಣ ಕಮಲವ ತೋರೋ ಬೇಗನೆ 	3
							

89 ರೋಗವನೆ ಪರಿಹರಿಸೋ ಭವರೋಗ ವೈದ್ಯ

89.	ರಾಗ: ಕಾನಡ 	ತಾಳ: ಖಂಡಛಾಪು
ರೋಗವನೆ ಪರಿಹರಿಸೋ ಭವರೋಗ ವೈದ್ಯ 	ಪ
ರಾಘವನ ಪೂಜಿಸುವ ಭಾಗವತ ಪ್ರಿಯ 	ಅ. ಪ
ವರಹಜೆ ತಟವಾಸ ಪುರ ಮಂತ್ರಾಲಯಾಧೀಶ 
ವರ ಬೃಂದಾವನದಿ ವಾಸ ಮೆರೆವೆ ಪ್ರತಿದಿವಸ
ಸುರಮುನಿ ಉಪದೇಶ ಹರಿರೇವ ವಿಜಿಜ್ಞಾಸ
ಹರಿಸೋ ಮನಕ್ಲೇಶ ದೂರಮಾಡಿ ಆಶಾ 	1
ಬಂಗಾರ ಕಣ್ಣನ ಅಣ್ಣನ ಎದುರಿನೊಳು
ರಂಗ ಸರ್ವೋತ್ತಮನೆಂಬ ಸತ್ಯವನೇ ತಿಳಿಸಿ
ಹಿಂಗಿಲ್ಲದೇ ಬಂದ ಭಂಗವನೇ ತಾ ಸಹಿಸಿ ನರ-
ಸಿಂಗನನು ತೋರಿಸಿದ ಉತ್ತುಂಗ ಮಹಿಮ 	2
ವ್ಯಾಸರಾಯ ಮುನಿ ಎನಿಸಿ ವಾಸುದೇವನ ಸೇವಿಸಿ
ಶ್ರೀಶ ಕೃಷ್ಣನಂಕಿತದಿ ಕೀರ್ತನೆಗಳ ರಚಿಸಿ
ವ್ಯಾಸ ದಾಸ ಕೂಟ ಸಮನ್ವಯವನೇ ತಿಳಿಸಿ
ಶ್ರೇಷ್ಠ ಚಂದ್ರಿಕೆ ರಚಿಸಿ ವಸುಧೆಯೊಳು ಮೆರೆಸಿ 	 3
ಅನಿಷ್ಠ ಪುಣ್ಯವ ಗಳಿಸಿ ಕನಿಷ್ಟರ ಹಿತಕೆ ಬಳಸಿ
ಅನೇಕ ಸೇವೆ ಸ್ವೀಕರಿಸಿ ದೀನರನ್ನುದ್ಧರಿಸಿ
ಜಿಷ್ಣುನಣ್ಣನಾವೇಶ ವಿಷ್ಣುವಿನ ಆದೇಶ
ಚೆನ್ನ ಬೃಂದಾವನದಿ ವಾಸ ಎನಗೀಯೋ ಲೇಶ 	4
ಶರಣೆಂದು ಬರುವ ಭಕುತರಿಗೆ ಕಲ್ಪತರು
ಕರೆದು ಅಭಯನೀವ ಸುರ ಕಾಮಧೇನು
ವರದ ಉದಯಾದ್ರೀಶವಿಠಲನ ನಿಜದಾಸ
ಚರಣ ಭಜಕರಘನಾಶ ಪೊರೆಯುತಿಹೇ ಅನಿಶಾ 	5
27. ಉರಗಾದ್ರಿವಾಸವಿಠಲ 
							

90 ತ್ರಾಹಿ ತ್ರಾಹಿ ಮಂತ್ರಾಲಯ ನಿಲಯ

90.	ರಾಗ: [ಖರಹರಪ್ರಿಯ]	ತಾಳ: [ಆದಿ]
ತ್ರಾಹಿ ತ್ರಾಹಿ ಮಂತ್ರಾಲಯ ನಿಲಯ	ಪ
ತ್ರಾಹಿ ತ್ರಾಹಿ ಮಂತ್ರಾಲಯ ಗುರುವೆ
ಸೂತ್ರನಪಿತಕೃಪಾಪಾತ್ರ ನೀನಹುದೊ	1
ಧ್ಯಾನ ಮೌನ ಸುe್ಞÁನವಿಲ್ಲದಿಹ
ದೀನ ಜನರುದ್ಧಾರ ಗಂಭೀರ	2
ವಸುಧೆಯೊಳಗೆ ದಶಪ್ರಮತಿ ಸುಶಾಸ್ತ್ರವ
ಪ್ರಸರಿಸಿ ತೋರಿದ ಅಸಮಮಹಿಮನೆ	3
ಮೂಕ ಬಧಿರ ಅಂಧಾದಿಗಳ ಕುಂದುಗಳ್
ವ್ಯಾಕುಲ ಹರಿಪ ಕೃಪಾಕರ ಮೂರ್ತೇ	4
ಕರುಣಶರಧಿ ಸಿರಿರಮಣನ ಭಕುತಾಗ್ರಣಿ
ಸುಗುಣಗಣಾಭರಣಗಣಿಯೆ	5
ಬೇಡಿದಭೀಷ್ಟವ ನೀಡಿ ಕಾಪಾಡುವೆ
ಈಡುಗಾಣೆ ನಿನಗೀ ನಾಡೊಳು ಇನ್ನು	6
ಇಂದೂ ಮುಂದೂ ಎನ್ನ ಕುಂದುಗಳೆಣಿಸದೆ
ಕಂದನೆಂದು ಎನ್ನ ಮುಂದಕೆ ಕರೆಯೊ	7
ಕ್ಷೋಣಿಯೊಳಗೆ ನಿನಗಾರೆಣೆಕಾಣೆನೊ
ವೀಣೆವೆಂಕಟ ನೀ ಸಂಕಟ ಹರಿಸೊ	8
ಪಾಲಿಸಯ್ಯ ಪ್ರಹ್ಲಾದ ವ್ಯಾಸ ಭೂ-
ನಲ್ಲ ನೀನಹುದೋ ಬಾಹ್ಲೀಕ ಪ್ರಭುವೆ	9
ಬಗೆ ಬಗೆ ಪಾಪೌಘಗಳನು ಕಳೆಯುವ
ರಘುಪತಿಕಿಂಕರ ಶ್ರೀ ರಾಘವೇಂದ್ರ	10
ಪವನಾಂತರ್ಗತ ಶ್ರೀ ವೇಂಕಟೇಶ ಪದ
ಕುವಲಯಕೆ ನೀ ಕುಮುದಬಾಂಧವ	11
ಶಂಕುಕರ್ಣ ಲಂಕೇಶನನುಜ ಶ್ರೀರಾಮ 
ಕಿಂಕರನೆ ಅಕಳಂಕಮೂರುತೆ	12
ಮರುತಮತಾಬ್ಧಿಯ ಸಾರಸುಧೆಯನಿತ್ತೆ
ಉರಗಾದ್ರಿವಾಸವಿಠಲನ ನಿಜದೂತ	13
28. ಐಹೊಳೆವೆಂಕಟ
							

91 ಎಂಥಾ ದಯವಂತರು

91.	ರಾಗ: ಭೈರವಿ	ತಾಳ: ಆದಿ
ಎಂಥಾ ದಯವಂತರು ರಾಘವೇಂದ್ರರಿ-
ನ್ನೆಂಥ ಮಹಿಮ ಪೂರ್ಣರು
ಚಿಂತಿತ ಫಲರೆಂದೆನಿಸಿ ವೃಂದಾವನ
ದಂತರ್ಗತ ಪೊಳೆವರು 	ಪ
ಪೃಥವೀಧರನ ದಂತೋದ್ಭವೆಯಾದ
ಆ ತುಂಗಾತಟ ಕೃತ ಮಂದಿರರು
ಧೃತರಾಷ್ಟ್ರನೃಪರ ಮಕ್ಕಳ ಕೊಂದವನ ಸನ್ಮತಾಂಬುಧಿ ಚಂದ್ರಮರು 
ಪ್ರತಿಯಿಲ್ಲ ಇವರ ಸರಿಯ ಮಹಾತ್ಮೆಯು ಯಾವ
ಯತಿಯೊಳಗೆ ಕಾಣದು ಸತತಾ-
ದಿತೇಯ ಸ್ವಭಾವಪೂರ್ಣರಾಗಿ ಇಷ್ಟಾರ್ಥ ಕೊಡುತಿಹರು	1
ಸಂತತ ಶುಭಕಾರ್ಯವಾಗುವವು ಇವರಲ್ಲಿ
ಅಂತರ ಬರಗೊಡರು ಹೊಂತಕಾರಿ ಮಹಿ-
ಮಾಂತ ತಿಳಿಯದೆಂದು ಬುಧರು ಭ್ರಾಂತರಾಗ್ವರು
ಸಂತೋಷದಲಿ ಸದ್ಭಾಗವತ ಸಮ್ಮೇಳರು
ನಿಂತು ಸಮ್ಮುಖ ಪಾಡ್ವರು ಸಂತರು ಶ್ರಾವಣ ಬಹುಳ
ತೃತೀಯ ರಥಸಂತೆನೆರೆದಂತೆಳೆವರು 	2 
ಕರುಣಾರ್ಣವ ಎಂಬ ಗುಣ ನಿಮ್ಮಲ್ಲಿದ್ದ
ಕಾರಣದಿ ಪ್ರಾರ್ಥಿಸುತಿಹರು
ಧೊರೆ ನೀವು ಸಲಹಬೇಕಲ್ಲವೆ ಮರೆತರೆ ಇನ್ನಾರು
ಪೊರೆಯುವರು ಕರಿರಾಜವರದ ಐಹೊಳೆಯವೆಂಕಟಗೆ ಪ್ರೀತಿ ಪಾತ್ರರು 
ಗುರು ಸಾರ್ವಭೌಮ ನಿಮ್ಮಂಘ್ರಿ
ಸರೋಜ ಯುಗಳಲಿ ಭಕ್ತಿಯಲಿ ನಮಿಪೆ ಉದ್ಧರಿಸುವುದು 
							

92 ದಿನಕರನುದಿಸಿದನು ಧರೆಯೊಳಗೆ

92.	ರಾಗ: ಮೋಹನ	ತಾಳ: ಆದಿ
ದಿನಕರನುದಿಸಿದನು ಧರೆಯೊಳಗೆ ದಿನಕರನುದಿಸಿದನು
ದಾನವ ಕುಲದಲಿ ಕ್ಷೋಣಿಯೊಳಗೆ 	ಪ
ಪ್ರಥಮ ಪ್ರಹ್ಲಾದÀನಾಗಿ ಅವತಾರ ಮಾಡಿ
ಸತತ ಹರಿಯ ನುತಿಸಿ
ಮತಿ ಹೀನನಾದ ತಂದೆಗೆ ನರಹರಿರೂಪ
ಸಥಿಯಿಂದ ತೋರಿದ ಪ್ರಹ್ಲಾದರಾಯರೆಂಬ 	1
ವ್ಯಾಸಮುನಿಯು ಎನಿಸಿ ಸೋಸಿಲಿಂದ
ವಾಸವನುತನ ಸತತ ಭಜಿಸಿ
ದಾಸನೆಂದು ಮೆರೆದಿ ನವ ವೃಂದಾವನದಿ
ಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ 	2
ತುಂಗಭದ್ರೆಯ ತೀರದಿ 
ಮಂಗಳ ವರ ಮಂತ್ರಾಲಯ ಸ್ಥಳದಿ
ಅಂಗಜ ಪಿತ ನಮ್ಮ ಐಹೊಳೆವೆಂಕಟನ
ಕಂಗಳಿಂದ ಕಂಡೆ ಗುರು ರಾಘವೇಂದ್ರನೆಂಬ 	3
							

93 ನೋಡಿದೆ ನಾ ಗುರುವರನ

93.	ರಾಗ: ಕಮಾಚ್	ತಾಳ: ಅಟ	
ನೋಡಿದೆ ನಾ ಗುರುವರನ ಈ
ರೂಢಿಗಧಿಕ ರಾಘವೇಂದ್ರರಾಯನ 	ಪ
ವೃಂದಾವನ ರೂಪನ ಭಕ್ತ ವೃಂದಕಾ-
ನಂದ ಕೊಡುವ ಕಲ್ಪದ್ರುಮನ
ಕಂದರ್ಪನ ಗೆಲಿದವನ
ಅಂದಣದಲಿ ನಲವಿಂದ ಮೆರೆವÀನ 	1 
ಕಮಲಾಕ್ಷಿಮಾಲ ಕಂಧರನ ಈ ಕ್ಷಿತಿಯೊ-
ಳು ಮಧ್ವಮತಾಬ್ಧಿ ಚಂದಿರನ
ತಮವೈರಿಸಮತೇಜದವನ ಸಾಧು-
ಸುಮನ ಪ್ರಿಯ ಸುಧೀಂದ್ರ ಕರಜನ 	2
ಶೃಂಗಾರಾಭರಣಭೂಷಣ ದಿವ್ಯ
ಅಂಗ ಪುಣ್ಯದಿ ಲೋಕ ಪವಿತ್ರಗೈಯ್ಯುವನ
ತುಂಗಾತಟ ಮಂದಿರನ ಮಹ-
ಮಂಗಲಪ್ರದ ಮಂತ್ರನಿಲಯದೊಲ್ಲಭನ 	3
ಲೇಸಾದ ಭಿಕ್ಷು ಎನಿಪನ ತನ್ನದಾಸ-
ರಾ ಸ್ತುತಿಗೆ ಸರ್ವಾರ್ಥದಾಯಕನ
ಭಾಸುರಾಗಮ್ಯ ಮಹಿಮನ ಜಗ-
ದೀಶ ನರಹರಿದೂತ ದೇವಸ್ವಭಾವನ 	4
ಪರವಾದಿ ಹೃದಯದಲ್ಲಣನ ದ್ವೈತ
ಸ್ಥಿರವೆಂದು ಜಗದಿ ಭೇರಿಯ ಹೊಡಿಸಿದನ
ಪರಿಮಳಾದಿ ಗ್ರಂಥ ಬೀರಿದನ ಕರಿ-
ವರದ ಐಹೊಳೆವೆಂಕಟನ ಕಿಂಕರನ 	5
29. ಕಪಿಲಾಂಕಿತ  
							

94 ಗುರುರಾಜ ನಿನ್ಹೊರೆತು ಪೊರೆವ ದೊರೆಗಳ ಕಾಣೆ

94.	ರಾಗ: ಕಾಂಭೋಜಿ 	ತಾಳ: [ಆದಿ/ತ್ರಿಪುಟ]
ಗುರುರಾಜನಿನ್ಹೊರೆತು ಪೊರೆವ ದೊರೆಗಳ ಕಾಣೆ
ಮೂರು ಜನುಮಗಳಲ್ಲಿ ಮುರಹರನ ಭಜಿಸಿದಿ ನೀ 	1
ತರುಳಪ್ರಹ್ಲಾದನಾಗಿರಲು ಭಕುತಿಯಿಂದೆ
ನರಹರಿಯ ಮೆಚ್ಚಿಸಿದೆ ಪರಮಕರುಣಾಸಿಂಧು 	2
ವ್ಯಾಸಮುನಿಯು ನೀನೆ ವಾಸುದೇವನ ಭಜಿಸಿ
ಲೀಸಾಚಂದ್ರಿಕೆಯ ಭೂಸುರರಿಗೆ ಕರುಣಿಸಿ 	 3
ಶ್ರೀರಾಮಚಂದ್ರಪಾದ ಸರಸೀರುಹಾಭೃಂಗಾ
ಶ್ರೀರಾಘವೇಂದ್ರಯತಿ ಸುರಚಿರಕೃಪಾಂಗ 	4
ಮಂತ್ರಾಲಯ ನಿವಾಸ ಜಗದೀಶದಾಸ
ನಿನ್ನ ಸ್ಮರಣೆಯೇ ಉಲ್ಲಾಸಕಾಯೇ ಕರುಣಿಗಳರಸ 	5
ನಂಬಿದೆ ನಿನ್ನ ಪಾದವಯ್ಯಾ ಉದ್ಧರಿಸೋ ಜೀಯಾ
ಭವರೋಗವೈದ್ಯಾ ಬಂದುಪಿಡಿಯೋಕೈಯ್ಯಾ 	6
ಗುರುಸಾರ್ವಭೌಮನೆ ಕರುಣಾಸಾಂದ್ರನೇ
ಕಾಯೇ ಯತೀಂದ್ರನೇ ನಂಬಿದೆ ಪಾದದ್ವಂದಗಳನೆ 	7
ಶ್ರೀರಾಮ ಪೂಜಿಸಿ ಮಧ್ವಮತವನುದ್ಧರಿಸಿ
ರಾಶಿಪುಣ್ಯವ ಗಳಿಸಿ ಭಕ್ತರಿಗೆ ಅನುಗ್ರಹಿಸಿ 	8
ಕಪಿಲನಾಮಕಪರಮಾತ್ಮಗೆ ಬಹುಪ್ರೀತಿಪಾತ್ರನೆ
ತುಂಗಾತೀರವಾಸನೆ ಆಶ್ರಿತಜನರಕ್ಷಕನೇ 	9
							

95 ರಾಘವೇಂದ್ರರ ಪಾದಸೇವೆ

95.	ರಾಗ: ಕಾಂಬೋಜಿ 	ತಾಳ: ಝಂಪೆ 
ರಾಘವೇಂದ್ರರ ಪಾದಸೇವೆ ಮಾಡಿದರೆ 
ನೆನೆದ ಕಾರ್ಯಗಳೆಲ್ಲ ನೆರವೇರಿಸುವರು 	ಪ
ಎಂದಿಗಾದರು ಒಮ್ಮೆ ಮಂತ್ರಾಲಯಕೆ ಪೋಗಿ
ತುಂಗಭದ್ರೆಲಿ ಮಿಂದು ಭಕ್ತಿಯಲಿ ಬಾಗಿದರೆ 
ರಾಯರಾನುಗ್ರಹವು ತಪ್ಪದಲೆ ದೊರೆಯುವುದು
ಇದಕ್ಕೆ ಸಂಶಯವಿಲ್ಲ ಹರಿಯ ಭಕ್ತರಿಗೆಲ್ಲ 	1
ಪ್ರಥಮದಲಿ ಪ್ರಹ್ಲಾದ ದ್ವಿತೀಯದಲಿ ವ್ಯಾಸರಾಯ
ತೃತೀಯದಲಿ ರಾಘವೇಂದ್ರ ಎಂಬ ನಾಮಗಳಿಂದ
ಬಂದ ಭಕ್ತರಿಗೆಲ್ಲ ಕಲ್ಪತರುವಿಯಂತೆ
ಮೆರೆಯುತಿಹರು ನಮ್ಮಾ ಗುರುಸಾರ್ವಭೌಮರು 	2 
ಸಾಧುಸಜ್ಜನರಿಗೆ ಸ್ವಪ್ರಯೋಜನೆಗಾಗಿ 
ಠೀವಿಯಲಿ ಕುಳಿತಿಹರು ಬೃಂದಾವನದೊಳಗೆ
ಕಪಿಲನಾಮಕ ಪರಮಾತ್ಮನ ಸಕಲ ಭಕ್ತರಿಗೆಲ್ಲ
ಮುಕುತಿಯನು ಕೊಡುತಿಹರು ಚಕ್ರಧರನ ದಯದಿ 	3
30. ಕಮಲನಾಭವಿಠಲ
							

96 ಗುರುರಾಯರ ಮಹಿಮೆ ಕೇಳಿರಿ

96.	ರಾಗ: ತೋಡಿ	ತಾಳ: ಅಟ
ಗುರುರಾಯರ ಮಹಿಮೆ ಕೇಳಿರಿ ನಮ್ಮ
ಗುರುರಾಯರ ಮಹಿಮೆ	ಪ
ಪರಮ ಭಕುತಿಯಿಂದ ಸ್ಮರಿಸುವ ಸುಜನರ
ದುರಿತಗಳÀ್ಹರಿಸಿ ಸದ್ಗತಿ ಪಥವ ತೋರುವ	ಅ.ಪ
ಇಂದಿರೇಶನ ಮಹಿಮೆ ಪೊಗಳುವ ಭಕ್ತ
ಸಂದಣಿ ಪೊರೆಯುವರ
ಹಿಂದಿನ ಅಘಗಳನೊಂದೂ ನೋಡದೆ ಶ್ರೀ-
ಮುಕುಂದನ ಭಜಕರ ಸಂಗ ನೀಡುವ ದಿವ್ಯ	 1
ದೇಶ ದೇಶದೊಳಿವರ ಮಹಿಮೆಗಳ ಉ-
ಲ್ಲಾಸದಿ ಪೊಗಳುವರ
ದಾಸರೆಂತೆಂದು ಸಂತೋಷದಿ ಸೇವಿಪ
ಮೀಸಲ ಮನದವರ ಪೋಷಿಸುತಿರುವಂಥ	2
ಹಲವು ಸಾಧನವೇತಕೆ ತನುಮನವ ಶ್ರೀ-
ಹರಿಗೆ ಸಮರ್ಪಿಸಿರಲು
ಕುಲಕೋಟಿ ಪಾವನ ಮಾಳ್ಪ ಶ್ರೀ ಗುರುಗಳ
ಚರಣ ಸೇವಕರೆಂದು ಶಿರಬಾಗಿ ನುತಿಸಿರೊ	3
ನಿದ್ರೆ ಮಾಡುವ ಬಾಲೆಯ ಕರಗಳಿಗೆ ಶ್ರೀ-
ಮುದ್ರಾಧಾರಣ ಮಾಡಿಹ
ಸಜ್ಜನರಿಗಿವರಭಯ ವಜ್ರಕವಚವು ಸತ್ಯ
ಹೃದ್ಗøಹದಲಿ ರಾಮಭದ್ರ ಮೂರುತಿ ಕಾಂಬ	4
ಕನಸುಮನಸಿನಲಿವರು ದರ್ಶನವಿತ್ತು ಸ-	
ವಿನಯ ತೋರುವರ
ಕನಲಿಕೆ ಕಳೆದು ಶ್ರೀ ಕಮಲನಾಭವಿಠ
ಲನೊಲುಮೆಯ ಪಡೆದ ಮಂತ್ರಾಲಯ ನಿಲಯ	5
							

97 ಮಹಿಮೆ ನೋಡಿರೈ

97.	ರಾಗ: [ತೋಡಿ]	ತಾಳ: [ರೂಪಕ]
ಮಹಿಮೆ ನೋಡಿರೈ ರಾಯರ
ಮಹಿಮೆ ಪಾಡಿರೈ 	ಪ
ಜಲಜನಾಭನೊಲುಮೆ ಪಡೆದು
ಇಳೆಯೊಳು ಪ್ರಖ್ಯಾತರಾದ	ಅ.ಪ
ರಾಘವೇಂದ್ರ ಯತಿಗಳೆಂದು
ಬಾಗಿ ನಮಿಸುವವರ ಮನದ
ರಾಗ ದ್ವೇಷಾದಿಗಳ ಕಳೆದು
ನೀಗಿಸುವರು ಭವದ ಬಂಧ	1
ತಾಳ ತಂಬೂರಿಪಿಡಿದು
ಭೋಗಶಯನನನ್ನು ಭಜಿಸಿ
ಕೂಗಿ ಪಾಡುತಿರಲು ನಲಿದು
ಬೇಗ ಪಾಲಿಸುತಲಿ ಒಲಿವ	2
ದೇಶದೇಶದವರು ಬಹಳ
ಕ್ಲೇಶಪಡುತ ಬರಲು ಅವರ
ಕ್ಲೇಶಗಳನು ಕಳೆದು ಪರಮ ಉ-
ಲ್ಲಾಸ ನೀಡಿ ಪೊರೆಯುವಂಥ	3
ಸೀತಾಪತಿಯ ಪೂಜಿಸುತಲಿ
ಖ್ಯಾತರಾದ ಯತಿಗಳನ್ನು
ಪ್ರೀತಿಯಿಂದ ಸೇವಿಸುವರ
ಪಾತಕಗಳ ಕಳೆದು ಪೊರೆವ	4
ಗಳದಿ ಹೊಳೆವ ತುಳಸಿ ಮಾಲೆ
ಹೊಳೆವ ನಗೆಯ ಮುಖದ ಭಾವ ಕ-
ಮಲನಾಭವಿಠ್ಠಲನೊಲಿಸಿ
ಹಲವು ವಿಧದಿ ಪೂಜಿಸುವರ	5
							

98 ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ

98.	ರಾಗ: ಕಾಂಬೋಜಿ	ತಾಳ: ಝಂಪೆ
ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ
ನೀಗಿ ಭವದ ಬಂಧದಿಂದ ಮುಕ್ತರಾಗಿರೊ	ಪ
ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರ
ಕಂತುಪಿತನ ಭಕ್ತರಿಗೆ ನಿರಂತರ ಸಂತಸ ನೀಡುವರ
ಪಂಕಜನಾಭನ ಕಿಂಕರರ ಭಯ ಚಿಂತೆಯ ನೀಗುವರ
ಶಂಖುಕರ್ಣರಿವರೆನ್ನುತ ಅಭಯದ ಕಂಕಣ ಕಟ್ಟಿಹರ	1
ಹಾಟಕಕಶ್ಯಪು ಪುತ್ರನು ವಿನಯದಿ ಪ್ರಾರ್ಥಿಸಿ ಪೂಜಿಸಿದ
ಮಾಟಮುಖದ ದೇವನ ಪಾದಾಂಬುಜ ಧ್ಯಾನಿಸಿ ಸೇವಿಸಿದ
ಕೋಟಲೆ ಭವದೊಳು ತಾಪÀ ಪಡುವರ ಆಪದ ಪರಿಹರಿಸಿ ಭ-
ವಾಟವಿದಾಟಿಸಿ ಪೊರೆದ ಪ್ರಹ್ಲಾದರ ಉಲ್ಲಾಸದಿ ಭಜಿಸಿರಿ	2
ವ್ಯಾಸರಾಯರೆಂದು ಜಗದಿ ಪ್ರಖ್ಯಾತಿ ಪಡೆದವರ
ದೇಶ ದೇಶದ ಭಕುತರ ಉಲ್ಲಾಸ ಕೊಡುವರ
ಶ್ರೀ ಸುಧೀಂದ್ರಾರ್ಯರ ಪುತ್ರರೆನಿಸಿಕೊಂಬರ
ಕ್ಲೇಶಗಳನೆ ಕಳೆವರೆಂಬ ಕೀರ್ತಿಪಡೆದರ	3
ಕಂಗೊಳಿಪ ಕೋರೆಯಿಂದ ಬಂದ ಭದ್ರೆಯ ತೀರದಿ
ಚಂದದಿಂದ ಮೆರೆವ ರಾಘವೇಂದ್ರ ರಾಯರ
ಕೊಂಡಾಡಿ ಪಾಡೋರ ಮನಕೆ ಸಂಭ್ರಮ ನೀಡುವರ
ಪೊಂದಿದ ಪಾಪಗಳೆಲ್ಲವ ನೀಗಿಸಿ ಚಂದದಿ ಸಲಹುವರ	4
ಕರುಣದಿಂದ ಭಕ್ತರನೆಲ್ಲ ಸಲಹುತಿರ್ಪರ
ಕಮಲನಾಭವಿಠ್ಠಲನಂಘ್ರಿ ಭಜನೆ ಮಾಳ್ಪರ
ಕನಕಮಯ ಮಂಟಪದಲಿ ಮರೆಯುತಿರ್ಪರ
ಕರೆದು ಪ್ರಾರ್ಥಿಸುವವರ ಮನಕೆ ಹರುಷ ತೋರ್ಪರ	5
31. ಕಮಲಾಪತಿ 
							

99 ಗುರು ರಾಘವೇಂದ್ರರಾ ಪಾದಧ್ಯಾನಾ

99.	ರಾಗ: [ರೀತಿಗೌಳ]	ತಾಳ: [ಮಿಶ್ರನಡೆ/ತ್ರಿಪುಟ]
ಗುರು ರಾಘವೇಂದ್ರರಾ ಪಾದಧ್ಯಾನಾ
ಮುಕ್ತಿ ಮಾರ್ಗಕೆ ಸೋಪಾನಾ	ಪ
ಸಂದರುಶನ ಮಾತ್ರಾದಿಂದಲೆನ್ನಯ ಮನಾ-
ನಂದವಾಯಿತು ಮನಕೀದಿನಾ ಮುಕ್ತಿಮಾರ್ಗಕೆ ಸೋಪಾನಾ	1
ಸ್ಮರಣೆಮಾತ್ರದಿ ತನ್ನಾ ಶರಣರ ಪೊರೆವನಾ
ಧರೆಯೊಳಗರಸಲು ಕಾಣೆ ನಾ ಮುಕ್ತಿಮಾರ್ಗಕೆ ಸೋಪಾನಾ	2
ವರಕಮಲಾಪತಿ ಪರನೆಂಬುದೆ ಸುಧಾ ಪರಿಮಳ
ಬೆರೆಸಿದ ಸಾಧನಾ ಮುಕ್ತಿಮಾರ್ಗಕೆ ಸೋಪಾನಾ	3
32. ಕಮಲೇಶ 
ಇವರ ರಚನೆಗಳಲ್ಲಿ ಸರಿ ಸಂಖ್ಯೆಯ 
ನುಡಿಗಳಿವೆ - ಹರಿದಾಸರ ರಚನೆಗಳಲ್ಲಿ ಇದು ಅಪರೂಪ
							

100 ಎಂಥಾ ಚಲುವನಮ್ಮ

100.	ರಾಗ: ಮೋಹನ [ಅಥವಾ ಶ್ಯಾಮ] 	 ತಾಳ: ಆದಿ
ಎಂಥಾ ಚಲುವನಮ್ಮ ಗುರುವರನೆಂಥಾ ಚಲುವನಮ್ಮ 	ಪ
ಶಾಂತಮೂರುತಿ ಸುಕುಮಾರ ಶರೀರನು
ಸಂತತ ವಾಂಛಿತವೀಯುವ ಯತಿವರ 	ಅ
ಸತ್ಯಲೋಕದೊಳು ಬ್ರಹ್ಮದೇವಗತಿ-
ಪ್ರೀತಿಪಾತ್ರ ಕರ್ಮಜ ದೇವತೆಯು
ನಿತ್ಯವೂ ದಶರೂಪೀ ಕಮಲಾಜಾನಿಯ(?)
ಭಕ್ತಿಯಿಂ ಭಜಿಸುವ ಶಂಕುಕರ್ಣನಿವ 	1
ಲೋಕದ ಸೌಂದರ್ಯಸಾರವಸೇರಿಸಿ
ಶ್ರೀಕಮಲಾಸನ ಪ್ರೇಮದಿ ಸೃಜಿಸಿದ
ಆ ಕಯಾಧುಸುತ ವರಪ್ರಹ್ಲಾದನ 
ಸಾಕಾರನು ಜಗನ್ಮೋಹಕ ಶ್ರೀಗುರು 	2
ನಂದಕುಮಾರನ ಚರಣಾರಾಧಕ
ಸುಂದರ ಬಾಹ್ಲೀಕರಾಜನಿವನಮ್ಮ
ಮಂದಹಾಸಲಸದಿಂದುವದನ ಸಿರಿ
ಚಂದ್ರಿಕೆ ರಚಿಸಿದ ವ್ಯಾಸಯತೀಂದ್ರನು 	3
ತುಂಗಭದ್ರಾ ಸುತರಂಗಿಣಿ ತೀರದಿ
ಮಂಗಳಕರ ಮಂತ್ರಾಲಯ ನಿಲಯನು
ಸಿಂಗರಿಸಿಹ ಬೃಂದಾವನಮಧ್ಯದಿ 
ಕಂಗೊಳಿಸುವ ರಾಘವೇಂದ್ರಮುನೀಂದ್ರನು 	4
ಒಂದಾರು ಶತವರ್ಷ ಬಂದಜನರ ಅಘ
ವೃಂದಕಳೆದಾರೋಗ್ಯ ಸಂಪದಗಳನು
ಕುಂದದೆ ಪುತ್ರಕಳತ್ರ ಮಂಗಳವಿತ್ತು
ಚಂದದಿ ಪಾಲಿಪ ಕಮಲೇಶನ ಪ್ರಿಯ 	5
							

101 ಏಕೆ ಬೃಂದಾವನದಿ ನೆಲೆಸಿರುವೆ

101.	ರಾಗಮಾಲಿಕೆ 	ತಾಳ: ರೂಪಕ
ರಾಗ: ಜಯಂತಶ್ರೀ
ಏಕೆ ಬೃಂದಾವನದಿ ನೆಲೆಸಿರುವೆ ಗುರುವೆ
ನಾಕವಿಲಸಿತಕೀರ್ತೆ ಲಾವಣ್ಯಮೂರ್ತೆ 	 ಪ
ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು
ಏಕಾಂತ ಬಯಸಿದೆಯಾ ರಾಘವೇಂದ್ರಾರ್ಯ 	ಅ
ರಾಗ: ಅಠಾಣ 
ಹಿಂದೆ ನಿನಗಾಗಿ ನರಹರಿಯು ಸ್ತಂಭದಿ ಬಂದ
ಮುಂದೆ ನಂದನಕಂದ ನಿನ್ನೆದರು ಕುಣಿದ 
ಒಂದು ಕ್ಷಣ ನಿನ್ನ ಬಿಟ್ಟಿರದೆ ಹರಿ ನಲಿಯುತಿರೆ
ಇಂದಾರ ಒಲಿಸಲೆಂದಿಲ್ಲಿ ತಪಗೈಯುತಿಹೆ 	1
ರಾಗ: ಕನ್ನಡ
ಇಷ್ಟವಿಲ್ಲದೆ ರಾಜ್ಯವಾಳಿ ಬಹು ವರ್ಷಗಳು
ಶಿಷ್ಟ ನೀ ಬಹುಬಳಲಿ ಆಯಾಸಗೊಂಡಿಹೆಯಾ
ದುಷ್ಟವಾದಿಗಳ ವಾಗ್ಯುದ್ಧದಲಿ ಜಯಿಸುತಲಿ
ಶ್ರೇಷ್ಠಗ್ರಂಥವ ಬರೆದು ಬರೆದು ಬೇಸರವಾಯ್ತೆ 	2
ರಾಗ: ಅಭೇರಿ 
ಪರಿಪರಿಯ ಅಭೀಷ್ಟಗಳ ನೀಡೆಂದು ಜನಕಾಡೆ
ವರವಿತ್ತು ಸಾಕಾಯ್ತೆ ಕಮಲೇಶದಾಸ
ಧರೆಗೆ ಮರೆಯಾಗಿ ಬೃಂದಾವನವ ಸೇರಿದೊಡೆ
ಚರಣ ದಾಸರು ನಿನ್ನ ಬಿಡುವರೇನಯ್ಯ 	3
ರಾಗ: ಸುರುಟಿ 
ವೀಣೆಯನು ನುಡಿಸುತಲಿ ವೇಣುಗೋಪಾಲನನು
ಜಾಣತನದಲಿ ಕುಣಿಸಿ ಮೇಣು ಮೆರೆದೆ
ಕಾಣದಿಹ ಪರಮಪದ ತಾಣವನು ತೋರುತ ಪ್ರ-
ವೀಣ ಬೃಂದಾವನದಿಂದ್ದೆದ್ದು ಬಾರಯ್ಯ 	4
							

102 ತುಂಗಾತೀರ ವಿರಾಜಂ

102.	ರಾಗ: ಮಲಯಮಾರುತ 	ತಾಳ: ಆದಿ
ತುಂಗಾತೀರ ವಿರಾಜಂ ಶ್ರೀಗುರು
ರಾಘವೇಂದ್ರಯತಿರಾಜಂ ಭಜ ಮನಃ 	ಪ
ಮಂಗಳಕರ ಮಂತ್ರಾಲಯವಾಸಂ
ಶೃಂಗಾರಾನನ ವಿಲಸಿತಹಾಸಂ 	 ಅ.ಪ
ಕರಧೃತದಂಡಕಮಂಡಲುಮಾಲಂ
ಸುರುಚಿರಚೇಲಂ ಧೃತಮಣಿಮಾಲಂ
ನಿರುಪಮಸುಂದರಕಾಯಸುಶೀಲಂ
ವರ ಕಮಲೇಶಾರ್ಪಿತ ನಿಜಸಕಲಂ 	ಚರಣ
							

103 ಬಾರೋ ಮನ್ಮನ ಮಂದಿರಕೆ

103.	ರಾಗ: ಕಮಾಚ್ 	ತಾಳ: ಆದಿ
ಬಾರೋ ಮನ್ಮನ ಮಂದಿರಕೆ
ಶ್ರೀರಾಘವೇಂದ್ರ ಸದ್ಗುಣಸಾಂದ್ರನೆ ಬೇಗ 	ಪ
ಶರಣಾಗತ ನಾನು ಭಕ್ತವತ್ಸಲ ನೀನು
ಸುರತರುವಂದದಿ ಕಾಮಿತವೀಯಲು 	ಅ.ಪ
ಕುಂದರದನ ದರಹಾಸಲಸಿತ ದಯಾ-
ಚಂದ್ರಿಕೆ ಬೀರುತ ಯತಿಚಂದ್ರಮನೆ 	1
ಭಾಸುರಚರಿತನೆ ದಾಸನಮೊರೆ ಕೇಳಿ
ದೋಷಗಳೆಣಸದೆ ಪೋಷಿಸಲೆನ್ನನು	 2
ಸುಲಭದ ಭಕುತಿಗೆ ಒಲಿಯುವ ಪ್ರಭುವೆಂಬ
ಸೊಲ್ಲ ಸತ್ಯಮಾಡಲೆಂದು ನಿಲ್ಲದೆ ಬೇಗ 	3
ಷೋಡಶವಿಧ ಉಪಚಾರಗಳರ್ಪಿಸಿ
ಹಾಡಿ ನಲಿದು ಭಕ್ತಿಯಿಂದ ಪೂಜಿಪೆ ನಿನ್ನ 	 4
ಮನಸಿಜಪಿತ ಕಮಲೇಶ ಪದಾರ್ಚಕ
ಅನಂತ ಮಹಿಮ ನಿನ್ನ ಸೇವಕ ನಾನೆಂದು 	5
ಈ ಕೀರ್ತನೆ ಇದೇ ದಾಸರ ರಚನೆಯೆಂದು 
ಖಚಿತವಾಗಿ ತಿಳಿದಿಲ್ಲ; ಆದರೂ ಇವರದೇ 
ಎಂದು ಪ್ರಸಿದ್ಧವಾಗಿರುವುದರಿಂದ ಪ್ರಕಟಿಸಲಾಗಿದೆ
							

104 ರಾಘವೇಂದ್ರ ದಯ ತೋರೋ

104.	ರಾಗ: ಲಲಿತ್	ತಾಳ: ಆದಿ
ರಾಘವೇಂದ್ರ ದಯತೋರೋ
ಬಾಗಿಭಜಿಪೆ ಮನ್ನಿಸೆನ್ನ	ಪ
ರಾಗಭರಿತ ಜೀವನವೆಂಬ
ಸಾಗರದೊಳು ಮುಳುಗುತಿಹೆನು
ಬೇಗ ಸುಮತಿ ಪಥವನಿತ್ತು
ಸಾಗಿಸಯ್ಯ ಭವದನೌಕೆ	1
ಭಂಗಗೊಳಿಸು ಸರ್ವಪಾಪ
ಹಿಂಗಿಸಯ್ಯ ಭವದತಾಪ
ರಂಗ ಶ್ರೀ ಕಮಲೇಶನ ಪಡೆವ
ಮಂಗಳಪಥವ ತೋರಿಸಯ್ಯ	2
							

105 ಹೊಡಿ ನಗಾರಿ ಮೇಲೆ ಕೈಯ್ಯ

105.	ರಾಗ: ಹಂಸಾನಂದಿ	ತಾಳ: ಆದಿ
ಹೊಡಿ ನಗಾರಿಮೇಲೆ ಕೈಯ್ಯ ಹೊಡಿ ನಗಾರಿಮೇಲೆ ಕೈಯ್ಯ 	ಪ
ಪೊಡವಿಯೊಳಗೆ ನಮ್ಮೊಡೆಯ ಗುರುರಾಘ-
ವೇಂದ್ರಯತಿಗೆ ಸಮರಿಲ್ಲವಿಲ್ಲೆಂದು	ಅ.ಪ
ಖಡುಗಸೆಳೆದು ಪಲ್ಗಡಿದು ಕಡು ಪಾಪಿ ನಿ-
ನ್ನೊಡೆಯನ ತೋರೆನೆ ಪೊಡಮಡಲಾಗಿ
ಒಡನೆ ಕಂಬದಿಂದೊಡೆದುಬಂದ ಜಗ-
ದೊಡೆಯನ ತೋರಿದ ಪ್ರಹ್ಲಾದನಿವನೆಂದು 	 1
ಕನ್ನಡರಾಯನ ಪಾಪವಕಳೆದು
ಮನ್ನಣೆಯಿಂದಾ ರಾಜ್ಯವನಾಳಿ
ಘನ್ನ ಕೃತಿತ್ರಯವ ಗೈದು ಮಧ್ವಮತ-
ವನ್ನು ಪೋಷಿಸಿದ ವ್ಯಾಸಾರ್ಯನಿವನೆಂದು 	 2
ಮಧ್ವಯತಿಯ ವರಭಾಷ್ಯಕೆ ಜಯಮುನಿ
ಪದ್ಧತಿಯಿಂದಲಿ ಟೀಕೆಯರಚಿಸೆ
ಶ್ರದ್ಧೆಯಿಂದದಕೆ ಟಿಪ್ಪಣಿಗೈದ ಜ-
ಗದ್ಗುರು ಹಂಸಾನಂದಕನೆಂದು 	 3
ಸುಖಮುನಿ ಪಾರಂಪರ್ಯದಿ ಬಂದ
ಸಕಲವಿದ್ಯೆಗಳಿಗಾಶ್ರಯನೀತ
ಶ್ರೀಕರ ಮಧ್ವಾಸ್ಥಾನ ಸಾಮ್ರಾಟ
ಲೋಕವಂದ್ಯ ಜಗದೇಕಗುರುವೆಂದು 	4
ವರಮಂತ್ರಾಲಯ ಮಂದಿರನೀತ
ಪರಿಪರಿಮಹಿಮೆಯ ತೋರಿಸುವಾತ
ಪರಮಹಂಸ ಕುಲದೀಪಕ ದಿನಮಣಿ
ಶರಣಜನಾವನ ಮಂದಾರನಿವನೆಂದು 	 5
ಮೂಲರಾಮ ಕಮಲೇಶನ ದಯದಿಂದ- 
ನಿಲದೇವನಾವೇಶದಿ ಮೆರೆದು
ಒಲುಮೆಯಿಂದ ಪುರುಷಾರ್ಥಕೊಡುವ ಪ್ರಭು
ಇಳೆಯೊಳಿವಗೆ ಸಮರಿಲ್ಲವಿಲ್ಲೆಂದು 	6
33. ಕಮಲೇಶವಿಠಲ 
							

106 ಕರೆದರೆ ಬರಬಾರದೆ

106.	ರಾಗ: ಬೆಹಾಗ್/ಕಮಾಚ್	ತಾಳ: ಆದಿ
ಕರೆದರೆ ಬರಬಾರದೆ	ಪ
ವರಮಂತ್ರಾಲಯಪುರಮಂದಿರ ತವ
ಚರಣಸೇವಕರು ಕರವಮುಗಿದು	1
ಹರಿದಾಸರು ಸುಸ್ವರಸಮ್ಮೇಳದಿ
ಪರವಶದಲಿ ಬಾಯ್ದೆರೆದುಕೂಗಿ	2
ಪೂಶರಪಿತ ಕಮಲೇಶವಿಠಲನ
ದಾಸಾಗ್ರೇಸರರೀಸಮಯದಿ	3
							

107 ಶರಣರ ಸುರಭೂಜ ಗುರುರಾಜ

107.	ರಾಗ: ಬೆಹಾಗ್	ತಾಳ: ಆದಿ
ಶರಣರಸುರಭೂಜ ಗುರುರಾಜ	ಪ
ವರಮಂತ್ರಾಲಯಪುರ ಮಂದಿರ ಸುಂ-
ದರ ಮುನೀಂದ್ರ ಭಾಸ್ಕರಸಮತೇಜ	1
ಕಾಮಿತಾರ್ಥಗಳ ಕಾಮಧೇನುವಿನ
ಸೀಮೆಮೀರಿ ಕೊಡುವ ಮಹಾರಾಜ	2
ಭೇಶಕೋಟಿ ಸಂಕಾಶನಾದ ಕಮ-
ಲೇಶವಿಠಲನದಾಸನೆ ಸಹಜ	3
34. ಕರಿಗಿರೀಶ 
							

108 ಗುರುವೆ ತವ ಚರಣ ಕಮಲ

108.	ರಾಗ: ಕಲ್ಯಾಣಿ	ತಾಳ: ಆದಿ
ಗುರುವೆ ತವಚರಣಕಮಲ ಷಟ್ಚರಣನೆನಿಸೊ ಎನ್ನ 	ಪ
ಪರಮಹಂಸಕುಲ ಸುಧಾಬ್ಧಿ ಸುರಚಿರ ಸುಧಾಕರ ಸುಧೀಂದ್ರಯತಿಕರಜ	ಅ.ಪ
ಶ್ರೀವರ ಚರಣ ಸರೋರುಹ ಮಧುಕರಪೂತ ಶುಭತಮಚರಿತ
ಭಾವಜಾದಿಷಡ್ವರ್ಗ ಸುನಿಗ್ರಹಶೀಲ ಕವಿಕುಲಲೋಲ
ಕೋವಿದಕುಲ ಸಂಭಾವಿತ ಮಹಿಮ ಸ-
ದಾ ವಿನೋದಿ ಸತ್ಸೇವಕಜನ ಸಂ-
ಜೀವನ ಶುಭಕರ ಪಾವನರೂಪ ಪ-
ರಾವರೇಶ ಪದಸೇವಕ ಯತಿವರ	1
ಸಕಲಶಾಸ್ತ್ರಪಾರಂಗತ ಪರಿಣತ ಖ್ಯಾತ ಗ್ರಂಥಪ್ರಣೀತ
ಸುಖಕರ ಸುಖತೀರ್ಥ ಸಮಯ ಸಂವರ್ಧಕ ಧೀರ ಸುಜನೋದ್ಧಾರ
ಮುಕುತಿಸಾಧನೆಗೆ ಅಕುಟಿಲಮಾರ್ಗವ
ನಿಖಿಲ ನಿಜಾಶ್ರಿತನಿಕರಕೆ ತೋರುತ
ಭಕುತಜನರ ಕೋರಿಕೆಗಳ ನೀಡುತ 
ಸುಖವಕರೆವ ಸುಂದರಯತೀಂದ್ರ	2
ಪರಮಪುರುಷ ಶ್ರೀಬದರಿವಾಸ ಭಜಕಾಗ್ರಣಿಯೆ ಗುಣಮಣಿಖಣಿಯೆ
ಸುರವರನುತ ಶ್ರೀರಾಮಚಂದ್ರ ಚರಣಾಬ್ಜಾರಾಧಕ ಸಂಪೂಜ್ಯ
ದುರಿತಕಳೆದು ಭವಶರಧಿಯ ದಾಟುವ
ಸರಿಮಾರ್ಗವ ನಾನರಿಯೆನೊ ಗುರುವರ
ಕರಿಗಿರೀಶ ಶ್ರೀನರಹರಿಚರಣವ
ನೆರೆನಂಬುವಪರಿ ಕರುಣಿಸು ಯತಿವರ	3
							

109 ನಮಿಸುವೆ ಗುರುರಾಜ ಸುತೇಜ

109.	ರಾಗ: ಬೇಹಾಗ್	ತಾಳ: ಆದಿ
ನಮಿಸುವೆ ಗುರುರಾಜ ಸುತೇಜ	ಪ
ನಮಿಸುವೆ ಸುಜನರಕಲ್ಪಭೂಜ	ಅ.ಪ
ಶರಣಜನಾವನ ಕರುಣಾಭರಣ
ಹರಿಚರಣಾರಾಧನಧುರೀಣ	1
ಮೂರಾವತಾರವೆತ್ತಿದ ಧೀರ
ಸಾರಿದವರ ಸಂತಾಪವಿದೂರ	2
ದ್ವಿಜಕುಲದೀಪ ಭವ್ಯಸ್ವರೂಪ
ಅಜರಾಮರ ಸತ್ಕೀರ್ತಿಪ್ರತಾಪ	3
e್ಞÁನವಿರಕ್ತಿ ನಿರ್ಮಲಭಕ್ತಿ
ಮಾಣದೆ ಕೊಡುವುದು ಮನಸಿಗೆ ಶಾಂತಿ	4
ವರಮಂತ್ರಾಲಯ ಸುರುಚಿರನಿಲಯ
ಕರಿಗಿರೀಶ ಶ್ರೀನರಹರಿಪ್ರಿಯ	5
							

110 ಪದುಳದಿಂದಲಿ ಪೇಳುವೆ ಲಾಲಿಸುವುದು

110.	ರಾಗ: ಮಧ್ಯಮಾವತಿ	ತಾಳ: ಆದಿ
ಪದುಳದಿಂದಲಿ ಪೇಳುವೆ ಲಾಲಿಸುವುದು ಪಾವನಕರವಿದು	ಪ
ಮುದದಿ ಸುಧೀಂದ್ರರ ಬಳಿಯಲಿ ಗುರುವಾರ
ಸುಧಾ ಪಾಠವನೋದಿದಬಗೆಯನು	ಅ.ಪ
ಗುರುಗಳಾ ಎದುರಲಿ ತಾವ್‍ಕುಳಿತು ಗುರುಮುಖದಿಂದ
ಬರುವಾ ವಾಕ್ಯಗಳೊಳಗೊಂದಿನಿತು ಬಿಡದಂದದಿ ಮನ
ಸ್ಥಿರವಾಗಿನಿಲಿಸಿ ಕೇಳುತಲಿಂತು ಭಾವವತಾವರಿತು
ಧೃತ
ನಿರುತಮನನದಿಂ ಸ್ಫುರಿತಾರ್ಥಗಳನು
ಇರುಳುಕಾಲದಲಿ ತರಗೆಲೆದೀಪದ
ನೆರೆವಿಲಿ ಬರೆಯುತ ಪರಿಮಳವೆಂಬುವ
ವರವ್ಯಾಖ್ಯಾನವ ವಿರಚಿಸುತ್ತಿದ್ದರು	1
ಸಹಪಾಠಿಗಳೊಡನಾಡದೆ ಸರ್ವರಮನನರತರಾಗಿರೆ ಅವರು
ಸಹನೆಯಿಲ್ಲದೆ ಅದರನುಸಂಧಾನ ತಾವರಿಯದೆ ಬಲು
ಕುಹಕದಿಂದವರಿಗೆ ಅಪಮಾನ ಮಾಡಲು ಅನುದಿನ
ಧೃತ
ಬಹುವಿಧದಲಿ ದೂಷಿಸುತಲಿ ಚಾಡಿಯ
ವಹಿಲದಿ ಪೇಳುತಲಿರೆ ಯತಿವರ್ಯರು
ಸುಹಸಿತಮುಖರಾಗಿ ಕೇಳುತಲೊಂದುದಿನ
ಸಹಜವಿಷಯವವರರಿವಿಗೆ ತಂದರು	2
ಒಂದು ದಿನ ಪಾಠದರೊಂದೆಡೆಯೊಳು ಯತಿಶೇಖರರು ಬೇ-
ಕೆಂದು ನಿಜಶಿಷ್ಯರ ಪರೀಕ್ಷಿಸಲು ವಿವರಣಮಾಡದೆ
ಸಂದೇಹ ತೋರಿಸಿ ತಾವ್‍ಬಿಡಲು ಆದಿನದಿರುಳು
ಧೃತ
ಎಂದಿನಂದದಲಿ ವೇಂಕಟಾರ್ಯರು
ಅಂದಿನ ಪಾಠಕೆ ಕುಂದದ ವ್ಯಾಖ್ಯಾನ
ಚೆಂದದಿ ಬರೆದಿಟ್ಟು ಸಂದನಿದ್ರೆಯೊಳಿರೆ
ಬಂದರಲ್ಲಿಗೆ ಯತೀಂದ್ರ ಸುಧೀಂದ್ರರು	3
ವರಶಿಷ್ಯನ ಬಳಿಯಲಿ ಪರಿಕಿಸಲು ಗುರುವರ್ಯರ ದೃಷ್ಟಿಗೆ
ಬರೆದ ಪತ್ರಗಳ ವಹಿ ಕಾಣಿಸಲು ಕರದಲ್ಲಿ ತೆಗೆದು
ಪರಿಶೀಲಿಸಲಾಗತಿಹರುಷದೊಳು ಮನಉಬ್ಬುತಲಿರಲು
ಧೃತ
ನೆರ ವಾತ್ಸಲ್ಯದಿ ಶಿಷ್ಯನ ನೋಡಲು
ಧರೆಯಮೇಲೆ ಹೊದ್ದಿಕೆಯಿಲ್ಲದೆ ಮಲ-
ಗಿರುವುದ ಕಂಡತಿಮರುಕದಿ ಶಾಲನು
ತ್ವರಿತದಿ ಹೊದ್ದಿಸಿ ಪೊರಟರು ಗುರುಗಳು	4
ಮಾರನೆಯದಿನ ಪಾಠದ ಸಮಯದಲಿ ಹಿಂದಿನಪಾಠಕೆ
ಯಾರು ಅರ್ಥವ ಪೇಳದೆ ಮನದಲಿ ಇರುತಿರೆ ಯತಿವರ
ತೋರಿಸಿ ಪೇಳಿದವರವರೆದುರಲ್ಲಿ ಪರಿಮಳ ವ್ಯಾಖ್ಯಾನ
ಧೃತ
ಸ್ವಾರಸ್ಯವು ಮನಕೇರಲು ಶಿಷ್ಯರು 
ಭೂರಿಕ್ಷಮಾಪಣೆ ಬೇಡಲು ವೇಂಕಟ
ಆರ್ಯರ ಪರಿಮಳಾಚಾರ್ಯರೆಂದೆನ್ನುತ
ಸಾರಿಕರೆದರು ಕರಿಗಿರೀಶನ ಸ್ಮರಿಸುತ	5
							

111 ಪರಿವ್ರಾಜಕರೊಂದೆಡೆ ಇರುವುದು ಥರವೇ

111.	ರಾಗ: ಪೂರ್ವಿ ಕಲ್ಯಾಣಿ	ತಾಳ: ಆದಿ
ಪರಿವ್ರಾಜಕರೊಂದೆಡೆ ಇರುವುದು ಥರವೇ ಎನ್ನುತ
ಗುರುರಾಜರು ಪೊರಟರು ಪರ್ಯಟನಕ್ಕೆ	ಪ
ಪರಿಪರಿದೇಶ ಸಂಚರಿಸುತ ಜನರನು-
ದ್ಧರಿಸುತ ಹರಿಮತಸ್ಥಿರಗೊಳಿಸುವುದಕೆ	ಅ.ಪ
ರಾಮೇಶ್ವರ ಕಂಚಿ ತಿರುಪತಿ ಉಡುಪಿಯು
ಆಮಹಾಕ್ಷೇತ್ರಗಳಲಿ ಚರಿಸಿದರು	1
ಗದಗು ಪ್ರಾಂತ್ಯದಲಿ ಕಿರೀಟಗಿರಿ ಗ್ರಾಮ-
ದಧಿಪತಿ ಭಿಕ್ಷಕೆಕರೆಯೆ ಪೋದರು	2
ಸಂಭ್ರಮದಲಿ ಪೂಜೆ ನಡೆಯುತಿರಲು ಏ-
ನೆಂಬೆನು ನಡೆದಿಹ ದೈವವ್ಯಾಪಾರವ	3
ದೇಸಾಯಿಯ ಬಲು ಮುದ್ದುಕುವರನು
ಆ ಸದನದಲೊಂದೆಡೆ ಆಡುತ್ತಿದ್ದನು	4
ಇಟ್ಟಿರಲಲ್ಲಿ ಸೀಕರಣೆಯ ಪಾತ್ರೆಯು
ಮೆಟ್ಟಿನೋಡಿ ಅದರಲ್ಲಿ ಬಿದ್ದನು	5
ಕೂಸನುಕಾಣದೆ ಅಲ್ಲಲ್ಲರಸುತ 
ದೇಸಾಯಿ ನೋಡಲು ಮೃತಶಿಶು ಕಂಡನು	6
ಉಕ್ಕೇರಲು ಬಲು ದುಃಖವ ತಡೆದನು
ಪಕ್ಕದಲಿಹ ಯತಿಗಳಿಗೆ ತಿಳಿಸದೆಲೆ	7
ತೀರ್ಥಪ್ರಸಾದಕಾಲಕೆ ಗುರುಗಳು
ಸುತ್ತನೋಡೆ ಯಜಮಾನ ಕಾಣದಿರೆ	8
ಮೆತ್ತನೆಕರೆಸಿ ವೃತ್ತಾಂತವೇನೆನ್ನಲು
ಪುತ್ರನಸ್ಥಿತಿಯನು ಪೇಳಿದನಾತನು	9
ಆಗ ತರಿಸಿ ಬಾಲಕನ ಕಳೇಬರ
ಬೇಗನೆ ಕಮಂಡಲಜಲ ಪ್ರೋಕ್ಷಿಸಿದರು	10
ಬಾಲಕನಾಗಲೇ ಜೀವಿಸಿ ಎದ್ದನು
ಪೇಳಲೇನು ದಂಪತಿಗಳ ಹರುಷವ	11
ಗುರುರಾಜರ ವರ ಅಮೃತಹಸ್ತದ
ಗುರುತರ ಮಹಿಮೆಯನರಿಯಲು ವಶವೇ	12
ಕರಿಗಿರೀಶ ತನ್ನ ಕರುಣಾಪಾತ್ರರ
ಮೆರೆಸುವ ಧರೆಯೊಳು ಪರಮಾನಂದದಿ	13
							

112 ಭಾರಿ ಶ್ರೀಮಂತನ ಮನೆಯಲಿ ಹಬ್ಬವು

112.	ಸಾಂಗತ್ಯ 
[ಉಗಾಭೋಗದಂತೆ ಅನಿಬದ್ಧ ಶೈಲಿಯಲ್ಲಿ ಹಾಡುವ ಪರಿಪಾಠವಿದೆ]
ಭಾರಿಶ್ರೀಮಂತನ ಮನೆಯಲಿ ಹಬ್ಬವು
ಮೀರಿದುತ್ಸಾಹದಿ ಜರುಗುತಿರೆ
ಗೌರವದಿಂದ ಆಹ್ವಾನಪಡೆದಿದ್ದ
ಧಾರುಣಿ ಸುರರನೇಕರು ಸೇರಿರೆ	1
ಧೀಮಂತ ಪರಿಮಳಾಚಾರ್ಯರಿಗಾಹ್ವಾನ
ಶ್ರೀಮಂತ ಕೊಟ್ಟಿರಲಾದರದಿ 
ಆ ಮಹಾಮಹಿಮರು ಪೋಗಿ ಒಂದೆಡೆಯೊಳು
ಸಾಮಾನ್ಯರಂತೆ ಕುಳಿತುನೇಮದಿ	2
ವೇದಸೂಕ್ತಗಳ ಪಾರಾಯಣಮಾಡುತ
ಬೂದಿಮುಚ್ಚಿದ ಕೆಂಡದಂತಿರಲು
ಸಾಧಾರಣ ಜನಕೆಂತು ಸಾಧ್ಯವು ಇವರ-
ಗಾಧ ಮಹಿಮೆಯನು ತಿಳಿಯಲು	3
ಬಂದಿದ್ದ ಭೂಸುರವೃಂದಕ್ಕೆ ತಕ್ಕಷ್ಟು
ಗಂಧವ ತೆಗೆಯಲು ತಕ್ಕವರ
ಮಂದಿಯೊಳರಸುತ ಗೃಹಸ್ಥನ ಪುರೋಹಿತ
ಬಂದು ನೋಡಿದ ನಮ್ಮ ಆಚಾರ್ಯರ	4
ತಕ್ಕವರಿವರೆಂದು ಫಕ್ಕನೆ ಪೇಳಿದ
ತಕ್ಕಷ್ಟು ಗಂಧವ ತೆಗೆಯಿರೆಂದು
ತಕ್ಕ ಸಾಣೆಯಕಲ್ಲು ಗಂಧದ ತುಂಡನು
ಸೊಕ್ಕಿನಿಂ ತಂದಿರಿಸಿದನಂದು	5
ಹರಿಇಚ್ಛೆಯಿಂದಲಿ ಆಚಾರ್ಯರಾದಿನ
ವರ ಅಗ್ನಿಸೂಕ್ತವ ಪಠಿಸುತ್ತಿಹ
ಸರಿಸಮಯಕೆ ಪುರೋಹಿತ ಬಂದವರನು
ಸಿರಿಗಂಧ ತೆಗೆಯಲು ನೇಮಿಸಿದ	6
ಪರಮಶಾಂತತೆಯಿಂದ ಪರಿಮಳಾಚಾರ್ಯರು
ಧರಣಿಸುರರ ಲೇಪನಕೆ ಗಂಧವ
ಅರೆಯುತ ಪಾರಾಯಣ ಮಾಡುತ್ತಿದ್ದರು
ಅರಿಯಲೊಶವೆ ಹರಿಯ ಸಂಕಲ್ಪವ	7
ತೆಗೆದ ಗಂಧವಾಗ ಪುರೋಹಿತನೊಂದೆಡೆ
ತೆಗೆದಿಟ್ಟು ಭೋಜನಪೂರ್ವದಲಿ
ಮಿಗಿಲಾಗಿ ದ್ವಿಜರಿಗೆ ಕೊಡಲವರುಲೇಪಿಸೆ
ಧಗಧಗವೆನಿಸಿತು ತಾಪದಲಿ	8
ಭೂಮಿಸುರರ ತಾಪವ ನೋಡಿ ಸಂತಾಪದ-
ಲಾ ಮಹಾ ಪರಿಮಳಾಚಾರ್ಯರಾಗ
ಸ್ವಾಮಿ ಶ್ರೀಕರಿಗಿರೀಶನ ಸ್ಮರಿಸಿ ಪಠಿಸಿದರ್
ನೇಮದಿ ವರುಣಸೂಕ್ತವ ಬೇಗ	9
35. ಕಾಂತೇಶಪ್ರಿಯವಿಠಲ - ಅಪ್ರಕಟಿತ ಕೃತಿಗಳು
							

113 ಕಂಡೆ ಕಂಡೆ ಗುರುಗಳ

113.	 ರಾಗ: ಮಧ್ಯಮಾವತಿ 	ತಾಳ: ಆದಿ
ಕಂಡೆ ಕಂಡೆ ಗುರುಗಳ ಕಂಡೆ ಕಂಡೆ 	ಪ
ಕಂಡೆ ಗುರುರಾಘವೇಂದ್ರರ ಕೋ-
ದಂಡಪಾಣಿಯ ನೋಡಿನಲಿವರ
ಕಂಡಭಕ್ತರಭೀಷ್ಟಸಲಿಪರ
ದಂಡಕಾಷಾಯವಸ್ತ್ರಧಾರಿಯ 	ಅ ಪ
ತರಳನಿರಲು ತಂದೆ ಹಿರಣ್ಯಕಗೆ
ನರಹರಿಯ ಕಂಬದಲಿತೋರಿದ
ಗುರುವ್ಯಾಸರೆನಿಸಿಬಂದೀಭುವಿಯೊಳು
ಗುರುಮಧ್ವರಮತ ಜಗಕೆಸಾರಿದ 	1
ತುಂಗಭದ್ರಾನದಿಯತೀರದಿ
ಕಂಗೊಳಿಪ ವೃಂದಾವನದೊಳಿರುತಲಿ
ಮಂಗಳಾಂಗ ಶ್ರೀಮೂಲರಾಮನ
ಕಂಗಳಿಂದಲಿ ನೋಡಿ ಸ್ತುತಿಪರ 	2
ಗುರುಸುಧಿಂದ್ರರ ಕರುಣಪಾತ್ರರ
ಸ್ಮರಣೆಮಾತ್ರದಿ ಅಘವತೊರೆವರ
ಪರಮಪುರುಷಹರಿಯ ಚರಣದೊಳ್
ಸ್ಥಿರಭಕುತಿಯಿತ್ತು ಸತತಕಾಯ್ವರ 	3
ಮೂರೆರಡುಮೇಲೊಂದಧಿಕಶತ
ವರುಷ ವೃಂದಾವನದೊಳಿರುತಲಿ
ಆರಾಧನೆಯಕೈಗೊಳುತ ನಿತ್ಯದಿ
ಕೋರಿದಿಷ್ಟಾರ್ಥಗಳನೆ ಕೊಡುವರ 	4
ಧರೆಯೊಳಗೆ ಮಂಚಾಲೆಕ್ಷೇತ್ರಕೆ
ಸರಿಮತ್ತೊಂದಿಲ್ಲ ದಿಟವಿದು
ಕರಿವರದ ಕಾಂತೇಶಪ್ರಿಯವಿಠಲನ
ಸ್ಮರಣೆಯೊಳನವರತಲಿಪ್ಪರ 	5
							

114 ಗುರುಪಾದಕ್ಕೆರಗಿರೋ

114.	ರಾಗ: ಸೌರಾಷ್ಟ 	ತಾಳ: ಆದಿ
ಗುರುಪಾದಕ್ಕೆರಗಿರೋ ಶಿರವ ಬಾಗಿ ನಮಿಸಿರೋ
ದುರಿತಕಳೆದುಪೊರೆವ ಗುರು ರಾಘವೇಂದ್ರರ 	ಪ
ಅಜನಸೇವಿಸೀ ಹರಿಯಭಜನೆ ಮಾಳ್ದರಾ
ವೃಜಿನದೂರವೂ ಇವರಭಜಿಸಿ ಪಾಡಲೂ 	1
ಭೂಪತಿಯೆನಿಸಿದಾ ಭುವಿಲಿ ಶ್ರೀಪತಿಯಸ್ತುತಿಸಿದಾ
ಪಾಪ ಸ್ವಲ್ಪವೂ ಸ್ಮರಿಸೆ ಲೇಪವಾಗದೂ 	2
ಹರಿಯತುತಿಸಿದಾ ನರಹರಿಯತೋರಿದಾ
ಪರಮಪೂಜ್ಯರೂ ಇವರು ಕರುಣಾಪೂರ್ಣರೂ 	3
ಯತಿವ್ಯಾಸರೆನಿಸಿದಾ ಮಧ್ವಮತವಸಾರಿದಾ
ತುತಿಸಿಪೊಗಳಲೂ ಮಂದಮತಿಯು ದೂರವೂ 	4
ಮೋದತೀರ್ಥರಾ ತತ್ವವಾದಪೇಳ್ದರಾ
ಖೇದವಾಗದೂ ಇವರಪಾದ ಸ್ಮರಿಸಲೂ 	5
ಏಸುಜನುಮದಾ ಪಾಪರಾಶಿಕಳೆವರು
ವಾಸುದೇವನೂ ಇವರಲಿ ವಾಸಿಸಿಪ್ಪನೂ 	6
ಘನ್ನಮಹಿಮರೂ ಇವರು ಪಾವನ್ನಚರಿತರೂ
ಧನ್ಯರೇ ಸರಿ ಇವರ ಅನನ್ಯಭಜಿಪರೂ 	7
ಏಳುನೂರುವರುಷವೂ ಈಧರೆಯೊಳಿಪ್ಪರೂ
ಏಳೇಳುಜನುಮದಾಕೃತ ಪಾಪಕಳೆವರೂ 	8
ಶಾಂತಗುರುಗಳಾ ಅಂತರಂಗದಿ ಸ್ತುತಿಪರಾ
ಕಾಂತೇಶಪ್ರಿಯವಿಠಲನೂ ಅನಂತಕಾಯ್ವನೂ 	9
							

115 ಮಂತ್ರಾಲಯ ಪ್ರಭುವ ನೋಡಿರೀ

115.	ರಾಗ: ಕಲ್ಯಾಣಿ 	ತಾಳ: ಆದಿ
ಮಂತ್ರಾಲಯಪ್ರಭುವ ನೋಡಿರೀ ನಮ್ಮ 
ಮಂತ್ರಾಲಯಪ್ರಭುವ ನೋಡಿರೀ 	 ಪ
ಮಂತ್ರಾಲಯಪ್ರಭುವ ನೋಡಿ
ಸಂತಸ ಮನಕೆ ತಂದು
ಅಂತರಂಗದಿ ಲಕ್ಷ್ಮೀಕಾಂತನ್ನ ನೋಡಿ ನಲಿವ 	ಅ. ಪ
ತುಂಗಭದ್ರಾ ನದಿಯತೀರದೀ
ಕಂಗೊಳಿಪ ವೃಂದಾವನದೊಳಿಹ
ಶೃಂಗಾರ ತುಳಸಿಮಾಲೆಯ ಧರಿಸಿಹ
ಮಂಗಳಕರ ಶ್ರೀ ಗುರುರಾಘವೇಂದ್ರರ 	1
ಬಿಂಬಮೂರುತಿ ನರಸಿಂಗದೇವನ
ಕಂಬದೊಳಂದು ತೋರಿ ತಂದೆಗೆ
ಅಂಬುಜಾಕ್ಷನ ಬಿಡದೆ ಸ್ಮರಿಸುತ
ಅಂಬುಧಿಶಯನನ ಪಾದವಸೇರಿದ 	2
ವ್ಯಾಸಮುನಿಯಾಗಿ ಭುವಿಯೊಳು ಜನಿಸಿ
ಆ ಸಮೀರಮತ ಜಗಕೆಸಾರುತ
ವಾಸುಕಿಶಯನ ಕಾಂತೇಶಪ್ರಿಯವಿಠಲನ
ಲೇಸಾಗಿ ಭಜಿಸಿದ ಶಾಂತಗುರುಗಳಾ 	3
							

116 ರಾಘವೇಂದ್ರಗುರುವೇ

116.	ರಾಗ: ಮೋಹನ 	ತಾಳ: ಆದಿ
ರಾಘವೇಂದ್ರಗುರುವೇ ನಿಮ್ಮಯ ಪಾದ
ಬಾಗಿನಮಿಪೆ ಸುರತರುವೇ 	ಪ
ಭಾಗವತರ ಭವರೋಗವ ಪರಿಹರಿಸಿ
ಭೋಗಿಶಯನನೊಳು ಅಗಾಧ ಭಕುತಿ ಕೊಡುವ 	ಅ.ಪ
ವರಮಂತ್ರಾಲಯದಿನೆಲಸೀ
ಬರುವ ಭಕುತರಭೀಷ್ಟಸಲಿಸೀ
ಹರಿಯ ಧ್ಯಾನದೊಳು ವೃಂದಾವನದೊಳಿಪ್ಪ
ಪರಮಯೋಗಿವರ್ಯ ಯತಿರಾಘವೇಂದ್ರ 	1
ಕಂದ ಪ್ರಹ್ಲಾದನಾಗೀ ಕೃತಯುಗದಿ
ತಂದೆಗೆ ತೋರಿದೆ ಕಂಬದಿ ಹರಿಯಾ
ಮುಂದೆ ಯತಿವ್ಯಾಸರೆಂದೆನಿಸುತಾ
ಛಂದದಿ ಪೇಳಿದೆ ಮಧ್ವಮತ ಸಾರವಾ	2
ಮೂರೆರಡೊಂದುಶತವರುಷ 
ಚಾರುವೃಂದಾವನದೊಳಿರುತಾ
ವಾರಿಜನಾಭ ಕಾಂತೇಶಪ್ರಿಯವಿಠಲನ
ಸಾರಿಭಜಿಪಗುರು ಭಾಗವತೋತ್ತಮ 	3
36. ಕಾರ್ಪರನರಹರಿ 
							

117 ಗುರು ರಾಘವೇಂದ್ರ ಕರುಣಿಸೊ

117.	ರಾಗ: ದಕ್ಷಿಣಾದಿ ಭೈರವಿ	ತಾಳ: ಆದಿ
ಗುರು ರಾಘವೇಂದ್ರ ಕರುಣಿಸೊ ತವ 
ಚರಣ ಸ್ಮರಣೆಯ	ಪ
ಶರಣು ಜನಕೆ ಸುರತರುವೆಂದೆನಿಸುತ 
ವರ ಮಂತ್ರಾಲಯ ಪುರದಿ ಮೆರೆವ ಶ್ರೀಮದ್-	1
ನಂದತೀರ್ಥರ ಮತ ಸಿಂಧುವಿಗೆ ಪೂರ್ಣ
ಚಂದ್ರನೆನಿಸಿದ ಸುಧೀಂದ್ರ ಕರೋದ್ಭವ	 2
ಧರೆಯೊಳು ಶರಣರ ಪೊರೆವ ಕಾರ್ಪರನರ-	 
ಹರಿಯನೊಲಿಸಿದ ಪರಿಮಳಾಚಾರ್ಯ	3
							

118 ಪಾಹಿ ಶ್ರೀ ಗುರುರಾಘವೇಂದ್ರ

118.	ರಾಗ: ಪಹಾಡಿ/ಮಿಶ್ರಪಹಾಡಿ	ತಾಳ: ಆದಿ
ಪಾಹಿ ಶ್ರೀ ಗುರುರಾಘವೇಂದ್ರ 
ಅಮಿತಗುಣ ಸಾಂದ್ರ ಯತೀಂದ್ರ	ಪ
ಶ್ರೀದ ಮೋದತೀರ್ಥ ಮತವಾ-
ರಿಧಿ ವಿಧು ವಸುಧಾ ಸುವಿಬುಧಾ	 1
ಅಮಿತ ಮಹಿಮಾಲಂಕೃತಾಂಗ
ಕುಮತ ಗಜಸಿಂಗ ಶುಭಾಂಗ	2
ಶರಣು ಜನ ಮಂದಾರ ಕರುಣಾ-
ಶರಧಿ ದುರಿತ ಘನ ಸುಪವನಾ	3
ಕೋಲತನಯಾ ಕೂಲಗತ ಮಂ-	
ತ್ರಾಲಂiÀi ನಿಲಯಾ ಸುಕೃಪಯಾ	4
ವೀರ ಕಾರ್ಪರನರಹರಿಯ	
ಚಾರು ಪದಕಮಲ ಸುಲೋಲ	5
							

119 ಭಕ್ತ ಪ್ರಹ್ಲಾದಗೆ ಆರುತಿ ಮಾಡುವೆ ನಾ

119.	ರಾಗ: ಶಂಕರಾಭರಣ	ತಾಳ: ಏಕ
ಭಕ್ತ ಪ್ರಹ್ಲಾದಗೆ ಆರುತಿ ಮಾಡುವೆ ನಾ	ಪ
ಆರುತಿ ಮಾಡುವೆ ನಾರಿಯ ಗರ್ಭದಿ
ನಾರದ ಮುನಿಯಿಂದ ನಾರವ ಪಡೆದಗೆ	 ಅ.ಪ
ಶಾಲೆಯೊಳಗೆ ದೈತ್ಯ ಬಾಲಕರಿಗೆ ಸಿರಿ-
ಲÉೂೀಲನೆ ಪರನೆಂದು ಪೇಳಿದ ಬಾಲಕಗೆ	1
ನಂದತೀರ್ಥರ ಮತಸಿಂಧುವಿಗೆ ಪೂರ್ಣ
ಚಂದ್ರನೆಂದೆನಿಸಿದ ಚಂದ್ರಿಕಾರ್ಯರಿಗೆ	2
ವಂದಾರು ಜನರಿಗೆ ಮಂದಾರನೆನಿಸಿದ
ನಂದದಾಯಕ ಸುಧೀಂದ್ರ ಕುಮಾರಗೆ	3
ವೃಂದಾವನದೊಳಗೆ ನಿಂದು ಸೇವಕಜನ
ವೃಂದಪಾಲಕ ರಾಘವೇಂದ್ರಯತೀಂದ್ರಗೆ	4
ಧರೆಯೊಳು ಶರಣರ ಪೊರೆವ ಕಾರ್ಪರನರ-
ಹರಿಯನೊಲಿಸಿದಂಥ ಪರಿಮಳಾಚಾರ್ಯರಿಗೆ	5
37. ಕೃಷ್ಣ / ಶ್ರೀಕೃಷ್ಣವಿಠಲ 
							

120 ಆವ ಗುರುಗಳಿಗುಂಟು ಈ ವೈಭವವು

120.	ರಾಗ: ಕಾಂಬೋಜಿ	ತಾಳ: ಝಂಪೆ
ಆವ ಗುರುಗಳಿಗುಂಟು ಈ ವೈಭವವು
ಪವನನೊಡೆಯನ ಭಕ್ತ ರಾಘವೇಂದ್ರರಿಗಲ್ಲದೆಲೆ	ಪ
ವರ ತುಂಗಾತೀರದಲಿ ಮೆರೆವ ಮಂತ್ರಾಲಯದಿ
ತರಣಿಯಂದದಿ ಮೆರೆದು ಭಕ್ತರನು ಪೋಷಿಸುವ
ಶರಣರಕ್ಷಕನೆಂಬ ಬಿರುದಿಂದ ತಾಮೆರೆವ
ವರ ಮಧ್ವಕುಲಚಂದ್ರ ಗುರುರಾಜಗಲ್ಲದೇ	1
ಸಂತರೆಲ್ಲರು ಬಂದು ಶಾಂತಿಯಿಂದಲಿ ನಿಂದು
ಕಂತುಪಿತನಭಕ್ತ ಚಿಂತೆಯನ್ನು ಹರಿಸೆಂದು
ಸಂತತವು ಬೇಡುತಿಹ ಶಾಂತರಾಗಿಹ ಜನರ
ಸಂತೋಷದಲಿ ಕಾಯ್ವ ಗುರುರಾಜಗಲ್ಲದೇ	2
ಕಾವಿವಸ್ತ್ರವಧರಿಸಿ ಕವಿದ ಭ್ರಮೆಯನು ಬಿಡಿಸಿ
ಭುವಿಜರಮಣನ ಭಜಪ ಕವಿಕುಲೋತ್ತಮ ನಮ್ಮ
ಸೇವಕರ ಸುರಧೇನು ಪಾವನಾತ್ಮನು ಆದ
ಕೃಷ್ಣವಿಠಲನಭಕ್ತ ಗುರುರಾಜಗಲ್ಲದೆ	3
							

121 ಎಂಥ ಧನ್ಯನೋ ಗುರುವಿನ್ನೆಂಥ ಮಾನ್ಯನೋ

 121.	ರಾಗ: ಕೇದಾರಗೌಳ	ತಾಳ: ರೂಪಕ
ಎಂಥ ಧನ್ಯನೋ ಗುರುವಿನ್ನೆಂಥ ಮಾನ್ಯನೋ	ಪ
ಕಂತುಪಿತನ ನಾಮಸ್ಮರಣೆ ಸಂತತವು ಮಾಡುತಿರುವ	ಅ.ಪ
ಭಕ್ತಿಯಿಂದ ಸೇವೆಗೈವ ಭಕ್ತರಘವ ನೀಗಿ ಪೊರೆವ
ಭಕ್ತಬಂಧುವೆನಿಸಿ ಮೆರೆವ ಮುಕ್ತಿಮಾರ್ಗ ಸತತ ತೋರ್ವ	1
ತುಂಗತಟದಿ ಬಂದು ನೆಲಸಿ ರಂಗನಾಥನ ಪಾದಸ್ಮರಿಸಿ
ಭಂಗಗಳನು ನೀಗಿ ಪೊರೆವ ಮಂಗಳಾಂಗ ರಾಘವೇಂದ್ರ	2
ಕಮಲಬಾಂಧವನಂತೆ ಶೋಭಿಸಿ ವಿಮಲಕೀರ್ತಿಯಿಂದ ಮೆರೆವ
ಕಮಲನಾಭನ ಧ್ಯಾನ ಮಾಳ್ಪ ನಿರ್ಮಲಾಂಗ ರಾಘವೇಂದ್ರ	3
ಕರ್ಮಶೀಲನಾಗಿ ಸತತ ಧರ್ಮಮಾರ್ಗವನ್ನು ಸಾರಿ
ಕರ್ಮದೋಷಗಳನು ಹರಿವ ನಿರ್ಮಲಾಂಗ ರಾಘವೇಂದ್ರ	4
ಕಾಮಿತಾರ್ಥವಿತ್ತು ಕಾಯ್ವ ಶ್ಯಾಮಲಾಂಗ ಕೃಷ್ಣವಿಠಲ-
ಸ್ವಾಮಿಯನ್ನು ಪೂಜಿಸುವ ಪ್ರೇಮಮಯನೆ ರಾಘವೇಂದ್ರ	5
							

122 ಗುರು ನಿನ್ನ ಪಾದಾಶ್ರಯವೊಂದೆ ಗತಿಯೋ

122.	ರಾಗ: ಶುದ್ಧ ಸಾವೇರಿ	ತಾಳ: ಆದಿ
ಗುರು ನಿನ್ನ ಪಾದಾಶ್ರಯವೊಂದೆ ಗತಿಯೋ
ಬೇರೆ ಗತಿಯನು ಕಾಣೆವೋ ರಾಘವೇಂದ್ರ	ಪ
ಪರರಸೇವೆಯ ಮಾಡಿ ದಣಿದುಹೋದೆನೋ ಸ್ವಾಮಿ
ಪರರಸೊತ್ತಿಗೆ ಆಸೆಪಟ್ಟು ಕೆಟ್ಟೆನಯ್ಯ
ಕ್ರೂರತನದಿ ನಾನು ಧಾರುಣಿಯೊಳು ಮೆರೆದೆ
ಉರುತರದ ಅಜ್ಞಾನವಾವರಿಸಿಹುದೆನ್ನ	1
ಒಣಗಿದ ಮರದಂತೆ ಕ್ಷೀಣವಾಯಿತು ಕಾಯ
ಕಾಣೆನು ಕಾಯ್ವರ ನಿನ್ನ ಬಿಟ್ಟನ್ಯರ
ಗಣನೆಗತೀತನೆ ಗುಣಗಣಶಾಲಿಯೆ
ಕ್ಷಣಿಕ ಐಹಿಕಭೋಗದಾಸೆಯ ನೀಗಿಸೋ	2
ಮಡದಿ ಮಕ್ಕಳು ಎಲ್ಲ ಸಿರಿಯಿರುವ ತನಕ
ಕಡೆಗೆ ಹೋಗುವಾಗ ಬರುವರಾರಿಲ್ಲ
ಹಡೆದ ತಾಯ್ತಂದೆಗಳು ಕೂಡಿ ಬರುವುದಿಲ್ಲ
ಪುಡಿಮಣ್ಣೊಳು ದೇಹ ಬಿದ್ದು ಹೋಗುವದಲ್ಲಿ	3
ದುಡಿದು ಗಳಿಸಿದ ಧನವು ಹಿಂದೆ ಬರುವುದಿಲ್ಲ
ಬಿಡದೆ ನೆಚ್ಚಿದ ಭೃತ್ಯ ತಾ ಕಾಯ್ವುದಿಲ್ಲ
ದುಡಿದ ಪುಣ್ಯವು ಮಾತ್ರ ಬಿಡದೆ ಕಾಯುವುದಿಲ್ಲಿ
ಒಡೆಯ ಗುರುರಾಜರ ನಾಮವೆ ಗತಿಯಿಲ್ಲಿ	4
ಗೋವರ್ಧನೋದ್ಧಾರ ಸಿರಿಕೃಷ್ಣವಿಠಲನ
ಪಾವನಮೂರ್ತಿಯ ಬಿಡದೆ ಕೊಂಡಾಡುತ
ಭವಬಂಧ ಹರಿಸುತ ಭಕ್ತರ ಕಾಯುವ
ಗುರು ರಾಘವೇಂದ್ರರ ನಾಮವೆ ಗತಿಯಿಲ್ಲಿ	5
							

123 ಗುರುಗಳ ನೋಡಿರಿ ನೀವು

123.	ರಾಗ: [ತೋಡಿ]	ತಾಳ: [ಆದಿ]
ಗುರುಗಳ ನೋಡಿರಿ ನೀವು 
ಗುರುಗಳ ನೋಡಿರಿ ರಾಘವೇಂದ್ರ	ಪ
ಗುರುಗಳ ನೋಡಿ ಚರಣದಿ ಬಾಗಿ
ಕರೆಕರೆನೀಗಿ ವರಸುಖ ಪಡೆಯಿರಿ 	ಅ.ಪ
ಕಾಮಿತಫಲಗಳ ಇತ್ತು ಇತ್ತು 
ತಾಮಸಗುಣಗಳ ಕೆತ್ತಿ ಕೆತ್ತಿ
ರಾಮನಭಕ್ತಿಯ ಬಿತ್ತಿ ಬಿತ್ತಿ 
ಪ್ರೇಮದಿ ಶಿಷ್ಯರ ಸಲಹುವ ನಮ್ಮ	1
ಅಂತೆ ಕಂತೇ ಸಂತೆ ಮಾತು 
ಸಂತರ ಬೆಲ್ಲ ಇವರಲಿಲ್ಲ
ಎಂಥಾ ಭಕ್ತಿ ಅಂಥಾ ಫಲವು 
ಕುಂತೀ ಭೀಮನ ಪಂಥಾ ಪಿಡಿದು	2
ಇಲ್ಲ ಎಂಬಗೆ ಎಲ್ಲಾ ಇಲ್ಲಾ 
ನಲ್ಲ ಎಂಬಗೆ ಎಲ್ಲಾ ಉಂಟು
ಕ್ಷುಲ್ಲಸಂಶಯ ಹಲ್ಲು ಮುರಿದು 
ಫುಲ್ಲನಾಭನ ಬಲ್ಲವರೊಡನೆ	3
ಕಲಿಯೆಂದೇಕೆ ಅಳುವಿರಿ ನೀವು 
ಒಲಿಯಲು ಗುರುವು ಸುಳಿಯುವ ಹರಿಯು
ತುಳಿಯುತ ಕಲಿಯ ಬೆಳಸಿರಿ ಭಕ್ತಿ 
ಸುಲಭವು ಕೇಳಿ ಕಳೆಯದೆ ಕಾಲ	4
ಕೃಷ್ಣವಿಠಲನ ಇಷ್ಟ ಗುರುಗಳು 
ತೃಷ್ಠರಾದೆಡೆ ಇಷ್ಟ ಕರಗತವು
ಭಷ್ಟರಾಗದೆ ಶಿಷ್ಠರ ಸೇರುತ 
ಪುಷ್ಠಿಯಗೈಸುತ ಸುಷ್ಠುe್ಞÁನವ	5
							

124 ಗುರುರಾಜನ ನಾಮ ಪಾವನ ಗುಣ ನಾಮ

124.	ರಾಗ: ದರ್ಬಾರ್ ಕಾನಡ	ತಾಳ: ಆದಿ
ಗುರುರಾಜನ ನಾಮ ಪಾವನ ಗುಣ ನಾಮ	ಪ
ಪರಮಮಂಗಳನಾಮ ನಿರುತ ಕಲ್ಯಾಣಧಾಮ	ಅ.ಪ
ಯೋಗಿವಂದ್ಯನನಾಮ ಭಾಗವತಪ್ರೀಯನಾಮ
ರೋಗಹರ ಗುರು ರಾಘವೇಂದ್ರರನಾಮ	1
ಪತಿತಪಾವನನಾಮ ಯತಿಶ್ರೇಷ್ಠನನಾಮ
ಗತಿಹೀನರಿಗೆ ಸದ್ಗತಿಯ ತೋರುವ ನಾಮ	2
ಪರಮಾತ್ಮಪ್ರೀಯನಾಮ ಪರಮಪವಿತ್ರ ನಾಮ
ವರಮಂತ್ರಾಲಯನರಸನ ಶುಭನಾಮ	3
ಸಂತರ ಸುಧಾಮ ನಿಶ್ಚಿಂತರ ವರಧಾಮ
ಚಿಂತೆಯ ನಿರ್ನಾಮಗೈಯ್ಯುವ ಶುಭನಾಮ	4
ಭಕ್ತರಪೋಷಕನಾಮ ಶಕ್ತಶ್ರೀಗುರುನಾಮ
ಭಕ್ತರಕಾಯ್ವ ಶ್ರೀಕೃಷ್ಣವಿಠಲನನಾಮ	5
							

125 ಗುರುರಾಜರೆನಬೇಕು ಶ್ರೀ ರಾಘವೇಂದ್ರರ

125.	ರಾಗ: ಮೋಹನ	ತಾಳ: ಝಂಪೆ
ಗುರುರಾಜರೆನಬೇಕು ಶ್ರೀ ರಾಘವೇಂದ್ರರ
ಉರುತರದ ಜ್ಞಾನಹರಿಸಿ ಕಾಯುವರ	ಪ
ಭಕ್ತರಭೀಷ್ಟವ ನಿರುತ ಸಲ್ಲಿಸುವರ
ಭಕ್ತಾಭಿಮಾನಿ ಎಂದೆನಿಸಿ ಮೆರೆವವರ
ವ್ಯಕ್ತರಾಗುತ ತಾವು ಮಂತ್ರಾಲಯದೊಳು
ಮುಕ್ತಿಮಾರ್ಗವ ತೋರಿ ಸತತ ಕಾಯುವರ	1
ಭೂಸುರವಂದ್ಯರ ಭುವಿಯೊಳು ಖ್ಯಾತರ
ವಾಸುದೇವನಪಾದ ಬಿಡದೆ ಭಜಿಸುವರ
ಲೇಸಾಗಿ ಭಕ್ತರ ಸತತವು ಪೋಷಿಸಿ
ದೋಷರಾಶಿಗಳೆಲ್ಲ ಹರಿಸಿ ಕಾಯುವರ	2
ಪರವಾದಿಗಳನ್ನೆಲ್ಲ ನಿರುತ ನಿಗ್ರಹಿಸುತ
ಪರಮತತಿಮಿರಕ್ಕೆ ತರಣಿಯಂತೆಸೆವರ
ಪರಮಾತ್ಮನಪಾದ ಬಿಡದೆ ಭಜಿಸುವ ನಿತ್ಯ
ಪರಮಪಾವನರಾಗಿ ಇಳೆಯೊಳು ಮೆರೆವವರ	3
ಅಂಧ ಪಂಗು ಮೂಕ ಬಧಿರತ್ವ ಹರಿಸುವರ ಭವ-
ಬಂಧನವೆಂದೆಂಬ ಕಟ್ಟು ಬಿಡಿಸುವರ
ಒಂದೇಮನದಿ ಭಜಿಪ ಭಕ್ತರನಿಷ್ಟವ
ಚೆಂದದಿಂದಲಿ ಹರಿಸಿ ಬಿಡದೆ ಪಾಲಿಸುವರ	4
ಪಾಪಾತ್ಮರ ಪೊರೆವ ಪರಮಪುರುಷೋತ್ತಮರ
ತಾಪತ್ರಯಹರಿಪ ತಾಪಸೋತ್ತಮರ
ಆಪದ್ಭಾಂದವ ಶ್ರೀಕೃಷ್ಣವಿಠಲನ
ಪ್ರೇಮದಿ ಪೂಜಿಪ ಗುರು ರಾಘವೇಂದ್ರರ	5
							

126 ದೀನನಾದೆನು ನಾನು ಅನಾಥನಾದೆನು

126.	ರಾಗ: ಕೇದಾರಗೌಳ	ತಾಳ: ರೂಪಕ
ದೀನನಾದೆನು ನಾನು ಅನಾಥನಾದೆನು	ಪ
ದೀನರಕ್ಷಕ ಗುರು ರಾಘವೇಂದ್ರನೆ ಕಾಯೋ	ಅ.ಪ
ಆದರಿಸುವದಿಲ್ಲ ಆಧಾರವೆನಗಿಲ್ಲ
ಆಧಿವ್ಯಾಧಿಗಳೆನ್ನ ಭಾದಿಸುತಿವೆಯಲ್ಲ
ವೇದನೆ ಪಡುತಿಹೆ ಹಾದಿ ತೋರದು ಎನಗೆ 
ವೇದಾಂತವೇದ್ಯನೆ ಪಾದಸ್ಮರಣೆ ನೀಡೋ	1
ಕಾಯವು ದಣಿಯಿತು ಕಾಯುವರಾರಿಲ್ಲ
ಕಾಯಲಾರೆನು ಸ್ವಾಮಿ ಕಾಯವು ಸ್ಥಿರವಲ್ಲ
ಮಯಾಪಾಶದಿ ನಾನು ಭಯವ ಹೊಂದಿಹೆನಯ್ಯ
ಕಾಯಜಪಿತನಂಘ್ರಿ ತೋರಿ ಕಾಯೈಎನ್ನ	2
ತುಚ್ಚದೇಹಕ್ಕಾಗಿ ವೆಚ್ಚ ಮಾಡಿದೆ ಕಾಲ
ಸ್ವಚ್ಚಮನದಿ ನಿನ್ನ ಅರ್ಚಿಸದೆ ಕೆಟ್ಟೆ
ಕಿಚ್ಚಿನೊಳಗಣ ಕೀಟದಂದದಿ ಬೆಂದಿಹೆ
ಅಚ್ಯುತ ಸಿರಿಕೃಷ್ಣವಿಠಲನಂಘ್ರಿಯ ತೋರೋ	3
							

127 ನಂಬಿದೇ ಗುರುವರಾ ನಂಬಿದೇ

127.	ರಾಗ: [ಬಸಂತ್ ಬಹಾರ್]	ತಾಳ: [ಆದಿ]
ನಂಬಿದೇ ಗುರುವರಾ ನಂಬಿದೇ 	ಪ
ನಂಬಿದೆ ಗುರುಸಾರ್ವಭೌಮಾ
ತುಂಬುಮನದೊಳು ಹರಿಭಕ್ತಿ ನಿಸ್ಸೀಮ ||ಆಹಾ||
ಅಂಬುಜೋದ್ಭವಪಿತನ ಕಂಭದಿ ತೋರಿದ
ಶಂಬರ ಕುಲದೀಪ ಪ್ರಹ್ಲಾದ ವ್ಯಾಸಮುನಿಯೇ	ಅ.ಪ.
ದಾಸನೆಂದಡಿಗೆ ಬಿದ್ದೆನೋ ಈಗ
ದೋಷ ನಾಶಮಾಡೋ ಎನಗೆ ಬೇಗ ||ಆಹಾ||
ವಾಸುಕಿಶಯನನ ಬ್ಯಾಸರದೆ ಸ್ತುತಿಸಿ
ಈಶನ ಸರ್ವತ್ರವ್ಯಾಪ್ತಿಯನರುಹಿದ ಭೂಪ	1
ಪಾತಕರೊಳಗೆ ಅಗ್ರೇಸರನಾನು
ಪೂತಮಾಡುವರೊಳಗೆ ನಿಸ್ಸೀಮ ನೀನು ||ಆಹಾ||
ತಾತನಪ್ಪಣೆಯಂತೆ ವ್ಯಾಸರಾಜಾಎನಿಸಿ
ಖ್ಯಾತಿಯಿಂದಲಿ ತರ್ಕತಾಂಡವರಚಿಸಿ ಮೆರೆದೇ	 2 
ತಾಪಸಶ್ರೇಷ್ಠ ಬ್ರಹ್ಮಣ್ಯಕುವರನಾದೆ
ಶ್ರೀಪಾದರಾಯರ ಪ್ರಿಯಶಿಷ್ಯನಾದೆ ||ಆಹಾ||	
ಗೋಪಾಲಕೃಷ್ಣನ್ನ ಕುಣಿಕುಣಿದಾಡಿಸಿ
ಭೂಪನ ಕುಹಯೋಗ ಕಳೆದ ಯತಿಕುಲತಿಲಕ	3
ಮಧ್ವಶಾಸ್ತ್ರಗಳ ಮಂದರರಿಯದಿರಲು
ಮುದದಿಂದ ಪದಸುಳಾದಿಗಳ ರಚಿಸಿದೆ ನೀನು ||ಆಹಾ||
ಆದರದಿಂದಲಿ ಪುರಂದರ ಕನಕರಿಗೆ
ಸದುಪದೇಶವ ಕೊಟ್ಟು ಜಗದುದ್ಧಾರಮಾಡಿದ ಪ್ರಭುವೇ	4
ಮತ್ತೆ ಪುಟ್ಟಿದೆ ವೆಂಕಣ್ಣಭಟ್ಟ ನೆಂದೆನಿಸೀ
ಮತ್ತ ಕೇಸರಿಯಂತೆ ಮಧ್ವಶಾಸ್ತ್ರದಿ ಮೆರೆದೇ ||ಆಹಾ||
ಕತ್ತಲೆ ಅದ್ವೈತವಾದಗಳಿಗೆಲ್ಲಾ
ಕತ್ತಿಎನಿಸಿದ ಪರಿಮಳಾಚಾರ್ಯ ಗುರುವೇ	5
ವಿಪ್ರನು ದಿಟ್ಟತನದಿ ನಿನ್ನ ಗಂಧವ ತೇದುಕೊಡುಎನೆ
ಕ್ಷಿಪ್ರದಿ ತೋರಿದೆ ನಿನ್ನ ಮಹಿಮೆಯಜಗಕೇ ||ಆಹಾ||
ಅಪ್ಪ ಶ್ರೀರಾಮರ ಪೂಜಿಸಬೇಕೆಂದು
ಒಪ್ಪಿಸನ್ಯಾಸವ ರಾಘವೇಂದ್ರನಾದ	6
ಸಮುದದಿ ದೇಶದೇಶವ ಚರಿಸಿದೇ ಸಮ-
ಯದಿ ಸುಜನರಕ್ಲೇಶಗಳಳಿದೇ ||ಆಹಾ||
ಮೋದಮುನಿಯ ಗ್ರಂಥಗಳಿಗೆಲ್ಲ ಟಿಪ್ಪಣಿ ಮಾಡುತ
ಬುಧರಿಗೆ ತತ್ವಕನ್ನಡಿತೋರ್ದ ಗುಣಗಣನಿಧಿಯೇ	7
ಪರಿಪರಿ ಮಹಿಮೆಯ ತೋರುವ ಗುರುವೇ
ಸುರತರು ಅಂದದಿ ಹರಕೆಗಳೀವೆ ಪ್ರಭುವೇ ||ಆಹಾ||
ಮೂರೆರಡು ಒಂದುನೂರು ವರುಷ ಪರಿಯಂತ
ಸಾರಿಸಾರಿದವರ ಪೊರೆದು ಮೆರೆಯುವ ದಿವಿಜವಂದಿತ ಗುರು	8
ದಯದಿಂದ ನೋಡೆನ್ನ ದೀನೋದ್ಧಾರ
ಜೀಯನೆ ಭವಬಿಡಿಸು ಕರುಣಾಸಾರ ||ಆಹಾ||
ಜಯತೀರ್ಥವಾಯ್ವಂತರ್ಗತ ಶ್ರೀಕೃಷ್ಣವಿಠಲನ ಹೃ-
ದಯಮಂದಿರದಿ ತೋರೆನಗೆ ಗುರುಸಾರ್ವಭೌಮ	9
							

128 ನೀ ದಯಮಾಳ್ಪವ ನಿರ್ದಯನಾದರೆ

128.	ರಾಗ: ಶಹನ	ತಾಳ: ಝಂಪೆ
ನೀ ದಯಮಾಳ್ಪವ ನಿರ್ದಯನಾದರೆ
ಯಾರಿಗೆ ಮೊರೆ ಇಡಲೋ ಗುರುರಾಜ	ಪ
ಪಾಪಿಜನರ ಸೇರಿ ಪಾಪಕಾರ್ಯವಗೈದು
ತಾಪಪಡುತಲಿಹೆ ಪೊರೆವರ ಕಾಣೆನು
ತಾಪಸೋತ್ತಮ ತಂದೆ ಕೋಪವ ಮಾಡದೆ
ಪಾಪಕೂಪದಿಂದೆನ್ನನುದ್ಧರಿಸಿಕಾಯೋ	1
ಅತಿಹೀನ ನಾನೆಂದು ಖತಿಯನಾಂತೆಯ ತಂದೆ
ಮತಿಹೀನ ನಾನೆಂದು ನಿರ್ದಯನಾದೆಯ
ಪತಿತಪಾವನನಾದ ಯತಿಕುಲತಿಲಕನೆ
ಪತಿಕರಿಸಿ ಎನ್ನ ಕಾಯೋ ರಾಘವೇಂದ್ರ	2
ಭವದಬಾಳು ಇದು ಭಾವಿಸಿನೋಡಲು
ಕವಿದ ಮಂಜಿನತೆರದಿ ಕ್ಷಣಿಕವಲ್ಲವೆ ಸ್ವಾಮಿ
ಭವರೋಗಹರ ನಮ್ಮ ಕೃಷ್ಣವಿಠಲನ ಸರಿ
ಭುವನದೊಳಗೆ ಕಾಣೆ ಕರುಣಿ ರಾಘವೇಂದ್ರ	3
							

129 ನೋಡಿದೆ ನಾನೀಗ ಗುರುರಾಜನ ಬೇಗ

129.	ರಾಗ: [ಭೈರವಿ]	ತಾಳ: [ಆದಿ]
ನೋಡಿದೆ ನಾನೀಗ ಗುರುರಾಜನ ಬೇಗ	ಪ
ನೋಡಿ ಕೊಂಡಾಡಿ ಪಾಡಿ ಬೇಡುವೆನೀಗ	ಅ.ಪ
ಕರದೊಳು ದಂಡ ಕಮಂಡಲು ಪಿಡಿದಿಹ
ಕೊರಳೊಳು ತುಳಸಿ ಹಾರವ ಧರಿಸಿಹ
ನರರ ಸೇವೆಯಕೊಳ್ವ ನರಹರಿಪ್ರೀಯನ
ಕರುಣಾಸಾಗರ ನಮ್ಮ ಗುರು ರಾಘವೇಂದ್ರನ	1
ಕಲಿಕಲ್ಮಷದೂರ ಕುಜನಕುಠಾರನ
ಸುಲಲಿತ ಕರುಣಾಬ್ಧಿ ಬುಧಜನವಂದ್ಯನ
ಒಲಿದು ಭಕ್ತರ ಕಾಯ್ವ ಕಾರುಣ್ಯಶೀಲನ
ಜಲಜನಾಭನ ಪಾದ ಭಜಿಪ ಗುರುರಾಜನ	2
ಕಾಮಿತಗಳನೀವ ವರಕಾಮಧೇನುವೆ
ನೇಮದಿಂಭಜಿಪರ್ಗೆ ಚಿಂತಾಮಣಿಯೆನಿಪನ
ಕೋಮಲಾಂಗ ಸಿರಿಕೃಷ್ಣವಿಠಲನಪಾದ
ಪ್ರೆಮದಿಂಪೂಜಿಪ ಗುರು ರಾಘವೇಂದ್ರರ	3
							

130 ಬಂದಿಹೆ ಗುರುರಾಜರೆಡೆ ಸಾಗಿ

130.	ರಾಗ: ಸಾವೇರಿ	ತಾಳ: ಆದಿ
ಬಂದಿಹೆ ಗುರುರಾಜರೆಡೆ ಸಾಗಿ ಕುಂದಿದೆ ಭವದೊಳು ಬಹುವಾಗಿ	ಪ
ಹೊಂದಿದೆ ದುಃಖವನತಿಯಾಗಿ ತಂದೆಯೆ ಕಾಯೊ ನೀ ಅನುವಾಗಿ	ಅ.ಪ
ಹಳಸಿದಅನ್ನದತೆರನಾಗಿ ಗಳಿಸಿದೆ ಪಾಪವನತಿಯಾಗಿ
ಗಾಳಕೆಸಿಕ್ಕಿದಮೀನಾಗಿ ತೊಳಲಿದೆ ನಾನು ಬಹುವಾಗಿ	1
ಸಂಚಿತಕರ್ಮವು ಬಿಡದಾಗಿ ಚಿಂತೆಯೊಳ್ ತೊಳಲಿದೆ ಹೆಚ್ಚಾಗಿ
ವಂಚಿತನಾದೆನು ಚೆನ್ನಾಗಿ ನಿನ್ನ ಸಂತತ ಬೇಡುವೆ ಶಿರಬಾಗಿ	2
ಪ್ರಾರಬ್ಧಕರ್ಮದ ಫಲವಾಗಿ ಪರಹಿಂಸೆ ಮಾಡಿದೆ ಹುಲುಸಾಗಿ
ಯಾರನು ಕಾಣೆನು ಹಿತರಾಗಿ ಗುರುರಾಜನೊಬ್ಬನೆ ಅನುರಾಗಿ	3
ಭಯಶೋಕಮೋಹಕ್ಕೊಳಗಾಗಿ ಕಾಯವು ದಣಿಯಿತು ಬಹಳಾಗಿ
ಬಯಲಡಂಭಕೆ ಮರುಳಾಗಿ ಅನ್ಯಾಯಗೈದೆನು ಅತಿಯಾಗಿ	4
ಪರಿಪರಿಕಷ್ಟವ ತ್ವರೆಯಾಗಿ ಹರಿಸುವ ಗುರುರಾಜ ಅತಿತ್ಯಾಗಿ
ಸಿರಿಕೃಷ್ಣವಿಠಲನ ಮರೆಹೋಗಿ ಗುರು ಸೇವೆ ಮಾಡುವ ಅನುವಾಗಿ	5
							

131 ಭಕುತನ ಭಾಗ್ಯವಿದು ಗುರುರಾಜರ ಪೂಜಿಪುದು

131.	ರಾಗ: [ರಾಗಮಾಲಿಕೆ]	ತಾಳ: [ಆದಿ]
ಭಕುತನ ಭಾಗ್ಯವಿದು ಗುರುರಾಜರ ಪೂಜಿಪುದು	ಪ
ಭ್ರಾಂತಿಯನೀಗಿಸಿ ಶಾಂತಿಯನೀಡುತ
ಚಿಂತೆಯ ಹರಿಸುತ ಕಂತುಪಿತನದಾಸ
ಸಂತರಭೀಷ್ಟರ ನಿರಂತರ ಸಲಿಸುವ
ಶಾಂತಮೂರುತಿ ನಮ್ಮ ರಾಘವೇಂದ್ರರ ಪೂಜೆ	1
ಅರ್ತಿಯಿಂದಲಿ ತನ್ನ ಪ್ರಾರ್ಥನೆಗೈಯ್ಯುವ
ಆರ್ತರಾದವರ ಇಷ್ಟಾರ್ಥವ ಸಲಿಸುತ
ಆರ್ತರಕ್ಷಕÀ ನಮ್ಮ ಗುರು ರಾಘವೇಂದ್ರರ
ಕೀರ್ತಿಯ ಪಾಡುತ ಪ್ರಾರ್ಥನೆಗೈವುದು	2
ಕರುಣಾಮೃತದ ಧಾರೆಯ ಹರಿಸುತ
ಶರಣರ ಪೊರೆಯುವ ಪರಮ ದಯಾಕರ
ಕರುಣಾಭರಣ ಶ್ರೀಕೃಷ್ಣವಿಠಲನ
ಚರಣಸೇವೆಯಮಾಳ್ಪ ರಾಘವೇಂದ್ರರ ಭಜನೆ	3
							

132 ಮರೆತು ಬಾಳಲಿಬಹುದೆ ಗುರು ರಾಘವೇಂದ್ರರನು

132.	ರಾಗ: ಬಿಲಹರಿ	ತಾಳ: ತ್ರಿಪುಟ
ಮರೆತು ಬಾಳಲಿಬಹುದೆ ಗುರು ರಾಘವೇಂದ್ರರನು	ಪ
ಅರಿತು ನೋಡೆಲೋ ಮನುಜ ಬರಿದೆ ಭ್ರಾಂತಿಯದೇಕೋ	ಅ.ಪ
ಬೆಳಗೂಬೈಗೂ ಎಂದೂ ಅಳಿದು ಹೋಗೋದು ಕಾಯ
ಬಾಳನಾವೆಯು ಮುರಿದು ಹರಿದು ಹೋಗೋದು ಇರದೆ
ಕಾಳಮೃತ್ಯುವು ಬಿಡದೆ ಸೆಳೆದುಕೊಂಡೊಯ್ಯುವುದು
ಬಾಳಹಸನನುಗೈವ ಗುರುರಾಜರನು ಭಜಿಸೋ	1
ನಂಬದಿರು ಈ ಕಾಯ ಅಂಬುಮೇಲಿನ ಗುಳ್ಳೆ
ತುಂಬಿಬರಲುಕಾಲ ಇಂಬುತೋರುವರಿಲ್ಲ
ಹುಂಬತನವನು ಬಿಟ್ಟು ಅಂಬುಜಾಕ್ಷನಪಾದ
ಇಂಬುತೋರುವ ಗುರುವ ನಂಬಿ ಭಜಿಸೆಲೋ ಮನುಜ	2
ಹಳೆಯ ಅರಿವೆಯು ಇಡದೆ ಕಳೆದು ಬಿಸಡುವ ತೆರದಿ
ಅಳಿದುಹೋಗೋದು ಕಾಯ ತಿಳಿದು ನೋಡೆಲೋ ಮರುಳೆ
ಇಳೆಯೊಳು ಶ್ರೀಕೃಷ್ಣವಿಠಲನ ಚರಣವನು
ತಿಳಿದು ಭಜಿಸುತಲಿನ್ನು ಗುರುಕರುಣ ಪಡೆಯೋ	3
							

133 ಮುನ್ನಮಾಡಿದ ಪಾಪಕಾರ್ಯಕ್ಕೆ

133.	ರಾಗ: ಮೋಹನ 	ತಾಳ: ತ್ರಿಪುಟ
ಮುನ್ನಮಾಡಿದ ಪಾಪಕಾರ್ಯಕ್ಕೆ 
ಇನ್ನು ಪಶ್ಚಾತ್ತಾಪವ ಹೊಂದಯ್ಯ	ಪ
ಇನ್ನಾದರು ಗುರು ರಾಘವೇಂದ್ರರಪಾದ
ಚೆನ್ನಾಗಿ ನೀನು ಭಜಿಸಯ್ಯ	ಅ.ಪ
ಸುಳ್ಳುಹೇಳಿದ ಪಾಪ ಕಳ್ಳತನದ ಪಾಪ
ಒಳ್ಳೆಯವರ ಬೈದು ಘಳಿಸಿದ ಪಾಪ
ಬಾಳುವಜನಗಳ ಹಾಳುಮಾಡಿದ ಪಾಪ
ಕೀಳುಜನರಸೇವೆಗೈದಂಥ ಪಾಪ	1
ಕೇಳದೆ ಹರಿಕಥೆಯ ತೆಗಳಿದ ಪಾಪ
ಒಲವಿನಿಂ ಗುರುವನು ಭಜಿಸದ ಪಾಪ
ಆಳುವಧಣಿಗೆ ದ್ರೋಹಗೈದಂಥ ಪಾಪ
ಅಳಲಹರಿಸುವ ಗುರುವ ನೆನೆಯದ ಪಾಪ	2
ಪರಧನ ಪರಸತಿಗಾಶಿಸಿದ ಪಾಪ
ಪರಮಾತ್ಮನಂಘ್ರಿಯ ಸೇವಿಸದ ಪಾಪ
ಪರರಸೊತ್ತಿಗೆ ಆಸೆಗೈದಂಥ ಪಾಪ
ಪರಿಪರಿವಿಧದಲ್ಲಿ ಗಳಿಸಿದ ಪಾಪ	3
ಉರುತರ ಗರ್ವದಿ ಮೆರೆದಂಥ ಪಾಪ
ಊರ್ವಿಸುರರನು ತೆಗಳಿದ ಪಾಪ
ಗುರುರಾಘವೇಂದ್ರರ ಚರಣಕಮಲಗಳ
ನೆರೆನಂಬಿಭಜಿಪರ ನಿಂದಿಪ ಪಾಪ	4
ಮದಮಾತ್ಸರ್ಯವೆಂಬುವ ಪಾಪ
ಕ್ರೋಧದಿ ಸುಜನರ ಬೈದಂಥ ಪಾಪ
ಮೋದದಿಂದಲಿ ಪರರ ಹಿಂಸಿಸಿದ ಪಾಪ
ಸದಮಲ ಗುರುವನು ಸೇವಿಸದ ಪಾಪ	5
ಉದರ ಪೋಷಣೆಗಾಗಿ ಮೋಸಗೈದಂಥ ಪಾಪ
ಶ್ರದ್ದೆಯಿಂ ಸುಜನರ ಸೇವೆಗೈಯ್ಯದ ಪಾಪ
ಯದುಕುಲನಂದನ ಸಿರಿಕೃಷ್ಣವಿಠಲನ
ಪಾದಕಮಲಗಳ ಭಜಿಸದ ಪಾಪ	6
ಈ ಕೀರ್ತನೆಯಲ್ಲಿ 6 ನುಡಿಗಳಿವೆ. ಸರಿ 
ಸಂಖ್ಯೆಯ ನುಡಿಗಳು ಹರಿದಾಸರ 
ರಚನೆಗಳಲ್ಲಿ ಅಪರೂಪ. 
ಮೂಲದಿಂದ ಪ್ರತಿ ಮಾಡುವಾಗ 
ಒಂದು ನುಡಿ ಬಿಟ್ಟು ಹೋಗಿರುವ 
ಸಾಧ್ಯತೆ ಇದೆ
							

134 ಮೃತ್ಯುವೆಂಬುವ ಕುತ್ತು ಬೆನ್ಹತ್ತಿ ಬರುತಿಹುದು

134.	ರಾಗ: ಕಾಂಬೋಜಿ	ತಾಳ: ಝಂಪೆ
ಮೃತ್ಯುವೆಂಬುವ ಕುತ್ತು ಬೆನ್ಹತ್ತಿ ಬರುತಿಹುದು	ಪ
ಎತ್ತಪೋದರು ಬಿಡದು ಸುತ್ತಿಕೊಂಡಿಹುದು	ಅ.ಪ
ಬಾಳಕಡಲಲಿ ಮುಳುಗಿ ತೊಳಲಿದರೆ ಏನಹುದು
ಮಳಲಬೊಂಬೆಯತೆರದಿ ಕಳಲಿಹೋಹುದು ದೇಹ
ಬಳಲಿಬೆಂಡಾಗುತಲಿ ಕಳವಳಿಸಲೇನಹುದು
ಅಳಲಹರಿಸುವ ನಮ್ಮ ಗುರುರಾಜನ ಭಜಿಸೋ	1
ನೆಚ್ಚಿಬೆಳಸಿದ ದೇಹ ಕಿಚ್ಚಿನೊಳು ಬೇಯ್ವಾಗ
ಮೆಚ್ಚಿಗಳಿಸಿದ ಧನವು ಮುಚ್ಚಿ ಕಾಯ್ವದೇ ನಿನ್ನ
ನೆಚ್ಚಬೇಡವೋ ಈ ಕಾಯ ಎಚ್ಚೆತ್ತುಕೊಂಡಿರೋ
ಸ್ವಚ್ಚಮನದಿ ಇನ್ನು ಅರ್ಚಿಸೋ ಗುರುಗಳ	2
ಮರಣಕಾಲದಿ ನಿನ್ನ ಹರಣವ ಒಯ್ವಾಗ
ಶರಣುಶರಣೆಂದರೆ ಬಿಡುವರೇ ಮನುಜಾ
ಕರುಣಾಸಾಗರ ನಮ್ಮ ಸಿರಿಕೃಷ್ಣವಿಠಲನ
ಸ್ಮರಣೆಮಾಡುತಲಿನ್ನು ಗುರುರಾಜರನು ಭಜಿಸೋ	3
							

135 ಯಾತಕೆ ಮರೆತೆನ್ನ ಯತಿಕುಲ ತಿಲಕನೆ

135.	ರಾಗ: [ರಂಜಿನಿ]	ತಾಳ: [ಆದಿ]
ಯಾತಕೆ ಮರೆತೆನ್ನ ಯತಿಕುಲ ತಿಲಕನೆ
ಪ್ರೀತಿಯ ಬಯಸುತ ಬಂದೆ	ಪ
ವಾತಸುತಗತಿಪ್ರಿಯದೂತನೆ ನಾಥನೀನೆಂತೆಂದು ನಂಬಿದೆ
ವಾತಪಿತನಡಿ ಮತಿಯ ಪ್ರೇರಿಸೋ 
ಖ್ಯಾತಗುರು ಶ್ರೀ ರಾಘವೇಂದ್ರನೆ	ಅ.ಪ.
ದೇಶದೇಶದಿ ಬರುವ ದಾಸಜನರÀಘ
ನಾಶಗೈಸಿ ಪೊರೆವೊ ದಾಶರಥಿ ಕಿಂಕರಾ
ಶೇಷಶಯನನದೋಷ e್ಞÁನ ವಿಶೇಷದಿಂದಲಿ ನ್ಯಾಸಮಾಡಿದೆ
ದಾಸನೆನ್ನಯ ದೋಷ ಕಳೆಯುತ ಬೀಸು ದೃಷ್ಟಿಯ ಭೂಸುರೋತ್ತಮ	1
ಛಲದಿ ಭಕ್ತಿಯ ಮಾಡಿ ಒಲಿಸಿ ಹರಿಯ ಪಾದ
ಲಲಿತಕೀರ್ತಿಲಿ ಮೆರೆದೆ ಭಳಿರೆ ಭಳಿರೆ ಗುರುವೇ
ಗೊಲ್ಲಕೃಷ್ಣನ ಚೆಲ್ವ ನಾಟ್ಯದಿ ನಿಲ್ಲಿಸಿದ ನಿನಗೆಲ್ಲಿ ಸರಿಯೈ
ನಲ್ಲ ಯತಿವರ ಕಾಲಿಗೆರಗುವೆ ಶೀಲ ಭಕುತಿಯ ಪಾಲಿಸೀಗಲೆ	2
ವ್ಯಾಸಮುನಿಯು ಎನಿಸಿ ಶ್ವಾಸಮತವ ಮೆರೆಸಿ
ದೋಷ ಹರಿಸಿ ಧೊರೆಗೆ ದಾಸ ದೀಕ್ಷೆಯ ತೋರ್ದೆ
ಈಶದಾಸರ ಭೇದ ವಾದವ ಆಶುಕವಿತದಿ ವಿಶದಪಡಿಸಿದೆ
ಶ್ರೀಶಶಯನನಾವೇಶ ಸಂಯುತ ಭೇಶಕಾಂತಿ ವಿಶಾಲಕರುಣಿಯೆ	3
ದಾತ ಈತನೆಂಬ ಖ್ಯಾತಿ ಬಿರುದು ನಿನಗೆ
ಪ್ರೀತಿಯಿಲ್ಲವೇ ಗುರುವೇ ಜೋತು ಬಂದೆ ಅಡಿಗೇ
ನಾಥ ಜಯಮುನಿ ಪ್ರೀತಿಯ ಪಡೆಯುತ ಗೀತೆ ಬೋಧೆಯ ನೀತಿ ಪೇಳಿದೆ
ಏತಕೀತಡ ಮಾತಲಾಲಿಸು ದೂತನಿನ್ನವ ಪೂತಕಾಯನೆ	4
ಪರಮ ಭಕ್ತರ ವೃಂದ ನಿರುತ ನಮಿಪ ಚೆಂದ
ಅರಿಯೆ ವರ್ಣನೆ ಎಂದ ಸುರಿಸು ಭಕ್ತಿಯ ಗಂಧ
ಚಾರು ಮಂಗಳಚರಿತ ನರಹರಿ ಭಾರಿಸೇವಿಪ ಸೂರಿ ಶೇಖರ 
ಬೀರಿಕರುಣವ ಭಾರತೀಶನ ಸಾರಶಾಸ್ತ್ರದಿ ತೋರು ತತ್ವಾರ್ಥ	5
ಲೋಕ ಹರಕೆ ನೀಡಿ ಸಾಕಿ ಸಲಹೆ ಹೆಜ್ಜೆ
ನೂಕಿ ದುರಿತರಾಶಿ ಸಾಕುಹರಿಯ ತೋರಿ
ಶ್ರೀಕರಾರ್ಚಿತ ಪಾದಪಲ್ಲವ ಪಾಕನಾಶನ ಏಕ ವೀರನ
ಏಕಮನಸಿಲಿ ಧ್ಯಾನಿಪ ಧೊರೆ ನಾಕ ಋಷಿಗತಿಪ್ರಿಯ ಶಿಷ್ಯನೆ	6
ಪಾಹಿ e್ಞÁನದ ಖಣಿಯೆ ಪಾಹಿ ಭಕ್ತರ ನಿಧಿಯೆ
ಪಾಹಿ ಮತಿಮತಸ್ತಂಭ ಪಾಹಿ ಶ್ರೀ ಹರಿಯ ದೂತ
ಪಾಹಿಸುಗುಣೋದಾರ ಮಹಿಮನೆ ಪಾಹಿನತಜನ ಭಾರವಹಿಪನೆ
ಪಾಹಿಜಯಮುನಿ ವಾಯುವಂತರ ಗೇಹ ಸಿರಿಕೃಷ್ಣವಿಠಲ ಭಜಕ	7
							

136 ಯಾರಗೊಡವೆ ಯಾಕೋ

136.	ರಾಗ: ಕೇದಾರಗೌಳ	ತಾಳ: ತ್ರಿಪುಟ
ಯಾರಗೊಡವೆ ಯಾಕೋ ಮತ್ತಿನ್ನಾರ ಸಂಗವೇಕೋ	ಪ
ನರಹರಿಭಕ್ತ ಶ್ರೀ ಗುರು ರಾಘವೇಂದ್ರರ ದಯವೊಂದಿದ್ದರೆ ಸಾಕೋ	ಅ.ಪ
ಯಾರು ಒಲಿದರೇನು ಮತ್ತಿನ್ನಾರು ಮುನಿದರೇನು
ಹರಿದಾಸಾಗ್ರಣಿ ಗುರು ರಾಘವೇಂದ್ರರ ದಯವಿರಲು	1
ಯಾರು ಪೊಗಳಲೇನು ಮತ್ತಿನ್ನಾರು ತೆಗಳಲೇನು
ಪರಮದಯಾಕರ ಯತಿರಾಜೇಂದ್ರರ ದಯವೊಂದಿರಲು	2
ಯಾರ ಪ್ರೇಮವೇಕೋ ಮತ್ತಿನ್ನಾರ ದ್ವೇಷವೇಕೋ
ಪರಮಾತ್ಮನಪ್ರಿಯ ಗುರುಸಾರ್ವಭೌಮರ ಸೇವೆಯೊಂದಿರಲು	3
ಮಾನ ಕಳೆದರೇನು ಮತ್ತೆ ಜ್ಞಾನಿ ಎಂದರೇನು
ಮಾನಿತ ಶ್ರೀ ಗುರು ರಾಘವೇಂದ್ರರ ಸೇವೆಯೊಂದೆ ಸಾಕು	4
ಅರ್ಥ ದೊರೆತರೇನು ವಿತ್ತ ದುವ್ರ್ಯರ್ಥವಾದರೇನು
ಆರ್ತರರಕ್ಷಿಪ ಗುರುವರೇಣ್ಯರ ಸೇವೆಯೊಂದೆ ಸಾಕು	5
ಸತಿಯುಸುತರು ಅವರು ಮತ್ತಿನ್ನು ತೊರೆದು ಪೋದರೇನು
ಗತಿಯನುತೋರುತ ಸತತವುಪಾಲಿಪ ಯತಿವರೇಣ್ಯರ ಸೇವೆಯೊಂದಿರಲು	6
ಭಕ್ತರನ್ನ ಪೊರೆವ ಮತ್ತವರಘವನೆಲ್ಲ ತರಿವ
ಶಕ್ತಶ್ರೀಕೃಷ್ಣವಿಠಲನಂಘ್ರಿಯ ಸೇವೆಯೊಂದೆ ಸಾಕು	7
							

137 ರಾಘವೇಂದ್ರರ ಚರಣ ಅನುದಿನವು ಭಜಿಸೊ

137.	ರಾಗ: ಕಾಂಬೋಜಿ	ತಾಳ: ಝಂಪೆ
ರಾಘವೇಂದ್ರರ ಚರಣ ಅನುದಿನವು ಭಜಿಸೊ	ಪ
ಯೋಗಿವಂದ್ಯನ ಚರಣದಲಿ ಮನವ ನಿಲಿಸೊ	ಅ.ಪ
ಭಕ್ತರಘವನುಹರಿಸಿ ಸತತ ಪೊರೆಯುವ ಚರಣ
ಭಕ್ತನೋರ್ವಗೆ ಬಂದ ಅಪಮೃತ್ಯು ಹರಣ
ಭಕ್ತಿಯಿಂಪೂಜಿಸಲು ಗತಿಯತೋರುವ ಚರಣ
ಭಕ್ತಬಾಂಧವ ಗುರುವಿನೊಳು ಅತಿಶ್ರೇಷ್ಠ ಚರಣ	1
ರಾಮನಾಮವ ಬಿಡದೆ ಭಜಿಸುವಾ ಗುರುಚರಣ
ವಿಮಲಜ್ಞಾನವಿತ್ತು ಪೊರೆವ ಚರಣ
ಕಾಮಧೇನುವಿನಂತೆ ನಿರುತ ಭಕ್ತರ ಸಲಹಿ
ಕಾಮಿತಾರ್ಥವನಿತ್ತು ಕಾಯ್ವ ಗುರುಚರಣ	2
ಭುವಿಯ ಮೋಹವ ತ್ಯಜಿಸಿ ಭವ್ಯಯತಿಎಂದೆನಿಸಿ
ಭುವಿಜೆಯರಸನ ಸ್ಮರಿಪ ದಿವ್ಯಚರಣ
ಭಾವಶುದ್ಧಿಯಿಂ ಇರುತ ಕವಿಶ್ರೇಷ್ಠನೆಂದೆನಿಸಿ
ಭವದಬಂಧವನೀಗಿ ಕಾಯ್ವ ಶುಭಚರಣ	3
ಮಂತ್ರಾಲಯದೊಳು ಮುದ್ದು ಬೃಂದಾವನದಿ
ಸಂತಸದಿ ನೆಲೆಸಿರುವ ಗುರುರಾಜ ಚರಣ
ಸಂತತವು ಭಕ್ತರನು ಬಿಡದೆಪಾಲಿಪ ಚರಣ
ಚಿಂತೆಯೆಲ್ಲವನೀಗಿ ಕಾಯ್ವ ಚರಣ	4
ಕಷ್ಟವೆಲ್ಲವಹರಿಸಿ ಶಿಷ್ಠರನು ಸಲಹುತ್ತ
ಶ್ರೇಷ್ಠಮಾರ್ಗವ ತೋರಿ ಸತತಪಾಲಿಪ ಚರಣ
ಸೃಷ್ಠೀಶ ಶ್ರೀಕೃಷ್ಣವಿಠಲನನು ಭಜಿಸುತ್ತ
ಪ್ರೇಷ್ಠಜನರನು ಪೊರೆವ ಶ್ರೇಷ್ಠ ಗುರುಚರಣ	5
							

138 ರಾಜರ ನೋಡಿದಿರಾ ಗುರುರಾಜರ

138.	ರಾಗ: [ದರ್ಬಾರಿ ಕಾನಡ]	ತಾಳ: [ಆದಿ]
ರಾಜರ ನೋಡಿದಿರಾ ಗುರುರಾಜರ ನೊಡಿದಿರಾ	ಪ
ರಾಜರ ನೊಡಿ ಭಕುತಿಯ ಮಾಡಿ
ಗೋಜನ ಕರುಣಕೆ ಭಾಜನರಾದೀರಾ	ಅ.ಪ.
ತುಂಗಮಹಿಮರು ನರಸಿಂಗ ಭಕ್ತರು
ಭಂಗರಹಿತರು ಸುರಸಂಘಮಾನಿತರು	1
ಯೋಗಿವರ್ಯರು ಬಹು ತ್ಯಾಗಶೀಲರು
ರಾಗಶೂನ್ಯರು ಭವರೋಗವೈದ್ಯರು	2
ತಂತ್ರಮಲ್ಲರು ಬಹುಗ್ರಂಥಕರ್ತೃಗಳು
ಮಂತ್ರಸಿದ್ಧರು ಮಹಂತಮಠದವರು	3
ಶಾಂತಮೂರ್ತಿಗಳು ವೇದಾಂತಬಲ್ಲವರು
ದಾಂತಶೇಖರರು ಏಕಾಂತಭಕ್ತರು	4
ರಾಘವೇಂದ್ರರು ಇವರೆ ವ್ಯಾಸರಾಜರು
ಭಾಗ್ಯವಂತರು ಪ್ರಹ್ಲಾದರಾಜರು	5
ದೂಡು ಸಂಶಯಾ ನೀ ಮಾಡು ಭಕುತಿಯಾ
ಬೇಡು ಬಯಕೆಯಾ ಪೋಗಾಡು ದುಃಖವಾ	 6
ಸೃಷ್ಠಿನಾಯಕಾ ಶ್ರೀಕೃಷ್ಣವಿಠಲನ
ಶ್ರೇಷ್ಠಭಕ್ತರೂ ಸಂತುಷ್ಠಿ ನೀಡುವರು	7
							

139 ಸಾಕಿನ್ನು ಸ್ವಸ್ಥದಿ ಇರು

139.	ರಾಗ: ಭೈರವಿ	ತಾಳ: ತ್ರಿಪುಟ
ಸಾಕಿನ್ನು ಸ್ವಸ್ಥದಿ ಇರು ಕಂಡ್ಯ ಮನವೆ
ಏಕಿಂತು ತೊಳಲುವೆ ಬರಿದೆ ನೀ ಮನವೆ	ಪ
ಏಕಾಗ್ರಚಿತ್ತದಿ ಗುರು ರಾಘವೇಂದ್ರರ
ಏಕೆ ನೀ ನೆನೆಯದೆ ಕೊರಗುವೆ ಮನವೆ	ಅ.ಪ
ದೇಹವೆಂಬುದು ಇದು ಎಲುಬಿನ ಗೂಡು
ಊಹಿಸಿ ನೋಡಲು ಪಾಪದ ಬೀಡು
ದೇಹದಭಿಮಾನವ ಬಿಡದೆ ಈಡ್ಯಾಡು
ವಿಹಿತಮಾರ್ಗದಿ ನೀ ಗುರುವ ಕೊಂಡಾಡು	1
ಭವಬಂಧದೊಳು ನೀ ಬಳಲಲಿಬೇಡ
ಭವದೂರ ಗುರುವನು ಮರೆಯಲಿಬೇಡ
ಪವನಪತಿಯ ಪಾದಸ್ಮರಿಸದೆ ಇರಬೇಡ
ದುರ್ವಾದಿಗಳ ಕೂಡೆ ವಾದವು ಬೇಡ	2
ಅಧಿಕಾರ ಸಂಪತ್ತು ತಾ ಸ್ಥಿರವಲ್ಲ
ಬಾಧೆಗೊಳಿಪುದು ಪರರ ತಾ ಒಳಿತಲ್ಲ
ಅಧಿಕಾರ ಹೋದಂತು ಕೇಳುವರಾರಿಲ್ಲ
ಅಧಿಕ ಪುಣ್ಯವ ಗಳಿಸೆ ಬಹಳ ಲೇಸಲ್ಲ	3
ತುತ್ತಿನಚೀಲವ ನಂಬಲಿ ಬೇಡ
ಮತ್ತಿದಕಾಗಿ ನೀನಾಶಿಸಲಿ ಬೇಡ
ಮತ್ತನಾಗುತ ನೀ ತಿರುಗಲಿ ಬೇಡ
ಉತ್ತಮ ಗುರುವನು ಮರೆಯಲಿಬೇಡ	4
ಅಳಿವು ಉಳಿವು ಎಲ್ಲ ದೇವರಧೀನ
ಅಳಿವ ಕಾಯವು ಒಂದೇ ಮನುಜಗಧೀನ
ಇಳೆಯೊಳು ಶ್ರೀ ಕೃಷ್ಣವಿಠಲನ ಧ್ಯಾನ
ತಿಳಿದು ನೀ ಮಾಡುತ ಪಡೆಯಲೋ ಜ್ಞಾನ	5
							

140 ಸೋಜೀಗರೊಳಗತಿ ಸೋಜೀಗ

140.	ರಾಗ: [ಶಂಕರಾಭರಣ]	ತಾಳ: [ಮಿಶ್ರನಡೆ]
ಸೋಜೀಗರೊಳಗತಿ ಸೋಜೀಗ ರಾಘವೇಂದ್ರಾ ಗುರು	ಪ
ಸೋಜೀಗವಲ್ಲವೆ ರಾಜಾ ಗುರುವು ನೀನು
ನೈಜರೂಪದಿ ಬಂದು ಮಾಜಾದೆ ಪೊರೆವುದು	 ಅ.ಪ
ಬೆಂಬಲ ನಿನಗೆಂದು ಸ್ತಂಭದಿ ಹರಿಬಂದ
ಬೆಂಬಲ ನೀ ನಮಗೆ ಇಂಬುಪಾಲಿಸು ಗುರುವೇ
ನಂಬೀದ ಜನಗಣ ಡಿಂಭದಿ ನೀ ಮೂಡಿ
ಹಂಬಲವಳಿಪುದು ಅಂಬಕದೊಳು ಕಂಡೇ	1
ಇಲ್ಲ ಹರಿಯು ಎಂಬ ಕ್ಷುಲ್ಲಸಂಶಯವೆಂಬ
ಹಲ್ಲುಮುರಿದು ಭಕ್ತರಲ್ಲಿ ತುಂಬುವೆ ಭಕ್ತಿ
ಇಲ್ಲದಿರಲು ನೀನು ಕಳ್ಳ ಕಲಿಯು ಜಗ-
ವೆಲ್ಲ ತುಂಬುತ ಶೃತಿ ಸುಳ್ಳು ಎನಿಸುತಿದ್ದಾ	2
ನಿರುತನೀಡುತ ಹರಿಕೆ ಕರೆದು ಪೊರೆವೆ ಜನರ
ಸರಿಯು ಕಾಣೆನು ನಿನಗೆ ಹರಿಯ ಕಿಂಕರ ಶರಣು
ಮರುತದೇವನಮತ ಮೆರೆಸಿ ಕುಣಿಸುತ್ತಿರುವೆ
ಶರಣಜನರ ಪೊರೆವ ಪರಮಾಪ್ತಸಿದ್ಧವೋ	3
ಹುಣ್ಣು ಅಳಿಸಿ ಭಕ್ತಿ ಹಣ್ಣು ತಿನ್ನಿಸಿ e್ಞÁನ
ಕಣ್ಣು ಪಾಲಿಪ ಗುರು ಮಣ್ಣುಗೂಡಿಸೊ ಭವವ
ಸಣ್ಣವರೆಮ್ಮ ಶಂಕುಕರ್ಣನೆ ಸಲಹೈಯ್ಯ
ಗಣ್ಯರೊಳಗೆಗಣ್ಯ ಪೂರ್ಣಪ್ರಜ್ಞರಪ್ರೀಯಾ	4
ಹಿಂದೆ ಹೋಯಿತು ಹೊತ್ತು ಮುಂದೆ ಕಾದಿದೆ ಮೃತ್ಯು
ಇಂದು ಭಾರವ ಪೊತ್ತು ಕಂದರೆಮ್ಮನು ಕಾಯೋ
ಇಂದ್ರತಾತನ ಹೃದಯಮಂದೀರದಲಿ ನಲಿವ
ಇಂದಿರೇಶ ಕೃಷ್ಣವಿಠಲರಾಯನ ತೋರು	5
38. ಕೃಷ್ಣವೇದವ್ಯಾಸವಿಠಲ - ಅಪ್ರಕಟಿತ ಕೃತಿಗಳು
							

141 ಗುರುಪಾದವ ಸ್ಮರಿಸಿ

141.	ರಾಗ: ಕಮಾಚ್ 	ತಾಳ: ಆದಿ
ಗುರುಪಾದವ ಸ್ಮರಿಸಿ 	ಪ
ಗುರುರಾಘವೇಂದ್ರರ ಭಜಿಸಿ 	ಅ. ಪ
ಗುರುಪಾದ ಸ್ಮರಿಸುತ್ತ
ಮರುತನ ಪ್ರೀತಿಗಳಿಸುತ್ತ
ತ್ವರಿತದಿ ಶ್ರೀಹರಿ ಕರುಣಕ್ಕೆ
ಪಾತ್ರರಾಗೀರೋ 	1
ಗುರುಹಿರಿಮೆ ಅರಿತವರೆ
ಹರಿಯಕರುಣಕ್ಕೆ ಪಾತ್ರರು
ಗುರುಪಾದ ಸ್ಮರಣೆಯಿಂ
ಸುರಲೋಕ ಪೊಂದಿರೋ 	2
ಮರುತಮತಸಾರುತ್ತ
ಸಿರಿಕೃಷ್ಣವೇದವ್ಯಾಸವಿಠಲನ
ಕರುಣಪಡೆದ ಗುರುರಾಜರ
ಚರಿತೆಪಾಡುತ ಪುನೀತರಾಗಿರೋ 	3
							

142 ಗುರುವೆ ನಿಮ್ಮ ಕರುಣ

142.	ರಾಗ: ಶಹನ 	ತಾಳ: ಆದಿ
ಗುರುವೆ ನಿಮ್ಮ ಕರುಣ ಕವಚವೆನಗಿರಲಿ 	ಪ
ಮೆರೆದು ಎನ್ನಪರಾಧಗಳ ಪೊರೆಯೋ ಕರುಣಿ 	ಅ. ಪ
ಭಾಗವತರಪ್ರಿಯಾ ಕರುಣಾಸಾಗರ
ನಾಗಶಯನನ ಪಾದಪದುಮ ಭ್ರಮರ
ವಾಗ್ದೇವಿಯ ಪ್ರೀತಿಯ ವರಕುವರ
ವಾಗ್ವಿಲಾಸದ ನಿಮ್ಮ ಪರಿಮಳ ಅಮರ 	1
ಪಂಚಪ್ರಾಣನು ನಮ್ಮ ಪೊರೆವಂತೆ ಬೇಡಿ
ಸಂಚಿತಾಗಾಮಿಗಳ ಕಳೆವಂತೆ ಮಾಡಿ
ಕೊಂಚ ಮಾಡುತ ಪ್ರಾರಬ್ಧವನುಣಿಸಿ
ಪಂಚಬಾಣನಯ್ಯನ ಕರುಣೆಯಕೊಡಿಸಿ 	2
ಎಣೆಯಿಲ್ಲದ ಭವನೀಗಿಸೊ ಗುರುವರ
ಮೇಣ್‍ಕರ್ಮದ ಕಟ್ಟಬಿಡಿಸೊ ಭಕ್ತಾರಾಧಾರ
ಬಣ್ಣಿಸಲಳವೆ ಮಹಿಮೆ ನಿಮ್ಮದಪಾರ
ಚಿಣ್ಣಶ್ರೀಕೃಷ್ಣವೇದವ್ಯಾಸವಿಠಲ ಪ್ರಿಯಕರ 	3
							

143 ಮಂಡೆ ಬಾಗುವೆ ನಾ ರಾಘವೇಂದ್ರ

143.	ರಾಗ: ಕಾಪಿ 	ತಾಳ: ಆದಿ
ಮಂಡೆ ಬಾಗುವೆ ನಾ ರಾಘವೇಂದ್ರ ಗುರುವೆ 	ಪ
ಪಂಢರಿನಾಥನ ಭಕ್ತ ವರಗುರುವೆ 	ಅ. ಪ 
ಶಂಡಾಮರ್ಕರುಪದೇಶ ನೀ ಕೇಳಲಿಲ್ಲೆಂದು
ಚಂಡಕೋಪದಿ ಅಂದು ನಿನ್ನ ತಂದೆ
ಮಂಡೆಒಡೆಯುವೆನೆಂದೆದ್ದುನಿಲ್ಲೆ
ಪುಂಡರೀಕಾಕ್ಷನ ಕಂಬದಿತೋರಿದ ಗುರುವೆ 	1
ತುಂಗಾತೀರದಿ ಹಂಪೆಯಲ್ಲಿದ್ದ ಗುರುವೆ
ಅಂಗಜಜನಕನ ಸೇವಿಸಿ ಯತಿ ಮೆರೆದೆ
ರಂಗನಂಕಿತ ಭಕ್ತರಿಗಿತ್ತು ದಾಸರಮಾಡುತ
ಭಂಗಬಿಡಿಸಿ ರಾಜನಕಾಯ್ದ ಗುರುವೆ 	2
ಅಂಧ ಮೂಕ ಬದಿರರೀಪ್ಸಿತಗಳಸಲಿಸಿ
ಛಂದಛಂದದ ವಾರ್ತೆಗಳನೇಕ ನಡೆಸಿ
ಬಂದ ಭಾಗವತರ ಭಕ್ತಿಸ್ತುತಿ ಆಲಿಸಿ
ಅಂದದಲಿರುವೆ ಶ್ರೀಕೃಷ್ಣವೇದವ್ಯಾಸವಿಠಲನಿಗದನರ್ಪಿಸಿ	3
39. ಖಾದ್ರಿದೇವ
							

144 ಬಾಗಿ ಬೇಡಿರೋ ಗುರು ರಾಘವೇಂದ್ರರ

144.	ರಾಗ: [ಗೋಪಿಗೀತೆ ಧಾಟಿ/ ಸೌರಾಷ್ಟ್ರ]	ತಾಳ: [ತಿಶ್ರನಡೆ]
ಬಾಗಿ ಬೇಡಿರೋ ಗುರು ರಾಘವೇಂದ್ರರ
ಯೋಗಿವರ್ಯರಾ ಭವರೋಗಹರಿಪರ 	ಪ
ಭುವ್ಯಬುಧರಿಗೆ ದಿವ್ಯಭವ್ಯಚರಿತೆಯ
ತವಕದಿಂದಲಿ ಬೆಳಗಿದವರ ಪಾಡಿರೋ	1
ಕರೆದುಕಂಬದಿ ನರಹರಿಯತೋರ್ದರ
ಪರಮಭಕುತಿಯ ಧರಣಿಧರೆಗೆಸಾರ್ದರ 	2
ಸೋಸಿನಿಂದಲೀ ಯತಿವ್ಯಾಸರಾದರ
ರಾಶಿಗ್ರಂಥವ ರಚಿಸಿ ಸಂತೋಷಬೀರ್ದರ	3
ಗುರುಸುಧೀಂದ್ರರಾ ವರಕರಸುಜಾತರ
ಹರಿಯಪಾದವೆ ತಮ್ಮಸಿರಿಎಂದರಿತರ	4
ತುಂಗತೀರದಿ ಮೆರೆವಮಂಗಳಾಂಗರ
ರಂಗನಂಘ್ರಿಯ ಅಂತರಂಗಭಜಕರ 	5 
ಮೋದತೀರ್ಥರ ಮತವಸಾಧಿಸುವರ
ಸಾಧುವೃಂದಕೆ ಸದ್ಬೋಧೆಗೈವರ	6
ಇಂದುನೋಡಿರೊ ಇವರಚಂದವೈಭವ 
ಎಂದುಕಾಣದ ಆನಂದದನುಭವ	7
ದೇಶದೇಶದ ಜನರು ದಾಸರಾಗುತ
ಸೂಸುಕರುಣದ ನಿಧಿಯ ರಾಶಿಕಂಡರು	8 
ಮಾಡಬಾರದ ಕರ್ಮ ಮಾಡಿದವರು
ಬೇಡಿ ಬಾಗಿ ಕೊಂಡಾಡುತೀರ್ಪರು 	9
ಮದಡನಾದರು ಇವರ ಮುದದಿ ಬೇಡಲು
ಬುಧನು ಆಗುವ ಶುಭದ ಉದಯ ನೋಡುವ	10
ಭಕ್ತಿಯಿಂದಲಿ ಮೂಲಮೃತ್ತಿಕಾಜಲ	
ನಿತ್ಯಸೇವಿಪ ಜನಕೆ ಮುಕ್ತಿಯೇಫಲ	11
ಭೂತಗಣಗಳು ಈಖ್ಯಾತಿಮಹಿಮರ
ಪಾದದುದುಕಕೆ ನಡುಗಿ ಸೋತುಬೀಳ್ವರು	12
ರಾಘವೇಂದ್ರರ ನಾಮ ರೋಗಭಯಹರ
ಜಾಗುಮಾಡದೆ ಪೀಡೆ ನೀಗಿಕೊಳ್ಳಿರೋ	13
ಪುತ್ರಕಾಮರೂ ಕರಗಳೆತ್ತಿ ಬೇಡಿರೋ
ಮತ್ತೆ ಫಲಗಳ ರಾಶಿ ಇತ್ತ ನೋಡಿರೋ	14
ಚರಣಕಮಲಕೆ ಎರಗಿ ಶಿರವಬಾಗುವ
ಶರಣಜನರಿಗೆ ಸುರತರುವು ಆಗುವ 	15
ಶುಭದಗುಣನಿಧಿ ಭುವಿಗೆ ಅಭಯವಾರಿಧಿ 
ನಭದಮಣಿಸಮ ಪ್ರಭೆಯ ವಿಭವದೂಪಮಾ 	16
ಕರುವು ಕರೆದರೆ ಬರುವ ತುರುವ ತೆರದಲಿ
ಶರಣರಿಗೆ ದೊರೆ ಮರುಗಿ ಬರುವ ಭರದಲಿ	17
ಗಳಿಸಿ ತುಂಬಿದ ಪುಣ್ಯಫಲದ ರಾಶಿಯು
ಹೊಳೆಯುತಿರ್ಪುದು ಪಾಲ್ಜಲಧಿಯಂದದಿ	18
ಕರುಣಸಾಗರನೆಂಬ ಬಿರುದು ಧರೆಯೊಳು
ಮೆರೆಯುತಿಪ್ಪುದು ರವಿಯ ಕಿರಣದಂದದಿ	19
ಯೊಗಿವರ್ಯ ಶ್ರೀ ರಾಘವೇಂದ್ರರ
ಭಾಗ್ಯಭೋಗಕೆ ಇಂದು ಯೋಗ್ಯರಾಗಿರೋ	20
ಅಪ್ಪಣಾರ್ಯರು ಇವರುಒಪ್ಪುವಂದದೀ 
ಒಪ್ಪಿಸಿರುವರು ಕವನದಿರ್ಪಸ್ತುತಿಯನು 	21
ಗುರುಕಟಾಕ್ಷವ ಪಡೆದು ಸರಳಸ್ತೊತ್ರವ 
ಪಿರಿಯರೆಲ್ಲರೂ ಪಠಿಸಿ ಹರುಷ ಪಡುವರು 	22
ಮಣಿದುಬೇಡಿರೋ ಕುಣಿಕುಣಿದುಪಾಡಿರೋ 
ಎಣಿಕೆಯಿಲ್ಲದ ವರಗಳೆಣಿಸಿಗಳಿಸಿರೊ	23
ದೋಷದೂರ ಶ್ರೀ ರಾಘವೇಂದ್ರರ
ಈಶನೆಂಬರೂ ಸಂತೋಷಭರಿತರು 	24
ಉದಯಕಾಲದಿ ಎದ್ದು ಸದಮಲಾತ್ಮರು
ಇದನು ಪಠಿಸಲು ದಿವ್ಯಪದವಿ ದೊರೆವುದು 	25
ನಿತ್ಯದಲ್ಲಿ ಈ ಸ್ತುತ್ಯಗೀತೆಯ 
ಎತ್ತಿಪಾಡಲು ಸರ್ವಸಿದ್ಧಿನಿಶ್ಚಯ 	26
ಮೋದದಿಂದಲಿ ಇದನ್ನು ಓದಿ ಪೇಳ್ದರೆ 
ಸಾಧುಮಾರ್ಗ ಸದ್ಬೋಧೆ ದೊರೆವುದು	27
ಘನ್ನಗುರುಗಳ ಪಾವನ್ನಸ್ಮರಣೆಯ 
ಮುನ್ನಮಾಡಿರೊ ಪರಮಧನ್ಯರಾಗಿರೋ	28
ಆದಿದೇವ ಶ್ರೀಖಾದ್ರಿದೇವನ 
ಪಾದದೂತನ ಧ್ಯಾನ ಮೋದಸಾಧನಾ	29
40. ಗಂಗಾಜನಕ
							

145 ಗುರುದೇವಾ

145.	ರಾಗ: [ದರ್ಬಾರಿಕಾನಡ]	ತಾಳ: [ಆದಿ]
ಗುರುದೇವಾ 	ಪ
ಗುರುದೇವಾ ಎನ್ನ ಗುರುದೇವಾ
ಕರುಣಿಸಿ ಪೊರೆಎನ್ನ ಮರುಕಪಡುವೆ ನಾನು
ಯಾರಾರ ನೋಡಿದೆ ಯಾರು ಎನಗೆ ಸಿಗಲಿಲ್ಲ
ಕಾರುಣ್ಯಮೂರ್ತಿಯೆ ನೀನೆನಗೆ ದಯೆತೋರಿದೆ 	1
ಮಂದಮತಿಯು ನಾನು ಮನವು ತೋರದು ಏನು
ಸಂದಿತು ಎನ್ನಯ ಕಾಲವೆಲ್ಲ
ಇಂದು ನೀ ದಯೆತೋರಿ ಎನ್ನ ಮೊರೆಯಕೇಳ್ದೆ
ವಂದಿಪೆ ನಿನ್ನಯ ಚರಣದಡಿಗೆ ನಾನು 	2
ತುಂಗಾಭದ್ರಾನದಿತೀರದಿ ನೆಲಸಿಹೆ
ಮಂಗಳಾ ನಿನ್ನ ಪಾಡುವೆನು
ರಂಗನಾಥನ ಭಕ್ತ ಶರಣರ ಪಾಲಿಪ
ಗಂಗಾಜನಕನ ಪಾದಸೇವಕ ನೀನು	3
41. ಗದುಗಿನವೀರನಾರಾಯಣ
							

146 ಕೋಪವೇತಕೆ ಬಂದಿತೆನ್ನೊಳು ರಾಯರೆ

146.	ರಾಗ: [ಷಣ್ಮುಖಪ್ರಿಯ]	ತಾಳ: [ಆದಿ]
ಕೋಪವೇತಕೆ ಬಂದಿತೆನ್ನೊಳು ರಾಯರೆ 	
ಗುರುರಾಯರೆ 	ಪ
ತಾಪವಿನ್ನಿದು ಮನವು ಹಿಡಿದುದು
ಪಾಪಿಯೆನ್ನನು ಕ್ಷಮಿಸಲಾರಿರ 	ಅ. ಪ 
ಕರುವು ತಾಯನು ನೋಡಬರಲೊಡೆ
ಕರೆದುಕೊಳ್ಳದೆ ದೂಡಬಹುದೆ
ಭರದಿ ದರುಶನಕೆಂದು ಧಾವಿಸೆ
ಬರಲು ಬರಗೊಡದಂತೆ ಮಾಡಿದೆ 	1
ದ್ರೋಹ ಮಾಡಿದೆನೇನು ನಿಮ್ಮೊಳು
ದ್ರೋಹ ಮಾಡಿದುದನ್ನು ತಿಳಿಯೆನು
ದ್ರೋಹಿಯಾದಡೆ ಕ್ಷಮಿಸದೆನ್ನನು 
ಸ್ನೇಹದಿಂದೆನ್ನೆತ್ತಿಕೊಳ್ಳದೆ 	2
ಹಣದೊಳಾಶೆಯನಿಟ್ಟೆನೆಂದೊಡೆ 
ಹಣವು ಸಂಸಾರಿಗಗೆ ಬೇಡವೆ
ಸೆಣಸಿ ಗದುಗಿನವೀರನಾರಾ-
ಯಣ ಭಕುತರ ಸಲಹದೆ 	3
							

147.ನಾಲಗೆ ಬರದಯ್ಯಾ

147.	ರಾಗ: [ಸಾಮ]	ತಾಳ: [ಮಿಶ್ರನಡೆ(ತ್ರಿಪುಟ)]
ನಾಲಗೆ ಬರದಯ್ಯಾ ಶ್ರೀ ಗುರುವರರಾಯಾ
ಪಾಲಿಸೆನ್ನೊಳು ನಿನ್ನ ಪೂರ್ಣದಯ 	ಪ
ನಾಲಿಗೆ ಮತಿಗಳು ತಡೆದು ನಿಂತಿಹವಯ್ಯ
ಮೇಲು ನಿಮ್ಮಯ್ಯ ನಾಮಾ ನಾ ಪೇಳೆನೆಂದರೆ 	ಅ. ಪ.
ಕಥೆಯ ಕಟ್ಟಿದೆ ನಾಟಕ ಪದ್ಯವ ರಚಿಸಿದೆ
ನಂಬಿ ಹೆಮ್ಮೆಯೊಳಿದ್ದೆ ಯತಿರಾಯಾ
ನಿನ್ನ ಸುಚರಿತೆಯ ಕಥಿಸಲು
ಗತಿಕಾಣದೆ ನಿಂತು ಬಾಯ್ಬಿಡುವೆ ಪೊರೆಯಯ್ಯಾ 	1
ಬಡವನು ಮತಿಯೊಳು ಸಿರಿಯೊಳು ಸಹ ಎನ್ನ
ಪಡಿಪಾಟಲನು ಕಡಿದು ಕಾಪಾಡೊ
ಕಡಿದೆನ್ನ ಚಿತ್ತದ ದುಗುಡವ ಕಳೆಯೆಂದು
ಪಿಡಿದು ನಿನ್ನಯ ಪಾದ ತುತಿಸುವೆನೆಂದರೆ 	2
ಸ್ಮರಿಸುವೆ ಮನದೊಳು ನಿರುತದಿ ಯತಿವರ್ಯಾ
ಶ್ರೀ ರಾಘವೇಂದ್ರರಾಯಾ
ಧರೆಯೊಳು ಪರಮ ದಾನಿಗಳ ಹಿರಿಯನೆಂದು
ಅರಿತು ನಾ ಬಂದೆನೊ ಮೂಕನಾಗಿರುವೆನೊ 	3
ಮನದೊಳಗಿರುತಿರ್ದ ಭಕುತಿ ಭಾವಗಳು
ಏನಿತೆಂಬುದನು ನೀನೇ ನೋಡಿ
ಮನಸಿನಭೀಷ್ಟವನಿತ್ತು ಕಾಯುವದಯ್ಯಾ
ಮನದೊಳು ನೆನೆಯುವೆ ಹೊರಗಾಡಲಾರದೆ 	4
ಕರುಣಾಳು ಗದುಗಿನವೀರನಾರಾಯಣ
ಹರನೆ ಕಳುಹಿಸಿದನೆಂದು ನಾನಿಲ್ಲಿ ಬಂದೇ
ವರ ನಿನ್ನ ಚರಣವೂ ದೊರೆಯೆ ನಾ ತುತಿಸಲು
ಸರಿಯಾದ ನುಡಿಗಳ ಕರುಣಿಸು 	5
42. ಗರುಡವಾಹನವಿಠಲ
							

148 ಯತಿಕುಲ ತಿಲಕ

148.	ರಾಗ: ಧನ್ಯಾಸಿ	ತಾಳ: ಅಟ
ಯತಿಕುಲತಿಲಕ ಶ್ರೀ ರಾಘವೇಂದ್ರರಿಗೆ
ನುತಿಸಿ ಸದ್ಭಕ್ತಿಯಲಿ ಎರಗುವೆನು	ಪ
ಕ್ಷಿತಿಯೊಳು ಆಶ್ರಿತರಿಗೆ ಕಲ್ಪತರುವಾಗಿ
ಪ್ರತಿಕ್ಷಣಕತಿಹಿತವನೀವ ಗುರು	ಅ. ಪ
ಹೇಮಕಶಿಪು ತಾನು ಭೂಮಿಯೊಳುದುಭವಿಸಿ
ಭ್ರಾಮಕಬುದ್ಧಿಯಿಂದ ನೇಮಾದಿ ಸರ್ವೇಶ
ವ್ಯೋಮಕೇಶನೆಯೆಂದು ಯಾಮಯಾಮಕೆ ತುತಿಸೆ
ತಾಮಸಮತಿ ಕೇಳಿ ಶ್ರೀಮನೋಹರನ್ನಾಗ
ಪ್ರೇಮಾದಿಪ್ರಾರ್ಥಿಸಿ ಸ್ಥಂಬದಿತೋರ್ದ ಹರಿಯ	1
ಹರಿಸರ್ವೋತ್ತಮನೆಂದುಚ್ಚರಿಸುತ ಮೂಲಾವ-
ತಾರದಿ ಪ್ರಹ್ಲಾದರಿವರು ಧರೆಮ್ಯಾಲೆ ವ್ಯಾಸ-
ತೀರಥರಾಗಿ ಚರಿಸುತ್ತ ಮರುತಮತಾಭ್ಧಿಗಿವರು
ಶರಧಿಜನಂತೆ ಅಭಿವೃದ್ಧಿಗೋಸುಗವಾಗಿ
ವರಚಂದ್ರಿಕಾದಿತ್ರಯ ರಚಿಸಿ ಮೆರೆದ ಗುರು	2
ರಾಘವೇಂದ್ರನೆಂದು ಬಾಗಿಬೇಡಲು ದುರಿ-
ತೌಘ ನಾಶನಗೈಯ್ಯುತ ಭಾಗವತರಿಗನು-
ರಾಗದಿ ಪೊರೆಯುತ್ತ ಯೋಗಿಮಾರ್ಗವ ತೋರುತ
ಜಾಗುಮಾಡದೆ ದೋಷ ನೀಗಿಸಿ ಸಲಹುವ 
ಯೋಗೇಶ ಗರುಡವಾಹನವಿಠಲನ ದೂತ	3
43. ಗುರುಇಂದಿರೇಶ 
							

149 ಸುಂದರ ಗುರು ರಾಘವೇಂದ್ರರೆಂತೆಂಬೊ

149.	ರಾಗ: ಮೋಹನ	ತಾಳ: ಆದಿ/ಅಟ
ಸುಂದರ ಗುರು ರಾಘವೇಂದ್ರರೆಂತೆಂಬೊ ಕ-
ರ್ಮಂದಿಗಳರಸೆ ವಂದಿಸುವೆ 	ಪ
ಬಂದ ಭಕುತರಘವೃಂದ ಕಳೆವ ಗುಣ-
ಸಾಂದ್ರ ಸನ್ನುತ ಮಹಿಮರೆಂದು ನಾ ನಂಬಿದೆ 	ಅ.ಪ.
ಪರಮ ಕರುಣಿ ನಿಜ ಚರಣ ಭಜಕರನು-
ದ್ಧರಿಸುತಲನುದಿನ ಪೊರೆವೆ ಎಂದು
ಕರವ ಮುಗಿದು ತ್ವರ ಪರಿಪರಿಯಲಿ ನಿನ್ನಾ-
ಲ್ಪರಿಯುವೆ ದೈನ್ಯದಿ ಬಾಯ್ತೆರೆಯುವೆ
ಕರಪಿಡಿ ಎಂದು ಕರೆಯುವೆ ನಿನ್ನ
ಸರಿ ಪೊರೆವಂಥ ದೊರೆಗಳ ಕಾಣೆ ಮದ್ಗುರುವೆ ಎನ್ನಂಥ ಪಾ-
ಮರ ನರನ ಕಾಯ್ವುದು ನಿನಗೆ ಅಚ್ಚರವೆ ವರ ಯೋಗಿವರ್ಯನೆ 
ನಿರುತ ವೃಂದಾವನದಿ ರಾಜಿಸಿ
ಮೆರೆವ ಮಂಗಳ ಚರಿತ ತವಪದ
ಸ್ಮರಣೆ ಸಂತತ ನೀಡು ಮರೆಯದೆ
ಹರುಷದಲಿ ನಿರ್ಜರರ ತರುವೆ 	1
ಘೋರ ದುರಿತವೆಂಬೊ ವಾರುಧಿಯೊಳಗೀಸ-
ಲಾರೆನಿನಿತು ದಯ ಬಾರದೇನೋ
ಪೋರನೆನುತಲಿ ತಾತ್ಸಾರ ಮಾಡದೆ ದಡ 
ಸೇರಿಸೋ ಬಿನ್ನಪವ ವಿಚಾರಿಸೊ ಮನ್ನಿಸಿ ಮಾರ್ಗ ತೋರಿಸೋ
ಮೀರಿರುವ ಕಡು ಕಾಮಾದಿ ಖಳರ ಬೇರುಗಳನಳಿಸೊ ನಿನ್ನೊಳು
ನಿರಂತರ ಸೂರಿ ಭಕುತರ ದಾರಿಯೊಳು ನಿಲಿಸೋ
ಉರು ಪಾಪ ಸಂಚಯ ಕ್ರೂರ ಕುಜನ ಕು-
ಠಾರದಿಂದುಳಿಸೋ ಮನ್ಮನದಭೀಷ್ಟೆಯ 
ಭೂರಿ ನಮಿಸುವೆ ಚಾರು ಕಿಟಿಜಾ
ತೀರ ನಿಲಯನೆ ಸಾರಿದವರನು 
ಪಾರುಗಾಣಿಪನೆಂದು ಡಂಗುರ
ಸಾರುತಿದೆ ಯತಿವೀರ ಸಲಿಸೋ 	2
ಏಸೇಸು ಜನುಮದಿ ಕ್ಲೇಶಗಳನುಭವಿಸಿ
ಘಾಸಿಗೊಳಿಸಿ ಮನ ಬೇಸರಾದೆ ಹೇಸಿ ವಿಷಯಂಗಳ 
ಲೇಸು ತಿಳಿಯದೆ ಮೊರೆ ಮೋಸದಿ ದುಷ್ಟರ ಸಹ-
ವಾಸದಿ ಚರಿಸಿದೆ ಮಂದಹಾಸದಿ ಸಂ-
ತೈಸು ರವಿ ಸಂಕಾಶಜನ ವಿದ್ವಾಂಸ ಸಾದರದಿ ಕಾಷಾಯ
ವಸನ ವಿಭೂಷಿತಾಂಗನೆ ವ್ಯಾಸಮುನಿ ಭರದಿ ಗಜರಾಮಪುರಾ-
ಧೀಶ ಮುಖರಿಗೆ ತೋಷ ನೀ ಬೆರದೀ ಈ ಸಮಯ ನುತಿಸುವೆ
ಆ ಸಮೀರ ಮತಾಬ್ಧಿ ಚಂದಿರ
ಶ್ರೀಶ ಗುರುಇಂದಿರೇಶನಂಘ್ರಿಯ
ದಾಸ ಭವಭಯ ರಾಶಿ ತರಿದು ಉ-
ದಾಶಿಸದೆ ನೀ ಪೋಷಿಸೆನ್ನನು 	 3
44. ಗುರುಗೋವಿಂದವಿಠಲ (ಚೀಕಲಪರವಿ)
							

150 ಶ್ರೀ ರಾಘವೇಂದ್ರ ಪಾಲಿಸೊ

150.	ರಾಗ: [ಆಂಧೋಳಿಕಾ]	ತಾಳ: ಆದಿ
ಶ್ರೀ ರಾಘವೇಂದ್ರ ಪಾಲಿಸೊ
ಘೋರ ಪಾಪಾವಳಿ ದೂರ ಮಾಡೆನ್ನ ರಕ್ಷಿಸೋ	ಪ
ಮಾರಾರಿವಿನುತ ನಾರಾಯಣನ ಪಾ-
ದಾರಾಧಿಪ ಸುವಿಚಾರಿಗಳೊಳಗ್ರಣಿಯೆ
ಎನ್ನ ಧಣಿಯೆ ನಿನಗೆಣೆಯೆ ಇಲ್ಲವೋ ಕರುಣಿಯೇ	ಅ.ಪ
ಕರುಣಾನಿಧೆ ಮಾಂ ಪಾಹಿ ಶರಣಾಗತಪಾಲಾ
ಗುರುಕೃಪಾ ಅಸ್ಮಾಕಂದೇಹಿ
ಸಿರಿಸರಸಿಜಭವ ಪುರಹರಮುಖನುತ
ಕರಿರಾಜವರದ ಹರಿಪಾದಪದುಮಭೃಂಗಾ
ಶುಭಾಂಗ ದಯಾಪಾಂಗ ಹತದುರ್ಜನ ಸಂಗಾ	1 
ಪರಮಗುರು ಪರಿಪಾಲಕಾ ಗುರುಸುಖನಿಧಿ ಪ್ರೀಯಾ 
ಸರಸಿಜಾಂಬಕನಾರಾಧಕ ಪರಿಪರಿವಿಧದಲಿ
ಮೊರೆಪೊಂದಿದ ಈ ಶರಣನ ಮರೆಯದೆ ಪರಿಹರಿಸೋ
ಎನ್ನ ತಾಪಾ ಜಿತಕೋಪಾ ನಿಷ್ಪಾಪ ಮೋಹಕ ನರರೂಪಾ	2
ನಿಲಿಸೋ ಮನಸು ನಿಶ್ಚಲಾ ಗುರುಗೋವಿಂದವಿಠಲಾ-
ನಲ್ಲಿ ಭಕುತಿಯನಿತ್ತು ಕಲಿಮಲಾತೊಳೆದು ನಿನ್ನಯಪಾದ
ಸಲಿಲಜತೋರಿ ಕಲುಷ ಜನರೊಳಗೆ ಕಲಿಸದೆ ಪೊರೆ
ಘನಮಹಿಮಾ ಶುಭಕಾಯ ನಿಸ್ಸೀಮ ಹೃದ್ಗತ ಶ್ರೀರಾಮಾ	3
45. ಗುರುಗೋವಿಂದಠಲ (ಮೈಸೂರು)
							

151 ಕ್ಷಮಾಸಮುದ್ರನೆ ನಮಾಮಿ ಗುರು

151.	ರಾಗ: ಮಧ್ಯಮಾವತಿ	ತಾಳ: ಆದಿ
ಕ್ಷಮಾಸಮುದ್ರನೆ ನಮಾಮಿ ಗುರು 
ನಿನ್ನ ಸಮಾನರ್ಯಾರಿನ್ನೂ 	ಪ
ರಮೇಶ ಪದದ್ವಯ ಕಮಲ ಪುಷ್ಪಕೆ 
ಭ್ರಮರ ತವಪದ ನಮಿಸುವೇ 	ಅ.ಪ.
ತತ್ವ ಪ್ರದರ್ಶಕ ಶೃತ್ಯರ್ಥ ಬೋಧಕ
ಗೀತಾರ್ಥ ಸಂಗ್ರಹ ಕೃತೇ ನಮೋ 
ಪ್ರತ್ಯರ್ಥಿ ಮತ್ತೇಭ ಪಂಚಾಸ್ಯ ನಿನ್ನಯ
ಭೃತ್ಯನ ಅಪಮೃತಿ ತಪ್ಪಿಸಿದೇ 	1
ಅದ್ವೈತ ದುಸ್ಸಹವಾಸನ ನಿರಸನ
ಖದ್ಯೋತ ಸಮ ವ್ಯಾಪ್ತ ಪರಿಮಳಾ 
ಸದ್ವೈಷ್ಣವ ಕುಮುದೇಂದು ವಿದ್ವಾಂಸನತ 
ಪದದ್ವಂದ್ವಾ ವಿಮಲ ಕಮಲಾ 	2
ಕುಷ್ಠಾದಿ ರೋಗಹರ ಕಷ್ಟ ನಿವಾರಣ
ಶ್ರೇಷ್ಠ ನಿಮ್ಮಯ ಸ್ಮರಣಾ 
ನಿಷ್ಟೇಲಿ ಭಜಿಪರ ಇಷ್ಟಾರ್ಥ ಸಲಿಸುವ 
ದುಷ್ಟ ವಾದಿಯ ದಮನಾ 	3
ಪ್ರಹ್ಲಾದ ಬಾಲನೆ ವಿಮಲಾ ವಿಭೀಷಣ 
ಬಾಹ್ಲೀಕ ಸೂನಾದೆ ಪ್ರತೀಪಗೆ 
ವಿಹ್ವಲ ಹೃದಯರ ಚಂದ್ರಿಕೆಯಿಂದಲಿ
ಆಹ್ಲಾದ ಪಡಿಸಿದ ಸಲ್ಹಾದಾಗ್ರಜನೇ 	4
ಗ್ರಂಥೀಯ ಹರಿಸುವ ಮಂತ್ರಾರ್ಥ ಬೋಧಿಸಿ
ಮಂತ್ರ ಸದನ ಗುರುವೇ 
ಮಂತ್ರಾಗಮ್ಯ ಗುರುಗೋವಿಂದವಿಠಲನ
ಅಂತರದಿ ತೋರಿಸಿ ರಕ್ಷಿಸಯ್ಯಾ 	5
							

152 ಗುರುರಾಯರ ನಂಬಿರೋ

152.	ರಾಗ: [ಆನಂದಭೈರವಿ]	ತಾಳ: [ಮಿಶ್ರನಡೆ]
ಗುರುರಾಯರ ನಂಬಿರೋ ರಾಘವೇಂದ್ರ
ಗುರುರಾಯರ ನಂಬಿರೋ 	ಪ
ಗುರುರಾಯರ ನಂಬಿ ದುರಿತ ದುಷ್ಕøತ ಹರಿಸಿ
ಪುರುಷಾರ್ಥ ಪರಮವ ಕರಗತ ಕೈಗೊಳ್ಳಿ 	ಅ.ಪ.
ಪರಿಮಳೇತ್ಯಾದಿ ಸಂದ್ಗ್ರಂಥ ವಿರಚಿಸಿ
ವರಮೋಕ್ಷಪ್ರದವೆನಿಸುವಂಥ 
ಎರಡೆರಡ್ಹತ್ತು ಮತ್ತೆ ಎರಡೈದು ಗ್ರಂಥವ
ಧರಣಿ ಸುರರಿಗಿತ್ತು ಕರುಣವ ತೋರಿದ 	1
ರಾಮಕೃಷ್ಣ ನರಹರೀ ವೇದವ್ಯಾಸ
ಮಾಮನೋಹರ ವೃಂದಾವನದಿ
ವಾಮಾಂಗ ಎನಿಸೀಹ ಶ್ರೀಮಹಿಳೆಸಹಿತಾಗಿ
ಕಾಮಿತಾರ್ಥದ ಹರಿ ನೇಮದಿ ನೆಲಸೀಹ 	2
ಕೂಸೆರಡರ ವಯದೀ ಮಂತ್ರಾಲಯ
ದೇಶಕೆ ಪೋಗಿ ಮುದದೀ 
ಲೇಸು ಸೇವೆಯ ಗೈಯ್ಯೆ ಕಾಸರೋಗವನೀಗಿ
ಮೇಶ ಗುರುಗೋವಿಂದವಿಠಲನ ದಾಸನ್ನಾಗಿಸಿದ 	3
ಕೂಸೆರಡರ ವಯದೀ=ಶ್ರೀ ಗುರುಗೋವಿಂದ ದಾಸರ 
ತಾಯಿ ಮಂತ್ರಾಲಯದಲ್ಲಿ ರಾಯರ ಸೇವೆಗೈದಾಗ,
ದಾಸರಿಗೆ 2 ವರ್ಷವಾಗಿತ್ತು-ವಿಷಮ ಜ್ವರ 
ನಿವಾರಣೆಯಾಗಿತ್ತು
							

153 ಗುರುವೆ ಪೊರೆಯೊ

153.	ರಾಗ: ಮೋಹನ	ತಾಳ: ಅಟ
ಗುರುವೆ ಪೊರೆಯೊ ಎನ್ನ ಆವಗುಣ
ಮರೆದು ರಾಘವೇಂದ್ರಾ 	ಪ
ನೆರೆನಂಬಿದರ ಸುರತರುವೇ ಹೇ
ಪುರಟ ಕಶಿಪುಜ ಗರುಡವಾಹನ ಪ್ರೀಯ 	ಅ.ಪ.
ಬಲುಕರ್ಮ ಜಾಲಗಳ ಮಾಡುತ ಬಳಲಿ
ಹೊಲಬು ತಪ್ಪಿದೆ ಬಹಳ 
ಚಲುವ ಚನ್ನಿಗನಾದ ಬಲರಾಮನನುಜನ
ಸಲೆ ನಾಮ ಒಲಿಸದೆ ಮಲಿನನಾದವನ 
ಕಳೆದು ಬಿಡುವರೆ ಸುಜನ ವತ್ಸಲ 
ಗೆಲುವ ಕಾಣೆನೊ ಕರ್ಮನಿವಹದಿ
ಜಲಜನಾಭನ ಚರಣ ಪುಷ್ಪದ 
ಸುಲಭ ಷಟ್ಟದನೆನಿಸೊ ಗುರುವರ 	1
ಯತಿಕುಲ ಸಾರ್ವಭೌಮ ನಿಮ್ಮಯ ನಾಮಾ-
ಮೃತವನುಣಿಸಲು ನಿಸ್ಸೀಮಾ
ಪತಿತ ಪಾವನ ಹರಿಯ ಸತತದಿ ನುತಿಸುವ
ಮತಿಯಿತ್ತು ಪಾಲಿಸೊ ಶತಕ್ರತು ಪಿತ ಪಿತನೆ
ರತಿಪತಿಯ ಪಿತನೆನಿಸಿದಾತನ 
ನತಿಸಿ ನುತಿಸುತ ಕರೆಯುತಲಿ 
ಗತಿ ಪ್ರದಾಯಕ ಹರಿಯ ವ್ಯಾಪ್ತಿಯ 
ಪಿತಗೆ ತೋರಿದ ಅತುಳ ಮಹಿಮಾ 	2
ಮಂತ್ರ ನಿಕೇತನನೆ ಯತಿಕುಲರನ್ನ 
ಮಂತ್ರಾರ್ಥ ರಚಿಸಿದನೇ 
ಗ್ರಂಥೀಯ ಹರಿಸೂವ ತಂತ್ರವ ತೋರೋ ಅ-
ತಂತ್ರವಾಗಿದೆಯನ್ನ ಮಂತ್ರ ಸಾಧನವೂ 
ಪ್ರಾಂತಗಾಣದೆ ಚಿಂತಿಸುವೆ ಸರ್ವಸ್ವ-
ತಂತ್ರ ಗುರುಗೋವಿಂದವಿಠಲನ 
ಅಂತರಂಗದಿ ತೋರಿ ಸಲಹೋ 
ಕ್ರಾಂತನಾಗುವೆ ನಿಮ್ಮ ಪದಕೇ 	3
							

154 ಗುರುವೆ ವರಹಜೆ ತಟವಾಸಾ

154.	ರಾಗ: ಸುರಟಿ	ತಾಳ: ಆದಿ
ಗುರುವೆ ವರಹಜೆ ತಟವಾಸಾ 
ಗುರುವೇ ಪುರಿಮಂತ್ರಾಧೀಶಾ 	ಪ
ಆರು ಮೊರೆ ಇಡುವೆನೊ ವರಪದ ಪದುಮಕೆ
ಕರುಣದಲೆಮನ ಹರಿಯಲಿ ಇರಿಸೋ 	ಅ.ಪ.
ಬಾಗಿ ಭಜಿಪೆ ಗುರುವೇ ಎನ್ನಯ
ರೋಗ ಹರಿಸು ಪ್ರಭುವೇ 
ರಾಘವೇಂದ್ರ ದುರಿತೌಘ ವಿದೂರನೆ 
ಭೋಗಿ ಶಯನ ಪದ ರಾಗದಿ ಭಜಿಸುವ 	1
ಭೂತ ಪ್ರೇತ ಬಾಧೇ ಬಿಡಿಸುವ
ಖ್ಯಾತಿ ನಿಮ್ಮದು ತಿಳಿದೇ 
ದೂತರೆನಿಪ ಜನ ಆತುನಿಮ್ಮ ಪದ 
ಪ್ರೀತಿ ಸೇವೆಯಲಿ ಕಾತುರರಿಹರೋ 	2
ಮೌನಿವರ್ಯ ನಿನ್ನ ಬೇಡುವೆ
e್ಞÁನ ಭಕುತಿಯನ್ನ 
ದಾನ ಮಾಡಿ ಅe್ಞÁನವನೋಡಿಸೆ 
ಹೀನ ಯೋನಿ ಬರಲೇನು ಅಂಜೆನೂ 	3
ಪರಿಮಳಾರ್ಯರೆಂದೂ ನಿಮ್ಮಯ
ಬಿರಿದು ಕೇಳಿ ಬಂದೂ 
ಮೊರೆಯಿಡುವೆ ತವ ಚರಣಾಂಬುರುಹಕೆ 
ಅರಿವನೀಯೊ ತವ ಪರಿಮಳ ಸೊಬಗನು 	 4
ಗುರು ಸುಧೀಂದ್ರ ಕರಜ ತೋರ್ಪುದು
ಹರಿಯ ಪಾದ ಬಿಸಜ 
ವರ ಸುಹೃದ್ಗ ಗುರುಗೋವಿಂದವಿಠಲನ
ಚರಣ ಸರೋಜವ ನಿರುತ ಭಜಿಪ ಗುರು 	 5
							

155 ಜೋ ಜೋ ಗುರುರಾಜಾ… ಯತಿ ಮಹರಾಜಾ

155.	ರಾಗ: [ಕುರಂಜಿ]	ತಾಳ: [ತಿಶ್ರನಡೆ]
ಜೋ ಜೋ 	ಪ
ಜೋ ಜೋ ಜೋ ಜೋ ಜೋ ಗುರುರಾಜಾ
ಜೋ ಜೋ ಜೋ ಜೋ ಯತಿ ಮಹರಾಜಾ 	ಅ.ಪ.
ಬೋಧವ ಗೈಯ್ಯುತ್ತ ಮೋದ ಮುನಿ ಮತವ
ವಾದಿಗಳ ಜಯಿಸುತ್ತ ವೇದಾರ್ಥ ಪೇಳಿ 
ಸಾಧು ಸಮ್ಮತವೆನೆ ಗ್ರಂಥ ಬಹು ರಚಿಸೀ 
ಆದುದಾಯಾಸವು ಮಲಗೊ ಗುರುರಾಯ 	1
ಯೋಗಿಗಳೊಡೆಯನೆ ಯೋಗೀಂದ್ರ ವಂದ್ಯಾ
ಭೋಗಿ ಶಯ್ಯನ ಭಕ್ತ ಗುರುರಾಘವೇಂದ್ರ 
ಭಾಗವತರ ಬಯಕೆ ಸಲಿಸಿ ವೇಗದಲಿಂದ
ಯೋಗ ನಿದ್ರೆಯ ಮಾಡೆ ಮಲಗೊ ಮುನೀಂದ್ರಾ 	2
ಎರಡೆರೆಡು ಮುಖದಿಂದ ವೃಂದಾವನದಿಂದ
ಶರಣರಿಗಾನಂದ ಸುರಿಸಿ ಹರಿಯಿಂದ 
ಗುರುಗೋವಿಂದವಿಠಲನ ಧ್ಯಾನ ಆನಂದ
ಪರವಶದಲಿ ಮಲಗೊ ಗುರು ರಾಘವೇಂದ್ರ 	3
							

156 ಪರಿಪಾಹಿ ಗುರು ರಾಘವೇಂದ್ರ

156.	ರಾಗ: ಬೆಹಾಗ್	ತಾಳ: ಆದಿ
ಪರಿಪಾಹಿ ಗುರು ರಾಘವೇಂದ್ರ 	ಪ
ಶರಣರ ಪೊರೆಯಲು ವರ ಮಂತ್ರಾಲಯ
ಪುರದಲಿ ನೆಲೆಸಿಹೆ ಕರುಣಿಗಳರಸ 	ಅ.ಪ.
ಪಿತನ ಬಾಧೆಗೆ ಲವ ವ್ಯಥೆಯನು ಪಡದಲೆ
ರತಿಪತಿ ಪಿತನೆ ಸರ್ವೋತ್ತಮನೆಂದೊರೆದೆ 	1
ದ್ವಿತೀಯ ಯುಗದಲಿ ದೈತ್ಯನಲ್ಲುದಿಸುತ
ಸೀತೆಯ ರಮಣನ ಪ್ರೀತಿಯ ಪಡೆದೆಯೋ 	2
ದ್ವಾಪರದಲಿ ಪ್ರತೀಪನ ಸುತನೆನಿಸೀ 
ಶ್ರೀಪತಿ ಕೃಷ್ಣನ ಪ್ರೀತಿಯ ಪಡೆದೇ 	3
ಇಷ್ಟವಿಲ್ಲದ ಪುಣ್ಯ ಎಷ್ಟೂ ಗಳಿಸಿ ನೀನು
ಶಿಷ್ಟರ ಪಾಲಿಸೆಂದು ಕೃಷ್ಣನ ಮೊರೆಯಿಟ್ಟೆ 	4
ವ್ಯಾಸರಾಯರಾಗಿ ಭೂಸುರ ಸುಜನರ
ಕ್ಲೇಶವ ಹರಿಸಿದೆ ದಾಸಕೂಟಕೆ ಹಿರಿಯಾ 	5
ಶ್ರೀಶ ನರಹರಿ ವ್ಯಾಸ ರಾಮಾ ಕೃಷ್ಣ
ಈಸು ರೂಪಗಳಲ್ಲಿ ವಾಸವು ವೃಂದಾವನದಿ 	6
ಪರಿಪರಿ ವಿಧ ನಿಮ್ಮ ಚರಣವ ಸ್ಮರಿಸುವ
ನರರ ಮನೋರಥ ಹರಿಯೆ ಕರುಣಿಪ 	7
ಸರಸಿಜಾಸನ ಮುಖ ಸುರಪ ದೇವರ್ಕಳೆಲ್ಲ
ಹರಿಯನುಚರರೆಂಬಾ ವರಮತಿ ಪಾಲಿಸೋ 	 8
ಪವನಾಂತರಾತ್ಮ ಗುರುಗೋವಿಂದವಿಠಲನ
ತವಕದಿಂದಲಿ ತೋರಿ ಭವ ಭಯ ಹರಿಸೀ 	9
							

157 ಬಾರಯ್ಯ ಬಾ ಬಾ ಬುಧಜನಗೇಯಾ

157.	ರಾಗ: ಮಧ್ಯಮಾವತಿ	ತಾಳ: ಅಟ
ಬಾರಯ್ಯ ಬಾ ಬಾ ಬುಧಜನಗೇಯಾ ಹೇ ಗುರುರಾಯಾ
ಸಾರಿ ಬರುವ ಭಕುತರೊಡೆಯ ಕಾಯಯ್ಯ ಜೀಯಾ 	ಪ
ವಾರಿಜನಾಭನ ವಾರಿಧಿಮಥನನ
ವೈರದಿ ಭಜಿಸಿದ ಪುರಟ ಕಶ್ಯಪನ 
ವರ ಉದರೋದ್ಭವ ಹರಿ ಪ್ರಿಯ ಭಕುತನೆ
ಶರಣರ ಪೊರೆಯಲು ತ್ವರ್ಯದಿ ಬಾರೋ 	ಅ.ಪ.
ಪ್ರಥಮ ಪ್ರಹ್ಲಾದ ದಿತಿಸುತ ದೊರೆಯೇ ಬಾಹ್ಲೀಕ ದೊರೆಯೇ 
ಚತುರ ಚಂದ್ರಿಕೆ ಗುರು ಮಂತ್ರಾಲಯ ಗುರುವೇ ದೊರೆ ಬಲು ಮೊರೆಯೇ
ವ್ಯಥೆಯಾಕೆನ್ನುತ ಹಸ್ತವ ಚಾಚುತ
ಹುತವಹನೊಳು ಬಲು ಜತನಾಗಿರಿಸಿಹ 
ರತುನ ಹಾರವ ಪ್ರೀತಿಲಿ ಕೊಡುತ
ಅತಿಶಯ ತೋರಿದ ಯತಿ ರಾಘವೇಂದ್ರ 	1
ಸುಧೀಂದ್ರರ ಕರಜ ಮಂತ್ರಾಲಯ ನಿಲಯ ಬಲು ಮಂತ್ರಗಳೊಡೆಯಾ 
ಬಧಿರ ಮೂಕರ ಅಂಧರ ಹೊರೆಯಾ ಪರಿಹರಿಸುವ ದೊರೆಯಾ 
ಮಧ್ವಾಂತರ್ಗತ ಮಧು ಕೈಟ ಭಾರಿಯ
ಸಿದ್ಧಾಂತದ ಸವಿ ಹೃದ್ಗತ ಮಾಡಿದ 
ವಿದ್ವನ್ಮಣಿಗಳ ಸದ್ವøಂದದ ಖಣಿ
ಸದ್ವಿದ್ಯದ ಸವಿ ಮೋದದಿ ಉಣಿಸಲು 	2
ಮನ್ರೋವಿನ ಮನ ತಿಳಿಯುತಲಿನ್ನೂ ಮುನಿವರ ತಾನೂ 
ಸಾನುರಾಗದಿ ತನುವ ತೋರಿದನೂ ಘನ ಕರುಣಿಯು ತಾನೂ 
e್ಞÁನಗಮ್ಯ ಗುರುಗೋವಿಂದವಿಠಲನ
ಧ್ಯಾನಿಸೆ ಪೊಗುತಲಿ ವೃಂದಾವನವ 
ಆನತ ಜನ ಮನದಿಷ್ಟವ ಸಲಿಸುತ
ಮೌನಿವರೇಣ್ಯನೆ ತುಂಗೆಯ ತೀರಗ 	3
158.	ರಾಗ: ಮಧ್ಯಮಾವತಿ	ತಾಳ: ಅಟ
ಬೆಳಕಾ ತೋರಿಸೊ ಯೋಗೀಂದ್ರರ ಜನಕಾ 
	ಮಂತ್ರಾಲಯ ಪುರ ಪಾಲಕ 	ಪ
ಫಾಲನಯನ ಪ್ರಿಯ ಪಾಲಾಬ್ಭಿ ಶಾಯಿಯ
ಶೀಲ ಮೂರುತಿ ತೋರೊ ಮೇಲು ಕರುಣದಿ 	ಅ.ಪ.
ಭರ್ಮೋದರಸುತ ಸುರಮುನಿಯಿಂದಾ ಉಪದೇಶದಿಂದಾ
ಕರ್ಮಜ ದೇವರ್ಕಗಳ ಮಹವೃಂದಾ ಮಧ್ಯದಿ ನಲವಿಂದಾ 
ಊರ್ಮಿಳ ಪತಿ ಭ್ರಾತೃ ಪೇರ್ಮೆಯಿಂದಲಿ ನಿನ್ನ
ನಿರ್ಮಮತೆಗೆ ಮೆಚ್ಚಿ ಪರ್ಮನ ಮಾಡಿದ 	1
ಅನಲಾ ಭೃಗು ಪ್ರಸೂತಿಗಳಿಗೇ ಅವರಿಗೆ ಸಮನಾಗೇ
ಅನಿಲಾನಿಂದಾವೇಶಿತನಾಗೇ ಬಾಲ್ಹೀಕನಾಗೇ 
ನಿನ್ನ ತನುವು ಭೂಸ್ಪರ್ಶವಾಗಲು ಆ
ಕ್ಷಣದಲಿ ಬಿರಿಯಿತು ತತ್ ಕ್ಷಿತಿ ದೇಶವು 	2
ಸಿರಿ ಗುರುಗೋವಿಂದವಿಠ್ಠಲನಾ ಭವ್ಯ ಸುಚರಣಾ
ಸರಸಿಜ ಹೃದ್ವಾರಿಜದಲಿ ಪವನಾನಲಿ ಸ್ಥಿತನಾಗಿಹನಾ 
ತೋರಿ ಪೊರೆಯೊ ಕರುಣಾಕರ ಗುರು 
ಸಾರಿ ಭಜಿಪೆ ತವ ಚರಣಾಂಬುರುಹವ 	3
							

158 ಬೆಳಕಾ ತೋರಿಸೊ ಯೋಗಿಂದ್ರರ ಜನಕಾ

158.	ರಾಗ: ಮಧ್ಯಮಾವತಿ	ತಾಳ: ಅಟ
ಬೆಳಕಾ ತೋರಿಸೊ ಯೋಗೀಂದ್ರರ ಜನಕಾ 
	ಮಂತ್ರಾಲಯ ಪುರ ಪಾಲಕ 	ಪ
ಫಾಲನಯನ ಪ್ರಿಯ ಪಾಲಾಬ್ಭಿ ಶಾಯಿಯ
ಶೀಲ ಮೂರುತಿ ತೋರೊ ಮೇಲು ಕರುಣದಿ 	ಅ.ಪ.
ಭರ್ಮೋದರಸುತ ಸುರಮುನಿಯಿಂದಾ ಉಪದೇಶದಿಂದಾ
ಕರ್ಮಜ ದೇವರ್ಕಗಳ ಮಹವೃಂದಾ ಮಧ್ಯದಿ ನಲವಿಂದಾ 
ಊರ್ಮಿಳ ಪತಿ ಭ್ರಾತೃ ಪೇರ್ಮೆಯಿಂದಲಿ ನಿನ್ನ
ನಿರ್ಮಮತೆಗೆ ಮೆಚ್ಚಿ ಪರ್ಮನ ಮಾಡಿದ 	1
ಅನಲಾ ಭೃಗು ಪ್ರಸೂತಿಗಳಿಗೇ ಅವರಿಗೆ ಸಮನಾಗೇ
ಅನಿಲಾನಿಂದಾವೇಶಿತನಾಗೇ ಬಾಲ್ಹೀಕನಾಗೇ 
ನಿನ್ನ ತನುವು ಭೂಸ್ಪರ್ಶವಾಗಲು ಆ
ಕ್ಷಣದಲಿ ಬಿರಿಯಿತು ತತ್ ಕ್ಷಿತಿ ದೇಶವು 	2
ಸಿರಿ ಗುರುಗೋವಿಂದವಿಠ್ಠಲನಾ ಭವ್ಯ ಸುಚರಣಾ
ಸರಸಿಜ ಹೃದ್ವಾರಿಜದಲಿ ಪವನಾನಲಿ ಸ್ಥಿತನಾಗಿಹನಾ 
ತೋರಿ ಪೊರೆಯೊ ಕರುಣಾಕರ ಗುರು 
ಸಾರಿ ಭಜಿಪೆ ತವ ಚರಣಾಂಬುರುಹವ 	3
							

159 ಮಂಗಳಂ ಮಂಗಳಂ . . . ಪರಿಮಾಳಾರ್ಯರಿಗೆ

159.	ರಾಗ: [ಮಧ್ಯಮಾವತಿ]	ತಾಳ: [ತಿಶ್ರನಡೆ]
ಮಂಗಳಂ ಮಂಗಳಂ 	ಪ
ಮಂಗಳಂ ಮಂಗಳಂ ಪರಿಮಾಳಾರ್ಯರಿಗೆ 
ತುಂಗೆ ತೀರಗ ಯತಿ ಪುಂಗರೀಗೇ 	 ಅ.ಪ.
ಮಧು ವೈರಿ ಪದ ಭೃಂಗ ಸುಧೀಂದ್ರ ಚರಣಾಬ್ಜ
ಮಧುಕರರೆನಿಸುತ್ತ ಸುಧೆಯ ಸೌರಭವ 
ಬುಧ ಜನಕುಣಿಸುತ್ತ ವಿಧ ವಿಧ ಮೆರೆಯುವ
ತ್ರಿದಶ ಭೂರುಹವೆನಿಸಿ ಸದಯದಿ ಪೊರೆವಗೇ 	1
ಮಧ್ವ ಮತಾಬ್ಧಿಗೆ ಶುದ್ಧ ಪೂರ್ಣೇಂದ್ವಿಗೆ
ಅದ್ವೈತ ಕಲಿಮಲ ದಾವಾಗ್ನಿಗೇ 
ಸದ್ವೈಷ್ಣವ ಕುಮುದೇಂದು ವಿದ್ವಾಂಸನತ ಪಾದ
ಶೌದ್ಧೋದನಿಯ ಮತ ವಿಧ್ವಂಸಕಗೇ 	2
ಕರದೆಡೆ ಬರುವಂಥ ಪರಮ ದಯಾಳುಗೆ
ಧರೆಯೊಳೆಲ್ಲೆಲ್ಲೂ ಮೆರೆಯುತಿಹಗೇ 
ಶರಣರ ಹೃತ್ಕಮಲ ವರಮಿತ್ರನೆಂದೆನಿಸಿ
ಗುರುಗೋವಿಂದವಿಠಲ ಚರಣಾಬ್ಜ ಧೇನಿಪಗೇ 	3
							

160 ಯತಿರಾಜಾ ಪಾಲಿಸೊ

160.	ರಾಗ: ಶಂಕರಾಭರಣ	ತಾಳ: ಅಟ
ಯತಿರಾಜಾ ಪಾಲಿಸೊ ಎನ್ನ ಯತಿರಾಜಾ 	ಪ
ಯತಿರಾಜಾ ಪಾಲಿಸೊ ಎನ್ನ ಅಹಂ
ಮತಿಯ ಕಳೆದು ಗುರುವರೇಣ್ಯ ||ಆಹ|| 
ಸತತದಿ ಹರಿ ಧ್ಯಾನ ರತನನ ಮಾಡಿ ಸದ್- 
ಗತಿಯ ಸೇರುವಂಥ ಪಥದಲ್ಲಿರಿಸೊ ರಾಜ 	ಅ.ಪ.
ವೀಣಾ ವೆಂಕಟ ನಾಮಾಭಿಧ ಕುಂಭ-
ಕೋಣ ಪುರದೊಳು ಮೆರೆದಾ ಓವಿ- 
e್ಞÁನಿ ಸುಧೀಂದ್ರರೊಲಿಸಿದಾ ಬಹು-
ಮಾನವಾಗಿ ಶಾಲು ಪಡೆದಾ ||ಆಹ||
ಏನು ಇದಾಶ್ಚರ್ಯ ಮಾನ ಉಳಿವದೆಂತು 
ನಾನೊಂದು ಕಾಣೆನೆನುತಾವಸನ ಮುಂದಿಟ್ಟ 	1
ಅಂದಿನಂದಿನ ಪಾಠಕ್ಕೆಲ್ಲ ಟೀಕೆ
ಛಂದಾಗಿ ಬರೆದಿರುವ್ಯೆಲ್ಲ ನಮ್ಮ
ಹಿಂದಿನ ಸಂಶಯವೆಲ್ಲ ನೀಗಿ
ಮುಂದೆ ಜರುಗಿತು ಪಾಠವೆಲ್ಲ ||ಆಹ|| 
ಎಂದು ತಮ್ಮ ವಸನ ಕಂದ ನಿನ್ನಯ ಮೇಲೆ
ಹೊಂದಿಸಿ ಮುದದಿಂದ ಬಂದೆವೆಂದರ ಶಿಷ್ಯ 	2
ಗುರುವು ಪಟ್ಟರು ಬಲು ಮೋದಾ ಸುಧಾ
ಪರಿಮಳಾರ್ಯರೆಂಬ ಬಿರುದಾ ಪೊಂದಿ
ಇರಲು ಕಾಲಾಂತರದಿಂದಾ ಪಡೆದೆ
ವರ ಯತ್ಯಾಶ್ರಮವವರಿಂದಾ ||ಆಹ||
ಮೆರೆಸಿದೆ ರಾಮರ ವರ ವೈಭವದಿಂದ
ದುರುಳ ಮಾಯ್ಗಳಮತ ತರಿದಿಟ್ಟೆ ವಾದದಿ 	3
ಬೇಗೆಯಿಂದಳುತಿದ್ದ ಶಿಶುವಿಗೆ ಚೈಲ
ಆಗಸದೊಳು ನೀನು ನಿಲಿಸಿದೆ ಹಾಂಗೆ
ಮಾರ್ಗದಿ ಪ್ರಸವಿಸಿದವಳಿಗೆ ನೀರ-
ನುಗಮಿಸುತ ನೀನು ಪೊರೆದೇ ||ಆಹ||
ನಿಗಮಾಲಯ ವಾಸ ರಾಘವೇಂದ್ರ ಗುರುವೆ
ಬಗೆ ಬಗೆ ಗ್ರಂಥವ ಮಿಗಿಲಾಗಿ ರಚಿಸಿದೆ 	4
ಪಂಗು ಬಧಿರ ಮೂಕ ಜನರು ನಿಮ್ಮ
ಹಿಂಗದೆ ಬಂದು ಸೇವಿಪರು ಬಂದ
ಭಂಗಗಳೆಲ್ಲ ನೀಗುವರು ಯತಿ-
ಪುಂಗನೆ ನಿನಗೆ ಸರಿಯಾರು | ||ಆಹ||
ಗಂಗಾ ಜನಕ ರೂಪಗಳು ನಾಲ್ಕರಿಂ
ಅಂಗಲಾಚಿಪ ಜನಂಗಳ ಪೊರೆಯುವ 	5
ಸಂದರಶುನದಿಂದ ಅಘ ವೃಂದ
ಬೆಂದು ಪೋಗುವುದು ಬೇಗ ನಿಮ್ಮ
ವೃಂದಾವನಗತ ಮೃತ್ತಿಕೆ ಜಲ
ಬಿಂದು ಉದರ ಪೊಕ್ಕಾಗ ||ಆಹ||
ವೃಂದಾವನಪತಿ ಗೋವಿಂದನ ಮಂದಿರ
ಬಂದು ಸೇರುವುದಕ್ಕೆ ಅಂದ ಸೋಪಾನವು 	6
ವರಹಸುತೆ ತೀರ ವಾಸಾ ಭಕ್ತ
ಸುರತರುವೆ ನಿನ್ನ ದಾಸಾನಾಗಿ
ಇರಿಸೊ ಭೂತಳಾಧೀಶ ಬೇಡ್ವೆ
ವರ ಒಂದ ನಾನಿನ್ನ ಅನಿಶ ||ಆಹ||
ಗುರುಗೋವಿಂದವಿಠಲನ ಚರಣಾರವಿಂದವ
ನಿರುತ ಭಜಿಸುವಂಥ ವರಮತಿ ಕೊಟ್ಟೆನ್ನ 	7
							

161 ಯತಿವರ್ಯ ಯತಿವರ್ಯ

161.	ರಾಗ: ವಸಂತ	ತಾಳ: ಆದಿ
ಯತಿವರ್ಯ ಯತಿವರ್ಯ 	ಪ
ಯತಿ ಸುಧೀಂದ್ರಕರ ಸುತನೆಂದೆನಿಸಿದ 	ಅ.ಪ.
ಆರ್ತ ಜನೋದ್ಧಾರ ಕೀರ್ತಿ ನಿನ್ನದೆನೆ-
ವಾರ್ತೆ ಕೇಳಿ ಪರಮಾರ್ಥವ ಯಾಚಿಪೆ 	1
ಪ್ರಣವಪಾದ್ಯ ಹರಿ ಗುಣ ಸಂಪೂರ್ಣನ
ಗುಣವರ್ಣನ ಸುe್ಞÁನವನೀಯೊ 	 2
ಪರಿಮಳಾರ್ಯ ತವ ಚರಣಾರಾಧನೆ
ಕರುಣಿಸಿ ಸುಧೆರಸ ಎರೆವುದೆನಗೆ ಗುರು 	3
ಅನ್ಯನಲ್ಲ ನಾ ನಿನ್ನವರವನೈ
ಘನ್ನ ಮಹಿಮ ಸಂಪನ್ನ ಪೊರೆಯೊ ಗುರು  	 4
ಯೋಗಿವರ್ಯ ತವ ಅಘಹರನಾಮಕೆ
ಮಿಗಿಲಿಲ್ಲವೊ ಗುರು ಬಾಗಿ ನಮಿಪೆ ನಿನ್ನ 	 5
ಕಾಮಧೇನು ಪರಿ ಕಾಮ ಫಲಪ್ರದ
ಪಾಮರ ಮನುಜನ ನೀ ಮಾಣದೆ ಪೊರೆ 	 6
ಭೂಮಾರ್ಣವ ಗುರುಗೋವಿಂದವಿಠಲನ
ಕಾಮಿಪೆ ಮನ್ಮನ ಸೀಮೆಯಲಿರಿಸೋ 	 7
							

162 ಸ್ಮರಿಸುವರಘಹರ ರಾಘವೇಂದ್ರ ಗುರು

162.	ರಾಗ: ಆರಭಿ	ತಾಳ: ಆದಿ
ಸ್ಮರಿಸುವರಘಹರ ರಾಘವೇಂದ್ರ ಗುರು
ಆರುಮೊರೆ ಇಡುವೆನು ತವಪದದಲ್ಲೀ 	ಪ
ಸುರತರು ನಿನ್ನನು ನಿರುತದಿ ನುತಿಸುವ
ವರವನೆ ಕರುಣಿಸು ಗುರು ರಾಘವೇಂದ್ರ 	ಅ.ಪ.
ಕೃತ ಯುಗದೊಳು ತಾ ಮುನಿ ಕಶ್ಯಪನ
ಸುತನಲಿ ಮೋದದಿ ಸುತನಾಗಿ ಜನಿಸುತ 
ಪಿತನತಿ ಬಾಧೆಗೆ ಅಳುಕದೆ ಮನ್ಮಥ-
ಪಿತನಧಿಕೆಂದು ಬಹು ಸಾರಿದೆ ಗುರುವರ 	1
ಜನಪ ಪ್ರತೀಪನ ಸುತ ವರನೆನಿಸುತ
ಜನಿಸುತ ಪ್ರೀತಿಲಿ ದ್ವಾಪರದಲ್ಲೀ 
ಘನಬಲ ಬಾಹ್ಲೀಕನೆನಿಸುತ ನೀನೂ
ಅನಿರುದ್ಧ ಮೂರ್ತಿಯ ಸೇವಿಸಿ ಮೆರೆದೆ 	2
ನ್ಯಾಯಾಮೃತ ಚಂದ್ರಿಕೆಗಳ ರಚಿಸುತ
ಮಾಯ ಮತವನು ಪರಿಪರಿ ಜರಿಯುತ 
ಕಾಯಜನಯ್ಯನ ಕೀರ್ತಿಯ ಬೀರುತ
ತೋಯಜಾಕ್ಷ ಹರಿ ಅಧಿಕೆಂದು ಸಾರಿದೆ 	 3
ಸಂಗವ ತೊರೆದು ಸುಧೀಂದ್ರರ ಕರಜನೆ
ತಂಗಾತೀರದಿ ಮಂತ್ರಾಲಯದಲಿ 
ಮಂಗಳ ಮಹಿಮನ ಧ್ಯಾನವಗೈಯುತ
ತುಂಗವಿಕ್ರಮ ಹರಿ ಪರನೆಂದು ಸಾರಿದೆ 	4
ವಾತನ ಮತ ವಿಸ್ತರಿಸಿದ ಧೀರನೆ
ದ್ವೈತ ದುಂದುಭಿಯ ಮೊಳಗಿಸಿದಾತನೆ 
ದೂತರ ಪ್ರಿಯ ಗುರುಗೋವಿಂದವಿಠಲನ
ಪ್ರೀತಿಲಿ ಭಜಿಸುವ ದಾಸಾಗ್ರಣಿಯೇ 	5
46. ಗುರುಜಗನ್ನಾಥವಿಠಲ
							

163 ಆ ರಾಯರ ಪದ ನೀರಜ ಯುಗ

163.	ರಾಗ: ಶಂಕರಾಭರಣ	ತಾಳ: ಏಕ
ಆ ರಾಯರ ಪದ ನೀರಜ ಯುಗ ಮನೋ-
ವಾರಿಜದಲಿ ನಾ ಭಜಿಸುವೆನು 	 ಪ
ಸಾರಿದ ಜನರಘÀ ದೂರದಿ ಓಡಿಸಿ
ಧಾರುಣಿಯೊಳು ಸುರಸೌರಭಿ ಎನಿಸಿಹ	ಅ.ಪ
ಆವರ ಪದಜಲ ಈ ಭುವನತ್ರಯ
ಪಾವನತರವೆಂದೆನಿಸುವದೋ
ಆವರ ಪದಯುಗ ಕೋವಿದಜನರು
ಭಾವದಿ ದಿನದಿನ ಸೇವಿಪರೊ
ಆವರ ಹೃದಯದಿ ನಾರಾಯಣ ಚ-
ಕ್ರಾವತಾರವ ಧರಿಸಿಹನೊ
ಶ್ರೀವರ ಹರಿ ಕರುಣಾವಲೋಕನದಿ
ದೇವಸ್ವಭಾವವನೈದಿಹರೊ	1
ಆವ ಮಾನವನಿವರ ಚರಣ 
ಸೇವಕತೆರನೆಂದೆನಿಸುವನೋ1
ಭಾವಿಪರವನೀತಳದೊಳು ಮತ್ತೆ 
ಕೋವಿದ ಜನರೆಲ್ಲರು ಆವನ-
ಧೀನನಾಗುವರು ಅವನೇ ಅವನಿ- 
ದೇವೋತ್ತಮನೆಂದೆನಿಸುವನು
ಪಾವನಿ ಮುಖ ದೇವೋತ್ತಮರೆಲ್ಲರು
ಈ ವಿಧ ಮಹಿಮೆಯ ತೀವ್ರದಿ ತೋರುವರು	2
ಆವರು ಅವನಿ ದೇವತೆಗಳಿಗೆ
ಜೀವನವಿತ್ತು ಪೊರೆದಿಹರೊ
ಪಾವಕಗ್ಹಾಕಿದ ಹಾರವ ಮತ್ತೆ
ಭೂವರನಿಗೆ ತಂದಿತ್ತಿಹರೊ
ಮಾವಿನ ರಸದಲಿ ಬಿದ್ದಿಹ ಶಿಶುವಿಗೆ
ಜೀವನವಿತ್ತು ಕಾಯ್ದಿಹರೋ
ಶೈವನ ನಿಜ ಶೈವವ ಬಿಡಿಸಿ ತಮ್ಮ
ಸೇವೆಯನಿತ್ತು ಕಾಯ್ದಿಹರೊ	3
ಸಲಿಲವ ತಂದಿರುತಿಹ ನರನಿಗೆ
ಸುಲಲಿತ ಮುಕ್ತಿಯನಿತ್ತಿಹರೊ
ಚಲುವ ತನಯನಾ ಪುಲಿನದಿ ಪಡೆದಿಹ
ಲಲನೆಯ ಚೈಲದಿ ಕಾದಿಹರೊ
ಸಲಿಲವು ಇಲ್ಲದೆ ಬಳಲಿದ ಜನಕೆ 
ಸಲಿಲವನಿತ್ತು ಸಲಹಿದರೊ
ಇಳೆಯೊಳು ಯತಿಕುಲತಿಲಕರೆಂದೆನಿಸಿ
ಸಲಿಸದಂಥದು ತಾವು ಸಲಿಸಿಹರೊ	4
ಅನುದಿನದಲಿ ತಮ್ಮ ಪದಕಮಲವನು
ಮನದಲಿ ಬಿಡದೆ ಭಜಿಸುವ
ಜನರಿಗೆ ನಿಜಘನಸುಖವನು ಕೊಟ್ಟವ-
ರನುಸರಿಸಿ ಇರುತಿಹರ
ಮನೋವಾಕ್ಕಾಯದಿ ನಂಬಿದ ಜನಕೆ
ಜನುಮವನ್ನು ನೀಡರು ಇವರ
ಘನಗುಣನಿಧಿ ಗುರುಜಗನ್ನಾಥವಿಠಲ-
ನಣುಗಾಗ್ರೇಸರನೆನಿಸಿಹರ	5
1 ಸೇವಕಪರ - ಪಾಠ
ಸುಳಾದಿ 
							

164 ಆದಿಯುಗದಿ ಮಹ ಆದಿತೇಯನೊಬ್ಬ (ಸುಳಾದಿ)

164.	ರಾಗ: ನಾಟ	ತಾಳ: ಧ್ರುವ
ಆದಿಯುಗದಿ ಮಹ ಆದಿತೇಯನೊಬ್ಬ
ಮೇದಿನಿಯೊಳ್ ಸ್ವರ್ಣಕಶ್ಯಪು ನಾಮದಿ
ಸಾಧಿಸಿ ಬಂದವಗೊಬ್ಬ 
ಸೋದರ ಸ್ವರ್ಣಾಂಬಕನೆನಿಸಿ
ಮೇದಿನಿ ಚೋರನಾಗಿ ಹತನಾದನು
ಆದಿಶೇಷಾಂಶನು ವಿಷ್ವಕ್ಸೇನ ವಾಯುತನುಜ ತಾ-
ನಾದ ಪ್ರಹ್ಲಾದ ಮುಖ್ಯ ಪ್ರಾಣಾವೇಶದಿಂದ
ಸೋದರ ಜೀವಾಂಶ ಅಪಾನಾವಿಷ್ಟ ಸ-
ಹ್ಲಾದನಾಮಕ ಮಿತ್ರಾಹ್ವಯ ಸೂರ್ಯನಾದ ಕ-
ಹ್ಲಾದ ವ್ಯಾನಾವೇಶದಿಂದ
ಮೋದದಿ ಸೋಮಾಂಶೋದಾನಾಯುತ ಆ-
ಹ್ಲಾದ ನಾಮಕ ಸಂಭೂತನಾದ 
ಆದಿಗಣಪ ಸಮಾನಾವೇಶದಿಂದ 
ಆದರೈವರೀ ದೈತ್ಯನ ಪುತ್ರರೆನಿಸಿ
ಮೇದಿನಿ ಸುರರುದ್ಧರಿಸಲೋಸುಗ
ಆದಿದೈವ ನಾರಾಯಣನೆ ತಾ ಅ-
ನಾದಿಕಾರಣ ವಿಶ್ವಜನ್ಮಾದಿಕಾರಣ-1
ನಾದ ಸರ್ವಜ್ಞ ಸ್ವತಂತ್ರ ಸುಗುಣಪೂರ್ಣ
ವೇದಪುರುಷಾದಿ ಜಡಾದಿ2 ಜಗಕೆ
ಆಧಾರ ತಾನೊಬ್ಬ ಹರಿ ಎಂಬೊ e್ಞÁನವ
ಬೋಧಿಸಿ ಬೊಮ್ಮಮುಖರು ಹರಿ
ಪಾದಸೇವಕರೆನುತ ತಿಳಿದು
ವಾದದಿ ವಾದಿಗಳ ಜಯಸಿದರಿವರ
ಪಾದಸೇವಿಸಿ ಕರುಣಾ ಪಡೆದು
ಆದಿ ಗುರುಜಗನ್ನಾಥವಿಠಲನ್ನ
ಆದರದಲಿ ಭಜಿಸಿ ಪರಮಸುಖವನೈದ ಬೇಕು
ರಾಗ: ಕಲ್ಯಾಣಿ	ತಾಳ: ಮಟ್ಟ
ಅಸುರರ ಜನ್ಮದಿ ಪುಟ್ಟಿದ ಇವರಿಗೆ
ಶ್ವಸನನ ಆವೇಶ ಸುರರಾವೇಶ ಬಲದಿ
ಅಸಮಙÁ್ಞನ ಭಕುತಿ ವಿರಾಗವು
ವಸುಧೆಯ ತಳದಿ ದಿನದಿನದಲ್ಲಿ
ಪಸರಿಪ ಸೂರ್ಯನ ಪ್ರಭೆಯಂದದಲಿ
ಮಿಸುಪದಕಿದೆ ಕಾರಣ ಉಂಟು
ಬಿಸಜಾಂಬಕ ಹರಿ ಪೇಳಿದ ಇವರಿಗೆ
ಅಸುರೇಶ ಹಿರಣ್ಯಕಶಿಪುವಿನಲ್ಲಿ
ಶಿಶುಭಾವದಿಂದ ಜನಿಸಲು ಪೋಗಿರಿ
ಪುಸಿಯಲ್ಲ ಮತ್ಪಾದ ಒಸರದೆ ನೀವು ಪ್ರಹ್ಲಾದಾ-3
ದ್ಯಸಮ ಮಹಿಮರಾಗಿ ಜನಿಸಿರೆಂದು	
ಉಸುರಿದ ವಾಕ್ಯವು ಪ್ರಮಾಣ ಸಿದ್ಧವೆನ್ನಿ
ವ್ಯಸನದಲೈವರು ಹರಿಯನೆ/ಹರಿಯಿಂದಲಿ ಮತ್ತೆ
ಬೆಸಗೊಂಡರೀಪರಿ ಅಸುರನ ಪತ್ನಿಯ 
ಬಸಿರೊಳು ಪುಟ್ಟುವುದು ವಶವಲ್ಲವೊ ಸ್ವಾಮಿ
ಕುಸುಮನಾಭನೆ ನಿನ್ನ ಅಸಮಲೋಕದ ಸುಖ 
ಎಸಗದು ಎಸಗದು ವಸುಧಿಯ ತಳದಿ ಎಂದಿನಕಾಲಕ್ಕು
ಮುಸುಕುವದಙÁ್ಞನ ದುಃಖದ ಭವದಲ್ಲಿ
ಕಸವಿಸಿಗೊಳುತ ಙÁ್ಞನವನೀಗಿ
ಬಿಸನಿಲಯನೆ ನಿನ್ನ ದರುಶನವಿಲ್ಲದೆ
ಅಸು ನಿಲ್ಲುವ ಬಗೆ ಯಾವುದು ಪೇಳೊ
ಶಶಿಧರವಂದ್ಯ ಗುರುಜಗನ್ನಾಥವಿಠಲ ನಮ್ಮ
ವ್ಯಸನವನು ಕಳೆದು ಸುಖವನು ಸಲಿಸೊ
ರಾಗ: ಕಾಂಬೋಜಿ 	ತಾಳ: ತ್ರಿವಿಡಿ/ತ್ರಿಪುಟ
ಭಕುತವಾಕ್ಯವ ಲಾಲಿಸಿ ತಾನಾಗ
ಲಕುಮಿರಮಣನು ಈ ಪರಿ ನುಡಿದನು
ವಿಕಳ ಪೊಂದದೆ ನೀವು ತ್ವರಿತದಿ ಧರೆಯೊಳು
ಸಕಲರು ಜನಿಸಲು ಮುಸಕದಙÁ್ಞನ
ಲಕುಮಿ ಭೂಮಿಯ ಸಹಿತ ಇರುವೆನು ನಿಮ್ಮೊಳು
ವ್ಯಕುತನೆನಿಸಿ ನಿತ್ಯ ಪರಿಪರಿ ಮಹಿಮೆಯ
ಪ್ರಕಟಮಾಡುವೆ ಮುಖ್ಯಪ್ರಾಣನಿಪ್ಪನು ಸತತ
ಕಕುಲಾತಿ ಯಾಕಿನ್ನು ನಡಿರೆಂದು ಹರಿಯೆಂದ
ಉಕುತ ವಾಕ್ಯದಿಂದ ದಿತಿಜನಲ್ಲಿ
ಸುಕೃತಿಗಳೈವರು ಉದಯವೈದಿದರಾಗ
ಮುಕುತಿದಾಯಕ ಗುರುಜಗನ್ನಾಥವಿಠಲನೆಂಬ
ಭಕುತಿ ಪೂರ್ವಕ ಙÁ್ಞನವೃದ್ಧಿಯೈದಿದರು
ರಾಗ: ಆರಭಿ 	ತಾಳ: ಅಟ
ಪಿರಿಯ ಪ್ರಹ್ಲಾದನ್ನ ಕರೆದು ತೊಡೆಯ ಮೇಲೆ
ಇರಿಸಿ ಪ್ರೇಮದಿ ನಿಮ್ಮ ಗುರುವೇನು ಪೇಳ್ಯಾನೆ
ಮರೆಯದೆ ಎನ್ನಮುಂದೆ ಅರುಹು ಎನಲು ಬಾಲ
ಕಿರಿನಗೆ ಮುಖದಿಂದ ಹರಿಯೇ ಸರ್ವೋತ್ತಮ
ಹರಬೊಮ್ಮಮುಖರೆಲ್ಲ ಪರಿವಾರಭೂತರು
ಅರಿದಿಪ್ಪೆ ಎನ್ನಯ್ಯ ಸರಸಿಜಜಾಂಡಕ್ಕೆ
ಅರಸು ತಾನಾಗಿದ್ದು ಇರುವದೀ ಚೇತನ
ತರುವಾಯ ಜಡಮಯ ಸರ್ವಸ್ಥಳದಲ್ಲಿ
ನಿರುತದಿ ವ್ಯಾಪಿಸಿ ಇರುತಿಹ ಹರಿ ಎಂದು
ಅರಿತ ಮಾನವÀÀನಿಗೆ ದೊರೆವೋನು ನಿಶ್ಚಯ
ಅರಿಯೆಂದು ಪೇಳಿದ ತನ್ನ ತರುಳನ ನುಡಿಕೇಳಿ
ದುರುಳನು ಕ್ರೋಧದಿ ಭರದಿಂದ ಕಂಬವ 
ಕರದಿಂದ ಬಡಿಯಲು ನರಮೃಗಾಕಾರದಿ 
ಹೊರಗೆ ಬಂದು ದೈತ್ಯನುದರವ ಬಗೆದು 
ಕರುಳ (+ಮಾಲೆಯ) ತಾ ಕೊರಳೊಳು ಧರಿಸಿದ ಅನು-
ಚರಜನ ಪರಿಪಾಲ ಬಿರುದು ಬೀರಿದ ನಮ್ಮ ಗುರುಜಗನ್ನಾಥವಿಠಲ
ಶರಣರ ಮರೆಯನೋ ಧರಿತಳದೊಳಗೆ
ರಾಗ: ಇಚ್ಛಾ 	ತಾಳ: ಆದಿ
ಈ ತೆರ ಪ್ರಹ್ಲಾದÀ ಹರಿಪಾದವ ಭಜಿಸಿ
ಪ್ರೀತಿ(+ಯ) ಪಡೆದು ಭೂಸುರಗಣಕೆ
ಭೂತಳದೊಳಗೆ ಯತಿಗಳ ಕುಲಕೆ
ನಾಥನು ವ್ಯಾಸಮುನಿ ಎನಿಸಿ ಮರಳಿ
ಖ್ಯಾತ ಶ್ರೀ ರಾಘವೇಂದ್ರನೆಂದೆನಿಸಿ
ಪ್ರೀತಿಯಿಂದಲಿ ಭಕ್ತರ ಪೊರೆಯಲು
ನೀತಭಾವದಲಿ ಯತಿಯಾಶ್ರಮ ಪೊಂದಿ
ಸೀತಾಪತಿರಾಮ ಯದುನಾಯಕಕೃಷ್ಣ
ಭೀತಿಹರ ನರಸಿಂಹ ವ್ಯಾಸರ ಭಜಿಸಿ
ದೂತರ ಮನೋರಥ ಪೂರ್ತಿಸಿ ಪೊರೆವನು
ದಾತ ಗುರುಜಗನ್ನಾಥವಿಠಲನ್ನ
ನೀತವಿಭೂತಿಯ ಪಡೆದು ನಿರ್ಭೀತನಾಗಿಹನು
ಜತೆ
ದೂತಜನರ ಮಹಾಪಾತಕಹರನೆನ್ನಿ
ಪ್ರೀತ ಗುರುಜಗನ್ನಾಥವಿಠಲನೊಲಿವ
1 ಮೋದಾನಂದ ಮೂರುತಿ ಸುಗುಣ | 
ಬೋಧಪೊರ್ಣ ಸರ್ವಜ್ಞ ಸ್ವಾತಂತ್ರ; 
2 ತೃಣ ಜಡ ಚೇತನ; 3 ಪುಸಿಯಲ್ಲ ಮಚ್ಛಾಪ
| ಅಸುರಭಾವ ಪ್ರಹ್ಲಾದಾದ್ಯ| 
ರಸಮಮಹಿಮರಾಗೀ ಜನಿಸಿರೆಂದು - ಪಾಠ
ಆದಿತೇಯ=ಅದಿತಿಯ ಮಕ್ಕಳು (ದೇವತೆ), ಇಲ್ಲಿ ಜಯ;
							

165 ಆವನ ಭಯ

165.	ರಾಗ: ಜಂಜೂಟಿ	ತಾಳ: ಏಕ
ಆವನ ಭಯ ಆನತಭಾವದಿ ಗುರುಪದ ಸೇವಕನಾದÀವಗೆ 	 ಪ
ಕೋವಿದ ಕುಲ ಸಂಭಾವಿತ ಗುರುವರ
ಕಾವನೆನುತ ಮನೋಭಾವದಲಿರುವವಗೆ	ಅ.ಪ
ಧಾರುಣಿಪತಿ ತನ್ನ ಸೇರದೆ ಪರಿಪರಿ
ಗಾರುಮಾಡಿದರೇನೂ
ಕ್ರೂರತನದಲಧಿಕಾರಿ ಜನಂಗಳು
ದೂರ ನೋಡಲೇನು
ನಾರಿ ತನುಜ ಪರಿವಾರದ ಜನರು
ಮೋರೆಗಾಣದಿರಲೇನೂ
ಘೋರ ಭಯ ಪರಿಹಾರಕ ನಮ್ಮ
ಧೀರ ಗುರುಪದ ಸೇರಿದ ನರನಿಗೆ	1
ಕಾಮಿತ ಫಲಪ್ರದ ಈ ಮಹಮಹಿಮನ
ನೇಮದಿ ಭಜಿಸುವಗೆ
ಆಮುಷ್ಮಿಕ ಸುಖ ಪ್ರೇಮದಿ ನೀಡುವ
ಕಾಮಧೇನು ನಂಬಿದವಗೆ
ಧೀಮಂತರ ಮಹÀಸ್ತೋಮದಿ ನಮಿತನ
ನಾಮವ ಜಪಿಸುವಗೆ
ಈ ಮಹ ಸಾರ್ವಭೌಮನ ಪದಯುಗ
ತಾಮರಸವ ಹೃದ್ಯೋಮದಿ ನೆನೆವಗೆ	2
ಭೂತಲ ಮಧ್ಯದಿ ಖ್ಯಾತಿಯ ಪಡೆದ್ಯತಿ
ನಾಥನ ಸ್ಮರಿಸುವಗೆ
ಭೂತ ಪ್ರೇತ ಭಯ ಘಾತಿಸಿ ನಿಜಸುಖ-
ದಾತನ ಮೊರೆ ಪೊಕ್ಕವಗೆ
ಕಾತರ ಪಡುವ ಅನಾಥsÀರ ಪೊರೆವನ
ದೂತನಾದ ನರಗೆ
ದಾತ ಗುರುಜಗನ್ನಾಥವಿಠಲನ
ಪ್ರೀತಿಯಪಡೆದ್ಯತಿನಾಥನ ಭಜಿಪಗೆ	3
ಈ ಕೀರ್ತನೆಯಲ್ಲಿ ಶ್ರೀ ರಾಯರ 
ಮಹಿಮೆಗಳನ್ನು ಶ್ರೀಹರಿಯ 
ದಶಾವತಾರಗಳ ಮಹಿಮೆಗಳೊಂದಿಗೆ 
ಹೋಲಿಸಿದ್ದಾರೆ
							

166 ಇಂದು ನೋಡಿದೆ

166.	ರಾಗ: ಮಧ್ಯಮಾವತಿ/ಆರಭಿ	ತಾಳ: ಏಕ/ತ್ರಿವಿಡಿ
ಇಂದು ನೋಡಿದೆ ನಂದದಾಯಕ ಮು-
ನೀಂದ್ರ ವಂದಿತ ಚರಣನ	ಪ
ವಂದನೀಯ ಶುಭೋರು ಗುಣಗಣ
ಸಾಂದ್ರ ಗುರುರಾಘವೇಂದ್ರನ  	ಅ.ಪ
ವೇದತತಿ ಶತಮೋದಗಿತ್ತನ ಆದಿ ಮತ್ಸ್ಯನ ತೆರದಲಿ
ವೇದವಾದವ ಶೋಧಮಾಡಿ ಮೇದಿನೀಸುರಗಿತ್ತನ	 1
ಕಮಠರೂಪದಲಮರತತಿಗೆ ಅಮೃತ ನೀಡಿದ ತೆರದಲಿ
ಸ್ವಮತ ಸುಧೆಯನು ಪ್ರಮಿತಗಿತ್ತಿಹ ಅಮಿತ ಸುಮಹಾಮಹಿಮನ	2
ಧರಣಿಮಂಡಲ ಧುರದಿ ದಾಡಿಲಿ ಧರಿಸಿ ತಂದನ ತೆರದಲಿ
ಧರಣಿ ಜನರಿಗೆ ಧರೆಯೆ ಮೊದಲಾದ ಪರಮಭೀಷ್ಟೆಯನಿತ್ತು ಪೊರೆವನ	3
ದುರುಳದಿತಿಜನ ತರಿದು ನಿಜಪದÀ ತರುಳಪಾಲನ ತೆರದಲಿ
ದುರಿತರಾಶಿಯ ತರಿದು ತನ್ನಯ ಶರಣಜನಪರಿಪಾಲನ	4
ಬಲಿಯ ಯಙ್ಞದÀ ಸ್ಥಳದಿ ಭೂಮಿಯನಳೆದರೂಪನÀ ತೆರದಲಿ
ಖಳರ ವಂಚಕÀ ತನ್ನ ತಿಳಿವಗೆ ಸುಲಭದಿಂದಲಿ ಒಲಿವನ 	5
ದುಷ್ಟ ಕ್ಷತ್ರಿಯರಷ್ಟು ಕುಲವನು1 ಸುಟ್ಟು ಬಿಟ್ಟನ ತೆರದಲಿ 
ಕೆಟ್ಟ ರೋಗವು ಶ್ರೇಷ್ಠ ಭೂತದ ಅಟ್ಟುಳಿಯನೆ ಕಳೆವನ	6
ಜನಕನಾಜ್ಞದಿ ವನವ ಚರಿಸಿದ ಇನಕುಲೇಶನ ತೆರದಲಿ
ಜನರಿಗೀಪ್ಸಿತ ತನಯ ಮೊದಲಾದ ಮನದಪೇಕ್ಷೆಯ ನೀಡೋನ	7
ಕನಲಿ ದ್ರೌಪದಿ ನೆನೆಸಲಾಕ್ಷಣಕೆ ಬಂದನ ತೆರದಲಿ
ಮನದಿ ತನ್ನನು ನೆನೆವ ಜನರನು ಜನುಮ ಜನುಮದಿ ಪೊರೆವನ	8
ಮುದ್ದು ಸತಿಯರ ಬುದ್ಧಿಗೆಡಿಸಿ ಗೆದ್ದು ಬಂದನ2 ತೆರದಲಿ
ಮದ್ದು ಮತಿಯನು3 ತಿದ್ದಿ ಭಕುತಗೆ ಶುದ್ಧ ಙÁ್ಞನವ ನೀಡೋನ	9
ಕಲಹ ಕಂಟಕ ಕಲಿಯವೈರಿ ಕಲ್ಕಿರೂಪನ ತೆರದಲಿ
ಹುಳುಕು ಮನವನು ಕಳೆದು ತನ್ನಲಿ ಹೊಳೆವ ಮನವನು ಕೊಡುವನ	 10
ನೀತಗುರುಜಗನ್ನಾಥವಿಠಲ ಭೂತಳಕ್ಕಧಿನಾಥನು
ಆತನಂತ್ಯತಿನಾಥ ಜಗಕೆ ಪ್ರೀತಿ ಶುಭಫಲದಾತನ	11
1 ನಷ್ಟಗೈದನ; 2 ಬುದ್ಧ ರೂಪನ; 3 ಮಂದಮತಿಯನು - ಪಾಠ
							

167 ಎಂಥಾತ ಗುರುರಾಯನು

167.	ರಾಗ: ಶಂಕರಾಭರಣ	ತಾಳ: ಏಕ
ಎಂಥಾತ ಗುರುರಾಯನು ಜಗ- 
ದಂತರ್ನಿಯಾಮಕನ ನಿಜದೂತನು 	ಪ
ಸಂತೋಷದಿಂದಲಿ ಅಂತೇವಾಸಿಗಳ
ನಿಂತುಪಾಲಿಸುತಿಹನು	ಅ.ಪ
ಚಿಂತೆಯು ಯಾಕೆಂದನು ನಿಶ್ಚಿಂತ ಮಾರ್ಗವಿದೆಂದನು
ಅಂತರದೊಳು ಸಿರಿಕಾಂತನ ಪದವೇಕಾಂತದಿ ಭಜಿಸೆಂದನು	1
ಯಾತಕೆ ಶ್ರಮವೆಂದನು ನಿನಗೆ ಪಾತಕÀವಿಲ್ಲೆಂದನು
ದೂತನೆ ಎನ್ನೊಳಿಪ್ಪ ಮಾತರಿಶ್ವನ ಸಿರಿನಾಥನ ಭಜಿಸೆಂದನು	2
ಪೋತನೆ ಕೇಳೆಂದನು ಎನ್ನ ಮಾತು ಮೀರದಿರೆಂದನು
ಪಾಥೋಜ ಗುರುಜಗನ್ನಾಥವಿಠಲ ನಿನ್ನ ಮಾತು ಲಾಲಿಪÀನೆಂದನು	3
							

168 ಎಂಥಾದಯವಂತನೋ ಸಂತಾರನಾಥನೋ

168.	ರಾಗ: ಧನಶ್ರೀ	ತಾಳ: ತ್ರಿವಿಡಿ
ಎಂಥಾದಯವಂತನೋ ಸಂತಾರನಾಥನೋ	 ಪ
ಕಂತೂ ಜನಕಾನ ಪ್ರಿಯ್ಯಾನೋ ಅ-
ನಂತಾ ನಂತಾ ಮಹಿಮನೋ	ಅ.ಪ
ರಮ್ಯಾ ಗುಣಾ ಪೂರ್ಣನೋ ಆ-
ಗಮ್ಯಾ ಸಚ್ಚರಿತಾನೋ
ನಮ್ಯಾನತರಾ ಪೊರೆವಾನೋ ಈತ
ನಮ್ಯಲ್ಲಾರ ಸಲಹೋನೋ	1
ಪ್ರಾಣಾವೇಶಾಯುತನೋ ಜಗ-
ತ್ರಾಣಾ ತಾನಾಗಿಹನೋ
ಕ್ಷೋಣೀಯೋಳ್ವಿಖ್ಯಾತಾನೋ ಎನ್ನ
ಪ್ರಾಣಾಗಳಿಗೆ ನಾಥನೋ	2
ಕರುಣಾಶಾಲಿ ಎನಿಪಾನೋ ತನ್ನ
ಚರಣಾ ಸೇವಾ ನೀಡುವನೋ
ಶರಣಾಬ್ಜ ತರಣೀ ಸÀಮನೋ ಅಂತಃ-
ಕರಣಾದಲ್ಲಿರುವಾನೋ	3
ಜನನೀಜನಕಾರೆನಿಪನೋ ಸಕಲ
ಜನರೀಗೆ ಸಮ್ಮತನೋ
ಜನುಮಾ ಜನುಮದಲೀತನೋ ನಿಶ್ಚಯ
ಎನಗೆ ತಾತನೋ	4
ಭೂತಾಳದೊಳು ವಿಖ್ಯಾತನೋ ನಿಜ-
ದೂತಾ ಜನರಿಗೆ ಪ್ರೀತನೋ
ನೀತಾ ಗುರುಜಗನ್ನಾಥಾವಿಠಲ 
ಪ್ರೀತಿಯ ತಾಪೊಂದಿಹನೋ	5
							

169 ಎದ್ದು ಬರುತಾರೆ ನೋಡೆ

169.	ರಾಗ: ಅಸಾವೇರಿ	ತಾಳ: ಏಕ
ಎದ್ದು ಬರುತಾರೆ ನೋಡೆ ತಾ-
ವೆದ್ದು ಬರುತಾರೆ ನೋಡೆ	ಪ
ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ	ಅ.ಪ
ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು
ಚಲುವ ಮುಖದೊಳು ಪೊಳೆವೊ ದಂತಗಳಿಂದ	1
ಹೃದಯ ಸದನದಲ್ಲಿ1 ಪದುಮನಾಭನ ಭಜಿಸಿ
ಮುದಮನದಿಂದ ನಿತ್ಯ ಸದಮಲ ರೂಪತಾಳಿ	2
ದಾತ ಗುರುಜಗನ್ನಾಥವಿಠಲನ್ನ
ಪ್ರೀತಿಯ ಪಡಿಸುತ ದೂತರ ಪೊರೆಯುತ	3
1 ಮಂದಿರದಲ್ಲಿ - ಪಾಠ
							

169 ಎದ್ದು ಬರುತಾರೆ ನೋಡೆ

170.	ರಾಗ: ಭೂಪಾಳಿ	ತಾಳ: ಝಂಪೆ
ಏಳಯ್ಯ ಗುರುವೆ ಬೆಳಗಾಯಿತು
ಏಳಯ್ಯ ಗುರುರಾಯ ಏಳಯ್ಯ ಶುಭಕಾಯ
ಏಳು ಮಹರಾಯ ಏಳು ಎನ ಜೀಯಾ 	ಪ
ಶೀಲ ನಿನ್ನ ಭಕ್ತರು ಸಾಲು ಸಾಲಾಗಿ ನಿಂತಿಹರೋ 	ಅ.ಪ 
ಉದಯಾದ್ರಿ ಶೃಂಗದಲಿ ಉದಿಸಿದನು ಭಾಸ್ಕರನು
ಸದಮಲ ಬುಧರೆಲ್ಲ ಮುದದಿಂದಲಿ ಎದ್ದು
ನದಿಯ ಸ್ನಾನವ ಮಾಡಿ ಉದಕ ಪುಷ್ಪಗಳಿಂದ
ಸದನಕ್ಕೆ ತಾವ್ ಬಂದು ಪದುಮನಾಭನ ಭಜಿಸಿ 
ಪಾದೋದಕವನೆ ಧರಿಸಿ ಸದಯ ನಿನ್ನ ಪಾದ-
ಸಂದರುಶನಕೆ ಬಂದಿಹರೋ	1
ನಿತ್ಯ ಭಜಿಸುವ ಜನರೆಲ್ಲ ಹೊತ್ತು ಮೀರಿತು ಎಂದು
ಚಿತ್ತ ಶುದ್ಧಿಯಲಿಂದ ಉತ್ತಮಾರ್ಹಣಗಳು ತಮ್ಮ
ನೆತ್ತಿಯಿಂದ ಪೊತ್ತು ಸುತ್ತು ಸಂದಣಿಯಿಂದ
ಜತ್ತಾಗಿ ನಿಂತಿಹರು ಉತ್ತಮಾ ನಿನ್ನ ನಿದ್ರೆಯ
ಹೊತ್ತು ಮೀರಾಯ್ತು ತೊತ್ತಿಗರೆಲ್ಲರು ಪಾದ
ಒತ್ತಿ ಬೋಧಿಸುವರು ಚಿತ್ತಕ್ಕೆ ತಂದು ತ್ವರಿತದಿ ಏಳು	2
ವಿಮತಾದ್ರಿ ಕುಲಿಶನೆ ವಿಮಲಗಾತ್ರನೆ ಏಳು
ನಮಿಪ ಜನರಾರ್ಥ ದಾತ ದಿವಿಜದ್ರುಮನೆ
ಪ್ರೇಮವಾರಿಧಿ ಎಳು ತಾಮರಸಾಂಬಕನೆ ಏಳು ಶ್ರೀ
ರಾಮ ಪಾದ ಭೃಂಗನೆ ಏಳು ಗೋಮತಿ ಕುಮುದ
ಸೋಮ ಸಾಂದ್ರನೆ ಏಳು ಯಾಮ ಮೀರಿತು ವಿಶ್ವನಿಯಾಮಕ ದೂತನೇ
ಸಾಮಗಾಯನ ಲೋಲ ರಮಾವಲ್ಲಭನಪ್ರೀಯ ಗುರುರಾಜವರ್ಯ	3
ಮೌನಿಕುಲರನ್ನ ಮಾನ ನಿಧಿಯೇ ಎನ್ನ
ಬಿನ್ನಪವ ಕೇಳಯ್ಯ ಜೀಯಾ ನಿನ್ನ ಬೋಧಿಪ-
ಕನ್ಯಜನರುಂಟೆ ನಿನ್ನಿಂದ ನೀ ಚನ್ನಾಗಿ ಏಳೊ
ಮುನÀ್ನ ಮಹ ಕಾರ್ಯಂಗಳು ಘನ್ನವಾಗಿರುತಿಹವು
ನಿನ್ಹೊರತು ಇನ್ನಾರು ಮಾಳ್ಪರು ಎನ್ನ ನುಡಿ ಈಗ 
ಚನ್ನಾಗಿ ಮನದಿ ತಂದು ಮನ್ನಿಸಿ ಪೊರೆಯೊ ಧೊರೆಯೆ	4
ದಾತ ಈ ಜನಜಾತಿ ಸಾಕÀಲಾರದೆ ಸೋತು ಮಲಗಿದೆಯಾ 
ಪಾತಕಾಂಬುಧಿ ಪೋತನೆ ಮಾತರಿಶ್ವನ ತಾತ ಸೀತಾನಾಥನ ಪಾದ 
ಪಾಥ ಭವ ಯುಗ್ಮದಲಿ ಸಂಜಾತವಾಗಿಹ ಸುಧಾ- 
ಪೀತ ಕಾರಣ ಮದ ಸಂಭೂತದಿಂ ಮಲಗಿದೆಯಾ 
ಭೂತನಾಥನ ಗುರುಜಗನ್ನಾಥವಿಠಲನ 
ದೂತ ನಾನೆಂಬ ಗರುವಿಂದ ಮಲಗಿದೆಯಾ	5
							

170 ಏಳಯ್ಯ ಗುರುವೆ ಬೆಳಗಾಯಿತು

171.	ರಾಗ: ಕಲ್ಯಾಣಿ/ಮಧ್ಯಮಾವತಿ	ತಾಳ: ತ್ರಿವಿಡಿ
ಕರವಪಿಡಿದು ಕಾಯೊ ಎನ್ನಾ	
ಶ್ರೀಯತಿವರ ಗುರುರಾಘವೇಂದ್ರರನ್ನಾ 	 ಪ
ಶರಣ ಜನ ಸುರಪಾದಪನೆ ತವ
ಚರಣಯುಗಳಕೆ ಮೊರೆಯ ಪೊಕ್ಕೆನೊ
ಕರುಣಿಸೆನ್ನನು ದೂರ ನೋಡದೆ
ಕರುಣಸಾಗರನೆ ನೀ	ಅ.ಪ
ಆರು ಕಾಯ್ವರೊ ಪೇಳೋ ಎನ್ನ ನೀ
ದೂರ ನೋಡುವದೇನು ಘನ್ನ
ಸಾರಿದವರಿಗಿಷ್ಟವನ್ನ ಬೀರುವನೆಂಬೋ
ಬಿರುದು ಪೋಗಿಹದೋ ನಿನ್ನ
ಸಾರುವೆನೊ ತವ ಪಾದ ಪದುಮದ
ಸೌರಭ ಸ್ವೀಕರಿಪ ಜನರೊಳು
ಸೇರಿಸೆನ್ನನು ದೂರ ನೋಡದೆ
ಭೂರಿ ಕರುಣಾಕರನೆ ನೀ	1
ದುರುಳು ಭವಾಂಬುಧಿ ಬಾಧಾ ಎನ್ನ
ಮೀರಿ ಪೋಗಿಹÀ್ಯದು ಅಗಾಧಾ
ಘೋರ ಮದನಶರ ಬಂಧಾದಿಂದ
ದೂರಾಗಿಹದೋ ನಿನ್ನ ಸಂಬಂಧ
ಪರಮ ಪಾಮರನಾದ ಎನ್ನಯ
ಮರುಳು ಮತಿಯನು ಬಿಡಿಸಿ ನಿನ್ನ-
ವರೊಡನೆ ಸೇರಿಸೊ ಪರಮ ಕರುಣಿಯೆ
ಚಾರತರನಾದ ಎನ್ನಾ	2
ದುಷ್ಟ ಜನರ ಸಂಗದಿಂದ ನಿನ್ನಯ ಪಾದ
ಮುಟ್ಟ ಭಜಿಸದರಿಂದ
ಸೃಷ್ಟಿಯೊಳಗೆ ಮತಿಮಂದಾನಾಗೀ
ಪುಟ್ಟಿ ಬಂದೆನೊ ವೇಗದಿಂದಾ
ಕಷ್ಟಹರ ಗುರುಜಗನ್ನಾಥ
ವಿಠಲನ ನಿಜ ಪಾದ ಪದುಮಕೆ
ಷಟ್ಪದೋಪಮನೆನಿಸಿ ಎನ್ನಾ
ಪುಟ್ಟಿ ಬರದಂತೆ ಮಾಡೊ ನೀ	3
							

171 ಕರವಪಿಡಿದು ಕಾಯೊ ಎನ್ನಾ

172.	ರಾಗ: ಶ್ರೀ	ತಾಳ: ಏಕ
ಕಾಯೋ ಕಾಯೋ 	ಪ
ಕಾಯೋ ಕಾಯೋ ಗುರುರಾಯನೆ ತವ ಪದ-
ತೋಯಜ ಯುಗ ಎನ್ನ ಕಾಯದಲಿಟ್ಟು	ಅ.ಪ
ಕ್ಷುಲ್ಲಕ ಮನುಜರ ಸೊಲ್ಲನೆ ನೀಗಿಸಿ
ಹಲ್ಲನೆ ಮುರಿಯುವ ಬಲ್ಲಿದ ನೀನೇ	1
ಕ್ಷುದ್ರಮನುಜರೋಪದ್ರವ ಕಳೆದು 
ಭದ್ರ ಭಕುತಿಯ ಉದ್ರೇಕವಿತ್ತು	2
ತ್ವತ್ಸೇವಾ ಜನರಲಿ ಮತ್ಸರ ಮಾಡುವ
ಕುತ್ಸಿತ ಜನತÀÀತಿ ವಿಚ್ಛೇದ ಮಾಡುವ	3
ನಿನ್ನಯ ಜನರನ ಮನ್ನಣೆ ಮಾಡದೆ
ಬನ್ನವ ಬಡಿಪರಖಿನ್ನರ ಮಾಡಿ	4
ದೂತರ ನಿಚಯಕೆ ಈ ತೆರ ಚಿಂತೆಯು
ಯಾತಕೆ ಗುರುಜಗನ್ನಾಥವಿಠಲ ದೂತಾ	5
							

172 ಕಾಯೋ ಕಾಯೋ

173.	ರಾಗ: ಧನಶ್ರೀ	ತಾಳ: ತ್ರಿವಿಡಿ
ಕೃಪಿಗಳೊಳು ನಿನಗುಪಮೆ ಕಾಣೆನೊ ಸದಾ
ಕೃಪಣವತ್ಸಲ ರಾಘವೇಂದ್ರಾ
ಅಪರಿಮಿತ ಪಾಪೌಘ ಸÀಪದಿ ಪೋಗಾಡಿಸಿ ನೀ
ಕೃಪಣ ಕಾಮಿತ ದಾತಾ ಮನ್ನಾಥಾ 	ಪ
ಮೋದತೀರ್ಥ ಮತೋದಧಿ ಸಂಜಾತಾ 
ಮೋದ ಸಂಯುಕ್ತ ಸುಧಾ
ಬೋಧಿಸಿ ಚಂದ್ರಿಕ ಭುಧಜನ ವೃಂದಕೆ
ಉದಧಿನಂದನನಂತಿರುವೇ ನಂದಕರ ಗುರವೆ	1
ಕ್ಷಿತಿ ತಳದೊಳು ವರ ಯತಿಯ ರೂಪವ ಧರಿಸಿ
ಪತಿತಪಾವನನೆನಿಸೀ
ಸತತ ಸುಜನರ ಅತಿಹಿತದಲಿ ಪೊರೆವೊ
ಮತಿವಂತ ಮನದಲೀಗ ಭಜಿಪೆ ತ್ವಚ್ಚರಣ	2
ಧಿಟ ಗುರುಜಗನ್ನಾಥವಿಠಲ ಪಾದ ಹೃತ್ಸಂ-
ಪುಟದಿ ಭಜಿಸುತಲೀ
ಶಿಷ್ಟಜನರ ಮನದಿಷ್ಟಾರ್ಥ ಸಲಿಸುವ ವÀಂ-
ದ್ಯೇಷ್ಟದಾನದಿ ದಕ್ಷಾ ಕಾಮಿತ ಕಲ್ಪವೃಕ್ಷಾ	3
							

173 ಕೃಪಿಗಳೊಳು ನಿನಗುಪಮೆ ಕಾಣೆನೊ

174.	ರಾಗ: ಮಧ್ಯಮಾವತಿ	ತಾಳ: ಏಕ
ಕೊಡು ಬೇಗಭೀಷ್ಟವ ತ್ವರದಿ1 ನೀ ಸನ್ಮನದಿ 	ಪ
ಕೊಡುವೊನೆನುತ ನಿನ್ನಡಿಯನು ಭಜಿಸುವ
ಬಡವನ ಕರವನು ಪಿಡಿದೀ ಕಾಲದಿ	ಅ.ಪ
ಒಡೆಯ ನೀನೆನುತತಿಹರುಷದಲಿ ನಂಬಿದೆ ನಿನ್ನ2
ಬಿಡದಲೆ ಪೊರೆ ಎನ್ನ ಕರುಣದಲಿ ಎನ್ನಯ ಕರವ
ಪಿಡಿದು ಭವಶ್ರಮ ಕಳಿಯುತಲಿ ಬಹು ತೋಷದಲಿ3
ನುಡಿದ ವಚನವ ಚಿತ್ತಕೆ ತಂದು
ಪೊಡವಿ ಪತಿ ಗುರುರಾಯನೆ ನೀ	1
ನಮಿಪ ಜನರಿಗೆ ಸುರಧೇನು ಭಜಿಪ ಜನಕೆ 
ಅಮರೋತ್ತಮ ಸುರತರು ನೀನು ಚಿಂತಿಪ ಜನಕೆ 
ಸುಮನೋಹರರತ್ನ ನೀನು ಎನುತಲಿ ನಾನು
ಅಮಿತ ಮಹಿಮೆಯ ತೋರುತಲೀಗ
ಪ್ರಮಿತನ ಮಾಡೆಲೊ ಸುಮಹಿತ ನೀ4	2
ಭೂತಳ ಮಧ್ಯದಲತಿಖ್ಯಾತನೆನಿಸಿದನಾಥ5
ಪಾತಕ ಕುಲವನ ನಿರ್ಧೂತ ಮಾಡುತ ನಿಜಪದ
ದೂತಜನತತಿ ಮನೋರಥ ಪೂರ್ತಿಪ ದಾತ
ವಾತ ಗುರುಜಗನ್ನಾಥವಿಠಲಗತಿ
ಪ್ರೀತಿಪಾತ್ರ ಸುಚರಿತ್ರ ಸುರಮಿತ್ರ 	3
1 ಕೋಡು ಬ್ಯಾಗಿಷ್ಟಾರ್ಥವ ಕರದೀ; 
2 ನಂಬಿದ ಎನ್ನಾ; 
3 ಮೋದದಲಿ; 
4 ಶ್ರಮವ ಕಳೆದು ಸುಖ ಸುರಿಸುತ ನೀ; 
5 ದಾತ; - ಪಾಠ
							

174 ಕೊಡು ಬೇಗಭೀಷ್ಟವ

175.	ರಾಗ: ಆನಂದಭೈರವಿ	ತಾಳ: ಆದಿ
ಗುರುರಾಜ ಗುರುರಾಜ 	ಪ
ಧರಣಿಸುರರ ಸುರಭೂಜ	 ಅ.ಪ
e್ಞÁನಿಗಳರಸನೆ ಧ್ಯಾನಿಪ ಜನರಿಗೆ
e್ಞÁನವು ಪಾಲಿಸೊ e್ಞÁನಿಜನನಾಥ	1
ಙÁ್ಞನಿಲ್ಲದೆ ಭವ ಕಾನನ ಚರಿಸುವೆ
ಮಾನಸದಲಿ ತವ ಧ್ಯಾನವ ಸಲಿಸೈ	2
ಅನ್ಯರ ಭಜಿಸದೆ ನಿನ್ನನೆ ನಿತ್ಯದಿ
ಮನ್ನದಿ ಭಜಿಸುವ ಉನ್ನತ ಮತಿ ನೀಡೈ	3
ನೀಚರ ಮನೆಯಲಿ ಯಾಚಿಪಗೋಸುಗ
ಯೋಚಿಪ ಮನವನು ಮೋಚನೆ ಮಾಡೈ	4
ಯಾತಕೆ ಭವದಲಿ ಈತೆರ ಬಳಲಿಪಿ 
ದಾತನೆ ಗುರುಜಗನ್ನಾಥವಿಠಲ ದೂತ	5
							

175 ಗುರುರಾಜ ಗುರುರಾಜ

176.	ರಾಗ: ಪೂರ್ವಿ	ತಾಳ: ಆದಿ
ಗುರುರಾಯ ಗುರುರಾಯ 	ಪ
ನಿರುತದಿ ನಿನ್ನನು ಸ್ಮರಿಸುವೆ ಶುಭಕಾಯ	ಅ.ಪ
ಕುಧರರದನಜ ನದಿಯ ತೀರದಿ ನಿಜ
ಸದನನೆ ಹರಿಪದ ಮಧುಕರ ಸೈ ಸೈ	1
ಮಾಗಧರಿಪು ಮತಸಾಗರ ಝಷsÀ ಸಮಾ-
ಮೋಘ ಮಹಿಮ ಎನ್ನ ಬ್ಯಾಗನೆ ಪೊರಿಯೈ	2
ಕಾಮಿತ ಫಲಪ್ರದ ಪ್ರೇಮದಿ ನಿನ್ನಯ
ನಾಮವ ನೆನೆವಂತೆ ನೇಮವ ಸಲಿಸೈ	3
ಆನತ ಸುಜನ ಸನ್ಮಾನದ ಎನ್ನನು
ಮಾನದಿ ಪಾಲಿಸೊ ಮಾನಿಜನಪ್ರಿಯ	4
ದಾತ ಗುರುಜಗನ್ನಾಥವಿಠಲ ಸಂ-
ಪ್ರೀತಿ ಪಾತ್ರ ನಿಜ ದೂತನೆ ಪಾಲಿಸೊ	5
							

176 ಗುರುರಾಯ ಗುರುರಾಯ

177.	ರಾಗ: ಜಂಜೂಟಿ	ತಾಳ: ಏಕ / ಆದಿ
ಗುರುರಾಯ ನೀನೆ ಧ್ವರೀ! ಧ್ವರೀ!	ಪ
ಪರಮ ಭಾಗವತರ ನೀ ಮರೆಯದೆ ಪೊರೆವಂಥ	ಅ.ಪ
ಪರಮ ಭಕ್ತರು ನಿನ್ನ ಕರೆಯಲಾಕ್ಷಣ ಬಂದು
ಪರಿಪರಿ ಸುಖಗಳ ಮರೆಯದೆ ಕೊಡುವಂಥ	1
ಶರಣ ಜನರಪಮರಣ ಕಳೆದು ಸ್ಥೂಲ
ಹರಣರಕ್ಷಿಸಿ ಸುಖ ಅರಣದಲ್ಲಿಡುವಂಥ	2
ಅನ್ಯರಿಗಳವಡದ ಘನ್ನ ಮಹಿಮನೆ ನಿನ್ನ
ಮನ್ನದಿ ಭಜಿಪ ಜನರ ಚನ್ನವಾಗಿ ಪೊರೆವಂಥ	3
ರಾಜ ಚೋರ ವ್ಯಾಘ್ರರಾಜ ವೃಶ್ಚಿಕ ಸರ್ಪ
ರಾಜಿ ನಕÀ್ರದ ಭಯ ಮಾಜಿಸಿ ಪೊರೆವೊನಿಂಥಾ	4
ಭೂತಳದೊಳಗತಿಖ್ಯಾತನಾಗಿ ಸದಾ
ದಾತ ಗುರುಜಗನ್ನಾಥವಿಠಲನೊಲಿಸಿದಂಥ	5
							

177 ಗುರುರಾಯ ನೀನೆ ಧ್ವರೀ! ಧ್ವರೀ!

178.	ರಾಗ: ನಾದನಾಮಕ್ರಿಯ	ತಾಳ: ಏಕ
ಗುರೋ ರಾಘವೇಂದ್ರ ಭೋ
ಸಾರ್ವಭೌಮ ಸದಾ ಪಾಲಿಸೆನ್ನ 	ಪ
ಪರಾವರೊ ಹರಿಚರಾಗ್ರೇಸರ
ಪರೀಸರ ನÀಮಿಪೆ ನಿನ್ನ	ಅ.ಪ
ಧರಾತಳದಿ ಧೇನುವರಾನಂದದಿ
ಚರಾಜನರ ಕಾಮ ಪರೀಪೂರ್ತಿಸಿ 
ದುರುಳ ಸಂಗವ ತ್ವರದಿ ಕಳೆವೊ ಭೀಮ	1
ಭಯಾಹರನೆ ಸದ್ದಯಾಕರನೆ ಆ-
ಮಯಾ ದೂರ ನಿನ್ನ ದಯಾ ಪಾಲಿಸೊ 
ಧಿಯಾ ಬೇಡುವೆನು ನಯಾ ಮ(ಯ)ತೀತ್ಯನ್ನಾ(?)	2
ದಾತಾ ಗುರುಜಗನ್ನಾಥವಿಠಲ ಪಾದ
ಪಾಥೋಜಯುಗವನ್ನಾ ನೀತ ಸುಖಮಯ 
ವ್ರಾತ ಪಾಲಿಸೊ ನಿಜ ದೂತ ಜನಾರನ್ನಾ	3
							

178 ಗುರೋ ರಾಘವೇಂದ್ರ ಭೋ ಸಾರ್ವಭೌಮ

179.	ರಾಗ: ಶಂಕರಾಭರಣ	ತಾಳ: ಅಟ
ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯತಿಕುಲ ತಿಲಕರ	ಪ
ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರರ	ಅ.ಪ
ಕುಂದಣಮಯವಾದ ಚಂದದ ತೊಟ್ಟಿಲೊಳಾ-
ನಂದದಿ ಮಲಗ್ಯಾರೆ ತೂಗಿರೆ
ನಂದನಂದನ ಗೋವಿಂದ ಮುಕುಂದನÀ
ನಂದದಿ ಭಜಿಪರ ತೂಗಿರೆ	1
ಯೋಗನಿದ್ರೆಯನ್ನು ಬೇಗನೆ ಮಾಡುವ
ಯೋಗೀಶ ವಂದ್ಯರ ತೂಗಿರೆ
ಭೋಗಿಶಯನನಪಾದ ಯೋಗದಿ ಭಜಿಪರ
ಭಾಗವತರನ ತೂಗಿರೆ	2
ನೇಮದಿ ತಮ್ಮನು ಕಾಮಿಪಜನರಿಗೆ
ಕಾಮಿತ ಕೊಡುವವರ ತೂಗಿರೆ
ಪ್ರೇಮದಿ ನಿಜಜನರ ಆಮಯವನಕುಲ 
ಧೂಮಕೇತೆನಿಪರ ತೂಗಿರೆ	3
ಅದ್ವೈತಮತ ವಿಧ್ವಂಸನ ನಿಜ ಗುರು
ಮಧ್ವಮತೋದ್ಧರರ ತೂಗಿರೆ 
ಶುದ್ಧ ಸಂಕಲ್ಪದಿಬದ್ಧ ನಿಜ ಭಕ್ತರ
ಉದ್ಧಾರಮಾಳ್ಪರ ತೂಗಿರೆ	4
ಭಜಕಜನರು ತಮ್ಮ ಭಜನೆಯ ಮಾಡಲು
ನಿಜಗತಿ ಇಪ್ಪರ ತೂಗಿರೆ
ನಿಜ ಗುರುಜಗನ್ನಾಥವಿಠಲನ್ನ ಪದಕಂಜ
ಭಜನೆಯ ಮಾಳ್ಪರ ತೂಗಿರೆ	5
							

179 ತೂಗಿರೆ ರಾಯರ ತೂಗಿರೆ ಗುರುಗಳ

180.	ರಾಗ: ಪೂರ್ವಿ	ತಾಳ: ಆದಿ
ದಯಮಾಡೊ ದಯಮಾಡೊ	ಪ
ಭಯಕರ ಸುಮಹದ್ಭಯಹರ ಯತಿವರ	ಅ.ಪ
ಮೋಕ್ಷದ ಕರುಣ ಕಟಾಕ್ಷದಿ ಎನ್ನನು
ವೀಕ್ಷಿಸಿ ನಿನ್ನ ನಿರೀಕ್ಷಿಸುವಂತೆ	1
ಲಕ್ಷ್ಯಾಧೀಶರ ಲಕ್ಷಿಲ್ಲದೆ ಙÁ್ಞ-
ನಾಕ್ಷದಿ ತವಪದ ಲಕ್ಷಿಸುವಂತೆ	2
ಸತ್ಯಾಭಿದನಪಮೃತ್ಯುಹರಿಸಿ ಮುದ
ವಿತ್ತು ಪಾಲಿಸಿದ ಉತ್ತಮ ಎನಗೆ	3
ಬಲ್ಲಿದತರ ಮಹ ಪ್ರಹ್ಲಾದ ನಿನ್ನೊಳು
ನಿಲ್ಲಿಸು ಎನಮನ ಎಲ್ಲಿ ಚಲಿಸದಂತೆ	4
ದಾತ ಗುರುಜಗನ್ನಾಥವಿಠಲನ
ದೂತಾಗ್ರಣಿ ಸುಖೇತರ ಕಳೆದು	5
							

180 ದಯಮಾಡೊ ದಯಮಾಡೊ

181.	ರಾಗ: ಭೈರವಿ	ತಾಳ: ತ್ರಿವಿಡಿ 
ದಾತ ಸನ್ಮುನಿಗಣ-
ನಾಥ ಕಾಮಿತ ಕಲ್ಪವೃಕ್ಷ ಆಶ್ರಿತಜನ ರಕ್ಷ	ಪ
ಧಾತಮುಖ್ಯ ಸುರ ಮುನಿಯ ಸಂತತಿ
ಪ್ರೀತಿ ಪೂರ್ವಕದಿಪ್ಪ ಕಾರಣ
ಜ್ಯೋತಿ ವೃಂದಾವನದಿ ತಾ ನಿ-
ರ್ಭೀತ ಮಹಿಮೆಯ ತೋರ್ಪ ಜಗದಿ 	ಅ.ಪ
ಭಿಕ್ಷುನಾಯಕ ಸರ್ವಾಪೇಕ್ಷದಾಯಕ-
ನೆಂಬ ಬಿರಿದು ಪೊತ್ತಿಹ ಪಾಪ ತÀರಿದು 
ಲಕ್ಷ್ಮೀರಮಣನ ಪಾದ ಪದುಮವ
ವಕ್ಷೋಮಂದಿರದೊಳಗೆ ತಾನಪ-
ರೋಕ್ಷೀಕರಿಸಿ ಸರ್ವಜನರಾ-
ಪೇಕ್ಷ ಪೂರ್ತಿಸಿ ಮೆರೆವ ಗುರುವರ	1
ದಂಡಕಾಷಾಯ ಕಮಂಡಲಧರ 
ಹಂಸರೂಪ ಅಮಿತ ಸುಪ್ರತಾಪ
ತೊಂಡ ಜಲಜೋತ್ಫುಲ್ಲಕರ ಮಾ-
ರ್ತಾಂಡ ಸನ್ನಿಭನೆನಿಪÀ ತ್ರಿಜಗ-
ನ್ಮಂಡಲಾನತ ಸುಜನ ಮನ್ಮನೋ-
ಪುಂಡರೀಕ ನಿವಾಸ ನಿರ್ಮಲ	2
ಕಿಟಿಜ ಸರಿದ್ವರ ತಟವಾಸ ಗುರುಜಗನ್ನಾಥ-
ವಿಠಲ ಗುಣಗಾಥ
ತಟನಿಲಹರಿ ಮಧ್ಯ ತನ ಹೃ-
ತ್ಪಟ ಸುನಾವೆಯಮಾಡಿ ಸಂತತ
ಅಟನಗೈಯುತ ಜಗದಿರಾಜಿಪ
ಚಟುಲ ವಿಕ್ರಮ ಕರುಣಾಸಾಗರ	3
							

181 ದಾತ ಸನ್ಮುನಿಗಣನಾಥ

182.	ರಾಗ: ಕಲ್ಯಾಣಿ	ತಾಳ: ತ್ರಿಪುಟ 
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ1 
ನಂಬದೆ ಕೆಡುವರುಂಟೊ	 ಪ
ನಂಬಿದ ಜನರಿಗೆ ಬೆಂಬಲ ತಾನಾಗಿ
ಹಂಬಲಿಸಿದ ಫಲ ತುಂಬಿ ಕೊಡುವರನ್ನ	ಅ.ಪ
ಜಲಧರ ದ್ವಿಜವರಗೆ ತಾನೆ ಒಲಿದು
ಸುಲಭ ಮುಕುತಿಯನಿತ್ತನು
ಚಲುವ ಸುತನ ಪಡೆದ ಲಲನೆಗೆ ತ್ವರದಿಂದ
ಪುಲಿನಗರ್ತದಿ ದಿವ್ಯ2 ಜಲವನಿತ್ತವರನ್ನ3 	1
ಮೃತ್ಯುದೂತರು ತನ್ನನು ಪೊಂದಿದ ನಿಜ-
ಭೃತ್ಯನ ಕರೆದೊಯ್ಯಲು
ಸತ್ತ ದ್ವಿಜನ ತಾನು ಮತ್ತೆ ಧsರೆಗೆ ತಂದು
ಮೃತ್ಯು ಬಿಡಿಸಿ ಸುಖವಿತ್ತು ಪೊರೆದಿಹರನ್ನ	2
ಧಿಟ್ಟ ಗುರುಜಗನ್ನಾಥವಿಠಲನೊಲುಮೆ
ಘಟನವಾದುದರಿಂದ
ಘಟನಾಘಟನ ಕಾರ್ಯ ಘಟನ ಮಾಡುವೊ ನಮ್ಮ
ಪಟು ಗುರುವರ ಹೃತ್ಪಟದೊಳಗಿಹರನ್ನ4	3
1 ರಾಯರ ಪಾದ; 2 ಸ್ವಚ್ಚ; 3 ತೋರಿದನೆಂದು; 4 ಹೃತ್ಪಟದಿರುವೋರನ್ನ - ಪಾಠ
							

182 ನಂಬಿ ಕೆಟ್ಟವರಿಲ್ಲವೋ ಈ ಗುರುಗಳ

183.	ರಾಗ: ಶಂಕರಾಭರಣ	ತಾಳ: ತ್ರಿಪುಟ 
ನಂಬಿ ತುತಿಸಿರೋ ರಾಘವೇಂದ್ರ ಧೊರೆಯ
ಸನ್ಮುನಿ ಕುಲವರ್ಯ 	ಪ
ಅಂಬುಜನಾಭನಿಗತಿಪ್ರೀಯಾ
ಸಜ್ಜನರಿಗೆ ಸಹಾಯ	ಅ.ಪ
ಕನಕಶಯ್ಯನ ತನುಜನಾಗಿ ಜನಿಸಿ ನರಹರಿಯನು ಒಲಿಸಿ
ಅನುಜರಿಗನುದಿನ ತತ್ತ್ವವ ತಾ ಕಲಿಸಿ ಪರಮತವನು ಜೈಸಿ 
ಮನದಲಿ ಶ್ರೀ ಹರಿಪದವನ್ನೇ ಭಜಿಸಿ ವರ ಕರುಣವ ಸಲಿಸಿ
ವನಜಭವಾಂಡದಿ ಬಹು ಬಲ್ಲಿದನೆನಿಪ ನತಜನರಿಗೆ ಸುರÀಪ	1
ಕಾಮಧೇನು ಸುರತರುವಿಗೆ ಸಮನೀತ ಕಾಮಿತಫಲ ದಾತ
ರಾಮ ನರಹರಿ ಕೃಷ್ಣರ ಪದದೂತ ಲೋಕದಿ ಬಹು ಖ್ಯಾತ
ಕಾಮಿನಿ ಸುತ ಧನ ಧಾನ್ಯದ ವ್ರಾತ ನೀಡುವೋನೀತ
ಪ್ರೇಮದಿ ನಿಜಜನಸ್ತೋಮಕೆ ಬಹು ದಾತ ಯತಿವರ ಕುಲನಾಥ	2
ಪಾತಕವನಕುಲ ವೀತಿಹೋತ್ರನೆನಿಸಿ ಸುಖವನ್ನು ಸುರಿಸಿ 
ಭೂತಪ್ರೇತ ಮಹಭೀತಿಯನೆ ಬಿಡಿಸಿ ರೋಗವ ಪರಿಹರಿಸಿ
ಮಾತಪಿತರ ತೆರ ದೂತರ ರಕ್ಷಿಸಿ ಮನೋಚಿಂತೆಯನೆ ಬಿಡಿಸಿ
ದಾತ ಗುರುಜಗನ್ನಾಥವಿಠÀಲನ ಪದದೂತ ನತಜನರಿಗೆ ದಾತ	 3
							

183 ನಂಬಿ ತುತಿಸಿರೋ ರಾಘವೇಂದ್ರ ಧೊರೆಯ

183.	ರಾಗ: ಶಂಕರಾಭರಣ	ತಾಳ: ತ್ರಿಪುಟ 
ನಂಬಿ ತುತಿಸಿರೋ ರಾಘವೇಂದ್ರ ಧೊರೆಯ
ಸನ್ಮುನಿ ಕುಲವರ್ಯ 	ಪ
ಅಂಬುಜನಾಭನಿಗತಿಪ್ರೀಯಾ
ಸಜ್ಜನರಿಗೆ ಸಹಾಯ	ಅ.ಪ
ಕನಕಶಯ್ಯನ ತನುಜನಾಗಿ ಜನಿಸಿ ನರಹರಿಯನು ಒಲಿಸಿ
ಅನುಜರಿಗನುದಿನ ತತ್ತ್ವವ ತಾ ಕಲಿಸಿ ಪರಮತವನು ಜೈಸಿ 
ಮನದಲಿ ಶ್ರೀ ಹರಿಪದವನ್ನೇ ಭಜಿಸಿ ವರ ಕರುಣವ ಸಲಿಸಿ
ವನಜಭವಾಂಡದಿ ಬಹು ಬಲ್ಲಿದನೆನಿಪ ನತಜನರಿಗೆ ಸುರÀಪ	1
ಕಾಮಧೇನು ಸುರತರುವಿಗೆ ಸಮನೀತ ಕಾಮಿತಫಲ ದಾತ
ರಾಮ ನರಹರಿ ಕೃಷ್ಣರ ಪದದೂತ ಲೋಕದಿ ಬಹು ಖ್ಯಾತ
ಕಾಮಿನಿ ಸುತ ಧನ ಧಾನ್ಯದ ವ್ರಾತ ನೀಡುವೋನೀತ
ಪ್ರೇಮದಿ ನಿಜಜನಸ್ತೋಮಕೆ ಬಹು ದಾತ ಯತಿವರ ಕುಲನಾಥ	2
ಪಾತಕವನಕುಲ ವೀತಿಹೋತ್ರನೆನಿಸಿ ಸುಖವನ್ನು ಸುರಿಸಿ 
ಭೂತಪ್ರೇತ ಮಹಭೀತಿಯನೆ ಬಿಡಿಸಿ ರೋಗವ ಪರಿಹರಿಸಿ
ಮಾತಪಿತರ ತೆರ ದೂತರ ರಕ್ಷಿಸಿ ಮನೋಚಿಂತೆಯನೆ ಬಿಡಿಸಿ
ದಾತ ಗುರುಜಗನ್ನಾಥವಿಠÀಲನ ಪದದೂತ ನತಜನರಿಗೆ ದಾತ	 3
							

184 ನೀ ಎನ್ನ ಕಾಯಲಿ ಬೇಕೊ

184.	ರಾಗ: ಕಾಂಬೋಜಿ / ಧನ್ಯಾಸಿ	 ತಾಳ: ಝಂಪೆ /ಆದಿ 
ನೀ ಎನ್ನ ಕಾಯಲಿ ಬೇಕೊ ಘನ್ನಮಹಿಮ	ಪ
ಎನ್ನನೀಪರಿಪರಿ ಬನ್ನ ಬಡಿಸುವ-
ದನ್ಯಾಯ ನಿನಗಿದಾಪನ್ನಪಾಲ
ಘನ್ನ ಮಹಿಮೆಯತೋರಿ ಎನ್ನ ಕಾಯಲಿ ಬೇಕೊ
ನಿನ್ಹೊರತು ಗತಿ ಎನಗೆ ಮುನ್ನಾರು ಗುರುವೆ	1
ಎನ್ನ ಮಾತನು ನೀನು ಚೆನ್ನಾಗಿ ಚಿತ್ತೈಸಿ
ಅನ್ಯಜನರ ಕಣ ಬಾಧೆ ಕಳೆದು
ಘನ್ನ ಸಿರಿ ಕೃಷ್ಣನು ತನ್ನ ಸಖನಿಗೆ ಮಹ
ಉನ್ನತೈಶ್ವರ್ಯವಿತ್ತವನನ್ನ ಕಾಯ್ದ ತೆರದಿ	2
ಇನ್ನು ಪೇಳುವುದೇನೊ ಗುರುರನ್ನ ಭವದಾ ಶ್ರಮವು
ನಿನಗರಿವಿಲ್ಲವೆ ಸರ್ವಙ್ಞರಾಯ
ಸನ್ನುತಜನಪ್ರಿಯ ನಿನಗೆ ಮೊರೆಯಿಡುವೆ
ಘನ್ನ ಗುರುಜಗನ್ನಾಥವಿಠಲನ ದೂತ	3
							

185 ನೀ ಪಾಲಿಸೊ ಗುರುರಾಯ

185.	ರಾಗ: ಶಂಕರಾಭರಣ	ತಾಳ: ಏಕ
ನೀ ಪಾಲಿಸೊ ಗುರುರಾಯ ಎನ್ನ
ಕಾಪಾಡೋ ಈಗ ಮಹರಾಯ 	 ಪ
ಭೂಪತಿ ನೀ ಎನ್ನ ಆಪದ್ಭಾಂಧವ 
ಶ್ರೀಪತಿ ಪದಪ್ರಿಯ ಈ ಪರಿ ಮಾಡದೆ 	ಅ.ಪ
ಪಾಪಿಗಳೊಳಗೆ ಹಿರಿಯನು ನಾ
ನಿಷ್ಪಾಪಿಗಳರಸೆ ಗುರುರಾಯ
ಅಪಾರ ಜನುಮದಿ ಬಂದಿಹ
ತಾಪತ್ರಯವ ಕಳಿ ಮಹರಾಯ	1
ನೀಚರ ಒಳಗೆ ನೀಚನೊ ನಾ ಪಾಪ-
ಮೋಚನೆ ಮಾಡೊ ಗುರುರಾಯ
ಯೋಚನೆ ಇಲ್ಲದೆ ಅನ್ಯರ ಅನುದಿನ
ಯಾಚಿಸಿ ಕೆಟ್ಟೆನೊ ಮಹರಾಯ	2
ದೀನರ ಒಳಗೆ ದೀನನು ನಾನೈ
ದಾನಿಗಳರಸನೆ ಗುರುರಾಯ
e್ಞÁನವು ಇಲ್ಲದೆ ನಾನು ನನ್ನದೆಂದು
ಹೀನ ಮತ್ಯಾದೆನೊ ಮಹರಾಯ	3
ಅನ್ನವು ಇಲ್ಲದೆ ಅನ್ಯರ ಮನೆಯಲಿ
ಕುನ್ನಿಯಾದೆನೊ ಗುರುರಾಯ
ನಿನ್ನನೆ ನಂಬಿ ಅನ್ಯರ ಬೇಡೋದು1
ಘನತೆಯೆ ನಿನಗೆ ಮಹರಾಯ	4
ದಾತನೆ ನಿನ್ನಾ ಪೋತನು ನಾ ನೀ-
ನೀತೆರ ಮಾಳ್ಪರೆ ಗುರುರಾಯ
ನೀತ ಗುರುಜಗನ್ನಾಥವಿಠಲ ಪದ
ದೂತನು ನೀನೆ ಮಹರಾಯ	5
1 ಭಜಿಸೋದು
							

186 ನೋಡಿದೆ ಗುರುರಾಯರನ್ನ

186.	ರಾಗ: ನಾದನಾಮಕ್ರಿಯ	ತಾಳ: ಏಕ / ತ್ರಿವಿಡಿ
ನೋಡಿದೆ ಗುರುರಾಯರನ್ನ ಈ
ರೂಢಿಯೊಳಗೆ1 ಮೆರೆವೊ ಸಾರ್ವಭೌಮನ್ನ 	ಪ
ಥಳಥಳಿಸುವ ವೃಂದಾವನದಿ ತಾನು
ಕುಳಿತು ಭಕ್ತರಿಗೀವ ವರವನು ತ್ವರದಿ
ನಳಿನನಾಭನ ಕೃಪಾಬಲದಿ ಇದೆ
ನಳಿನಜಾಂಡದಿ ಸರಿಗಾಣೆ ಮಹಿಮಾದಿ	1
ಪೊಳೆವೊ ವಕ್ಷಸ್ಥಳವದನ ಎಳೆ
ತುಳಸಿ ಮಾಲಾಂಕಿತ ಕಂಧರಯುತನ
ನಳಿನಾಕ್ಷಮಾಲೆ ಶೋಭಿತನ ಉರ
ಚೆಲುವ ದ್ವಾದಶ ಪುಂಡ್ರ ಮುದ್ರ ಚಿನ್ಹಿತನ	2
ಕೃಷ್ಣವರ್ಣದಿ ಶೋಭಿಪನ ಮಹ
ವೈಷ್ಣವ ಕುಮುದ ನಿಕರಕೆ ಚಂದಿರನ
ವಿಷ್ಣು ಭಕ್ತಾಗ್ರೇಸರನ ಬಾಲ
ಕೃಷ್ಣಮೂರುತಿ ಪಾದಯುಗ ಇನ ಸರೋಜನ	3
ದಿನನಾಥ ದೀಪ್ತಿ ಭಾಸಕನ ಭವ-
ವನಧಿ ಸಂತರಣ ಸುಪೋತಮನ
ಮುನಿಜನ ಕುಲದಿ ಶೋಭಿಪನ ಸ್ವೀಯ
ಜನರ ಪಾಲಕ ಮಹಾರಾಯನೆನಿಪನ	4
ಗುರುಜಗನ್ನಾಥವಿಠಲನ ಪಾದ
ಸರಸಿಜ ಯುಗಳಕಾರಡಿಯೆನಿಪÀನ
ಪೊರೆವನು ತನ್ನ ಜನರನ್ನ ಎಂದು
ಶಿರಸಾ ನಮಿಸಿ ಬೇಡಿದೆ ಗುರುವರನ	5
1 ಪೊಡವಿಯೊಳಗೆ - ಪಾಠ 
ಪಾದ ಸರಸಿಜ ಯುಗಳಕಾರಡಿ=ಪಾದದ್ವಯ ಕಮಲಕೆ ದುಂಬಿ;
							

187 ನೋಡಿದ್ಯಾ ಗುರುರಾಯರ ನೋಡಿದ್ಯಾ

187.	ರಾಗ: ಶಂಕರಾಭರಣ	ತಾಳ: ಆಟ
ನೋಡಿದ್ಯಾ ಗುರುರಾಯರ ನೋಡಿದ್ಯಾ	ಪ
ನೋಡಿದ್ಯಾ ಮನವೆ ನೀನಿಂದು ಕೊಂ-
ಡಾಡಿದ್ಯ ಪುರದಲ್ಲಿ ನಿಂದು | ಆಹಾ |
ಮಾಡಿದ್ಯ ವಂದನೆ ಬೇಡಿದ್ಯ ವರಗಳ
ಈಡು ಇಲ್ಲದೆ ವರ ನೀಡುವೊ ಗುರುಗಳ	ಅ.ಪ
ಸುಂದರತಮ ವೃಂದಾವನದಿ ತಾನು
ನಿಂದು ಪೂಜೆಯ ಕೊಂಬ ಮುದದಿ ಭಕ್ತನಿಗಾ-
ನಂದ ನೀಡುವೆನೆಂದು ತ್ವರದಿ ಇಲ್ಲಿ
ಬಂದು ನಿಂತಿಹನು ಪ್ರಮೋದಿ | ಆಹಾ |
ಹಿಂದಿನ ಮಹಿಮವು ಒಂದೊಂದೆ ತೋರುವಾ
ಮಂದಜನರ ಹೃನ್ಮಂದಿರಗತರನ್ನ	1
ದೂರದಿಂದಲಿ ಬಂದ ಜನರ ಮಹ
ಘೋರ ವಿಪತ್ಪರಿಹಾರಾ ಮಾಡಿ
ಸಾರಿದಭಿಷ್ಟವು ಪೂರಾ ನೀಡಿ
ಪಾರುಮಾಡುವ ತನ್ನ ಜನರಾ | ಆಹಾ |
ಆರಾಧಿಸುವರ ಸಂಸಾರವಾರಿಧಿಯಿಂದ
ದೂರಯೈದಿಸಿ ಸುಖ ಸೂರಿ ಕೊಡುವೊರನ್ನ	2
ನಿತ್ಯನೇಮದಿ ತನ್ನ ಪಾದ ಯುಗ
ಸತ್ಯಪೂರ್ವಕದಿ ನಂಬೀದ ನಿಜ
ಭೃತ್ಯನಪೇಕ್ಷಮಾಡೀದ ಕಾರ್ಯ
ಸತ್ಯಮಾಡುವ ಪೂಜ್ಯಪಾದ | ಆಹಾ |
ಮತ್ರ್ಯಾದಿ ಸುರರೊಳು ಎತ್ತ ನೋಡಿದರಿನ್ನು
ಉತ್ತುಮರಾರಯ್ಯ ಭೃತ್ಯವತ್ಸಲರನ್ನ	3
ಅಂತರದಲಿ ತಾನು ನಿಂತು ಜನ
ಸಂತತ ಕಾರ್ಯಗಳಿಂತು ಮಾಡಿ
ಕಂತುಪಿತಗೆ ಅರ್ಪಿಸ್ಯಂತು ತಿಳಿಸ-
ದಂತೆ ಎಮ್ಮೊಳಗಿರೊವೊ ತಂತು | ಆಹಾ |
ಸಂತತ ಕರ್ಮಗಳಂತು ಮಾಡುತ ಜೀವ
ರಂತೆ ಗತಿಯು ತಾ ಪ್ರಾಂತಕ್ಕೆ ನೀಡುವರ	4
ಅಗಣಿತ ಮಹಿಮವಗಾಧಾ ಬಹು
ಸುಗುಣನಿಧಿ ಮಹಾ ಬೋಧ ನಾನು
ಪೊಗಳುವದೇನು ಸಮ್ಮೋದತೀರ್ಥ
ಮೊದಲಾದ ಸುರರ ಪ್ರಮೋದ | ಆಹಾ |
ಮೊಗದಿಂದ ಶ್ರೀ ಗುರುಜಗನ್ನಾಥವಿಠಲ ಸಂ-
ಮ್ಮೊಗನಾದ ಕಾರಣ ಜಗದಿ ಮೆರೆವೊರನ್ನ	5
							

188 ಪಾಲಿಸೋ ಶ್ರೀ ಗುರುರಾಯಾ

188.	ರಾಗ: ಶಂಕರಾಭರಣ	ತಾಳ: ಅಟ
ಪಾಲಿಸೋ ಶ್ರೀ ಗುರುರಾಯಾ 	ಪ
ಪಾಲಿಸೋ ಪಾವನ್ನ ಕಾಯ ಭವ
ಜಾಲ ತಪ್ಪಿಸೊ ಮಹರಾಯ | ಆಹಾ |
ಪಾಲಗುಜನರ ಸುಪಾಲಕ ಹರಿಪಾದ
ಲೋಲ ಶ್ರೀಕರ ಭವತೂಲಕಾನಲನೆ	 ಅ.ಪ
ಶೇಷಾಂಶ ಪ್ರಹ್ಲಾದ ವ್ಯಾಸಾಮುನಿ
ವೇಷ ತಾಳಿದೆಯೊ ಯತೀಶಾ ಜಾಗು (+ಮಾಡದೆ)
ಪೋಷಣೆಗೈಯ್ಯೊ ಮನೀಷಾ ಎನ್ನಾ-
ಶೇಷ ಕ್ಲೇಶವಳಿದೀಶಾ | ಆಹಾ |
ಶೋಷದ ಭವ ನಿಶ್ಯೇಷ ಮಾಡಿ ಎನ್ನ 
ಪೋಷಿಸೊ ನಿರುತ ಧೃತಾಷಾಢ ಗುರುವರ	1
ಕಾಮಧೇನು ಕಲ್ಪವೃಕ್ಷಾ ನಿನ್ನ
ಈ ಮಹಮಹಿಮೆ ನಿರೀಕ್ಷಾ ಮಾಡಿ
ಈ ಮಹಿ ಯಾಕೆಂದುಪೇಕ್ಷಾ ಮಾಡಿ
ಧಾಮ ಸೇರಿದವೊ ಭಕ್ತಪಕ್ಷಾ | ಆಹಾ |
ಸಾಮಜನಾಥನ ಪ್ರೇಮ ಪಾತ್ರನೆ ನಿನ್ನ
ಈ ಮಹ ಮಹಿಮೆಗೆ ನಾಮಾಳ್ಪೆ ನಮೊ ನಮೊ	2
ಆಸೇತು ಹಿಮಾದ್ರಿ ತನಕಾ ನಿನ್ನ
ಆಸೆಯ ಮಾಳ್ಪರನೇಕಾ ಅಂಥ
ದಾಸಜನರಿಗೆ ಅನೇಕಾ ಫಲ
ರಾಶಿಯ ಕೊಡುವಿ ಮಜ್ಜನಕಾ | ಆಹಾ |
ಹೇಸಿ ಮಾನವ ಜನ್ಮ ಈಸೆ ಸಾಕೆಲೊ ಸ್ವಾಮಿ
ಏಸು ಪೇಳಲಿ ನಿನ್ನ ದಾಸರ ದಾಸನೋ	3
ಎಲ್ಲಿ ಪೋದರು ಕಾಯ್ವರಿಲ್ಲ ಜಗ-
ದ್ವಲ್ಲಭ ಬಲ್ಲಿ ನೀನೆಲ್ಲಾ ಬಹು
ಬಲ್ಲಿದನೆಂಬುವರೆಲ್ಲಾ ಜನ
ಸೊಲ್ಲು ಕೇಳಿಬಂದೆನಲ್ಲಾ | ಆಹಾ |
ಫುಲ್ಲಲೋಚನ ನೀನಲ್ಲದೆ ಎನ ಬವ-
ಣೆಲ್ಲ ಮಾತ್ರವು ಕಳೆಯೊರಿಲ್ಲವೊ ಎನ್ನ ಜೀಯಾ	4
ನಾಥ ನಿನ್ನೊಳು ಜಗಕೆಲ್ಲ ಮಹ
ಪ್ರೀತಿಯು ಇರುತಿಹುದಲ್ಲ ಸದ
ತಾತ ನೀನಾಗಿ ಜಗಕೆಲ್ಲಾ ಮತ್ತೆ
ಪೂತ ಫಲ ಕೊಡುವಿಯಲ್ಲಾ | ಆಹಾ |
ವಾತದೇವನ ಸಹದಾತ ಗುರುಜಗ-
ನ್ನಾಥವಿಠಲ ಸದಾ ಪ್ರೀತಿಂದ ಇರುವೊನು	5
							

189 ಬಂದ ಶಿರಿ ರಾಘವೇಂದ್ರಮೂರುತಿ

189.	ರಾಗ: ಸಾವೇರಿ	ತಾಳ: ಆದಿ
ಬಂದ ಶಿರಿ ರಾಘವೇಂದ್ರಮೂರುತಿ ಮನ
ಮಂದಿರದೊಳಗೆ ಸರಸದಿ 	ಪ
ಬಂದನು ಭಕುತನ ಬಂಧನ ಬಿಡಿಸ್ಯಾ-
ನಂದನೀಡುತ ಮುದದಿಂದಲಿ ಭರದಿಂದ	ಅ.ಪ
ಮುದದಲಿ ಶೋಭಿಪ ವದÀನದೊಳೊಪ್ಪುವ
ರದನದಿ ಶೋಭಿತನು
ಉದಿಸಿದ ಎನ್ನಯ ಹೃದಯಾಂಬರದೊಳು
ಸದಯ ಮೂರುತಿಧರನು
ಆಗಾಡಿದ ಮೃದು ನುಡಿಯಾ ಅತಿ ಭಿಡಿಯಾ
ತೋರುತಾ ಬೀರುತಾ ಪದಸಕಿತ ಸುಖನೀಡುತ
ಇದು ಮೊದಲಾಗಿಹ ಅದ್ಭುತ ಮಹಿಮೆಯ
ಪದÀದಲಿ ತೋರುತ ಸದಮಲ ಮನದೊಳು	1
ಕುಣಿದಾಡುತ ಗುಣಗಳ ಗಣಿಸುವ ಭಕ್ತರ
ದಣಿಸೆನೊ ಭವದೊಳಗೆ
ಗಣಿಸುವೆ ದಾಸರ ಗಣದೊಳಗವನಿಗೆ
ಉಣಿಸುವೆ ಪರಸುಖ ಕೊನಿಗೆ
ಬೇಡಿದ ಇಷ್ಟವ ಕೊಡುವೆ ದುರಿತವ ತಡಿವೆ
ಪೊರೆಯುತಾ ಬೆರೆಯುತಾ ಮಣಿಸುತಾ ತಿಳಿಸುತಾ
ಕ್ಷಣ ಕ್ಷಣದಲಿ ವೀಕ್ಷಣದಿಂದಲಿ ಶÀ್ರಮ
ತೃಣ ಸಮವೋ ಧಣಿ ನಾ ನಿನಗೆಂದು	2
ಧಿಟe್ಞÁನ ಭಕುತಿಯ ಥಟನೆ ಕೊಡುವೊ
ಉತ್ಕಟ ಮಹಿಮನೊ ನೀನು 
ಪಟುತರ ಎನಪದ ಚಟುಲ ನಳಿನಯುಗ 
ಷಟ್ಪದ ಸಮ ನೀನೋ
ನಾನಾಡಿದ ನುಡಿ ಖರೆಯಾ ಮರೆಯಾ
ಬೇಡೆಲೋ ನೋಡೆಲೋ ಕೊಂಡಾಡೆಲೋ ನೀಡೆಲೋ
ಘಟಿಸುವೆ ಸಮಯಕೆ ಧಿಟ ಗುರುಜಗನ್ನಾಥ
ವಿಠಲನ ಹೃತ್ಸಂಪುಟದಿ ತೋರುವೆನೆಂದು	3
							

190 ಬ್ಯಾಗ ಬಾರೋ ಗುರುರಾಘವೇಂದ್ರರಾಯಾ

190.	ರಾಗ: ದ್ವಿಜಾವಂತಿ	ತಾಳ: ಆದಿ 
ಬ್ಯಾಗ ಬಾರೋ ಗುರುರಾಘವೇಂದ್ರರಾಯಾ
ಬಾಗಿ ನಮಿಪೆ ಮಹರಾಯಾ	 ಪ
ಯೋಗಿ ಮಧ್ವಮತದಾಗಮದಿಂದಲಿ
ಭಾಗವತರು ಶಿರಬಾಗಿ ಪಾಡುವರೋ	ಅ.ಪ
ಕುಂದಣಮಣಿಮಯ ಸ್ಯಂದನದೊಳತಿ-
ಸುಂದರ ಶುಭತರ ರೂಪ -
ದಿಂದಲಿ ರಾಜಿಪಾಮಂದಬೋಧ ನಿಜ
ನಂದದಾಯಕ ಯತಿಕುಲ ದೀಪ
ಛಂದದಿ ಭಕುತರ ಕುಂದನಿಚಯಕೆ ನಿಜ
ಚಂದಿರ ಸಮ ಭೂಪಾ-
ವೃಂದವಂದಿತ ಪಾದ ದ್ವಂದ್ವವು ನಿಜರಿಗೆ
ನಂದ ನೀಡುವ ಪ್ರತಾಪಾ
ವಂದಿಸಿ ಗುಣಗಳ ವೃಂದ ಪೊಗಳುವ
ಮಂದ ಜನರು ಬಲು ಸುಂದರ ಶುಭಗುಣ-
ದಿಂದ ಶೋಭಿಪÀ ಜನ ಸಂದಣಿಯೊಳು ನಿನ್ನ
ಸುಂದರ ಮೂರುತಿ ಛಂದದಿ ನೋಳ್ಪರೊ	1
ಕನಕ ಮಣಿಮಯ ಘನ ಸುಕೊಡೆಗಳು
ಮಿನುಗುವ ಚಾಮರ ಚೋದ್ಯವೋ
ಅನುಗ ಕರಗತ ಮಣಿಮಯ ಛಡಿಗಳ
ಅನುಪಮ ಭಾರವೋ
ಮುನಿಜನ ಶಿರಮಣಿಸಿ ಗುಣ ಗಣ
ಎಣಿಸುವ ಗಂಭೀರವೋ
ತನು ಮನ ಮನಿ ಧನ ವನಿತೆರ ನಿನಗನು-
ಮಾನಮಾಡದೆ ನೀಡುವಗಾಧವೋ
ಘನ ಸಂತೋಷದಿ ಮನದೊಳು ನಲಿಯುತ
ಕುಣಿದಾಡುತ ದಣಿಯದೆ ಕರಚಪ್ಪಳಿಸಿ 
ಕ್ಷಣಕ್ಷಣದಲಿ ತಮ್ಮ ತನು ಮರೆದೀಪರಿ
ಜನರೊಳು ನಮ್ಮ ಜನುಮ ಸಫಲವೆಂಬುವರೋ	2
ಪಟುತರ ಭಟರಾರ್ಭಟಿಸುವ ಮಹ
ಚಟ ಚಟ ಚಾಟ ಶಬ್ಧವೋ
ಕುಟಿಲ ವಿಮತ ಘನ ಪಟಲ ವಿದಾರಣ
ಚಟುಲ ಸ್ವಮತ ಸಿದ್ಧಾಂತವೋ
ಕುಟಿಲಾಳಕಿಯರ ಕುಣಿಯುವ ಪದದಿ ಸಂ -
ಘಟಿತ ಗೆಜ್ಜೆಗಳ ಶಬ್ಧವೋ
ಪಟು ಗುರುಜಗನ್ನಾಥವಿಠಲರ ದಾಸರ
ಧಿಟ ಪದ ಸಂಗೀತವೋ
ಧಿಟಗುರುರಾಯನೆ ಭಟರುಗಳ ಮಹÀಸು-
ಕಟಕದಿ ಮೋದೋತ್ಕಟದಲಿ ಇಷ್ಟವ
ಥಟನೆ ಬೀರುತ ಬಲು ಪುಟಿದಾಡುತ ಹರಿ
ಭಟ ಜಲಜೋತ್ಕಟ ದಿವಾಕರ	3
							

191 ಭೂಮಿಸುರರ ಘನ ಸ್ತೋಮ ವಂದಿತ

191.	ರಾಗ: ಅಸಾವೇರಿ	ತಾಳ: ತ್ರಿವಿಡಿ
ಭೂಮಿಸುರರ1 ಘನ ಸ್ತೋಮವಂದಿತ ಮಹಾಮಹಿಮಾ
	ಮಹಾಮಹಿಮ ಸಜ್ಜನ ತತಿ ಪ್ರೇಮಾ 	 ಪ
ಕಾಮಧೇನು ಸುಕಲ್ಪತರು ಚಿಂ-
ತಾಮಣಿಯು ತಾನೆನಿಸಿ ಸರ್ವದ
ಕಾಮಿತಾರ್ಥವನಿತ್ತು ಮೆರೆವನು
ಈ ಮಹಿಯೊಳು2 ಸಾರ್ವಭೌಮನು	ಅ.ಪ
ಪ್ರಾಣತನಯ ವಿಷ್ವಕ್ಸೇನ ಶ್ರೀಹರಿ ಶಾಪದಿಂದ
ಶಾಪದಿಂದ ಭೂತಳದಲಿ ಬಂದಾ
ಮಾಣವಕ ಪ್ರಹ್ಲಾದನೆನಿಸಿ 
ಪ್ರಾಣದೇವಾವೇಶ ಶೇಷನು
ಕ್ಷೋಣಿಯೊಳು ಶಿರಿವ್ಯಾಸನೆನಿಸೀ
ಮಾಣದಲೆ ಗುರುರಾಘವೇಂದ್ರನು	1
ಅಲವಬೋಧರ ಮತ ಜಲಧಿ ಚಂದಿರನೆನಿಪನೀತ
ನೆನಿಪನೀತ ಲೋಕದಿ ಬಹು ಖ್ಯಾತಾ
ಲಲಿತ ವೃಂದಾವನದಿ ನಿಂತು
ಹಲವು ಭಕುತರಭೀಷ್ಟಕಾರ್ಯವ
ಸಲಿಸಿ ಸುಜನರ ಸಲಹೊಗೋಸುಗ
ಸುಲಭತರನಾಗಿರುವ ಗುರುವರ	2
ಕಿಟಜಸರಿದ್ವರ ತಟದಿ ಸಂತತ ತಾನಿರುವ
ತಾನಿರುವ ಭಕ್ತರು ಕರೆಯೆ ಬರುವಾ
ಧಿಟ ಸುಭಕ್ತರ ಬಿಡದೆ ತಾನು ಪ್ರ-
ಕಟನಾಗಿ ಮಹಿಮೆ ತೋರುವ
ಧಿಟ ಗುರುಜಗನ್ನಾಥವಿಠಲನ
ಭಟಜನಾಗ್ರಣಿ ಎನಿಸಿ ಮೆರೆವ	3
1 ಭೂಮಿದೇವರ; 2 ಮಹಾತ್ಮನೆ - ಪಾಠ
							

192 ಮಂಗಳಂ ಜಯ ಮಂಗಳಂ ಗುರುರಾಘವೇಂದ್ರಗೆ

192.	ರಾಗ: [ಸುರುಟಿ]	ತಾಳ: [ಮಿಶ್ರನಡೆ]
ಮಂಗಳಂ ಜಯ ಮಂಗಳಂ	ಪ
ಮಂಗಳಂ ಗುರುರಾಘವೇಂದ್ರಗೆ
ಮಂಗಳಂ ಗುಣಸಾಂದ್ರಗೆ
ಮಂಗಳಂ ಯತಿಸಾರ್ವಭೌಮಗೆ
ಮಂಗಳಂ ಶುಭಕಾಯಗೆ	ಅ.ಪ
ಅಲವಬೋಧಮತಾಭ್ಧಿಚಂದ್ರಗೆ
ಲಲಿತರೂಪದ ಸಾಂದ್ರಗೆ
ಸುಲಭವಾಗಿಹ ಸಂಯಮೀಂದ್ರಗೆ
ಜಲಜನಯನ ಸುರೇಂದ್ರಗೆ	1
ಸುಜನ ವಾರಿಜ ನಿಕರ ಸೂರ್ಯಗೆ
ಕುಜನ ಕಾನನ ಕೃಷ್ಣವತ್ರ್ಮಗೆ
ಭಜಕ ಜನರ ಸುರ ಕಾಮಧೇನುಗೆ
ವಿಜಯದಾಯಕ ವೀತಭಯಗೆ	2
ಕಂಬು ಚಕ್ರ ಸುಲಕ್ಷಣಾಂಕಗೆ
ಬಿಂಬ ಮೂರುತಿ ಪಾದ ಭಜಕಗೆ
ಕುಂಭಿಣೀತಲ ಸಾರ್ವಭೌಮಗೆ
ನಂಬಿ ಭಜಿಪರ ಪೊರೆವೊ ಕರುಣಿಗೆ	3
ವಾಯುದೇವಾವೇಶ ಶೇಷನು
ಮಾಯಾರಮಣ ಶಾಪದಿಂದಲಿ
ತೋಯನಿಧಿ ಪರಿವಸನ ತಳದಿ
ರಾಯನಾಗೀಪರಿಯ ಮೆರೆವಗೆ	4
ಮೊದಲು ತಾ ಪ್ರಹ್ಲಾದನೆನಿಸಿದ-
ನದರ ಹಿಂದಲೆ ವ್ಯಾಸರಾಯನು
ಇದರ ಹಿಂದಲೆ ರಾಘವೇಂದ್ರನು
ಪದುಮನಾಭನ ಮುದದಿ ಭಜಿಪಗೆ	5
ಮೂರುಜನುಮದಿ ಹರಿಯ ಶುಭತಮ
ಮೂರುಮೂರುತಿ ಪಾದ ಭಜಿಸಿ
ಧಾರುಣಿ ಜನತತಿಗಭೀಷ್ಟೆಯ
ಸೂರಿಕೊಡುತಲೆ ಮೆರೆವ ಧೀರಗೆ	6
ಧಾತನಾಂಡಕೆ ನಾಥನೆನಿಪ ವಿ-
ಧಾತ ಜನಕನ ಸಾರ ಮನದಲಿ
ಪ್ರೀತಿಯಿಂದಲಿ ಭಜಿಪ ಗುರುಜಗ-
ನ್ನಾಥವಿಠಲ ದೂತರಾಗ್ರಣಿಗೆ	7
							

193 ಮಾಮವ ಯತಿಕುಲೋತ್ತುಂಗ

193.	ರಾಗ: ಪೂರ್ವಿ	ತಾಳ: ಏಕ
ಮಾಮವ ಯತಿಕುಲೋತ್ತುಂಗ 	ಪ
ಶ್ರೀಮನೋಹರ ರಘುರಾಮ ಪದದ್ವಯ
ತಾಮರಸಯುಗ ಭೃಂಗ	ಅ.ಪ 
ನಿರ್ಜಿತ ಷಡ್ವರ್ಗಾರ್ಜಿತಹರಿಪದ
ಭರ್ಜಿತ ದೋಷ ತರಂಗ	1
ಸಾಧಿತ ಹರಿಮತ ಭೇದಿತಪÀರಮತ
ಛೇದಿತ ಮಾಯಿ ಪತಂಗ	2
ತೋಷಿತಯದುವರ ಪೋಷಿತದ್ವಿಜಕುಲ
ದೂಷಿತ ದುರ್ಜನ ಸಂಘ	3
ಮೋದಿತಸುಜನಾರಾಧಿತ ಸುರಗಣಾ-
ಸಾದಿತ ಶ್ರೀಹರಿಯಂಗ	4
ದಾತ ಗುರುಜಗನ್ನಾಥವಿಠಲ ಪದ
ಪಾಥೋದ್ಭವ ಯುಗ ಸಂಗ	5
							

194 ಯಾತರ ಭಯ

194.	ರಾಗ: ಜಂಜೂಟಿ 	ತಾಳ: ಏಕ
ಯಾತರ ಭಯ ಯತಿನಾಥನ ಪದಯುಗ
ಪ್ರೀತಿಲಿ ಭಜಿಪನಿಗೆ1	ಪ
ಪೋತರು ಸತಿ ಮಹಭೂತಿಯ ನೃಪತನ
ನಾಥನಿಗರ್ಪಿಸಿ ದೂತ ನಾನೆಂಬುವಗೆ	ಅ.ಪ
ವಂದಿಸಿ ಧನವನು ತಂದು ಜನರು ತನ್ನ
ಮುಂದೆ ಸುರಿಯಲೇನು
ವಂದನೆ ಮಾಡದೆ ನಿಂದಿಸಲೇನದ-
ರಿಂದ ಪೋದದೇನು
ಬಂದ ಬಂದ ಜನರಾನಂದದಿ ತನ್ನನು
ಪೊಂದಿ ನಡೆಯಲೇನು
ಸುಂದರ ಗುರುಪದ ಮಂದಜಯುಗ ಮನೊ
ಮಂದಿರದಲಿ ತಾ ತಂದು ಭಜಿಪನಿಗೆ	1
ಉದಯದಲಮರನದಿಯಲಿ ಸ್ನಾನಕೆ
ಒದಗದೆ ಮಲಗಿರಲೇನು
ಮದನ ಕೇಳಿಯೊಳು ಸುದತಿಯ ಸಹಿತದಿ
ಮುದದಲಿ ಕುಳಿತಿರಲೇನು
ಕದನದ ವಾರ್ತೆಯ ವÀದನದಲ್ಯಾಡುತ
ಮದಕವ ಮಾಡಿದರೇನು
ಸದಮಲ ಗುರುಪದ ಪದುಮವ ತನ್ನಯ
ಹೃದಯದೊಳಗೆ ಬಲು ಮುದದಿ ಭಜಿಪನಿಗೆ	2
ಅನ್ಯರ ಮನೆಯಲಿ ಮನ್ನಣೆ ದಿನ ದಿನ
ಘನ್ನವಾಗಿ ಮಾಡಿದರೇನು
ಭಿನ್ನಮನದಿ ಪರರನ್ಯಥ ಕಾರ್ಯವ2
ಬೆನ್ನು ಬಿಡದೆ ಮಾಡಿದರೇನು
ತನ್ನಯ ಸತಿಸುತ ಮನ್ನಿಸದನುದಿನ
ಘನ್ನತೆ ಕಳೆದಿರಲೇನು
ಘನ್ನ ಗುರುಜಗನ್ನಾಥವಿಠಲನ್ನ ಮನದಿ ಭಜಿಸಿ ಪಾ-
ವನ್ನನೆನಿಸುವನಿಗ್ಯಾತರ ಭಯ 
1 ದೂತನಾದ ನರಗೆ; 
2 ಭಿನ್ನಮನದಿ ಜನರನ್ಯಾಯದಿ ಬಲು 
| ಬನ್ನ ನುಡಿಯಾಡಿದರೇನು 
| ತನ್ನಯ ಸತಿ ಸುತರನ್ಯರ ವಚನದಿ 
| ತನ್ನನು ಲೆಕ್ಕಿಸದಿರಲೇನು
| ಘನ್ನ ಗುರುಜಗನ್ನಾಥವಿಠಲನ 
| ಸನ್ನುತಿಪ ಗುರುರನ್ನ ಚರಗೆ 
| - ಪಾಠ
							

195 ರಥವಾನೇರಿದ ಯತಿವರನ್ಯಾರೆ ಪೇಳಮ್ಮಯ್ಯಾ

195.	ರಾಗ: ರೇಗುಪ್ತಿ	ತಾಳ: ಏಕ
ರಥವಾನೇರಿದ ಯತಿವರನ್ಯಾರೆ ಪೇಳಮ್ಮಯ್ಯಾ	 ಪ
ವಿತತ ಮಹಿಮಾ ನತಜನರನತಿ-
ಹಿತದಿ ಪಾಲಿಸುವ ಅತುಲ ಮಹಿಮ ಕಾಣಮ್ಮ	ಅ.ಪ
ಧರೆಯೊಳು ವೈಭವದಿಂದಲಿ
ಮೆರೆಯುವನ್ಯಾರೆ ಪೇಳಮ್ಮಯ್ಯಾ
ಪರಮಾದ್ಭುತ ಚರಿಯವ ಮಾಡುತ
ಸರಿಯಿಲ್ಲದಿರುವನ್ಯಾರೆ ಪೇಳಮ್ಮಯ್ಯಾ
ಸ್ಮರಿಸುವ ಭಕುತರ ಪರಿ 
ಪರಿ ಸಲಹುವನ್ಯಾರೆ ಪೇಳಮ್ಮಯ್ಯಾ
ಹರಿಭಕ್ತಾಗ್ರಣಿ ಎನಿಪ ಯತಿಕುಲ
ಗುರುವರ ರಾಘವೇಂದ್ರ ಕಾಣಮ್ಮಾ	1
ಸ್ತುತಿಸುವ ಜನರಿಗೆ ಸತಿಸುತ ಸಂಪದ-
ವತಿಶಯ ನೀಡುವನ್ಯಾರೇ ಪೇಳಮ್ಮಯ್ಯಾ
ಮತಿರಹಿತರಿಗೆ ಸುಮತಿಯ ನೀಡುವನ-
ದ್ಭುತ ಮಹಿಮನು ಯಾರೆ ಪೇಳಮ್ಮಯ್ಯಾ
ಇತರ ದಿವಿಜರಿಗಸಾಧ್ಯವೆನಿಸುವ
ಅತುಲ ಪರಾಕ್ರಮನ್ಯಾರೆ ಪೇಳಮ್ಮಯ್ಯಾ
ಭೂತಳಜನನಾಥನೆನಿಸಿ ಮಹಾ 
ಭೂತಿದಾಯಕ ರಾಘವೇಂದ್ರ ಕಾಣಮ್ಮಾ	2
ಭೂತಳ ಜನರ ವ್ರಾತಕೆ ನಿಜಸುಖ
ದಾತನು ಯಾರೆ ಪೇಳಮ್ಮಯ್ಯಾ
ಭೂತ ಪ್ರೇತ ಪಿಶಾಚ ಸುಮಹ-
ದ್ಭೀತಿಯ ಬಿಡಿಸುವನ್ಯಾರೆ ಪೇಳಮ್ಮಯ್ಯಾ
ಪಾತಕವನಕುಲವೀತಿಹೋತ್ರ ಸುಖ-
ವ್ರಾತದನೆನಿಸುವನ್ಯಾರೆ ಪೇಳಮ್ಮಯ್ಯಾ
ದಾತ ಗುರುಜಗನ್ನಾಥವಿಠಲ ಪದ
ದೂತನೆನಿಪ ಗುರುರಾಯ ಕಾಣಮ್ಮ	3
							

196 ರಥವಾನೇರಿದ ಶ್ರೀ ಗುರುವರ್ಯ

196.	ರಾಗ: ಮಧ್ಯಮಾವತಿ	ತಾಳ: ಏಕ/ಆದಿ
ರಥವಾನೇರಿದ ಶ್ರೀ ಗುರುವರ್ಯ ಕೃತಚರ್ಯಾ	ಪ
ಪೃಥ್ವಿ ವಿತಳದಳಪ್ರತಿ ಮಹಿಮವ
ನತಜನರಿಗೆ ತೋರಿ ಮನೋರಥ ಪೂರ್ತಿಪೆನೆಂದು	ಅ.ಪ
ದಿನದಿನ ಸೇವಾಸಕ್ತರಾ ಮಾಡುವ ಜನರ
ಮನದ ಚಿಂತೆಯ ಪರಿಹಾರಗೈವುತ ಧೀರ
ಅನಿಮಿಷತರು ತೆರ ಉದಾರ ಸದ್ಗುಣ ಗಂಭೀರ
ತನು ಮನೆ ಧನ ವನಿತೆ ಸುತ ಕೃಷಿ
ಜನರಿಗೆ ಈ ಪರಿ ನೀಡುವೆನೆನುತ	1
ಹಿಂದಿನ ಮಹಿಮೆಗಳದ್ಭುತ ಅದರಿಂದೇನೆನುತ
ವಂದಿಪ ಜನರ ಹೃದ್ಗತ ಪೂರೈಸುವೆನೆನುತ
ಇಂದು ಮಾಡಲು ಜನಕೆಹಿತನಾಗುವ ಹರಿ ಪ್ರೀತ
ನಂದಿತ ಸುಜನರ ಸಂದಣಿಯೊಳು ಮುದ-
ದಿಂದಲಿ ನಲಿಯುತ ಬಂದು ತ್ವರದಲಿ	2
ದಿಟ್ಟ ಶ್ರೀ ಗುರುಜಗನ್ನಾಥವಿಠಲದೂತ
ಶಿಷ್ಟೇಷ್ಟಾಭೀಷ್ಟೆಯದಾತಾ ತ್ರಿಲೋಕದಿ ಖ್ಯಾತ
ನಷ್ಟಾಯು ಮೊದಲಾದಖಿಳಾರ್ಥ ನೀಡುವೊ ಕೃತಾರ್ಥ
ಸೃಷ್ಟಿಯೊಳಗೆ ಬಹು ಶ್ರೇಷ್ಠರಾಗಿ ಕರುಣಾ
ದೃಷ್ಟಿಲಿ ನೋಳ್ಪುದು ಶಿಷ್ಟರ ಮತವೆಂದು	3
							

197 ರಾಘವೇಂದ್ರ ಕೃಪಾ ಸಾಗರ

197.	ತಾಳ: ಆಹರಿ	ತಾಳ: ಏಕ
ರಾಘವೇಂದ್ರ ಕೃಪಾ ಸಾಗರ ಜನ ಪಾ-
ಪೌಘ ದೂರ ತೇ ನಮೋನಮೋ	 ಪ
ಮಾಗಧರಿಪು ಮತ ಸಾಗರ ಝಷ ಸಮಾ-
ಮೋಘ ಮಹಿಮ ತೇ ನಮೋ ನಮೋ	ಅ.ಪ
ದಾರಿತ ಪರಮತ ವಾರಣ ತತಿ ಪರಿ-
ಪೂರಿತ ಕರುಣಾಸಾಗರ ನಮೋ ನಮೋ
ವಾರಿತ ತಮ ಸ್ವೀಕಾರಿತ ಹರಿಮತ
ಧಾರುಣಿ ಸುರವರ ಧೀರ ನಮೋ	1
ಸಾಧಿತ ರಘುವರ ಬೋಧಿತ ಭಿದಮತ
ಬಾಧಿತ ಪರರ ವಿವಾದ ನಮೋ
ಶೋಧಿತ ಹರಿಮತ ಮೋದಿತ ಸುರ ಸಂ-
ಪಾದಿತ ಹರಿಪದ ದೇವ ನಮೋ 	2
ಸೇವಿತ ಯದುವರ ಪಾವಿತ ನಿಜಜನ
ಶ್ರಾವಿತ ಹರಿಕಥ ಪಾಲಯ ಮಾಂ
ಕೋವಿದ ಕುಲ ಸಂಭಾವಿತ ನಿಜಜನ
ಜೀವಪ್ರದ ಹೇ ಪಾಲಯ ಮಾಂ	3
ಕಾಮಿತ ಚಿಂತಾಮಣಿ ನಿಭ ತ್ವಂ
ಕಾಮದುಹೋಪಮ ಪಾಲಯ ಮಾಂ
ಸಾಮವೇದ್ಯ ಶ್ರೀರಾಮನ ಪದಯುಗ
ತಾಮರಸಾಲಿಯೆ ಪಾಲಯ ಮಾಂ	4
ಪಾತಕವನಕುಲ ವೀತಿಹೋತ್ರನಿಭ
ತಾತ ಪಾಲಿತ ನಿಜದೂತ ನಮೋ
ದಾತ ಗುರುಜಗನ್ನಾಥವಿಠಲ ಪದ
ಪಾಥೋಜ ಭ್ರಮರ ತೇ ನಮೋ ನಮೋ	5
							

198 ರಾಘವೇಂದ್ರ ಗುರುರಾಯಾ

198.	ರಾಗ: ಸುರಟಿ	ತಾಳ: ಆದಿ /ಏಕ
ರಾಘವೇಂದ್ರ ಗುರುರಾಯಾ ನೀ ವೇಗದಿ ಪಿಡಿ ಎನ್ನ ಕೈಯ್ಯಾ	ಪ
ಆಗಾಮಿ ಸಂಚಿತ ಭೊಗಗಳುಳ್ಳ ಭವ-
ಸಾಗರದಲ್ಲಿ ಬಿದ್ದೆ ವೇಗದಿ ನೀ ಬಂದು 	ಅ.ಪ
ಭಾವ ದ್ರವ್ಯ ಕ್ರಿಯಾದ್ವೈತ ಇದರನುಭಾವವ ತಿಳಿಯದೆ ನಿರುತ
ಸೇವಿಪ ಸಂತತ ಈವಿಧ ನರರನು
ದೇವರೆಂದನುದಿನ ಭಾವಿಸಿದೆನ್ನನು	1
ಅಶನ ವಸನಕಾಗಿ ನಾ ಪರವಶದಲಿ ಶಿರಬಾಗಿ
ಅಸಮ ನಿನ್ನಯ ಪಾದ ಬಿಸಜ ಭಜಿಸದೆ ನಾ
ವಸುಮತಿಯೊಳು ಬಲು ಹಸನಗೆಟ್ಟೆನ್ನನು	2
ಶಿರಿವರ ಗುರುಜಗನ್ನಾಥವಿಠಲನ ಪರಿಸರವರನಾಥ
ಸರಿಯೆನಿಸಿದ ನಿನ್ನ ಪರಿಚರರೊಳು ಎನ್ನ
ಮರೆಯದೆ ದಯದಲಿ ಪೊರೆವೊದು ಎನ್ನನು1 	3
1 ಸರಿಎನೀಸೀಪರಿ ಧೆರೆಯೊಳು ಪಾಲಿಸು - ಪಾಠ
							

199 ರಾಘವೇಂದ್ರರಾಯಾ ಈಗ ಕಾಯೋ

199.	ರಾಗ: [ಶಹನ] 	ತಾಳ: ಆದಿ
ರಾಘವೇಂದ್ರರಾಯಾ
ಈಗ ಕಾಯೋ ಎನ್ನ ಜೀಯಾ	ಪ
ನಿಜಾಕುಮುದ ಚಂದ್ರಾ ಸಾಂದ್ರಾ
ಭಜಾಮಿ ಯತಿ ಇಂದ್ರಾ ತಂದ್ರಾ
ತ್ಯಜಾನೆಗೈಸಿ ಎನ್ನ ನಿಜಾಮನದಿ ಪಾದ
ಭಜಾನೆಗೈವಂತೆ ನಿಜಾಮನವನಿತ್ತು	1
ದುರಾಳ ಸಂಗದಿಂದಾ ನೊಂದಾ
ತರಾಳ ಭವದಿಂದಾ ಬೆಂದಾ
ಮರೂಳು ಭವದೊಳು ಉರೂಳುತೀಪರಿ
ತರಾಳೆ ಸಂಗದಿ ಮನ ಮರೂಳುಗೊಂಡೆನೊ	2
ದಾತಾ ನೀನೆ ಎನ್ನಾ ಇನ್ನಾ
ಮಾತೂ ಲಾಲಿಸೊ ಘನ್ನಾ ಚನ್ನಾ
ತಾತಾ ಗುರುಜಗನ್ನಾಥಾವಿಠಲ ಪಾದ
ಪಾಥೋಜ ಮನ ನಿಕೇತನದಲಿ ತೋರಿ	3
							

200 ರಾಘವೇಂದ್ರಾ ನೀನೆ ಪಾಲಿಸೊ

200.	ರಾಗ: ಆನಂದಭೈರವಿ	ತಾಳ: ಆದಿ 
ರಾಘವೇಂದ್ರಾ ನೀನೆ ಪಾಲಿಸೊ ನತಜನÀ ಪಾಲ
ಯೋಗಿಗಳ ಮನೋಲೋಲನೆ 	ಪ
ಜಾಗುಮಾಡದೆ ನಿನ್ನನುರಾಗದಿಂ ಮನದುಸರ
ಬಾಗಿ ನಮಿಸಿ ಬೇಡಿಕೊಂಬೆ 
ಯೋಗಿಕುಲ ಶಿರೋಮಣಿಯೆ  	 ಅ.ಪ
ಅನುದಿನದಲ್ಲಿ ನಾನು ಘನವಿಪತ್ತುಗಳನು
ಅನುಭವ ಮಾಡಿದೆನು 
ಘನ ಮಹಿಮನೆ ನೀನು ಘನ ಸುಖವಿತ್ತ್ತು ನಿನ್ನ 
ಮನ ಪೂರ್ತಿ ಭಜಿಸುವಂಥ
ಅನುಪಮ ಙÁ್ಞನ ಭಕ್ತಿ ಜನುಮ ಜನುಮದಿ ಇತ್ತು	1
ಹೇಸಿ ಸಂಸಾರದಲಿ ಮೋಸಗೊಂಡು ಅದರ ಸುಖ
ಲೇಸುಗಾಣದೆ ಬಹು 
ಕ್ಲೇಶ ಬಡುವೆನಯ್ಯ ನಿತ್ಯ ಈಶ ಸಂಸಾರ ಮಹ 
ಪಾಶಬಿಡಿಸಿ ತವೋ-
ಪಾಸನದಲ್ಲಿ ಮನ ಲೇಸು ಕೊಟ್ಟು ನಿತ್ಯದಲ್ಲಿ	2
ಎಷ್ಟು ದಿನ ಭವದೊಳು ಕಷ್ಟಬಡುತ e್ಞÁನ
ಭ್ರಷ್ಟನಾಗಿರಲಿ ಸ್ವಾಮಿ
ದೃಷ್ಟಿಯಿಂದ ನೋಡಿ ನಿನ್ನ ಮುಟ್ಟಿ ಭಜಿಸುವೊ ದಿವ್ಯ
ದೃಷ್ಟಿ ಎನಗಿತ್ತು ನಿಮ್ಮ 
ದಿಟ್ಟ ಗುರುಜಗನ್ನಾಥವಿಠಲನ್ನ ನೋಡುವಂತೆ	3
							

201 ರಾಘವೇಂದ್ರಾ ಸದ್ಗುಣಸಾಂದ್ರ

201.	ರಾಗ: ಪೂರ್ವಿ	ತಾಳ: ಅಟ
ರಾಘವೇಂದ್ರಾ ಸದ್ಗುಣಸಾಂದ್ರ 	ಪ
ರಾಘವೇಂದ್ರ ಅನುರಾಗದಿ ಭಕ್ತರ
ರೋಗವ ಕಳೆದು ಸುಭೋಗವ ಸಲಿಸೊ 	ಅ.ಪ
ಧೀಮಂತರಿಗತಿ ಕಾಮಿತವೀವೊ
ಶ್ರೀಮಂತನೆ ಎನ ಕಾಮಿತ ಸಲಿಸೊ	1
ಆಪದ್ಬಾಂಧವ ಕೋಪವ ಮಾಡದೆ
ನೀ ಪಾಲಿಸೋ ಎನ್ನ ಪಾಪವ ನೋಡದೆ	2
ಅನ್ಯನಲ್ಲವೊ ನಿನ್ನ ಸುಭಕ್ತನು
ಮನ್ನಿಸಿ ದಯದಿ ನೀ ಎನ್ನನು ಕಾಯೊ	3
ಜನ್ಯನ ಜನಕನು ಮನ್ನಿಸದಿರಲು
ಅನ್ಯರು ಕಾಯ್ವರನನ್ಯಪಾಲಕನೆ	4
ಈಶನು ನೀನೈ ದಾಸನು ಎನ್ನನು-
ದಾಶಿನ ಮಾಡದೆ ಪೋಷಿಸಿ ಪೊರೆಯೈ	5
ಎಂದಿಗೆ ನಿನ್ನನು ಪೊಂದುವೆ ಗುರುವರ
ತಂದೆಯೆ ತೋರಿಸೊ ಮುಂದಿನ ಗತಿಯ	6
ಪೋತನು ನಾನೈ ಮಾತನು ಲಾಲಿಸೊ
ನೀತ ಗುರುಜಗನ್ನಾಥವಿಠಲ ಪ್ರಿಯ	7
							

202 ರಾಯನೆಂದರೆ ಗುರುರಾಯ

202.	ರಾಗ: ಅಸಾವೇರಿ	ತಾಳ: ತ್ರಿವಿಡಿ
ರಾಯನೆಂದರೆ ಗುರುರಾಯ ಸದ್ಗುಣಗಣ
ಕಾಯ ಸುಜನ ಗೇಯ ಮಹರಾಯಾ	ಪ
ಮಾಯಾಮಯ ಭವ ತೋಯನಿಧಿಯೊಳು
ಬಾಯಿ ಬಿಡುವೆನುಪಾಯದಿಂದಲಿ
ಕಾಯೋ ದಾತನೆ ನೋಯದಂದದಿ
ಕಾಯೋ ಎನ್ನನು	ಅ.ಪ
ನಿನ್ನಾ ನಂಬಿದ ಮಾನವಾ ಭವದೀ
ಬನ್ನಾ ಬಡದೆ ತಾನಿರುವಾ
ಘನ್ನಾ ಮಹಿಮಾ ಪಾವನ್ನ ತವಪಾದಾ
ಮನ್ನಾದೊಳಗೆ ನಿತ್ಯಾ ಚನ್ನಾಗಿ ಭಜಿಸುತ
ಧನ್ಯನೆನಿಸುವ ಹೊನ್ನು ಹಣಗಳೂ
ನಿನ್ನ ಇಚ್ಛೆಲಿ ತಾವೆ ಬಪ್ಪವು
ಘನ್ನ ಮಹಿಮನೇ ನಿನ್ನ ನಂಬಿದೆ
ಎನ್ನ ಪಾಲಿಸನನ್ಯರಕ್ಷಕ	1
ಅನ್ನಾ ವಸನವಿಲ್ಲದೆ ನಿತ್ಯಾ
ಅನ್ಯಾರ ಬೇಡಿಸೊದಿದೇ
ಘನ್ನಾತೆ ನಿನಗಿದನನ್ಯ ಭಕ್ತನ ಪರ-
ರನ್ನಕ್ಕೆ ಗುರಿಮಾಡಿ ಬನ್ನ ಬಡಿಸಿದರೆನ್ನ
ನಿನ್ನ ಸೇವಕ ನಿನ್ನ ಪೂಜಕ 
ನಿನ್ನ ಧ್ಯಾನವÀ ಮನ್ನದಿಂದಾ
ನಿನ್ನ ತ್ಯಜಿಸಿ ಅನ್ಯ ದೈವರ 
ಮನ್ನಿಸೆನೋ ಪಾವನ್ನ ಮೂರುತಿ 	2
ಹೊಟ್ಟೆಗೋಸುಗ ದೇಶಾ ತಿರುಗಿ ದೇಹಾ
ಕೆಟ್ಟು ಪೋಗಿಹದೋ ಹೀಗಾಗೀ
ಎಷ್ಟು ಪೇಳಲಿ ಎನ್ನ ದುಷ್ಟ ಬುದ್ಧಿಲಿ e್ಞÁನ
ನಷ್ಟವಾಗಲು ಬಹು ಭ್ರಷ್ಟ ಮಾರ್ಗವ ಸೇರಿ
ದುಷ್ಟ ಮತಿಯಲಿ ಶಿಷ್ಟ ದ್ವೇಷವ
ಕಟ್ಟಿ ಕಾದಿದೆ ನಷ್ಟ ತಿಳಿಯದೆ
ಕೆಟ್ಟು ಪೋಗುವೆ ಥಟ್ಟನೆ ನೀ ಪೊರಿ
ಧಿಟ್ಟಾ ಗುರುಜಗನ್ನಾಥವಿಠಲ ದೂತಾ	3
							

203 ರಾಯರ ನೋಡಿರೈ

203.	ರಾಗ: ಅಸಾವೇರಿ/ಭೈರವಿ	ತಾಳ: ಆದಿ
ರಾಯರ ನೋಡಿರೈ ಶುಭತಮಕಾಯರ ಪಾಡಿರೈ	ಪ
ತೋಯಜಪತಿ ನಾರಾಯಣ ಪದಯುಗ
ಭೃಂಗ ಭüಕ್ತಕೃಪಾಂಗ	ಅ.ಪ
ಸುಂದರಮುಖ ಅರವಿಂದ ಲೋಚನ ಘ್ರಾಣ
ಕುಂದಕುಟ್ಮಲಸಮರದನ ರಾಜಿತ ವದನ 
ಮಂದಸ್ಮಿತಯುತ ದ್ವಂದ್ವ ಓಷ್ಠ ಶ್ರುತಿ
ಛಂದವಾಗಿಹ ಚುಬುಕಾ ಫಾಲದಿ ತಿಲಕ
ಕಂಧರಯುತ ಪುರಂದರ ಕರಿಕರ
ಛಂದವಾಗಿಹ ಬಾಹುಯುಗಳ ಮಾಲಾಂಕಿತ ಕೊರಳ
ಇಂದಿರಾಪತಿ ನಿಜಮಂದಿರವೆನಿಸುವ
ಸುಂದರ ಹೃದಯದಿ ನಾಮ ಹಚ್ಚಿಹ ಪ್ರೇಮ	1
ಹಸ್ತದಿ ರಾಜಿಪ ಪುಸ್ತಕ ಮಣಿಮಾಲ
ಸ್ವಸ್ತಿಕಾಸನ ಸ್ಥಿತ ಮೋದಕೃತ ವಿನೋದ
ಮಸ್ತಕದಿಂದಲಿ ವಿಸ್ತøತಕಾಷಾಯ
ವಸ್ತ್ರದಿ ಶೋಭಿಪ ಗಾತ್ರ ಶುಭಚಾರಿತ್ರ
ಸ್ವಸ್ಥಮನದಿ ಪ್ರಶಸ್ತ ಹರಿಯ ಪಾದ
ಸ್ವಸ್ತಿಕ ಯುಗಳ ಧ್ಯಾನ ಮಾಡುವ ಙÁ್ಞನ
ಧ್ವಸ್ತದೋಷ ಸಮಸ್ತ ಜಗತ್ತಿಗೆ
ಸ್ವಸ್ತಿದನೆನಿಸಿದ ಭೂಪ ಭವ್ಯಪ್ರತಾಪ	2
ಕುಟಿಲ ವಿಮಲತರ ಪಟಲಾಂಧಕಾರಕೆ
ಪಟುತರ ದಿನಮಣಿ ರೂಪ ನಿಜ ಜನ ಸುರಪ
ಸ್ಫುಟ ಮೋದತೀರ್ಥರ ಸ್ಫಟಿಕ ಜ¯ಧಿಯೊಳು
ಸ್ಪುಟಿತ ಹಾಟಕ ಚಂದ್ರ ಸದ್ಗುಣ ಸಾಂದ್ರ
ಶಠಮಾಳ್ಪರ ಬಲು ಹಟದಿ ಶಿಕ್ಷಿಸುವ
ಚಟುಲ ಜನರ ಪರಿಪಾಲ ಕರುಣವಿಶಾಲ
ಕಿಟಿರದಭವನದಿ ತಟಕೃತ ಮಂದಿರ
ಧಿಟ ಗುರುಜಗನ್ನಾಥವಿಠಲ ದೂತ	3
							

204 ರಾಯರ ಪದಯುಗ

204.	ರಾಗ: ಶಂಕರಾಭರಣ	ತಾಳ: ಅಟ
ರಾಯರ ಪದಯುಗ ತೋಯಜವಿರಲೆಮ-
ರಾಯನ ಭಯವಿಲ್ಲ ಮನಕೆ 	 ಪ
ಹೇಯಸಂಸಾರೆಂಬ ತೋಯಧಿ ದಾಟಿಸಿ
ಶ್ರೇಯಸ್ಸು ಸೌಖ್ಯವ ನೀಡೋದು ಜನಕೆ	ಅ.ಪ
ಸ್ನಾನ ಸಂದ್ಯಾ ಜಪ ಧ್ಯಾನ ಮೌನವ ಬಿಟ್ಟು
ನಾನಾವ್ಯಸನದೊಳಗಿರುತಿರಲು
ಏನೇನು ವಿಧ ವಿಧ ಮಾನಾಪಮಾನವು
ಹಾನಿ ವೃದ್ಧಿ ಲಾಭಾಲಾಭವೇನು
ನೀನೆ ನೀಡುವಿ ಎಂಬ ಙÁ್ಞನದಿಂದನುಸಂ-
ಧಾನ ಮಾಡುತಲಿಪ್ಪ ನರಗೆ	1
ಸತಿ ಸುತ ಹಿತಜನ ವಿತತ ವೃತ್ತಿ ಕ್ಷೇತ್ರ
ಮಿತಿಯಿಲ್ಲ ಸೌಭಾಗ್ಯವತಿಶಯದಿ
ಪತಿತರ ಸಂಗದಿ ಮತಿಗೆಟ್ಟು ತಾ ಪರ
ಸತಿಯರಿಗೊಲಿದು ಅನುದಿನದಿ
ಸ್ತುತಿನತಿ ಶ್ರೀಹರಿ ಕಥೆಗಳ ಕೇಳದೆ
ವ್ರತನೇಮ ನಿರಾಹಾರ ತ್ಯಜಿಸಿ
ಸತತ ಮಾಡುವ ಕರ್ಮತತಿಗಳ ಗುರುಪಾದ
ವ್ರತತಿಜ ಯುಗಕೀವ ಮತಿಯುಳ್ಳ ನರಗೆ	2
ದಾತನಾಗದೆ ಪರಘಾತಕ ತಾನಾಗಿ
ಪಾತಕ ಕರ್ಮವ ಮಾಡಲೇನು
ರೀತಿಯಿಲ್ಲದೆ ಬಹು ಮಾತುಗಳಾಡುತ
ಜಾತಿಕುಲಾಚಾರ ತ್ಯಜಿಸಲೇನು
ಯಾತನಮಯ ಭವ ಪಾಥೋಧಿಯೋಳ-
ಗೀತೆರದಲಿ ಮುಳುಗಿರಲೇನು
ನೀತ ಗುರುಜಗನ್ನಾಥವಿಠಲಗತಿ-
ಪ್ರೀತನಾದ ಗುರು ದೂತನಾದವಗೆ	3
							

205 ವೃಂದಾವನದಲಿ ನಿಂತ ಸುಯತಿವರನ್ಯಾರೆ

205.	ರಾಗ: ರೇಗುಪ್ತಿ	ತಾಳ: ಏಕ/ತ್ರಿವಿಡಿ
ವೃಂದಾವನದಲಿ ನಿಂತ ಸುಯತಿವರನ್ಯಾರೆ ಪೆÉೀಳಮ್ಮಯ್ಯ	ಪ
ವಂದಿಪ ಜನಕಾನಂದ ಕೊಡುವೊ ರಾಘ-
ವೇಂದ್ರ ಮುನಿವರನೀತ ನೋಡಮ್ಮ	ಅ.ಪ
ಇಂದಿರೆ ರಮಣನ ಛಂದದಿ ಭಜಿಸ್ಯಾ-
ನಂದದಲಿಹನ್ಯಾರೆ ಪೇಳಮ್ಮಯ್ಯ
ನಂದತೀರ್ಥಮತ ಸಿಂಧುವರಕೆ ಬಾಲ-
ಚಂದಿರನೆನಿಸಿಹನ್ಯಾರೇ ಪೇಳಮ್ಮಯ್ಯ
ಮಂದಜಭವ ಹರಿ ಕಂದುಗೊರಳರ
ನೊಂದೆಂಬರ ಅಳಿದಿಹನ್ಯಾರೆ ಪೇಳಮ್ಮಯ್ಯ 
ಹಿಂದೆ ವ್ಯಾಸಮುನಿ ಎಂದು ಕರೆಸಿದ ರಾಘ-
ವೇಂದ್ರ ಗುರುವರನೀತ ನೋಡಮ್ಮ	1
ನತಿಸುವ ಜನರಿಗೆ ಸತಿಸುತರನು ಬಲು
ಹಿತದಲಿ ನೀಡುವನ್ಯಾರೆ ಪೇಳಮ್ಮಯ್ಯ
ಪ್ರತಿದಿನ ತನ್ನನು ಮತಿಪೂರ್ವಕ ಬಲು
ತುತಿಪರ ಪಾಲಿಪನ್ಯಾರೆ ಪೇಳಮ್ಮಯ್ಯ
ಮತಿಯುತ ಪಂಡಿತತತಿಯಭಿಲಾಷವ
ಸತತ ಪೂರ್ತಿಪನ್ಯಾರೆ ಪೇಳಮ್ಮಯ್ಯ
ಕ್ಷಿತಿಸುರರಿಗೆ ಸದ್ಗತಿದಾಯಕ ಮಹ
ಯತಿಕುಲವರ ಗುರುರಾಯ ಕಾಣಮ್ಮ	 2
ಮಾತೆಯು ಸುತರಲಿ ಪ್ರೀತಿಗೊಳಿಸುವ
ತಾತನ ತೆರದಿಹನ್ಯಾರೆ ಪೇಳಮ್ಮಯ್ಯ
ಪ್ರೇತನಾಥ ಮಹ ಭೂತಗಣಂಗಳ
ಭೀತಿಯ ಬಿಡಿಸುವನ್ಯಾರೆ ಪೇಳಮ್ಮಯ್ಯ
ಭೂತಳ ಜನಕೃತ ಪಾತಕಕಾನನ
ವೀತಿಹೋತ್ರ ತೆರನ್ಯಾರೆ ಪೇಳಮ್ಮಯ್ಯ
ದಾತ ಗುರುಜಗನ್ನಾಥವಿಠಲ ನಿಜ
ದೂತ ಜನಕೆ ಮಹದಾತಕಾಣಮ್ಮ	3
							

206 ಶರಣಜನರ ಕಲ್ಪತರುವೆ

206.	ರಾಗ: ಅಸಾವೇರಿ	ತಾಳ: ತ್ರಿಪುಟ/ತ್ರಿವಿಡಿ
ಶರಣಜನರ ಕಲ್ಪತರುವೆ ನೀನೆ 
ಕರುಣದಿ ಪೊರೆಯೆನ್ನ ಗುರುವೆ 	 ಪ
ಶರಣರಿಲ್ಲದೆ ಕರುಣಿಸೆಂದು1
ಶರಣು ಹೊಕ್ಕೆನು ಚರಣ ಕಮಲಕೆ
ಶರಣೆಂದು ಕರುಣದಿಂದಲಿ
ಕರುಣಿಸೆನ್ನನು ಕರುಣಾಸಾಗರ 	ಅ.ಪ
ತಾಪತ್ರಯದಿ ಬಹುನೊಂದೆ ಭವ-
ಕೂಪಾರದೊಳಗತಿ (+ನಾ) ಬೆಂದೆ
ಪಾಪಮೋಚಕ ನಿಷ್ಪಾಪಿ ಜನರ ಪಾಲ
ಕಾಪಾಡೊ ನೀ ಎನ್ನ ಅಪಾರ ಮಹಿಮನೆ
ದ್ವಾಪರದಿ ಯದುವರನು ಸಾಂ-
ದೀಪಪುತ್ರನ ತೋರಿ ಕಾಯ್ದನು
ಪಾಪಿ ಬಕನಳಿದು2 ಸಲಹಿ-
ದಾಪರಿಯಲಿ ಎನ್ನ ಸಲಹೊ	1
ಕಾಮಿತಫಲದ ನೀನೆಂದು ಬಲು 
ಪ್ರೇಮದಿ ಬಳಿಗೆ ನಾ ಬಂದು
ಸ್ವಾಮಿ ಗುರುಸಾರ್ವಭೌಮ ನಿನ್ನಂಘ್ರಿಯುಗ 
ತಾಮರಸವ ಮನೋಧಾಮದಿ ನಿಲಿಸೆಂದೆ
ರಾಮ ಕೌಶಿಕÀ ಮಖವ ಕಾಯ್ದನು
ಭೀಮ ವಿಪ್ರರ ಭೀತಿ ಬಿಡಿಸಿದ
ಧೂಮಕೇತನನುಂಡು ಕೃಷ್ಣನು
ಆ ಮಹದ್ಭಯ ಕಳೆದ ತೆರದಿ	 2
ತಾತ ನಿನ್ನನು ಬಾಧೆ ಬಡಿಸೆ ಸಿರಿ-
ನಾಥ ತಾ ಬಂದಾಗ ಬಿಡಿಸೆ
ದಾತ ಗುರುಜಗನ್ನಾಥವಿಠಲನತಿ-
ಪ್ರೀತಿಯಿಂದ ನಿನ್ನ ಮಾತು ಕೇಳಿದ ತೆರ
ಮಾತು ಲಾಲಿಸಿ ಕಾಯೊ ಯತಿಕುಲ-
ನಾಥ ಎನ್ನಪರಾಧ ಮನ್ನಿಸಿ
ಭೀತಿಯ(+ನು) ಸದೆದು ಪಾಲಿಸ-
ನಾಥ ರಕ್ಷಕನಲ್ಲೆ ಗುರುವರ	3
1 ಕರುಣಿಸೆಂದನು; 2 ಬಕನಳಿದನು - ಪಾಠ
							

207 ಶೇಷಾಂಶÀ ಪ್ರಹ್ಲಾದರಾಯಾ

207.	ರಾಗ: ಅಸಾವೇರಿ	ತಾಳ: ಝಂಪೆ
ಶೇಷಾಂಶÀ ಪ್ರಹ್ಲಾದರಾಯಾ ಎನ್ನ
ದೋಷ ಎಣಿಸದೆ ಕಾಯೊ ಜೀಯಾ	 ಪ
ಕಂಡ ಕಂಡವರ ಭಜಿಸೀ ಬೇಡಿ
ಬೆಂಡಾದೆ ನಿನ್ನಂಘ್ರಿ ತ್ಯಜಿಸೀ
ತೋಂಡವತ್ಸಲ ಕರುಣೆ ಸಲಿಸೀ ಪಾದ
ಪುಂಡರೀಕ್ಯನ್ನೊಳಗೆ ಇರಿಸಿಕಾಯೋ	1
ಮಾಡಬಾರದ ಕೃತ್ಯವಾ ನಾ ಬಲು
(+ಮಾಡಿ) ಮಾಡಿದೆ ಗೃಹಕೃತ್ಯವಾ
ಬೇಡದಲೆ ಭೃತ್ಯತ್ವವಾ ಈ ದೋಷ
ನೋಡದಲೆ ಭಕ್ತತ್ವವಾ ನೀಡೊ	2
ದೀನ ಜನಪಾಲ ನಿನ್ನಾ ರೂಪ
ಧೇನಿಸದೆ ಮಾನಿನಿಯರನ್ನಾ
ಧ್ಯಾನ ಮಾಡಿದೆ ಬಿಡದೆ ಘನ್ನಾ ಗತಿ
ಎನು ಪೇಳಯ್ಯಾ ಎನಗೆ ಮುನ್ನಾ ಸ್ವಾಮಿ	3
ಗುರುರಾಘವೇಂದ್ರರಾಯ ಎನ್ನ
ಕರೆದು ಕೈಪಿಡಿಯೊ ಮಹರಾಯ
ತರಿಯೊ ಪಾತಕವೆನ್ನ ಜೀಯಾ
ಶರಣು ಪೊಕ್ಕೆನೊ ನಿನಗೆ ನಾನಯ್ಯಾ ಕರುಣೀ	4
ಮಾತ ಪಿತ ಭ್ರಾತ ಬಂಧೂ ಎನಗೆ
ನೀತಗತಿಕುಲ ಗೋತ್ರವೆಂದೂ
ದಾತ ನಿನ್ನ ದೂತನೆಂದೂ ಬಂದ-
ನಾಥನನು ನೀ ಕಾಯುವುದು ಪ್ರಭುವೇ	5
ಕರುಣಸಾಗರನೆ ಈಗ ತವರೂಪ
ಸ್ಮರಣೆ ನೀಡೆನಗೆ ಬ್ಯಾಗಾ
ಶರಣು ಪೊಕ್ಕವನ ವೇಗಾ ಭವ
ಅರಣ ದಾಟಿಸುವಂಥ ಯೋಗಾ ಪೇಳಿ	6
ಹೋಗುತಿದೆ ಹೊತ್ತು ಪದುಮಾಕ್ಷ ಹ್ಯಾಗೆ
ಆಗುವದೊ ನಿನ್ನ ಅಪರೋಕ್ಷ
ಬಾಗಿ ಬೇಡುವೆ ಕಲ್ಪವೃಕ್ಷ ಸುರಧೇನೊ
ಜಾಗು ಮಾಡದೆ ಸಲಿಸ್ಯನ್ನಪೇಕ್ಷಾ ಸ್ವಾಮಿ	7
ಧೀರ ಗುರುರಾಜ ಕೇಳೋ ಎನ್ನ-
ಪಾರ ದೋಷಗಳನ್ನೆ ತಾಳೋ
ಘೋರ ಅಙÁ್ಞನ ಕೀಳೋ ಪರಲೋಕ
ಸೇರಿಸೆನ್ನನು ಕೃಪಾಳೋ ಸ್ವಾಮಿ	8
ಎಷ್ಟು ಪೇಳಲಿ ಎನ್ನ ತಾತಾ ಕೃಪಾ-
ದೃಷ್ಟಿಯಲಿ ನೋಡು ನಾನಿನ್ನ ಪೋತಾ
ಧಿಟ್ಟ ನೀ ಗುರುಜಗನ್ನಾಥಾವಿಠಲನ
(+ನ್ನಿಷ್ಟ) ನಿನ್ನೊಳಗೆ ತೋರೋ ದಾತಾ ಖ್ಯಾತಾ	9
ಮಾಡಿದೆ ಗೃಹಕೃತ್ಯವಾ=ಸಂಸಾರ ಸಾಗಿಸಿದೆ
							

208 ಶ್ರೀ ರಾಘವೇಂದ್ರರಾಯ ಎನ್ನ ಭವ ಭಾರ ನಿನ್ನದೊ

208.	ರಾಗ: ಆನಂದಭೈರವಿ/ಕೇದಾರಗೌ¼	À	ತಾಳ: ಝಂಪೆ
ಶ್ರೀ ರಾಘವೇಂದ್ರರಾಯ ಎನ್ನ ಭವ
ಭಾರ ನಿನ್ನದೊ ಜೀಯ	ಪ
ದೂರನೋಡದಲೀಗ ಕೈಯ ಪಿಡಿದು ನೀ
ಸಾರೆಗರಿಯೊ ಸೂರಿಧ್ಯೇಯ	ಅ.ಪ
ನಿನ್ಹೊರತು ಗತಿಯಾರೊ ಎನಗೆ ಈಗ
ನಿನ್ನನೇ ತೋರಯ್ಯ ಎನಗೆ
ಬಿನ್ನಪವ ಮಾಳ್ಪೆ ನಾ ನಿನಗೆ ಭವದಿ
ಬನ್ನ ಬಡುವವನ ನೋಡಿ ಹೀಗೆ	1
ಈಸು ವತ್ಸರ ವ್ಯರ್ಥ ಕಳದೆ ನಾ ನಿನ್ನ
ದಾಸನಾಗದೆ ಭವದಿ ಮೆರೆದೆ 
ಈಶ ನೀನೆಂಬುದನು ಮರೆದೆ ಬಹು
ಕ್ಲೇಶಬಟ್ಟೀಪರಿಯಲುಳದೆ	2
ಗುರುವರನೆ ನಿನ್ನಂಘ್ರಿಕಮಲ ಯುಗಳ ನಾ
ಕರಮುಗಿದು ಬೇಡಿದೆನೊ ವಿವiಲ
ಸರಸ ವಿಙÁ್ಞನಭಕುತಿನೇಮ ನೀನಿತ್ತು
ಪೊರೆಯೊ ನೀ ಭಕ್ತವತ್ಸಲ1	3
ಏನು ಕರುಣಾನಿಧಿಯೊ ನೀನು ಜಗದೊಳಗೆ
ದೀನರುದ್ಧರಿಪೆ ನೀ ಎಂದು
ಸಾನುರಾಗದಿ ಭಜಿಪೆ ನಾನು ತವಚರಣ
ಧ್ಯಾನ ಪಾಲಿಪುದೀಗ ನೀನು	4
ವಿಷಯದಾಸೆ ಬಿಡಿಸೊ ಸ್ವಾಮಿ ಎನಗೆ ತಾ
ವಿಷಯ ಪತಿಯ (?) ಸಲಿಸೊ ಪ್ರೇಮಿ
ಕೃಷಿಯಾದಿ ಸತಿಸುತರ ಕಾಮಿ ಎನಿಸಿ
ತೃಷೆಯಗೊಂಡೆನೊ ಅಂತರ್ಯಾಮಿ	5
ನರರ ಯಾಚನೆ ಮಾಡಸಲ್ಲ ದೇಶವನು
ತಿರು ತಿರುಗಿ ನಾ ಬಂದೆನಲ್ಲ
ಪರಿ ಪರಿಯ ಬವಣೆ ಸುಳ್ಳಾಗದಲ್ಲ ಸರ್ವಙ್ಞ
ಸರ್ವ ನೀ ತಿಳಿದಿರುವಿಯಲ್ಲ	6
ನೀಚಜನರ ಮನೆಗೆ ಪೋಗಿ ನಾನು
ಯಾಚಿಪೆನೊ ನಾಚಿಕೆಯ ನೀಗಿ
ಯೋಚನೆಇಲ್ಲದೆ ನಾನು ಕೂಗಿ ಈಗ
ನೀಚನಾದೆನೊ ಕಾಯೊ ಪರಮಯೋಗಿ	7
ಶೇಷಾದ್ರಿ ನಿಲಯ ವಾಸ ಪದದೂತ 
ದೋಷರಾಶಿಯ ತರಿಯಲೀಶಾ
ವಾಸವಾಗೆಲೊ ಮನದಿ ತೋಷ ಪೊರೈಸೊ
ದಾಸ ಜನ ಪ್ರಿಯ ಯೋಗೀಶ	8
2
ಪೋತ ನಾ ನಿನಗಲ್ಲೆ ಜೀಯ ಎನಗೆ
ತಾತ ನೀನೆಂಬೊ ಮಾತು ಖರಿಯ
ಮಾತು ಲಾಲಿಪುದು ನಿನ್ನ ಕ್ರಿಯ ಗುರುಜಗ-
ನ್ನಾಥವಿಠಲಗೆ ನೀನು ಪ್ರಿಯ	9
1 ಭಕುತಜನಪಾಲ - ಪಾಠ; 
2 ಇಲ್ಲಿ ಇನ್ನೊಂದು ನುಡಿ 
ಒಂದು ಗ್ರಂಥದಲ್ಲಿ ಮಾತ್ರ ಸಿಕ್ಕದೆ:- 
ದುಷ್ಟ ಜನ ತತಿಯ ಸಂಗ ಬಿಡಿಸಿ 
| ಶಿಷ್ಟ ಜನರಂಗಸಂಗ 
| ಇಷ್ಟು ಪಾಲಿಸ್ಯನ್ನಂತರಂಗದೊಳಗೆ 
| ತುಷ್ಟನಾಗಿರು ನೀನೆ ಕರುಣಾಪಾಂಗ - ಪಾಠ
							

209 ಸ್ವಸ್ತಿ ಶ್ರೀ ಜಯಮಂಗಳಂ

209.	ರಾಗ: [ಆನಂದಭೈರವಿ] 	ತಾಳ: ಅಟ
ಸ್ವಸ್ತಿ ಶ್ರೀ ಜಯಮಂಗಳಂ 	ಪ
ಸ್ವಸ್ಥ ಚಿತ್ತದಿ ಹರಿಯ ಭಜಿಪಗೆ
ಹಸ್ತಿವರದನ ದಾಸವರ್ಯಗೆ
ಹಸ್ತದಿಂದಖಿಳಾರ್ಥ ದಾತಗೆ
ಸ್ವಸ್ತಿಕರ ಗುರುರಾಘವೇಂದ್ರಗೆ 	1
ನತಿಪಜನ ಸುರಧೇನು ಎನಿಪಗೆ
ಸತತ ಸ್ವಾಶ್ರಿತ ಪಾಲಗೆ
ವಿತತ ಸನ್ಮತಿದಾತ ಖ್ಯಾತಗೆ
ತುತಿಪರನುದಿನ ಪೊರೆವೊ ನಾಥಗೆ	2
ಪಾತಕಾಂಬುಧಿಕುಂಭಜಾತಗೆ
ಪಾತಕಾದ್ರಿಕುಲಿಶರೂಪಗೆ
ದಾತ ಗುರುಜಗನ್ನಾಥವಿಠಲ
ದೂತ ಜನಕತಿ ಪ್ರೀತಗೆ	3
							

210 ಸ್ವಾಮಿ ಲಾಲಿ ಭಕ್ತಪ್ರೇಮಿ ಲಾಲಿ

210.	ರಾಗ: ಪೀಲು/ಆನಂದಭೈರವಿ	ತಾಳ: ಆದಿ
ಸ್ವಾಮಿಲಾಲಿ ಭಕ್ತಪ್ರೇಮಿ ಲಾಲಿ
ಕಾಮ್ಯಜನರ ಕಾಯ್ವ ಗುರುಸಾರ್ವಭೌಮ ಲಾಲಿ 	ಪ
ಇಂದ್ರಲಾಲಿ ರಾಘವೇಂದ್ರ ಲಾಲಿ 
ಸಾಂದ್ರಭಕ್ತಕುಮುದ ಪೂರ್ಣಚಂದ್ರ ಲಾಲಿ	1
ಶರಣು ಲಾಲಿ ನಿಜ ಕರುಣಿ ಲಾಲಿ 
ಶರಣ ಜನರÀ ಕಾಯ್ವ ಕರುಣಾಪೂರ್ಣ ಲಾಲಿ	2
1
ದೇವ ಲಾಲಿ ನಿಜಭಾವ ಲಾಲಿ 
ಭಾವಿಸುವರ ನಿತ್ಯ ನೀ ಕಾವ ಲಾಲಿ	3
ರಾಜ ಲಾಲಿ ಕÀಲ್ಪಭೂಜ ಲಾಲಿ
ರಾಜಿಸುವ ಯತಿಕುಲಾಂಭೋಜ ಲಾಲಿ	4
ದಾತ ಲಾಲಿ ನಿಜತಾತ ಲಾಲಿ
ದಾತ ಗುರುಜಗನ್ನಾಥವಿಠಲದೂತ ಲಾಲಿ	5
1 ಬದ್ಧ ಲಾಲಿ ಮಧ್ವಮತೋದ್ಧಾರ ಲಾಲಿ 
| ಅದ್ವೈತರನೆ ಮುರಿದ ಮುದ್ದು ಗುರುವೆ ಲಾಲಿ 
| - ಪಾಠ
47. ಗುರುತಂದೆಗೋಪಾಲವಿಠಲ 
							

211 ಕಂಡೆ ನೋಡೆ ಇಂದು ರಾಘವೇಂದ್ರರಾಯರ

211.	ರಾಗ: ಪೂರ್ವಿ	ತಾಳ: ಆದಿ
ಕಂಡೆನೋಡೆ ಇಂದು ರಾಘವೇಂದ್ರರಾಯರ
ಕಂಡೆನೋಡೆ ಇಂದು ರಾಘವೇಂದ್ರರಾಯರ ಪದ-
ಪುಂಡರಿಕದಲಿ ಬಂಡುಣಿಗನಾಗಿ ನಿನ್ನ 	ಪ.
ಕಠಿಣ ದೆಶೆಯಲಿ ಪಟುತರ ಜ್ಞಾನದಿಂ
ಚಟಚಟನೆ ಛೇದಿಸಿ ತಟಿತದಿ ತೋರ್ದನ	1
ಬಂಧು ನೀನೆಂದು ತಮ್ಮಸಂದರುಶನವಿತ್ತು
ಕಂದಜನಿಸುವನೆಂ ಛಂದದಿ ಫಲಕೊಡುವ	2
ಏಸುಜನ್ಮದಪುಣ್ಯದೀಸುಖವೊದಗಿತೊ
ಈ ಸಮಯದಲಿ ತನ್ನ ದಾಸನ್ನ ಮಾಡಿದವರ	3
ಮಂಡಲದೊಳಗೆ ಬಹು ಪಂಡಿತಾಗ್ರಣಿಯೆನಿಸಲು-
ದ್ದಂಡವಾದಿಗಳ ವಾಕುಖಂಡಿಸಿ ಮೆರೆವರ	4
ಸಿಂಧುಶಯನ ಗುರುತಂದೆಗೋಪಾಲವಿಠಲ
ದ್ವಂದ್ವ ಚರಣದಲಿ ವಂದಿಸಿ ತುತಿಸುವರ	5
48. ಗುರುಪ್ರಾಣೇಶವಿಠಲ
							

212 ತಂಗಿ ನೀ ಕೇಳಿದ್ಯಾ

212.	ರಾಗ: ಕೇದಾರಗೌಳ	ತಾಳ: ಅಟ
ತಂಗಿ ನೀ ಕೇಳಿದ್ಯಾ ರಾಘವೇಂದ್ರಾ- 
ಘಂಗಳ ಕಳದು ಸುಖಂಗಳ ಕೊಡುವುದು 	ಪ
ಶ್ರೀ ಪೂರ್ಣಬೋಧರ ಮತಾಪಯೋಬ್ಧಿಗೆ ಚಂದ್ರ 
ತಾಪಸೋತ್ತಮರ ದಿವ್ಯಾಪಾರಮಹಿಮೆಯ 	1
ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು 
ಸಂಗೀತ ಮುಖದಿ ಜನಂಗಳು ಪಾಡುವುದು 	2
ಕಿವಿಯಿಲ್ಲದವರಿಗೆ ತವಕದಿ ಕೊಟ್ಟರೆಂದು 
ಸುವಿವೇಕ ಮನದಿಂದ ಕವಿಜನ ಪಾಡುವುದು 	3
ವಂಧ್ಯಸ್ತ್ರೀಯರು ಬಂದು ನಿಂದು ಆರಾಧಿಸೆ 
ಸಂದೇಹವಿಲ್ಲ ಬಹು ಮಂದಿ ಮಕ್ಕಳ ಕೊಟ್ಟ 	4
ಗುರುಪ್ರಾಣೇಶವಿಠಲ ಸರುವ ಕಾಮಿತಾರ್ಥವ 
ಗುರು ರಾಘವೇಂದ್ರರಲ್ಲಿ ನಿರುತದಿ ಕೊಡಿಸುವ 	5
							

213 ತಪ್ಪುಗಳೆಣಿಸಾದೆನ್ನಪ್ಪ ಕಾಯಲಿಬೇಕು

213.	ರಾಗ: ಧನಶ್ರೀ	ತಾಳ: ಅಟ
ತಪ್ಪುಗಳೆಣಿಸಾದೆನ್ನಪ್ಪ ಕಾಯಲಿಬೇಕು 
ಸರ್ಪಶಯನನ ದೂತಾ 	ಪ
ಇಪ್ಪತ್ತು ಒಂದು ಕುಭಾಷ್ಯ ಮುರಿದರಾ ಮ-
ತ ಪ್ರವರ್ತಕ ರಾಘವೇಂದ್ರ ಮುನಿಪ ಮಹಾ 	ಅ.ಪ
ಪ್ರತಿ ವರುಷಕೆ ಬಂದು ನುತಿಸಿ ಪೋಗು ಎಂದೆ- 
ನುತ ಸ್ವಪ್ನದಲಿ ನೀ ಬಂದೂ 
ಹಿತದಿಂದ ಪೇಳಲು ರತನಾಗಿ ಧನದಿ ಮ-
ರತು ಬಿಟ್ಟೆ ನಿಮ್ಮನು ಯತಿಕುಲೋತ್ತಮ ಇಂಥಾ 	1
ಸ್ನಾನ ಸಂಧ್ಯಾನ ಸುಜಪತಪ ವ್ರತಹೋಮ 
ಮೌನ ಮಾರ್ಗಗಳರಿಯೆ 
e್ಞÁನಿಗಳಾನುಸಂಧಾನ ಪೂರ್ವಕ ಪೂಜೆ-
ಯಾನು ಮಾಡದೆ ದುಷ್ಟ ಮಾನವರೊಳಗಿದ್ದ 	2
ಏಸು ಜನ್ಮದಿ ಬಂದ ದೋಷವ ಕಳದು ವಿ-
ಶೇಷ ಸುಖವ ಕೊಡುವಾ 
ಈ ಸುವಾರ್ತಿಯ ಕೇಳಿ ಮೊರೆಹೊಕ್ಕೆ ಗುರುಪ್ರಾ-
ಣೇಶವಿಠಲನ ದೂತಾ ಮತ್ಪ್ರೀತಾ 	3
49. ಗುರುರಾಜವಿಠಲ 
							

214 ನೋಡೋಣ ಬಾ ಗುರುರಾಘವೇಂದ್ರರ

214.	ರಾಗ: ಕಲ್ಯಾಣಿ	ತಾಳ: ಆದಿ
ನೋಡೋಣ ಬಾ ಗುರುರಾಘವೇಂದ್ರರ
ಬೇಡಿದವರಗಳ ನೀಡುವರ	ಪ
ತುಂಗತುಂಗ ತರಂಗ ಶುಭಾಂಗರ
ಮಂಗಳಮಂತ್ರಾಲಯದಲ್ಲಿಹರ
ರಂಗನಮಹಿಮೆಯ ಹಿಂಗದೆನೆನೆವರ
ಸಂಗದೊಳಿರುತಲಿ ನಗುತಿಹರ	1
ಕರದೊಳುದಂಡ ಕೊರಳೊಳುತುಳಸಿ 
ಸರಸಿಜಾಕ್ಷಮಣಿಮಾಲೆಗಳು
ಸಿರಿವರನಂಘ್ರಿಯ ಹರುಷದಿಸ್ಮರಿಸುತ
ಶರಣಾಗತರನು ಪೊರೆವರ	2
ಗುರುರಾಜವಿಠಲನ ಚರಣಾಬ್ಜದಿ ಮಧು-
ಕರನತೆರೆದಿ ಸಂಚರಿಸುವವರ
ಪರಮಕರುಣಿ ಸತ್ಪರಿಮಳಕಾರರು
ಹರುಷದಿ ಹರಿಯಸ್ಮರಿಸುವರ	3
50. ಗುರುರಾಮವಿಠಲ
							

215 ಗುರುವೆ ರಾಘವೇಂದ್ರ

215.	ರಾಗ: ದರ್ಬಾರು	ತಾಳ: ಅಟ
ಗುರುವೆ ರಾಘವೇಂದ್ರ 	ಪ
ಗುರುವೆ ಆಶ್ರಿತ ಸುರತರುವೆನುತಲಿನಿನ್ನ
ಚರಣ ನಂಬಿದವರಿಗೆ ಪರಮಾನುಗ್ರಹ ಮಾಳ್ಪ	ಅ.ಪ
ಮಂತ್ರಾಲಯದಲಿ ನೀನಿಂತುನಿರಂತರ
ಸಂತರಿಷ್ಟಾರ್ಥವ ಸಲಿಸುತಲಿರುವೆ ಸದ್ಗುರುವೆ 	1
ಜಡಮೂಕಬಧಿರಾಂಧರು ನಿನ್ನ ಭಜಿಸಲು 
ದೃಢ ಮಾಡಿ ಅವರ ಆದರಿಸುವೆ ಸತತಸದ್ಗುರುವೆ	2
ಸ್ಮರಣೆ ಮಾಳ್ಪರ ಭವ ದುರಿತಗಳ ತರಿವ
ಗುರುರಾಮವಿಠಲನ ಶರಣರಗ್ರಣಿಯೆ ಸದ್ಗುರುವೆ	3
							

216 ರಾಘವೇಂದ್ರ ಗುರುವರ್ಯ ಮವiಘನಾಶನ

216.	ರಾಗ: [ಭಾಗ್ಯಶ್ರೀ]	ತಾಳ: [ತಿಶ್ರನಡೆ (ಆದಿತಾಳ)]
ರಾಘವೇಂದ್ರ ಗುರುವರ್ಯ ಮವiಘನಾಶನ	ಪ
ಬಾಗಿ ನಮಿಪೆ ನಿಮ್ಮ ಪಾದ ಪದ್ಮಕ್ಕನುದಿನ 	ಅ.ಪ
ಕನಕಕಶ್ಯಪನಾತ್ಮಜನೆಂದೆನಿಸಿ ಮೋದದಿ
ವನಜನಯನ ಸ್ಥಂಭದಿ ಬರುವಂದದಿ ಗೈದಿ	1
ವ್ಯಾಸಮುನಿರಾಯ ಪುರಂದರ ಗುರುವೆ 
ದೋಷರಹಿತ ಹರಿಭಕ್ತರಿಗೆ ಸುರತರುವೆ 	2
ಗುರುರಾಮವಿಠಲನ ಪ್ರಿಯ ಕಿಂಕರವರೇಣ್ಯನೆ
ವರಮಂತ್ರಾಲಯನಿಲಯ ನೀ ಕರುಣಿಸೆನ್ನನೆ 	3
51. ಗುರುವಿಜಯವಿಠಲ 
							

217 ಘನ ದಯಾನಿಧಿಯಾದ ಗುರು ರಾಘವೇಂದ್ರ (ಸುಳಾದಿ)

217.	ಸುಳಾದಿ - ರಾಗ: ಭೈರವಿ 
ಧ್ರುವತಾಳ
ಘನ ದಯಾನಿಧಿಯಾದ ಗುರು ರಾಘವೇಂದ್ರ ನಿಮ್ಮ
ವನಜ ಪಾದಯುಗಕೆ ನಮೊ ನಮೊ
ಜನುಮಾರಭ್ಯವಾಗಿ ಅಭಿನಮಿಸದಲಿಪ್ಪ
ಮನುಜನ ಅಪರಾಧವೆಣಿಸದಲೆ
ವನಧಿ ಪೋಲುವ ಕರುಣಿ ಗೋವತ್ಸ ನ್ಯಾಯದಿಂದ
ನಿನಗೆ ನೀನೆ ಬಂದು ಸ್ವಪ್ನದಲ್ಲಿ
ಸನಕಾದಿ ಮುನಿಗಳ ಮನನಕ್ಕೆ ನಿಲುಕದ
ಇನಕೋಟಿ ಭಾಸ ವೇದೇಶ ಪ್ರಮೋದ ತೀರ್ಥ
ಮುನಿಗಳಿಂದಲಿ ಕೂಡಿ ಸಂದರುಶನವಿತ್ತು
ವಿನಯೋಕ್ತಿಗಳ ನುಡಿದ ಕೃತ್ಯದಿಂದ
ಆನಂದವಾಯಿತು ಅಘದೂರನಾದೆನಿಂದು
ದನುಜಾರಿ ಭಕುತರ ಮಣಿಯೆ ಗುಣಿಯೆ
ಎಣೆಗಾಣೆ ನಿಮ್ಮ ಕರುಣಾ ಕಟಾಕ್ಷ ವೀಕ್ಷಣಕ್ಕೆ
ಅನುಪಮ ಮಹಿಮನೆ ಅನಿಳ ಪ್ರೀಯ
ಗುಣ ಗಣ ಪೂರ್ಣ ಗುರುವಿಜಯವಿಠಲ ನಿಮ್ಮ
ಘನವಾದ ಬಲದಿ ಎನಗೆ ಸುಳಿದನೆಂದು	1
ಮಟ್ಟತಾಳ
ಸುಖತೀರ್ಥರ ಮತವೆಂದೆಂಬ ಧ್ವಜವನ್ನು
ವಿಖನಸಾಂಡದ ಮಧ್ಯ ಪ್ರತಿಯಿಲ್ಲದೆ ಮೆರೆಯೆ
ಪಖರಹಿತವಾದ ಪಕ್ಷಿಯು ತನ್ನಯ
ಪಖ ಚಿನ್ಹಿಹ್ಯ(ಯ) ಜನಿತ ಮಾರುತನಿಂದಲಿ ಧ್ವಜವ
ಪ್ರಕಟದಿ ಚರಿಸುವ ಯತ್ನದಿಂದ ದುರುಳ
ಸಕುಟಿಲರಾದ ಆ ವಿದ್ಯಾರಣ್ಯ
ಮುಖರೆಲ್ಲ ಬರಲು ಅಮವಸ್ಥಿತ ನಿಶ್ಚಯದಿ
ಮಖಶತಜನೆನೆಪ ಜಯರಾಯಾಚಾರ್ಯ
ಪ್ರಕಟ ಗ್ರಂಥಗಳೆಂಬ ಪಾಶಗಳಿಂದಲ್ಲಿ
ಯುಕುತಿಯಿಂದಲಿ ಬಿಗಿದು ವೀರಧ್ವನಿಯಗೈಯೆ
ಉಕುತಿಗೆ ನಿಲ್ಲದಲೆ ಮೊಲದಂತೆ ಜರಿದು
ದಿಕ್ಕು ದಿಕ್ಕಿನಲ್ಲಿ ಪಲಾಯನರಾಗೆ
ತ್ಯಕುತ ಲಜ್ಜೆಯಿಂದ ಹತವಾಶೇಷ್ಯ
ಸಾಕುಂಠಿತವಾದ ಬಲವೀರ್ಯನು ಮೇರು
ಶಿಖರವೆತ್ತುವನೆಂಬೊ ಸಾಹಸದಿಂದಲಿ
ವಿಕಟ ಮತಿಯುಕ್ತ ದುರುಳರು ರೋಷದಲಿ ಕು-
ಯುಕುತಿಗಳಿಂದಲಿ ಸಂಚರಿಸುತ ಬರಲು
ಲಕುಮಿಪತಿಯ ನೇಮ ತಿಳಿದ ಪ್ರೌಢ ನೀನು
ಈ ಖಂಡದಿ ಬಂದು ದ್ವಿಜಜನ್ಮವ ಧರಿಸಿ
ಪ್ರಖ್ಯಾತವಾದ ನ್ಯಾಯಾಮೃತವನ್ನು
ತರ್ಕ ತಾಂಡವ ಚಂದ್ರಿಕ ಪರಿಮಳ ಮೊದಲಾದ
ಮಿಕ್ಕಾದ ಗ್ರಂಥವೆಂತೆಂಬ ವಜ್ರದಲಿ ದು-
ರುಕುತಿಗಳೆಂಬಂಥ ಗಿರಿಗಳ ಛೇದಿಸಿ
ಈ ಕುಂಭಿಣಿ ಮಧ್ಯ ಪ್ರತಿಯಿಲ್ಲದೆ ಮೆರೆದೆ
ಭಕುತಾರಾಗ್ರೇಸರನೆ ಭೂಮಿ ವಿಬುಧರ ಪ್ರೀಯಾ
ನಖಶಿಖ ಪರಿಪೂರ್ಣ ಗುರುವಿಜಯವಿಠಲ ನಿಮ್ಮ
ಭಕುತಿಗೆ ವಶನಾಗಿ ಇತ್ತಿಹ ಕೀರ್ತಿಯನು	2
ತ್ರಿವಿಡಿತಾಳ
ಕಲಿಯುಗದಿ ಜನರು ಕಲಿ ಕಲ್ಮಷದಿಂದ
ಬಲವಂತವಾದ ತ್ರಿವಿಧ ತಾಪಗಳನು
ವಿಲಯಗೈಸುವ ಉಪಾಯವನರಿಯದೆ
ಮಲಯುಕ್ತವಾದ ಭವಶರಧಿಯಲ್ಲಿ
ನೆಲೆಯಾಗಿ ಮಗ್ನರಾಗಿ ನಿವೃತ್ತಿ ವತ್ರ್ಮಾವನ್ನು
ತಿಳಿಯದಲೆ ದುಃಖ ಬಡುವ ಸುಜನಾ-
ವಳಿಗೆ ತಾರಕನಾಗಿ ಈ ನದಿಯ ತೀರದಲ್ಲಿ
ನಿಲಯವಲ್ಲದೆ ನಿನಗೆ ಅನ್ಯ ಕೃತ್ಯಗಳಿಲ್ಲ
ನಳಿನಸಂಭವ ಜನಕ ಗುರುವಿಜಯವಿಠಲ ನಿನಗೆ
ಒಲಿದಿಪ್ಪಾಧಿಕಧಿಕವಾಗಿ ಬಿಡದೆ	3
ಅಟ್ಟತಾಳ
ಸೂಚನೆ ಮಾಡಿದ ಸೊಬಗಿನ ತೆರದಂತೆ
ಯೋಚನೆ ಯಾತಕ್ಕೆನ್ನನು ಉದ್ಧರಿಪುದಕ್ಕೆ
ಉಚ್ಚ ಜ್ಞಾನಾನಂದ ಬಲವೀರ್ಯನು ನೀನು
ನೀಚವಾದ ದೇಹ ಧಾರಣೆಯನು ಮಾಡಿ ಅ-
ನೂಚಿತವಾಗಿದ್ದ ಕಾಮ ಕ್ರೋಧಂಗಳು
ಆಚರಣೆಯ ಮಾಳ್ಪ ಅಧಮನಾದವ ನಾನು
ಸೂಚರಿತ್ರವಾದ ಶುಚಿಯಾದ ಮನುಜಂಗೆ
ನೀಚ ಅಶುಚಿಯಾದ ನರನು ಅಧಿಕನೆಂದು
ಭೂ ಚಕ್ರದಲಿ ಅವರ ದೇಹ ತೆತ್ತವನಾಗಿ
ಆಚರಿಸಿದೆ ಬಲು ಹೀನ ಕೃತ್ಯಂಗಳು
ಸೂಚನೆ ಮಾಡಿದ್ದು ಸೊಬಗು ನೋಡದಲೆ
ಯೋಚನೆ ಮಾಡಿದ್ದು ಸಾರ್ಥಕ ಮಾಳ್ಪದು
ಮೋಚನೆ ಮಾಡುವುದು ಭವ ಬಂಧದಲಿಂದ
ಶ್ರೀ ಚಕ್ರಪಾಣಿ ಗುರುವಿಜಯವಿಠಲರೇಯನ
ಯೋಚನೆ ಮಾಡುವ ಯೋಗವೆ ಬೋಧಿಸು	4
ಆದಿತಾಳ
ಪರಿಶುದ್ಧವಾದ ನಿನ್ನ ಭಕುತಿಗೆ ವಶನಾಗಿ
ಹರಿ ತನ್ನ ಪರಿವಾರ ಸಮೇತನಾಗಿ ನಿಂದು
ಮೊರೆ ಹೊಕ್ಕ ಜನರಿಗೆ ಪರಿಪೂರ್ಣ ಸುಖವಿತ್ತು
ಪರಿ ಪರಿ ಕೀರ್ತಿಗಳು ತಂದೀವ ನಿಮಗೆಂದು
ಪರಮಾಪ್ತನಾಗಿ ತವಪಾದ ಸಾರಿದೆನು
ದೂರ ನೋಡದಲೆ ಕರುಣ ಮಾಡಿ ವೇಗ
ಸುರರಿತ್ತ ಶಾಪದಿಂದ ಕಡಿಗೆ ಮಾಡಿ ಎನ್ನ ಹೃ-
ತ್ಸರಸಿಜದಲ್ಲಿ ಹರಿ ಪೊಳೆವಂತೆ ಮಾಡುವದು
ಪರಿಪೂರ್ಣ ಕೃಪಾನಿಧೆ ಗುರುವಿಜಯವಿಠಲನ್ನ
ಶರಣರ ಅಭಿಮಾನಿ ಔದಾರ್ಯ ಗುಣಮಣಿ	5
ಜತೆ
ಗುರುಕುಲ ತಿಲಕನೆ ಗುರು ರಾಘವೇಂದ್ರಾಖ್ಯ
ಸುರ ಕಲ್ಪತರು ಗುರುವಿಜಯವಿಠಲ ಪ್ರೀಯಾ
52. ಗುರುಶಾಮಸುಂದರ 
							

218 ಎನಗೆ ಸಕಲವು ನೀನೆ ಗುರುರಾಘವೇಂದ್ರ

218.	ರಾಗ: ಚಕ್ರವಾಕ	ತಾಳ: ಖಂಡಛಾಪು
ಎನಗೆ ಸಕಲವು ನೀನೆ ಗುರುರಾಘವೇಂದ್ರ
ಮನಮುಟ್ಟಿ ಭಜಿಸುವೆನು ಕಾರುಣ್ಯಸಾಂದ್ರ 	ಪ
ಸಿರಿಯು ಸಂಪದ ನೀನೆ ವರವು ಶಾಪವು ನೀನೆ
ಪರಿಪರಿ ಭೋಗಗಳು ನಿರುತ ಬಾಹೋ
ಪರರ ನಿಂದನೆ ಅವಮಾನ ನಿನ್ನದಯ್ಯ
ಶಿರಬಾಗಿಪೇಳುವೆನು ಎಲ್ಲ ನಿನ್ನದಯ್ಯ 	1
ಜಪತಪಂಗಳು ನೀನೆ ಉಪವಾಸ ವ್ರತನೀನೆ
ಅಪರಿಮಿತ ಸುಖಯೋಗ ಎಲ್ಲ ನೀನೆ
ಅಪಜಯ ವಿಜಯದ ಎಲ್ಲ ಭಾಗ್ಯವು ನೀನೆ
ಅಪರಿಮಿತ ಮಹಿಮನೆ ಎಲ್ಲ ನಿನ್ನದು ಗುರುವೆ 	2
ಏನಿತ್ತುದೇಯನಗೆ ಪರಮಭಾಗ್ಯವು ಎಂದೆ
ಮಾನನಿಧಿ ನಿನ್ನಯ ಕರುಣೆ ಬೇಕೆಂದೆ
ಜ್ಞಾನನಿಧಿ ಗುರುಶ್ಯಾಮಸುಂದರನ ನಿಜದಾಸ
ಧ್ಯಾನಕೊಡು ನಿನ್ನಯ ಪಾದದಲಿ ಸತತ 	3
							

219 ಏನು ಚಿಂತಿಪೆ ನೀನು ಬರಿದೆ ಜೀವ

219.	ರಾಗ: [ಮಧುವಂತಿ]	ತಾಳ: [ಆದಿ]
ಏನು ಚಿಂತಿಪೆ ನೀನು ಬರಿದೆ ಜೀವ
ಸಾನುರಾಗದಿ ಕಾಯೊ ರಾಘವೇಂದ್ರರು ಇಹರು 	ಪ
ತಂಡ ತಂಡದಿ ಬರುವ ಭಕ್ತಜನರಘವ
ತೋಂಡವತ್ಸಲನ ಕರುಣಿಪರು ತ್ವರದಿ
ಖಂಡಿಸುತ ದುರ್ವಾದಿಗಳ ಮತವ
ಬಂಡಿಕಾಲನು ಪಿಡಿದ ಶ್ರೀಕೃಷ್ಣನ ದಯದಿ 	1
ಮುನ್ನ ಮಾಡಿದ ಅಘವ ತರಿದು ಜವದಲಿ ತಾವು
ಅನ್ನದಾನವ ಮಾಡಿ ಹರಿಗೆ ಅರ್ಪಿಸುತಿಹರು
ಘನ್ನ ಭೀತಿಯ ಬಿಡಿಸಿ ಚೆನ್ನಾಗಿ ಸಂತೈಸಿ
ಚಿನ್ನದಂತಹ ಸುತರ ಕರುಣಿಪರು ತ್ವರದಿ 	2
ಕಾಮಕ್ರೋಧಾದಿಗಳ ಗೆಲಿಸುವರು ಬೇಗದಲಿ
ನಾಮಸ್ಮರಣೆಯ ಈವ ಕರುಣಿಗಳು ನೋಡು
ಧಾಮ ಶ್ರೀ ಹರಿ ತೋರುತಲಿ ಸುಜನರಿಗೆ ಗುರು
ಶ್ಯಾಮಸುಂದರನ ನಿಜ ಭಕ್ತರಿರಲು 	3
							

220 ಕಂಡೆನಾ ಯತಿರಾಜನಾ

220.	ರಾಗ: [ಕಾನಡ/ದರ್ಬಾರಿ]	ತಾಳ: [ಮಿಶ್ರಛಾಪು]
ಕಂಡೆನಾ ಯತಿರಾಜನಾ
ಪುಂಡರೀಕಾಕ್ಷನ ಪಾದ ಭಜಕನಾ 	ಪ
ದಂಡ ಕಮಂಡಲ ಧರಿಸಿಹನಾ ಉ-
ದ್ದಂಡರ ವಾದದಿ ಗೆಲಿದಿಹನಾ
ತಂಡತಂಡದಿ ಬರುವ ಭಕುತರಾ
ಹಿಂಡು ಪಾಪವ ತರಿದು ಪೊರೆವನಾ 	1
ಕಾಷಾಯ ವಸನ ವಿಭೂಷನಾ ವಿ-
ಶೇಷ ಮಹಿಮೆಯಿಂದ ಮೆರೆಯುವನಾ
ವಾಸುಕಿ ಶಯನನ ನಿಜದಾಸನನಾ
ಭೂಷಿತ ಮಂತ್ರನಿಲಯನಾಥನಾ 	2
ಕರಿವರದನ ದಿವ್ಯ ದಯವ ಪಡೆದನಾ
ವರತುಂಗ ತೀರದಿ ರಾಜಿಪನಾ
ಗುರುಶಾಮಸುಂದರನ ನಿಜವರ ಭಕ್ತನಾ
ಗುರುಸಾರ್ವಭೌಮನ ಕನಸಲಿ ನಿಜವಾಗಿ 	3
							

221 ಚೆಲುವ ರಾಯರ ನೋಡುವ ಬನ್ನಿ

221.	ರಾಗ: [ಘೋರಕ್ ಕಲ್ಯಾಣಿ]	ತಾಳ: [ಆದಿ]
ಚೆಲುವ ರಾಯರ ನೋಡುವ ಬನ್ನಿ
ಸುಲಭದಿ ವರ ಕೊಡುವ 	ಪ
ವರ ಪ್ರಹ್ಲಾದ ರಾಜರೆ ಇವರು
ಹರಿಯ ಕಂಭದಿ ತೋರ್ದವರು ನಿಜದಿ
ಹರಿಮತ ಸ್ಥಾಪಿಸಿದವರು
ಪರಿಪರಿ ಕಷ್ಟವ ಸಹಿಸುತ ಪಿತನಿಗೆ
ಪರಮ ಸಂಪದದ ವರ ಬೇಡಿದರು 	1
ಮರಳಿ ಶ್ರೀವ್ಯಾಸರಾಜರಾಗುತಲಿ
ಭರದಿಂದಲಿ ಬಂದ ಭೂಪಾಲನಿಗೆ
ಸರುಪದ ವ್ಯಾಧಿಯ ನೀಗುತಲಿ
ಹರಿ ಗುರು ಮಧ್ವರ ಕರುಣೆಯ ಪಡೆಯುತ
ವರ ನ್ಯಾಯಾಮೃತ ಚಂದ್ರಿಕೆ ರಚಿಸಿದ 	2
ತುಂಗಾತೀರದಿ ವಾಸವ ಮಾಡಿ
ಭಂಗಗೊಳಿಸುತ(?) ಸುಜನರ ಬೇಡಿಕೆ ನೀಡಿ
ಮಂಗಳ ಕೊಡುವ ಗ್ರಂಥವ ಮಾಡಿ
ಕಂಗಳಿಂದ ಹರಿ ನೋಡಿದ ಮಹಿಮರು
ತುಂಗ ಮಹಿಮ ಗುರುಶ್ಯಾಮಸುಂದರನ ದಾಸರು 	3
							

222 ನಾನೇನು ನಿನ್ನನು ಬಿಡುವನಲ್ಲ

222.	ರಾಗ: [ಗೌಳ]	ತಾಳ: [ಆದಿ]
ನಾನೇನು ನಿನ್ನನು ಬಿಡುವನಲ್ಲ
ದೀನವತ್ಸಲ ಗುರು ಶ್ರೀರಾಘವೇಂದ್ರ 	ಪ
ಸತಿಸುತರ ಬೇಕೆಂದು ಬೇಡೆ ಎನ್ನ
ಮತಿ ಕೆಡಿಸಿ ಪೋಪರು ಬಾರರು ಹಿಂದೆ
ಗತಿ ನೀನೆ ಎನಗಿಂದು ತಂದೆ ಪರ
ಗತಿಯ ಮಾರ್ಗವ ತೋರು ನೀನೆ ಮನಕಿಂದೆ 	1
ಅಧಿಕಾರ ಎನಗೀಯಬೇಡ ಮದ ಜ-
ಲದಿ ಎನ್ನನು ಕುಣಿಸಲು ಬೇಡ
ದಧಿಪಾಲ ಚೋರನ ಕೃಪೆಯ ಪಾದವ-
ನಧಿಲಿ ಮನವೀಯೆ ತಡಮಾಡಬೇಡ 	2
ಕಾಮಾದಿಗಳನ್ನೆಲ್ಲ ಗೆಲುವ ದಿವ್ಯ
ಹೇಮಾದಿಗಳನೆಲ್ಲ ದೂರದಲ್ಲಿಡುವ
ಪಾಮರ ಮತಿ ಎನಗಿಲ್ಲ ಗುರು
ಶಾಮಸುಂದರನ ಕೃಪೆ ಆಗಬೇಕಲ್ಲ 	3
							

223 ನಿನ್ನ ನಂಬಿದೆ ರಾಘವೇಂದ್ರನೆ

223.	ರಾಗ: [ರೇವತಿ]	ತಾಳ: [ಮಿಶ್ರನಡೆ]
ನಿನ್ನ ನಂಬಿದೆ ರಾಘವೇಂದ್ರನೆ ಎನ್ನ ಬಿನ್ನಪ ಲಾಲಿಸೊ
ಘನ್ನ ಮಹಿಮ ಮುನೀಂದ್ರ ಬೇಡುವೆ ನಿನ್ನ ಕರುಣೆಯ ಕರುಣಿಸೊ	ಪ
ಏನು ಬೇಡುವುದಿಲ್ಲ ನಿನ್ನಯ ಪಾದ ಸ್ಮರಣೆಯ ನಿರುತವು
ಸಾನುರಾಗದಿ ಈಯುತೆನ್ನನು ಪಾರುಗಾಣಿಸೊ ಧರೆಯೊಳು	1
ಮೂಲರಾಮನ ಪಾದ ಭಜಕನೆ ಲೋಲ ನರಹರಿ ಪ್ರೀಯನೆ
ಕಾಲಕಾಲಕೆ ಹರಿಯ ಅನುದಿನ ಶೀಲನಾಮವ ನುಡಿಸೆಲೊ	2
ಬಲ್ಲಿದನು ನೀ ಶ್ರೀ ಪ್ರಹ್ಲಾದರಾಯನೆ ಖುಲ್ಲ ದೈತ್ಯನ ವಚನಕೆ
ಮೆಲ್ಲ ಶ್ರೀ ನರಹರಿಯ ಕಂಭದಿ ಅಲ್ಲೆ ತರಿಸುತ ತೋರಿದಿ	3
ಏಸು ನಿನ್ನಯ ಮಹಿಮೆ ಜಗದೊಳು ಸೂಸುತಿದೆ ಸದಾ ಕಾಲವು
ವ್ಯಾಸರಾಜ ಯತೀಂದ್ರ ನಿನ್ನಲಿ ದಾಸನಾ ಮತಿ ಬೇಡುವೆ	4
ತುಂಗತೀರ ವಿಹಾರ ರಾಜನೆ ಮಂಗಳಪ್ರದ ಮಹಿಮನೆ
ಹಿಂಗದೆನ್ನಯ ಪಾಪರಾಶಿಯ ಭಂಗ ಪಡಿಸುತ ಕರುಣಿಸು	5
ಮಂತ್ರ ತಂತ್ರ ವಿಚಾರ ಕೋವಿದ ಮಂತ್ರಧಾಮ ವಿಹಾರನೆ ಶ್ರೀ-
ಕಾಂತನನುದಿನ ಸೇವೆಗೈಯುವ ಧೀಮಂತ ರಾಘವ ಭಜಕನೆ	6
ಕಾಮವರ್ಜಿತ ಹೇಮಶಯ್ಯಜ ನೇಮದಿಂ ನಿನ್ನ ಸ್ಮರಿಪಗೆ
ಕಾಮಿತಾರ್ಥಗಳಿತ್ತು ಸಲಹುವಿ ಗುರುಶಾಮಸುಂದರ ಭಜಕನೆ	7
							

224 ಪಾಲಿಸೋ ಗುರು ಪರಿಪಾಲಿಸೋ

224.	ರಾಗ: [ಶಂಕರಾಭರಣ]	ತಾಳ: [ಅಟ]
ಪಾಲಿಸೋ ಗುರು ಪರಿಪಾಲಿಸೋ 	ಪ
ಪಾಲಿಸೋ ಗುರುರಾಘವೇಂದ್ರ ಮನ
ಸಲ್ಲಿಸಿ ಪ್ರಾರ್ಥಿಪೆ ಚಂದ್ರ ||ಆಹಾ||
ಸೊಲ್ಲನಾಲಿಸಿ ಮನದಿಷ್ಟವ ಸಲ್ಲಿಸಿ
ಫುಲ್ಲಲೋಚನ ಪಾದ ತೋರಿಸಿ ಬೇಗ 	ಅ ಪ
ಅನುದಿನ ನಿನ್ನನು ನೆನೆವೆ ಮನ
ದನುಮಾನ ಕಳೆ ಘನ ತರುವೆ ನಿನ್ನ-
ವನು ಎಂದು ಪೊರೆ ದಿನ ಗುರುವೆ ||ಆಹಾ||
ಮನವನಿತ್ತವರಿಗೆ ತನುವನೀವೆ ಎಂದು
ಮನಸಿಜನಯ್ಯನ ತುತಿಸಿ ಪಾಡುವ ಗುರು 	1
ಅಂಧಕರಿಪುಪುರವಾಸ ಏಸು
ಚಂದವೊ ನಿನಗೆ ಯತೀಶ ಎನ್ನ
ಬಂಧ ಕಳೆವುದು ಯೋಗೀಶ ||ಆಹಾ||
ಮಂದನ ತುತಿಗೀಗ ಬಂದೆನ್ನ ಹೃದಯದಿ
ಅಂದದ ರೂಪವ ತೋರುತ ಎನ್ನನು 	2
ಮೂರವತಾರದ ಗುರುವೇ ನಿನ್ನ
ಸಾರಿದವರ ನಿರುತ ಪೊರೆವೆ ಎಂದು
ಸಾರುತಿದೆ ಡಂಗುರ ಹೊರಗೆ ||ಆಹಾ||
ಗರುವವ ಬಿಡಿಸೆಂದು ನಿರುತ ಪಾಡುವೆ ನಿನ್ನ
ಪರಗತಿ ಪಥ ತೋರಿ ಗುರುಶಾಮಸುಂದರ 	3
							

225 ಬಂದು ನಿಂದಿಹರಿಲ್ಲಿ ಗುರು ರಾಘವೇಂದ್ರರು

225.	ರಾಗ: ಮಧ್ಯಮಾವತಿ	ತಾಳ: ಏಕ 
ಬಂದು ನಿಂದಿಹರಿಲ್ಲಿ ಗುರು ರಾಘವೇಂದ್ರರು	ಪ
ವಂದಿಸುವ ಜನಸ್ತೋಮಕನುದಿನ
ಕುಂದು ಎಣಿಸದೆ ಬಂದ ಭಯಗಳ
ಇಂದುಧರನುತ ಗೋವಿಂದನೊಲುಮೆಲಿ
ಮಂದಹಾಸದಿ ನಗುತ ಹರುಷದಿ	ಅ.ಪ
ಎಲ್ಲ ಕಾಲಕೆ ಇವರು ಶ್ರೀಲಕುಮಿವಲ್ಲಭ
ಮೂಲರಾಮನ ಭಜಕರು ಹೇಮಾದಿ ಅರಿಗಳ
ಲೀಲೆ ಇಂದಲಿ ಗೆದ್ದರು
ಕಾಲಕಾಲಕೆ ಲೋಲ ನೃಹರಿಯ
ಜಾಲತೋರಿದ ಭಜಿಪಜನರಘ
ಲೀಲೆಯಿಂದಲಿ ದೂರಗೈಸುತ	1
ತಾಪಸೋತ್ತಮರಿವರು ಸುಜ್ಞಾನವೀವರು
ಶಾಪಾನುಗ್ರಹ ಶಕ್ತರು ಬಲ್ಲವರಿಗೆಲ್ಲ
ಅಪಾರವರಗಳೀವರು
ಕೋಪರಹಿತರು ಶ್ರೀಪತೀಶನ ಪಾದದ್ವಯವನು ಧ್ಯಾನ
ಮಾಳ್ಪರು ತಾಪ ಕಳೆಯುತ ಭಕ್ತ ಜನರನು
ಪಾಪ ಕೂಪದಿಂ ಪಾರುಮಾಳ್ಪರು	2
ಕಾಮಾದಿ ವಿರಹಿತರು ಗುರುಶಾಮಸುಂದರನ
ನೇಮದಿ ಭಜಿಸುವರು ಕೋಮಲಕಾಯರು
ಸಾಮಾದಿ ವೇದ ಪ್ರಿಯರು
ಯಾಮಯಾಮಕೆ ಬರುವ ಭಕ್ತರ ಕಾಮಿತಾರ್ಥಗಳಿತ್ತು ಪೊರೆವರ
ಧಾಮ ಶ್ರೀಹರಿ ಮಾರ್ಗ ತೋರುವ ಉ-
ದ್ದಾಮ ಕರುಣೆ ಗುರುಗಳಿಲ್ಲೆ	3
							

226 ಮಾಂ ಪಾಹಿ ಗುರು ರಾಘವೇಂದ್ರ

226.	ರಾಗ: [ದುರ್ಗಾ]	ತಾಳ: [ಆದಿ]
ಮಾಂ ಪಾಹಿ ಗುರು ರಾಘವೇಂದ್ರ	ಪ
ತುಂಗಾತೀರ ವಿಹಾರ ಭಕ್ತ
ಭೃಂಗ ಸಂಗೀತ ಲೋಲ
ಭಂಗ ಪಡಿಸುತ ದುಷ್ಟಜಾಲ
ರಂಗನೊಲಿಸಿಹ ಪ್ರಹ್ಲಾದರಾಯ ಮಾಂ ಪಾಹಿ	1
ತರ್ಕತಾಂಡವದಿ ಮೆರೆದ ವೀರ ಕು-
ತರ್ಕವಾದಿಗಳ ಗೆಲಿದ ಶೂರ
ಅರ್ಕಸಮ ಭವ್ಯ ತೇಜ
ಶಕ್ತಶ್ರೀವ್ಯಾಸರಾಜ ಮಾಂ ಪಾಹಿ	2
ಪರಿಮಳಾಚಾರ್ಯ ಗುರುವೆ ನಿನ್ನ
ಕರುಣವನೆ ತೋರೆನಗೆ ಸುರಕಲ್ಪತರುವೆ
ಶರಣರ ಪೊರೆವಲ್ಲಿ ತಡವೇಕೊ ಸ್ವಾಮಿ
ಗುರುಶಾಮಸುಂದರನು ನಿನ್ನಂತರ್ಯಾಮಿ	3
							

227 ವಂದಿಸುವುದನವರತ ತುಂಗಾತೀರದ ಯತಿಯ

227.	ರಾಗ: [ಮೋಹನ/ಭೂಪ್]	ತಾಳ: [ಖಂಡಛಾಪು]
ವಂದಿಸುವುದನವರತ ತುಂಗಾತೀರದ ಯತಿಯ	
ಮಂದಾರ ತರುವಂತೆ ಭಕ್ತರಿಷ್ಟವ ಕೊಡುವ	ಪ
ಅಂದು ಗೋಗಳ ಕಾಯ್ವ ಬಾಲಕಗೆ ಕರುಣದಲಿ
ಬಂದ ವಿಘ್ನವ ಕಳೆದು ಅತಿ ಶೀಘ್ರದಲಿ
ಚಂದದಧಿಕಾರದಲಿ ಮೆರೆವಂತೆ ಮಾಡಿದ
ಸುಂದರ ಯತಿಗಳನು ಮನಮುಟ್ಟಿ ಭಜಿಸಿ	1
ತನಿಖೆ ಮಾಡಲು ಬಂದ ಆಂಗ್ಲಾಧಿಕಾರಿ
ಮನದಿಷ್ಟ ತಿಳಿಸುತಲಿ ಅವನ ಹರಸಿ
ಮನದ ಮಂದಿರದಲ್ಲಿ ನಿರುತ ರಾಮರ ಪೂಜೆ
ಅನವರತ ಮಾಡುತಿಹ ಮುನಿಗಳನ್ನು	2
ಶರಣರ ಸುರಧೇನು ಕರೆದಲ್ಲಿ ತಾ ಬರುವ
ಮರೆಯದಲೆ ಭಕುತರನು ಪೊರೆವ ಗುರುವು
ಗುರುಶಾಮಸುಂದರನ ಪರಮ ಪ್ರೀತಿಯ ಪಡೆದ
ನಿರುತವು ನೆನೆಯುತಿರೆ ಸಕಲ ಸಂಪದವೀವ	3
							

228 ಸ್ಮರಣೆ ಒಂದೇ ಸಾಲದೆ ಈ ಗುರುಗಳ

228.	ರಾಗ: [ಮಲಯಮಾರುತ]	ತಾಳ: [ಆದಿ]
ಸ್ಮರಣೆ ಒಂದೇ ಸಾಲದೆ ಈ ಗುರುಗಳ
ಸ್ಮರಣೆ ಒಂದೇ ಸಾಲದೆ	ಪ
ಪರಮಪುರುಷನನ್ನು ನೆರೆನಂಬಿ ತುತಿಸುವ
ಗುರುರಾಘವೇಂದ್ರರ ಚರಣವಾರಿಜ ಯುಗ್ಮ	ಅ.ಪ
ಭಜಿಪರಘವ ಕಳೆವ ದುಷ್ಟರ ಜಾಲ
ನಿಜದಿ ದೂರದಲ್ಲಿಡುವ
ಸುಜನರ ಸಂಗವ ಸೇರಿಸಿ ಕೊಡುತಿಹ
ಅಜಕರಾರ್ಚಿತ ರಾಮನ ಪಾದದ ಭಜಕರ	1
ಕಡು ಮೂರ್ಖನಾದಂಥ ವೆಂಕಣ್ಣನು
ಹುಡುಗಾಟವಾಡಿರಲು
ದೃಢ ಭಕುತಿಯಿಂದ ಸ್ಮರಣೆ ಮಾಡಿರೆ
ಕಡು ಹರುಷದಲಿ ರಾಜ ಮನ್ನಣೆ ಪಡೆದ	2
ನಿರುತ ಭಕುತಿಯಿಂದಲಿ ಸ್ಮರಿಸುತಿರೆ
ವಿರಕುತಿ ಜ್ಞಾನಗಳು
ಭರದಿ ಬಂದೊದಗಿದವು ಮನ್ನಣೆ ವಾಂಛಿತವೆ
ಗುರುಶಾಮಸುಂದರ ನಿಜದಾಸ ಭಜಕರ	3
53. ಗುರುಶ್ರೀಶವಿಠಲ 
							

229 ನೋಡಲೆ ಮನವೆ ಕೊಂಡಾಡು ಗುರುಗಳ

229.	ರಾಗ: ಮೊಹನ 	ತಾಳ: ಝಂಪೆ
ನೋಡಲೆ ಮನವೆ ಕೊಂಡಾಡು ಗುರುಗಳ ಪಾದ
ಈಡುಇಲ್ಲವೊ ಪುಣ್ಯಕೆ 	 ಪ
ನಾಡೋಳಗೆ ಗುರುರಾಘವೇಂದ್ರರಾಯರ ಸೇವೆ
ಮಾಡಿದವ ಪರಮಧನ್ಯಮಾನ್ಯ	ಅ.ಪ
ನಿಷ್ಟೆಯಿಂದಲಿ ಭಜಿಸೆ ಕಷ್ಟಗಳು ದೂರ ಮನೋ-
ಭೀಷ್ಟಗಳ ಪೊರೈಪರೊ
ಅಷ್ಟಸೌಭಾಗ್ಯವನುಕೊಟ್ಟು1 ಸುಜನರಿಗೆ ಶ್ರೀ
ವಿಷ್ಣುದಾಸ್ಯವ ತೋರ್ಪರೊ
ದೃಷ್ಟಿಯಿಂದಲಿ ನೊಡಲನೇಕ ಜನ್ಮದ ಪಾಪ
ಬಿಟ್ಟು ಪೋಪವೊ ಕ್ಷಣದಲಿ
ಎಷ್ಟುಹೇಳಲಿ ಇವರ ನಿಷ್ಟ ಮಹಾತ್ಮೆಯನು
ದುಷ್ಟರಿಗೆ ದೊರೆಯದಿವರ ಸೇವಾ	1
ಹಲವುಕ್ಷೇತ್ರಗಳೇಕೆ ಹಲವುತೀರ್ಥಗಳೇಕೆ 
ಫಲ ಸುಲಭದಲ್ಲಿರಲು
ಬಲವು ಇದ್ದದ್ದರೊಳು ಪ್ರದಕ್ಷಿಣೆ ಸುಪದಜಲ
ತಲೆಯಲ್ಲಿ ಧರಿಸಿ ನಿತ್ಯ
ಮಲರಹಿತನುಆಗಿ ದಂಡಪ್ರಣಾಮವ ಮಾಡೆ
ಒಲಿವರು ಕರುಣದಲಿ ಬೇಗ 
ಜಲಜನಾಭನು ನಾಲ್ಕುರೂಪದಿಂದಿವರಲ್ಲಿ
ಸಿಲುಕಿ ಪೂಜೆಯಗೊಂಬ ಸತತಮೋಕ್ಷದಾತ	2
ಹರಿದಾಸರಿದ್ದ ಸ್ಥಳ ವರಕಾಶಿಮೊದಲಾದ
ಕುರುಕ್ಷೇತ್ರಕಿಂತಧಿಕವೊ
ಸುರಋಷಿಮುನಿಗಳು ಇಲ್ಲಿಹರು ವೈಕುಂಠ
ಸರಿಮಿಗಿಲು ಎಂದೆನಿಪುದೊ
ಪರಮಸುಜ್ಞಾನಿಗಳಿಗೀಫಲವು ದೊರಕುವುದು
ತರತಮದಿ ಇತರ ಜನಕೆ
ಗುರುಶ್ರೀಶವಿಠಲನು ಇವರ ರೂಪನಾಮದಲಿ
ಪರಿಪರಿಯ ವರವಗರೆವಾ ಪೊರೆವಾ	3
1 ಅಷ್ಟಸೌಭಾಗ್ಯಪದ - ಪಾಠ
							

230 ಬಾರೊ ಗುರುರಾಘವೇಂದ್ರ

230.	ರಾಗ: ಮಧ್ಯಮಾವತಿ 	ತಾಳ: ಅಟ
ಬಾರೊ ಗುರುರಾಘವೇಂದ್ರ
ಬಾರಯ್ಯ ಬಾ ಬಾ ಬಾರೊ	ಪ
ಹಿಂದುಮುಂದಿಲ್ಲೆನಗೆ ನೀಗತಿ-
ಎಂದು ನಂಬಿದೆ ನಿನ್ನ ಪಾದವ 
ಬಂಧನವ ಬಿಡಿಸೆನ್ನ ಕರಪಿಡಿ
ನಂದಕಂದ ಮುಕುಂದ ಬಂಧು	ಅ.ಪ
ಸೇವಕನೆಲೊ ನಾನು ಧಾವಿಸಿ ಬಂದೆನು
ಸೇವೆನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ
ಸೇವ್ಯಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿ	1
ಕರೆದರೆ ಬರುವಿಯೆಂದು ಸಾರುವುದು ಡಂಗುರ
ತ್ವರಿತದಿ ಒದಗೊ ಬಂದು
ಜರಿಯ ಬೇಡವೊ ಬರಿದೆ ನಿನ್ನ
ವಿರಹ ತಾಳದೆ ಮನದಿ ಕೊರಗುವೆ
ಹರಿಯಸ್ಮರಣೆಯ ನಿರುತದಲಿ ಎನ-
ಗ್ಹರುಷದಲಿ ನೀ ನಿರುತ ಕೊಡುತಲಿ 	2
ನರಹರಿ ಪ್ರಿಯನೆ ಬಾ ಗುರುಶ್ರೀಶವಿಠಲನ
ಕರುಣಾಪಾತ್ರನೆ ಬೇಗಬಾ
ಗುರುವರನೆ ಪರಿಪೋಷಿಸೆನ್ನನ್ನು
ಮರೆಯದೆಲೆ ತವಚರಣ ಕೋಟೆಯ-
ಲಿರಿಸಿ ಚರಣಾಂಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ	3
54. ಗೋಪತಿವಿಠಲ 
							

231 ಯೋಗಿ ಕುಲವರ ಮಕುಟ

231.	ರಾಗ: ಭೈರವಿ	ತಾಳ: ಮಠ್ಯ 
ಯೋಗಿ ಕುಲವರ ಮಕುಟ ಗುರು ಶ್ರೀ
ರಾಘವೇಂದ್ರನ ಭಜಿಸಿರೊ 	ಪ
ಮೋದತೀರ್ಥ ಪಯೋಧಿ ಚಂದಿರ
ಸಾಧುಜನ ಸತ್ಕುಮುದಕೆ
ಐದು ಆನನವಾಗಿಹನು ದು- 
ರ್ವಾದಿ ಗಜಸಮುದಾಯಕೆ 	1
ದೂಷಿಸುವ ಜನರುಗಳ ಗರ್ವ ಅ-
ಶೇಷ ಪರಿಹಾರಗೈಸುವಾ
ದಾಸರಭಿಮಾನವನು ಬಿಡದಿಹ
ದೋಷವರ್ಜಿತನೆನಿಸುವಾ 	2
ದಿನಪನಂದದಿ ಕಾಂತಿ ಬೃಂದಾ-
ವನದೊಳಿದ್ದು ಪ್ರಕಾಶವಾ
ಅಣುಗರಿಗೆ ಸಂತೃಪ್ತಿ ಸುಖವನು
ಅನವರತ ಪೂರೈಸುವಾ 	3
ವ್ಯಾಪ್ತರಾಗಿಹ ಅಖಿಳರಿಗೆ ಫಲ
ಪ್ರಾಪ್ತಿಗೋಸುಗ ಚರಿಸುವಾ 
ಆಪ್ತರಿಲ್ಲದೆ ಈತನೇಎನ-
ಗಾಪ್ತನನುದಿನವಾಗುವಾ 	4
ಕೋಲ ತನಯೆಯ ತೀರದಲಿ ಹೊ-
ನ್ನಾಳಿಯಲಿ ವಿಹರಿಸುವಾ
ಶೀಲ ಗೋಪತಿವಿಠಲನ ಕೃಪೆ-
ಗಾಲಯನು ಯೆಂದೆನಿಸುವಾ 	5
							

232 ರಾಘವೇಂದ್ರತೀರ್ಥ ಬೋಧಿಸು

232.	ರಾಗ: ಕಲ್ಯಾಣಿ	ತಾಳ: ಏಕ
ರಾಘವೇಂದ್ರತೀರ್ಥ ಬೋಧಿಸು
ಭಾಗವತಗತಾರ್ಥ
ರಾಘವ ಪದಾಂಬುಜಲಬ್ದಾರ್ಥ ಸ-
ರಾಗದಿ ಪಾಲಿಸು ನಿಜ ಪುರುಷಾರ್ಥ 	ಪ
ತುಂಗಾತಟವಾಸ ರಾಘವ
ಸಿಂಗನ ನಿಜದಾಸ
ಪಂಗು ಬಧಿರ ಮುಖಾಂಗ ಹೀನರನ-
ಪಾಂಗ ನೋಟದಿ ಶುಭಾಂಗರ ಮಾಡುವ 	1
ಪಾದೋದಕ ಸೇವಾರತರಿಗ-
ಗಾಧ ಫಲಗಳೀವ
ಬೂದಿ ಮುಖದ ದುರ್ವಾದಿಗಳೋಡಿಸಿ
ಸಾಧು ಜನರಿಗಾಹ್ಲಾದ ಬಡಿಸುತಿಹ 	 2
ಭುಜಗಧರಾರಾಧಿಪನಾ ವೊಲಿಸಿದ
ಸುಜನ ಶಿರೋಮಣಿಯೆ (+ನಿನ್ನ)
ನಿಜ ಪದ ಯುಗಳವ ಭಜಿಸುವ ಜನರಿಗೆ
ವಿಜಯದ ಗೋಪತಿವಿಠಲ ನಂದನ 	 3
55. ಗೋಪಾಲಕೃಷ್ಣವಿಠಲ
							

233 ಕರುಣಿಸೆನ್ನ ಗುರು ಮಂತ್ರಾಲಯ ನಿಲಯಾ

233.	ರಾಗ: [ದುರ್ಗಾ]	ತಾಳ: [ಆದಿ]
ಕರುಣಿಸೆನ್ನ ಗುರು ಮಂತ್ರಾಲಯ ನಿಲಯಾ
ಶ್ರೀ ನರಹರಿಗತಿಪ್ರೀಯಾ	ಪ.
ಹರಿಶಯ್ಯ ಮರುತರ ಆವೇಶಕೆ ನಿಲಯಾ ನಂಬಿದೆ ಶುಭಕಾಯಾ	ಅ.ಪ.
ತರಳತನದಿ ಶ್ರೀ ನೃಹರಿ ಶಾಂತನಾಗೇ ಸುರರೆಲ್ಲರು ನಿಮಗೇ
ಎರದÀು ಕೀರ್ತಿ ಹಿರೆತನವಹಿಸಿದರಾಗೇ ಅದರಂದದಿ ಈಗೇ
ವರ ಯತಿಗಳು ಹರಿದಾಸರು ವಂದಾಗೇ ಭಕ್ತರ ಅಘ ನೀಗೇ
ಧರೆ ಕಲ್ಪದ್ರುಮವೆಂದು ನಿಮ್ಮ ಬಳಿಗೇ ವಪ್ಪಿಸುವರು ಅಡಿಗೇ	1
ಎಮ್ಮ ಗುರುಗಳಿಂದ್ಹೇಳಿದ ನುಡಿ ಮರೆದೇ ನಿಮ್ಮಡಿಗೆರವಾದೇ
ಸಮ್ಮತದಲಿ ಮೃತ್ತಿಕೆಯನು ಸೇವಿಸದೇ ಹಮ್ಮಿನಲಿ ಮೈಮರೆದೇ
ನಿಮ್ಮ ಸುಕೀರ್ತಿಯ ತಿಳಿಸು ತಿಳಿಯದಾದೇ ಅತಿ ಭಕ್ತಿಯ ಜರಿದೇ
ನಿಮ್ಮ ಕರುಣವಿರಲದರಿಂದೀಗರಿದೇ ತನುಮನವಪ್ಪಿಸಿದೇ	2
ಒಂದೇ ಕೃತಿ ದ್ವಿದಳಾತ್ಮಕದಪರಾಧ ಪಡಿಸಿತು ಬಹು ಬಾಧ
ಸಂದಿತು ಕಾಲವು ಮುಂದರಿಯುವ ಮೋದ ಸಂದಿಸಿತುತ್ಸಹದಾ-
ನಂದಕೆ ಕಲಿ ಮಲ ತೊಳೆಯಲು ಮೌನದಾಪರಿ ಅರಿತೆ ಸುಬೋಧಾ
ಕುಂದೆಣಿಸದೆ ಪೊರೆದೆನ್ನ ನಿಮ್ಮಗಾಧಾಕೃಪೆತೋರಲು ಬಹು ಮೋದಾ	3
ಎಲ್ಲಿ ನೋಡಲಲ್ಲಲ್ಲಿ ನಿಮ್ಮ ವಾಸಾ ಪುರಗಳು ಜನ ತೋಷಾ
ಸೊಲ್ಲು ಸೊಲ್ಲಿಗೇ ನುತಿಪ ಗಾನ ಘೋಷಾ ಮಹಿಮೆಗಳ ಪ್ರಕಾಶ
ವಲ್ಲದಾಯಿತ್ಯಾತಕೊ ಎನಗಭಿಲಾಷಾ ಈಗಾಯಿತು ಈ ಆಶಾ
ಬಲ್ಲವರೀಪರಿ ಮಾಡುವರೇ ಮೋಸಾ ಸದ್ಭಕ್ತರಲಾಭಾಸಾ	4
ಒಂದು ದಿನದ ಮೃತ್ತಿಕೆ ಜಲ ಸೇವಿಂದ ಪೊಂದಿದೆ ನಿಮ್ಮ ಪದಾ
ಒಂದಾಗಲಿ ಗುರುವೆನಿಸಿದರೆಲ್ಲರದಾ ಮನವಮ್ಮನವಾದಾ-
ನಂದವು ಶ್ರೀ ನರಹರಿ ತಾ ಪರಿಕಿಸಿದಾನಂದವು ಬಹು ಮೋದಾ
ಸಂದಲಿ ಗೋಪಾಲಕೃಷ್ಣವಿಠಲನಿಂದಾ ಎಣಿಸದೆ ಬಹು ಕುಂದಾ	5
							

234 ಪಾರುಗಾಣಿಸೊ ಎನ್ನ ಪಾವನಕಾಯ

234.	ರಾಗ: [ಲಲಿತಪಂಚಮ]	ತಾಳ: [ಆದಿ]
ಪಾರುಗಾಣಿಸೊ ಎನ್ನ ಪಾವನಕಾಯ ಶ್ರೀ
ಗುರು ರಾಘವೇಂದ್ರಾರ್ಯನೇ	ಪ.
ಶ್ರೀ ರಮಾಪತಿ ಗುಣವ ನೀ ಮನದೊಳು ತಿಳಿಸಿ
ಶ್ರೀ ರಾಮ ನಾಮ ನುಡಿಸೋ ಭವ ಬಂಧ ಬಿಡಿಸೋ	 ಅ.ಪ.
ಮಿಂಚಿನಂತಿಹ ಎನ್ನ ಚಂಚಲ ಮನದಲ್ಲಿ
ಸಂಚಿತನೆ ಎನೆ ನೆಲಸೋ
ಸಂಚಿತಾಗಮಿಗಳು ಕೊಂಚ ಉಳಿಯದ ತೆರದಿ
ಪಂಚ ಭೇದಾರ್ಥ ತಿಳಿಸೊ
ಪಂಚವಕ್ತ್ರನ ತಾತ ಮಿಂಚಿನಂದದಿ ಪೊಳೆವೊ
ಹಂಚಿಕೆಯ ಎನಗೆ ತೋರೋ ಮನಕ್ಹರುಷ ಬೀರೋ	1
ಶ್ರೀ ನರಹರಿ ಕೃಷ್ಣ ರಾಮ ವ್ಯಾಸರ ಪದವ
ನೀ ನಿರ್ಮಲದಲಿ ನೆನೆವೆ
ಮಾನನಿಧಿ ಮುರಹರಿಯ ಧಾಮತ್ರಯಗಳ ಮಾರ್ಗ
ಕಾಮಿಸಿದ ಭಕ್ತಗೀವೆ
ನಾನಧಮೆ ನಿನ್ನಡಿಗೆ ಬಾಗಿ ಭಜಿಸುವೆ ಗುರುವೆ
ನೀನಿತ್ತ ನೋಡಿ ಪೊರೆಯೊ ನೀ ದಯವ ಗರೆಯೊ	2
ತರಳತನದಲಿ ಶ್ರೀ ನರಹರಿಯ ಭಜಿಸುತ್ತ
ಉರುತರದಿ ಭಾದೆ ಸಹಿಸಿ
ಹರಿಯು ಸರ್ವತ್ರ ವ್ಯಾಪಕನೆಂಬೊ ಮಹಿಮೆಯ
ಉರ್ವಿಯೊಳಗೆಲ್ಲ ನೆಲಸಿ
ವರಯತಿ ರೂಪದಲಿ ಸಿರಿ ಕೃಷ್ಣನಾ ಭಜಿಸಿ
ಮರುತ ಮತವನೆ ಸ್ಥಾಪಿಸಿ ಗುರುರಾಯನೆನಸಿ	3
ತುಂಗ ತೀರದಿ ನಿಂದು ಮಂಗಳರೂಪದಲಿ
ಪಂಗು ಬಧಿರರ ಸಲಹುತ
ಸಂಗೀತ ಪ್ರಿಯನೆನಿಸಿ ಶೃಂಗಾರರಾಮನ
ಮಂಗಳರೂಪ ಭಜಿಸಿ
ಹಿಂಗದೇ ಸುಜನರಿಗೆ ವರವ ಕೊಡುವೊ ಬಿರುದು
ರಂಗನಾ ಪದದೊಲುಮೆಯೋ ನಿನ್ನಯ ಮಹಿಮೆಯೋ	4
ಗೋಪಾಲಕೃಷ್ಣವಿಠ್ಠಲನ ಪರಿಪರಿಯಿಂದ
ಆಪಾದ ಮೌಳಿ ನೋಳ್ಪೆ
ಶ್ರೀಪತಿಯ ತೋರೆನಗೆ ಪಾಪ ಕಲುಷವ ಕಳದು
ತಾಪ ಪಡಲಾರೆ ಭವದಿ
ಕಾಪಾಡುವವರಿಲ್ಲ ನೀ ಕೃಪಾನಿಧಿಯೆಂದು
ಈ ಪರಿ ಕೇಳ್ದೆ ಗುರುವೆ ಭಕ್ತರ ಕಲ್ಪತರುವೆ	5
56. ಜನಾರ್ದನವಿಠಲ
							

235 ಇಂದು ಎನ್ನನು ಬಂದು ರಕ್ಷಿಸೊ

235.	ರಾಗ: ಭೈರವಿ	ತಾಳ: ಅಟ
ಇಂದು ಎನ್ನನು ಬಂದು ರಕ್ಷಿಸೊ
ತಂದೆ ಗುರು ರಾಘವೇಂದ್ರನೆ
ಮಂದಮತಿನಾ ಮನದಿ ಮಾಡುವ
ಕುಂದುಗಳ ನೀನೆಣಿಸದೆ	ಪ
ಭಕ್ತಿ ಕರ್ಮ ವಿರಕ್ತಿಯನು ಮಾಡಿ
ಭಕ್ತಜನ ನಿನ್ನ ಸಂಗದೊಳು ನಲಿದು
ಉಕ್ತಿವಂದನನುಡಿದು ಪರಮಾಸಕ್ತಿಯಿಂದ ಪಾಡುತ
ತ್ಯಕ್ತಿಸಿ ವಿಷಯಾಂಬುಧಿಯನು
ಮುಕ್ತಿದಾತನ ನಾಮ ಮುಂಕೊಂಡು
ಯುಕ್ತಿಯಿಂದಾಚರಿಸದಲೆ ಸಲಹೊ ಶಕ್ತನೀನೆಂದು ನಂಬಿದೆ	1
ವಾರ್ತೆನುಡಿ ಸರಿ ಕೀರ್ತಿಪುರುಷನೆ
ಆರ್ತನಾಗಿ ಆಚರಿಪ ಜಗ-
ಪಾರ್ಥಸಖನಾಪಾರ ತಂತ್ರಬಲ್ಲ ಭ್ರಾತೃ ಮಾತೃ
ಪಿತೃ ಬಂಧುವೆ ಪೂರ್ತಿಸದೊಮನ
ಸ್ತೋತ್ರಮಾಡಲು ತೀರ್ಥತುಂಗತೀರವಾಸನೆ
ಮೂರ್ತಿಮಂತದಿ ನಿಂತು ಮುಖದಾ ಮೂರ್ತಾಮೂರ್ತದಿ ಮುನಿರಾಯ	2
ಕರವಪಿಡಿ ಜ್ಞಾನಕಾಮಧೇನುವೆ
ಚರಣಪೊಂದಿದೆ ಚಿಂತಾಮಣಿಯೆಂದು
ನರಮಾತ್ರದವ ಮರೆತ ಕಾಲುಕುಪರಿಗ್ರಹಮಾಡಿ ಪರಸುಖ
ಪರಿಪಾಲಿಪ ರಾಮನಾದ ಜನಾರ್ದನವಿಠಲನ್ನ ಪಾದವ
ನಿರುತ ಹೃದಯ ನಿಮ್ನದಲಿ ತೋರುವ
ಶರಣಜನ ಮನೋಹಾರನೆ	3
							

236 ಪಾದವನು ಕಂಡು ಪಾವನನಾದೆನೊ

236.	ರಾಗ: ಕಾಂಬೋಜಿ	ತಾಳ: ಝಂಪೆ
ಪಾದವನು ಕಂಡು ಪಾವನನಾದೆನೊ
ವೇದಾರ್ಥತಿಳಿದ ಗುರು ರಾಘವೇಂದ್ರರ1	ಪ
ಮನೋಭಾವವನು ಕೊಡುವ ಘನಭಕುತರಿಗೆ ಇಂದು
ದನುಜದಲ್ಲಣನಂಘ್ರಿ ಮನದಿಭಜಿಸಿ
ಕನಸಿನಲಿ ಕನಕರಿಸೆ ವನಜನಾಭನ ಪದವ
ವಿನಯದಿಂದಲಿ ತೋರಿ ಮನಮೋದಪಡಿಸುವರ	1
ಸೀತಾರಾಮರ ಪೂಜೆ ಆತುರದಲಿಮಾಡಿ
ನೀತಮಾರ್ಗದಿ ಭೀತಿರಹಿತನಾದ
ಆತುರವಪರಿಹರಿಸಿ ಶಾತಕುಂಭದಂತೆ
ಆತುಮನಮಾಡುವ ಅನಿಮಿತ್ತಬಂಧುವಿನ	2
ಗುರುಸುಧೀಂದ್ರರ ವರಕುಮಾರರಿವರು
ಪರಲೋಕಸುಖ ಕೊಡುವ ಪರಮಕರುಣಿ
ಧರೆಯೊಳಗೆ ಸರಿಗಾಣೆ ಜನಾರ್ದನವಿಠಲನ್ನ
ಸ್ಥಿರವಾಗಿ ಭಜಿಸುವ ಶಿಖಾಮಣಿಯ ದ್ವಯ	3
1 ಪಾಠ: ಮೋದಮತಚಂದ್ರ ಗುರು ರಾಘವೇಂದ್ರರ ದಿವ್ಯ
57. ಜಯೇಶವಿಠಲ 
							

237 ಗುರುರಾಘವೇಂದ್ರ ಶರಣರ ಸುರತರುವೆ

237.	ರಾಗ: [ಸಿಂಧುಭೈರವಿ]	ತಾಳ: [ಆದಿ]
ಗುರುರಾಘವೇಂದ್ರ ಶರಣರ ಸುರ- 
ತರುವೆ ಕರುಣಸಾಂದ್ರ	ಪ
ಧರೆಯೊಳು ನಿನ್ನ ಶ್ರೀ ಚರಣಕಮಲ ಪ್ರಭೆ
ಮೆರೆವೋದು ಬಹು ಪರಿ ಉದ್ಧರಿಸು ಈ ಶರಣನ್ನ	ಅ.ಪ.
ವಿಮಲ ಸುಕೃತ ಸ್ವರೂಪ ದರುಶನ ಮಾತ್ರದಿ ಭವ
ಶ್ರಮ ಹರಿಸುವ ಪ್ರತಾಪ
ರಮೆ ಅರಸನ ಗುಣ ಸಮುದಾಯದೊಳು ಮಗ್ನ
ಭ್ರಮೆರಹಿತ ಸ್ಥಿರಚಿತ್ತ ನಮೋ ನಮೋ ನಿನಗೆ
ಅಮಿತ ಮತಿಯ ಕರುಣ ಕವಚವ
ಅಮಿತಕಾಲದಿ ಕೊಟ್ಟು ಮೆರೆಯುವ
ಅಮಿತ ಮಂಗಳದಾಯಿ ತತ್ವದ
ಕಮಲ ವೈಭವ ಸಲಹಲೆನ್ನನು	1
ಪಾವನ ಸುಯತಿ ರನ್ನ ಲಾಲಿಸು ವಾಕು
ಸಾವಧಾನದಿ ಘನ್ನ
ಭೋವಿಧ ಭವ ಬವಣೆ ದಾವಾಗ್ನಿಯೊಳು ನೊಂದೆ
ಶ್ರೀ ವರನ ದಾಸ ಕಾವ ದೃಷ್ಟಿಯಲಿ ನೋಡೊ
ದೇವದೇವನೆ ನಿತ್ಯ ಮಂಗಳ
ಭಾವರೂಪ ಗುಣತ್ರಯಗಳ
ಆವ ಕಾಲಕು ಬಿಡದೆ ನೋಡುವ
ಭೂ ವಿಬುಧಮಣಿ ಪಾಲಿಸೆನ್ನನು	2
ತುಂಗಾತೀರ ನಿವಾಸ ರಾಘವೇಂದ್ರ ಗುರು
ತುಂಗ ಮಹಿಮ ನಿರ್ದೋಷ
ಮಂಗಳಾಸಮ ಹರಿ ಗಂಗಾಪಿತನ ಕೂಡಿ
ತುಂಗಪೂಜೆಯ ಕೊಂಡ್ವರಂಗಳ ಬೀರುವ
ತಿಂಗಳಾಸ್ಯನ ಪಾದ ತೀರ್ಥದಿ ಭವ
ಭಂಗ ಬಗೆಯನು ಬಲ್ಲ ಮಹಾತ್ಮ
ರಂಗ ಜಯೇಶವಿಠಲ ದೇವನ
ಸಂಗ ನೀಡುವ ಕೃಪೆಯ ಮಾಳ್ಪ	3
58. ಜಾನಕಿರಮಣ 
							

238 ಇಳೆಯೊಳು ಗುರು ರಾಘವೇಂದ್ರರ ಭಜಿಸಲು

238.	ರಾಗ: ಜಂಜೂಟಿ 	ತಾಳ: ಆದಿ
ಇಳೆಯೊಳು ಗುರು ರಾಘವೇಂದ್ರರ ಭಜಿಸಲು
ಕಲುಷರಾಸಿಗಳು ತೊಲಗುವವೋ	ಪ
ಏಳನೂರು ಸಂವತ್ಸರಕಾಲವು
ಸುಲಭದಿ ಭಕುತರ ಸಲಹುವರೋ 	ಅ. ಪ
ಒಂದೇಮನಸಿಲಿ ಬೃಂದಾವನದಿ
ಹದವನರಿತು ಸೇವೆಸಾಧಿಸಲು
ಮುಂದಿನ ಮುಕುತಿಗೆ ಸಾಧನವಾಗುವ
ಹಾದಿಯ ತೋರಲು ಒದಗುವರು 	1
ವರಮಂತ್ರಾಲಯ ಬೃಂದಾವನದಿ ಸ-
ಶರೀರದಲಿ ಕುಳಿತಿರುವ
ಪರಿಪರಿವಿಧದಲಿ ಸೇವಿಪ ಭಕುತರು
ಕೋರಿದ ವರಗಳ ಕರುಣಿಸುವ 	 2
ಗುರುಸುಧೀಂದ್ರರ ಕರಸಂಜಾತರು
ಶರಣಾಗತರನುದ್ಧರಿಸುವರು
ಸಿರಿಯರಸ ಶ್ರೀಜಾನಕಿರಮಣನ
ತೋರಲು ಬರುವರು ಕರದೆಡೆಗೆ 	3
							

239 ಎಂದು ಕಾಂಬೆ ಶ್ರೀ ಗುರುವರರ

239.	ರಾಗ: ಭೈರವಿ	ತಾಳ: ಅಟ
ಎಂದು ಕಾಂಬೆ ಶ್ರೀ ಗುರುವರರ ಎಂದು ಕಾಂಬೆ	ಪ
ಎಂದು ಕಾಂಬೆ ನಿಮ್ಮ ಸುಂದರ ಚರಣವ
ಅಂದಿನ ಸುಖ ಪೊಂದಿ ನಾ ಧನ್ಯನಾಗುವೆ	ಅ. ಪ
ಪಿತನಿಂದತಿಕಷ್ಟ ಪಟ್ಟು ಪ್ರತಿಕೂಲ ಎಣಿಸದೆ
ಪಿತಗೆ ಶಿರಿಪತಿಯ ತೋರಿದ ಪ್ರಹ್ಲಾದರ	1
ಧರ್ಮರಕ್ಷಣೆಗಾಗಿ ಸಿಂಹಾಸನವನೇರಿ
ಕಾಮಿತಾರ್ಥವನಿತ್ತ ಶ್ರೀವ್ಯಾಸತೀರ್ಥರ	2
ಜಾನಕಿರಮಣ ಶ್ರೀಮೂಲರಾಮರ ಪಾದ 
ಧ್ಯಾನಮಾಳ್ವ ಶ್ರೀ ಗುರು ರಾಘವೇಂದ್ರರ	3
							

240 ಏನು ಕಾರಣ ದಯ ಬಾರದೊ

240.	ರಾಗ: ಶಂಕರಾಭರಣ 	ತಾಳ: ಆದಿ
ಏನು ಕಾರಣ ದಯಬಾರದೊ ಶ್ರೀ ಗುರುವೆ ಘನಮಂತ್ರಾಲಯ ಪ್ರಭುವೆ 	ಪ
ದೀನಸೇವಕನ ಮನ್ನಿಸಬೇಕೆಂದು ನಾಬೇಡುವೆ ನಿಮಗಿಂದು 	ಅ. ಪ
ದೂರದೇಶದಿಂದ ಬಳಲಿ ತೊಳಲಿ ಬಂದೆ ನಿಮ್ಮೆದುರಲಿ ನಿಂದು
ಹರುಷದಿಂದಲಿ ಎನ್ನ ಕರುಣಿಸು ನೀ ತಂದೆ ಏಕಿಲ್ಲಿ ಕರತಂದೆ
ಶರಣಾಗತರನು ಪೊರೆವ ಬಿರುದು ಪೊತ್ತು ಬೇಡಿದವರವಿತ್ತು
ವರಮಂತ್ರಾಲಯ ಪುರದೊಳು ಮೆರೆಯುತ್ತ ಮಹಿಮೆಯ ತೋರುತ್ತ 	1
ನದಿಯಲಿ ಇಂದು ಮಿಂದು ಬಂದೆ ನಾನು ಭಕುತರಸುರಧೇನು
ಮೋದದಿಂದಲಿ ನಿಮ್ಮ ಸ್ತೋತ್ರವ ಪಠಿಸಿದೆನು ವಂದನೆಮಾಡಿದೆನು
ಚಂದದಿತೋರಿಂದು ಸುಂದರ ಪಾದವನು ಭಕುತಿಲಿ ನಮಿಸುವೆನು
ನೊಂದಮನುಜರ ಪೊರೆಯುವ ದೊರೆಯೆಂದು ನಾ ಪೊಗಳುವೆ 
	ನಿಮಗಿಂದು 	2
ಖೂಳರಕ್ಕಸನ ಉದರದಲಿ ಜನಿಸಿ ಹರಿಭಕ್ತಿಯಗಳಿಸಿ
ಎಲ್ಲಿ ನೋಡಿದರಲ್ಲಿ ನಿಮ್ಮ ಮಹಿಮೆ ತೋರುವುದೇ ಬಲುಹಿರಿಮೆ
ಕಲಿಯುಗದಲಿ ಯತಿರೂಪದಿ ಅವತರಿಸಿ ಸದ್ಗ್ರಂಥಗಳರಚಿಸಿ
ಚಲುವ ಜಾನಕಿರಮಣನ ಪಾದಭಜಿಸಿ ಭಕುತರನುದ್ಧರಿಸಿ 	3
							

241 ಕೇಳು ಕೋಪಿಸಬೇಡ

241.	ರಾಗ: ಮೋಹನ 	ತಾಳ: ಝಂಪೆ
ಕೇಳು ಕೋಪಿಸಬೇಡ ಮಂತ್ರಾಲಯ ಪ್ರಭುವೇ
ಪೇಳಲಂಜುವೆ ನಿಮ್ಮ ದಿವ್ಯಚರಿತೆ 	 ಪ
ಆಲಿಸಿ ಕೇಳುತ್ತ ಭಕುತನಿಗೊಲಿದು
ಪಾಲಿಸು ದರುಶನವ ನೀ ಯನಗೆ ಧೊರೆಯೇ 	ಅ. ಪ
ಕೃತಯುಗದಿ ಹಿರಣ್ಯಕನ ಪುತ್ರನಾಗಿ ಜನಿಸಿ
ನಿತ್ಯ ಶ್ರೀ ಹರಿಯನ್ನೇ ಭಜಿಸಿ
ಎತ್ತನೋಡಿದರತ್ತ ಶ್ರೀಹರಿಯುಇಹನೆಂದು
ಗತ್ತಿನಿಂದಲಿಪೇಳುತ
ಪಿತನೆಂಬ ಅಭಿಮಾನ ಎಳ್ಳಷ್ಟು ಇಲ್ಲದೆಲೆ
ಕಂತುಪಿತನಿಂದವನ ಕೊಲ್ಲಿಸಿದ ಪರಿಯ 	1
ತ್ರೇತೆಯಲಿ ರಾವಣನ ಅನುಜನಾಗಿ ಪುಟ್ಟಿ
ಮತ್ತೆ ಬುದ್ಧಿಯಪೇಳಿ ಘಾಸಿಪಟ್ಟಿ
ಸತಿಯ ಪುಡುಕಲು ಬಂದ ರಾಮರ ಪಾದವನು
ಗತಿಯನೇತೋರೆಂದು ಪಿಡಿದಿ
ಪಿತನಸಮನು ಅಣ್ಣನೆಂಬ ಭಾವವನಳಿದು
ಆತನ ರಕ್ಷಿಸದೆ ಕೊಲ್ಲಿಸಿದ ಪರಿಯ 	2
ಕಲಿಯುಗದಿ ಅವತರಿಸಿ ಯತಿಯಾಗಿ ಸಂಚರಿಸಿ
ಒಳ್ಳೆ ಗ್ರಂಥಗಳ ರಚಿಸಿ 
ಸಿಲುಕಿ ಭಕುತರಬಲೆಗೆ ಬೇಡಿದಾವರವಿತ್ತು 
ಬಳಲಿ ಬೇಸರಿಕೆಪಟ್ಟು
ಚಲುವ ಜಾನಕಿರಮಣ ಮೂಲರಾಮರ ಸ್ಮರಿಸೆ
ಸ್ಥಳಕಾಗಿ ಬೃಂದಾವನಸೇರ್ದ[ಹೊಕ್ಕ]ಪರಿಯ 	3
							
242.	ರಾಗ: ಶಂಕರಾಭರಣ 	ತಾಳ: ಆದಿ
ಗುರುಗಳ ಚರಣವ ನಿರುತದಿ ಭಜಿಸಲು
ದುರಿತರಾಶಿಗಳು ಪರಿಹರವು 	ಪ
ಗುರುಗಳ ಚರಣಕ್ಕೆರಗಿ ನಮಿಸಲು
ಪರಿಪರಿ ಕ್ಲೇಶವು ಪರಿಹರವು  	ಅ. ಪ
ತುಂಗಾನದಿಯಲಿ ಸ್ನಾನವುಮಾಡಲು
ಅಗಣಿತಪಾಪವು ಪರಿಹರವು
ಮಂಗಳಮಹಿಮರ ನಾಮವ ಪಾಡಲು
ರೋಗವ್ಯಾಧಿಗಳು ಪರಿಹರವು 	1
ಉದಯದೊಳೆದ್ದು ಗುರುಗಳಸ್ಮರಿಸಲು
ಕುಂದುಕೊರತೆಗಳು ಪರಿಹರವು
ಹಿಂದಿನಜನುಮದ ಪಾಪಗಳೆಲ್ಲವು
ಸದ್ದುಮಾಡದೆ ತೊಲಗುವುವು 	2
ಗುರುಗಳ ಕರುಣದ ಭಾಗ್ಯವ ಪಡೆಯದೆ
ಪರಿತಪಿಸುವ ಭಕುತರ ಪೊರೆವುದಕೆ
ಸ್ಮರಿಸುತ ಜಾನಕಿರಮಣನ ಪಾದವ
ಭರದಿಂ ಬರುವರು ಭಕುತರಆಲಯಕೆ 	3
							

243 ಗುರುಗಳ ದರುಶನವಾಯಿತು

243.	ರಾಗ: ಸೌರಾಷ್ಟ್ರ/ಆರಭಿ	ತಾಳ: ಅಟ
ಗುರುಗಳ ದರುಶನವಾಯಿತು ಎನಗೆ ಇನ್ನೇನಿನ್ನೇನು 
ಪರಮಾನುಗ್ರಹ ಮಾಡಿದರೆನೆಗೆ ಇನ್ನೇನಿನ್ನೇನು	ಪ
ತುಂಗತೀರಕೆಪೋಗಿ ಸ್ನಾನವಗೈದೆನು ಇನ್ನೇನಿನ್ನೇನು 
ಮಂಗಳಮಹಿಮರತೀರ್ಥ ಪ್ರಾಶನಗೈದೆ ಇನ್ನೇನಿನ್ನೇನು 	1
ಉದಯಕಾಲದೊಳೆದ್ದು ಗುರುಗಳ ಸ್ಮರಿಸಿದೆ ಇನ್ನೇನಿನ್ನೇನು
ಬೃಂದಾವನದಿಶೋಭಿಪ ಗುರುಗಳ ನೋಡಿದೆ ಇನ್ನೇನಿನ್ನೇನು 	2
ಭಂಟನಾಗಿ ಬಾಗಿಲಕಾಯ್ದೆ ಗುರುಗಳ ಇನ್ನೇನಿನ್ನೇನು
ನೆಂಟರಿನ್ನ್ಯಾರೂ ಎನಗಿಲ್ಲವೆಂದೆ ಇನ್ನೇನಿನ್ನೇನು 	 3
ಜನ್ಮಜನ್ಮಾಂತರದಪಾಪಗಳ ಕಳೆದರು ಇನ್ನೇನಿನ್ನೇನು
ಕಣ್ಣಿನಿಂದಲಿನೋಡಿ ಧನ್ಯನಾದೆನು ಇನ್ನೇನಿನ್ನೇನು 	4
ಘನಕರುಣವಾರಿಧಿ ರಾಘವೇಂದ್ರರ ಕಂಡೆ ಇನ್ನೇನಿನ್ನೇನು
ಜಾನಕಿರಮಣನ ಮನದಲಿ ಸ್ಮರಿಸಿದೆ ಇನ್ನೇನಿನ್ನೇನು 	 5
							

244 ಚರಣ ಕಮಲವನ್ನು ಭಜಿಸಿ

244.	ರಾಗ: ಕಲ್ಯಾಣಿ	ತಾಳ: ಆದಿ
ಚರಣಕಮಲವನ್ನು ಭಜಿಸಿ	ಪ
ಶ್ರೀರಾಘವೇಂದ್ರ ಗುರುಗಳ ಕರುಣವನ್ನು ಗಳಿಸಿ	ಅ. ಪ
ಭವಸಾಗರದಿ ಬವಣೆಗೊಂಡ ಜನರ
ಪಾವನಮಾಡುವ ಶ್ರೀವರ ಗುರುಗಳ	1
ದೀನಸೇವಕರ ಮನದಾಭೀಷ್ಟಗಳ
ಜನನಿಜನಕರಂತೆ ಆನಂದದಿಂದ ಕೊಡುವೋ	2
ಭಾನುವಂಶಜ ಶ್ರೀಜಾನಕಿರಮಣನ
ಗುಣಗಳ ಸ್ಮರಿಸುವ ಶ್ರೀ ರಾಘವೇಂದ್ರರ	3
							

245 ಚರಣವ ನಂಬಿಹೆನು

245.	ರಾಗ: ಸುರಟಿ 	ತಾಳ: ಆದಿ
ಚರಣವ ನಂಬಿಹೆನು ಶ್ರೀ ಗುರುರಾಯ ರಾಘವೇಂದ್ರ 	ಪ
ಮರೆಯದೆ ಶರಣಾಗತರನು ಪೊರೆಯುವ 
ಕರುಣಾ ವಾರಿಧಿ ನೀವೆನುತ 	ಅ. ಪ
ಪರಿಪರಿ ಶಾಸ್ತ್ರಗಳ ಪಠಿಸುತ ಅ-
ದರ ಸಾರ ಗ್ರಹಿಸಲಿಲ್ಲ
ಗುರುಗಳ ಚರಣವ ಭಜಿಸದ ಮನುಜನು
ಧರಣಿಗೆ ಭಾರವು ಆಗಿಹನು 	 1
ನಿರುತದಿ ಗುರುಚರಣ ಭಜಿಸಲು 
ದೊರಕದು ಅರಕ್ಷಣವು
ಪೊರೆಯಲು ಸತಿಸುತರೆಲ್ಲರ ಅನುದಿನ
ತಿರುಗಿದೆ ಇಡಿದಿನ ಊರೊಳಗೆ 	2
ಅನ್ಯರನಾನರಿಯೆ ಗುಣನಿಧಿ ನಿ-
ಮ್ಮನು ನಾ ಮರೆಯೆ
ಜಾನಕಿರಮಣನ ಗುಣಗಳ ಪಾಡಲು
ಜ್ಞಾನವ ಕರುಣಿಸು ನೀ ಧೊರೆಯೇ 	3
							

246 ಜನ್ಮವೇತಕೆ ಗುರುಗಳ ನೋಡದ

246.	ರಾಗ: ಪೂರ್ವಿಕಲ್ಯಾಣಿ	ತಾಳ: ಆದಿ
ಜನ್ಮವೇತಕೆ ಗುರುಗಳ ನೋಡದ ಜನ್ಮವೇತಕೆ	ಪ
ಜನ್ಮವೆಲ್ಲ ಭೂಭಾರವೇ ಮನುಜ	ಅ. ಪ
ಉದಯಕಾಲದಲ್ಲಿ ತುಂಗಭದ್ರೆಯಲ್ಲಿ
ಮೋದದಿಂದ ಮಿಂದುಬಂದ ಭಕುತರ
ಕುಂದುಗಳಕಳೆದು ಅಧಿಕ ಹರುಷದಿಂದ
ವೃಂದಾವನದಿಮೆರೆವ ಗುರುಗಳ ನೋಡದ	1
ಕಾಲಕಾಲದಲ್ಲಿ ಮೂಲರಾಮರಲ್ಲಿ
ಕುಳಿತು ಸೇವೆಗೈವ ಚೆಲುವಮೂರ್ತಿಯತಿಯ
ಆಲಯದಿ ಹೊಕ್ಕು ಕಳೆದು ಪಾಪಗಳ
ಇಳೆಯೊಳು ಸುಖದಿ ಬಾಳಲಾರದಿರುವ	2
ಜಾನಕಿರಮಣನ ಧ್ಯಾನವಮಾಡುತ
ದೀನಭಕುತರ ಮಾನದಿಂದ ಕಾಯ್ವ 
ಘನಮಹಿಮರಾದ ಮುನಿವರರ ತನ್ನ
ಅಂತರಂಗದಲ್ಲಿ ಕಾಣದ ಮನುಜ	3
							

247 ಜೊ ಜೊ ಜೊ ಜೋ ಶ್ರೀ ರಾಘವೇಂದ್ರ

 247.	ರಾಗ: ಕಮಾಚ್ 	ತಾಳ: ಅಟ
ಜೊ ಜೊ ಜೊ ಜೋ ಶ್ರೀ ರಾಘವೇಂದ್ರ
ಜೊ ಜೊ ಜೊ ಜೋ ಕರುಣಾಸಾಂದ್ರ
ಜೊ ಜೊ ಜೊ ಜೋ ಗುರುಕುಲಚಂದ್ರ
ಜೊ ಜೊ ಜೊ ಜೋ ಪರಮಯೋಗೀಂದ್ರ 	ಪ
ಕೃತಯುಗದಿ ಅಸುರನ ಉದರದೊಳ್ಜನಿಸಿ
ಕರ್ತೃ ಶ್ರೀಹರಿಯೆಂದು ಜನಕಗೆ ತಿಳಿಸಿ
ಪ್ರೀತಿಯಿಂದಲಿ ಹರಿಯ ಕಂಭದಿ ತೋರಿಸಿ
ಸ್ತೋತ್ರವಮಾಡಿದ ಪ್ರಹ್ಲಾದರಿಗೆ 	1
ತ್ರೇತೆದ್ವಾಪರದಲ್ಲಿ ವಸುಧೆಯೋಳ್ಜನಿಸಿ
ಉತ್ತಮರೆಂತೆಂಬೊ ಖ್ಯಾತಿಯಗಳಿಸಿ
ಕಂತುಪಿತ ರಾಮಕೃಷ್ಣರ ಭಜಿಸಿ
ಚತುರ್ವಿಧಪುರುಷಾರ್ಥಗಳ ಗಳಿಸಿ 	 2
ಕ್ಷಿತಿಯೊಳು ಭಕುತರ ಪೊರೆಯಲವತರಿಸಿ
ಪತಿತಪಾವನರೆಂಬೊ ಬಿರುದನು ವಹಿಸಿ
ಸತತ ಜಾನಕಿರಮಣ ರಾಮರ ಸ್ಮರಿಸಿ
ನಿದ್ರಿಸು ಸುಖವಾಗಿ ಬೃಂದಾವನದಿ 	3
							

248 ತಪ್ಪದೆ ಲಭಿಸುವುದು

248.	ರಾಗ: ಮಧ್ಯಮಾವತಿ	ತಾಳ: ಆದಿ 
ತಪ್ಪದೆ ಲಭಿಸುವುದು ಶ್ರೀ ಗುರುಗಳ ದಿವ್ಯಕರುಣ	ಪ
ಒಪ್ಪುವಂತೆ ನೀ ಭಜಿಸು ಶ್ರೀ ಗುರುಗಳ ಭವ್ಯಚರಣ	ಅ. ಪ
ತುಂಗಭದ್ರತೀರದಿ ರಂಗಮಂಟಪದಿ
ಯೋಗನಿದ್ರೆಯ ಮಾಡುವ ಗುರುಗಳ ದಿವ್ಯಕರುಣ	1
ಧರೆಯೊಳು ಅತಿಪೂಜ್ಯ ಶ್ರೀ ರಾಘವೇಂದ್ರ
ಗುರುಗಳ ಸ್ಮರಿಸುತ್ತ ಆಚರಿಸು ಮೌನವನು	2
ಸತ್ಯಧರ್ಮ ಮಾರ್ಗವ ಸತತ ಆಚರಿಸಿ
ಭಕ್ತರ ಸಲಹುವ ಯತಿಗಳ ಕರುಣ	3
ವರಕಲ್ಪವೃಕ್ಷವು ಸ್ಮರಿಸುವ ಜನಕೆ
ವರವೀವ ಕಾಮಧೇನು ನಮಿಪ ಸುಜನರಿಗೆ	4
ನಿರುತ ಶ್ರೀಜಾನಕಿರಮಣನ ಮನದಿ 
ಸ್ಮರಿಸುವ ಶ್ರೀ ರಾಘವೇಂದ್ರರ ಕರುಣ	5
							

249 ತುಂಗಾಸ್ನಾನ ಗುರುಗಳ ಧ್ಯಾನ

249.	ರಾಗ: ಧನ್ಯಾಸಿ	ತಾಳ: ಆದಿ
ತುಂಗಾಸ್ನಾನ ಗುರುಗಳಧ್ಯಾನ ಮುಕ್ತಿಗೆ ಸೋಪಾನ	ಪ
ತುಂಗಾ ತೀರದಿ ಶೋಭಿಪ ವರ 
ಮಂತ್ರಾಲಯವೇ ಇದಕೆ ಸ್ಥಾನ	ಅ. ಪ
ಹರುಷದಿಬಂದು ನದಿಯಲಿಮಿಂದು 
ಗುರುದಯದಿಂದೆಂದೂ
ಮರೆಯೆವು ಈ ಆನಂದವನೆಂದೂ 
ಸಾರುವಭಕುತರೆ ಇದಕೆ ಸಾಕ್ಷಿ	1
ಪರಿಪರಿ ಕ್ಲೇಶಪಟ್ಟು ಬರುವ ಭಕುತರು
ವರಗಳಪಡೆವುದೇ ಸಾಕ್ಷಿ
ನಾರಸಿಂಹನ ದಿವ್ಯ ಭಕುತ ಶ್ರೀ
ಪ್ರಹ್ಲಾದರಿಲ್ಲಿರುವುದೇ ಇದಕೆ ಸಾಕ್ಷಿ	2
ದೀನಭಕುತರಾಭೀಷ್ಟವ ಸಲಿಸುವ
ಘನರಾಘವೇಂದ್ರರೇ ಸಾಕ್ಷಿ
ಜಾನಕಿರಮಣ ಶ್ರೀಮೂಲರಾಮನಿಲ್ಲಿ
ಅನುಪಮ ಸೇವೆಯಗೊಳ್ವುದೇ ಸಾಕ್ಷಿ	3
							

250 ನಿಂ ಹೊರತು ಅನ್ಯರನು ನಾನರಿಯೆ

250.	ರಾಗ: ಶಂಕರಾಭರಣ	ತಾಳ: ಝಂಪೆ
ನಿಂಹೊರತು ಅನ್ಯರನು ನಾನರಿಯೆ ಗುರುವೇ
ಮಂತ್ರಾಲಯ ಧೊರೆಯೇ	ಪ
ನಿಮ್ಮ ಕಾಣದೆ ಮನಸು ತಲ್ಲಣಿಸುತಿಹುದು	ಅ.ಪ
ತುಂಗಾತೀರದಲಿರುವ ಮಂಚಾಲೆಯಲಿವಾಸ
ಜಗವೆಲ್ಲ ವ್ಯಾಪಿಸಿತು ನಿಮ್ಮ ಮಹಿಮೆಯ ಸುಪ್ರಕಾಶ
ಬಾಗಿ ಶಿರ ನಮಿಸಲು ಕಳೆವ ಮನಸಿನ ಕ್ಲೇಶ
ರಾಘವೇಂದ್ರರೆಂಬ ಪೆಸರಿನ ಮಂಚಾಲೆ ಈಶ	1
ಅಪರಾಧಿನಾನೆಂದು ಒಪ್ಪಿಕೊಳ್ಳುವೆ ಯಿಂದು
ತಪ್ಪದೆ ನೀವ್ ಬಂದು ಉಪಕರಿಸಿ ಮುಂದು
ಕುಪಿತರಾಗಲಿಬೇಡಿ ನೀವ್ ಕೃಪಾಸಿಂಧು
ತಾಪಗಳಪರಿಹರಿಪ ದೀನರಬಂಧು	2
ಕಲಿಯುಗದಿ ಅವತರಿಸಿ ಗ್ರಂಥಗಳ ರಚಿಸಿ
ಛಲದಿಂದ ಮಧ್ವಮತಸಿದ್ಧಾಂತ ಬಲಪಡಿಸಿ 
ಒಲುಮೆಯಿಂದಲಿ ನಮ್ಮ ಜಾನಕಿರಮಣ
ಮೂಲರಾಮರಪಾದ ಸೇವಿಪಾ ಸದ್ಗುರುವೇ	3
							

251 ಮಂಗಳಂ ಮಂಗಳಂ ಗುರುರಾಜರಿಗೆ

251.	ರಾಗ: ಮಧ್ಯಮಾವತಿ	ತಾಳ: ಅಟ
ಮಂಗಳಂ ಮಂಗಳಂ ಗುರುರಾಜರಿಗೆ ಮಂಗಳಂ ಮಂಗಳಂ	ಪ
ಮಂಗಳಂ ಕರುಣಾನಿಧಿಗೆ ಮಂಗಳಂ	ಅ. ಪ
ವರತುಂಗತೀರದ ಪುರಮಂತ್ರಾಲಯ
ಕ್ಷೇತ್ರದಿ ನೆಲೆಸಿಹ ಪ್ರಹ್ಲಾದರಿಗೆ	1
ದೀನಭಕುತರ ನಿರುತದಿ ಸಲಹುವ
ಘನಬಿರುದುಪೊತ್ತ ಶ್ರೀವ್ಯಾಸತೀರ್ಥರಿಗೆ	2
ಜಾನಕಿರಮಣನ ಶ್ರೀಮೂಲರಾಮರಪಾದ-
ಧ್ಯಾನಾರಾಧಕ ಶ್ರೀರಾಘವೇಂದ್ರರಿಗೆ	3
							

252 ಮರೆ ಹೊಕ್ಕವರನು ನಿರುತದಿ ಸಲಹುವ

252.	ರಾಗ: ಶಂಕರಾಭರಣ	ತಾಳ: ಆದಿ
ಮರೆಹೊಕ್ಕವರನು ನಿರುತದಿ ಸಲಹುವ
ಗುರುವರ ನಿಮಗೆ ನಮೋ ನಮೋ	ಪ
ವರಮಂತ್ರಾಲಯಪುರದೊಳುನೆಲೆಸಿಹ
ಯತಿವರ ನಿಮಗೆ ನಮೋ ನಮೋ	ಅ. ಪ
ತುಂಗಾ ತೀರದಿ ಶೋಭಿಪ ವರಮಂಗಳಾಂಗಗೆ ನಮೋ ನಮೋ
ಕೂಗಿ ಹರಿಯನು ಕಂಭದಿ ತೋರಿದ ಪ್ರಹ್ಲಾದರಿಗೆ ನಮೋ ನಮೋ	1
ಶರಣಾಗತರನುಪೊರೆವ ಬಿರದುಪೊತ್ತ ಯತಿವರ ನಿಮಗೆ ನಮೋ ನಮೋ
ಕರುಣಾರಸಪರಿಪೂರ್ಣ ಪರಮ ಶ್ರೀವ್ಯಾಸಮುನೀಂದ್ರಗೆ ನಮೋ ನಮೋ	2
ದೀನಭಕುತರ ಸುಮ್ಮಾನದಿ ಸಲಹುವ ಜ್ಞಾನಪೂರ್ಣನಿಗೆ ನಮೋ ನಮೋ
ಜಾನಕಿರಮಣನಪಾದಭೃಂಗ ಘನರಾಘವೇಂದ್ರಗೆ ನಮೋ ನಮೋ	3
							

253 ಯತಿಯಾಗಿ ಕುಳಿತಿಹರು

253.	ರಾಗ: ಶಂಕರಾಭರಣ 	 ತಾಳ: ಅಟ	
ಯತಿಯಾಗಿ ಕುಳಿತಿಹರು ಪ್ರಹ್ಲಾದರಾಜರು
ಯತಿಯಾಗಿ ಕುಳಿತಿಹರು 	ಪ
ಸೀತಾರಾಮರಪಾದ ಆಹ್ಲಾದಿಂ ಪೂಜಿಸಲು 	ಅ. ಪ
ಕೃತಯುಗದಿ ಹಿರಣ್ಯಕನ ಪುತ್ರನಾಗಿ ಜನಿಸಿ
ನಿತ್ಯ ಶ್ರೀಹರಿಯನ್ನು ಹಿತದಿಂದ ಭಜಿಸಿ
ಪಿತನಿಂದ ಕಷ್ಟಪಟ್ಟು ರತಿಪತಿಪಿತನನ್ನು 
ಸ್ತುತಿಸಿ ಕಂಭದಿ ತೋರಿದ ಭಕ್ತಪ್ರಹ್ಲಾದರು 	1
ತ್ರೇತ ದ್ವಾಪರದಲ್ಲಿ ಭೂತಳದಲಿ ಜನಿಸಿ
ಪ್ರೀತಿಯಿಂದಲಿ ರಾಮಕೃಷ್ಣರ ಭಜಿಸಿ
ಅತ್ಯಧಿಕ ಪದವಿಯ ಪ್ರತಿಯಾಗಿ ಪೊಂದಿದ
ಭಕ್ತವಿಭೀಷಣ ಬಾಹ್ಲೀಕರಾಜರು 	2
ಕಲಿಯುಗದಲಿ ಹರಿಯ ಮಹಿಮೆಯ ಪೊಗಳಲು
ಬಲವಾಗಿ ಮರುತಮತಮಾರ್ಗವ ಪಿಡಿದು
ಮೇಲಾಗಿ ಜಾನಕಿರಮಣನ ಪೂಜಿಪ
ಚೆಲುವಮೂರುತಿ ಶ್ರೀ ರಾಘವೇಂದ್ರರೆಂಬ 	3
							

254 ರಾಘವೇಂದ್ರ ಯೆನ್ನಿರೋ

254.	ರಾಗ: ಕಮಾಚ್ 	ತಾಳ: ಆದಿ
ರಾಘವೇಂದ್ರಯೆನ್ನಿರೋ ಶ್ರೀವರ ಗುರು 
ರಾಘವೇಂದ್ರಯೆನ್ನಿರೋ 	ಪ
ರಾಘವೇಂದ್ರಯೆಂದು ಭಕುತಿಲಿ ಕರೆದರೆ
ಅಘನಾಶನವೆಂದು ನಂಬಿ ಬದುಕಿರೋ 	ಅ. ಪ
ಮಾಯಾದ ಸಂಸಾರ ವಾರಿಧಿಯಲಿ ಪುಟ್ಟಿ
ಕಾಯವು ಸ್ತಿರವೆಂದು ನಂಬಿ ಕೆಟ್ಟು
ಆಯಾಸ ಪಡುವರ ಉಪಾಧಿ ಕಳಿಯೆಂದು
ತೋಯಜಾಕ್ಷನ ಪಾದದ್ವಂದ್ವ ಭಜಿಸುವ 	1
ಸಂತಾನ ಸಂಪತ್ತು ಭಕ್ತಿವೈರಾಗ್ಯವ
ಸಂತೋಷದಿಯಿತ್ತು ಸಲಹುವ ಧೊರೆಯ
ಸಂತತ ಭಕುತರ ಸಂತಾಪಗಳ ಕಳೆದು
ನಿತ್ಯ ಸನ್ನಿಧಿ ಸೇವೆಯಿತ್ತು ಸಂರಕ್ಷಿಸುವ 	2 
ಮನುಜರ ತಪ್ಪುಗಳ ಮನ್ನಿಸಿ ಸಲಹುವ
ಭಾನುಕುಲಾಂಬುಧಿ ಸೋಮನಾದ ಶ್ರೀ
ಜಾನಕಿರಮಣನ ಗುಣಪರಿಪೂರ್ಣನ
ಮೌನದಿ ಧ್ಯಾನಿಪ ರಾಘವೇಂದ್ರ ಗುರು 	3
							

255 ಸಾರ್ಥಕವಾಯಿತು ಈ ನರಜನ್ಮ

255.	ರಾಗ: ಬಿಲಹರಿ 	ತಾಳ: ಆದಿ
ಸಾರ್ಥಕವಾಯಿತು ಈ ನರಜನ್ಮ ಸಾರ್ಥಕವಾಯಿತು 	ಪ
ಸಾರ್ಥಕವಾಯಿತು ಸದ್ಗತಿ ಪಡೆಯಿತು
ಆರ್ಥಿಯಿಂದಲಿ ನಮ್ಮ ಗುರುಗಳ ಕಂಡು 	ಅ ಪ
ಪಾದಗಳು ನಿಮ್ಮ ಯಾತ್ರೆಯ ಮಾಡಿತು
ಉದ್ಧರಿಸು ಎಂದು ಕರಗಳು ಮುಗಿಯಿತು
ಮೋದದಿಂ ಕಂಗಳು ದರುಶನ ಪಡೆಯಿತು
ಮಧ್ವನಾಮವನ್ನು ನಾಲಿಗೆ ಜಪಿಸಿತು 	1
ಎನ್ನ ಕಿವಿಗಳೆರಡು ನಿಮ್ಮ ಚರಿತೆಯ ಕೇಳಿತು
ಎನ್ನ ಮನಸು ನಿಮ್ಮಲ್ಲಿ ಸ್ಥಿರವಾಗಿ ನೆಲೆಸಿತು
ಎನ್ನ ದೇಹವು ನಿಮ್ಮ ಸೇವೆಯ ಮಾಡಿತು
ಎನ್ನ ಪೂರ್ವಾರ್ಜಿತ ಕರ್ಮ(ಪಾಪ) ತೊಲಗಿತು ಇಂದು 	2
ಕರುಣಿಗಳರಸನೆ ಕರಗಳೆರಡು ಮುಗಿದು
ಶಿರಬಾಗಿ ನಮಿಸುವೆ ಪೊರೆಯುವ ಧೊರೆಯೆಂದು
ಮಾರಪಿತ ಶ್ರೀಜಾನಕಿರಮಣನ
ತೋರಿದ ಗುರು ಶ್ರೀ ರಾಘವೇಂದ್ರರ ಕಂಡು 	3
59. ತಂದೆವರದಗೋಪಾಲವಿಠಲ 
							

256 ರೋಗವನು ಪರಿಹರಿಸೊ ಗುರು ರಾಘವೇಂದ್ರಾ

256.	ರಾಗ: [ಕಾಪಿ]	ತಾಳ: [ಖಂಡಛಾಪು]
ರೋಗವನು ಪರಿಹರಿಸೊ ಗುರು ರಾಘವೇಂದ್ರಾ ಪ
ಕರಮುಗಿದು ಬಿನ್ನೈಪೆ ಧೀರ ಯೋಗೇಂದ್ರ ಪಾಲಾ 	ಅ.ಪ.
ಅರಿಯದಾ ತರಳ ತನ್ನ ನಿಜಮತಿಯಿಂದ ದೂಷಿಸಲಿಲ್ಲ 
ಪರರ ಮಾತನು ಕೇಳಿ ದೂಷಿಸಿದನಲ್ಲದೇ 	1
ಏನ ಪೇಳಲಿ ಗುರುವೆ ನಿನ್ನ ಸಮಕರುಣಿಗಳು 
ಇನ್ನುಂಟೆ ಜಗದೊಳು ಕೇಳಿದ ಕಾರಣದಿ ಬಂದು ಬಿನ್ನೈಸಿದೆ 	2
ಬಾಲಕನು ಪರಿಪರಿಯಿಂದ ಪೀಡಿತನಾಗಿ ಬೆಂಡುಬೆಂಡಾದಾ
ತಂದೆವರದಗೋಪಾಲವಿಠ್ಠಲ ಪ್ರೀಯಾ 	3
							

257 ಸ್ವಾಮಿ ಕಾಯೋ ಕರುಣೀ

 257.	ರಾಗ: [ವರಾಳಿ]	ತಾಳ: [ತ್ರಿಪುಟ]
ಸ್ವಾಮಿ ಕಾಯೋ ಕರುಣೀ 	ಪ
ನಮ್ಮ ಗುರು ರಾಘವೇಂದ್ರ ಘೃಣಿ 	ಅ.ಪ.
ನಿನ್ನ ಯೋಚಿಪ ಮಾರ್ಗ ನಾನರಿಯೆ ಧೀರಾ 
ಯನ್ನ ವಿಚಾರಿಸದೆ ಇರುವುದು ಥರವೇ 	1
ನಿನ್ನ ಪೋಲುವ ಕರುಣಿಗಳೆ ಇಲ್ಲೆಂಬೋರು
ನಿಜವಾದರೆ ಕರುಣಿಸಿ ಕಾಯೋ ಗುರುವೇ 	2
ನೊಂದೆನಯ್ಯ ಬೆಂದೆನಯ್ಯ ಬಂಧನದೊಳು ಸಿಲ್ಕಿ ಗೋವಿಂದಾ
ತಂದೆವರದಗೋಪಾಲವಿಠ್ಠಲನ ಕಂದಾ 	3
60. ತಂದೆಪುರಂದರವಿಠಲ
							

258 ಏನ ಬೇಡಲಿ ನಿನ್ನ ಬಳಿಗೆ ನಾ ಬಂದು

258.	ರಾಗ: ಕಾಂಬೋಜಿ	ತಾಳ: ಝಂಪೆ
ಏನ ಬೇಡಲಿ ನಿನ್ನ ಬಳಿಗೆ ನಾ ಬಂದು
ಮಾನದಿಂ ಸಲಹಯ್ಯ ಗುರು ರಾಘವೇಂದ್ರ	ಪ
ಮನ ಹೊಲೆಗಲಿಸಿತು ಮನವು ಮೈಲಿಗೆಯಾಯ್ತು
ನೆನೆಯಬಾರದದು ಎಲ್ಲ ಬಯಸುವುದು ಕೇಳೊ
ಅನುಭವಿಸಲಾರೆನೊ ಅದರ ಕಾಟಗಳನ್ನು
ಎನ್ನ ಉಬ್ಬಸವನು ಯಾರಲಿ ಪೇಳುವೆನೊ	1
ನೀರಲಿನೆನೆಯದು ಮನವೆಂಬಹೊಲೆಬಟ್ಟೆ
ಉರಿವಬೆಂಕಿಯಲಿ ಉರಿಯಲೊಲ್ಲದು
ಪರಿಪರಿಬಗೆಯಲಿ ಕರುಣಿಸುವುದು ಎನ್ನನು
ಪರಮಪುರುಷ ನಿನ್ನಮೊರೆಹೊಕ್ಕೆ ನಾನೀಗ	2
ಒಂದುಕ್ಷಣವಾದರು ಹರಿಯನೆನೆವೆನೆನಲು
ಒಂದಲ್ಲ ಎರಡಲ್ಲ ಹಲವು ತಾಪತ್ರಯವು
ತಂದೆಪುರಂದರವಿಠಲಗತಿಪ್ರೀತಿವಂತನೆ
ಒಂದುಪಾಯವಾದರೂ ಪೇಳಬಾರದೆ ಎನಗೆ	3
							

259 ಗುರು ರಾಘವೇಂದ್ರ ನಿನಗೆ ಧರಣಿ ಮಂಡಲದೊಳಗೆ

259.	ರಾಗ: ಸಾವೇರಿ	ತಾಳ: ಆದಿ
ಗುರು ರಾಘವೇಂದ್ರ ನಿನಗೆ ಧರಣಿಮಂಡಲದೊಳಗೆ
ಸರಿಗಾಣೆ ಸರಿಗಾಣೆನೊ	ಪ
ಕರೆಯಲು ಒಮ್ಮೆ ನೀ ತಡಮಾಡದೆ ಬಂದಿ
ಕರುಣದಿ ನಿನ್ನ ದಿವ್ಯಮೂರುತಿ ತೋರಿದಿ	ಅ.ಪ
ತುಂಗವಾದ ತುಂಗಾತೀರದಿ ಶೋಭಿಪ
ಮಂಗಳಪ್ರದನೆ ಮಂಗಳಾಕಾರ
ರಂಗನಪ್ರೀಯನೆ ಅಂತರಂಗದಿ ಬಂದು ನೀ
ಗಂಗೆಯ ಕೊಡಲು ಆಗ ನೀ ಒಪ್ಪಿದಿ
ಹಿಂಗದೆ ಎನ್ನೊಡ ತಡಮಾಡದೆ ನೀ
ಸಂಗಡವಿದ್ಹರಿಶೇಷವ ಭುಂಜಿಸಿ
ಸಂಕಟಪಡುವಂಥ ಕಂದಗೆಸೂಚಿಸಿ
ಕಂಗೆಡದಂತೆ ಮಾಡಿ ಗಂಗೆಗೆಪೋದೆಯೊ	1
ಎನ್ನಲಿ ಕರುಣಿಸಿ ನಿನ್ನ ಧ್ಯಾನವ ಎನಗೆ ಕೊಡಿಸಿ
ಎನ್ನನು ಪಾವನ್ನಮಾಡಿ ನಾ ಧನ್ಯನಾಗುವಂತೆ ಮಾಡಿ
ಘನ್ನ ಶ್ರೀಸುಧೀಂದ್ರಕರವರಪುತ್ರನೆ
ಮನ್ನಿಸಿ ಪೊರೆದೆಯೊ ಭಕ್ತಪ್ರಹ್ಲಾದನೆ
ಎನ್ನಪರಾಧವ ನೋಡದೆ ಲಾಲಿಸಿ
ಎನ್ನನು ಕರುಣಕಟಾಕ್ಷದಿ ವೀಕ್ಷಿಸಿ
ಇನ್ನಿರು ಎನ್ನಂತರಂಗದಿ ಎಂದೆಂದು
ನಿನ್ಹೊರತನ್ಯರ ಪೊರೆವರ ನಾ ಕಾಣೆ	2
ಧರೆಯೊಳು ಮೆರೆಯುವ ಸುಜನರರಕ್ಷಕ ನೀನು
ತರತರವರಗಳ ಕರೆದುಕೊಡುವೆಯೊ
ಶರಣರಪೊರೆವಂಥ ಕರುಣಾಸಾಗರ ನೀನು
ಶರಣೆಂಬೆ ನಿನಗಯ್ಯ ನಿನ್ನ ಪಾದಯುಗಳಕೈಯ್ಯ
ಎರಡೊಂದುಗುಣದಲಿ ರಜತಮಬಿಟ್ಟನೆ
ಎರಡೆರಡೈದು ಭಕುತಿಲಿ ನಿರತನೆ
ಮರುತನಮತದೊಳು ನಿರುತದಿಶೋಭಿಪ
ಧೊರೆ ತಂದೆಪುರಂದರವಿಠಲನದೂತನೆ	3
							

260 ಗುರುವೆ ಸಲಹೊ ಎನ್ನ ಶ್ರೀ ರಾಘವೇಂದ್ರ

260.	ರಾಗ: ಯದುಕುಲಕಾಂಬೋಜಿ	ತಾಳ: ಅಟ
ಗುರುವೆ ಸಲಹೊ ಎನ್ನ ಶ್ರೀ ರಾಘವೇಂದ್ರ	ಪ
ಗುರುವೆ ಸಲಹೊ ಎನ್ನ ಸುಲಲಿತಮಹಿಮನೆ
ಚರಣದಲಿ ಬಿದ್ದೆರಗುವೆನಯ್ಯ
ಕರೆದು ಮಮತೆಯ ಮಾಡಿ ಪೊರೆಯೊ	ಅ.ಪ
ಊರುಊರಿಗೆ ತಿರುಗಿ ಬಳಲಿ ಬೇಸರಗೊಂಡೆ
ಧೀರ ನಾ ಸ್ಥಿರವಾಗಿ ಇರುವ ಅನುಕೂಲ ಕಾಣೆ
ಸೇರಿದೆನೊ ನಿನ್ನ ಬೇಡುವೆ ಮುದದಿ
ದೂರಮಾಡದೆ ಘನ್ನ ಚಿರಕಾಲ ನೊಂದೆ
ಮಾರಮಣನ ದಿವ್ಯಪಾದಕಮಲವ ತೋರಿ ವಿ-
ಚಾರದಲ್ಲಿರಿಸೊ ಅವನ ಮರೆಯನೊ ಎನ್ನಾ-
ಪಾರವಾದ ಸಂಸಾರಭಾರವ ಪರಿಹರಿಸೊ
ಸುಪ್ರಸನ್ನ ವದನದಿ ಧಾರುಣಿಯೊಳು ನಿನ್ನ ಜೋಡಿಗಾಣೆನೊ
ಚಾರು ತುಂಗಾತೀರವಾಸ	1
ಬಡವರೊಡೆಯ ನಮ್ಮ ಕೃಷ್ಣರಾಯನದಾಸ
ಕಡುದಯಾಕರ ನಿನ್ನ ಅಡಿಗಳಿಗೊಂದಿಪೆ
ದೃಢಭಕುತಿಯ ಬಯಸುವೆ ಇದೊಂದೆವರ ಬೇಗ
ನೋಡಿ ಪ್ರೇಮದಿ ನಡೆಸುವಭಾರ ನಿನ್ನದೊ ಈಗ
ಬಿಡಬಲ್ಲದೇ ಯತಿವರ ನಿನ್ನವನಲ್ಲವೆ
ಕಡಿಯೊ ಎನ್ನಯಪಾಶವ ತರಿದುದುರಾಸೆಯ
ಮಡದಿಮಕ್ಕಳ ಪಡೆದ ಭಾಗ್ಯವ
ಒಡಹುಟ್ಟಿದವರ್ಮೇಲ್ ನೆಂಟರಿಂದಲಿ 
ಪಟ್ಟೆನಲ್ಲದೆ ಸುಖಿಸಲಿಲ್ಲವೊ ಬಟ್ಟಬಯಲೊಳು ಸೇರಿದೆನ್ನಯ	2
ನಾಮಾಡಿದಪರಾಧ ಕ್ಷಣಕೆಸಾವಿರವಯ್ಯ
ನೀಮಾಡಿದುಪಕಾರಕೆ ಎಣೆಗಾಣೆನೊ
ನಾಮ ವೈಕುಂಠಪತಿಯ ಸ್ಮರಣೆಯನಿತ್ತು ನಾ
ಕ್ಷೇಮಪೊಂದುವ ದಾರಿಯ ಕರುಣಿಸಿ ತೋರಿ ಪರಂ-
ಧಾಮ ರುಕ್ಮಿಣಿರಮಣ (ಆ)ಭರಣದಿಂದೊಪ್ಪುತ
ಭಾಮೇರ ಒಡಗೂಡಿ ಎನ್ನ ಮುಂದೆ ನಲಿವಂತೆ ಮಾಡೊ
ಸಾಮಾದಿವೇದಗಳ ತಂದಿತ್ತಾಮಹಾತ್ಮನ ತುತಿಸಬಲ್ಲೆನೆ
ಸಮಾನರಹಿತ ಸನ್ಮತಿಯ ಪಾಲಿಸೊ
ತಂದೆಪುರಂದರವಿಠಲನದಾಸ	3
							

261 ನಮಿಸುವೆ ಗುರುವೆ ನಿನಗೆ ನಮಿಸುವೆ

261.	ರಾಗ: ಶಂಕರಾಭರಣ	ತಾಳ: ಆದಿ/ಛಾಪು/ಅಟ
ನಮಿಸುವೆ ಗುರುವೆ ನಿನಗೆ ನಮಿಸುವೆ	ಪ
ನಮಿಸುವೆ ಗುರು ರಾಘವೇಂದ್ರ ಎನ್ನ
ಕ್ಷಮಿಸಬೇಕಯ್ಯ ನೀನೀಗ ಅಹಂ-
ಮಮತೆ ಹಿಂಗದು ಸಮಚಿತ್ತ ಬರದು
ವಿಮಲಜ್ಞಾನ ಹೇ ಕರುಣಿಸಬೇಕಯ್ಯ	ಅ.ಪ
ತುಂಗಾತೀರದಲಿವಾಸ ಬಹು
ಮಂಗಳವಯ್ಯ ಪ್ರದೇಶ ನಮ್ಮ
ರಂಗನದಾಸ ವಿಶೇಷ ನಿನ್ನ
ಸಂಗಡ ಮಾಡೋರುವಾಸ ||ಆಹ||
ಕಂಗೆಟ್ಟು ನಿನ್ನಲಿ ಬರುವ ಭಕುತರಿಗೆ
ತುಂಗಸಂಕಟ ಕಳೆದು ಮಂಗಳ ನೀಡುವ	1
ಕರೆದಾಗಲೆ ನೀನು ಬರುವಿ ಬಿರುದು
ಕರುಣನೆಂದು ಧರಿಸಿರುವಿ ನಿನ್ನ
ಚರಣಶರಣರನು ಪೊರೆವಿ ಬಂದು
ಧರೆಯೊಳು ಅಲ್ಲಲ್ಲೆ ಇರುವಿ ||ಆಹ||
ವರಜಟೆಗಳಪೊತ್ತು ಬದರಿಯ ಮನೆಮಾಡಿ
ನಿರುತವು ಶೋಭಿಪ ಗರುಡವಾಹನದಾಸ	2
ಮಧ್ವಮತವೆಂಬಅಭ್ಧಿಯಲ್ಲಿ	
ಉದ್ಭವಿಸಿದ ದಿವ್ಯಜ್ಯೋತಿ ಶುದ್ಧ
ಸತ್ತ್ವ ಗುಣಗಳ ರಾಶಿ ಪರ-
ತತ್ತ್ವ ವಿಷಯ ಉಪದೇಶಿ ||ಆಹ||
ಅದ್ಭುತಚರಿತನೆ ಆಪಾರಮಹಿಮನೆ
ವಿಶ್ವನಾಮಕ ತಂದೆಪುರಂದರವಿಠಲನದಾಸ	3
							

262 ರಾಘವೇಂದ್ರ ಗುರುವೆ

262.	ರಾಗ: ಆನಂದಭೈರವಿ	ತಾಳ: ಅಟ
ರಾಘವೇಂದ್ರ ಗುರುವೆ ರಾಗದ್ವೇಷಾದಿಗಳು 
ನೀಗುವಂತೆ ಮಾಡೊ ಭಾಗವತರಪ್ರಿಯ	ಪ
ನೆಲೆಯಾಗಿ ಇರುತಿಪ್ಪೆ ವರಮಂತ್ರಾಲಯದಲಿ
ನಲಿದು ಕರೆಯಲು ನಿನ್ನ ಒಲಿದು ನೀನಡೆತರುವಿ	1
ನಿನ್ನ ನಾನರಿಯೆನೊ ಮನ್ನಿಸಿ ಬಂದ ಬಗೆಗೆ
ಉನ್ನಂತಕಾರಣ ಭಿನ್ನವಿಲ್ಲದ ಕರುಣ	2
ತಪ್ಪುಗಳ ಎನ್ನ ವಿಪರೀತಗಳ ಮರೆತು
ಅಪಾರ ಕೃಪೆಯಗೊಂಡ ಸರ್ಪಶಯನನ ದಾಸ	3
ದಾಸನುನಾನೆಂದು ಏಸು ಮರ್ಮವ ತೋರಿ
ಶ್ರೀಶನಪಾದದಲಿ ಲೇಸು ಭಕುತಿಕೊಟ್ಟು	4
ಇಷ್ಟದಾಯಕ ಎನ್ನನಿಷ್ಟವತಾಳಿನೀ
ಮುಷ್ಟಿಯಮುರಿದ ಎನ್ನಿಷ್ಟದೈವವ ತೋರೊ	5
ಎಂದಿಗು ಕುಂದದ ತುಂಗಾತೀರದಲಿರ್ಪ
ಬಂದಭಕುತರಿಗೆ ಹಿಂಗದೆ ವರವೀವ	6
ಯತಿಗಳೊಳಗೆ ಶ್ರೇಷ್ಠನೆ ಯದುಪತಿ ಪ್ರಿಯನೆ
ಸ್ಮøತಿಗಳು ಆಗೋಹಾಗೆ ಮಾಡಿದ ಧೀರನೆ	7
ಪೊಡವಿಯಲಿ ತುಂಬಿತೊ ನಿನ್ನ ಪೆಸರು ಕೇಳೊ
ಎಡಬಿಡದೆ ಎನ್ನಲಿ ನಲಿಯುತಿರಬೇಕೊ	8
ಪರಪುರುಷ ತಂದೆಪುರಂದರವಿಠಲನ
ನಿರುತಪೂಜಿಪ ನಿನ್ನ ಅಡಿಗೆ ನಮಿಸುವೆ	9
61. ತಂದೆವೆಂಕಟೇಶವಿಠಲ 
							

263 ಅಪಾರಕೃಪಾಕರ ತಪೋವಿತ್ತಪಾವರ

263.	ರಾಗ: ಕಾಪಿ/ಜಿಂಗಲಾ	ತಾಳ: ಆದಿ
ಅಪಾರಕೃಪಾಕರ ತಪೋವಿತ್ತಪಾವರ	ಪ
ಭೂಪರದನಜಾ ತಾಪಗಾಲಯ ಸ-
ರ್ವಾಪರಾಧಾಪಹ ಪ್ರತಾಪ ಮಹಿಮಾಪಯೋಧೆ	ಅ.ಪ
ನಳಿನಾಕ್ಷಿ ತುಳಸೀಸರ ವರ ಮಾಲಿಕೋಜ್ವಲಕಂಧರ
ಕಾಳೀಶಸಮಯ ಜಲ ಜಾಳೀಪರಾಗೋತ್ಥ 
ಧೂಳೀ ಸುಧಾಳೀ ನೀಕೇಳೀರತ ಗಾಳೀಯುತ 	1
ವಂದಿತಬೃಂದಜನ ಸುರಮಂದಾರ ಬೃಂದಾವನ
ಮಂದೀರಸಾಧಿತ ಪರಂಧಾಮಸಿದ್ಧಾಂತ 
ಸಿಂಧೂರಾಕೇಂದೂ ಕರ್ಮಂದಿ ರಾಘವೇಂದ್ರವರ	2
ಶ್ರೀ ತಂದೆವೆಂಕಟೇಶವಿಠಲ ಶ್ರೀತಾನುದಾಸಾಧಿಶಾ
ಖ್ಯಾತಾ ಮಂತ್ರಾಲಯಾದ್ಭೂತನಿಕೇತನ 
ದೂತ ಹೃದ್ವ್ಯಥಾಪ ಧೂತ ನಿಶೀಥಕರ	3
ಭೂಪ ರದನಜಾ ತಾಪಗಾಲಯ=ಭೂಮಿಯೊಡೆಯ
 ವರಾಹ ದೇವರ ಕೋರೆದಾಡೆಗಳಿಂದ ಉದ್ಭವಿಸಿದ 
 ತುಂಗ-ಭದ್ರಾತೀರ ನಿವಾಸಿ; ಕಾಳೀಶ 
 ಸಮಯ=ವಾಯುದೇವರ ಮತ; ಜಲ ಜಾಳೀ 
 ಪರಾಗೋತ್ಥ ಧೂಳೀ ಸುಧಾಳೀ ನೀಕೇಳೀರತ=ಸುಧೆಗೆ 
 ಪರಿಮಳವನಿತ್ತವರು; ಸಾಧಿತ ಪರಂಧಾಮ 
 ಸಿದ್ಧಾಂತ=ಮುಕ್ತಿಯನ್ನು ದೊರಕಿಸುವ ವಾಯುಮತ; 
 ಸಿಂಧೂ ರಾಕೇಂದು=ಸಮುದ್ರಕ್ಕೆ ಪೂರ್ಣಚಂದ್ರನಂತೆ; 
 ಶ್ರೀತಾನುದಾಸಾಧಿಶಾ=ಸೇವಕರ ಹೃದಯದ ವ್ಯಥೆಯನ್ನು 
 ಚೆನ್ನಾಗಿ ತಂಪಾಗಿಸುವ ಚಂದ್ರ; 
 ಹೃದ್ವ್ಯಥಾಪ=ಹೃದಯದ ತಾಪ; ನಿಶೀಥಕರ=ಚಂದ್ರ;
							

264 ಆರ್ತನಾಭೀಷ್ಟವನು ಪೂರ್ತಿ ಮಾಡೋ

264.	ರಾಗ: ಬೇಗಡೆ /ಕಾಂಬೋಜಿ	ತಾಳ: ಝಂಪೆ
ಆರ್ತನಾಭೀಷ್ಟವನು ಪೂರ್ತಿ ಮಾಡೋ	ಪ
ಕಾರ್ತಸ್ವರಾಭವಪುಸ್ಫೂರ್ತಿ ಕೊಟ್ಟೆನಗೆ	ಅ.ಪ
ಏಸೇಸು ವಿಧದಿ ಭವಕ್ಲೇಶ ಸಮನಿಸಿ ಮನೋ-
ಲ್ಹಾಸಗಳನನವರತ ಹ್ರಾಸಗೈಸುತಲಿ
ಲೇಸುನಿನ್ನಯ ಸ್ಮರಣೆಗಾಸೆಯಾಗದ ತೆರದಿ
ಮೋಸಪಡಿಸುವ ಕಲ್ಯಾವೇಶವನು ಬಿಡಿಸಿ	1
ಬಂದೆ ಪ್ರಾಕೃತಬಾಧೆಯಿಂದ ಮನನೊಂದು ಎಳ-
ಗಂದು ತಾಯಿಯ ಕಾಣದಂದು ಕಳೆಗುಂದಿ
ಹಿಂದೆಮುಂದರಚುತ ಸಂಬಂಧಿಗರ ಕಾಣದಲೆ 
ಬೆಂದೊಡಲ ಕೊಡಹಿ ತಾಯ್ಮಂದಿರವ ಹೋಗುವಂತೆ	2
ಆದುದಾಯಿತು ಪೂರ್ಣಬೋಧರ ಸದಾಗಮ ಪ್ರ-
ಮೋದಮಾರ್ಗವ ತೋರಿ ಸಾಧುವರರಾ 
ಪಾದಧೂಳಿಯ ಸುಪ್ರಸಾದ ಕರುಣಿಸಿ ಭವದ 
ಬಾಧೆಯನು ಬಿಡಿಸೊ ಪ್ರಹ್ಲಾದÀಗುರುವೇ	3
ಏನು ಕಾರಣ ಕೈಯ ನೀನು ಪಿಡಿಯದಲಿರುವೆ 
ಪ್ರಾಣರಾಯನ ಭಕ್ತಾಗ್ರಣಿಯೆ ಗುಣಮಣಿಯೇ 
ದೀನಜನವತ್ಸಲನೆಂದಾನು ನಂಬಿದೆನಯ್ಯ 
ಜ್ಞಾನದಾನವ ಕೊಡೊ ಮಹಾನುಭಾವ	4
ತುಂಗಾಸುವೇಶ್ಮಾಂತ ರಂಗದೊಳು ನೀ ನಿಂತು 
ಭಂಗುರದ ವಿಷಯವಿಷ ಭಂಗಿಸುತಲನಿಶಾ 
ಅಂಗಜನ ತಂದೆವೆಂಕಟೇಶವಿಠಲನ ಚರಣ 
ಅಂಗುಲೀನಖದ್ಯುತಿ ಹೃದಂಗಣದಿ ತೋರೋ	5
ಕಾರ್ತಸ್ವರಾ ಭವಪುಸ್ಫೂರ್ತಿ=ಬಂಗಾರದಂತೆ 
ಪ್ರಕಾಶಮಾನವಾದ ದೇಹ; 
ಹ್ರಾಸಗೈಸು=ನಾಶ ಮಾಡು; 
ಎಳಗಂದು=ಹೊಸದಾಗಿ ಹುಟ್ಟಿದ ಕರು; 
ತಾಯ್ಮಂದಿರ=ತಾಯಿಯ ಸಮೀಪ; 
ಸುವೇಶ್ಮಾ=ಸುಂದರವಾದ ಮನೆ; 
ಭಂಗುರ=ಬೇಗನೆ ನಾಶ ಹೊಂದುವ; 
ಅಂಗುಲೀ ನಖದ್ಯುತಿ=ಬೆರಳುಗುರಿನ ಕಾಂತಿ;
							

265 ಕಾಲವು ಮೀರಿತು ಕಾಯದಿಹುದು ಥರವೇ

265.	ರಾಗ: ಕಮಾಚ್	ತಾಳ: ಆದಿ
ಕಾಲವು ಮೀರಿತು ಕಾಯದಿಹುದು ಥರವೇ ಮಂತ್ರಾಲಯ ಪ್ರಭುವೇ	ಪ
ಕಾಲಬಲದಿ ವಸುಧಾಲತಾಂಗಿಯರ 
ಲೋಲುಪತೆಗೆ ಮನ ಮೇಳವಿಸಿತು ಹಾ	ಅ.ಪ
ಭೂರಿಯಹಮ್ಮಮಕಾರದಿ ಧರ್ಮವಿಚಾರಗೈಯ್ಯದಪಚಾರಿಸುತಾ
ವೀರವೈಷ್ಣವರಸಾರಿ ವಾಯುಮತಸಾರವರಿಯದೆ ವಿಹಾರಿಸುತ
ಘೋರೈಸುವ ಸಂಸಾರಕಾಂತಾರದಿ ತಾರಿದೆ ದೀನೋದ್ಧಾರಿ ವಿಚಾರಿಸೋ	1
ಭೂಪತಿಜಾತಟಸ್ಥಾಪಿತ ಸದ್ಮ ಶ್ರೀಪ್ರಹ್ಲಾದ ಪ್ರತೀಪಜನೇ
ಶ್ರೀಪಾದಗುರುಪ್ರಾಪುತ ಜ್ಞಾನ ಸುಧಾಪರಮತಿಕೃತ ದೀಪಿಕನೇ
ತಾಪತ್ರಯದಹಿತಾಪತ್ಯನು ನಾ ನೀ ಪತಿಕರಿಸದೆ ಕಾಪಥಕಳೆವರೆ	2
ಶಿಷ್ಟಯಮಿಕುಲೋತ್ಕøಷ್ಟ ಹೃನ್ಮಧ್ಯನಿವಿಷ್ಟ ತಂದೆಶ್ರೀವೆಂಕಟೇಶಾ
ವಿಠಲ ಸೇವಾನಿಷ್ಠ ಆನತಪ್ರದೇಷ್ಟ ಕೃಷ್ಣ ರಾಘವ ವ್ಯಾಸ
ಹೃಷ್ಟಚರಣಸುಮ ಷಟ್ಪದ ಕರ್ಮಭ್ರಷ್ಟನ ಪೊರೆ ಸ್ಮಿತದೃಷ್ಟಿಯ ಬೀರಿ	3
ಅಪಚಾರಿಸುತ=ಹೀಯಾಳಿಸುತ; 
ಸಂಸಾರ ಕಾಂತಾರದಿ ತಾರಿದೆ=ಸಂಸಾರವೆಂಬ 
ಅಡವಿಯಲ್ಲಿ ಸೊರಗಿದೆ; ಪತಿಕರಿಸದೆ=ದಯತೋರದೆ; 
ಕಾಪಥ=ಕೆಟ್ಟ ದಾರಿ; 
ಶಿಷ್ಠಯಮಿ=ಶಿಷ್ಠ ಯತಿ; 
ನಿವಿಷ್ಠ=ಸೇರಿದ; 
ಪ್ರದೇಷ್ಟ=ಇಷ್ಟಪ್ರದ; ಹೃಷ್ಟ=ಆನಂದದಾಯಕ; 
ಸ್ಮಿತ ದೃಷ್ಟಿ=ಮುಗುಳು ನಗೆಯಿಂದ ಕೂಡಿದ ದೃಷ್ಟಿ;
							

266 ಗುರು ರಾಘವೇಂದ್ರರಾಯನೆ ಬಾರೋ

266.	ರಾಗ: ಫರಜು	ತಾಳ: ಆದಿ
ಗುರು ರಾಘವೇಂದ್ರರಾಯನೆ ಬಾರೋ
ಕರುಣವ ಬೀರೋ ತವರೂಪ ತೋರೋ	ಪ
ಶ್ಲೋಕ 
ಶ್ರೀ ಮಧ್ವಾಖ್ಯ ಸುಮಾರುತ ಸುರಸ್ತೋಮಾರ್ಚಿತಾಂಘ್ರಿದ್ವಯ
ಪ್ರೇಮಾಂಭೋನಿಧಿ ವ್ಯಾಸಕೃಷ್ಣ ನೃಹರೀ ರಾಮಾದಿ ರೂಪಾಹ್ವಯ
ಭೂಮ್ಯಾಕಾಶ ದ್ವಿಸಪ್ತಲೋಕಮಹಿತ ಹೇಮಾಂಡವ್ಯಾಪ್ತಾದ್ವಯ
ಶ್ರೀಮಾನಿತಮಾನದಾಂಘ್ರಿಭ್ರಮರಂ ಶ್ರೀಮಂತ್ರಸದ್ಮಂ ಭಜೇ
ಪದ
ಕರ್ಮ ಭುವಿಯ ಕುಂಭಕೋಣದಿ | ಜನ್ಮ ತಾಳಿದಿ | ವೇಣಿವೆಂಕಟಾಖ್ಯದಿ |
ಮರ್ಮವರಿತು ವಿಷ್ಣುಧ್ಯಾನದಿ | ದೈನಂದಿನದಿ | ಪುಣ್ಯಪರಿಪಾಕಕತದಿ|
ಕರ್ಮಗ್ರಂಥಿಯ ಹರಿದು ಮೋದದಿ | ಗುರುಪೀಠದಿ | ಸುಧೀಂದ್ರಜನಾದಿ|
ಪೇರ್ಮೆಯಿಂದಲಿ ಮಧ್ವಶಾಸ್ತ್ರಾಬ್ಧಿ | ಮೀನನೆನಿಸಿದಿ | ಅಜಾತಪ್ರತಿವಾದಿ |	1
ಶ್ಲೋಕ 
ಪೂರ್ವಾಚಲಪುಣ್ಯಕ್ಷೇತ್ರನಿಲಯಾ ಸರ್ವೋತ್ತಮೂರ್ವಿಭೃತ
ಶರ್ವಾಹಿಪ ತಾಕ್ಷ್ರ್ಯ ವೇಧ ಲಕ್ಷ್ಮೀ ಗೀರ್ವಾಣ ಸಂಸೇವಿತಾ
ನಿರ್ವಾಹಿತಸರ್ವಕರ್ಮ ಶುಭದ ಸರ್ವಸ್ಥ ಸಾರಭೋಕ್ತ
ಸರ್ವಜ್ಞಾರ್ಚಿತಪಾದಪದ್ಮಭ್ರಮರಂ ಶ್ರೀ ವ್ಯಾಸರಾಜಂ ಭಜೇ 
ಪದ
ದಂಡ ಕಮಂಡಲುಧಾರಕಾ | ದುರಿತಹಾರಕ | ಜ್ಞಾನ ಭಕ್ತಿ ವಿವರ್ಧಕ |
ಪುಂಡರೀಕಾಂಬಕಪದಕೋಕ | ನದ ಸೇವಕ ವಿವರ್ಜಿತಕಾಮ ಶೋಕ |
ಖಂಡಾರ್ಥ ವಿವೃತ್ತಿದೀಪಿಕಾ | ಗ್ರಂಥ ಕರ್ತೃಕ | ಸೀತಾರಮಣಾರಾಧಕ |
ಪಂಡಿತತಂಡಚಕೋರಕ | ಶಶಧಾರಕ ರಾಘವೇಂದ್ರನಾಮಕ |	2
ಶ್ಲೋಕ 
ವಿಷ್ವಭುಗ್ಚಾಪವಿಭಂಜನಕರಾ ಝಶಕೇತುಮತಾವರ
ಋಷಿಯಾಗ ಸುಕರ್ಮಪಾಲನ ಪರ ಇಷುಚಾಪಧೃತ ಶ್ರೀಕರ
ಹೃಷೀಕೇಶಾಭಿಧ ಮತ್ಸ್ಯಕೂರ್ಮ ಕುಧರದ್ವೇಷೀವಿಪಾಟನಕರ
ಭೈಷ್ಮೀವಲ್ಲಭಪಾದಪದ್ಮಮಧುಪಂ ವಿಭೀಷಣಂ ಪಾಹಿಮಾಂ 
ಪದ
ಅಶೇಷಪಂಡಿತ ಪಾಮರ | ಜನಕುಪಕಾರ | ಮಾಡಿದ ಉದಾರ |
ವಿಶೇಷಸನ್ಮಹಿಮ ವಾನರ | ಸನ್ಮತಸಾರ | ವಿಸ್ತ್ರುತಗೈದ ಧೀರ | 
ವಸುಧೆಯೊಳ್ ದ್ವಾದಶವತ್ಸರ | ನರಪಗಾಹಾರ | ವಿತ್ತ ಕರುಣಾಕರ |
ಶಿಶು ಚೂತರಸದೊಳು ಗತಿಸಿರ | ಲದಪರಿಹಾರ | ಗೈದ ದಯಾಪಾರಾವಾರ|	3
ಶ್ಲೋಕ
ಕೋಟ್ಯಾವಧಿಕೋಟಿಜನ್ಮಘಟಿತಾ ಪಾಪಾಟವೀಪಾವಕ
ಪಾಠೀಣಾಕೃತಿ ಕೂರ್ಮ ಕ್ರೋಢ ನೃಹರೀ ವಟು ಭೃಗುಜ ಹತತಾಟಕಾ
ಖೇಟಸ್ಕಂದವಿಹಾರಿ ತ್ರಿಪುರೋತ್ಪಾಟನ ಹಯಾರೋಹಕ
ಹಾಟಕಾಂಬರಶ್ರೀಚರಣಸೇವಕ ಗುರುರಾಟ್ ರಾಘವೇಂದ್ರಂ ಭಜೇ
ಪದ
ಗರ್ಭಿಣಿ ಪ್ರಸವಿಸೆ ಮರಳಲ್ಲಿ | ಉದಕವನಲ್ಲಿ | ತೋರಿ ಪುಳಿನಕಳಸದಲೀ |
ದುರ್ಭರಾತಪಕೆ ಕಂಗೆಡುತಲಿ | ಶಿಶುವಿರಲಲ್ಲಿ | ಬಾಧೆ ಬಿಡಿಸಿ ಚೈಲದಲೀ |
ನಿರ್ಭರದಿ ಆಮೀಷಾದಿಗಳಲ್ಲಿ | ಮಂತ್ರ ಜಲದಲ್ಲಿ | ನಿರ್ಮಿಸಿ ಪುಷ್ಪ ಕದಳೀ | 
ಸರ್ಬರ ಆನಂದ ಕಡಲಲ್ಲಿ| ಮುಳುಗಿಸುವಲ್ಲೀ| ನಿನ್ನ ಸಮರಿಲ್ಲೀಕ್ಷಿತಿಯಲ್ಲೀ|	4
ಶ್ಲೋಕ
ಸಿಂಧೂರಾಜಸುತಾಸುನೇತ್ರಾರವಿಂದಾಂಬರಸ್ಥಿತಮಣಿ
ಸಾಂದೀಪದ್ವಿಜಕುವರಪೋಷಕ ಚಿದಾನಂದಾತ್ಮ ದಿವಿಭಮಣಿ
ಸಿಂಧೂರಕ್ಲೇಶನಾಶಕ ಮಹಾನಂದತೀರ್ಥಾರ್ಚಿತಘೃಣಿ
ಬೃಂದಾರಕವಂದ್ಯನಂಘ್ರಿಶರಣಬೃಂದಾರ್ಚಿತ ಯತಿಮಣಿ
ಪದ
ತಾರತಮ್ಯಜ್ಞಾನ ಬೋಧಿಸಿ | ಶಾಸ್ತ್ರ ಶೋಧಿಸಿ | ಮಿಥ್ಯಾಸಮಯ ಖಂಡಿಸೀ |
ತಾರಕ ಹರಿಯೆಂದು ಸ್ಥಾಪಿಸಿ | ಮರುತನೊಪ್ಪಿಸಿ | ದಿಗ್ದೇಶದಿ ಮೆರೆಸೀ |
ಸಾರಿದವರಿಷ್ಟಾರ್ಥ ಪೂರ್ತಿಸಿ | ಆಶೀರ್ವದಿಸಿ ಮನ್ರೋಗೊಲಿದ ವಿಲಾಸೀ |
ನೂರೆಂಟ ಬೇಡೆನಿದನಾಲಿಸಿ | ಪಂಥ ಪಾಲಿಸಿ | 
	ಭಕ್ತಿ ಬೆಳೆಸೋಸಂನ್ಯಾಸೀ |	5
ಶ್ಲೋಕ
ಕೇಶೀಭಂಜನ ಶ್ವಸನಹೃದಯಾಕಾಶಾಭಿರಾಜಿತರವೀ
ಕ್ಲೇಶಾಜ್ಞಾನ ವಿಮೋಹ ವಿಹ್ವಲ ಭಯ ದೋಷಾಗಪಾಟನಪವೀ
ದಾಸೀಕೃತ ಸರ್ವಜೀವನಿಚಯ ಆಶಸ್ಥ ನತಶಾಂಭವೀ
ವ್ಯಾಸಾದ್ಯನಂತರೂಪಗಮಹಾಶ್ರೀಪಾದಭಜಕಂ ಭಜೇ
ಪದ
ಕೃತಮಹಾಯುಗದಲ್ಲಿ ಪ್ರಹ್ಲಾದ | ನಾಗಿ ಪಿತೃಮೇಧ |
	ಗೈಸಿ ಕಂಡೆ ಹರಿಪಾದ |
ದ್ವಿತೀಯಾದೊಳ್ ರಾಕ್ಷಸಾಧಮನಾದ | ರಾವಣವಧ | 
	ಗೈದ ರಘುಜ ಪ್ರಿಯನಾದ |
ತ್ರುತಿಯಯುಗದಿ ಬಾಹ್ಲೀಕನಾದ | ಕಲಿವಪುವಧ |
	ಕಾರಿಚರಣಷಟ್ಪದ |
ಅತಿಶಯಕಲಿಯೊಳು ಯತಿಯಾದ | ಮಾಯಾಮತವಧ |
	ಗೈದು ಮಧ್ವೇಶಗರ್ಪಿಸಿದ |	6
ಶ್ಲೋಕ
ಹೇಮಾಕ್ಷಾರಿ ಸುದಾಮ ಸುಮನಸ್ತೋಮಾಬ್ಜಮಿತ್ರೋದಯಾ
ಪ್ರೇಮಾಂಭೋರುಹಲೋಚನಯುಗ ಧೀಮಂತಜನ ಸಂಪ್ರಿಯಾ
ಸೀಮಾತೀತ ವಿಚಿತ್ರಚರ್ಯ ನಿಗಮಸ್ತೋಮಾರ್ಚಿತಾಂಘ್ರಿದ್ವಯಾ
ಭಾಮಾವರಸಾರಸಾಂಘ್ರಿಭ್ರಮರಂ ಶ್ರೀಮಂತ್ರನಿಲಯಂ ಭಜೇ
ಪದ
ಸಕಲಪುಣ್ಯಕ್ಷೇತ್ರ ಚರಿಸೀದೆ | ಕೀರ್ತಿ ಮೆರೆಸೀದೇ | ಕೃತಾರ್ಥನೆನಿಸೀದೆ|
ವಿಕಲದುರ್ಮತಗಳನೊರೆಸೀದೆ | ಭಕ್ತಿ ಬೆಳೆಸೀದೇ | ಇಷ್ಟಾರ್ಥಪ್ರದನಾದೆ|
ಮುಕುತಿಚಾರ್ವಂಗಿಯನೊಲಿಸೀದೆ | ತಾಪದಹಿಸೀದೇ | ದಾಸದೀಕ್ಷೆ ವಹಿಸೀದೆ|
ಸುಕಲಾಭಿಜ್ಞನೆ ಯೋಗವಾರಿಧೆ | ಮಂತ್ರನಿಲಯದೇ | ದೇಹತ್ಯಾಗಮಾಡಿದೆ |	7
ಶ್ಲೋಕ
ಗೋಪಾಲಕ ಗೋಪ ಗೋಪಿವನಿತಾತಾಪಾಪಹಾರಕವರ 
ತಾಪತ್ರಯನಾಶಕ ದುರ್ವಿಭಾವ್ಯ ಸ್ವರತಾ ಕೂಪಾರಸುಗುಣಾಗರ
ಕಾಪಾಲೀ ದಿವಿಜೇಶ ಚಿತ್ಸುಖಪ್ರಾಪಕ ಕ್ಷಮಾಶ್ರೀವರಾ
ರೂಪಾಭಿದಾನಂತ ಪೂರ್ಣಮಹಿಮಶ್ರೀಪಾದಭಜಕಂ ಭಜೇ
ಪದ
ಸುವಿರೋಧಿವರ್ಷ ಶ್ರಾವಣಮಾಸಾ | ಸಿತ ಕವಿದಿವಸ | 
	ಬೃಂದಾವನದಿಪ್ರವೇಶಾ |
ಪವಿಧರನಗರಿಗೆ ಸಮಭಾಸಾ | ಯಾಗಪ್ರದೇಶ | 
	ಮಂತ್ರಾಲಯಮುಕ್ತಿಕೋಶಾ |
ನವನವಮಹಿಮೆಯು ಅಹರ್ನಿಶಾ | ಉತ್ಸವ ಘೋಷ | 
	ನಮ್ಮ ತಂದೆವೆಂಕಟೇಶ |
ಶ್ರೀವಿಠಲಕೊಡಿಸುವ ವರ ಜಸ | ಸಪ್ತಶತವರ್ಷ |
	ಸಾಕ್ಷೀ ಹಯಾಸ್ಯ |	8
ಹೇಮಾಂಡ=ಬ್ರಹ್ಮಾಂಡ; 
ಶ್ರೀಮಾನಿತಮಾನದಾಂಘ್ರಿ=ಶ್ರೀಲಕ್ಷ್ಮೀದೇವಿಯಿಂದ 
ವಂದ್ಯನಾದ ಸಕಲರ ಮಾನ ಸಂರಕ್ಷಕನಾದ 
ಪರಮಾತ್ಮನ ಪಾದಗಳು; 
ಪರಿಪಾಕಕತದಿ=ಪೂರ್ವ ಪುಣ್ಯ ಪಕ್ಷದ ನಿಮಿತ್ತ; 
ಕರ್ಮ ಗ್ರಂಥಿ=ಕರ್ಮದ ಗಂಟು; 
ಊರ್ವಿಭೃತ= ಭೂಮಿಯನ್ನು ಹೊತ್ತ ವರಾಹ ದೇವರು; 
ಶರ್ವಾಹಿಪ=ಶೇಷ, ಶಿವ; 
ತಾಕ್ಷ್ರ್ಯ=ಗರುಡ; ವೇಧ=ಬ್ರಹ್ಮ; 
ಗೀರ್ವಾಣ=ದೇವತೆ; ; 
ಶಶಧಾರಕ=ಚಂದ್ರ; 
ವಿಷ್ವಭುಗ್ಚಾಪ=ಶೈವ ಧನುಸ್ಸು (ಶ್ರೀರಾಮನು ಮುರಿದದ್ದು); 
ಇಷು ಚಾಪಧೃತ=ಬಾಣ ಬಿಲ್ಲು ಹಿಡಿದಿರುವ; 
ವಿಪಾಟನಕರ=ಕೊಂದ; ವಸುಧೆಯೊಳ್ ದ್ವಾದಶ 
ವತ್ಸರ ನರಪಗಾಹಾರವಿತ್ತ=ರಾಜನ ಕೋರಿಕೆಯಂತೆ 
12 ವರ್ಷ ಕ್ಷಾಮವಿಲ್ಲದಂತೆ ರಕ್ಷಿಸಿದ; 
ಸಿಂಧೂರಾಜಸುತಾ=ಶ್ರೀ ಲಕ್ಷ್ಮೀದೇವಿ; 
ಕೇಶೀ=ಕಂಸನ ಹಸ್ತಕನಾದ ಒಬ್ಬ ದೈತ್ಯ; 
ಭಂಜನ=ನಾಶ; ಶ್ವಸನ=ವಾಯುದೇವರು; 
ವಿಹ್ವಲ=ಹತಾಶ; ದೋಷಾಗಪಾಟನಪವೀ=ದೋಷಗಳೆಂಬ 
ಬೆಟ್ಟಗಳನ್ನು ಸೀಳುವ ವಜ್ರಾಯುಧ; 
ಕಲಿ ವಪು ವಧಕಾರಿ=ಭೀಮಸೇನ; 
ಹೇಮಾಕ್ಷಾರಿ=ಹಿರಣ್ಯಾಕ್ಷನ ಶತ್ರು-ವರಾಹ ದೇವರು; 
ಸುದಾಮ=ವೈಕುಂಠ (ವೈಕುಂಠವೇ ಮನೆಯಾಗುಳ್ಳ); 
ಸುಮನ ಸ್ತೋಮಾಬ್ಜ ಮಿತ್ರೋದಯಾ=ದೇವತೆಗಳ 
ಸಮೂಹವೆಂಬ ಕಮಲಕ್ಕೆ ಉದಯ ಸೂರ್ಯನಂತಿರುವ; 
ಭಾಮಾವರ=ಸತ್ಯಭಾಮೆಯ ಗಂಡ ಶ್ರೀಕೃಷ್ಣ;; 
ಮುಕುತಿ ಚಾರ್ವಂಗಿ=ಮುಕ್ತಿ ಎಂಬ ಸುಂದರ ಕನ್ಯೆ; 
ಸುಕಲಾಭಿಜ್ಞ=ಅನೇಕ ಕಲೆಗಳಲ್ಲಿ ಪಂಡಿತರಾದವರು; 
ಪವಿಧರ ನಗರ=ಇಂದ್ರನ ಅಮರಾವತಿ; ಜಸ=ಕೀರ್ತಿ;
							

267 ಗುರುರಾಜಾ ಪಾಲಿಸೋ

267.	ರಾಗ: ಶಂಕರಾಭರಣ	ತಾಳ: ಅಟ
ಗುರುರಾಜಾ ಪಾಲಿಸೋ ಎನ್ನ ಗುರುರಾಜಾ	ಪ
ಗುರುರಾಜ ಪುರುಟಕಶ್ಯಪಜ ದಶ-
ಶಿರದಿತಿತನಯಾವರಜ ||ಅಹ|| 
ವರಬಹಲ್ಲೀಕ ಸದ್ಗುರು ವ್ಯಾಸಮಂಚಾಲಿ 
ಪುರಧೀಶ ಪೊರೆಯನಿಶ ವರಹಸುತೇವಾಸ	ಅ. ಪ
ಕರ್ಮಭುವಿಯ ಕುಂಭಕೋಣ ಕ್ಷೇತ್ರ ಧರ್ಮಾಶ್ರಯ ವಂಶೋದ್ಧರಣಮಾಡಿ 
ಉರ್ಮಿಳಾಪತಿಭ್ರಾತೃ ಚರಣಧ್ಯಾನ ಕರ್ಮಮರ್ಮಾಸಕ್ತ ನಿಪುಣ ||ಅಹ||
ನಿರ್ಮಮದಿ ವಿದ್ಯುಕ್ತ ಧರ್ಮಾಚರಣೆಯ ಮಾಡಿ 
ಪೇರ್ಮೆಯಿಂದಲಿ ಮೆರೆದೆ ದುರ್ಮಾಯಿಮತಕಾಲ	1
ಆರ್ತಭಕುತರನಾಶೀರ್ವದಿಸಿ ವಾಂಛಿತಾರ್ಥ ವರಗಳನೆಲ್ಲ ಸಲಿಸೀ ನಂದ-
ತೀರ್ಥ ಸಮಯಾಂಕಿತ ಧರಿಸೀ ಧ್ಯಾನ ಕೀರ್ತನೆಗೈವರುಪಚರಿಸೀ ||ಅಹ||
ಪಾರ್ಥಸಾರಥಿಚರಣಾರ್ಥಿ ಪುಟ್ಟಿಸಿ ಜನ್ಮ 
ಸಾರ್ಥಕಾಗುವ ಪುರುಷಾರ್ಥಪ್ರದನಾದೆ	2
ಬೃಂದಾವನಸದ್ಮವಾಸ ಭಕ್ತಬೃಂದ ವಿನಮಿತ ಯತೀಶ ಗುಣ 
ಬೃಂದ ಪ್ರಭಾಪಟಲಭಾಸ ವರಬೃಂದಾರಕಮುನಿದಾಸ ||ಅಹ||
ಕುಂದು ನಿಂದೇ ನೋಡದಂಧ ಬಧಿರ ಮೂಗ 
ವಂಧ್ಯೆಯರಿಷ್ಟನೊರೊಂದಾಗಿ ಸಲಿಸುವ	3
ಅನ್ಯ ಜನ್ಮಾರ್ಜಿತವಾದಾನಿಷ್ಟಪುಣ್ಯವ್ರಯಕೆ ಯೋಚಿಸಿದ ಅಹಿಕ-
ವನ್ನ ಕೊಡುವೆ ಬಲ್ಲೆನಿದನೊಲ್ಲೆ ಬಿನ್ನಪ ಕೇಳ್ವುದಗಾಧ ||ಅಹ||
ಮನ್ನಣೆ ಮನೆ ಧನದುನ್ನತಿ ಬೇಡೆ ಪ್ರ-
ಸನ್ನನಾಗಿ ಶ್ರೀವರನ್ನ ಭಕ್ತಿಯ ನೀಡೋ	4
ಜಾಣಕಲೌಕಪ್ರವೀಣನಾಗಿ ಪ್ರಾಣೇಶದಯ ಸಂಗ್ರಹಣಮಾಡಿ 
ತೂಣೀರಪಾಣಿ ಸತ್ಕರುಣಧಾರಿ ದ್ರೌಣಿಯೊಲ್ ಶಾಸ್ತ್ರಧುರೀಣ ||ಅಹ||
ವೇಣಿವೆಂಕಟ ವಿದ್ವತ್ಶ್ರೇಣಿಚಿಂತಾಮಣಿ 
ಕ್ಷೋಣಿದಿವಿಜಘೃಣಿ ಮುನಿಕುಲಾಂಬರದ್ಯುಮಣಿ	5
ಕ್ಲುಪ್ತಕಾಲದಿ ದೇಹವಿಟ್ಟು ಮುಂದೆ ಸಪ್ತಶತವರ್ಷ ಭವಕಟ್ಟುಬಿಡಿಸೆ 
ಗುಪ್ತಗುಪ್ತಾಚರಣೆ ತೊಟ್ಟು ವಿಶ್ವವ್ಯಾಪ್ತೋಪಾಸನೆಗೆ ಮನವಿಟ್ಟು ||ಅಹ||
ಪ್ರಾಪ್ತಕಾಲದಲ್ಲಿ ತಪ್ತಕಾಂಚನದಂತೆ 
ದೀಪ್ತಬೃಂದಾವನ ವ್ಯಾಪ್ತನಾದೆಯೊ ದೇವಾ	6
ಜಯ ಜಯ ಗುರು ರಾಘವೇಂದ್ರ ಭವಭಯ 
	ತಾಪಹರತಾರಕೇಂದ್ರ ಮಂತ್ರಾ-
ಲಯಧಾಮ ಸಿರಿರಾಮಚಂದ್ರ ಧ್ಯಾನ ದಯದಿ ಪಾಲಿಸೊ 
	ಸುಯಮೀಂದ್ರ ||ಅಹ||
ವಿಯದ್ಗಂಗಾಪಿತ ತಂದೆವೆಂಕಟೇಶವಿಠಲನ್ನ 
ದ್ವಯಪಾದಾರ್ಚಕ ನಿರಾಮಯನ ಮಾಡಿಸೊ ಎನ್ನ	7
ದಶಶಿರ ದಿತಿ ತನಯಾವರಜ=ರಾವಣನ ತಮ್ಮ ವಿಭೀಷಣ; 
ಪೊರೆಯನಿಶ=ಯಾವಾಗಲೂ ಕಾಪಾಡು; ಪೇರ್ಮೆ=ಹೆಚ್ಚಳಿಕೆ; 
ಕಾಲ=ಯಮ; ಪ್ರಭಾಪಟಲ=ಅತ್ಯಂತ ಪ್ರಕಾಶಮಾನವಾದ;
ವ್ರಯ=ಖರ್ಚು; ಅಹಿಕ=ಲೌಕಿಕ ವರಗಳು; 
ತೂಣೀರ ಪಾಣಿ=ಶ್ರೀರಾಮ; ಘೃಣಿ=ಸೂರ್ಯ; 
ದ್ಯುಮಣಿ=ಸೂರ್ಯ; 
ಕ್ಲುಪ್ತ ಕಾಲ=ನಿಗದಿಯಾದ ಸಮಯ; 
ತಾರಕೇಂದ್ರ=ಚಂದ್ರ; ವಿಯದ್ಗಂಗಾ ಪಿತ=ಆಕಾಶ 
ಗಂಗೆಯ ಪಿತ-ಶ್ರೀಹರಿ; ನಿರಾಮಯ=ದುಃಖ-ರೋಗವಿಲ್ಲದ;
							

268 ಪಾಲಯಾ ದಯಾಪಯೋನಿಧೆ

268.	ರಾಗ: ಆರಭಿ	ತಾಳ: ಆದಿ
ಪಾಲಯಾ ದಯಾಪಯೋನಿಧೆ 	ಪ
ಪಾಲಯ ಮಾಂ ಮಾಂತ್ರಾಲಯ ನಿಲಯ ಬು-
ಧಾಲಿಲಾಲಿತ ಕಲ್ಪೋಜ್ವಲಜಲಜಾ	ಅ.ಪ
ಆಗಮಾ ನಿಗಮಾ ವಿದಗ್ಧ ಲಲಾಮ ಭಾಗವತಭೌಮ
ಯೋಗಮಾರ್ಗಕರ್ಮಾಗಮ ನಿರತ ವಿ-
ರಾಗಮನನೆ ಮಧ್ವಾಗಮಖಗಮಾ	1
ಗ್ರಂಥಿಹರ್ತಕಾ ಸದ್ವೈಷ್ಣವರಂಜನ ಗ್ರಂಥಕರ್ತುಕಾ
ಭ್ರಾಂತಪ್ರತ್ಯೂಹಕೃತಾಂತಕ ದೋಷ
ಧ್ವಾಂತದಿನೇಶ ಚಿರಂತನ ಮಹಿಮಾ	2
ವಂದಿತಾಮರ ಮಂದಾರ ವೃಂದಾವನ ಮಂದಿರಾಧ್ವರ
ಸ್ಯಂದನ ತಂದೆವೆಂಕಟೇಶವಿಠಲನ
ದ್ವಂದ್ವಪದಾಂಬುಜ ಬಂಧುರಭ್ರಮರಾ	3
ಬುಧಾಲಿಲಾಲಿತ ಕಲ್ಪೋಜ್ವಲ=ಜ್ಞಾನಿ ಸಮೂಹದಿಂದ 
ಮೆಚಲ್ಪಟ್ಟ ಕಾಂತಿಯುಕ್ತ ಚಂದ್ರ; 
ವಿದಗ್ಧಲಲಾಮ=ಅಗ್ರ ಪಂಡಿತ; 
ಭಾಗವತ ಭೌಮ=ಭಾಗವತ ಶ್ರೇಷ್ಠ; 
ವಿರಾಗಮನ=ವಿರಕ್ತ ಮನ; ಖಗಮ=ಪಕ್ಷಿ; 
ಗ್ರಂಥಿಹರ್ತಕಾ=ಸಂಸಾರವೆಂಬ ಗಂಟನ್ನು ಕತ್ತರಿಸುವವ; 
ಪ್ರತ್ಯೂಹ=ಅಡಚಣೆ; ಕೃತಾಂತಕ=ಯಮ, ಕೊನೆಗಾಣಿಸುವವನು;
							

269 ಪೊರೇ ಪೊರೇ ಮಂತ್ರನಿಲಯ ದೊರೆ

269.	ರಾಗ: ಷಣ್ಮುಖಪ್ರಿಯ	ತಾಳ: ಆದಿ
ಪೊರೇ ಪೊರೇ ಮಂತ್ರನಿಲಯ ದೊರೆ	ಪ
ನತ ಶ್ರಿತರನು ಸಂತತ ಪತಿಕರಿಸುವ
ಪ್ರಥಿತಕೀರ್ತಿ ಮತ್ತಿತರರಿಗುಂಟೇ	1
ಕೋರಿಕೆ ಸಲಿಸಿ ಸಮೀರಸಮಯ ವರ
ಸಾರಸುಧಾರಸ ಭೂರಿಪ್ರಾಶನದಿ	2
ಕಾಲ ಕಳೆದೆ ಯಮನೂಳಿಗದವಗೇ-
ನ್ಹೇಳಲಾಪೇ ಪ್ರಹ್ಲಾದಗುರುವರಾ	3
ವೇನನ ಮತಘನಕಾನನವಹ್ನಿ ಸು-
ಧಾನುಮೋದಕ ಪ್ರಧಾನವಿದಗ್ಧ	4
ಶ್ರೀಶ ತಂದೆವೆಂಕಟೇಶವಿಠಲನ
ದಾಸ ಬೃಂದಾವನವಾಸ ಯತೀಶ	5
ಯಮನೂಳಿಗದವ=ಯಮಭಟ; ಪ್ರಧಾನವಿದಗ್ಧ=ಚೆನ್ನಾಗಿ ತಿಳಿದವ, ಪಂಡಿತ;
							

270 ಬಂದಾ ಬಂದಾ ಸುಧೀಂದ್ರಕರಾಬ್ಜೋತ್ಥ

270.	ರಾಗ: ಕಾಂಬೊಜಿ	ತಾಳ: ಆದಿ
ಬಂದಾ ಬಂದಾ ಸುಧೀಂದ್ರಕರಾಬ್ಜೋತ್ಥ	ಪ
ನಂದಸಮಯಮಕರಂದಪರಿಮಳದಿ
ಮಂದಹಸಿತ ಮನಮಂದಿರಕಿಂದು	ಅ.ಪ
ಭಾವದೀಪ ಖಂಡಾರ್ಥಮುಕ್ತಾವಳಿ
ಆ ವಿವೃತ್ತಿ ಮಂತ್ರಾರ್ಥಸುದೀಪಿಕ
ಭಾವುಕವೈಷ್ಣವ ಸಾರಸಂಗ್ರಹ ಪ್ರ-
ಭಾವಕುಸುಮಮಯತತ್ತ್ವಮಂಜರಿವೊಲ್	1
ಕಾಮಧೇನು ಸ್ವರ್ಪಾದಪ ಸಚ್ಚಿಂ-
ತಾಮಣಿಗಿಂ ಮಿಗಿಲೆನಿಸಿದ ಸೌಖ್ಯ
ಸ್ತೋಮ ಕರುಣಿಸೆ ವರಾಹಜೆತೀರದಿ
ಧಾಮಗೈದಿಹ ಸುತ್ರಾಮೋಪಮಮುನಿ	2
ಭೂಷ ಭೂತಿ ಸಂತೋಷ ತಂದೆವೆಂಕ-
ತೇಶವಿಠಲ ನಾಮ 
ಘೋಷಕಗವಿರತ ಮೀಸಲಿರುವ ಸಂ-
ದೇಶ ಕರುಣಿಸೆ ಕೃಪಾಸಮುದ್ರಗುರು	3
							

271 ಬಾರೊ ದ್ವೈತಸಾರಶರಧಿ ಪೂರ್ಣಚಂದ್ರ

271.	ರಾಗ: ವಸಂತ/ಪೀಲು	ತಾಳ: ಆದಿ
ಬಾರೊ ದ್ವೈತಸಾರಶರಧಿ ಪೂರ್ಣಚಂದ್ರ ಉ-
ದ್ಧಾರ ಮಾಡೊ ಎನ್ನ ಗುರು ರಾಘವೇಂದ್ರ 	ಪ
ಸಾಧಕರೆಲ್ಲರ ಸಕಲಮನದಾಭೀಷ್ಟ ಸುರ-
ಪಾದಪಾದಿಗಳ ಮೀರಿ ಕೊಡುವ ನಿಷ್ಠ
ಪಾದಾವಲಂಬಿಗಳಿಗೆ ಉಪದೇಷ್ಠನಾಗಿ
ಬೋಧಿಸುವೆಯೋ ದ್ವೈತತ್ತ್ವದ ಗುಟ್ಟ	1
ಧಾತಾಂಡದೊಳು ಯುಗಯುಗದಲ್ಲಿ ಸಂ-
ಭೂತನಾಗುವೆ ಹರಿಪ್ರೀತಿಯಲ್ಲಿ
ಮಾತರಿಶ್ವನ ಮತವನಧಿಯಲ್ಲಿ ಪ್ರ-
ಖ್ಯಾತಶಫರ ಕಾಯೊ ವಹಿಲದಲ್ಲಿ	2
ಮಾಯಾವಾದಿಗಳನೆಲ್ಲ ಖಂಡಿಸಿ ಸ-
ನ್ಯಾಯಸುಧೆಗೆ ಪರಿಮಳ ರಚಿಸಿ 
ಕಾಯವಾಙ್ಮನೋಮಯನನು ತಿಳಿಸಿ ಪಾಪ
ಭೂಯಿಷ್ಠನನು ಪೊರೆ ಪತಿಕರಿಸಿ	3
ದುರ್ಮದಾಂಧರನೆಲ್ಲ ನಿಗ್ರಹಿಸಿ ನೀತ
ಧರ್ಮ ಕರ್ಮಂಗಳನಾಚರಿಸಿ
ಕರ್ಮಂದಿಜನಶಿರೋಮಣಿಯೆನಿಸಿ ಮೋಕ್ಷ
ಮರ್ಮತಿಳಿಸೊ ಸಾಧನೆ ಬಲಿಸೀ	4
ಭೂತ ಬೇತಾಳ ಪ್ರೇತಜಾತಬಾಧ ಸನ್ನಿ
ಪಾತ ಅಶುಭಗ್ರಹ ಸರಿಸೃಪದ-
ಘಾತ ದಾರಿದ್ರ್ಯಭಯ ವಿಷಮಿಸಿದದೋಷ
ವ್ರಾತ ಹಿಂಗಿಸುವದೊ ತವಪಾದ	5
ಹೃದ್ರೋಗ ಹರಿಸಿ ಪೊರೆಯನವರತಾ ತುಂಗ-
ಭದ್ರಾತೀರಗ ನಿರ್ಗತದುರಿತ
ರುದ್ರಾಂತರ್ಗತನಂಘ್ರಿಮಧುಪವ್ರತ ಶ್ರೀ-
ಮದ್ರಾಘವೇಂದ್ರಯತಿ ಶುಭಚರಿತ	6
ಪೊಂದಿರುವೆ ನಿಮ್ಮ ಪಾದಕಮಲಂಗಳ ದಯ-
ದಿಂದ ಕೇಳು ಬಾಲಕನ ವಚನಂಗಳ 
ತಂದೆವೆಂಕಟೇಶವಿಠಲನೆಮ್ಮ ಕಂಗಳ ಮುಂದೆ
ತಂದು ಸಲಿಸೊ ಇಂದೆ ನಮಗೆ ಸರ್ವಮಂಗಳ	7
ಸುರಪಾದಪಾದಿಗಳ=ಕಲ್ಪವೃಕ್ಷ; 
ಕಾಯವಾಙ್ಮನೋಮಯನನು=ಕಾಯಾ, 
ವಾಚಾ ಮನಸ್ಸಿನಲ್ಲಿ ವ್ಯಕ್ತನಾದ; 
ಭೂಯಿಷ್ಠ=ತುಂಬಿದ, ಭರಿತವಾದ; 
ಸರಿಸೃಪದಘಾತ=ಹಾವಿನಿಂದ ಆಗುವ ತೊಂದರೆ;
							

272 ಬಾರೊ ಸದ್ಗುಣಸಾರಶರನಿಧೆ

272.	ರಾಗ: ಕಾನಡ 	ತಾಳ: ತ್ರಿಶ್ರತ್ರಿಪುಡೆ
ಬಾರೊ ಸದ್ಗುಣಸಾರಶರನಿಧೆ ಬಾರೋ ಕರುಣಾಂಭೋನಿಧೆ	ಪ
ಬಾರೋ ತುಂಗಾತೀರ ನವಮಂತ್ರಾಲಯಪ್ರಭೋ ಸಾರಿದೇ	ಅ.ಪ
ರಾಘವೇಂದ್ರ ಬುಧೌಘವಂದ್ಯ ವಿರಾಗ ನೃಪದುರಿತೌಘಹ 
ಯೋಗವಿದ ಭವರೋಗಹರ ವಿನುತಾಗಮಾಲಯಸ್ಥಿತ ಮಹ 
ತ್ಯಾಗಶೀಲ ಸದ್ರಾಗಭಾಷ ಸಮಾಗತ ಸುರಘೂದ್ವಹ 
ಭಾಗವತಭಕ್ತಾಗ್ರಣಿ ದ್ವೈತಾಗಮಾದ್ಭುತ ವಿಗ್ರಹಾ	1
ದಾಸ ತತ್ತ್ವ ದಿಗ್ದೇಶ ಪ್ರಚುರಣಖೇಶ ವಿಶ್ವೋಪಾಸಕ 
ಶ್ರೀಶಪಾದಕುಶೇಶಯಾಶ್ರಿತ ಭೂಸುರವ್ರಜಪೋಷಕ 
ವ್ಯಾಸರಾಜ ಲಂಕೇಶನನುಜ ಮಹೀಶ ಕಶ್ಯಪಸುತಮುಖ 
ಕ್ಲೇಶಹರ ಕರುಣಾಸಮುದ್ರ ವಿಲಾಸರೂಪ ವಿಧಾರಕಾ	2
ತಂತ್ರದೀಪಿಕ ಗ್ರಂಥಕರ್ತುಕಾನಂತ ಮಹಿಮಾಪೂರಿತಾ 
ಮಂತ್ರಸದ್ಮ ನಿರಂತ್ರವಾಸ ಶ್ರೀತಂದೆವೆಂಕಟೇಶವಿಠಲ ತಾ 
ನಿಂತು ತವಹೃದ್ಯಂತರದಿ ನವಯಂತ್ರವಾಹಕನಾಗುತಾ 
ಚಿಂತಿತಾರ್ಥ ಗತ್ಯಂತ್ರವಿಲ್ಲೆನೆ ಮಂತ್ರಿಸುವ ತಾ ನಡೆಸುತಾ	3
ವಿರಾಗ=ರಾಗರಹಿತ; ಯೊಗವಿದ=ಯೋಗವನ್ನು ತಿಳಿದವ; 
ವಿನುತಾಗಮಾಲಯ ಸ್ಥಿತ=ಮಂತ್ರಾಲಯದಲ್ಲಿರುವ; 
ಸುರಘೂದ್ವಹ =ರಘುವಂಶದ ಶ್ರೀರಾಮ; ಖೇಶ=ಸೂರ್ಯ; 
ಕುಶೇಶಯ=ಕಮಲ; 
							

273 ಮಂಗಳ ಮಂತ್ರಾಲಯಧೊರೆಗೇ ಜಯ ಮಂಗಳ

273.	ರಾಗ: ರೀತಿಗೌಳ/ಬೆಹಾಗ್	ತಾಳ: ಆದಿ
ಮಂಗಳ ಮಂತ್ರಾಲಯಧೊರೆಗೇ ಜಯ
ಮಂಗಳ ನತಸುರಭೂರುಹಗೇ	ಪ
ಸಾರಲು ಶ್ರೀ ಚರಣಾರವಿಂದಗಳ 
ಕೋರಿಕೆ ಸಲಿಪ ಉದಾರಚರಿತ್ರಗೇ	1
ಬೃಂದಾವನದ್ಯಭಿವಂದ್ಯನಾಗಿ ಕ್ಷಿತಿ-
ಬೃಂದಾರಕರ್ಗಾನಂದ ಸಲಿಪನಿಗೇ	2
ಭೂಪಜೆ ತೀರದಿ ಸ್ಥಾಪಿತ ಸದ್ಮ
ಪ್ರಾಪುತ ತಂದೆವೆಂಕಟೇಶವಿಠಲಗೇ	3
ಭೂಪಜೆ=ಭೂಮಿಯ ಒಡೆಯನಾದ 
ವರಾಹ ದೇವರ ಕೋರೆದಾಡೆಗಳಿಂದ 
ಉದ್ಭವಿಸಿದ ತುಂಗ-ಭದ್ರಾ;
							

274 ಮಂತ್ರಮಂದಿರ ವಿಹಾರಾ ಸದ್ಗುರುವರಾ

274.	ರಾಗ: ಬಿಲಹರಿ	ತಾಳ: ತ್ರಿಪುಟ
ಮಂತ್ರಮಂದಿರ ವಿಹಾರಾ ಸದ್ಗುರುವರಾ	ಪ
ತಂತ್ರಸಾರ ವಿಧ್ಯುಕ್ತಧಾರ್ಮಿಕ 
ಯಂತ್ರಕರಣದಿ ಹೃಸ್ಥಳದಿ ಸರ್ವ- 
ತಂತ್ರನಿಪುಣನ ಬಂಧಿಸುತ ಧ-
ನ್ವಂತ್ರಿಯೆನಿಸಿದ ಗ್ರಂಥಕರ್ತುಕ	ಅ.ಪ
ಕಾವಕರುಣಿ ಕೃಪಾವಲೋಕನದೀ ನೋಡೆನ್ನ ದಯದೀ
ಭಾವಶುದ್ಧ ಜನಾವನತಪದ ಪಾವನಾತ್ಮಕ ದೇವಶರಣಸಂ-
ಜೀವ ರಾಮರಾಜೀವಪದಯುಗಳಾವಲಂಬನಕಾ ವಿಪಶ್ಚಿತ 
ಕೋವಿದನೆ ಮಹಿಮಾವನಧಿ ತವಸೇವೆಯೆನು ಕೊಡು ಭಾವುಕಾಗ್ರಣಿ	1
ಗಂಗಾಜನಕ ನೃಸಿಂಗಚರಣಸುಮ ಪೀಯೂಷಕಾಮ 
ತುಂಗವಿಮಲತರಂಗಿಣೀತಟರಂಗಚರ ಮಹಿತಾಂಗ ಸ್ಮರಶರ 
ಭಂಗ ಕೀರ್ತಿತತರಂಗ ಹರಿಮತ ಸಂಗ ಯತಿಕುಲ ಪುಂಗವನೆ ಸ-
ತ್ಸಂಗದಲಿ ಪೊರೆ ಕಂಗೊಳಿಸುತ ವಿಹಂಗಹಯಪದ ಭೃಂಗ ಬುಧವರ	2
ಶಕ್ತ ವಿಧಿವಚನೋಕ್ತದಿನಚರ್ಯ ವೈಶ್ಣವಾಚಾರ್ಯ 
ಭಕ್ತಜನಕಭಿವ್ಯಕ್ತನಾಗಿ ವಿದ್ಯುಕ್ತಧರ್ಮಾಸಕ್ತತೆಯ ಕೊ-
ಟ್ಟುಕ್ತಿ ಸಲಿಪ ಪ್ರಯುಕ್ತ ಮಂತ್ರಸುವ್ಯಕ್ತ ವೇಶ್ಮಾತಿಸಿಕ್ತಮಹಿಮ ವಿ- 
ರಕ್ತ ಭವಭಯಮುಕ್ತ ರಾಜಿತ ಭಕ್ತಿಮುದ್ರಾಯುಕ್ತ ಸೇವಿತ	3
ಓ ಮಹಾಮರಧೇನು ಸುರತರುವೇ ಕರ ಮುಗಿದು ಕರೆವೇ 
ರಾಮ ವ್ಯಾಸಸುತಾಮರಸಸರಸೀಮರಾಳ ಸುತ್ರಾಮವಿಭವ 
ಸ್ತೋಮಸಮ ಮಂತ್ರಧಾಮ ನಿಲಯನೆ ಕಾಮಿತಪ್ರದ ಶ್ರೀ ಮಹಾಮಹಿ 
ಮಾಮಹಿತನಾಗಾಮಯಾದ್ಭಯ ಕ್ಷೇಮಗೈವ ಸಪ್ರೇಮನಾಮನೆÂೀ	4
ಮಂದಭಾಗ್ಯರ ಮುಂದೆ ತರಲಿರುವ ಕರೆದಲ್ಲಿ ಬರುವಾ 
ಹಿಂದೆ ಮೊದಲೆರಡಂದು ದ್ವಾಪರದಿಂದೀಕಡೆಯಲಿ ಸಂದ ಜನ್ಮಗ-
ಳಿಂದ ಧ್ಯಾನಾನಂದಪೂರಿತ ಬಂದವರಿಗವರೆಂದ ವರಗಳ 
ಬೃಂದ ಸಲಿಪ ಯತೀಂದ್ರ ತೋರಿಸೋ ತಂದೆಶ್ರೀವೆಂಕಟೇಶವಿಠಲನ	5
ಧನ್ವಂತ್ರಿಯೆನಿಸಿದ ಗ್ರಂಥ=ಅಮೃತ ಸದೃಶವಾದ `ಸುಧಾ’ ಗ್ರಂಥ; 
ಸ್ಮರಶರ ಭಂಗ=ಕಾಮದಾಸೆ ಬಿಡುವುದು; 
ಮಂತ್ರ ಸುವ್ಯಕ್ತವೇಶ್ಮ=ಮಂತ್ರಗಳ ಮಹಿಮೆಯನ್ನು 
ವ್ಯಕ್ತಪಡಿಸುವ ಮನೆ-ಮಂತ್ರಾಲಯ; 
ಅತಿಸಿಕ್ತಮಹಿಮ=ಅನುರಾಗದಿಂದ ಕೂಡಿದ ಮಹಿಮೆಯುಳ್ಳ; 
ಭಕ್ತಿ ಮುದ್ರಾಯುಕ್ತ=ಭಕ್ತಿಯೆಂಬ ಮುದ್ರೆಯನ್ನು ಹೊಂದಿರುವ; 
ಮಹಾಮರಧೇನು=ಸುರಧೇನು-ಕಾಮಧೇನು ; 
ಮರಾಳ=ಹಂಸ; ಸುತ್ರಾಮ ವಿಭವ ಸ್ತೋಮಸಮ=ಇಂದ್ರನ ವೈಭವ;
							

275 ರಾಘವೇಂದ್ರ ಪದ

275.	ರಾಗ: ಬೇಗಡೆ	ತಾಳ: ಅಟ 
ರಾಘವೇಂದ್ರ ಪದ ಚೆನ್ನಾಗಿ ಭಜಿಸುವರಘವು
ನೀಗಿಪೋಗುವುದಿದಕೆಹರಿಸಾಕಿಯೂ	ಪ
ರಾಘವೇಂದ್ರರ ಧ್ಯಾನ ವರಸುಧಾರಸಪಾನ
ರಾಘವೇಂದ್ರರ ಸೇವೆ ದುರಿತಾಬ್ಧಿ ನಾವೆ
ರಾಘ್ವೇಂದ್ರರ ಕರುಣ ಜ್ಞಾನಾಂಕುರಾರ್ಪಣ
ರಾಘವೇಂದ್ರರಾಲೋಕ ಕರ್ಮಪರಿಪಾಕ	1
ರಾಘವೇಂದ್ರರ ಚರಿತೆ ಜ್ಞಾನ ಭಕ್ತಿಗಳೊರತೆ
ರಾಘವೇಂದ್ರರ ಲೀಲಾ ಪ್ರತಿವಾದಿಶೂಲ
ರಾಘವೇಂದ್ರರ ನಿಲಯ ದುಷ್ಟಗ್ರಹಗಳ ಪ್ರಳಯ
ರಾಘವೇಂದ್ರರಾಕಾರ ಭಕ್ತಮಂದಾರ	2
ರಾಘವೇಂದ್ರರ ಪೂಜ ಆನತರ ಸುರಭೂಜ
ರಾಘವೇಂದ್ರರ ಸ್ಮರಣ ಗಂಗಾವಿಹರಣ 
ರಾಘವೇಂದ್ರರ ಧ್ಯಾಸ ಮುಕ್ತಿಸ್ತ್ರೀವಿನ್ಯಾಸ 
ರಾಘವೇಂದ್ರರ ಮಂತ್ರ ಭವಭೀತಿಯಂತ್ರ	3
ರಾಘವೇಂದ್ರರ ಬೃಂದಾವನ ಸರ್ವಸುರಬೃಂದ
ರಾಘವೇಂದ್ರರ ಯಾಗಮಂಟಪವೇ ಸ್ವರ್ಗ
ರಾಘವೇಂದ್ರರ ಪಾದಉದಕ ಸಕಲಾಮೋದ
ರಾಘವೇಂದ್ರರ ಪ್ರೀತಿ ಅಸದೃಶವಿಭೂತಿ	4
ರಾಘವೇಂದ್ರರಮೂರ್ತಿ ಆಚಂದ್ರರವಿಕೀರ್ತಿ
ರಾಘವೇಂದ್ರರ ವಾಣಿ ಸಚ್ಚಾಸ್ತ್ರಸರಣಿ
ರಾಘವೇಂದ್ರರ ಭಕ್ತ ಪ್ರಾಣೇಶದಯಯುಕ್ತ
ರಾಘವೇಂದ್ರ ಪಾಲಾ ತಂದೆವೆಂಕಟೇಶವಿಠಲಾ	5
ಗಂಗಾವಿಹರಣ=ಗಂಗಾ ವಿಹಾರ; ಧ್ಯಾಸ=ಧ್ಯಾನ;
							

276 ರಾಘವೇಂದ್ರ ಮಹಾನುರಾಗದಲಿ ಪೊರೆ

276.	ರಾಗ: ಶ್ರೀರಂಜಿನಿ	ತಾಳ: ಝಂಪೆ
ರಾಘವೇಂದ್ರ ಮಹಾನುರಾಗದಲಿ ಪೊರೆ ಸತತ
ಬಾಗಿ ನಮಿಸುವೆನಯ್ಯ ಪಿಡಿ ಎನ್ನ ಕೈಯ್ಯ	ಪ
ಯೋಗೀಂದ್ರ ತ್ವಚ್ಚರಣಪರಾಗಮಧುಕರನೆನಿಸಿ
ಬೇಗ ಸೂಚಿಸೊ ಹಾದಿ ವಿತತದಯವನಧೀ	ಅ.ಪ
ನಾವಿಕನ ಬಿಟ್ಟು ವಿಕರ್ಮಕಾವಳದಿ ನೆಲೆಗಾಣ-
ದವಿರತಾಶ್ರುಗಳಿಂದ ವಿವಿಧ ಭಯದಿ
ಕವಿವ ದುಷ್ಟಷಡೂರ್ಮಿ ಭವಜಲಧಿತೆರೆಗಳೊಳು 
ಬವಣೆ ಪಡುವುದನರಿಯ ದಯಾದ್ರ್ರಹೃದಯ	1
ದಣಿದಣಿದು ಕಂಡವರ್ಗೆ ಮಣಿದು ಮೂರ್ಖತೆಯಿಂದ
ಕ್ಷಣದೊಳಣುಗಾಲ ಹರಿ ಗುಣ ವಿವೇಚಿಸದೆ
ಉಣುವ ದುಷ್ಪಲಗಳಿಗೆ ಎಣೆಗಾಣದಾದೆ ನಿ-
ನ್ನಣುಗನೆಂದೆನ್ನ ಪೊರೆ ಪ್ರಣತಾರ್ತಿ ಹರನೇ	2
ಅಕುಟಿಲರ ದೈವ ತಂದೆವೆಂಕಟೇಶವಿಠಲ ಸಾ-
ತ್ವಿಕರ ಸಲಹಲ್ಕೆ ನಿನ್ನೊಳಿರುತಿರಲೂ
ಸುಖದಾಸೆಯಿಂದಹಿಕ ನಿಕರದಲಿ ಮೈಮರೆದು
ಪ್ರಕಟಭವನಾಟಕದಿ ವಿಕಟನಾದೆ	3
ಕಾವಳ=ಕತ್ತಲೆ; ಅವಿರತಾಶ್ರು=ನಿಲ್ಲದ ಕಣ್ಣೀರು; 
ಷಡೂರ್ಮಿ=ಆರುತೆರೆಗಳು-ಹಸಿವು, ನೀರಡಿಕೆ, ಶೋಕ, 
ಮೋಹ, ವಾರ್ಧಕ್ಯ, ಮರಣ; ದಯಾರ್ದ=ದಯೆಯಿಂದ 
ತೋಯಿದ (ಒದ್ದೆಯಾದ); ನಿನ್ನಣುಗ=ನಿನ್ನಮಗ-ಭಕ್ತ; 
ಪ್ರಣತಾರ್ಥಿಹರ=ಶರಣಾಗತರಾದವರ ಕಷ್ಟ ನಿವಾರಕ; 
ಅಕುಟಿಲ=ದೋಷವಿಲ್ಲದವ; ವಿಕಟ=ಹಾಸ್ಯಗಾರ-ಛಿಟoತಿಟಿ;
							

277 ರಾಘವೇಂದ್ರ ಯತಿಮಾನತೋಸ್ಮಿ

277.	ರಾಗ: ಹಿಂದೋಳ	ತಾಳ: ಆದಿ
ರಾಘವೇಂದ್ರಯತಿಮಾನತೋಸ್ಮಿ ಸತತಂ 
	ಮಧ್ವಾಗಮ ನಿಪುಣಂ	ಪ
ವಿದ್ವದಾರ್ಯ ಪರಾಮಾದ್ಭುತಚರ್ಯಂ 
ಅದ್ವೈತಾಂಕುರ ಧ್ವಂಸನಧುರ್ಯಂ
ಸದ್ವೈಷ್ಣವಪದ್ಮೋದಯಸೂರ್ಯಂ
ಪ್ರದ್ವೇಷೀಹೃದ್ಭೇದನತೂರ್ಯಂ	1
ನಿಖಿಳಸುಗುಣಗಣವಿಕಸಿತವಪುಷಂ
ಪ್ರಕಟಾಪ್ರಕಟಸುಮಹಿಮವಿಲಾಸಂ
ಸಕಲಾಭೀಷ್ಟದ ಪ್ರಸರಿತ ತೋಷಂ
ನಕುಲಾಗ್ರಜಪದಧೃತಶುಭಶೀರ್ಷಂ	2
ತಂದೆವೆಂಕಟೇಶವಿಠಲಭಕ್ತಂ
ದ್ವಂದ್ವಸಮರ್ಪಣಕಾರ್ಯಾಸಕ್ತಂ
ವಂದಿತಜನಸುರಭೂರುಹವ್ಯಕ್ತಂ
ಮಂದಮತಿಂಮಾಂಪಾಲಯನಿರತಂ	3
							

278 ರಾಘವೇಂದ್ರ ಯತಿರಾಯಾ

278.	ರಾಗ: ಭೈರವಿ	ತಾಳ: 
ರಾಘವೇಂದ್ರಯತಿರಾಯಾ ದುರಿತೌಘಹಂತಕ ಮಂತ್ರನಿಲಯ	ಪ
ತ್ಯಾಗಶೀಲನೆ ಭಕ್ತಿಯೋಗಾದಿ ಹರಿಯನು- 
ರಾಗ ಸಂಪಾದಿಸಿ ಭಾಗವತೋತ್ತಮ-
ರಾಗಿ ಸೂಕರತನಯೆತೀರದಿ ಯಾಗಮಂಟಪಮಧ್ಯರಂಗದಿ 
ಆಗಮಾಲಯ ಸ್ಥಾಪಿಸುತ ಭವರೋಗಹರನೆಂದೆನಿಸಿ ಮೆರೆದೇ	ಅ ಪ
ವೀರವೈಷ್ಣವ ಭಕ್ತಾಗ್ರಣಿಯೇ ಅಮರಾರಿ ಪರಿಪರಿ ನಿನ್ನ ಹಣಿಯೇ
ತೋರಾದೆ ಲವಭಯ ಮಾರಜನಕ ಭಕ್ತಿ
ಪಾರವಶ್ಯದಿ ಚೋದ್ಯ ತೋರಿ ಮೂಜ್ಜಕೆಲ್ಲಾ 
ಧೀರ ಶರಣಾಧಾರ ವಜ್ರಶರೀರ ವಿಶ್ವಸಂಸಾರ ನೃಹರಿಯ 
ತೋರಿ ಕಂಭದಿ ದಾಸ ಪಂಥೋದ್ಧಾರ ಮಾಡಿದಪಾರ ಶ್ರೀಕರ	1
ಖಂಡಿತಪರವಾದಿತಂಡ ಭೂಮಂಡಲಮಂಡಿತ ತರ್ಕಶೌಂಡ 
ಖಂಡಪರಶು ಲಕ್ಷ್ಮೀಗಂಡರೊಂದೆಂಬ ವಿ-
ತ್ತಂಡತಾರ್ಕೀಕರ ದಿಂಡುರುಳಿಸೀ ಮಿಶ್ರ-
ಮಂಡನಾದಿ ಪ್ರಚ್ಚನ್ನಬೌದ್ಧರ ಹಿಂಡುಗಜಹರ್ಯಕ್ಷ ಜಯ ಜಯ 
ಡಿಂಡಿಮೋತ್ಸವಮಾಗೆಮೆರೆದೆಯೊ ಗಂಡುಗಲಿಗುರುವ್ಯಾಸಯತೀಶ	2
ಮಂತ್ರನಿಕೇತನಸದನಾ ಪಾಹಿ ಭ್ರಾಂತಿಜ್ಞಾನ ಸಂಹನನ 
ಪ್ರಾಂತಾದಿ ಜನ ದುಃಖಾಕ್ರಾಂತರಾಗಿರೆ ನಿಮ್ಮ 
ಮಂತ್ರೋಚ್ಚಾರಣೆಯಿಂ ನಿಶ್ಚಿಂತರಾಗುವರಯ್ಯ 
ಸ್ವಾಂತಧ್ವಾಂತಾನಂತರವಿ ಸಿರಿಕಾಂತ ತಂದೆವೆಂಕಟೇಶವಿಠಲನೇ- 
ಕಾಂತಭಕ್ತನೆ ಪರಿಮಳಾದಿ ಸದ್ಗ್ರಂಥ ರಚಿಸಿರುವಂಥ ಸಂತ	3
ಸೂಕರ ತನಯೆ=ತುಂಗ-ಭದ್ರೆ; ಅಮರಾರಿ=ದೈತ್ಯ; 
ಹಣಿ=ದಂಡಿಸು; ಲವ=ಸ್ವಲ್ಪವೂ; ಪಾರವಶ್ಯ=ತನ್ಮಯತೆ; 
ಚೋದ್ಯ=ಸೋಜಿಗ, ವಿಸ್ಮಯ; ಖಂಡಿತ=ಖಂಡಿಸಲ್ಪಟ್ಟ; 
ತರ್ಕಶೌಂಡ=ತರ್ಕನಿಪುಣ; ಖಂಡ ಪರಶು=ಶಿವ; 
ವಿತ್ತಂಡ ತಾರ್ಕಿಕ=ಹುರುಳಿಲ್ಲದ ವಾದಮಾಡುವವ; 
ದಿಂಡು=ಗರ್ವ; ಮಿಶ್ರಮಂಡನಾದಿ=ಮಂಡನ ಮಿಶ್ರ; 
ಪ್ರಚ್ಚನ್ನ=ವೇಷ ಮರೆಸಿದ; ಹರ್ಯಕ್ಷ=ಸಿಂಹ; 
ಜಯ ಡಿಂಡಿಮ=ಜಯಭೇರಿ; ಸ್ವಾಂತ ಧ್ವಾಂತಾನಂತ 
ರವಿ=ಅಂತಃಕರಣದ ಕತ್ತಲೆಗೆ ಸೂರ್ಯನಂತೆ;
							

279 ರಾಯರ ಭಜಿಸಿರೊ ನೀವೆಲ್ಲಾ

279.	ರಾಗ: ಆರಭಿ	ತಾಳ: ಆದಿ
ರಾಯರ ಭಜಿಸಿರೊ ನೀವೆಲ್ಲಾ ಗುರು
ರಾಯರ ಭಜಿಸಿರೊ ನೀವೆಲ್ಲಾ	ಪ
ಭೀಯಪರಿಭವ ಭವಾಮಯತೋಯಧಿ
ಹಾಯುವ ಸುಲಭೋಪಾಯವ ತೋರಿದ	ಅ.ಪ
ಕಾಕುಮತಿಯ ಖಳಾನೇಕ ಭಯಾನಕ
ವ್ಯಾಕುಲಾನೀಕ ದುರ್ಭೀಕರವಡಗಿಸಿ
ಶ್ರೀಕರನ ಮನೋವಾಕ್ಕಾಯದೊಳೊಲಿ-
ಸ್ಯಾಕಂಭದಲಿ ಮಹಾಕೃತಿ ತೋರಿದ	1
ಅಗ್ರಜ ಹರಿದ್ವೇಷಾಗ್ರಣಿ ದುಷ್ಟ ಮ-
ಹೋಗ್ರ ಕ್ರೋಧಾನಲ ವ್ಯಗ್ರಮಾನಸ ದು-
ರಾಗ್ರಹಿಯಾಗಿರೆ ಸುಗ್ರೀವೇಶನ-
ನುಗ್ರಹದಲಿ ಸಮರಾಗ್ರದಿ ಜೈಸಿದ	2
ದ್ವಾಪರದಲಿ ಕುರುಪಾ ಪಾಂಡವರನು 
ತಾಪಗೊಳಿಸಿ ಯುದ್ಧೋಪಕ್ರಮಿಸಿರೆ
ಆ ಪಕ್ಷದಿ ದ್ವೇಷೋಪಾಯದಿ ಬಕ-
ತಾಪಕನೊಲಿಸಿದ ಶ್ರೀಪ್ರತೀಪಭವ	3
ನಾರದಮುನಿಯ ಪದಾರಾಧನರತ
ನೀರಜಾಕ್ಷನಭಿಸಾರಿಕೆಯೊಳಗೀ-
ಧಾರುಣಿಯೊಳು ಬಂದೀರಸಮಯವಿ-
ಸ್ತಾರ ಮಾಡ್ದ ವ್ಯಾಸಾರ್ಯ ಶುಭಾಭಿಧ	4
ಆಗಮಾಲಯದೊಳೀಗಲು ಭಕುತರ 
ರೋಗ ಭಯಂಗಳನೀಗಿಸಿ ಹರಿಯನು
ರಾಗಸಂಪದವಿಯ ಭೋಗಿಸುತಿಹ ಗುಣ-
ಸಾಗರ ಶ್ರೀ ಗುರು ರಾಘವೇಂದ್ರರೆಂಬ	5
ಅಂಧಮೂಗಾದ್ಯರ ಸಂದೋಹಕೆ ಮುದ
ವಂ ದಯಗೈಯುತ ಬೃಂದಾವನದೊಳು
ನಿಂದು ಮೆರೆವ ಸತ್ಯಸಂಧ ವಾತಾಗಮ 
ಸಿಂಧುಪೂರ್ಣಶರಚ್ಚಂದ್ರರಾಗಿರುವ	6
ಬಿಂಕದಿ ಹರಿಗೃಹವಂ ಕಾಯುವರೊಳು
ಶಂಖುಕರಣನೆಂಬ ಅಂಕದಿ ಮೆರೆಯುತ
ಶಂಕರೇಶ ತಂದೆವೆಂಕಟೇಶವಿಠಲನ
ಕಿಂಕರ ಶ್ರೀಶಪರ್ಯಂಕಾವೇಷಿತ	7
ಭೀಯ=ಭಯಂಕರ; ಭವಾಮಯ=ಸಂಸಾರ ದುಃಖ, 
ಯಾತನೆ; ವ್ಯಗ್ರ=ಕಳವಳ-ಗಾಬರಿಗೊಂಡ; 
ದುರಾಗ್ರಹಿ=ಹಠಮಾರಿ; ಮಹೋಗ್ರ=ಮಹಾ ಉಗ್ರ, 
ಭಯಾನಕ; ಕ್ರೋಧಾನಲ=ಬೆಂಕಿಯಂತಹ ಕೋಪ; 
ಅನುರಾಗ ಸಂಪದ=ಅನುಗ್ರಹವೆಂಬ ಸಂಪತ್ತು; 
ಬಿಂಕ=ಠೀವಿ; ಶ್ರೀಶ ಪರ್ಯಂಕಾವೇಷಿತ=ಶ್ರೀಹರಿಯ 
ಹಾಸಿಗೆಯಾದ ಶೇಷಾವೇಷಿತ;
							

280 ಶರಣಾಗತರ ಪೊರೆವ ಪರಮಾದ್ಭುತಚರ್ಯ

280.	ರಾಗ: ಭೈರವಿ	ತಾಳ: ಆದಿ
ಶರಣಾಗತರ ಪೊರೆವ ಪರಮಾದ್ಭುತಚರ್ಯ
ಗುರುವೇ ಪಾಲಿಸೊ ನಿರುತ ಶ್ರೀರಾಘವೇಂದ್ರಾ	ಪ
ದುರುಳ ದುಸ್ತರ್ಕದುಸ್ತರ ಮೋಹತಿಮಿರಕೆ
ತರುಣಾರ್ಕಸನ್ನಿಭ ಗುರುರಾಘವೇಂದ್ರಾ	ಅ.ಪ
ಪ್ರಥಿತ ಚತೂಷಷ್ಟಿವಿತರಣವಿದ್ಯಾಮಾ-
ನಿತ ಮನ್ಮಥಾಹಿತಾಪ್ರತಿ ರಾಘವೇಂದ್ರ
ಕೃತಕ್ರತುಸದ್ಮ ಸನ್ಹಿತಶ್ರಿತಜನಪರಿ-
ವೃತ ಬೃಂದಾವನಸ್ಥಿತ ಶ್ರೀ ರಾಘವೇಂದ್ರಾ	1
ಅಲವಬೋಧಾಗಮ ಜಲನಿಧಿ ಚಂದ್ರಮ
ವಿಲಸಿತಗುಣಗಣಾನ್ವಿತ ರಾಘವೇಂದ್ರಾ	
ಖಳರಾಜಸುಕುಮಾರ ಖಳರಾಜಸೋದರ
ಖಳಚರ ಖಳಹರಕುಲಜ ರಾಘವೇಂದ್ರಾ	2
ಸ್ತುತ್ಯ ಗ್ರಹಫಲ ಸಕಲಸತ್ತೀರ್ಥಾಮಿತ ಫಲ-
ವಿತ್ತಪುದು ತವ ಸ್ತವನ ಶ್ರೀರಾಘವೇಂದ್ರಾ	
ವಿತ್ತವಿಹೀನತಾಪತ್ಯರಾಹಿತ್ಯಾದಿ
ತೆತ್ತದೋಷಕೆ ಅಪಮೃತ್ಯು ನೀ ರಾಘವೇಂದ್ರಾ	3
ಖಂಡಾರ್ಥ ವಿವೃತ್ತ್ಯಾದ್ಯ ಖಂಡಾಲಾಯುಧಧರ
ಪಂಡಿತೋತ್ಪಲಮುಖಾ ಖಂಡೇಂದು ರಾಘವೇಂದ್ರಾ	
ದಂಡಕಾಷಾಯ ಕಮಂಡಲುಧಾರಿ ಕೋ-
ದಂಡಪಾಣಿ ಪಾದ ಬಂಡುಣಿ ರಾಘವೇಂದ್ರಾ	4
ತಂದೆವೆಂಕಟೇಶಾವಿಠಲಾ ಪಾದಾರ್ಚಕ
ನಿಂದಕಜನಕದಳಿ ಸಿಂಧೂರ ರಾಘವೇಂದ್ರಾ	
ಸುಂದರ ಯತಿವರ ವೃಂದಾವನವಾಸಿ
ವಂದಿತಜನಸುರಮಂದಾರ ರಾಘವೇಂದ್ರಾ	5
ದುಸ್ತರ್ಕ=ಕೆಟ್ಟ ವಾದ; ದುಸ್ತರ=ದಾಟಲಶಕ್ಯವಾದ; 
ಪ್ರಥಿತ=ಹೆಸರುವಾಸಿಯಾದ; ಚತೂಷಷ್ಠಿ ವಿತರಣ 
ವಿದ್ಯ=64 ವಿದ್ಯೆಗಳು; ಕೃತಕ್ರತು ಸದ್ಮ=ಯಾಗ 
ಮಾಡಿದ ಸ್ಥಳ; ಖಳ ರಾಜ ಸೋದರ=ವಿಭೀಷಣ; 
ಖಳಚರ=ಬಾಹ್ಲೀಕ (ದುರ್ಯೋಧನನಿಗೆ ಸಹಾಯಕನಾಗಿ);
 ಖಳಹರಕುಲಜ=ವಾಯುದೇವರ ಅಂದರೆ 
 ಶ್ರೀಮಧ್ವಾಚಾರ್ಯರ ಪರಂಪರೆಯಲ್ಲಿ ಬಂದ 
 ಶ್ರೀ ವ್ಯಾಸರಾಜರು ; ಆಖಂಡಾಲಾಯುದಧರ=ಇಂದ್ರನ 
 ವಜ್ರಾಯುಧಕ್ಕೆ ಸಮನಾದ ಗ್ರಂಥಗಳನ್ನು ಹೊಂದಿರುವ 
 (ರಚಿಸಿರುವ); ಪಂಡಿತೋತ್ಪಲ ಮುಖ 
 ಖಂಡೇಂದು=ಪಂಡಿತರ ಮುಖವೆಂಬ ನೈದಿಲೆಗೆ 
 ಪೂರ್ಣಚಂದ್ರ ಸದೃಶ; ಬಂಡುಣಿ=ದುಂಬಿ; 
 ನಿಂದಕಜನಕದಳಿ ಸಿಂಧೂರ=ನಿಂದಕರೆಂಬ 
 ಬಾಳೆಯ ತೋಟಕ್ಕೆ ಆನೆಯಂತೆ;
							

281 ಶ್ರೀ ರಾಘವೇಂದ್ರ ನಮಸ್ತೇ

281.	ರಾಗ: ಕಾಂಬೋಜಿ	ತಾಳ: ಆದಿ
ಶ್ರೀ ರಾಘವೇಂದ್ರ ನಮಸ್ತೇ	ಪ
ಪರಿವರಾಬ್ಧಿಪರಿಪೂರ್ಣಚಂದ್ರ ನಮಸ್ತೇ	ಅ.ಪ
ಕೃತಯುಗದಲಿ ವರಕ್ರತುವ ಮಾಡಿದ 
ಕ್ಷೇತ್ರ ಪತಿಯೊಳು ಮಂತ್ರ ವಸತಿಯ ಮಾಡಿದ ಭಾಗ- 
ವತಕುಲೋತ್ತಂಸರನ್ನ ಪ್ರಾರ್ಥಿಪೆ ಭಕ್ತಿ-
ಪಥದೊಳಿಡಿಸೋ ನೀ ಎನ್ನ ಜನ್ಮಾದಿ ಸಂ-
ಚಿತವ ಕಳೆಯೊ ಪ್ರಪನ್ನ ಪಾಲಕ ಹರಿ
ಶತಪತ್ರಮಧುವ್ರತಾಶ್ರಿತರವಿರತದಾತಾ 	1
ಪರಿಮಳ ಖಂಡಾರ್ಥವರಗೀತಾವಿವೃತ್ತಿ
ಸುರಚಿರತಂತ್ರಾದಿ ನಿರುಪಮಗ್ರಂಥ ವಿ-
ಸ್ತರಿಸಿದ ಯಮಿರ್ಯನೇ ಸಾರಸ್ವತ 
ಶರಧಿಶಫರಚರ್ಯನೇ ಮಧ್ವಾಗಮ
ಸಾರಸೋದಯಸೂರ್ಯನೇ ಬೃಂದಾವನಾ-
ಗಾರ ಭೂಸುರರ ಉದ್ಧಾರ ಮಾಡಿದ ಧೀರಾ	2
ತುಂಗಾತೀರದ ಮುನಿಪುಂಗವನೇ ಭವ
ಭಂಗವು ತವಕೃಪಾಪಾಂಗದಿ ಹಿಂಗುವ
ಸಂಗತಿಯನು ಕೇಳುತ ಧಾವಿಸಿ ಬಂದೆ
ಅಂಗಸ್ವಂಗಾದ್ಯಹಿತ ಬಿಡಿಸೆಲೊ ನರ-
ಸಿಂಗನಾದರ್ಶಭಕುತ ಬಿನ್ನೈಸುವೆ
ರಂಗನಾಥನ ಪಾದೋತ್ತುಂಗಸುಧಾಸಂಗಾ	3
ಅಪಮೃತ್ಯು ದುರ್ಭಯಾದ್ಯಪರೀತ ಕ್ಷಯ ಪ್ರೇತಾ-
ದ್ಯುಪಟಳನಾಶ ವಿತ್ತಪದಯದೈನ್ನ ಹೃ-
ತ್ತಪನೀಯಪಾತ್ರದೊಳು ಹರಿಯಧ್ಯಾನ-
ದಪರೂಪಾಮೃತಹೊನಲು ಉಕ್ಕೇರಲಿ 
ಗುಪಿತದಿ ಹಗಲಿರುಳು ಅನ್ಯೊಲ್ಲೆ ಬಿ-
ನ್ನಪವ ಪೂರೈಸೊ ಹೇ ಕೃಪಣವತ್ಸಲ ಪ್ರಭೋ	4
ದೇಶ ದೇಶದ ಜನರಾಸೆ ಪೂರೈಸುವ 
ದೇಶಿಯ ಕಂಡು ವಿಲಾಸದಿ ತಂದೆವೆಂಕ-
ಟೇಶವಿಠಲನ ದಾಸನೇ ಮೊರೆಯ ಹೊಕ್ಕೆ
ಪೋಷಿಸೊ ಗುರು ಬೇಗನೇ ವೈಷಿಕದಿ ಜಿ-
ಹಾಸೆ ಪುಟ್ಟದೆ ಸುಮ್ಮನೆ ರೋದಿಸುತ
ಕೈಸೋತೆ ಬಾ ಭವ ಕಾಸಾರಕಾತಪನೇ	5
ಶತಪತ್ರ=ತಾವರೆ; ದೇಶಿ=ಗುರು; 
ವೈಷಿಕದಿ=ವಿಷಯ ಸುಖದಲ್ಲಿ; 
ಕಾಸಾರಕಾತಪ = ಸಂಸಾರವೆಂಬ 
ಸರೋವರಕ್ಕೆ ಸೂರ್ಯನಂತೆ
(ಬತ್ತಿಸುವ ಸೂರ್ಯ);
							

282 ಶ್ರೀ ರಾಘವೇಂದ್ರಾ ನಮೋ

282.	ರಾಗ: ಉದಯ	ತಾಳ: ವಾರ್ಧಿಕ ಷಟ್ಪದಿ
ಶ್ರೀ ರಾಘವೇಂದ್ರಾ ನಮೋ	ಪ
ಶ್ರೀ ರಾಘವೇಂದ್ರ ಮಧ್ವಾಗಮಾಂಬುಧಿಚಂದ್ರ
ಶ್ರೀ ರಾಘವೇಂದ್ರ ಹೃದ್ರೋಗಹರಭಿಷಗೇಂದ್ರ
ಶ್ರೀ ರಾಘವೇಂದ್ರ ಮಂತ್ರಾಗರಾದ್ಭುತಚರಿತ ಯೋಗೀಂದ್ರ ಕುಮುದಚಂದ್ರ	ಅ.ಪ
ಆದಿಯಲಿ ಪ್ರಹ್ಲಾದನಾದಶಾಶ್ಯಾವರಜ
ಯೋಧ ಪ್ರತೀಪಭವ ಭೂದೇವ ವ್ಯಾಸಮುನಿ-
ಯಾದಿ ವಿವಿಧತ್ವದಲಿ ಶ್ರೀಧವಾರ್ಚನೆಗೈದು ಮೋದಾಭಿವೃದ್ಧಿಗಾಗಿ
ವೇದವಿದ್ಯಾವಿಭವನಾದ ಬ್ರಹ್ಮೋಪಾಸ-
ನಾದಿ ಸತ್ಕರ್ಮ ಪರವಾದಿನಿಗ್ರಹ ಪೂರ್ಣ-
ಬೋಧಸಮಯ ಸಮಗ್ರ ಸಾಧಿಸಿದ ಸದ್ವೈಷ್ಣವೋದರದಿ ಜನಿಸ ಬಯಸಿ	1
ಕುಂಭಕೋಣದಿ ಶ್ರೋತ್ರಿಯಾಂಬರದಿನೇಶನಹ
ತಿಂಭಟ್ಟನಾತನ ನಿತಂಬಿನಿಯ ಗರ್ಭಾಮೃ-
ತಾಂಬುನಿಧಿಯಲ್ಲಿ ಶಶಿಬಿಂಬದಂತಖಿಳಗುಣಸಂಭಾವಿತನು ವೇಂಕಟ-
ನೆಂಬ ನಾಮದಿ ಜನಿಸಿ ಶಂಭುವೊಲು ವೇದಾಂತ
ಗುಂಭಪ್ರಕರಣಗಳ ಗಂಭೀರಭಾವವನು
ತುಂಬುಸಭೆ ವಿದುಷನಿಕರುಂಬ ಸಲೆಮೆಚ್ಚುವವೊಲಿಂಬಾಗಿ ಅಭ್ಯಸಿಸಿದ	2
ಗುರುಸುಧೀಂದ್ರರ ಪರಮಕರುಣಾಕಟಾಕ್ಷಕ್ಕೆ
ಸರುವವಿಧದಲಿ ಪಾತ್ರತರನಾಗಿ ಮತರಾಜ್ಯ
ಸರಸತೀಪೀಠವಾರುಧಿರ ಫಾಲ್ಗುಣ ಶುದ್ಧವೆರಡನೇದಿನವೇರಿದ
ಮರುತಸಮಯಸುಸಾರವರವಿಹಾಯಸದಲ್ಲಿ
ಸ್ಫುರದಚೌಷಷ್ಠಿಕಲೆಪರಿಪೂರ್ಣಚಂದ್ರಮನ 
ಪರಮಸುಕೃತೋದಯವು ಅರರೆ ನೋಳ್ಪರ ಪುಣ್ಯ ಕರತಲಾಮಲಕಪರವು	3
ಆಸೇತುನೀಹಾರ ವಾಸ ಸ್ಥಳಾಂತವಿಹ
ವಾಸುಕೀಶಯನಮಹಿಮಾಶ್ರಯಸ್ಥಾನವೆಂ-
ಬಾ ಸಮಸ್ತಕ್ಷೇತ್ರವಾಸಿಯಾಗ್ಯೆದುರಾಂತ ಸಾಸಿರಾಧಿಕಾವೈದಿಕ
ಆಸುರೀಪ್ರಕ್ರಿಯೋಪಾಸಕರ ನಿಗ್ರಹಿಸಿ
ಶ್ವಾಸಪತಿಸನ್ಮತೋಪಾಸನೆಯ ಕರುಣಿಸಿ ಪ್ರ-
ಕಾಶಿಸಿದ ಪರಿಮಳಾಚಾರ್ಯ ಮುಕ್ತಾವಳೀ ಭಟ್ಟ ಭಾಷಾರ್ಯನೆನಿಸಿ	4
ಹುಡುಗನಿಗೆ ಅಸುವಿತ್ತು ಹಡೆವಳಿಗೆ ಜಲವಿತ್ತು
ಹಿಡಿಮಾತ್ರಮಣ್ಣಿನಲಿ ಬಡವನಿಗೆ ನಿಧಿ ತೋರಿ
ಕಡು ಗರ್ವಿಯವಘಡಿಸಿ ಕೆಡಕಿನರಪನನೊಲಿಸಿ ಪೊಡವಿಪನ ಮಾನ ಉಳಿಸಿ
ತೊಡವು ಸುಡದಲೆ ತೆಗಿಸಿ ಕೊಡುವುದನು ಸ್ವೀಕರಿಸಿ
ಅಡಿಭಜಿಪರಘ ಹರಿಸಿ ನುಡಿಸತ್ಯವನು ಮೆರೆಸಿ
ದೃಢಭಕ್ತಿಯನು ಬಲಿಸಿ ಕಡುಜ್ಞಾನನಿಧಿಯೆನಿಸಿ ಪೊಡವಿಯಲಿ ರಾಜಿಸಿದನು	5
ಹಿಂದೆ ಕೃತೆಯಲಿ ಕ್ರತುವನೊಂದಿ ಮಾಡಿದ ಕೋಲ-
ನಂದನೆಯ ತೀರದಿಹ ಸುಂದರಮಂತ್ರಾಲಯದಿ
ಸಂದ ಸುವಿರೋಧಿಪರಶ್ರಾವಣ ದ್ವಿತೀಯ ಭೃಗುಜಾಖ್ಯ ಶುಭ ವಾರದಿ
ತಂದೆ ಗುರು ಏನು ಗತಿ ಎಂದೆನುತ ದೈನ್ಯದಲಿ
ಹೊಂದಿ ಸ್ತುತಿಸುವ ಧರಣಿಬೃಂದಾರಕರ ನೃಪರ
ಸಂದೋಹಕಭಯ ನಲವಿಂದೋರಿ ಸಶರೀರ ಬೃಂದಾವನಸ್ಥನಾದ	6
ಶತಸಪ್ತವರ್ಷವಾಹುತರಾಗಿ ಇಪ್ಪರಿ-
ಲ್ಲತಿಶಯಗಳಾಗುವುವು ಗತಿದೋರಿ ಸರ್ವರಿಗೆ
ಪ್ರತಿಥನಾಗುವ ಸತ್ಯವತಿಪುತ್ರ ನರಸಿಂಹ ಕ್ಷಿತಿಜೆಧವ ಶ್ರೀಕೃಷ್ಣರು
ಪ್ರತಿಯಿಲ್ಲದಂತೆ ಸನ್ಹಿತರಾಗಿ ಬಂದವರ
ಮತಿಘರುಷವಿತ್ತಿವರ ವಿತತಯಶ ಮಾಡುವರು
ಚ್ಯುತಿಯಿಲ್ಲ ಪುರುಷಾರ್ಥಪ್ರತತಿಗಾಕರ ಸ್ವರ್ಗಕತಿಶಯವು ಮಂತ್ರಾಲಯ	7
ಸಾಧಕರ ಹೆಧ್ಯೇಯ ಸಾಧುಸಂಕುಲಗೇಯ
ಬೋಧಕರಿಗಮರಗುರು ಪಾದಶ್ರಿತಕಲ್ಪತರು
ವಾದಿಗಳ ಹೃಚ್ಛೂಲ ವೇದಾಂತಕುಲಕಪಿಲ ಮಾಧವಾರಾಧನಪ್ರಶೀಲ
ಖೇದ ಕಲ್ಮಶರಹಿತನಾದ ವಿದ್ಯಾಭರಿತ
ಬಾದರಾಯಣ ಪೂರ್ಣಬೋಧಮತ ವಿಸ್ತರಣ
ಭೋ ದಯಾಂಬುಧೆ ಸಾಧ್ಯಮಾದಪುದೆ 
	ಬಣ್ಣಿಸಲಗಾಧವೈಸಲೆ ಮಹಿಮೆಯು	8
ಅರುಣೋದಯದಲೆದ್ದು ಕರಣಶುದ್ಧಿಗಳಿಂದ
ಸ್ಮರಣ ಕೀರ್ತನಪುರಶ್ಚರಣ ಮಾಡಿದರಾಗೆ
ಕರುಣಾಳು ತಂದೆವೆಂಕಟೇಶವಿಠಲ ಸ್ವಾಮಿ ಭರಣಮಾಡುವ ಸೌಖ್ಯದಿ
ಮರಣಭಯ ತಪ್ಪುವುದು ಕರುಣಾಳು ಪ್ರತ್ಯಕ್ಷ
ಕರಣಗೋಚರನಾಗಿ ಸ್ಫುರಣ ಮಾಡುವಜ್ಞಾನ
ತರಣವಾಗುವುದು ವೈತರಣಿವಾಹಿನಿಯಿಂದ ನೆರೆನಂಬಿದವನೆ ಮುಕ್ತ	9
ಭಿಷಗೇಂದ್ರ=ಶ್ರೇಷ್ಠ ವೈದ್ಯ; ದಶಾಶ್ಯಾವರಜ=
ರಾವಣನ ತಮ್ಮ ವಿಭೀಷಣ; ಸಮಯ=ಮತ; 
ಶ್ರೋತ್ರಿಯಾಂಬರ=ವೇದಾಧ್ಯಯನ ಮಾಡಿದವರೆಂಬ 
ಆಕಾಶದಲ್ಲಿ; ಶಂಭುವೊಲು=ರುದ್ರನಂತೆ; ಗುಂಭ=ರಹಸ್ಯ; 
ರುಧಿರ=ಅರವತ್ತು ಸಂವತ್ಸರಗಳಲ್ಲೊಂದು; ಚೌಷಷ್ಠಿ 
ಕಲೆ=64 ಕಲೆಗಳು; ಕರತಲಾಮಲಕಪರವು=ಅಂಗೈ 
ನೆಲ್ಲಿಕಾಯಂತೆ; ಎದುರಾಂತ=ಎದುರಾದ; 
ಸಾಸಿರಾಧಿಕಾವೈದಿಕ=ಸಾಸಿರಕ್ಕೂ ಮೀರಿದ ಅವೈದಿಕ; 
ಶ್ವಾಸಪತಿ=ಪ್ರಾಣದೇವರು, ವಾಯುದೇವರು; 
ತೊಡವು=ಆಭರಣ; ಸತ್ಯವತಿಪುತ್ರ=ವೇದವ್ಯಾಸರು; 
ಕ್ಷಿತಿಜೆಧವ=ಭೂಮಿಪುತ್ರಿಯಾದ ಸೀತೆಯ ಪತಿ-ಶ್ರೀರಾಮ; 
ಪ್ರತತಿಗಾಕರ=ಪುರುಷಾರ್ಥ ಸಾಧನೆಗೆ ಸೂಕ್ತವಾದ ಸ್ಥಳ; 
ಹೃಚ್ಛೂಲ=ಹೃದಯಕ್ಕೆ ಶೂಲ; ಪ್ರಶೀಲ=ಉತ್ಕøಷ್ಟ ಶೀಲ; 
ಸಾಧ್ಯಮಾದಪುದೆ=ಸಾಧ್ಯವಾಗುವುದೆ (ಬಣ್ಣಿಸಲು); 
ಭರಣ=ರಕ್ಷಣೆ; ಸ್ಫುರಣ=ಹೊಳಪು; 
ತರಣವಾಗುವುದು=ಪಾರಾಗುವುದು;
							

283 ಶ್ರೀ ರಾಮಚಂದ್ರಪಂಕೇರುಹ ಚರಣ

283.	ರಾಗ: ಶಹನ/ಅಠಾಣ	ತಾಳ: ಆದಿ
ಶ್ರೀ ರಾಮಚಂದ್ರಪಂಕೇರುಹಚರಣಸು-
ಧಾರಸವ್ರತ ಪೊರೆಯೋ ರಾಘವೇಂದ್ರ	ಪ
ಕೋರೀದವರ ಮನಸಾರೇ ಬೀರುವ ಬುಧ
ತಾರಾಪರಿವೃತ ಪರಮೋದಾರೇಂದು ಗುಣಸಿಂಧು	ಅ.ಪ
ಕುಂಭಕೋಣದಿ ಶ್ರೋತ್ರೀಯಾಂಬರದಿನಮಣಿ ಎಂಬುವತೆರನುದಿಸೀ 
ಇಂಬು ವೈಣಿಕ ಶಾಸ್ತ್ರಾಂಭೋನಿಧಿಗೆ ಚಂದ್ರಬಿಂಬದವೊಲು ರಾಜಿಸೀ
ಅಂಬುಜೋದ್ಭವಪಿತ ನಾನೆಂಬ ದುಸ್ತಾರ್ಕಿಕ
ರಂಭಾಟವಿಗೆ ಮತ್ತ ಕುಂಭಿ ಎಂದೆನಿಸಿದ	1
ಆಶುಗಮನಮತ ಭೂಸುರಮಕುಟ ಪ್ರಕಾಶ ವಿದ್ಯನ್ಮಣಿಯೆ 
ಶ್ರೀ ಸುಧೀಂದ್ರಾರ್ಯವಿದ್ಯಾಸಾಮ್ರಾಜ್ಯಸಿಂಹಾಸಾದಿಷ್ಟಿತಮುನಿಯೇ 
ವ್ಯಾಸಬಾಹ್ಲೀಕ ವಿಭೀಷಣ ಪ್ರಹ್ಲಾದ
ಲೇಸು ರೂಪದ ಮಂತ್ರಾವಾಸನಿಕೇತನ	2
ವಾತಾಗಮಾಬ್ಜ ಪ್ರದ್ಯೋತ ಸದ್ಗ್ರಂಥ ಪ್ರಣೀತ ಪರಿಣತ ಪೂಜ್ಯನೇ 
ಭೂತಳದೊಳಗೆ ಅಭೂತಪೂರ್ವಮಹಿಮಾತಿಶಯ ವಿರಾಜನೇ
ಪಾತಕಹರ ತಂದೆವೆಂಕಟೇಶವಿಠಲನ್ನ
ಪ್ರೀತ್ಯಾಸ್ಪದನೆ ಎನ್ನ ಮಾತ ಲಾಲಿಸಿ ಕಾಯೋ	3
ಪರಿವೃತ=ಸುತ್ತುವರಿದ; ರಂಭಾಟವಿ=ಬಾಳೆಯ ಮರದ ಅಡವಿ; 
ಮತ್ತ ಕುಂಭ=ಮದಿಸಿದ ಆನೆ; ವಾತಾಗಮಾಬ್ಜ 
ಪ್ರದ್ಯೋತ=ವಾಯುದೇವರ ಮತವೆಂಬ ಕಮಲಕ್ಕೆ 
ಸೂರ್ಯನಂತೆ; ಪ್ರಣೀತ=ರಚಿತ;
							

284 ಸಿರಿಮಂತ್ರಾಲಯರಾಯರೇ ಶರಣಯ್ಯ

284.	ರಾಗ: ಅಠಾಣ/ಕಲ್ಯಾಣಿ	ತಾಳ: ಆದಿ
ಸಿರಿಮಂತ್ರಾಲಯರಾಯರೇ ಶರಣಯ್ಯ 
ಮದ್ಗುರುರಾಘವೇಂದ್ರಾರ್ಯರೇ	ಪ
ಚಿರಮುದಿತಭೂಸುರ ಚಕೋರಕ
ಶರಮೃಗೋದರ ವರಕೃಪಾಕರ	ಅ.ಪ
ಅನುಮಾನತೀರ್ಥಾಗಮವನಧಿಸೋಮ
ಮೌನಿಕುಲಾಭಿರಾಮ ಅನುನಯಪ್ರೇಮ
ಜಾನಕೀಶಧ್ಯಾನ ಶೃತಿಸಂಧಾನಮಾನಸದೀನವತ್ಸಲ	1
ಕರುಣೀಗಳೊಳು ನಿನಗೆಣೆ ನಾನೆಲ್ಲು ಕಾಣೆ
ಪ್ರಣತಾಭಿರಕ್ಷಾಮಣೇ ಪಾಲಿಸೆನ್ನಾಣೆ
ನಿರತಿಶಯ ನಿರವದ್ಯ ನಿರ್ಮಲ ಪರಮಹಂಸ ಪ್ರಹ್ಲಾದನಂಶದ	2
ಶ್ರೀಸುಧಾಸೌರಭವ ಪ್ರಸರಣವಿಭವ
ವ್ಯಾಸಾದಿ ರೂಪೋದ್ಭವ ಸುಧೀಂದ್ರಸಂಭವ
ಮೇಶ ತಂದೆವೆಂಕಟೇಶವಿಠಲನ ಭಾಸ್ವದಂಘ್ರಿಕುಶೇಶಯಾಶ್ರಿತ	3
ಚಿರ ಮುದಿತ=ಸದಾ ಸಂತೋಷವಾಗಿರುವ; 
ಚಕೋರಕ=ಚಕ್ರವಾಕ ಪಕ್ಷಿಗಳು; 
ಶರ ಮೃಗೋದರ=ಶರದೃತುವಿನ ಚಂದ್ರ; ಪ
್ರಣತಾಭಿ ರಕ್ಷಾಮಣೇ=ಶರಣಾಗತ ರಕ್ಷಕ ಶ್ರೇಷ್ಠ; 
ನಿರವದ್ಯ=ಕಳಂಕರಹಿತ; ಕುಶೇಶಯ=ಕಮಲ;
							

285 ಸ್ಮರಿಸಿ ಬಾಳ್ವೆನೂ ಪದ ನಿರೇಜದ್ವಯವನೂ

285.	ರಾಗ: ಪೀಲು	ತಾಳ: ಆದಿ
ಸ್ಮರಿಸಿ ಬಾಳ್ವೆನೂ ಪದ ನಿರೇಜದ್ವಯವನೂ 
ಪೊರೆಯಲೆಮ್ಮನು ಗುರುಸುಧೀಂದ್ರತನುಜನೂ 	ಪ 
ಜ್ಞಾನ ಭಕುತಿಯಾ ಸಮೀಚೀನರಕ್ತಿಯಾ 
ಧ್ಯಾನಯುಕ್ತಿಯಾ ಕೊಡುವ ಭವ್ಯವ್ಯಕ್ತಿಯಾ	1 
ಪರಮಪಾವನಾ ಯಶೋಧರ ಸುಮುನಿಪನ 
ಪುರುಟಶಯನನ ಉದರಪುಣ್ಯರತ್ನನ	2 
ವ್ಯಾಸರಾಜನಾ ಸರ್ವಕ್ಲೇಶ ಭಂಜನ 
ಭಾಸ್ವದಾರ್ಯನ ಶ್ರೀ ಪ್ರತೀಪಜಾತನ 	3 
ರಾಘವೇಂದ್ರನ ಸಕಲಯೋಗಸಾಂದ್ರನ 
ಮಾಗಧಕಾಲನ ಸುಮತ ಗಗನಚಂದ್ರನ	4 
ಈಶ ತಂದೆ ಶ್ರೀ ವೆಂಕಟೇಶವಿಠಲನ 
ದಾಸವರ್ಯನ ಶೇಷಾವೇಶಧಾರನ	5
ಸಮೀಚೀನ ರಕ್ತಿ=ಯೋಗ್ಯವಾದ ಅಪೇಕ್ಷೆ; 
ಯಶೋಧರ=ಯಶೋವಂತ; 
ಭಾಸ್ವದಾರ್ಯ=ಕಾಂತಿಯುಕ್ತವಾದ; 
ಪ್ರತೀಪಜಾತ=ಬಾಹ್ಲೀಕ ರಾಜ;
62. ತಂದೆಶ್ರೀಪತಿವಿಠಲ
							

ವೃಂದಾವನದಲಿ ರಾಜಿಪ ಯತಿವರನ್ಯಾರೆ ಪೇಳಮ್ಮಯ್ಯ

 286.	ರಾಗ: ಮೋಹನ	/ರೇಗುಪ್ತಿ	ತಾಳ: ಅಟ/ರೂಪಕ
ವೃಂದಾವನದಲಿ ರಾಜಿಪ ಯತಿವರನ್ಯಾರೆ ಪೇಳಮ್ಮಯ್ಯ	ಪ
ಇಂದಿರೆಯರಸನ ಚಂದದಿ ಭಜಿಸುವ
ಕುಂದುರಹಿತ ರಾಘವೇಂದ್ರ ಕಾಣಮ್ಮ	ಅ.ಪ
ಮಂತ್ರಾಲಯಕೃತ ಮಂದಿರನೆನಿಸುವನ್ಯಾರೆ ಪೇಳಮ್ಮಯ್ಯ
ತಂತ್ರದೀಪಿಕಾ ಮುಖಗ್ರಂಥಕರ್ತನೆನಿಸುವನ್ಯಾರೆ ಪೇಳಮ್ಮಯ್ಯ
ಕಂತುಪಿತನಸತ್ಪಂಥದಿ ಭಜಿಸುವನ್ಯಾರೆ ಪೇಳಮ್ಮಯ್ಯ	
ಚಿಂತಿತಫಲದ ದುರಂತಶಕ್ತ ಜಯವಂತನೀತ ಅಘಶಾಂತ ಕಾಣಮ್ಮ	1
ಶ್ರೀಸುಧೀಂದ್ರಕರಕಮಲಜನೆನಿಸುವನ್ಯಾರೆ ಪೇಳಮ್ಮಯ್ಯ
ತಾ ಸ್ವಪ್ನದಿ ಮಂತ್ರಾಕ್ಷತೆ ಕೊಡುತಿಹನ್ಯಾರೆ ಪೇಳಮ್ಮಯ್ಯ
ಆಶುಗಮನಮತಸ್ಥಾಪಕನೆನಿಸುವನ್ಯಾರೆ ಪೇಳಮ್ಮಯ್ಯ
ಭಾಸುರಜ್ಞಾನಿ ವಿಶೇಷವಾಗಿ ಹರಿದಾಸ್ಯವಪಡೆದಯತೀಶ ಕಾಣಮ್ಮ	2
ಧಾರುಣಿಪತಿಸುತೆತೀರದಿ ನೆಲೆಸಿಹನ್ಯಾರೆ ಪೇಳಮ್ಮಯ್ಯ
ಸಾರಿದ ಭಜಕರ ಬಾರಿಬಾರಿಗೆ ಪೊರೆಯುವನ್ಯಾರೆ ಪೇಳಮ್ಮಯ್ಯ
ಕಾರುಣ್ಯನಿಧಿ ಅಪಾರಮಹಿಮನಿವನ್ಯಾರೆ ಪೇಳಮ್ಮಯ್ಯ
ನಾರಾಯಣ ತಂದೆಶ್ರೀಪತಿವಿಠಲನ ಆರಾಧಿಪ ರಾಘವೇಂದ್ರ ಕಾಣಮ್ಮ	3
63. ತಿರುಮಲೇಶಹರಿವಿಠಲ 
							

287 ರಾಘವೇಂದ್ರನೆ ಬಾರೊ

287.	ರಾಗ: ಸಾವೇರಿ 	ತಾಳ: ಆದಿ
ರಾಘವೇಂದ್ರನೆ ಬಾರೊ ಮಂತ್ರಾಲಯ ವಾಸನೆ ಬಾರೋ 	ಪ
ಬಾಗಿ ಭಜಿಸುವ ಭಕುತರ ಪೊರೆಯುವ 
	ಯೋಗಿಗಳರಸನೆ ಬಾರೋ 	ಅ. ಪ
ಶೇಷಪುತ್ರ ವಿಷ್ವಕ್ಸೇನನೆ ಶೂರನೆ ಸುರಸೇನಾಧಿಪ ಬಾರೋ
ಶೇಷಶಯನ ಶ್ರೀಹರಿಯನು ಭಜಿಸಿ ಮೆರೆದ ಪ್ರಹ್ಲಾದನೆ ಬಾರೋ	1
ಮೋಹನ ಮುರಳೀ ಲೋಲನ ಒಲಿಸಿದ ಯತಿಕುಲ ತಿಲಕನೆ ಬಾರೋ 
ಮಹಾರಾಜನ ಕುಹಯೋಗವ ಕಳೆದ ವ್ಯಾಸರಾಜನೇ ಬಾರೋ 	 2
ವರಹಜೆ ತೀರದಿ ಮೆರೆಯುವ ಸುರತರು ಭಕುತರ ನಿಧಿಯೆ ಬಾರೋ
ತಿರುಮಲೇಶಹರಿವಿಠಲರಾಯನ ಪ್ರೀತಿಯ ದೂತನೆ ಬಾರೋ 	 3
							

288 ವಂದನೆಯ ಮಾಡುವೆ ಬಂಧನ ಬಿಡಸೋ

288.	ಶ್ರೀರಾಘವೇಂದ್ರ ಸ್ತವನ - ಜಾನಪದ ಧಾಟಿ
ವಂದನೆಯ ಮಾಡುವೆ ಬಂಧನ ಬಿಡಸೋ
ತಂದೆ ಗೋವಿಂದಗತಿಪ್ರಿಯಾ
ತಂದೆ ಗೋವಿಂದಗತಿಪ್ರಿಯ ರಾಘವೇಂದ್ರ
ನಂದ ಕಂದಾನ ಒಮ್ಮೆ ತೋರಿಸೋ 	ಪ
ಸ್ವಚ್ಚವಾದ ತುಂಗಭದ್ರೆ ಮಂಚಾಲೆ ಗ್ರಾಮ
ಅಚ್ಯುತದೇವನ ಪೂಜಾರ್ಯ
ಅಚ್ಯುತದೇವನ ಪೂಜಾರ್ಯ ರಾಘವೇಂದ್ರ
ಸ್ವಚ್ಚಮನಸಿಗೆ ಒಲಿಯುವನೂ 	1
ಹೊಚ್ಚ ಹೊನ್ನಿನ ಬಣ್ಣ ಅಚ್ಚ ವೈಷ್ಣವನೀತ
ಬಿಚ್ಚು ಮನಸೀನ ಗುರುಗಳೂ
ಬಿಚ್ಚು ಮನಸೀನ ಗುರುಗಳು ರಾಘವೇಂದ್ರ
ತುಚ್ಚ ಮನಸೀಗೆ ನಿಲುಕರೋ 	2
ಅರವಿಂದ ನಯನ ಸುಂದರ ವದನ
ಅಂದದ ಮೂರುತಿ ಗುರುರಾಯ
ಅಂದದ ಮೂರುತಿ ಗುರುರಾಯ ರಾಘವೇಂದ್ರ
ಬಂದ ಭಕುತರ ಸಲಹುವನೂ 	3
ತುಂಬಿದ ಕಡಲಿಗೆ ಅಂಬೀಗನೀತ
ಹಂಬಲ ತುಂಬುವ ಕರುಣಾಳು
ಹಂಬಲ ತುಂಬುವ ಕರುಣಾಳು ರಾಘವೇಂದ್ರ
ನಂಬೀದ ಭಕುತರ ಕೈಬಿಡನೂ 	4
ಶುದ್ಧಶಿಲೆಯಾ ಮುದ್ದು ಬೃಂದಾವನ
ಕದ್ದು ಕೃಷ್ಣನಾ ಕುಣಿಸುವನು
ಕದ್ದು ಕೃಷ್ಣನಾ ಕುಣಿಸುವ ರಾಘವೇಂದ್ರ
ಸದ್ದು ಮಾಡದೆ ಸಲಹುವನು 	5
ತಿರುಮಲೇಶಹರಿವಿಠಲರಾಯನ
ನಿರುತದಿ ಭಜಿಸುವ ಮಹನೀಯ
ನಿರುತದಿ ಭಜಿಸುವ ಮಹನೀಯ ರಾಘವೇಂದ್ರ
ಹರಿಪುರ ದಾರಿಯ ತೋರುವನು 	6
							

289 ಶ್ರೀ ರಾಘವೇಂದ್ರ ಗುರು

289.	ರಾಗ: ಜಂಜೂಟಿ 	 ತಾಳ: ಆದಿ
ಶ್ರೀ ರಾಘವೇಂದ್ರ ಗುರು ಕರುಣಾಗ್ರೇಸರ
ದುರಿತ ನಿವಾರಣ ಇದೋ ನಮನ
ಚರಣಾರಾಧನೆ ಮಾಡುವ ಶರಣರ
ನಿರುತದಿ ಸಲಹುವ ಗುರು ನಮನ 	1
ಜ್ಞಾನಿಗಳರಸ ರಾಮಧ್ಯಾನ ರತ
ಘನ್ನಮಹಿಮ ಗುರು ಇದೋ ನಮನ
ಅನಾಥನಾಥ ದೀನರಧೀನ
ದೀನಜನಾಶ್ರಯ ಗುರು ನಮನ 	2
ಪೂರ್ಣಬೋಧಮತ ಕ್ಷೀರಸಾಗರಕೆ
ಪೂರ್ಣ ಚಂದಿರ ಇದೋ ನಮನ
ಸೀತಾಧವ ಪದ ಪಂಕಜ ಕಿಂಕರ
ಯತಿಕುಲತಿಲಕ ಗುರು ನಮನ 	3
ಮಾಧವ ನಾನೆಂದೆನ್ನುವ ದುರ್ಜನ
ವಾದಿ ಭೀಕರ ಇದೋ ನಮನ 
ಭೇದ ಪಂಚಿಕೆ ತರತಮ ಜ್ಞಾನವ
ಸಾಧಿಸಿ ತೋರುವ ಗುರು ನಮನ 	4
ವಂದಿಸಿ ಬೇಡುವ ಭಜಕರ ಪಾಲಿಗೆ
ಮಂದಾರ ತರುವ ಗುರು ನಮನ
ಸುಂದರ ಶುಭಕರ ಮಂಗಳ ರೂಪ
ಸುಧೀಂದ್ರತನಯ ಗುರು ನಮನ 	5
ಕುಷ್ಠಾದಿಹಾರಕ ಇಷ್ಟಪ್ರದಾಯಕ ಅ-
ನಿಷ್ಟದೂರಕ ಇದೋ ನಮನ 
ನಿಷ್ಠ ಭಕುತರ ತಕ್ಷಣ ಪೊರೆಯುವ
ವೈಷ್ಣವ ನಿಧಿಯೇ ಗುರು ನಮನ 	6
ವರಮಂತ್ರಾಲಯ ಪುರದಲಿ ಮೆರೆಯುವ
ಪರಮಪಾವನ ಇದೋ ನಮನ
ತಿರುಮಲೇಶಹರಿವಿಠಲರಾಯನ
ಪುರವನು ತೋರುವ ಗುರು ನಮನ 	7
							

290 ಶ್ರೀಶ ಮುಖ್ಯಪ್ರಾಣಪತಿ ಪದ

290.	
ಶ್ರೀಶ ಮುಖ್ಯಪ್ರಾಣಪತಿ ಪದ ದ್ವಂದ್ವ ಪದ್ಮಾರಾಧಕ
ದೋಷವೆಣಿಸದೆ ವಾಸುದೇವನ ದಾಸವೃಂದದ ಪೋಷಕ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 	1
ಹೀನ ಮಾನವ ನಾನು ನಿಮ್ಮಯ ಧ್ಯಾನ ಮಾಡದೆ ಬಳಲಿದೆ
ನಾನು ನನ್ನದು ಎಂಬ ವರ್ತುಲದಲ್ಲಿ ಸುತ್ತುತ ತೊಳಲಿದೆ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 	2
ಸ್ನಾನ ಸಂಧ್ಯಾ ಜಪವ ತೊರೆದು ನಿಂದ್ಯ ಕರ್ಮವ ಮಾಡಿದೆ
ಮಾನವಂತರ ಮನವ ನೋಯಿಸಿ ಮಂದ ಜನರನು ಕೂಡಿದೆ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 	3
ಘನವನರಿಯದೆ ಪರರ ಮಾನಿನಿ ಸಂಗ ಸುಖವನು ಬಯಸಿದೆ
ತನುವ ಭರಿಸಲು ಎಂಜಲೆನ್ನದೆ ಶ್ವಾನನಂದದಿ ಚರಿಸಿದೆ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 	4
ಮಧ್ವಶಾಸ್ತ್ರದ ಶುದ್ಧ ಜ್ಞಾನದ ಗಂಧ ಗಾಳಿಯನರಿಯದೆ
ಬದ್ಧ ಜನರನು ದೇವರೆನ್ನುತ ಅಪದ್ಧ ವಾದವ ಮಾಡಿದೆ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 	5
ವೇದಶಾಸ್ತ್ರವ ತುಚ್ಛೀಕರಿಸುತ ಶ್ರೀಶನಾಜ್ಞೆಯ ಮೀರಿದೆ
ವೇದವೇದ್ಯನ ದಿನದಿ ಬಯಸುತ ಉದರ ಪೋಷಣೆ ಮಾಡಿದೆ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 	6
ಹರಿಯ ಚರಿತೆಯು ಕಿವಿಗೆ ಬೀಳಲು ಬಧಿರನಂತೆ ನಟಿಸಿದೆ
ಹರಿಯ ದಾಸರು ಬಂದು ಕರೆಯಲು ಕುಂಟು ನೆಪವನು ಪೇಳಿದೆ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 	7
ಶರಣಜನ ಸಂರಕ್ಷಕ ನಿಮ್ಮ ಚರಣ ಪಿಡಿದಿಹೆ ರಕ್ಷಿಸಿ
ತಿರುಮಲೇಶಹರಿವಿಠಲರಾಯನ ಪಾದ ಪಂಕಜ ತೋರಿಸಿ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 	8
							

291.ಹಿಡಿಮನ ರಾಘವೇಂದ್ರರ

291.	ರಾಗ: ವಸಂತ 	ತಾಳ: ಆದಿ
ಹಿಡಿಮನ ರಾಘವೇಂದ್ರರ ಚರಣ
ಕಡು ದುಃಖ ನಿವಾರಣವಾಗುವುದೀಕ್ಷಣ 	ಪ
ದಂಡ ಕಮಂಡಲ ಧರಿಸಿ ಕೊರಳೊಳು ತುಳಸಿ ಕೋ-
ದಂಡ ರಾಮನ ಹೃತ್ಕಮಲದಿ ಸ್ಥಾಪಿಸಿ
ತಂಡ ತಂಡದಿಂದಾಗಮಿಸುವ ಭಜಕರ ಪೋಷಿಸು-
ತ್ಹಿಂಡು ಅಘ ಕಳೆದ್ಹಂಬಲ ಸಲಿಪರ 	1
ಫಾಲನೇತ್ರನ ಜಟೆಯಲಿ ಶೋಭಿಸುತಿರುವ
ಜಲಧಾರೆಯ ಜನಕನ ಸಂತತ ಭಜಿಪರ
ಮಲಿನರಿಗೆಟುಕದ ಮಹಿಮೆಯ ತೋರುವ
ಕಲಿಮಲ ಕಳೆಯುವ ಯತಿಕುಲ ತಿಲಕರ 	2
ವರಹಜೆ ತೀರದಿ ದುರಿತವ ಕಳೆಯುತ
ವರ ಮಂತ್ರಾಲಯ ಕ್ಷೇತ್ರದಿ ಮೆರೆಯುವ
ತಿರುಮಲೇಶಹರಿವಿಠಲರಾಯನ ಶುಭ
ಪುರವನ್ನು ತೋರುವ ಕರುಣಿಗಳರಸರ 	3
64. ಧನ್ವಂತ್ರಿವಿಠಲ 
							

292 ಗುರುರಾಯ ಮಹರಾಯ (ಸುಳಾದಿ)

292.	ಸುಳಾದಿ	ರಾಗ: ಭೈರವಿ
ಧ್ರುವತಾಳ
ಗುರುರಾಯ ಮಹರಾಯ ಗುಣಪೂರ್ಣ ರಾಘವೇಂದ್ರ
ಧೊರೆಯೆ ಕಾರುಣ್ಯನಿಧಿ ಸುರತರುವೆ
ಮರುತಾವತಾರ ಮಧ್ವಮುನಿಯಭಜಕಶ್ರೇಷ್ಠ
ಧರೆಯೊಳು ಪಾಮರರನ್ನ ಉದ್ಧರಿಪ ಮಹಿಮ
ವರಮಣಿ ಕಾಮಧೇನು ಶರಣು ಹೊಕ್ಕವರಿಗೆ
ಪೊರೆದು ವಿಸ್ತರಿಸಿತು ಜಗದಿ ಕೀರ್ತಿ
ಧರಣಿಪಾಲಕ ಶ್ರೀಧನ್ವಂತ್ರಿವಿಠಲಹರಿಯ
ಚರಣಧೇನಿಪ ಮಹಪರತರ ಯತಿಶ್ರೇಷ್ಠ
ಮಟ್ಟ ತಾಳ
ಲೋಕ ಜನರಿಗೆಲ್ಲ ನೀ ಕೊಡುವಿಯೊ ವರವ-
ನೇಕವಾಗಿ ಮಹಸಾಕಾರಕರುಣದಲಿ
ವಾಕುಲಾಲಿಸು ಗುರುವೆ ನಾ ಕೇಳುವೆವಂದು
ಏಕಬುದ್ಧಿಯನಿತ್ತು ಶ್ರೀಕರ ಶ್ರೀಧರನ-
ನೇಕವಾಗಿ ತುತಿಪ ನಾಕಜನರ ಸೇವೆ
ನೀ ಕರುಣಿಸಿ ನಿತ್ಯಸಾಕುವದಿನಿತೆಂಬೆ
ಲೋಕಪಾಲಕ ಶ್ರೀಧನ್ವಂತ್ರಿವಿಠಲ ನಿನಗೆ
ಬೇಕಾದ ಗುಣಪೂರ್ಣ ಗುರು ರಾಘವೇಂದ್ರಾರ್ಯ
ತ್ರಿವಿಡಿತಾಳ
ಸಾಧನವನ್ನು ಕಾಣೆ ಈ ಧರೆಯೊಳು ಪೂರ್ಣ-
ಬೋಧರಾಯರ ದಿವ್ಯಕರುಣವೇ ಹೊರತು
ನೀ ದಯವನು ಮಾಡೆ ನಿತ್ಯಾನುಗ್ರಹ ಮಾಳ್ಪ-
ರಾದಕಾರಣದಿಂದ ನಿಮ್ಮ ದಿವ್ಯ
ಪಾದ ಸೇವೆಯನ್ನಿತ್ತು ಪಾವನ್ನಮಾಡಿ
ಮೋದವೀವುದು ಜಗನ್ಮೋದಿ ಗುರುವೆ
ಮಾಧವ ಮಹಮಹಿಮ ಶ್ರೀ ಧನ್ವಂತ್ರಿವಿಠಲನ್ನ
ಸಾಧಿಸಿ ಕೊಡುವಂಥ ಸದ್ಗುಣಿ ರಾಘವೇಂದ್ರ
ಅಟ್ಟತಾಳ
ಗುರುವೆ ಸದ್ಗುಣರನ್ನ ಶರಣು ಹೊಕ್ಕೆನು ನಿನ್ನ
ಪರಿಪಾಲಿಸೊ ಮುನ್ನವರಿತನುಗ್ರಹವನ್ನ
ಮರೆಯಲಾಗದು ಎನ್ನವರದಯ ಪರಿಪೂರ್ಣ
ಮೊರೆಹೊಕ್ಕವನನ್ನು ಎರವುನೋಳ್ಪುದೆ ಚೆನ್ನ
ಹರಿಭಕ್ತಾಗ್ರಣ್ಯ ವರಮಧ್ವಮುನಿಯನ್ನ
ಸ್ಥಿರದಿ ಭಜಿಪ ಪೂರ್ಣಪರತರ ಗುಣಗಣ-
ವರಿಯ ರಾಘವೇಂದ್ರ ಶರಣ ಕರುಣಾಬ್ಧಿ
ವರಪ್ರದ ಶ್ರೀಧನ್ವಂತ್ರಿವಿಠಲನ್ನ ನಿಜದಾಸ
ಶಿರೋಮಣಿಯೆ ನಮೋ ಧೊರೆಯೆ ಶಾಶ್ವತಫಲದ
ಆದಿತಾಳ
ವರಪ್ರಹ್ಲಾದನವತಾರ ವ್ಯಾಸಮುನಿವರ್ಯ-
ದೆರಡನೆ ಅವತಾರ ವರಯೋಗಿ ಎನಿಸಿ
ಧರೆಯೊಳು ವಿಸ್ತರಿಸಿ ಮಹಿಮೆ ತೋರಿ ಉ-
ದ್ಧರಿಸಿ ಸಜ್ಜನರನ್ನು ಮೆರೆದು ಪರಮಸುಖ
ತ್ವರಿತದಿ ತೋರಿಕೊಟ್ಟು ಗುರುವರ ಗುಣವರ್ಯ
ಸುರಮುನಿ ರಾಘವೇಂದ್ರ ನರನಸಾರಥಿ ಶ್ರೀಧನ್ವಂತ್ರಿವಿಠಲನ್ನ
ಕರುಣನೀಕ್ಷಿಸಿ ತಕ್ಷಣದಿ ಉದ್ಧರಿಸುವ
ಜತೆ
ಆನಂದಮುನಿಯಿಂದವಂದ್ಯ ಶ್ರೀಧನ್ವಂತ್ರಿವಿಠಲನಿ-
ಗೆ ನಮಿಸುವ ರಾಘವೇಂದ್ರಗುರುವೆ ನಮೋ ನಮೋ
65. ನರಸಿಂಹ 
							

293 ಗುರುವೆ ಸುಜನರ ಸುರತರುವೆ

293.	ರಾಗ: ರೇವತಿ 	ತಾಳ: ಆದಿ
ಗುರುವೆ ಸುಜನರ ಸುರತರುವೆ
ಚರಣಕಮಲಗಳ ನಾ ನಂಬಿರುವೆ	ಪ
ವರ ಮಂತ್ರಾಲಯದಲಿ ನೆಲೆಸಿರುವೆ
ಶರಣರು ಕರೆಯಲು ಧಾವಿಸಿ ಬರುವೆ	1
ಸ್ಮರಿಸಿದ ಮಾತ್ರದಿ ಸಂಕಟ ಪರಿಹಾರ
ದುರಿತ ತಿಮಿರಕೆ ಉದಯ ಭಾಸ್ಕರ	2
ಸಿರಿ ನರಸಿಂಹನ ಚರಣಾಬ್ಜ ಭ್ರಮರ 
ಕರುಣಿಸಿ ಕಾಯೊ ಗುರು ರಾಘವೇಂದ್ರ	3
							

294 ಜಯ ಜಯ ರಾಘವೇಂದ್ರ

294.	ರಾಗ: ನಾಟ 	ತಾಳ: ಝಂಪೆ
ಜಯ ಜಯ ಜಯ ಜಯ	ಪ
ಜಯ ರಾಘವೇಂದ್ರ ಸಜ್ಜನ ಪಯೋನಿಧಿ ಚಂದ್ರ
ಜಯ ಸುಗುಣಸಾಂದ್ರ ಜಯ ವಸುಧಾಮರೇಂದ್ರ	ಅ.ಪ
ಪ್ರಥಮಾವತಾರದೊಳ್ ಪಿತನಿಗೋಸುಗಮಾಗಿ 
ರತಿ ಪತಿಯ ಪಿತನು ಸರ್ವತ್ರನಿಹನೆಂದು
ಪಂಥಗೈಯುತ ಉಕ್ಕು ಸ್ತಂಭದೊಳ್ ನರಹರಿಯ
ಅತ್ಯಂತ ರೌದ್ರಾವತಾರಗೈಸಿದನೆ	1
ಮರಳಿ ಕಲಿಯುಗದಿ ಹರಿದಾಸಕೂಟವ ರಚಿಸಿ
ಪರಮ ಮಧ್ವ ಮತಾಬ್ಧಿ ಮೀನನೆನಿಸಿ
ಸಿರಿಗೋಪಕೃಷ್ಣನ ಚರಣಗಳ ಭಜಿಸಿದ
ಪರಮ ಗುರುವರ್ಯ ಶ್ರೀಚಂದ್ರಿಕಾಚಾರ್ಯ	2
ತುಂಗಭದ್ರಾ ತೀರದೊಳು ನೆಲೆಸಿ ಲಕುಮಿ ನರ-
ಸಿಂಹನ ದಾಸಾಗ್ರಗಣ್ಯನೆನಿಸಿ ಉ-
ತ್ತುಂಗ ಮಹಿಮೆಗಳನ್ನು ಜಗಕೆತೋರ್ದ ಯತೀಂದ್ರ
ಅಂಗಲಾಚುವೆನಯ್ಯ ಪೊರೆ ರಾಘವೇಂದ್ರಾ	3
							

295 ದಾಸನೆಂದೆನಿಸೊ ಎನ್ನ ನಿನ್ನ ದಾಸನೆಂದೆನಿಸೊ

295.	ರಾಗ: ತೋಡಿ	ತಾಳ: ಮಿಶ್ರಛಾಪು
ದಾಸನೆಂದೆನಿಸೊ ಎನ್ನ ನಿನ್ನ ದಾಸನೆಂದೆನಿಸೊ ಎನ್ನ
ವಾಸುದೇವನ ನಿಜದಾಸವರೇಣ್ಯ	ಪ
ಈಸಲಾರದೆ ಭವ ವಾರಾಶಿಯೊಳು ಮುಂದೆ
ಘಾಸಿಗೊಂಡಿಹೆನಯ್ಯ ಈ ಸಮಯದಿ ಸಲಹಿ	ಅ.ಪ
ತರಳ ವೆಂಕಣ್ಣನಿಗೆ ಅನುಗ್ರಹಿಸಿ
ಧರೆಯೊಳಾದವಾನಿಗೆ
ವರ ಮಂತ್ರಿ ಎನಿಸಿ ನಿಜ ಶರಣರ ಪೊರೆಯಲು
ವರ ಮಂತ್ರಾಲಯದೊಳು ಬಂದು ನಿಂತೆಯಾ ಸ್ವಾಮಿ	1
ಭೃತ್ಯನೊಬ್ಬನು ಯಾಚಿಸೆ ಶೌಚದ ವೇಳೆ
ಮೃತ್ತಿಕೆಯನನುಗ್ರಹಿಸಿ ಗೃ-
ಹಸ್ಥನ ಸಂತಾನದಪಮೃತ್ಯು ಕಳೆದು ನಿಜ
ಭೃತ್ಯನ ಸದ್ಗೃಹಸ್ಥನಗೈಸಿದ ಸ್ವಾಮಿ	2
ಪ್ರಹ್ಲಾದರೆಂದೆನಿಸಿದೆ ಧರೆಯೊಳು ಮತ್ತೆ
ಬಾಹ್ಲೀಕರಾಗವತರಿಸಿದೆ
ಲೀಲಾವತಾರ ಶ್ರೀವ್ಯಾಸಯತೀಂದ್ರ
ಮೂಲ ರಾಮರ ಪೂಜೆಗೈದ ರಾಘವೇಂದ್ರ	3
ಭ್ರಷ್ಠನಾದೆನೊ ನಾನು ಅರಿಯದೆ ನಿನ್ನ
ಶ್ರೇಷ್ಠ ಮಹಿಮೆಗಳನ್ನು
ಇಷ್ಟರೊಬ್ಬರ ಕಾಣೆ ಸೃಷ್ಟೀಶನಾಣೆ ನಿ-
ನ್ನಷ್ಟಾಕ್ಷರಿಯಿತ್ತು ಕಷ್ಟಗಳ ಪರಿಹರಿಸಿ	4
ಮಂತ್ರ ತಂತ್ರಗಳರಿಯೆ ವಿಚಾರಿಸೆ ಹೇ
ಮಂತ್ರಾಲಯ ದೊರೆಯೆ
ಧಾತ್ರಿಯೊಳ್ ವರಗಂಜಿಗುಂಟಾಖ್ಯಪುರವಾಸ
ಧಾತೃಪಿತ ಲಕುಮಿ ನರಸಿಂಹನ ನಿಜದಾಸ	5
							

296 ಬಾರೊ ಬಾ ರಾಘವೇಂದ್ರ

296.	ರಾಗ: ಝೇಂಕಾರಿ 	ತಾಳ: ಆದಿ
ಬಾರೊ ಬಾ ರಾಘವೇಂದ್ರ ಯತೀಂದ್ರ
ಬಾರೊ ವೈಷ್ಣವಾಂಬುಧಿ ಚಂದ್ರ	ಪ
ಬಾರಿ ಬಾರಿಗೂ ಕರಗಳ ಮುಗಿಯುತ
ಸಾರಿ ಕರೆಯುವೆನು ಗುರುವರ ಬಾ	ಅ.ಪ
ನೋಡುವೆ ತವ ಮಂಗಳ ಮೂರ್ತಿಯ
ಪಾಡುವೆ ತವಸತ್ ಕೀರುತಿಯ
ರೂಢಿಯೊಳ್ ಹರಿಪದ ಗಾಢ ಭಕುತಿಯನು
ಬೇಡುವೆ ನಿರತವು ನೀಡೆನಗೆ	1
ಅರಿಯೆನೈ ತಂತ್ರಸಾರದ ಪೂಜೆಯ
ಅರಿಯೆನು ಮಂತ್ರೋಚ್ಚಾರಣೆಯ
ಶರಣರ ಪೊರೆಯುವ ಕರುಣಿ ನೀನಹುದೆಂದು
ಅರಿತು ಚರಣಯುಗ ನಂಬಿದೆನೈ	2
ಧರಣಿಯೊಳ್ ವರಗಂಜಿಗುಂಟಾಖ್ಯ
ಪುರದಿ ಮೆರೆವ ನರಸಿಂಹಾಖ್ಯ
ಸಿರಿಪತಿ ಚರಣಾಂಬುರುಹವ ಭಜಿಸುವ
ಗುರುತರ ಭಾಗ್ಯವ ಕರುಣಿಸು ಸತತ	3
							

297 ಮಂತ್ರಾಲಯದ ದೊರೆಯೆ

297.	ರಾಗ: ಬೇಗಡೆ	ತಾಳ: ಮಿಶ್ರಛಾಪು
ಮಂತ್ರಾಲಯದ ದೊರೆಯೆ ವಂದಿಪೆನು ಚರಣಕೆ 
ಸಂತ ವೈಷ್ಣವ ವಿಭುವೆ	ಪ
ಕಂತುಪಿತ ಸರ್ವೇಶ ಲಕ್ಷ್ಮೀ-
ಕಾಂತ ಚರಣಾಂಬೋಜಯುಗಳ
ಅಂತರಂಗದಿ ನೆಲೆಯಗೊಳಿಸುತ
ಸಂತತವು ನೆನೆವಂತೆ ಕರುಣಿಸು	ಅ.ಪ
ಬಲ್ಲಿದನಹುದೊ ನೀನು ಬುಧ ಜನರ ಪಾಲಿನ
ಕಲ್ಪ ಭೂರುಹ ಸುರಧೇನು
ಕ್ಷುಲ್ಲಕನು ನಾನಾದೆ ಮನವನು
ಗೆಲ್ಲಲರಿಯೆನು ಕರುಣಿಸೆನ್ನಯ
ಹುಲ್ಲುಗುಣಗಳನೆಣಿಸದೆಲೆ ತವ
ಪಲ್ಲವಾರುಣ ಪಾದ ತೋರಿಸು	1
ಮಾಯವಾದಿಗಳ ಗೆದ್ದು ಸಾರಿದೆಯೊ ಡಂಗೂರ
ತೋಯಜಾಸನ ಪಿತನೆ ಪರನೆಂದು
ಕಾಯಜಾತಾದ್ಯರಿಗಳಾರ್ವರ
ನ್ಯಾಯದಿಂ ಪೀಡಿಸುತಲಿರುವರು-
ಪಾಯಮಂ ಪರಿಹರಿಸಿ ಎನ್ನನು
ಕಾಯೊ ಯತಿವರ ಕರುಣಾ ಸಿಂಧು	2
ಶ್ರೀ ಸುಧೀಂದ್ರ ಸಂಜಾತ ಲಕ್ಷ್ಮೀನೃಸಿಂಹನ
ದಾಸ ಭಕ್ತರಪೋಷ
ದಾಸನೆನ್ನುತ ಬಳಿಗೆ ಕರೆದುಪ-
ದೇಶವನು ಕರುಣಿಸುತ ನಿನ್ನಯ
ದಾಸ ದಾಸರ ಸಂಗಡಿಗರೊಳು 
ವಾಸಮಾಡಿಸಿ ಪೊರೆಯೊ ಸತತ	3
							

298 ಮಹಿಮೆ ಸಾಲದೆ ಇಷ್ಟೆ

298.	ರಾಗ: ಕೇದಾರ	ತಾಳ: ಏಕ
ಮಹಿಮೆ ಸಾಲದೆ ಇಷ್ಟೆ ಮಹಿಮೆ ಸಾಲದೆ	ಪ
ಸಹಜ ಕೃಪಾಸಾಗರ ಗುರು-
ಸಾರ್ವಭೌಮ ರಾಘವೇಂದ್ರರ	ಅ.ಪ
ತುರುಗಳನ್ನು ಕಾಯುತಿದ್ದ
ತರಳ ವೆಂಕಣ್ಣಗೊಲಿದು 
ಸ್ಮರಣೆ ಮಾತ್ರದಿಂದ ದಿವಾ-
ನ್ಗಿರಿಯ ಕೊಡಿಸಿ ಸಲಿಹಿದಂಥ	1
ಕ್ಷಾಮ ಡಾಮರಗಳಿಗೆ ಹೆದರಿ
ಭೂಮಿಪ ಶರಣೆನ್ನಲವನ
ಸೀಮೆಯನ್ನು ದ್ವಾದಶಾಬ್ಧ	
ಕ್ಷೇಮದಿಂದ ಸಲಹಿದಂಥ	2
ಭೃತ್ಯನ ಸದ್ಭಕ್ತಿಗೊಲಿದು
ಮೃತ್ತಿಕೆಯನ್ನಿತ್ತು ಗೃ-
ಹಸ್ಥನ ಸಂತಾನ ಕಾಯ್ದು
ಉತ್ತಮ ಕನ್ಯೆ ಕೊಡಿಸಿದಂಥ	3
ಭ್ರಷ್ಟ ದ್ವಿಜನ ಶಂಖೋದಕದಿ
ಶ್ರೇಷ್ಠನೆನಿಸಿ ಭ್ರಮಿಸಿ ಬಂದ
ಶಿಷ್ಠ ಭೂಸುರರಿಗೆ ಅವ-
ರಿಷ್ಟದೂಟ ಉಣಿಸಿದಂಥ	4
ಸೇವಕನ ಸತಿಯು ಹೆರಿಗೆ
ನೋವಿನಿಂದ ಬಳಲುತಿರೆ ಕೃ-
ಪಾವನದಿ ಮಳಲ ಮಾರ್ಗದಿ
ಜೀವನವನು ತೋರಿ ಕಾಯ್ದ	5
ವ್ಯಾಸರಾಯ ಸಲಹೊ ಎಂದು
ದಾಸ ಕನಕ ತಂದು ಕೊಟ್ಟ
ಸಾಸಿವೆಯ ಸ್ವೀಕರಿಸಿ
ಆಶು ಮೋಕ್ಷ ಕರುಣಿಸಿದ	6
ಶಿಷ್ಯರಾದ ಅಪ್ಪಣಾ-
ಚಾರ್ಯರ ಸ್ತೋತ್ರಕ್ಕೆ ಮೆಚ್ಚಿ
ಭವ್ಯ ಬೃಂದಾವನದ ಮಧ್ಯೆ
ದಿವ್ಯ ರೂಪ ತೋರಿದಂಥ	7
ಮೇಜರ್ ಮನ್ರೋ ಎಂಬ ಆಂ-
ಗ್ರೇಜಿಗೊಲಿದು ಬೃಂದಾವನದಿ
ರಾಜಿಸುವ ರೂಪ ತೋರಿ
ಪೂಜನೀಯನೆನಿಸಿದಂಥ	8
ವರದ ನಾರಸಿಂಹಪ್ರೀಯ
ತರಳ ಪ್ರಹ್ಲಾದರಾಯ
ಧರೆಯ ಪಾಮರರ ಪೊರೆಯೆ
ಗುರುವಾರೇಣ್ಯರೆನಿಸಿ ಮೆರೆದ	9
66. ನರಸಿಂಹವಿಠಲ (1)
							

299 ನೋಡಿದ್ಯಾ ನೋಡಿದ್ಯಾ

299.	ರಾಗ: [ಶಂಕರಾಭರಣ]	ತಾಳ: [ರೂಪಕ]
ನೋಡಿದ್ಯಾ ನೋಡಿದ್ಯಾ	ಪ 
ನೋಡಿದ್ಯಾ ಶ್ರೀ ಗುರುಗಳನ್ನು ಈಡ್ಯಾಡಿ ಕೊಂಡಾಡಿದ್ಯಾ ಆಹಾ
ನೋಡಿ ಮನದಲ್ಲಿ ಕೊಂಡಾಡುತ್ತ ಗುರುಗಳ
ರೂಢಿವಳಗೆಲ್ಲ ಈಡಿಲ್ಲ ಯತಿಗಳ	ಅ.ಪ
ನಿಂತರೆದುರಲ್ಲೆ ಮುಖ್ಯ ಪ್ರಾಣಾ ಜಗ-
ದಂತರದೊಳಗೆಲ್ಲ ಅತಿ ಪ್ರಾಣಾ
ಅಂತರಂಗದಲ್ಲಿ ಶಾಂತ ಮೂರುತಿಗಳು
ಮಂತ್ರಾಲಯದಲ್ಲಿ ನಿಂತಿದ್ದ ಗುರುಗಳಾ * 	1
ಹೊದ್ದ ಕಾವೀಶಾಠಿಯಿಂದಾ ಶ್ರೀ-
ಮುದ್ರೆ ಹಚ್ಚಿದ ದೇಹದಿಂದಾ
ಮಧ್ಯದಿ ಕೇಸರಿ ಗಂಧಾ ಬಲು
ಮುದ್ದು ಸುರಿವನಾಮದಿಂದಾ
ತಿದ್ದಿದ ಅಂಗಾರ ಮುದ್ರೆಯೊಳಕ್ಷತೆ
ಎದ್ದು ಬರೂವಂಥ ಮುದ್ದು ಗುರೂಗಳಾ 	 2
ಮುದ್ದು ಬೃಂದಾವನದ ಮಾಟ ಅ-
ಲ್ಲಿದ್ದು ಜನರ ಓರೆನೋಟ ಪ್ರ-
ಸಿದ್ಧ ರಾಯರ ಪೂರ್ಣನೋಟ ನಮ್ಮ-
ಲ್ಲಿದ್ದ ಪಾಪಗಳೆಲ್ಲ ಓಟ
ಹದ್ದು ವಾಹನ ನರಸಿಂಹವಿಠಲಾ ಅ-
ಲ್ಲಿದ್ದು ವರವ ಕೊಡುವ ಗೋಪಾಲಕೃಷ್ಣನ್ನಾ	3
1ನೆಯ ನುಡಿಯಲ್ಲಿ 2 ಸಾಲು ಬಿಟ್ಟುಹೋಗಿರುವಂತಿದೆ - ಸಿಕ್ಕಿಲ್ಲ
67. ನರಸಿಂಹವಿಠಲ (2) 
							

ಅಮ್ಮ ನಿಮ್ಮ ಮನೆಗಳಲ್ಲಿ

300. ರಾಗ: [ಶಹನ]	ತಾಳ: [ಆದಿ]
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಾಘವೇಂದ್ರನ ಕಂಡಿರೇನಮ್ಮ	 ಪ
ಅಮ್ಮಾ ನಿಮ್ಮ ಮನೆಗಳಲ್ಲಿ ನಮ್ಮ ಗುರುಗಳ ಕಂಡಿರೇನಮ್ಮ	ಅ.ಪ.
ಕಾಲಲಿ ಕಡಾಂವಿಗಿ ಕರದಲ್ಲಿ ದಂಡಕಾಷ್ಟಾ
ಮೈಯೊಳು ಕಾವಿಶಾಟಿ ಪೊತ್ತಿರುವರಮ್ಮ
ಬಂದಬಂದ ಜನರಿಗೆಲ್ಲ ಆನಂದನೀಡುತ
ಛಂದಾಗಿ ತಾಂವು ಇಲ್ಲಿ ಇರುತಿಹರಮ್ಮ	1
ಬಂದಬಂದ ಜನರಿಗೆ ಅಭೀಷ್ಟವನೀಡುತ
ಛಂದಾಗಿ ಅಭಯವ ನೀಡುತಿಹರಮ್ಮ
ಒಂದಿನ ಸ್ವಪ್ನದಿ ಫಲಮಂತ್ರಾಕ್ಷತೆ ಕೊಡುತಲಿ
ಅಂದಿನ ಆನಂದನ ಕಾಣಮ್ಮ	2
ಬಂದಬಂದ ಜನರು ಪ್ರದಕ್ಷಿಣೆ ನಮಸ್ಕಾರ
ತಾಂವ ದಿಂಡುಉರುಳುವರಮ್ಮಾ
ಬಂದಬಂದ ಜನರಿಗೆಲ್ಲಾ ಅಭಯವನೀಡುತ
ತಾಂವ ತುಂಗಾತಟದೊಳು ಇರುತಿಹರಮ್ಮಾ	3
ಮೈಯೊಳು ಕೇಸರಿಗಂಧಾ ಪೂಸಿಸಿದಾರಮ್ಮಾ
ಎದುರಲಿ ಶ್ರೀಕೃಷ್ಣನ ಪೂಜಿಪರಮ್ಮಾ
ಢಾಳ ಅಕ್ಷಂತಿ ತಿದ್ದಿದಅಂಗಾರವು
ಮುದ್ರಿಯು ತಾಂವ್‍ಧರಿಸಿಹರಮ್ಮ	4
ಕರದಲಿ ಜಪಮಾಲೆ ಕೊರಳಲಿ ಕಮಲಾಕ್ಷಿ ತಾವ್
ಧರಿಸಿಹರಮ್ಮಾ ಬಿಡದೆ ನಿರಂತರ
ನರಸಿಂಹವಿಠಲನ ಜಪಿಸುತ
ತಾವೃಂದಾವನದೊಳ್ ಇರುಹರಮ್ಮಾ	5
							

301 ನೋಡಿದ್ಯಾ ಗುರುಗಳ

301.	ರಾಗ: ಶಂಕರಾಭರಣ	ತಾಳ: ಆದಿ
ನೋಡಿದ್ಯಾ ಗುರುಗಳ ಕೊಂಡಾಡಿದ್ಯಾ	
ಈಡಾಡಿದ್ಯಾ ಪಾಪಂಗಳ ||ಆಹಾ|| 	ಪ
ಮನಸಿಲಿ ನೋಡಿದ್ಯಾ ಯತಿಗಳನ್ನ
ನಾಡಿನೊಳಗೆ ಈಡಿಲ್ಲದಿಹ ಈ ಗುರುಗಳಾ	ಅ.ಪ.
ಹೊದ್ದ ಕಾವಿಶಾಠಿಯಲ್ಲಿ ಶ್ರೀ
ಮುದ್ರೆ ಹಚ್ಚಿದ ದೇಹಕಾಂತಿಯು ||ಆಹಾ||
ತಿದ್ದಿದ ಅಂಗಾರದ ನಡುವೆ ಅಕ್ಷತೆಯು
ಎದ್ದುಬರುವಂಥ ಈ ಮುದ್ದುಗುರುಗಳಾ	1
ನಿಂತ ಎದುರಲ್ಲಿ ಮುಖ್ಯಪ್ರಾಣಾ ಬೇಡಿ-
ದಂಥ ವರಗಳ ಕೊಡುವ ಜಾಣಾ ||ಆಹಾ|| 
ಜಗದಂತರದೊಳಗೆ ಪ್ರವೀಣಾ ಸೀತಾ-
ಕಾಂತರೊಳಗೆ ಅತಿಪ್ರಾಣಾ	2
ಮಂತ್ರಾಲಯದಲ್ಲಿರುವ ಮುದ್ದು ಬೃಂದಾವನದ ನೋಟ ಆ
ನಮ್ಮಲಿದ್ದ ಪಾಪಗಳೆಲ್ಲ ಓಟ ಅಲ್ಲಿ ವಿದ್ವಾಂಸರ ಜಗ್ಯಾಟ ||ಆಹಾ||
ಹದ್ದುವಾಹನ ನರಸಿಂಹವಿಠ್ಠಲದೂತ ನೀನು
ದಾರಿದ್ರ್ಯಗಳೆಲ್ಲವ ಪರಿಹರಿಸುವಂಥಾ	3
68. ನರಹರಿವಿಠಲ
							

302 ವಂದಿಸುವೆ ಸರ್ವದಾ ಸುಂದರ ಗುರು

302.	ರಾಗ: ಭೂಪ	ತಾಳ: ಝಂಪೆ
ವಂದಿಸುವೆ ಸರ್ವದಾ ಸುಂದರ ಗುರು ರಾಘ-
ವೇಂದ್ರ ನಿಮ್ಮಯ ಪಾದವ
ಮಂದಮತಿನಾನಹುದು ತಂದೆ ಸಲಹುವನೆಂ-
ತೆಂದು ನಂಬಿರುವೆ ನಿಜವಾ ದೇವ	ಪ
ಬೇಡಿಕೊಂಬೆನು ನಿನ್ನ ಮೂಢನಿವನೆಂದು
ಬೀಸಾಡದಿರು ಭವಶರಧಿಯೊಳು
ಬೇಡಿದ್ದು ಕೊಡುವ ಪ್ರಭು ನೀನಿರಲು ಅನ್ಯರ
ಕಾಡಲಾರೆ ಧರೆಯೊಳು
ಜೋಡಿಸುವೆ ಕರಯುಗ್ಮ
ನೋಡು ನೀ ದಯದಿಂದ ಕೂಡಿಸು ಭಕ್ತರೊಳು
ರೂಢಿಯೊಳು ನಿನ್ಹೊರತು ಕಾಪಾಡಿ ಕಾಯ್ವರ ಕಾಣೆ
ಮೋದಮತ ಕುಮುದಚಂದ್ರ ಗುಣಸಾಂದ್ರ	1
ಮಡದಿಮಕ್ಕಳ ಮೋಹ ಕಡಲಗೊಡಿಯನೆನಿಸಿ
ಒಡಲ ಕ್ಷುಧೆ ತೃಷೆ ಸಹಿಸಿದೆ
ಕಡುದುರಾತ್ಮರ ಬಳಿಯ ಕರ
ಒಡ್ಡಿ ಬಾಯ್ದೆರೆದು ಭಿಡೆಯಿಲ್ಲದಲೆ ಬೇಡಿದೆ
ಕೊಡಹಾಲು ಕೊಡುವಂಥ ಸುರಧೇನು ಇರಲಿನ್ನು ಬ-
ರಡಾವು ನಾ ಬಯಸಿದೆ ಪೊಡವಿಸುರ-
ರೊಡಿಯ ಪಾಲ್ಗಡಲಶಯನನ ನಾಮ
ನುಡಿಸು ನೀ ನಿರಂತರದೊಳು ಪ್ರಭುವೆ	2
ಶಿಷ್ಟಜನಪಾಲ ಗುರುಶ್ರೇಷ್ಠ ನಿಮ್ಮಯ ಮಹಿಮೆ
ಇಷ್ಟೆ ಎಂದ್ಹೇಳಲೊಶವೆ ಜನ ನಿಷ್ಟೆಯಿಂದಲಿ ಶತ
ಅಷ್ಟೋತ್ತರಾ ಜಪಿಸೆ ಮನೋ-
ಭೀಷ್ಟೆಯನು ಪೂರೈಸುವೆ
ಕುಷ್ಟರೋಗಾದಿಗಳು ನಷ್ಟಗೊಳಿಸಿ ಮಹೋ-
ತ್ಕøಷ್ಟಭೀಷ್ಟಜಾನೆನಿಸುವೆ
ಧಿಟ್ಟ ಶ್ರೀನರಹರಿವಿಠಲನ ಸಿಟ್ಟಿಳಿಸಿ
ಪುಟ್ಟಪ್ರಹ್ಲಾದರಾಯಾ ಧೊರಿಯಾ	3
							

303 ವಂದಿಪೆನು ಇಂದಿನ ಸುಂದರ ಗುರುರಾಜರ

303.	ರಾಗ: ಮಾಂಡ್	ತಾಳ: ಧುಮಾಳಿ
ವಂದಿಪೆನು ಇಂದಿನ ಸುಂದರ ಗುರುರಾಜರಂ ಮಾ-
ನಂದಮತಾಂಬುಧಿಚಂದಿರ ರಾಘವೇಂದ್ರರ	ಪ
ಭಾವಶುದ್ಧಿಯಿಂದಲಿ ವರಭಜನೆ ಮಾಡುತಿಹ ಜನರ
ಕಾವಕರುಣಿ ನಮ್ಮ ಯತಿವರ ಗುರುವರರೆ	1
ಚಂದ್ರಿಕ ಪರಿಮಳಾರ್ಯರ ರಾಮಚಂದ್ರರನುಗ್ರಹಪಾತ್ರರ
ಹಿಂದೆ ಕನಕಕಶ್ಯಪಜಾತರ ವ್ಯಾಸರ	2
ಮರೆಯದಿವರ ಸ್ತೋತ್ರ ಪಠಿಸುವವರಿಗೆ ನರಹರಿವಿಠಲ ಒಲಿಯುವ 
ದುರಿತರಾಶಿಗಳ ತರಿಯುವ ಸುಖಗರಿವ	3
304.	ರಾಗ: ಮಾಲಗುಂಜಿ	ತಾಳ: ದಾದರಾ
ನಾನೊಂದಿಪೆ ಗುರು ರಾಘವೇಂದ್ರನ
ಆನಂದಮತಾಂಬುಧಿಚಂದ್ರನ
ಗುಣಸಾಂದ್ರನ ನಾನೊಂದಿಪೆ	ಪ
ಶಿಷ್ಟಜನಪಾಲಭಿಷ್ಟದಾಯಕ ವರ-
ಕೊಟ್ಟು ಕಾಯುವಂಥ ಶ್ರೇಷ್ಠ ಮುನಿ
ದುಷ್ಟರೋಗಾದಿಗಳ ನಷ್ಟಗೊಳಿಸಿ ಸಿರಿ-
ಕೃಷ್ಣನ ಒಲಿಸಿದ ಧಿಟ್ಟರ ಅಘಕಳೆವನ	1
ಮಂಗಳಚರಿತ ವಿಹಂಗವಾಹನದೂತ
ಸಂಗೀತಪ್ರೀತ ಅನಂಗರಹಿತ
ತುಂಗತೀರವಾಸ ರಂಗನ ನಿಜದಾಸ
ಕಂಗೊಳಿಪನು ವೃಂದಾವನದಿ ಸತತ ಆನಂದಭರಿತ	2
ರಜತ ಕನಕ ರಥದೊಳು ಶ್ರೀರಾಮನ 
ಭಜಿಸುತ ಮೆರೆವ ಭೂಸುರಸಮೇತ
ಸುಜನಾಜನಭರಿತ ಭಜಿಪ ಭಕ್ತರದಾತ
ನರಹರಿವಿಠಲ ಸಿರಿಸಹಿತ ಇರುವನು ಸತತ	3
69. ನಾಗಶಯನವಿಠಲ
							

304 ನಾನೊಂದಿಪೆ ಗುರು ರಾಘವೇಂದ್ರನ

304.	ರಾಗ: ಮಾಲಗುಂಜಿ	ತಾಳ: ದಾದರಾ
ನಾನೊಂದಿಪೆ ಗುರು ರಾಘವೇಂದ್ರನ
ಆನಂದಮತಾಂಬುಧಿಚಂದ್ರನ
ಗುಣಸಾಂದ್ರನ ನಾನೊಂದಿಪೆ	ಪ
ಶಿಷ್ಟಜನಪಾಲಭಿಷ್ಟದಾಯಕ ವರ-
ಕೊಟ್ಟು ಕಾಯುವಂಥ ಶ್ರೇಷ್ಠ ಮುನಿ
ದುಷ್ಟರೋಗಾದಿಗಳ ನಷ್ಟಗೊಳಿಸಿ ಸಿರಿ-
ಕೃಷ್ಣನ ಒಲಿಸಿದ ಧಿಟ್ಟರ ಅಘಕಳೆವನ	1
ಮಂಗಳಚರಿತ ವಿಹಂಗವಾಹನದೂತ
ಸಂಗೀತಪ್ರೀತ ಅನಂಗರಹಿತ
ತುಂಗತೀರವಾಸ ರಂಗನ ನಿಜದಾಸ
ಕಂಗೊಳಿಪನು ವೃಂದಾವನದಿ ಸತತ ಆನಂದಭರಿತ	2
ರಜತ ಕನಕ ರಥದೊಳು ಶ್ರೀರಾಮನ 
ಭಜಿಸುತ ಮೆರೆವ ಭೂಸುರಸಮೇತ
ಸುಜನಾಜನಭರಿತ ಭಜಿಪ ಭಕ್ತರದಾತ
ನರಹರಿವಿಠಲ ಸಿರಿಸಹಿತ ಇರುವನು ಸತತ	3
69. ನಾಗಶಯನವಿಠಲ
							

304 ನಾನೊಂದಿಪೆ ಗುರು ರಾಘವೇಂದ್ರನ

305.	ರಾಗ: ಬೆಹಾಗ್	ತಾಳ: ಅಟ
ಪಾಲಯ ಮಾಂ ಮಂತ್ರಾಲಯ ಪ್ರಭುವೆ	ಪ
ಪಾಲಯ ಮಾಂ ನತಜನ ಪಾಲಕ ಗುರುವೆ	ಅ. ಪ
ಜ್ಞಾನ ಭಕುತಿ ವೈರಾಗ್ಯವೆಂಬ ನಿಜ
ಧನವ ಪಾಲಿಸಿ ಅನುಸಂಧಾನವ ಬಲಿಸೆಂದೆ
ದಾನಿಗಳರರಸೆ ನಿಧಾನಿಸದಲೆ ತ್ವ-
ತ್ಪಾದ ಸಂದರ್ಶನ ಸಲಿಸಿಂದೆ	1
ಗುರು ಕರುಣದಿ ಮನ ಕರಗಿತು ಹರಿಪರ 
ಗುರುಕರಾರ್ಚಿತ ಇದ ಸ್ಥಿರಪಡಿಸೆನ್ನ
ಪರಿಭವಣೆಯ ಸಂಹರಣಗೈಸಿ ಹರಿ
ಶರಣರೊಳಿಡು ಇಹ ಪರದೊಳಗಿನ್ನ	2
ಸ್ವಚ್ಛ ಭಕುತಿ ಸಂಪ್ರೋಚ್ಛದಿ ಅಚ್ಯುತ
ಉಚ್ಛ ನಾಗಶಯನ(ವಿಠಲ)ನ ತೋರೆಂದೆ
ನಿಚ್ಛಣಿಯಂದದೊಳ್ ಇಪ್ಪ ನಿನ್ನ ನಾ
ನೆಚ್ಚಿ ಬೇಡಿದ ಎನ್ನೀ ಈಪ್ಸಿತ ಸಲಿಸೋ	3
							

306 ಮಂತ್ರಾಲಯವಾಸ ಶ್ರೀ ರಾಘವೇಂದ್ರ

306.	ರಾಗ: ಶಂಕರಾಭರಣ 	ತಾಳ: ಝಂಪೆ
ಮಂತ್ರಾಲಯವಾಸ ಶ್ರೀ ರಾಘವೇಂದ್ರ 	ಪ
ಮಂತ್ರತಂತ್ರಾನಂತ ಮರುತಾಂತರ್ಗತಪ್ರೀಯ 	ಅ. ಪ
ಭೂತ ಪ್ರೇತ ಕಳೆದು ಶ್ರೀಪತಿ ಒಲುಮೆಯ
ಸತತ ಪೊಂದಿ ನೀನು ಕರುಣಾಳು ಎಂದೆನಿಸಿ
ಪಾತಕಹರ ವಾಯುವಾಂತರ್ಗತನನೂ ಚಂದದಿ 
ತುತಿಸಿ ನೀ ಮೆರೆದೆಯೊ ಕ್ಷಿತಿಯೊಳು 
ತುತಿಸೆ ನಿನ್ನನು ಭಕುತ ವೃಂದವು 
ಮಿತಿಯು ಇಲ್ಲದೆ ವರಗಳೀಯುತ 
ಖ್ಯಾತಿ ಪಡುತಿಹೆ ಕ್ಷಿತಿಯೊಳಗೆ 
ಪ್ರತಿದಿನದಿ ಸಿರಿಪತಿಯ ಕರುಣದಿ 	1
ಮಂಗಳ ದ್ವಿತಿಯ ಬಹುಳ ಶ್ರಾವಣದಲ್ಲಿ
ಪೊಂದಿ ರಂಗನ ಸಂಗ ನಿಂದೆ 
ಡಿಂಗರ ಪ್ರೀಯ ಅಂದು ಇಂದು ಮುಂದು 
ಸಂತ ವೃಂದವು ನಿನ್ನ ಹಿಂದು ಮುಂದು ನಿಂದು 
ಕಂಬು ಕೊಂಬನು ಊದೆ
ಮಿಂದು ಸಂತತ ಶರಧಿಯೊಳು ನಿ-
ರಂತರದಿ ಸಂಗೀತ ಪೇಳುತ ಚಂದದಲಿ ಅ-
ಲಂಕೃತರಂತರ್ಗತ ಗುರುವೆ ನಿನ್ನನು ಭಜಿಸುತಿಹರು 	2
ಸುರಪನಾಲಯವೆಂದು ಧರೆಯೊಳ್ ಈ ಕ್ಷೇತ್ರವು
ಗುರು ನಿನ್ನ ಪ್ರಭೆಯೊಳು ಖ್ಯಾತಿ ಪೊಂದಿತು ಇನ್ನು
ಪರಮ ದಾಸರು ನಿನ್ನ ಪರಿ ಪರಿ ತುತಿಸುತ 
ತ್ರಿಜಗದೊಳ್ ನಿನ್ನಯ ಕೀರ್ತಿ ಸಾರ್ದರು 
ಗುರುವೆ ಸ್ಮರಿಸಲ್ನರರ್ನಿನ್ನ ಭವದ 
ಶರಧಿಯೊಳ್ ಹರಿಯ ಸ್ಮರಣೆಯ 
ನೆರವನೀನಿತ್ತು ನಾಗಶಯನ(ವಿಠಲ) ಪೂರ್ಣ ನೋಟದಿ 
ಹರಿಯುವಿಯೊ ಕರೆಕರೆಯ ಪಾಶವ 	3
70. ನಾಗೇಶಶಯನ 
							

307 ರಾಘವೇಂದ್ರ ಗುರು ದಯಮಾಡೊ

307.	ರಾಗ: ಧನ್ಯಾಸಿ	ತಾಳ: ಆದಿ
ರಾಘವೇಂದ್ರ ಗುರು ದಯಮಾಡೊ ಅನು-
ರಾಗದಲೆನ್ನನು ಕಾಪಾಡೊ	ಪ
ಭಾಗವತರ ಸತ್ಸಂಗವ ನೀಡೊ
ಯೋಗಿವರ್ಯ ಎನ್ನ ಅಘಗಳ ದೂಡೊ	ಅ.ಪ
ವರಮಂತ್ರಾಲಯ ವರಹಜೆತಟದಲ್ಲಿ
ಪರಿಶೋಭಿಸುತಿಹ ಸುರಧೇನು
ಹರಿಗುರುಭಕುತರ ಕರೆದುವರವನೀವ
ಪರಮಕರುಣಿ ಸುರಕಲ್ಪತರು	1
ಕನಕಕಶ್ಯಪನಲಿ ಕಂದನಾಗಿ ನೀ-
ಜನಿಸುತೆ ಹರಿಯನು ಜಪಿಸುತಿರೆ
ಜನಕನು ಕೋಪದಿಂ ಹರಿಯೆಲ್ಲಿಹನೆನೆ
ಘನಕಂಬದಲಿ ತೋರಿದ ಗುರುವೆ	2
ಬಾಲಕತನದಲಿ ಬಾಲಶ್ರೀಕೃಷ್ಣನ
ಲೀಲೆಯಿಂ ಕುಣಿಸಿದ ವ್ಯಾಸಯತಿ
ಮಾಯಿಗಳನೆ ಗೆದ್ದು ತಾತ್ಪರ್ಯ ಚಂದ್ರಿಕ
ನ್ಯಾಯಾಮೃತ ತರ್ಕತಾಂಡವ ರಚಿಸಿದ	3
ತಂತ್ರದೀಪಿಕ ಮಂತ್ರಾರ್ಥಮಂಜರಿ
ತತ್ತ್ವಮಂಜರಿ ನ್ಯಾಯಮುಕ್ತಾವಳಿ
ಹತ್ತುಮೂವತ್ತೇಳು ಗ್ರಂಥಗಳ ರಚಿಸಿ
ಉತ್ತಮ ಪರಿಮಳಬೀರಿದ ಸದ್ಗುರು	4
ಭಾಗವಾತಾಗ್ರಣಿ ಭಕ್ತಚಿಂತಾಮಣಿ
ತ್ಯಾಗಿ ಸುಗುಣಖಣಿ ವಿದ್ವನ್ಮಣಿ
ಯೋಗಿ ಶ್ರೀಮಧ್ವರ ದಾಸಶಿರೋಮಣಿ
ನಾಗೇಶಶಯನನ ತೋರಿಸು ಕರುಣಿ	5
							

308 ಮಂತ್ರಾಲಯದಿ ಇರುವ ಶ್ರೀ ರಾಘವೇಂದ್ರ

 308.	ರಾಗ: [ಷಣ್ಮುಖಪ್ರಿಯ]	ತಾಳ: [ಆದಿ]
ಮಂತ್ರಾಲಯದಿ ಇರುವ ಶ್ರೀ ರಾಘವೇಂದ್ರ	ಪ
ಬೃಂದಾವನದಿ ಮೆರೆವ ಮಂತ್ರಾಲಯದಿ ಇರುವ
ಅಂತಃಕರಣದಿ ಕರೆಯೆ ನಿಂತಲ್ಲೆ ಒದಗುವ	ಅ.ಪ
ಕೃತಯುಗದಲ್ಲಿ ದೈತ್ಯಪತಿಯಲ್ಲಿ ಜನಿಸಿದ
ಅತುಳಮಹಿಮ ನರಹರಿಯನ್ನು ಭಜಿಸಿದ	1
ವ್ಯಾಸರಾಜರೆನಿಸಿ ಶ್ರೀಕೃಷ್ಣನ್ನ ಕುಣಿಸಿ
ದಾಸಜನರಿಗೆ ಉಪದೇಶಗ್ರಂಥಗಳ ರಚಿಸಿ	2
ಮಂತ್ರಾಲಯದಿ ನಿಂತು ಕಂತುಪಿತನ ಪಾದಾ-
ಕ್ರಾಂತರಾಗಿ ಬರುವ ಸಂತರಸಲಹುತ	3
ಯತಿಯು ತಾನಾಗಲು ಸತಿಯು ಬಹು ದುಃಖದಿ
ಮೃತಿಪೊಂದೆ ಕೂಪದಿ ಗತಿಯಿತ್ತು ಸಲಹಿದೆ	4
ಹನುಮಭೀಮಮಧ್ವರನು ಶ್ರದ್ಧೆಯಿಂದಲಿ
ಅನುದಿನ ಸೇವಿಸಿ ಘನಜ್ಞಾನಪೊಂದುತ	5
ಸುಧೀಂದ್ರಯತಿ ಕರಪದುಮಸಂಭವನಾಗೆ
ಮುದತೀರ್ಥ ಮತವನ್ನು ಹದನಾಗಿ ಸಾರುತ	6
ಸಿರಿರಾಮ ನರಹರಿ ಸಿರಿಕೃಷ್ಣ ವೇದವ್ಯಾಸ
ವರಮೂರ್ತಿಗಳ ಮನದಿ ನಿರುತದಿ ಜಪಿಸುತ	7
ಭೂತಪ್ರೇತಪಿಶಾಚಿ ಭಯಗಳೆಂಬ
ಪಾತಕಗಳಕಳೆದು ದೂತರಸಲಹುತ	8
ವರಮಧ್ವಶಾಸ್ತ್ರಗಳ ಮರ್ಮಗಳನ್ನೆ ತಿಳಿದು
ಪರಿಮಳ ಗ್ರಂಥವ ಹರುಷದಿ ಬೋಧಿಸುತ	9
ಮೂಕ ಬಧಿರ ಅಂಧರ ವ್ಯಾಕುಲಗಳ ಕಳೆದು
ಶ್ರೀಕಾಂತ ಹರಿಯಲ್ಲಿ ಏಕಾಂತಭಕ್ತಿ ಕೊಡುತ	10
ಬೃಂದಾವನದಿ ಸಕಲವೃಂದಾರಕರಸಹಿತ
ನಂದನಂದನನ ನಿಲಿಸಿ ಛಂದದಿ ಸೇವಿಸುತ	11
ತುಂಗತರಂಗಿಣಿ ಮಂಗಳತೀರದಿ
ಶೃಂಗಾರ ಸದನದಿ ರಂಗನ್ನ ಪೂಜಿಸುತ	12
ಸಂತಾನ ಸಂಪತ್ತು ಸುಜ್ಞಾನ ಮತಿಯಿತ್ತ-
ನಂತ ಕಾಲಗಳಲ್ಲಿ ಸಂತರ ಪೊರೆಯುತ	13
ದೇಶದೇಶದಿ ಬಂದ ದಾಸಜನರ ಬಹು
ದೋಷವ ಕಳೆದು ಸಂತೋಷವ ನೀಡುತ	14
ರಾಗದ್ವೇಶಗಳ ನೀಗಿ ನಿರ್ಮಲರಾಗಿ
ನಾಗೇಶಶಯನನ ಯೋಗಾದಿ ನೋಡುತ	15
71. ಪಂಡರೀನಾಥವಿಠಲ
ಸುಪ್ರಭಾತ
							

309 ಏಳಯ್ಯ ಗುರುರಾಜ ಏಳಯ್ಯ ರವಿತೇಜ

309.	ರಾಗ: [ಭೌಳಿ]	ತಾಳ: [ಖಂಡಛಾಪು]
ಏಳಯ್ಯ ಗುರುರಾಜ ಏಳಯ್ಯ ರವಿತೇಜ
ಏಳಯ್ಯ ಏಳು ಬೆಳಗಾಯಿತೂ	ಪ
ಧೂಳಿದರುಶನಕಾಗಿ ಭಕುತರೆಲ್ಲರು ಬಂದು
ಕಾದಿಹರು ಕಾತರದಿ ಗುರು ರಾಘವೇಂದ್ರಾ	ಅ.ಪ
ಯತಿ ಸುಧೀಂದ್ರರ ಕರಜ ಕ್ಷಿತಿಯೊಳಗೆ ಅಪ್ರತಿಮ
ಪ್ರತಿಗಾಣೆ ಮಂತ್ರಾಲಯನಿಲಯಾ
ಸತತ ಭಕ್ತೋದ್ಧಾರ ಸ್ತುತ್ಯ ನೀ ಗುಣಸಾಂದ್ರ
ಮತಿಯಿಂದ ಸ್ತುತಿಸುವೆನು ನಿಮ್ಮಂಘ್ರಿ ನಾನೂ	1
ವರಹಜೆಯ ತೀರಗನೆ ವರಹದೇವರ ಕರುಣ
ನಿರುತ ಪಾತ್ರನೆ ಮೌನಿ ಕುಲಶ್ರೇಷ್ಠಗುರುವೇ
ಪರಮಾತ್ಮ ಭೂಮಿಜೆಪತಿ ರಾಮಪದಭೃಂಗ
ಸುರತರುವೆ ಚಿಂತಾಮಣಿ ಕಲ್ಪವೃಕ್ಷಾ	2
ಶಂಕುಕರ್ಣನು ನೀನು ಪ್ರಹ್ಲಾದ ವ್ಯಾಸ ಮುನಿ
ವೆಂಕಟೇಶನ ದಯದಿ ಗುರು ರಾಘವೇಂದ್ರಾ
ಮಂಕುಮಾನವ ನಾನು ಶಂಕೆಯಿಲ್ಲದೆ ಕಾಯೋ
ಕಿಂಕರಾಗ್ರೇಸರನೆ ನಿನ್ನ ಸರಿ ಯಾರೂ	3
ದ್ವಾರದೊಳು ಕಾದಿಹರು ಕೋವಿದರು ಭಕ್ತಿಯಲಿ
ದಾರಿತೋರಿಸಿ ಗುರುವೆ ಮುಕ್ತಿ ಮಂಟಪಕೇ
ವೀರವೈಷ್ಣವ ಯತಿಯೆ ಕಾದಿಹರು ದರುಶನಕೆ
ಪಾರಗಾಣದ ಮಹಿಮೆ ಕೇಳಿ ಬಂದಿಹರೂ	4
ದಾಸರೆಲ್ಲರು ಸೇರಿ ನಿನ್ನ ಕೀರ್ತಿಸುತ್ತಿಹರು
ಶ್ರೀಶ ಕೃಷ್ಣನ ಭಜಕ ಕರುಣವಾರಿಧಿಯೇ
ಏಸೇಸೋ ಜನ್ಮದ ದೋಷವೆಲ್ಲವು ನಾಶ
ವಾಸವಾನುತ ಹರಿಯ ದಾಸ ನಿನನೀಕ್ಷಿಸಲು	5
ಸಂತಾನ ಸಂಪತ್ತು ಸುಜ್ಞಾನ ಭಕುತಿಯನು
ಸಂತಸದಿ ಕೊಡುವಂಥ ಶ್ರೀಮಂತ ನೀನೂ
ಸಂತರಿಂ ವಂದಿತನೆ ಸುಗುಣಸಾಗರ ಗುರುವೆ
ಸಂತತವು ತವಸ್ಮರಣೆ ಬರಲಿ ನಾಲಿಗೆಗೇ	6
ನಾರಿಯರು ನಿಂದಿಹರು ಆರತಿಯ ತಂದಿಹರು
ನೀರಜಾಕ್ಷನ ಕಂಡ ಕಾಷಾಯಧಾರೀ
ಸಾರುತ್ತ ನಿನ್ನ ಕೀರ್ತಿ ಕಾದಿಹರು ಕಾತರದಿ
ತೋರಯ್ಯ ಮುಖ ಕಮಲ ಮೂರಾವತಾರೀ	7
ಪರಿಮಳಾಚಾರ್ಯ ಗುರು ಪಾಲಿಪುದು ಕೃಪೆ ತೋರಿ
ದುರಿತ ದುಷ್ಕರ್ಮಗಳ ತರಿದು ಬೇಗ
ವರಭಕ್ತಿ ಜ್ಞಾನ ವೈರಾಗ್ಯ ಪಾಲಿಸು ಎನಗೆ
ಕರುಣದಲಿ ಶ್ರೀಹರಿಯ ದಾಸನಾದವಗೆ	8
ಮಂಗಳಾಂಗನ ಹೃದಯಕಮಲದೊಳು ತಂದು ನರ-
ಸಿಂಗ ಮೂರುತಿ ಕಾಂಬ ಭಾಗ್ಯವನೆ ಕೊಟ್ಟು
ಭಂಗ ಭವ ಬಿಡಿಸಿ ಪೊರೆ ಕಂಗಳಿಗೆ ಕಾಣುತ್ತ
ರಂಗ ಪಂಢರಿನಾಥವಿಠಲನ ದಾಸಾ	9
							

310 ಕಂಡೆ ಕಂಡೆ ರಾಯರ

310.	ರಾಗ: ಭೈರವಿ 	ತಾಳ: [ಮಿಶ್ರನಡೆ]
ಕಂಡೆ ಕಂಡೆ ರಾಯರ ನಾ ಕಂಡೆ ಕಂಡೆ 	 ಪ
ಕಂಡೆ ಕಂಡೆನು ರಾಘವೇಂದ್ರರ
ದಂಡ ನಮನವ ಮಾಡಿ ದಣಿದೆನು
ದಂಡ ಕಮಂಡಲದಿ ಮೆರೆಯುವ
ಹಿಂಡು ಭಕ್ತರ ಕಂಡು ಕಾಯ್ವರ 	ಅ ಪ
ಚೆಂದ ಬೃಂದಾವನದೊಳಿರುವರ
ಕುಂದುರಹಿತ ಸುಧೀಂದ್ರಕರಜರ
ತಂದೆ ಶ್ರೀಪತಿಭಜಕ ಭವ್ಯರ
ಮಂದಮತಿ ಯೆನ್ನನ್ನು ಕಾಯ್ವರ 	 1
ತುಳಸಿ ಮಾಲೆಯ ಧರಿಸಿ ಮೆರೆವರ
ಜಲಜನಾಭನ ಮೆಚ್ಚಿಸಿಪ್ಪರ
ಅಲವಬೋಧ ಮತ ಉದ್ಧಾರಕ
ಒಲಿದು ಸೇವೆಗೆ ವರಗಳಿಪ್ಪರ 	 2
ಹಲವು ಮಹಿಮೆಯ ತೋರುತ್ತಿಪ್ಪರ
ಒಲವಿನಿಂದಲಿ ಕರೆಯೆ ಬರುವರ
ಸುಲಭ ಸುಂದರ ವ್ಯಾಸರಾಯರ
ನಳಿನ ನಾಭನ ಕರುಣಪಾತ್ರರ 	 3
ದೈತ್ಯನುದರದಿ ಬಂದ ಶ್ರೇಷ್ಠರ
ಸ್ತುತ್ಯರಾದರ ಶಿಶು ಪ್ರಹ್ಲಾದರ
ಮಿಥ್ಯಜ್ಞಾನವ ಖಂಡಿಸಿ ಹರಿ
ಸತ್ಯ ಸರ್ವೋತ್ತಮನು ಎಂದರ 	4
ಕರುಣಸಾಗರ ಕೀರ್ತಿವಂತರ
ಪರಮಶಾಂತರು ತಪಿಸಿ ಗುರುಗಳ
ಧರಣಿಯೊಳು ಮಂಚಾಲೆಲಿಪ್ಪರ
ದಾಸ ಪಂಢರಿನಾಥವಿಠಲನ 	 5
							

311 ಕಾಪಾಡಿ ಗುರುವರೇಣ್ಯರೆ ಗುರು ರಾಘವೇಂದ್ರರೆ

311.	ರಾಗ: ತೋಡಿ	ತಾಳ: ಆದಿ
ಕಾಪಾಡಿ ಗುರುವರೇಣ್ಯರೆ ಗುರು ರಾಘವೇಂದ್ರರೆ
ತಾಪಸೋತ್ತಮ ಕರುಣಿಯೆ	ಪ
ಶ್ರೀಪತಿ ಹರಿಪಾದಾಬ್ಜವ ಭಕ್ತಿಲಿ
ತಪ್ಪದೆ ಸೇವಿಸಿ ಮೂರವತಾರದಿ
ವಿಪುಳದಿ ಸಂಗ್ರಹವಾಗಿಹ ಪುಣ್ಯವ
ತೃಪ್ತಿಲಿ ಭಕ್ತರಿಗ್ಹಂಚುವ ದಾನಿಯೆ	ಅ.ಪ
ಮಂಚಾಲಿಕ್ಷೇತ್ರವಾಸರೆ ಗುರುರಾಯರೆ
ಮುಂಚೆ ನಮಿಪೆ ನಿಮಗೆ
ಸಂಚಿಂತಿಸುವವರನು ಮಿಂಚಿನಂತಲಿ ಬಂದು
ಕೊಂಚ ನೋಯಿಸದಲೆ ಕಾಯುವ ಸದ್ಗುರು
ವಂಚನೆಯಿಲ್ಲದೆ ಭಕ್ತ ಸಮೂಹಕೆ
ಪಂಚರೂಪಿ ಪರಮಾತ್ಮನ ಕರುಣವ
ಮುಂಚೆ ಹರಿಸಿ ಮನತೋಷಿಪ ಎಲ್ಲರ
ಚಂಚಲ ಕಳೆವ ಕೃಷ್ಣನ ಕಿಂಕರರೆ	1
ಕರೆಯಲಾಕ್ಷಣ ಬರುವರೆ ಕಂಬದಿ ಹರಿಯ
ಕರೆದು ತೋರಿದ ಖ್ಯಾತರೆ 
ನಿರುತ ನಿಮ್ಮಯ ಚರಣ ಅರಿತು ಸೇವಿಪರಿಗೆ
ಕೋರಿದಿಷ್ಟಾರ್ಥವ ಕೊಡುವಂಥ ಖ್ಯಾತರೆ
ಕರಿರಾಜವರದನ ಕರುಣಾಪಾತ್ರರೆ
ಗುರುಪ್ರಾಣೇಶನ ಆವೇಶಿತರೆ
ಪರಿಮಳ ಮುಂತಾದ ಗ್ರಂಥವ ವಿರಚಿಸಿ
ಹರಿಗಿತ್ತರೆ ಗುರುಮಹಿಮಾನ್ವಿತರೆ	2
ಎಲ್ಲೆಲ್ಲು ವ್ಯಾಪಿಸಿಹರೆ ಉಲ್ಹಾಸದಿ
ಒಲಿದು ಕಾಯುವ ಪ್ರಭುವೆ
ಮಲಿನನಾದರು ನಿರ್ಮಲದಿ ಸೇವಿಸೆ ನಿಮ್ಮ
ಚೆಲ್ವ ಕೃಷ್ಣಗೆ ಪೇಳಿ ಫಲವಿತ್ತು ರಕ್ಷಿಪರೆ
ಎಲ್ಲಿದ್ದರು ಅಲ್ಲಿಯೆ ಒದಗುವ
ಬಲ್ಲಿದರೆ ಸರಿಗಾಣೆನು ಭುವಿಯಲಿ
ನಲ್ಮೆಲಿ ನಿಮ್ಮಯ ಪಾದಕ್ಕೆರಗುವೆ
ಪಂಢರೀನಾಥವಿಠಲನದಾಸರೆ	3
							

312 ಗತಿ ಎನಗೆ ನೀವೆ ಗುರು

312.	ರಾಗ: ಬಾಗೇಶ್ರೀ	ತಾಳ: [ಖಂಡಛಾಪು]
ಗತಿ ಎನಗೆ ನೀವೆ ಗುರು ರಾಘವೇಂದ್ರಾ 	ಪ
ಕ್ಷಿತಿಯೊಳಗೆ ಅನ್ಯರನು ಕಾಣೆ ಗುರುರಾಯಾ 	ಅ ಪ
ಮಾತೆ ಪಿತ ಗುರು ನೀನೆ ಭ್ರಾತೃ ಬಂಧುವು ನೀನೇ
ಸೀತೆ ಪತಿ ಶ್ರೀರಾಮ ದೂತನ ದೂತಾ
ನಾಥ ನಿನ್ನನು ಭಜಿಪೆ ಪ್ರೀತಿಯಲಿ ಪೋಷಿಪುದು
ಖ್ಯಾತ ನರಹರಿ ಭಜಕ ಬಿಡಬೇಡ ಬೇಡುವೆನು 	 1
ಮಂತ್ರಾಲಯವಾಸ ತಂತ್ರಗಳ ನಾ ತಿಳಿಯೆ
ಚಿಂತಿಸುವೆ ಅನುಗಾಲ ಹೃದಯದೊಳು ಇಟ್ಟು
ಕಂತುಪಿತ ಶ್ರೀಕಾಂತ ನಿನ್ನಲ್ಲಿ ಇರುತಿಹನು
ಚಿಂತೆ ತಪ್ಪಿಸಿ ಎನ್ನ ಕಾಯುವುದು ಪೇಳೋ 	2
ಕರುಣೆಯಲಿ ನಿನಗೆಣೆಯ ಕಾಣೆ ನಾ ಜಗದೊಳಗೆ
ಗುರುರಾಯ ಅನುಗ್ರಹಿಸು ದಯದಲ್ಲಿ ಬೇಗ
ನಿರುತ ಭಕ್ತಿ ಜ್ಞಾನ ವೈರಾಗ್ಯ ಕರುಣಿಸು
ದೊರೆ ಪಂಢರಿನಾಥವಿಠಲನ ದಾಸಾ 	3
							

313 ಗುರುರಾಜರನು ಭಜಿಸೋ ಮಾನವ ನೀನು

313.	ರಾಗ: ಮೋಹನ 	 ತಾಳ: ಆದಿ
ಗುರುರಾಜರನು ಭಜಿಸೋ ಮಾನವ ನೀನು 	ಪ
ವರಜ್ಞಾನಗಮ್ಯರ ಕರುಣಾಪೂರ್ಣರ ಚರಣ
ನಿರುತ ನೆನೆದು ಭವ ದಾಟೋ ನೀ ಬೇಗನೇ  	ಅ ಪ
ತುಂಗಾತೀರದಿ ನಿಂತಿಹ ಶ್ರೀ ಗುರುವರ 
ಭಂಗವಿಲ್ಲದೆ ಪೊರೆವ
ಗಂಗಾಜನಕ ಶ್ರೀರಂಗ ರಘುರಾಮನ
ಅಂಘ್ರಿ ಭಜಕ ಕಾರುಣ್ಯಾಂತರಂಗರ
ಧೃತ
ಹಿಂಗದೆ ಭಜಿಸುವ ಭಾಗ್ಯವ ಬೇಡುತ
ಮಂಗಳವಾದ ಬೃಂದಾವನ ನೋಡುತ
ಕಂಗಳಿಗಾನಂದವ ಪೊಂದೋ ಸ-
ತ್ಸಂಗದಿ ಸೇರುತ ಮಂತ್ರಾಲಯದೊಳು 	1
ಕೋರಿದಿಷ್ಟಾರ್ಥವನೂ ಕಾರುಣ್ಯದಿ
ಧೀರರಿವರು ಕೊಡುವರೂ
ಆರ್ನೂರು ಮೇಲೆ ನೂರು ವರುಷವಿರುತವಿಲ್ಲಿ
ಮಾರಪಿತನ ದಣಿವಿಲ್ಲದೆ ಭಜಿಪರು
ಧೃತ
ಶ್ರೀನಾರಸಿಂಹನ ಭಕ್ತಾಗ್ರಣಿಗಳ
ಚಾರಿತ್ರವ ನೀ ಪೊಗಳುತ ಅನುದಿನ
ದೂರೀಕರಿಸೆಲೊ ದುಷ್ಕೃತ್ಯಗಳನು
ಸೇರಲು ಮುಕ್ತಿಯ ಮಂಟಪ ದೃಢದಲಿ 	 2
ಅವತಾರ ಮೂರರಲೀ ಗುರುರಾಜರು
ನವವಿಧ ಭಕ್ತಿಯಲೀ
ಭವಬ್ರಹ್ಮನೊಡೆಯನ ತವಕಾದಿಂದಲಿ ಭಜಿಸಿ
ಸವಿಯುತ್ತಲಿರುವರು ದಿವಿಜೇಶನ ಸೇವಾಸುಖ
ಧೃತ
ನವಚೈತನ್ಯವ ತುಂಬಿಸಿ ಜನರೊಳು
ಕವಿದಿಹ ಅಜ್ಞಾನವ ತಾ ಕಳೆವರು
ಬವರದಿ ಪಾರ್ಥನ ಕರಪಿಡಿದವ ಶ್ರೀ-
ಧವ ಪಂಢರಿನಾಥವಿಠಲನ ತೋರ್ವರು 	 3
							

314 ತೋರಿಸೊ ಚರಣಗಳಾ

314.	ರಾಗ: [ಸರಸಾಂಗಿ]	ತಾಳ: [ಆದಿ]
ತೋರಿಸೊ ಚರಣಗಳಾ	ಪ
ತೋರಿಸೊ ಚರಣವ ಧೀರ ಶ್ರೀ ರಾಘವೇಂದ್ರ
ಬಾರಿಬಾರಿಗೂ ನಿನ್ನ ಕರೆಯುವೆ ನಾನಯ್ಯ	ಅ.ಪ
ಬರಿದೆ ಮೌನವು ಏಕೊ ಮಾರಜನಕನದಾಸ
ಪರಿಪರಿ ಪ್ರಾರ್ಥಿಸೆ ಥರವೇನೊ ಉದಾಸೀನ	1
ಪರಿಪರಿ ಜನಗಳು ಬರಿದೆ ದೂಷಿಪರಯ್ಯ
ಗುರುವೆ ಎನ್ನಯ ದುಃಖ ಹರಿಸಯ್ಯ ನೀ ಬೇಗ	2
ಪರಗತಿಸಾಧನ ಅರಿಯೆನು ನಾನಯ್ಯ
ಕರುಣೆಯ ತೋರುತ್ತ ಪರತತ್ತ್ವ ತಿಳಿಸಯ್ಯ	3
ಕರಗಳಮುಗಿವೆನು ಕಾರುಣ್ಯಸಾಗರ
ತರಳನ ದೈನ್ಯವು ಅರಿಯದೆ ಗುರುವರ್ಯ	4
ಪರಮಾತ್ಮ ಪಂಢರೀನಾಥವಿಠಲನದಾಸ
ಕರುಣೆಯ ಮಾಡಯ್ಯ ವರಹಜೆತೀರಗ	5
							

315 ದಾರಿ ತೋರದಯ್ಯ ಧೀರ ರಾಘವೇಂದ್ರ

315.	ರಾಗ: [ದರ್ಬಾರಿ ಕಾನಡ] 	ತಾಳ: [ಆದಿ] 
ದಾರಿ ತೋರದಯ್ಯ ಧೀರ ರಾಘವೇಂದ್ರ 	ಪ
ಪಾರುಗಾಣಿಸಯ್ಯ ಘೋರ ಕಷ್ಟವಯ್ಯ
ಮಾರನಯ್ಯದಾಸ ವಾರಿಜಾಕ್ಷಪ್ರೀಯ 	 1
ಜ್ಞಾನವಿಲ್ಲವಯ್ಯ ದಾನಿ ನೀನೆ ಅಯ್ಯ
ಜ್ಞಾನÀಗಮ್ಯ ಶ್ರೀಯಪತಿ ದಾಸನಯ್ಯ 	2
ಕಂಡೆ ನಿನ್ನನಯ್ಯ ಕಂಡು ಪಾಲಿಸಯ್ಯ
ಪಂಢರೀನಾಥವಿಠಲ ದಾಸನಯ್ಯ 	3
							

316 ಭಕ್ತಿ ಎಂಬ ಕಾಣಿಕೆ ಸಲ್ಲಿಸಿ

316.	ರಾಗ: [ಆರಭಿ]	ತಾಳ: [ಆದಿ]
ಭಕ್ತಿ ಎಂಬ ಕಾಣಿಕೆ ಸಲ್ಲಿಸಿ ಕ್ಷೇತ್ರಮಂತ್ರಾಲಯ ರಾಯರಿಗೆ	ಪ
ಚಿತ್ತಜನಯ್ಯನ ಭಕ್ತೋತ್ತಮರಿಗೆ ಅತ್ಯಂತ ಪ್ರೀತಿಲಿ ಪೊರೆಯುವಗೆ	ಅ.ಪ
ಖ್ಯಾತ ಪ್ರಹ್ಲಾದನು ತಾನಾಗಿ ಪಿತನಿತ್ತ ಅತ್ಯಂತ ಕಷ್ಟವ ಸಹಿಸಿದಗೆ
ಬತ್ತದೆ ಬಾಗದೆ ಹರಿಸರ್ವೋತ್ತಮ ತತ್ತ್ವವ ಸ್ಥಾಪಿಸಿ ಮೆರೆದವಗೆ	1
ಶೇಷಾವೇಶಿತರಾದ ಶ್ರೀವ್ಯಾಸರಾಯರಪದತಲಕೆ
ಶ್ರೀಶಶ್ರೀಕೃಷ್ಣನ ಚರಣಾಬ್ಜಭೃಂಗಗೆ ಆಶೆಲಿ ಸುಜನರ ಪೋಷಿಪಗೆ	2
ಕಾಶಿಯಲಿಪ್ಪನ ಗುರುಗಳ ಹಂಪೆಲಿ ಸೂಸಿ ಪ್ರತಿಷ್ಠಿಸಿ ಮೆರೆದವಗೆ
ರಾಶಿದೋಷವ ಭಸ್ಮವಮಾಡ್ವಶೇಷಶಕ್ತ ಸದ್ಭಕ್ತರಿಗೆ	3
ಕೂಗಿದಾಕ್ಷಣದಲ್ಲೆ ಆಗಮಿಸುವ ಗುರು ರಾಘವೇಂದ್ರರೆಂಬ ದಾಸರಿಗೆ
ಬಾಗಿ ತಾ ವಿನಯದಿ ನಮನವ ಮಾಡಲು ಬೇಗನೆ ಭವಗಳ ಕಳೆಯುವಗೆ	4
ರಾಮ ಕೃಷ್ಣ ನರಹರಿ ಪಂಢರೀನಾಥವಿಠಲ ದಾಸರಿಗೆ
ಕಾಮಿತಗಳನೀವ ಕಾಮಧೇನುವಿಗೆ ಕಡುಕಾರುಣ್ಯ ದಯಾನಿಧಿಗೆ	5
							

317 ಮಾರಮಣ ಶ್ರೀಹರಿಯ ಕಂಬದಿ ತೋರಿದಾ

317.	ರಾಘವೇಂದ್ರರ ಸ್ತುತಿ
ಮಾರಮಣ ಶ್ರೀಹರಿಯ ಕಂಬದಿ
ತೋರಿದಾ ಪ್ರಹ್ಲಾದರಾಜರು
ಧಾರುಣೀಯಲಿ ಮರಳಿ ಬಂದರು ಹರಿಯ ಇಚ್ಚೆಯಲಿ
ಧೀರಗುರು ಶ್ರೀವ್ಯಾಸರಾಜರು
ಭಾರಕರ್ತನ ಕುಣಿಸಿ ಮೆರೆದರು
ಭೂರಿ ಸಂಪದವೀವರು ಶ್ರೀ ರಾಘವೇಂದ್ರ ಗುರು	1
ಇರುತಿಹರು ಮಂಚಾಲೆ ಕ್ಷೇತ್ರದಿ
ನಿರುತ ನರಹರಿಯನ್ನು ಸೇವಿಸಿ
ಗುರುವು ತಾ ಕೊಡುತಿಹರು ವರಗಳ ರಾಮನಾಜ್ಞೆಯಲಿ
ಹರಿಯ ನಾಮವ ಮೆರೆಸಿ ಜಗದೊಳು
ಕರುಣಿ ಸಂಸಾರದಲಿ ಬಳಲುವ
ಧರೆಯ ಪಾಮರರನ್ನು ಪ್ರೀತಿಲಿ ಕಂಡು ಪೋಷಿಪರು	2
ಧರೆಯ ಮುಸುಕಿದ ತಮವ ತೆಗೆಯಲು
ಹರುಷದಲಿ ಕಲಿಯುಗದಿ ರಾಯರು
ವರಬೃಂದಾವನದಲ್ಲಿ ಇರುತಲಿ ಜನರ ತಿದ್ದುವರು
ನಿರುತ ಭಕ್ತಿಯ ಸೇವೆ ಕೊಳುತಲಿ
ವರಸುಜನರನು ಪೊರೆಯುತಿರುವರು
ಚರಣ ಕಮಲವ ನಂಬಿ ಭಜಿಪರ ಕರವ ಪಿಡಿದಿಹರು	3
ತನುವು ಮನೆ ಧನ ಧಾನ್ಯದಾಸೆಲಿ
ಕೊನೆಯ ಕಾಣದೆ ಕಷ್ಟ ಪಡುವರ
ಮನದಿ ಮಿನುಗುತ ರಾಘವೇಂದ್ರರು ತುಂಬು ಕರುಣೆಯಲಿ
ಅನುನಯದಿ ಪೊರೆಯುತ್ತ ಅವರನು
ಘನ ಮಂಚಾಲೆಯ ಯೋಗಿವರ್ಯರು
ಮನವ ಶ್ರೀಹರಿಯಲ್ಲಿ ನಿಲಿಸಲು ಮಾರ್ಗ ತೋರುವರು	4
ವಿಷಯದಾ ವಿಷದಿಂದ ಬಳಲುವ
ಹಸನರಲ್ಲದ ಭಕ್ತಿರಹಿತರ
ಹಸನ ಮಾಡುತ ವಿಷಯದಾಸೆಯ ಬೇಗ ಬಿಡಿಸುವರು
ಹಸನ ಭಕ್ತಿಲಿ ಇವರ ನಂಬಲು
ಅಸುಪತೀ ಹರಿದಾಸ ಶ್ರೇಷ್ಠರು
ಅಶನ ವಸನಕೆ ಮಾರ್ಗ ತೋರಿಸಿ ಹರಿಯ ತೋರುವರು	5
ರೋಗರುಜಿನವ ಕಳೆದು ಬಿಡುವರು
ಬೇಗ ಭಕುತಿಲಿ ಸೇವಿಸುವವರಿಗೆ
ರಾಗರಹಿತರು ಅಘವ ತರಿವರು ನಮ್ಮ ಗುರುವರರು
ಜಾಗು ಮಾಡದೆ ರಾಘವೇಂದ್ರರು
ಸಾಗಿ ಬರುವರು ಒಲಿದು ಪ್ರೀತಿಲಿ
ಭೋಗಿಶಯನನ ನಿರುತ ಸೇವಿಸಿ ಧನ್ಯರಾಗಿಹರು	6
ಕುಷ್ಠರೋಗವ ನಷ್ಟ ಮಾಡ್ವರು
ಶ್ರೇಷ್ಠ ಶ್ರೀಹರಿ ಪಾದಕ್ರಾಂತರು
ಇಷ್ಟವೆಲ್ಲವ ಸಲಿಸಿ ಬಿಡುವರು ಕಷ್ಟ ಕಳೆಯುವರು
ಎಷ್ಟು ಪೇಳಲಿ ಇವರ ಮಹಿಮೆಯ
ತುಷ್ಠಿಯಿಂದಲಿ ನಾಮ ಸೇವಿಪೆ
ಅಷ್ಟಮಹಿಷಿಯರರಸನನು ಮನಮುಟ್ಟಿ ಭಜಿಸುವರು	7
ಭೂತ ಪ್ರೇತ ಪಿಶಾಚ ಗ್ರಹಗಳು
ಸೋತು ಹೋಗಿವೆ ಇವರ ಮಹಿಮೆಗೆ
ಪೂರ್ತಿಯಿಂದಲಿ ಹೆದರಿ ರಾಯರ ಪಾದ ಉದಕಕ್ಕೆ
ಮಾತು ಬರುವುದು ಮೂಕ ಜೀವಿಗೆ
ಹೂತು ಹೋಗ್ವುದು ದುರಿತಗಳು ಶ್ರೀ-
ನಾಥ ದಾಸರು ತಮ್ಮ ಪುಣ್ಯವ ಇತರಿಗ್ಹಂಚುವರು	8
ಅಂಧರೆಲ್ಲರು ದೃಷ್ಟಿ ಪಡೆವರು
ಮಂದನಾದರು ಬಂದು ಸೇವಿಸೆ
ಗಂಧವಾಹನನಾದ ಹನುಮನಾವೇಶ ಪೊಂದಿಹರ
ವಂದ್ಯೆ ಸ್ತ್ರೀ ಆನಂದದಲಿ ತಾ
ಸುಂದರದ ಮಗುವನ್ನು ಪಡೆವಳು
ನಂದ ನಂದರ ದಾಸರಾಯರ ಮಹಿಮೆ ಅಸದಳವು	9
ರಾಮನರಹರಿ ಕೃಷ್ಣ ಹಯಮುಖ
ಭೂಮಿಪತಿ ವಾಸಿಷ್ಠ ಕೃಷ್ಣನು
ಸೋಮಶೇಖರ ಸಖನು ಬೃಂದಾವನದಿ ಇರುತಿಹನು
ಕಾಮಿತಾರ್ಥಗಳೆಲ್ಲ ದೇವನೆ
ಈ ಮಹಾತ್ಮರ ಪೆಸರಿನಲ್ಲಿಯೆ
ಶ್ರೀಮನೋಹರ ಕೊಡುತ ಇವರಿಗೆ ಪೆಸರು ಕೊಡುತಿಹನು	10
ಪಿಡಿದು ದಂಡ ಕಮಂಡಲವ ಗುರು
ಕಡು ದಯಾನಿಧಿ ನಿಂತು ಕ್ಷೇತ್ರದಿ
ಬಡವ ಬಲ್ಲಿದರೆನದೆ ಪ್ರಜೆಗಳ ಪೋಷಿಸುತ್ತಿಹರು
ದೃಢದಿ ಚರಣವ ಭಜಿಸುವವರಿಗೆ
ಕೊಡುತ ಸಂಪದ ರಾಘವೇಂದ್ರರು
ಒಡೆಯ ಪಂಢರೀನಾಥವಿಠಲನ ಬಿಡದೆ ತೋರುವರು	11
							

318 ರಾಘವೇಂದ್ರ ಪೊರೆ ಎನ್ನ ಗುರು

318.	ರಾಗ: ಕಲ್ಯಾಣಿ	ತಾಳ: [ಆದಿ]
ರಾಘವೇಂದ್ರ ಪೊರೆ ಎನ್ನ ಗುರು 	ಪ
ರಾಘವೇಂದ್ರ ದುರಿತೌಘ ವಿದೂರನೆ 
ರಾಗರಹಿತ ಹೇ ಭಾಗವತರ ಪ್ರಿಯ
ಕೂಗಿ ಕರೆಯುವೆನು ಭಕ್ತಿ ಭಾವದಲಿ 
ನೀಗಿಸು ಕರುಣದಿ ಈ ಭವಸಾಗರ 	ಅ ಪ
ಯೋಗ ಪ್ರವೀಣನೆ ಸದ್ಗುಣಸಾಂದ್ರನೆ
ವಾಗ್ದೇವಿಯ ಮಹದನುಗ್ರಹಪಾತ್ರನೆ
ತ್ಯಾಗಿ ವಿರಾಗಿಯೆ ಭಕ್ತಾಭೀಷ್ಟದ
ಬಾಗಿ ಭಜಿಸುವೆನು ವ್ಯಾಸ ಪ್ರಹ್ಲಾದನೆ 	 1
ಶೇಷಾವೇಶಿತ ವ್ಯಾಸರಾಜಗುರು 
ದೇಶಿಕ ಶ್ರೀ ಬ್ರಹ್ಮಣ್ಯರ ಕರಜನೆ
ಆಶಿಪೆ ಭಕ್ತಿ ಜ್ಞಾನ ವಿರಕ್ತಿಯ 
ರಾಶಿಯ ಕೊಡು ನೀ ಬೇಸರಿಸದಲೆ	2
ಗುರುವರ ನಿಮ್ಮನು ಭಜಿಸುತ್ತಿರುವೆನು
ಪರಿಪರಿ ನಿಮ್ಮನು ಸ್ಮರಿಸುತ್ತಿರುವೆನು
ಪೊರೆಯದೆ ಬಿಟ್ಟರೆ ಬಿಡುವೆನೆ ಪಾದವ
ಸಿರಿ ಪಂಢರಿನಾಥವಿಠಲನ ಪ್ರೀಯ	3
							

319 ರಾಘವೇಂದ್ರನೇ ಕರುಣಾಕರ ಗುರು

319.	ರಾಗ: ಆರಭಿ	ತಾಳ: [ಆದಿ] 
ರಾಘವೇಂದ್ರನೇ ಕರುಣಾಕರ ಗುರು ರಾಘವೇಂದ್ರನೇ 	ಪ
ರಾಘವೇಂದ್ರ ದುರಿತೌಘವಿದೂರನೆ
ಭಾಗವತಾಗ್ರಣಿ ಬಾಗಿ ಭಜಿಸುವೆನು 	ಅ ಪ
ಯೋಗಿವಂದಿತ ಶ್ರೀಚರಣದ್ವಯ 
ನೀಗಿಸೊ ಭವ
ನಾಗಶಯನ ಹರಿ ನಾರಸಿಂಹನ 
ಜಾಗ್ರತೆಯಿಂದಲಿ ಬಿಡದೆ ಧ್ಯಾನಿಸುವ	1
ಶ್ರೀ ಸುಧೀಂದ್ರರ ಖ್ಯಾತಿಯ ಕರಜನೆ 
ದೋಷ ದೂರನೇ
ಆಶಿಸುವೆ ತವ ಪಾದ ಸೇವೆಯನು
ದಾಸನೆಂದಾದರದಲಿ ಪಾಲಿಸೋ 	2
ಬೇಡಿಕೊಳ್ಳುವೆ ಈ ದಿನ ನಿಮ್ಮನು 
ಕಾಡಿ ಕೂಗುವೇ
ಕಾಡುವ ಭವರೋಗ ನೀ ದೂರೋಡಿಸೊ
ನೋಡಿ ಪಂಢರಿನಾಥವಿಠಲನ ದಾಸ 	3
							

320 ರಾಘವೇಂದ್ರರಾಯಾ ಈ ಭವ ರೋಗ ಕಳೆಯೊ

320.	ರಾಗ: ಹಂಸಾನಂದಿ	ತಾಳ: [ಆದಿ]
ರಾಘವೇಂದ್ರರಾಯಾ ಈ ಭವ 
ರೋಗ ಕಳೆಯೋ ಜೀಯಾ 	ಪ
ರಾಘವೇಂದ್ರಗುರು ರಾಯ ನಿಮ್ಮಂಘ್ರಿಯ
ಜಾಗುಮಾಡದಲೆ ಬಾಗಿ ಭಜಿಸುವೆನು 	ಅ ಪ
ಮಂತ್ರಾಲಯನಿಲಯಾ ಸಂತತ 
ಚಿಂತಿಸುವೆನು ನಿನ್ನಾ
ಕಂತು ಜನಕ ಶ್ರೀಕಾಂತನ ಪ್ರೀಯನೆ
ಚಿಂತೆ ಹರಿಸೊ ಬಹು ಭಕ್ತಿಲಿ ಬೇಡುವೆ 	1
ಶ್ರೀ ಸುಧೀಂದ್ರಕರಜಾ ಗುರುವರ 
ಸೂಸಿ ಭಜಿಪೆ ನಿನ್ನಾ
ದೋಷರಹಿತ ಶ್ರೀನಿಲಯನ ದಾಸನೆ
ದೋಷಿಯು ನಾ ನಿಜ ದೂಷಿಸದಿರೊ ಶ್ರೀ 	2
ನಿಜ ಕರುಣಿಯು ನೀನೆ ಈ ಭುವಿ 
ಸುಜನರ ಪೊರೆಯುವನೇ
ನಿಜವಾಗಿಯು ನಂಬಿಹೆ ಪದರಜಗಳ
ಗಜವರದನ ದಾಸನೆ ತ್ವರ ಕರುಣಿಸೋ 	 3
ಹ್ಯಾಗೆ ಸ್ತುತಿಸಲಯ್ಯಾ ನಿನ್ನನು 
ರಾಘವೇಂದ್ರರಾಯಾ
ನಾಗಶಯನ ಹರಿ ಭಕ್ತಾಗ್ರೇಸರ
ಕೂಗಿ ಕರೆಯುವೆನು ಸ್ತುತಿಸಲು ತಿಳಿಯೆನು 4
ಮಂಗಳ ಮೂರುತಿಯೇ ಶ್ರೀನರ- 
ಸಿಂಗನ ಕಂಡವನೇ
ಭಂಗಿಸೋ ಭವಭಂಗಗಳೆಲ್ಲವ ಬೇಗ
ರಂಗ ಪಂಢರಿನಾಥವಿಠಲನ ದಾಸಾ 	 5
							

321 ರಾಯರು ಸಕಲರನು ನೋಯಿಸದಲೆ

321.	ರಾಗ: ದ್ವಿಜಾವಂತಿ	ತಾಳ: ಅಟ್ಟ
ರಾಯರು ಸಕಲರನು ನೋಯಿಸದಲೆ
ಕಾಯುತಲಿರುವರು	ಪ
ನ್ಯಾಯಧರ್ಮ ಸತ್ಯಸಂಧರು ನಿಷ್ಠರು 
ತೋಯಜಾಕ್ಷನಂತರಂಗದ ಭಕ್ತರು
ಹಯಮುಖರೂಪಿ ಶ್ರೀ ಹರಿಯನು ಭಜಿಪರು
ದಯಾಸಮುದ್ರರು ಗುರುರಾಘವೇಂದ್ರರು	ಅ.ಪ
ಮಂಗಳ ವರಹಜೆತಟದಲ್ಲಿರುತಿಹ ಬೃಂದಾವನಗತರು ಸದ್ಗುರು
ಅಂಗಜನಯ್ಯನ ಭಕ್ತಿಲಿ ಭಜಿಪರು ಭಕ್ತರ ಪೊರೆಯುವರು
ಹಿಂಗದೆ ಶ್ರೀನರಸಿಂಗನ ಸೇವಿಸಿ ಸಾಕ್ಷಾತ್ಕರಿಸಿಹರು ಬಹು
ಭಂಗಗೊಳಿಪ ಸಂಸಾರವ ದಾಟಿಸಿ ಹರ್ಷವಪಡಿಸುವರು
ತಂಗಿ ಮಂಚಾಲೆಲಿ ಸೇವಿಪ ಭಕುತರ
ಹಿಂಗದೆ ಪೊರೆಯುವ ನಮ್ಮೀ ಗುರುಗಳು
ಕಂಗೆಡಿಸದೆ ತಾ ವರವನಿತ್ತು ಶ್ರೀ
ರಂಗನ ಕರುಣೆಗೆ ಪಾತ್ರರ ಮಾಡ್ವರು	1
ಪರಿಪರಿಯಲಿ ತಾ ಕರೆಯಲು ಶೀಘ್ರದಿ ಬರುವಾರು ಕರುಣಿಯು
ಪುರಜನರೆಲ್ಲರ ಪೊರೆಯಲು ತಾ ಬಹುಪರಿಯಲ್ಲಿರುತಿಹರು
ಕರವ ಎತ್ತಿ ತಾ ಅಭಯವ ತೋರುತ ಜನರ ತೋಷಿಪರು ವರ
ತಿರುಪತಿ ದೊರೆ ಶ್ರೀನಿವಾಸನ ಪ್ರೀತಿಗೆ ವೀಣೆಯ ನುಡಿಸುವರು
ಗುರುಮೂಲರ ಆವೇಶಾಯುಕ್ತರು
ಪರಿಪರಿ ಭೂತಪ್ರೇತವ ಕಳೆವರು
ಸಿರಿಸಂಪತ್ತನು ಕೊಡುತಲಿ ಬೇಗನೆ
ವರಭಕ್ತಿ ಜ್ಞಾನ ವೈರಾಗ್ಯವ ಕೊಡುವರು	2
ಮೂರವತಾರದಿ ಹರಿಯನು ಸೇವಿಸಿ ಕೀರ್ತಿಯ ಪಡೆದವರು ಈ ಗುರು
ಪರಿಮಳ ಮುಂತಾದ ಗ್ರಂಥವ ರಚಿಸಿ ಜ್ಞಾನವ ಬೀರಿದರು
ಸ್ಮರಿಸಲು ಇವರ ಭವ್ಯದ ನಾಮವೆ ಧೈರ್ಯವ ತುಂಬುವುದು
ಸೇರಿಸಿ ಹರಿದಾಸ ಪಂಥಕೆ ಯೋಗ್ಯರ ವರಗಳನೀಯುವರು
ಹರಿ ಸರ್ವೋತ್ತಮ ತತ್ತ್ವವ ಸಾರುತ 
ಧರೆಯೊಳು ಬೆಳಗುವ ಬೃಂದಾವನದೊಳು
ಧೀರರು ಇರುವರು ನೂರುಏಳು ವರ್ಷವು
ದೊರೆ ಪಂಢರಿನಾಥವಿಠಲನ ಕರುಣೆಲಿ	3
							

322 ಶ್ರೀ ರಾಮಚಂದ್ರ ಚರಣಾರಾಧಕ

322.	ರಾಗ: [ಅಭೋಗಿ]	ತಾಳ: [ಆದಿ]
ಶ್ರೀ ರಾಮಚಂದ್ರ ಚರಣಾರಾಧಕ 
ಗುರು ರಾಘವೇಂದ್ರರೆ ನಮಿಸುವೆನು	ಪ
ಮರುತಮತವನುದ್ಧರಿಸಿ ಮೆರೆದ
ಪ್ರಹ್ಲಾದ ವ್ಯಾಸರೆ ನಮಿಸುವೆನು	ಅ.ಪ
ಪರಿಪರಿ ಸುಜನರ ಕ್ಲೇಶವ ಕಳೆಯುವ
ಮಹಾಮಹಿಮರೆ ನಮಿಸುವೆನು
ನಿರುತ ಪೊಳೆವ ಬೃಂದಾವನಗತ ಸ-
ದ್ಗುರುವೆ ನಾ ಸದಾ ನಮಿಸುವೆನು	1
ಕಾಷಾಯಾಂಬರ ತುಳಸಿ ಮಾಲೆಯಲಿ
ಒಪ್ಪುವ ನಿಮಗೆ ನಮಿಸುವೆನು
ಶ್ರೀಶನ ಪಾದವ ಬಿಡದೆ ಭಜಿಪ ಸ-
ದ್ಗುರು ನಿಮಗನಂತ ನಮನಗಳು	2
ಗುರು ಸಿರಿ ಹರಿ ಕಾರುಣ್ಯ ತೋರ್ದ ಸ-
ದ್ಗುರು ಕಾರುಣ್ಯರೆ ನಮಿಸುವೆನು
ಭರದಿ ಕೃಪೆಯ ನೀವ್ ತೋರಿಸಿ ದಾಸನ
ಮಾಡಿದ ಮಹಿಮರೆ ನಮಿಸುವೆನು	3
ನಾರಸಿಂಹ ಜಡ ಕಂಬದೊಳುದಿಸಲು
ಕಾರಣಕರ್ತರೆ ನಮಿಸುವೆನು
ಪರಿಪರಿಯಲಿ ನೀ ವಂದಿಸಿಕೊಳುತಲಿ
ಮೆರೆವ ಸದ್ಗುರು ನಮಿಸುವೆನು	4
ಗುರು ಸಹೃದಯಕೆ ಬೇಡುವೆ ಅವಿರತ
ತುಂಬಿರಿ ಹೃದಯದಿ ಭಕ್ತಿಯನು
ಮರುತನ ದೊರೆ ಪಂಡರೀನಾಥವಿಠಲನ
ತೋರ್ವುದು ಶೀಘ್ರದಿ ಹೃದಯದೊಳು	5
ಪಾಂಡುವಿಠಲ 
							

323 ಗುರುರಾಘವೇಂದ್ರತವ ಚರಣಾರವಿಂದದ ಭ್ರಮರ (ಆಶ್ವಧಾಟಿ)/h2>

323.	||ಆಶ್ವಧಾಟಿ - ಸಾಂಗತ್ಯ||
ಗುರುರಾಘವೇಂದ್ರತವ | ಚರಣಾರವಿಂದದ ಭ್ರ- |
ಮರ ನೆನಿಸುವ ಮನುಜಗೇ | 
ಪರಿಮಳವು ಷಟ್ಟದಕೆ | ವರಕಮಲ ಪ್ರತತಿಯಿಂ |
ಭರದಿಂದ ದೊರೆವಂದದೀ |
ಸ್ಥಿರ ಭಕ್ತಿಜ್ಞಾನ ವಿ | ಸ್ಪುರಿಸುವುದು ನಿತ್ಯಸುಖ |
ಖರೆಯಿಂದೂ ಸಟೆಯೆಲ್ಲವೋ |
ಕರೆದು ಕಾಮಿತವೀವ | ಸುರಧೇನು ವಿರಲನ್ಯ-|
ನರರ ತುತಿಸುವದ್ಯಾತಕೆ 	1
ಪ್ರಹ್ಲಾದನಾಗಿ ಶ್ರೀ | ನಲ್ಲನ್ನ ಭಕ್ತ ಜನ- |
ರೆಲ್ಲಾರಿಗಿವ ತೋರಿದಾ |
ಉಲ್ಲಾಸದಲಿ ಮುನಿಗ | ಳಲ್ಲುತ್ತಮ ಹರಿಯು |
ಎಲ್ಲರೊಳಗಧಿಕನೆಂದಾ |
ಸಲ್ಲಾದನಣ್ಣ ಯತಿ | ಮಲ್ಲನಿವನೀ ಜಗದೋ- |
ಳೆಲ್ಲಾ ದ್ವಿಜರ ಸಲುಹಿದಾ |
ಒಳ್ಳೆಮನದಿ ಭಕ್ತ | ರೆಲ್ಲಾರು ಇವರಸ್ತುತಿ |
ಉಲ್ಲಾಸದಿಂ ಕೇಳ್ವುದೂ 	2
ಇಂದ್ರಾದ್ಯಮರರು ಈ | ವೃಂದಾವನದಲಿ ಗೋ- |
ವಿಂದನ ಕೂಡಿರುವರೂ |
ಪೊಂದಿರ್ಪುವಿಲ್ಲಿ ಮುನಿ | ವೃಂದಾದಿ ದಾಸಕುಲ |
ವೀಂದ್ರಧ್ವಜನ ದೂತನ |
ಸುಂದರನು ಇಲ್ಲಿರಲು | ಚಂದವಿರುವೀ ಸ್ಥಾನ |
ಕೇಂದ್ರವೆನಿಪುದು ಬುಧರಿಗೆ |
ಸಂದೇಹವಿಲ್ಲವೋ ಯ | ತೀಂದ್ರರ ರೂಪದಿಂ- |
ದಿಂದ್ರಾವರಜ ನಿಂತಿಹ 	3
ಶ್ರೇಷ್ಠವಾದ ಭಕ್ತಿಲು | ಚ್ಛೇಷ್ಟದಲಿ ಬರಲು ಸಕ- |
ಲೇಷ್ಟಪ್ರದಾತನಡಿಗೆ |
ಕಾಷ್ಟಾಲಯದಲಿ ಕಡು | ಶೇಷ್ಠಾನಲಿಟ್ಟಂತೆ |
ಕುಷ್ಟಾದಿಗಳ ಸುಡುವನು |
ಎಷ್ಟೇಳಲವನು ಬಲು | ಸಾಷ್ಟಾಂಗವೆರಗೆ ಸಂ- |
ತುಷ್ಟಾಗಿ ತಾನೊಲಿವನೂ |
ಕಷ್ಟಂಗಳಂ ಬಿಡಿಸಿ | ಇಷ್ಟಾರ್ಥಕೊಟ್ಟು ಯತಿ- |
ಶ್ರೇಷ್ಠ ಪ್ರಭು ಪೊರೆವನೂ 	4
ಬಿನೈಪೆನೋ ಯತಿವ | ರೇಣ್ಯ ಪ್ರಭೋ ಎನಲು |
ಚಿನ್ನಾ ನೀ ಬಾ ಎಂಬನೂ |	
ಕಣ್ಣಿಗೆ ಎವೆಯಂತೆ | ಚನ್ನಾಗಿ ಪೋಷಿಸುವ- |
ನೆನ್ನಾಣೆ ಸುಳ್ಳಲ್ಲವೋ |
ಇನ್ನೇನು ಈ ಶ್ರೇಷ್ಠ | ಸನ್ಯಾಸಿ ಭಕ್ತರನು |
ಸನ್ಮಾನದಿಂದ ಪೋಷಿಪಾ |
ಪುಣ್ಯಾಸೆ ಜನಕೆ ಸ್ವ | ಪುಣ್ಯ ಪ್ರಧಾನದಿಂ |
ಚಿನ್ನಾಂಗನಿವ ತೋರುತ 	5
ರೋಗಾದನೇಕ ವಿಧ | ಭೋಗೋಪ ಭೋಗದಲಿ |
ಸಾಗಿರ್ದು ಕಂಗೆಡದಲೇ |
ಯೋಗೇಶನಡಿಗಳನು | ರಾಗಾದಿ ಭಜಿಸೆ ಬಲು |
ಬೇಗಾದಿ ಬಂದು ಪೊರೆವಾ |
ಬಾಗೀದೊಡಿವಗೆ ಶಿರ | ವಾಗಾಗ್ಗೆ ಫಲ ಬಹುದು |
ಭಾಗೀರಥೀ ಸ್ನಾನದಾ |
ಯಾಗಾದಿಗಳ ಪುಣ್ಯ | ಭೋಗಂಗಳುಂಬುವರು |
ನಾಗಾರಿ ಧ್ವಜನ ಪುರದೀ 	6
ಮುದ್ದಾದ ರಾಯ ಪ್ರ | ಸಿದ್ಧಾದ ವಾರಾಹಿ |
ಶುದ್ಧವಿಹ ದಂಡೆ ಮೇಲೆ |
ಸಿದ್ಧಸ್ತದಿಂದ ಪರಿ | ಶುದ್ಧಾತ್ಮ ಕುಳಿತಿಹನು |
ಸದ್ವೈಷ್ಣವಾಬ್ಧಿ ಚಂದ್ರ |
ಉದ್ಧಾರಗೈವ ಭವ | ಬದ್ಧರನು ಪೊರೆವ ಬಲು- |
ಶ್ರದ್ಧೆಯಿಂ ಭಜಿಸಿದೊಡನೆ |
ಮಧ್ವಾರ್ಯಮತ ದೀಕ್ಷೆ | ಯದೃಚ್ಛ ಲಾಭವಿ- |
ತ್ತುದ್ದೇಶ ಪೂರೈಪನೋ 	7
ತುಂಗಾನಿವಾಸ ದಿ | ವ್ಯಾಂಗ ಪ್ರಭೂ ಜನರ | 
ಭಂಗಕ್ಕೆ ಗುರಿ ಮಾಡನೂ |
ಶೃಂಗಾರವದನ ನರ | ಸಿಂಗಾಂಗ ಶರಧಿ ಶಶಿ |
ಯಂಗೇನು ಭಜಿಸದಿಹೂದೂ |
ಗಂಗಾದಿಗಳಲ್ಲಿ ಮಲ | ಹಿಂಗೂವುದೇ ಪಾಂಡು- |
ರಂಗನ್ನ ಪದಕಮಲಕೇ |
ಭೃಂಗಾನೆನಿಪ ಬುಧೋ | ತುಂಗನ್ನ ಭಾಗವತ |
ಜಂಗುಳಿಯಾ ನಮಿಸದೇ 	8
ಉತ್ಕೃಷ್ಟ ರಥದಿ ಮುನಿ | ಯೊತ್ತಾಯದಲಿ ಕುಳಿತು |
ರತ್ನಾದಿ ಮಾಲೆ ಧರಿಸಿ |
ಕಸ್ತೂರಿ ತಿಲಕ ಮೇಣ್ | ಕೆತ್ತಿರ್ದಪದಕ ಪೊಳೆ- |
ಯುತ್ತಿರ್ಪವೋ ಕಣ್ಣಿಗೇ |
ನಿತ್ಯದಾ ಸುಖ ಬಯಿಪ | ರೊತ್ತಾಯದಲಿ ಬನ್ನಿ |
ಮತ್ತೇನು ಬೇಕೆನ್ನುತ್ತಲೀ |
ಭಕ್ತಿಗೊಲಿದತಿ ಜನರಿ | ಗತ್ಯಾದರಿಸುವದಕೆ |
ಚಿತ್ತಗುಹೆವಾಸ ಪೇಳ್ವ 	9
ಸಿಕ್ಕಲ್ಲಿ ಐಹಿಕ ಸು | ಖಕ್ಕಾಗಿ ಪೋಗಿತ್ವರ |
ಪೊಕ್ಕಾಲಯದಲಿ ನರರ |
ರೊಕ್ಕಕೆ ಸೇವಿಸುತ | ದಿಕ್ಕಿಲ್ಲದವರಂತೆ |
ಧಿಕ್ಕಾರವೋ ಜನ್ಮಕೇ |
ಪಕ್ಕಂಗಳಂ ಕಳೆದ | ಪಕ್ಷಿಪ್ರತಿತಿಯಂತೆ |
ಈ ಕ್ಷೋಣಿಯಲಿ ಬಾಳದೇ |
ತಕ್ಕದ್ದಪೇಕ್ಷಿಸಿರ | ದಕ್ಕಾಗಿ ಇಲ್ಲಿಹನು |
ಆಕ್ಷೇಪಣವು ಇಲ್ಲವೋ 	10
ವಾರಹಿವಾಸ ಭೂ | ಭಾರಾರಿ ದಿವ್ಯರಥ- | 
ವೇರುತ್ತಲಾ ಕ್ಷಣದಲೀ | 
ವಾರಾಂಗನೆಯರು ಬ್ರಹ್ಮ | ಚಾರ್ಯಾದ್ಯನೇಕ ಜನ |
ಸಾರಾದ ಸಂಗೀತದಿ |
ಬಾರೋ ನೀ ಭವರೋಗ | ದೂರಾ ಯತಿಯೆ ಎಂದು |
ಸಾರುತ್ತ ಡಂಗುರಗಳ |
ಕಾರುಣ್ಯನಿಧಿ ಯತಿಯು | ನಾರಾಯಣನ ತೋರ್ಪ- | 
ನಾರಾಧಿಪರ್ಗೆ ಬಿಡದೆ 	11
ನಾನಾಬಗೆಯ ಈ | ಕ್ಷೋಣಿಯ ಜೀವರಿಗೆ |
ನಾನಾ ವಿಧದಿ ಕಾಣುವಾ |
ಆನೆಗೊಲಿದನ ಪ್ರಿಯನು | ದಾನಗಳಿತ್ತು ಸುಖ |
ಜ್ಞಾನಾದಿ ಭಕ್ತಿ ಈವ |
ನಾನಾರ್ಥವೀವ ಯತಿ | ಮಾನೋತ್ತಮರಿಗೆ ಈ- |
ಕ್ಷೋಣಿಯೊಳಗಾಗಿರುವರೊ |
ನಾನಾ ವಿಮೋಹಕನು | ಮಾನಿಲ್ಲ ಪೊರೆವ ಪ್ರ- | 
ಮಾಣವೇ ಭೋಗವಿರಲೂ 	12
ಗುಂಪಾಗಿ ಭಾಗವತ | ರಿಂಪಾದ ಗಾಯನದಿ |
ಮಾಂಪಾಹಿ ಗುರುವೆಂಬರೂ |
ಕೆಂಪಾದ ಕಮಲಾಕ್ಷ | ಕಂಪಿಸುವೆವು ಭವದಿ |
ನೀಂಪಾಲಿಸೆಂದೆನುತಲೀ |
ನೀಂಪಾಲಿಸದಿರೆ ಈ | ಗುಂಪುಗಳ ಗತಿಯೇನು |
ನಾಂ ಪೇಳಲಾರೆನುತಲೀ |
ಚಂಪಕಾ ನಾಶಿಕನೆ | ಪೆಂಪೊಡೆದ ಪದಜ್ಯೋತಿ |
ತಂಪಾಗಿ ಪಸರಿಸಿಹುದೂ 	13
ಶಾಂತತೆಯಲಿ ಚಂದ್ರ | ಸಂತೋಷದಲಿ ಕಡಲ |
ಕಾಂತಿಯೊಳಗಿವ ಭಾಸ್ಕರ |
ಅಂತೇನು ಇವನ ಕರು | ಣೆಂಥಾದು ಬಲುಜ್ಞಾನ- |
ವಂತೆನಿಪನೆ ಪೊಗಳನು |
ಚಿಂತಿಸುವದೇಕೆ ಜನ | ಭ್ರಾಂತಿಯಲಿ ಬರಿದೆ ಶ್ರೀ- |
ಮಂತಿಗೆಯಲಿ ದನುಜತನಯಾ |
ಪಂಥದಲಿ ಬಲಿತಾತ | ಸಂತೇಂದ್ರ ದಾನದಲಿ |
ಮಂತ್ರಾಲಯಾ ನಿವಸನು 	14
ನೀಲಾಂಗ ಭಕ್ತ ಭವ | ಜಾಲಾವಿನಾಶ ಕುಲ- |
ಕೋಲಾಹಲ ವಿಧುರನೋ |
ಶೀಲೋತ್ತಮನು ತುಳಸೀ | ಮಾಲಾ ವಿಭೂಷಿತ ಸು- |
ಶೀಲೇಂದ್ರ ವಂದ್ಯನಿವನು |
ವ್ಯಾಲಾಲಯದಲಿಲಿಯುಂ | ಬಾಳಿರ್ಪತೆರ ಮೋಹ |
ಜಾಲಾಗಿಹಾ ಭವದಲಿ |
ಕಾಲೆಂತು ಕಳೆವುದೆನೆ | “ಬಾಲಾ ನೀ ಬಾ ಎಂಬ” |
ಪಾಲಾಬ್ಧಿಶಯನ ದಾಸ 	15
ನಿಗಮದ ಧ್ವನಿಗಳೀ | ಜಗದೇವತೆಗಳೆಲ್ಲ |
ಸ್ಥಗಿತ ಭಕ್ತಿಲಿಗೈಯುತಾ |
ಮಿಗೆ ಧನ್ಯವಾದೆವೀ | ಜಗದೊಳಗೆನುತ ಗುರುಗ- |
ಳಘ ಕಳೆವ ಚರಣಕಂಡು |
ಪೊಗಳಲಳವೇ ಜಗ | ದ್ಗುರು ವಿರಲು ದೈವಕೆ |
ಮಿಗಿಲಾದ ಕನ್ನಡಿಗರಾ |
ಮಗುವೆಂದು ಪೊರೆದನುಜ | ಮಗನೆಂದು ದಾಸಕುಲ |
ಕರ ಮುಗಿದು ಕನ್ನಡಿಗಗೆ 	16
ಶ್ರೀಶನಂಘ್ರಿಯ ದೂತ | ಪೋಷಿಸೆಲೊ ಭಕ್ತರನು |
ಘಾಸಿಗೊಳಿಸದಿರಲೆಂದಿಗೂ |
ನೀ ಸಲಹದಿರಲು ಈ | ಭೂಸುರರೆನಿಪರು ನರರ |
ದಾಸರಾಗುವರು ಬಿಡದೇ |
ಘಾಸಿಗೊಂಡವರು ಬಲ ದು | ರಾಶೆ ಹೆಚ್ಚಿತು ದ್ವಿಜರೂ |
ದಾಸಿಸಲ್ಪಡುವರಿಹದೀ |
ಈಸೋಕಾಯಿಯಂತೆ | ಭೂಸುರರ ಬಿಡದೆ ನೀ |
ಪೋಷಿಸೆನ್ನವರೆನುತಲೀ 	17
ವ್ಯಾಕರಣ ಗಣ ಯತಿಗ | ಳಾ ಕಠಿಣ ಮಾತ್ರೆಗಳ |
ಸ್ವೀಕರಿಸಕೂಡದೆಂದೂ |
ಲೇಖಕನು ಬಿನ್ನೆಪ | ಪ್ರಾಕೃತವಿದೆಂದು ಜನ |
ಭೀಕರದ ಟೀಕೆ ಬಿಟ್ಟು |
ವ್ಯಾಕುಲದ ಭವರೋಗ | ಕೇಕ ಔಷಧ ಮಾತ್ರೆ |
ಪಾಕವಿದು ಜನರು ಬಿಡದೇ |
ಏಕ ಚಿತ್ತದಿ ಪಠಿಪು | ದೀ ಕೃತಿಯ ನಿತ್ಯದೈ- |
ಹಿಕದ ಸುಖಕೊಳಗಾಗದೇ 	18
ಕಂಡಲ್ಲಿ ಬೇಡಿ ಬಲು | ಬೆಂಡಾದೆ ಗುರುವೆನಲು |
ಚಂಡಾಲನಿರೆ ಸಲಹುವಾ |
ದಂಡ ಪ್ರಣಾಮದಿಂ | ಕೊಂಡಾಡದವರ ಶಿರ |
ಚಂಡಾಗುವದು ಯಮನಿಗೆ |
ಕೊಂಡಾಡು ದುರಿತವನ | ಕೆಂಡಾದ ಯತಿಯ ಇ- |
ತ್ತಂಡವಾಗುವದು ಸಂಪದಾ |
ಕೊಂಡಾಡುವರ ಪೊರೆವ | ಖಂಡಾಗಿ ವಂದ್ಯಖಳ |
ಹಿಂಡಾರಿ ಪಾಂಡುವಿಠಲಾ 	19
73. ಪ್ರಸನ್ನಶ್ರೀನಿವಾಸ 
							

324 ನಿನ್ನ ದಯದಿಂದಲೇ ನಿನ್ನ ಬಳಿ ಬಂದೆ

 324.	ರಾಗ: ಧನ್ಯಾಸಿ	ತಾಳ: ಮಿಶ್ರಛಾಪು
ನಿನ್ನ ದಯದಿಂದಲೇ ನಿನ್ನ ಬಳಿ ಬಂದೆ
ಘನ್ನ ದಯದಲಿ ಎನ್ನ ಉದ್ಧರಿಸೊ ಗುರುವೆ	ಪ
ಅಜನು ನಿಜಸಚ್ಛಕ್ತಿಪೂರ್ಣ ವಿಶ್ವಸ್ಥನ
ನಿಜಭಕ್ತಾಗ್ರಣಿ ನಿನಗೆ ಶರಣು ಶರಣಾದೆ
ಮೂರ್ಜಗದಿ ಪ್ರಖ್ಯಾತ ನಿನ್ನ ನಂಬಿದೆ ಎನ್ನ 
ಅಂಜಿಕೆಗಳ ತರಿದು ದೇಹಿಮೇ ಭದ್ರಂ	1
ಏನು ಅರಿಯದ ಮಂದಹೀನ ಮಾನವ ನಾನು
ಜ್ಞಾನಿಕುಲ ಶಿರಮಣಿಯು ಗುರುರಾಜ ನೀನು
ಎನ್ನತ್ವಕ್ ಮಜ್ಜಾಂತ ಸರ್ವರೋಗಂಗಳನು
ಘನದಯದಿ ಪರಿಹರಿಸೊ ತ್ವರಿತದಿ ಕೃಪಾಳು	2
ಎನ್ನ ಜಿಹ್ವೆಯಲಿ ಹರಿ ಮನಸಲ್ಲಿ ನಾರಿಯರು
ಎನ್ನ ತಿದ್ದಿಸೊ ಸೂರಿರಾಜ ಕರುಣಾಳು
ಎನ್ನ ಸರ್ವೇಂದ್ರಿಯವು ವಿಷಯಲಂಪಟವಾಯ್ತು
ನಿನ್ನ ಸ್ಮರಣೆಯು ಸರ್ವ ದುರಿತಹವು ಸತ್ಯ	3
ದುರ್ವಾದಿ ತಿಮಿರಮಾರ್ತಾಂಡ ಗ್ರಂಥವ ರಚಿಸಿ
ಸಾತ್ವಿಕರಿಗೆ ನ್ಯಾಯಪೀಯೂಷ ಉಣಿಸಿ
ಸರ್ವದಾಹ್ಲಾದಕರ ಚಂದ್ರಿಕೆಯಲಿರಿಸಿದೆ
ದೇವಕಿನಂದನಗೆ ಪ್ರಿಯತರನೆ ಶರಣು	4
ಉಪನಿಷತ್ ಖಂಡಾರ್ಥಗಳ ಮುಕ್ತಾವಲಿ ಮೂಲ
ಶ್ರೀಯಃಪತಿಗೆ ಪ್ರಿಯತರವು ಸುಧೆಯ ಪರಿಮಳವ
ಗೋಪಾಲ ಪೇಳಿಹ ಸುಗೀತೆಯ ವಿವರಣವ
ಉಪರಿ ಬಹುಗ್ರಂಥಗಳ ರಚಿಸಿದ ಸುಮೇಧ	5
ಕ್ರೊಢಮುಖಜಾತೀರ ಮಂತ್ರಸದ್ಮಸ್ಥನೀ
ಬೇಡುವವರಿಗೆ ಕಲ್ಪಪಾದನೆ ಶರಣು
ನಡುಮನೆಯ ಸುತ ಶಾಸ್ತ್ರ ಕಡಲಿಗೇ ಉಡುಪ ನೀ
ಬಡತನವ ಬಿಡಿಸೆನಗೆ ಕೊಡು ಭಕ್ತಿ ಜ್ಞಾನ	6
ಅಸಮ ಗುಣವಾರಿನಿಧಿ ನಿರ್ದೋಷ ಪವನಸ್ಥ
ವ್ಯಾಸ ನರಹರಿ ವಂಶಯಷ್ಟಿಧರ ಧನ್ವಿ
ಕುಸುಮಸಂಭವಪಿತ ಪ್ರಸನ್ನಶ್ರೀನಿವಾಸನು
ಭಾಸ ನಿನ್ನಲಿ ಸದಾ ಶರಣು ಮಾಂ ಪಾಹಿ	7
							

325 ಶರಣಂ ಶರಣಂ ಪಾಲಯಮಾಂ

325.	ರಾಗ: ಮಧ್ಯಮಾವತಿ	ತಾಳ: ಆದಿ
ಶರಣಂ ಶರಣಂ ಪಾಲಯಮಾಂ
ಶ್ರೀ ಶ್ರೀ ಗುರುರಾಘವೇಂದ್ರ ಕೃಪಾಂಬುಧೇ ಪಾಲಯ ಮಾಂ	ಪ
ಸುಧೀಂದ್ರ ಯತಿವರ ಕರಕಮಲಜ ವರ
ಯೋಗೀಂದ್ರ ಹಸ್ತ ಸರೋರುಹ ಪೂಜಿತ ಪಾಲಯ ಮಾಂ	1
ತಾರಕ ಸುಖದ ಸುಮಧ್ವಮತಾರ್ಣವ
ದುಗ್ಧ ತರಂಗ ಪ್ರವರ್ಧಕ ಚಂದ್ರ ಪಾಲಯ ಮಾಂ	2
ಸುಂದರ ಸ್ತಂಬಜ ರಾಮ ದೇವಕೀಸುತ
ಸೈಂಧವಮುಖ ದ್ವೈಪಾಯನಾರಾಧಕ ಪಾಲಯ ಮಾಂ	3
ಪರಿಮಳ ವಿವೃತ್ತಿ ಮುಕ್ತಾವಲಿ ಬಹು
ತಾರಕಗ್ರಂಥ ಸುಕರ್ತೃ ಸುಮೇಧ ಭೋ ಪಾಲಯ ಮಾಂ	4
ಮಂದಜಭವಪಿತ ಶ್ರೀ ಪ್ರಸನ್ನಶ್ರೀನಿವಾಸ
ಸಿಂಧುಜಾಪತಿ ಸಿಂಧೂರವರದ ಪ್ರಿಯ ಪಾಲಯ ಮಾಂ	5
74. ಪ್ರಹ್ಲಾದವರದ (ವರದಪ್ರಹ್ಲಾದ)ಶ್ರೀಹರಿವಿಠಲ
							

326 ಕ್ಷಮಿಸಬೇಕಯ್ಯ ಜೀಯ್ಯಾ ಗುರು ರಾಘವೇಂದ್ರರಾಯ

326.	ರಾಗ: ಬಿಲಹರಿ	ತಾಳ: ಆದಿ
ಕ್ಷಮಿಸಬೇಕಯ್ಯ ಜೀಯ್ಯಾ ಗುರು ರಾಘವೇಂದ್ರರಾಯ	
ನಮಿಸಿ ಬೇಡುವೆನಯ್ಯ ಗುರುರಾಯ	ಪ
ಕರುಣಾಕರ ನಿಜಶರಣಾಭೀಷ್ಟದ
ಚರಣಸೇವಕನ ಸರುವಪರಾಧವ	ಅ.ಪ
ಅಂದು ಪ್ರಹ್ಲಾದನಾಗಿ ಬಂದು ನೀನವತರಿಸಿದೆ
ಇಂದಿರೇಶನ ಭಕ್ತಿ ಮಾಡ್ದೆ ನೀ ಪಾಡ್ದೆ
ಒಂದಿಗಿಹ್ಯರ ಕೂಡೆ ಹರಿಯೆ ಪರದೈವವೆಂದೆ
ಛಂದದಿಂದವರ ಕೂಡಿ ಕುಣಿದೆ ನೀಮಣಿದೆ
ತಂದೆಕೊಟ್ಟಂಥ ತೊಂದರೆಗಳಜರಿದು
ಇಂದಿರೆಯರಸನೆ ಎಂದೆಂದಿಗುಗತಿಎಂದೆ
ಕುಂದದೆ ಸರ್ವತ್ರ ತುಂಬಿಹನೆಂದೆಂದು
ಕಂಭದಿ ನೃಹರಿಯತೋರ್ದೆ ನೀ ಜಗಕೆ	1
ವ್ಯಾಸಮುನಿಯೆ ನಿಮ್ಮ ಸಾಸಿರಾನಂತ ಮಹಿಮೆ
ಲೇಸಾಗಿ ಪೊಗಳುವರು ದಿವಿಜಾರು
ಏಸಾರವನು ನಾನು ಈಸುವರ್ಣಿಸಲರಿಯೆ
ಕ್ಲೇಶಪಂಕದಿ ಬಿದ್ದು ನಾನಿದ್ದು
ಆಶೆಯೊಳಗುಆಗಿ ದೋಷರಾಶಿಗಳನ್ನು
ಬೇಸರಿಲ್ಲದೆ ಸಂಪಾದಿಸಿ ಹೊತ್ತಿಹೆ
ವಾಸುದೇವನ ಮಾಯಾಪಾಶಬದ್ಧನುಆದೆ
ಸಾಸಿರಫಣನಾವೇಶನೆ ಸಲಹೊ	2
ಮೆರೆವೊ ಮಂತ್ರಾಲಯಪುರಮಂದಿರವಾಸ
ದುರಿತಜೀಮೂತವಾತ ಹೇತಾತ
ಗುರುರಾಜ ರಾಘವೇಂದ್ರ ನಮೋ ನಮೋ ಪಾಹಿ ಪಾಹಿ
ಅಮಿತದುರ್ಗತಿಭಂಜನ ನಿರಂಜನ
ಸುರವರಸಜ್ಜನ ನರತತಿಗಳಿಗೆಲ್ಲ
ಪರಿಮಳಬೀರಿದ ಸುರಚಿರಗಾತ್ರನೆ
ನಿರಯವತಪ್ಪಿಸಿ ಮರುತಾಂತರ್ಗತ
ವರದಶ್ರೀಪ್ರಹ್ಲಾದಹರಿವಿಠಲನ ತೋರಿ	3
							

327 ಧೀರೇಂದ್ರ ಸುಕರಾರ್ಚಿತ ಗುರು ರಾಘವೇಂದ್ರ

327.	ರಾಗ: [ಶಹನ]	ತಾಳ: [ಖಂಡಛಾಪು]
ಧೀರೇಂದ್ರ ಸುಕರಾರ್ಚಿತ ಗುರು ರಾಘವೇಂದ್ರ	ಪ
ನೀರದಪ್ರಕಾಶ ವರವೃಂದಾವನಸ್ಥಿತ	ಅ
ಸುಂದರ ಬದರಿಯಿಂದ ತಂದ ಶಿಲೆಯಿಂದ
ಛಂದಾಗಿ ರಚಿಸಿದ ವೃಂದಾವನದಿನಿಂದ	1
ಮಂತ್ರಾಲಯಕೆ ಮಿಗಿಲು ತಂತ್ರವ ನಡೆಸುವ
ಯಂತ್ರವಾಹಕನದಾಸ ಶ್ರೀ ಗುರುರಾಜ	2
ಮಂದಸ್ಮಿತಯುತ ಸುಂದರ ವಿಗ್ರಹ
ಮಂದಜನಕೆ ಆನಂದದಾಯಕ	3
ತ್ರಿಫಣ(ತ್ರಿಷಣ?)ರೂಪನೆ ನಿತ್ಯ ಸುಫಲದಾಯಕನಾಗಿ 
ಚಪಲತೆಯನು ಕಳೆದು ಅಪವರ್ಗಫಲವೀವೊ	4
ನಿನ್ನ ಅಂತರ್ಯಾಮಿ ಘನ್ನಮಾರುತನೊಳು
ಚೆನ್ನಾಗಿ ಸೀತಾರಾಮರನ್ನ ನೀ ತೋರಿಸೊ	5
ಫಣಿರಾಜಶಯನಗೆಮಣಿದು ಬಿನ್ನೈಸಿ ನಿತ್ಯ
ಬಣಗುಸೇವಕರನು ಕ್ಷಣಬಿಡದೆಲೆ ಪೊರೆ	6
ಪ್ರಹ್ಲಾದವರದಶ್ರೀಹರಿವಿಠಲನಭಜಕ
ಸಹ್ಲಾದಾಗ್ರಜನಾದ ಪ್ರಹ್ಲಾದನವತಾರನೆ	7
							

328 ಪಾಲಿಸೆನ್ನ ಗುರು ರಾಘವೇಂದ್ರ ಘನ್ನ

328.	ರಾಗ: ದೇವಗಾಂಧಾರಿ	ತಾಳ: ಆದಿ
ಪಾಲಿಸೆನ್ನ ಗುರು ರಾಘವೇಂದ್ರಘನ್ನ	ಪ
ಪಾಲಿಸೆನ್ನ ಯತಿರನ್ನ ಪ್ರಸನ್ನ ಸು-
ಪಾಲಶೀಲ ಕೃಪಾಲಯ ಗುರುವೆ	ಅ
ಸಿರಿನರಹರಿಯ ಕರುಣಾಪಾತ್ರನೆ
ಸುರಚಿರಗಾತ್ರನೆ ವರಪ್ರಹ್ಲಾದನೆ	1
ಇಂದಿರೆಯರಸನ ಛಂದದಿ ಭಜಿಸುವ
ವೃಂದಾರಕಮುನಿ ಸುಂದರಪದಭೃಂಗ	2
ಖಗವಾಹನ ಪದಯುಗ ಭಜಕಾಗ್ರಣಿ 
ನಗೆಮೊಗಯುತ ಪನ್ನಗನಾವೇಶನೆ	3
ದಂಡಧರಿಸಿ ಕಮಂಡಲುಪಿಡಿದ ಉ-
ದ್ದಂಡ ವ್ಯಾಸಮುನಿ ತರ್ಕತಾಂಡವ	4
ನ್ಯಾಯಾಮೃತ ಚಂದ್ರಿಕಾದಿ ಸ-
ನ್ಯಾಯಪ್ರವರ್ತಕ ಸುಯತೀಶ್ವರ	5
ಭಾಸುರಾಂಗ ಮುದ್ದುವ್ಯಾಸಮುನಿಯೆ ನಿನ್ನ
ದಾಸದಾಸರ ದಾಸ ನಾನಯ್ಯ	6
ವಂದಿಪಜನರಘವೃಂದ ಕಳೆವ ಕ-
ರ್ಮಂದಿಗಳರಸ ಶ್ರೀ ರಾಘವೇಂದ್ರ ಗುರುವರ	7
ಅತಿಶಯ ಮಹಿಮೆಯ ಕ್ಷಿತಿಯೊಳು ತೋರುವ
ಪ್ರತಿಮಂತ್ರಾಲಯಸ್ಥಿತ ಯತಿಶಿರೋಮಣಿಯೆ	8
ವರಪ್ರಹ್ಲಾದಶ್ರೀಹರಿವಿಠಲನ
ಕರುಣವನೆಮ್ಮೋಳು ಹರಹುವ ದೊರೆಯೆ	9
							

329 ಬಾರೊ ಗುರು ರಾಘವೇಂದ್ರ ಸದ್ಗುಣಸಾಂದ್ರ

329.	ರಾಗ: [ಹಮಿರ್ ಕಲ್ಯಾಣಿ]	ತಾಳ: [ಮಿಶ್ರ ನಡೆ]
ಬಾರೊ ಗುರು ರಾಘವೇಂದ್ರ ಸದ್ಗುಣಸಾಂದ್ರ	ಪ
ಭಾವಜನಯ್ಯನ ಭಾವದಿ ಭಜಿಸುವ
ಕೋವಿದರರಸನೆ ಕಾಯೊ ದೇವನದೂತ	1
ಸುಧೀಂದ್ರಯತಿವರ ಕರಕಮಲಜ ಕಂಜ
ಕುಧರಜತಟವಾಸ ಪರಮತೇಜಃಪುಂಜ	2
ಪ್ರಹ್ಲಾದವರದಶ್ರೀಹರಿವಿಠಲಗೆ ಪ್ರೀಯ
ಆಹ್ಲಾದವೆಮಗಿತ್ತು ನಿರುತಪೊರೆಯೊ ಜೀಯಾ	3
330.	ರಾಗ: [ಸಾವೇರಿ] 	ತಾಳ: [ಮಿಶ್ರನಡೆ/ಮಿಶ್ರಛಾಪು]
ಬಾರೋ ನಮ್ಮ ಮನೆಗೆ ಗುರು ರಾಘವೇಂದ್ರ 	ಪ
ಬಾರೋ ಸದ್ಗುಣಶೀಲ ಸಾರಭಕುತಿಲೋಲ
ಕಾರುಣ್ಯನಿಧಿ ಲಕ್ಷ್ಮೀನಾರಸಿಂಹನಪ್ರಿಯ	ಅ.ಪ
ಬಲದ ಕೈಯೊಳು ಪಿಡಿದ ಹೊಳೆವೋ ಸಾಲಿಗ್ರಾಮ
ಚೆಲುವಾದ ಕಾಷಾಯ ಥಳಿಪ ದಂಡವ ಧರಿಸಿ	1
ಬೆಳಗುವ ನಗೆನೋಟ ಕಳೆಪೂರ್ಣಮುಖಮಾಟ
ತುಳಸಿಮಾಲೆಯೋಲ್ಯಾಟ ಭಳಿರೆ ಭಜಕರನೆಂಟ	2
ಎಡಬಲ ಸೇವಕರು ಬಿಡದೆ ಸ್ತುತಿಸುತಿರೆ
ಕಡುಬೇಗದಿಂದಲಿ ಬಂದು ಬಡವರಸಲಹಲು	3
ದೀನರುದ್ಧಾರಕ ಮಾನಿಗಳರಸನೆ
ಜ್ಞಾನದಾಯಕ ನಮ್ಮ ಶ್ರೀನಿವಾಸನದೂತ	4
ಮುಂದೆ ನಡೆಯೆ ಗುಣವೃಂದ ವಾದಿರಾಜ
ಸುಂದರ ಜಯರಾಯ ಧೀರೇಂದ್ರ ಧೃವರ ಸಹಿತ	5
ಮೂಲರಾಮನಗುಣ ಜಾಲಗಳನು ನಿತ್ಯ
ಶೀಲ ಮನದಿ ತುತಿಪ ಬಾಲ ಪ್ರಹ್ಲಾದನೆ	6
ಪ್ರಹ್ಲಾದವರದಶ್ರೀಹರಿವಿಟ್ಟಲನ ಕಥಾ-
ಸಲ್ಲಾಪನೆ ಪಾದಪಲ್ಲವ ತೋರಿಸುತ	7
ವಾದಿರಾಜ, ಜಯರಾಯ, ಧೀರೇಂದ್ರ, 
ಧೃವ(ಅಂದರೆ ಶ್ರೀಶ್ರೀಪಾದರಾಜರು)=ಇವರುಗಳು ಪ
್ರಸಿದ್ಧ ಮಾಧ್ವ ಯತಿಗಳು;
75. ಭೀಮೇಶಕೃಷ್ಣ
							

330 ಬಾರೋ ನಮ್ಮ ಮನೆಗೆ ಗುರು ರಾಘವೇಂದ್ರ

330.	ರಾಗ: [ಸಾವೇರಿ] 	ತಾಳ: [ಮಿಶ್ರನಡೆ/ಮಿಶ್ರಛಾಪು]
ಬಾರೋ ನಮ್ಮ ಮನೆಗೆ ಗುರು ರಾಘವೇಂದ್ರ 	ಪ
ಬಾರೋ ಸದ್ಗುಣಶೀಲ ಸಾರಭಕುತಿಲೋಲ
ಕಾರುಣ್ಯನಿಧಿ ಲಕ್ಷ್ಮೀನಾರಸಿಂಹನಪ್ರಿಯ	ಅ.ಪ
ಬಲದ ಕೈಯೊಳು ಪಿಡಿದ ಹೊಳೆವೋ ಸಾಲಿಗ್ರಾಮ
ಚೆಲುವಾದ ಕಾಷಾಯ ಥಳಿಪ ದಂಡವ ಧರಿಸಿ	1
ಬೆಳಗುವ ನಗೆನೋಟ ಕಳೆಪೂರ್ಣಮುಖಮಾಟ
ತುಳಸಿಮಾಲೆಯೋಲ್ಯಾಟ ಭಳಿರೆ ಭಜಕರನೆಂಟ	2
ಎಡಬಲ ಸೇವಕರು ಬಿಡದೆ ಸ್ತುತಿಸುತಿರೆ
ಕಡುಬೇಗದಿಂದಲಿ ಬಂದು ಬಡವರಸಲಹಲು	3
ದೀನರುದ್ಧಾರಕ ಮಾನಿಗಳರಸನೆ
ಜ್ಞಾನದಾಯಕ ನಮ್ಮ ಶ್ರೀನಿವಾಸನದೂತ	4
ಮುಂದೆ ನಡೆಯೆ ಗುಣವೃಂದ ವಾದಿರಾಜ
ಸುಂದರ ಜಯರಾಯ ಧೀರೇಂದ್ರ ಧೃವರ ಸಹಿತ	5
ಮೂಲರಾಮನಗುಣ ಜಾಲಗಳನು ನಿತ್ಯ
ಶೀಲ ಮನದಿ ತುತಿಪ ಬಾಲ ಪ್ರಹ್ಲಾದನೆ	6
ಪ್ರಹ್ಲಾದವರದಶ್ರೀಹರಿವಿಟ್ಟಲನ ಕಥಾ-
ಸಲ್ಲಾಪನೆ ಪಾದಪಲ್ಲವ ತೋರಿಸುತ	7
ವಾದಿರಾಜ, ಜಯರಾಯ, ಧೀರೇಂದ್ರ, 
ಧೃವ(ಅಂದರೆ ಶ್ರೀಶ್ರೀಪಾದರಾಜರು)=ಇವರುಗಳು 
ಪ್ರಸಿದ್ಧ ಮಾಧ್ವ ಯತಿಗಳು;
75. ಭೀಮೇಶಕೃಷ್ಣ
							

331 ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ

331.	ರಾಗ: [ಭೀಮ್‍ಪಲಾಸ್]	ತಾಳ: [ಮಿಶ್ರನಡೆ]
ನೋಡಿರಿ ರಾಘವೇಂದ್ರರ ಮಾಡಿರಿ ನಮಸ್ಕಾರ
ಬೇಡಿದ ಇಷ್ಟ ವರ ನೀಡುವರು ನಮ್ಮ ಯತಿವರ 	ಪ
ಮಂತ್ರಾಲಯದಿ ನಿಂತಿಹ ಚಿಂತೆಗಳ ಪರಿಹರಿಸುವ
ಕಂತುಪಿತನನಂತಗುಣ ತನ್ನಂತರಂಗದಿ ಸ್ತುತಿಸುವ
ಇಂಥ ಯತಿಗಳ ಕಾಣೆ ಹರಿಯೇಕಾಂತ ಭಕ್ತರೆನಿಸಿಕೊಂಡು
ಮಂತ್ರಾಕ್ಷತೆ ಫಲ ನೀಡಿ ಸಂತಾನ ಸಂಪತ್ತು ಕೊಡುವರ	 1
ಭೂತ ಪ್ರೇತ ಭಯಗಳ ವಾತ ಪಿತ್ತ ವ್ಯಾಧಿಗಳ
ಶ್ವೇತ ಕುಷ್ಠ ರೋಗಗಳ ಪಾತಕಿಯರ ಪಾಪಗಳ
ಪ್ರೀತಿಲಿಂದ ಕಳೆವರೊ ಪ್ರಖ್ಯಾತರಾಗಿ ಬೆಳೆವರೊ
ಭೂತಳದಿ ಸನ್ನಿಹಿತರಾದ ಸೀತಾಪತಿ ನಿಜದೂತರೆನಿಸೋರು	2
ಸದನಕೆ ಬಂದುಕೂಡುವ ಭಜಿಸÉ ಭಕ್ತರ ನೋಡುವ
ಒದಗಿದಾಪತ್ತು ದೂಡುವ (+ಬಂದು) ಮುದದಿ ತಾ ದಯಮಾಡುವ ತುಂಗಾ
ನದಿಯ ತೀರ ವಾಸವಾಗಿ ಅಜನಯ್ಯನ ಕೊಂಡಾಡುತ 
ಹೃದಯದೊಳು ಭೀಮೇಶಕೃಷ್ಣನ ಪದವ ಭಜಿಸಿ ಪಡೆವರಾನಂದವ	3
76. ಭೀಮೇಶವಿಠಲ
							

332 ಬಂದೆ ಗುರುರಾಯ

332.	ರಾಗ: ಬೇಗಡೆ	ತಾಳ: ಏಕ
ಬಂದೆ ಗುರುರಾಯ ನಿನ್ನ ಸಂದರುಶನವ ಬಯಸಿ	ಪ
ಬಂದೆನೊ ಭವದೊಳುನೊಂದು ನಿನ್ನ ಪಾದಾರ-
ವಿಂದವ ನೋಡ್ಯಾನಂದ ಪಡೆಯಲು ದಿನದಿನ	ಅ.ಪ.
ಪರಿಪರಿಯಿಂದಲಿ ಪರಮನುಜರನನು-
ಸರಿಸಿದ ದೋಷ ಹರಿಪದೆಂದು ಬೇಡಿ ನಮಿಸುತಲಿ	1
ಸತತ ಸತಿಸುತರತತಿಗೆ ಮೋಹಿಸದೆ ಕೃತಿ-
ಪತಿಯ ಸ್ಮರಿಪ ಮತಿಯಬೇಡಿ ನಮಿಸುತಲಿ	2
ಕಠಿಣದಿ ಭೀಮೇಶವಿಠಲನೆ ನಿಮ್ಮ ನುಡಿ
ತೃಟಿಮೀರದೆ ತಾ ಥಟನೆ ಮಾಡುವದರಿತು	3
						

333 ಬೇಡುವೆ ನಿನ್ನ ಕೊಡು ವರವನ್ನ

333.	ರಾಗ: ಆನಂದ ಭೈರವಿ	ತಾಳ: ಆದಿ
ಬೇಡುವೆ ನಿನ್ನ ಕೊಡು ವರವನ್ನ	ಪ
ಬೇಡುವೆ ಭಕುತರ ಬೀಡೊಳು ನಿನ್ನ ಕೊಂ-
ಡಾಡುವೆ ರಥದೊಳಗಾಡುವ ವಿಭುವೆ ನಾ	ಅ.ಪ
ಇಂದ್ರನವಿಭವ ಸುಧೀಂದ್ರತನುಜ ರಾಘ-
ವೇಂದ್ರ ಗುರುವೆ ಕಮಲೇಂದ್ರನಕೃಪೆಯ ನಾ	2
ವರಭೀಮೇಶವಿಠಲನರಿದವರೊಳು ತಾ
ಪರನೆನುತಲಿ ನಿನ್ನ ಚರಣವ ಸ್ತುತಿಸಿ ನಾ	3
							

334 ರಾಘವೇಂದ್ರರ ಚರಣವನು ತುತಿಪೆ

334.	ರಾಗ: [ನವರೋಜó]	ತಾಳ: [ಆದಿ]
ರಾಘವೇಂದ್ರರಚರಣವನು ತುತಿಪೆ ನಾ
ರಾಘವೇಂದ್ರರನ್ನು ಜಾಗುಮಾಡದೆಲೆ
ಬಾಗಿ ನಮಿಸಿದವ ಭೋಗಿಯಾದುದನು ತಿಳಿದು	ಪ
ಪ್ರತಿವರುಷದಿ ಬಂದತಿಹರುಷದಿ ನಿನ್ನ
ರಥವನೋಡಿ ಪಾಡಿದವಗೆ ಸುತರ ನೀಡಿ ಸಲಹುತಿಹ	1
ದರುಶನಮಾತ್ರದಿ ದುರಿತಗಳೆಲ್ಲವು ಹರವು
ಹರಿಯ ಕೃಪಾಸಾಗರಪಡೆದು ಮೆರೆದಿರುವ	2
ಕುಷ್ಟಾದಿ ವ್ಯಾಧಿಗಳಟ್ಟುತ ಭೀಮೇಶ
ವಿಠಲ ಕೀರುತಿಕೊಟ್ಟು ಒಲಿದಿರುವದರಿತು	3
78. ಭೂಕಾಂತವಿಠಲ 
							

335 ಕರುಣದಿ ಕಾಯೊ ಗುರು ರಾಘವೇಂದ್ರ

335.	ರಾಗ: ಕಾಂಬೋಜಿ	ತಾಳ: ಝಂಪೆ
ಕರುಣದಿಕಾಯೊ ಗುರು ರಾಘವೇಂದ್ರ	ಪ
ಅರಿಯೆನೊ ಒಂದನು ಕರುಣಿಸೊ ತ್ವರಿತದಿ
ನರಹರಿಪಾದ ಭಜನೆಯನೂ ಸ್ಮರಣೆಯನೂ
ಸರಿದು ಪೋಗುವಿಯೇಕೆ ಕರಪಿಡಿದು ಸಲಹಯ್ಯ
ಗುರುಮಧ್ವಪತಿದಾಸ ಬುಧಜನರೇಶ	1
ಗುರುವೆ ನಿನ್ನಯ ಮಹಿಮೆ ಅರಿತು ಶರಣೆಂಬೆನೊ
ನಿರುತ ಕವಿತಾಶಾಸ್ತ್ರ ಅರುಹಿ ಪಾಲಿಸೊ ಬೇಗ
ಕರುಣಿಗಳರಸನೆ ಕಾಮಿತಫಲದಾತ
ದುರುಳ ದುಷ್ಕೃತ್ಯಗಳ ಪರಿಹರಿಪ ಖ್ಯಾತ ಗುರುವೆ	2
ಅಂಬುಜನೇತ್ರನ ತೋರೊ ಅಭಿಮಾನದಿಂದಲಿ
ಕುಬುಜೆವರದನದಾಸ ವಿಭುದೇಂದ್ರ
ಶುಭಫಲದಾಯಕ ಶ್ರೀಭೂಕಾಂತವಿಠಲನ
ಸಬಲಭಕ್ತರ ಕಾಯ್ವ ಶುಭಗುಣಪೂರ್ಣ	3
79. ಭೂಪತಿವಿಠಲ 
							

336 ಈ ಪರಿಯ ಸೊಬಗು

336.	ರಾಗ: ಭೂಪ್ 	ತಾಳ: ಝಂಪೆ 
ಈ ಪರಿಯ ಸೊಬಗು ಇನ್ನಾವ ಗುರುಗಳಿಗುಂಟು
ಈ ಪರಿಮಳಾಚಾರ್ಯ ಗುರುರಾಜರಿಗಲ್ಲದೆ 	ಪ
ಅಜನ ಪ್ರೀಯ ಸೇವಕನು ಶಂಕುಕರ್ಣನು ಮೊದಲು
ಅಜನ ಶಾಪವ ತಾಳಿ ದೈತ್ಯರೊಳು ಜನಿಸಿ
ಈ ಜಗದಿ ಸರ್ವತ್ರ ಹರಿಯ ವ್ಯಾಪ್ತಿಯ ತೋರಿ
ನಿಜ ಭಕ್ತ ನೆನೆಸಿದನು ಪ್ರಹ್ಲಾದನಾಗಿ 	1
ದ್ವಾಪರಾಂತ್ಯದಿ ಇವನೆ ಬಾಹ್ಲೀಕನೆಂದೆನಿಸಿ
ಶಾಪಫಲ ಪರಿಹಾರವಾಗಬೇಕಾಗಿ 
ವಿಪರೀತ ಬುದ್ಧಿಯಿಂ ಯುದ್ಧವನು ಮಾಡಿ ತಾ
ಅಪೇಕ್ಷಿಸಿದನು ಮರಣವನು ಭೀಮಸೇನನಿಂದಾ 	2
ಕಲಿಯುಗದಿ ಭೀಮಸೇನನು ಮಧ್ವಮುನಿಯಾಗಿ
ಅವತರಿಸಿ ತತ್ವಮತ ಸ್ಥಾಪಿಸಿದನು
ಬಾಹ್ಲೀಕ ಬಾಲಯತಿ ವ್ಯಾಸಮುನಿಯಾಗಿ
ಶ್ರೀಕೃಷ್ಣನನು ಕುಣಿಸಿ ರಾಜಗುರುವಾದನು 	 3
ಮುನಿ ಮತ್ತೆ ಅವತರಿಸಿ ಗುರುಸಾರ್ವಭೌಮ
ಶ್ರೀ ರಾಘವೇಂದ್ರನೆಂದೆನಿಸುತ
ಮಧ್ವಮತ ದುಗ್ದಾಬ್ಧಿ ಚಂದ್ರಮನು ತಾನಾಗಿ
ಕಲಿಯುಗದ ಕಲ್ಪತರು ಎಂದೆನಿಸಿದಾ 	4
ಅಜನಪ್ರಿಯ ಅಜನ ಪ್ರಾಣದ ಪದಕ
ಅಜಪದಕೆ ಅರ್ಹನೆ ಇವನಂತಹ(?)
ಅಜನತಾತನ ಕುಣಿಸಿ ಅಜಕರಾರ್ಚಿತ
ಪೂಜಿಸಿದ ಭೂಪತಿವಿಠಲನ ದಾಸ	5
							

337 ಎಂಥ ಶ್ರೀಮಂತನೋ

337.	ರಾಗ: ಪಹಾಡಿ 	 ತಾಳ: ದಾದರಾ
ಎಂಥ ಶ್ರೀಮಂತನೋ ಎಂಥ ಧೀಮಂತನೋ 	ಪ
ಎಂಥ ಶ್ರೀಮಂತನೋ ಮಂತ್ರಾಲಯದಿನಿಂತನೋ
ಕಂತು ಪಿತನ ಒಲಿಸಿದನೋ ಸಂತತ ಭಕ್ತರ ಸಲಹುವನೋ 	1
ದೈತ್ಯರ ಕುಲದಲಿ ಜನಿಸಿದನೋ ಸತ್ಯಾಗ್ರಹವನು ಮಾಡಿದನೋ
ದೈತ್ಯಗೆ ಸರ್ವತ್ರದ ಶ್ರೀಹರಿಯ ನಿತ್ಯವ್ಯಾಪ್ತಿಯ ತೋರಿದನೋ 	2
ಸರಸಗ್ರಂಥಗಳ ರಚಿಸಿದನೋ ದುರ್ವಾದಿಗಳನು ಜಯಿಸಿದನೋ
ಅರಸನ ಭಯ ಪರಿಹರಿಸಿದನೋ ಪುರಂದರದಾಸರ ಗುರುವರನೋ 	3
ಪರಮಹಂಸ ಪೀಠಾಧಿಪನೋ ಮಧ್ವಮತಾಬ್ಧಿಗೆ ಚಂದ್ರಮನೋ
ಭಕ್ತ ಜನರ ಇಷ್ಟಾರ್ಥ ಕೊಡುತಲಿ ಕಾಮಧೇನುವಾಗಿಹನೋ 	4 
ಅಪರೋಕ್ಷಿಕೃತ ಶ್ರೀಶನೋ ಶಾಪಾನುಗ್ರಹ ಶಕ್ತನೋ
ಅಪರಾಧಗಳನು ಕ್ಷಮಿಸಿ ಭಕ್ತರಿಗೆ ಭೂಪತಿವಿಠಲನ ತೋರುವನೋ 	5
							

338 ಕರುಣದಿ ಪಿಡಿ ನಮ್ಮ ಕೈಯ್ಯಾ

338.	ರಾಗ: ವಿಭಾಸ 	ತಾಳ: ಭಜನಠೇಕಾ
ಕರುಣದಿ ಪಿಡಿ ನಮ್ಮ ಕೈಯ್ಯಾ ಗುರುರಾಯಾ 	ಅ
ನಿನ್ನ ಹೊರತು ನಮಗೆ ಇನ್ನಾರು ಗತಿ ಇಲ್ಲಾ 	ಅ.ಪ
ಕರುಣಾ ಸಾಗರನೆಂಬ ಬಿರುದು ನಿನ್ನದು ಕೇಳಿ
ವರೆಗೆ ಹಚ್ಚಲು ನಾವು ಬಂದೆವಯ್ಯಾ
ಸರ್ವ ಪಾಪಗಳ ಸಾಕಾರ ಮೂರುತಿ ನಾವು
ಶರಣು ಬಂದೆವು ನಿನಗೆ ಕರುಣಾ ಸಮುದ್ರಾ 	1
ಕಂಡ ಕಂಡದ್ದು ತಿಂದು ಕಂಡಲ್ಲಿ ತಿರುಗಾಡಿ
ಕಂಡವರ ಬೆನ್ಹತ್ತಿ ದಣಿಕೊಂಡೆವಯ್ಯಾ
ಇಂದು ತವ ಪಾದಕ್ಕೆ ಬಂದು ಬಿದ್ದಿರುವೆವು
ಅಪರಾಧವೆಣಿಸದೆಲೆ ಕೃಪೆಮಾಡು ತಂದೆ 	2
ನಾನು ನನ್ನದು ಎಂಬ ಭ್ರಾಂತಿಯ ಬಿಡಿಸಯ್ಯಾ
ಮೌನದಿಂ ಸತ್ಕಾರ್ಯಗಳ ಮಾಡಿಸು
ಏನಾದರದು ಶ್ರೀಹರಿಯ ಪ್ರೇರಣೆ ಎನಿಸು
ಸುಜ್ಞಾನಿ ಜನರ ಸಂಗದೊಳೆನ್ನ ಇರಿಸಯ್ಯಾ 	 3
ಪಾಪಾದ್ರಿ ಸಂಭೇದನದೃಷ್ಟಿ ವಜ್ರ ನೀ
ಪಾಪ ಪರ್ವತ ಒಡೆದು ಪುಡಿ ಪುಡಿ ಮಾಡು
ಕೈ ಪಿಡಿದೆಮ್ಮನು ಮುಕ್ತಿ ಮಂಟಪಕೊಯ್ದು 
ಭೂಪತಿವಿಠಲನ ಅಪರೋಕ್ಷ ಮಾಡಿಸು 	 4 
							

339 ಗುರುರಾಯಾ ಗುರುರಾಯಾ ಕರುಣಾನಿಧಿ

339.	ರಾಗ: ಭೀಮ್‍ಪಲಾಸ್ 	ತಾಳ: ತ್ರಿ
ಗುರುರಾಯಾ ಗುರುರಾಯಾ ಕರುಣಾನಿಧಿ
ಕಲಿಯುಗದ ಕಲ್ಪತರು 	ಪ
ನೀ ಕರುಣಿಸದೆ ನಿರಾಕರಿಸಿದರೆನ್ನ
ಸಾರುವರಾರೊ ದಯಾಸಾಂದ್ರ ರಾಘವೇಂದ್ರ 	1
ನಂಬಿದೆ ನಿನ್ನನು ಅಂಬುಜನಾಭನ 
ಕಂಬದಿ ತೋರ್ದ ಗಂಭೀರ ಕುಮಾರಾ 	2
ಹರಿಯ ಕುಣಿಸಿ ದೊರೆ ಭಯಪರಿಹರಿಸಿದ
ದುರ್ಮತ ತಿಮಿರ ಮಾರ್ತಾಂಡ ವ್ಯಾಸಮುನಿ 	3
ಘನ್ನಮಹಿಮ ಸಂಪನ್ನ ಕಲ್ಪದ್ರುಮ
ನಿನ್ನನ್ನು ಬಿಟ್ಟರಿನ್ನಾರು ನಮಗೆ ಗತಿ ಗುರುರಾಯಾ 	4
ಮೊರೆ ಹೊಕ್ಕವರನು ಪೊರೆಯುವನೆಂಬ ತವ 
ಬಿರುದು ಕಾಯೊ ಭೂಪತಿವಿಠಲ ಪ್ರೀಯಾ 	5
							

340 ದಯಮಾಡಿ ಪಿಡಿ ಎನ್ನ ಕೈಯ್ಯಾ

 340.	ರಾಗ: ಬಿಭಾಸ 	ತಾಳ: ತ್ರಿ
ದಯಮಾಡಿ ಪಿಡಿ ಎನ್ನಕೈಯ್ಯಾ ಗುರುರಾಯಾ 	 ಪ
ಕರುಣಾ ಸಾಗರನೆಂಬ ಬಿರುದು ನಿನಗೆ ಉಂಟು 	ಅ. ಪ
ನಾನು ನನ್ನದು ಎಂಬ ಹೀನ ಬುದ್ಧಿಯ ಬಿಡಿಸು
ಸಾನುರಾಗದಿ ಮನಸು ಧರ್ಮದಲ್ಲಿರಿಸು
ಮಾನಾಪಮಾನಕ್ಕೆ ಹಿಗ್ಗದೆ ಕುಗ್ಗದೆ
ಧ್ಯಾನಾನಂದದೊಳೆನ್ನ ಇರಿಸಯ್ಯಾ ಸ್ವಾಮಿ 	1
ದೇಹ ನನ್ನದು ಎಂಬ ದುರಭಿಮಾನವ ಬಿಡಿಸು
ದೇಹಾನು ಬಂಧುಗಳ ಮೋಹ ಬಿಡಿಸು
ದೇಹ ಗೇಹಗಳೆಲ್ಲ ದೇವರ ಸ್ವತ್ತೆಂಬ
ಸುಜ್ಞಾನವನು ಕೊಟ್ಟು ಸಲುಹಯ್ಯಾ ಸ್ವಾಮಿ 	2 
ದುಷ್ಟ ಬುದ್ಧಿಯು ಎನಗೆ ಹುಟ್ಟದಂತೆ ಮಾಡು
ಕೆಟ್ಟ ಜನರ ಗಾಳಿ ತಟ್ಟದಿರಲಿ
ಎಷ್ಟು ಬೇಕಾದಷ್ಟು ಕಷ್ಟ ಬಂದರು ಸಹ
ಗಟ್ಟ್ಯಾಗಿ ನಿನ್ನಲ್ಲಿ ಭಕ್ತಿ ಹುಟ್ಟಲಿ ಸ್ವಾಮಿ 	3
ಭೇದ ಅಭೇದದ ಮರ್ಮವ ತಿಳಿಸಯ್ಯಾ
ಸಾದು ಸಜ್ಜನರ ಸಂಗದೊಳೆನ್ನ ಇರಿಸು
ಮೋದ ತೀರ್ಥರ ಮತದ ಸುಜ್ಞಾನವನು ಕೊಟ್ಟು
ಭೂದೇವ ವಂದ್ಯ ಭೂಪತಿವಿಠಲನ ತೋರು 	4
							

341 ಬರಬೇಕು ಇಂದಿಲ್ಲಿಗೆ ಭಕ್ತರ ಮನೆಗೆ

341.	ರಾಗ: ಪಟದೀಪ 	ತಾಳ: ತ್ರಿ
ಬರಬೇಕು ಇಂದಿಲ್ಲಿಗೆ ಭಕ್ತರ ಮನೆಗೆ 	 ಪ
ಪರಮಪಾವನ ಗುರು ಸಾರ್ವಭೌಮನೆ ಬೇಗ 	ಅ.ಪ
ಹಡೆದಪ್ಪ ಖಡುಗವ ಪಿಡಿದು ಬೆದರಿಸಿ ನಿನ್ನ
ಒಡೆಯನೆಲ್ಲಿಹ ನೋಡಿ ಬಿಡುವೆನೆನಲು
ಧೃಡ ಬಕ್ತಿಯಿಂ ಜಗದೊಡೆಯಗೆ ಮೊರೆಯಿಡೆ
ಘುಡು ಘುಡಿಸುತ ಕಂಬ ಒಡೆದು ನರಹರಿ ಬಂದ 	 1
ಬಾಲಯತಿಯು ಗೋಪಾಲನ ಕುಣಿಸಿ
ಭೂಪಾಲನ ಕುಹಯೊಗ ಕಳೆದು ಪೊರೆದು
ಬಾಲಾಜಿಯನು ಪೂಜಿಸಿ ಬಾಲನಿಗೊಪ್ಪಿಸಿ
ಆ ಮೌಲ್ಯ ಗ್ರಂಥ ಬರೆದ ಮೌನೀಶ ವ್ಯಾಸರಾಯ 	2
ರಘುಪತಿ ಪೊಜಕ ರಾಘವೇಂದ್ರನೆ ಬಾರೊ
ಅಘಾದ್ರಿ ಸಂಭೇದನ ದೃಷ್ಟಿ ವಜ್ರಾ
ಬಗೆಬಗೆಯ ಮಹಿಮೆಯ ಜನಕೆ ತೋರಿಸುತ ನೀ
ಅಗಮ್ಯ ಮಹಿಮಾ ಭೂಪತಿವಿಠಲನ ಪ್ರೀಯಾ 	3
							

342 ಬಾರಯ್ಯಾ ರಾಘವೇಂದ್ರಾ

342.	ರಾಗ: ಕೇವಾರ 	ತಾಳ: ತ್ರಿ
ಬಾರಯ್ಯಾ ರಾಘವೇಂದ್ರಾ ಸದ್ಗುಣಸಾಂದ್ರಾ 	ಪ
ಬಾರಯ್ಯ ಶಂಕುಕರ್ಣ ಬಾರಯ್ಯಾ ಪ್ರಹ್ಲಾದ
ಬಾರಯ್ಯ ಬಾಹ್ಲೀಕ ವ್ಯಾಸ ಮುನೀಂದ್ರಾ 	1
ಸತ್ಯಲೋಕದಿ ಸ್ವಲ್ಪ ತಪ್ಪು ಮಾಡಲು ಶಾಪ
ಕೊಟ್ಟ ಬ್ರಹ್ಮನು ದೈತ್ಯ ಕುಲದಿ ಜನಿಸು ಎಂದು 	2
ಶಾಪವೇ ವರವಾಯಿತು ಭಕ್ತಿಯ ಬಲದಿ
ಸರ್ವತ್ರ ಶ್ರೀಹರಿಯ ವ್ಯಾಪ್ತಿ ತೋರಿದ ಕಂದಾ 	3
ಬಾಹ್ಲೀಕನಾಗಿ ನೀ ರುಕ್ಮಿಣಿ ಅರಸನ 
ಪ್ರೀತಿ ಪಾತ್ರನಾದಿ ದ್ವಾಪಾರ ಯುಗದಿ 	4
ಶಾಪಶೇಷದಿಂದ ಪಾಪಿಗಳೊಡಗೂಡಿ
ದ್ರೌಪದಿಯ ಪತಿಯ ಗದೆಯಿಂದ ಪ್ರಾಣನೀಗಿದಿ 	5
ಪರಮಹಂಸನಾಗಿ ಪುಣ್ಯ ಸಂಚಯ ಮಾಡಿ
ದುರ್ಮತಗಳ ಮುರಿದು ಹರಿಯ ಕುಣಿಸಿದ ಧೀರಾ 	6
ಶಾಪ ಮುಕ್ತಿಯ ಕಾಲ ಸಮೀಪಿಸಿತೆಂದು
ಪ್ರಾಪ್ತ ಅನಿಷ್ಠ ಪುಣ್ಯವ ತೂರುತಿರುವಿಯಾ 	7
ಭಕ್ತವತ್ಸಲ ಬಾರೋ ಭಯ ನಿವಾರಣ ಬಾರೋ
ಗುರುಸಾರ್ವಭೌಮ ಭೂಪತಿವಿಠಲ ಪ್ರೀಯಾ 	8
							

343 ಬಿಡುವೆನೇನಯ್ಯಾ ನಿನ್ನ

343.	ರಾಗ: ಪೀಲು 	ತಾಳ: ಭಜನೀಠೇಕಾ
ಬಿಡುವೆನೇನಯ್ಯಾ ನಿನ್ನ ಬಿಡುವೆನೇನಯ್ಯಾ
ಬಿಡುವೆನೇನಯ್ಯಾ ನಿನ್ನ ಹಡೆದ ತಂದೆಯ ಕೊಲ್ಲಿಸಿ(?)	ಪ
ಇಲ್ಲಿ ಸಡಗರದಿಂದ ಯತಿಯು ಆಗಿ
ಅಡಗಿಕೊಂಡು ಕುಳಿತರೆ ಈಗ 	1
ಚಕ್ರವರ್ತಿ ಆದರೇನು ಚಕ್ರಪಾಣಿಯ ಕುಣಿಸಿದರೇನು
ನಕ್ರಹರನ ತಂದು ನಮಗೆ ಅಕ್ಕರೆಯಿಂದ ತೋರುವತನಕ 	2
ಸಣ್ಣ ಬಾಲಕನಾದರೇನು ಕಣ್ಣು ಮುಚ್ಚಿ ಕುಳಿತರೆ ನೀನು
ಬೆಣ್ಣೆ ಕಳ್ಳ ಕೃಷ್ಣನ ನಮ್ಮ ಕಣ್ಣಿಗೆ ತಂದು ತೋರುವ ತನಕ 	3
ಜಾಣಯತಿಯು ಆದರೇನು ಮೌನದಿಂದ ಇದ್ದರೇನು
ಕೋಣನಂತೆ ತಿರುಗುವ ನಮಗೆ ಜ್ಞಾನ ಭಕ್ತಿ ಕೊಡುವ ತನಕ	4
ಶಾಪಾನುಗ್ರಹ ಶಕ್ತನು ನೀನು ಅಪರೋಕ್ಷೀಕೃತ ಶ್ರೀಶನು ನೀನು
ಅಪೇಕ್ಷಿತವ ಕೊಟ್ಟು ನಮಗೆ ಭೂಪತಿವಿಠಲನ ತೋರುವತನಕ 	5
							

344 ವಂದಿಸುವೆ ಶ್ರೀ ರಾಘವೇಂದ್ರರಾಯರಿಗೆ

344.	ರಾಗ: ತೋಡಿ 	ತಾಳ: ಭಜನೀಠೇಕಾ
ವಂದಿಸುವೆ ಶ್ರೀ ರಾಘವೇಂದ್ರರಾಯರಿಗೆ 
ಬಂದ ಭಕುತರಿಗೆ ಆನಂದ ದಾಯಕಗೆ 	ಪ
ದೈತ್ಯಕುಲದಲಿ ಜನಿಸಿ ದೈತ್ಯನಿಗೆ ಶ್ರೀಹರಿಯ
ವ್ಯಾಪ್ತಿಯನು ಸರ್ವತ್ರ ತೋರಿದವಗೆ
ದೈತ್ಯಾನುದರವಸೀಳಿ ಕೊಲ್ಲಿಸಿದ ಕಂದನಿಗೆ
ಭಕ್ತವರ ಬಾಲ ಪ್ರಹ್ಲಾದ ರಾಜನಿಗೆ 	1
ಬಾಲಯತಿ ವೇಣು ಗೋಪಾಲನನು ಕುಣಿಸಿ
ಭೂಪಾಲನಾಪತ್ತು ಪರಿಹರಿಸಿದವಗೆ
ಪಾಲಿಸುತ ಲಕ್ಷ ಭೂಸುರ ಕುಟುಂಬಗಳ ಸಿಂ-
ಹಾಸನದಿ ಶೋಭಿಸಿದ ವ್ಯಾಸ ಮುನಿಗೆ 	2
ವಿಜಯೀಂದ್ರಮುನಿಕರಜ ಶ್ರೀಸುಧೀಂದ್ರರಕಂದ
ಅಜಕರಾರ್ಚಿತ ಮೂಲ ರಾಮಾರ್ಚಕ
ಭಜಕರ ಸುರಧೇನು ಕುಜನವನ ಕುಠಾರ
ಭುಜಗೇಂದ್ರ ಶಯನ ಭೂಪತಿವಿಠಲ ದಾಸಾ 	3
79. ಮಂಗಳಾಂಗಹರಿವಿಠಲ 
							

345 ಆರತಿ ಬೆಳಗಿರೆ ರಾಜರಿಗೆ

345.	ರಾಗ: ಧನ್ಯಾಸಿ	ತಾಳ: ಏಕ
ಆರತಿ ಬೆಳಗಿರೆ ರಾಜರಿಗೆ ರಾಜರಿಗೆ ಯತಿರಾಜರಿಗೆ	ಪ
ರಾಜರಿಗೆ ಗುರುರಾಜರಿಗೆ	ಅ.ಪ
ರಕ್ಕಸರ ಮಕ್ಕಳಿಗೆ ಅಕ್ಕರೆಯಿಂದಲಿ 
ಚೊಕ್ಕ ಭಕ್ತಿಯ ಪೇಳ್ದ ಚಿಕ್ಕ ಪ್ರಹ್ಲಾದಗೆ	1
ಮಧ್ವಮತದ ಮಹಾ ತತ್ತ್ವಗಳೆಲ್ಲವ
ಸದ್ವೈಷ್ಣವರಿಗೆ ಪೇಳ್ದ ಯತಿರಾಜಗೆ	2
ಮಂಗಳವರ ಮಂತ್ರದಂಗಳದೊಳಗೆ
ಮಂಗಳಾಂಗಹರಿವಿಠಲನಕಾಂಬುವಗೆ	3
							

346 ಎಂಥಾ ಪುಣ್ಯವೆನಂದು ಎಂಥಾನಂದವೆ ಇಂದು

346.	ರಾಗ: ಮಣಿರಂಗು	ತಾಳ: ಆದಿ
ಎಂಥಾ ಪುಣ್ಯವೆನಂದು ಎಂಥಾನಂದವೆ ಇಂದು
ಇಂಥಾ ಸಂತರ ಕಂಡೆನೆ	ಪ
ಉನ್ನಂತ ಬೃಂದಾವನದಲ್ಲಿ ಕುಳಿತ 
ಅನಂತ ಮಹಿಮರ ಕಂಡೆನೆ	ಅ.ಪ
ಮಂತ್ರಾಲಯದ ಮಣ್ಣನೆ ತುಳಿದು 
ಮಂತ್ರಮುಗ್ದರಾಗಿ ನಿಂದು
ಮಂತ್ರ ಸ್ತೋತ್ರಗಳನುಚ್ಚರಿಸುತ್ತ ಬಂದು
ಮಂತ್ರಾಕ್ಷತೆ ಸ್ವೀಕರಿಪ ಭಕ್ತರ ಕಂಡೆನೆ	1
ತುಂಗಭದ್ರ ನದಿಯಲ್ಲಿ ಸ್ನಾನವ ಮಾಡಿ
ಮಂಗಳ ಮಹಿಮರ ಮನದಿ ಕೊಂಡಾಡಿ
ಮಂಗಳೋತ್ಸವವ ಮನದಣಿಯ ನೋಡಿ
ಕಂಗಳು ತುಂಬಿ ಬಂತಾನಂದದಲೋಲ್ಯಾಡಿ 	2
ಮಂಚಾಲಮ್ಮನ ಕಂಡು ಮುದದಿ ಸಾಲಲಿ 
ಬಂದು ಮುನಿಗೆದುರಾದ ಮಾರುತಿಯ ಕಂಡೆನೆ
ಮಂಗಳ ಅಭಿಷೇಕ ಅಲಂಕಾರವ ಕಂಡು
ಮಂಗಳಾಂಗ ಹರಿ ಕಿಂಕರನ ಕಂಡೆನೆ	3 
ನೆತ್ತಿ ಮೇಲೆ ಲಕ್ಷ್ಮೀನರಸಿಂಹರ ಕಂಡೆ
ಮತ್ತೆ ಹೃದಯದಲ್ಲಿ ರಾಮರ ಕಂಡೆನೆ
ಚಿತ್ತವ ಸೆಳೆವ ರಜತ ಕವಚ ಕಂಡೆ
ಉತ್ತಮ ಕಾವಿಹೊದ್ದ ಯತಿವರರ ಕಂಡೆನೆ	4
ಬದಿಯಲಿ ಶ್ರೀಗಳ ಪೂಜಾ ವೈಖರಿ ಕಂಡೆ
ತುದಿಗಾಲಲಿ ನಿಂತ ಭಕ್ತವೃಂದವ ಕಂಡೆನೆ
ವಿಧಿಪೂರ್ವಕ ಹಾಡೋ ಹರಿದಾಸರ ಕಂಡೆ
ವಿಧಿಪಿತ ಮಂಗಳಾಂಗಹರಿವಿಠಲನ ಕಂಡೆನೆ	5
							

347 ಜೋ ಜೋ ಶ್ರೀ ರಾಘವೇಂದ್ರಾರ್ಯ

347.	ರಾಗ: ನೀಲಾಂಬರಿ	ತಾಳ: ಆದಿ
ಜೋ ಜೋ ಶ್ರೀ ರಾಘವೇಂದ್ರಾರ್ಯ ಗುರುವೇ
ಜೋ ಜೋ ಶ್ರೀ ಮಂತ್ರಾಲಯ ಪ್ರಭುವೆ	ಪ
ಜೋ ಜೋ ಆಶ್ರಿತರ ಪೊರೆವ ಸುರತರುವೇ
ಜೋ ಜೋ ಈ ಕಲಿಯುಗದ ವರ ಕಾಮಧೇನುವೇ	ಅ.ಪ
ಕರ್ಮಜದೇವತೆ ಶ್ರೀ ಶಂಖುಕರ್ಣ 
ಮರ್ಮವನರಿತು ಪಡೆದ ಹರಿಕರುಣ
ಧರ್ಮಮಾರ್ಗದಿ ನಡೆದ ಮಹದಾನಿಕರ್ಣ
ನಿರ್ಮಲಾಂತಃಕರಣ ರಾಶಿ ಅಘ ಹರಣ	1
ಇಂದ್ರಿಯವನಿಗ್ರಹಿಸಿ ಯತಿರಾಜನೆನಿಸಿ
ಚಂದ್ರಿಕಾರ್ಯರೆನಿಸಿ ವಾದಿಗಳ ಜಯಿಸಿದೆ
ಮಂದರಿಗೆ ನಿರ್ದೋಷ ಗ್ರಂಥಗಳ ರಚಿಸಿ
ಸುಂದರಾಂಗ ಸಿರಿಕೃಷ್ಣನ ಒಲಿಸಿ ಮೆರೆದೆ	2
ತುಂಗಭದ್ರಾ ನದಿಯ ತೀರ ವಿಹಾರ
ಪಂಗುಬಧಿರ ಮೂಕರಲಿ ಕರುಣ ಅಪಾರ
ಮಂಗಳಾಂಗಹರಿವಿಠಲನ ಕಿಂಕರ
ರಂಗು ಮಾಣಿಕ್ಯದ ತೊಟ್ಟಿಲೊಳ್ ನಲಿವ ಶ್ರೀ ಗುರುವರ	3
							

348 ಬಂದ ಗುರು ರಾಘವೇಂದ್ರ ಬಂದ ನೋಡೆh2>

348.	ರಾಗ: [ಕೇದಾರ/ಯಮನ್]	ತಾಳ: [ಆದಿ]
ಬಂದ ಗುರು ರಾಘವೇಂದ್ರ ಬಂದ ನೋಡೆ
ಬಂದ ಭಕ್ತರ ಕಾಮಧೇನು ಬಂದ ನೋಡೆ	ಪ
ನೊಂದ ಆರ್ತರ ಕಲ್ಪವೃಕ್ಷ ಬಂದ ನೋಡೆ	
ಕುಂದದ ಜ್ಞಾನ ಭಕ್ತಿ ನೀಡುತ ಬಂದ ನೋಡೆ	 ಅ.ಪ
ನಾರದರುಪದೇಶ ಪಡೆದು ಬಂದ ನೋಡೆ
ನವವಿಧ ಭಕ್ತಿ ಭಾವ ತೋರಿ ಬಂದ ನೋಡೆ
ನಾನಾ ದೈತ್ಯರ ಬಾಲಕರುದ್ಧಾರಕ ಬಂದ ನೋಡೆ
ನಾರಸಿಂಹನ ಶಾಂತಗೊಳಿಸಿ ಬಂದ ನೋಡೆ	1
ಬಾಲಯತಿ ಬ್ರಹ್ಮಣ್ಯ ಕುವರ ಬಂದ ನೋಡೆ
ಭೂರಿ ವಾದಿಗಳನೆ ಜಯಿಸಿ ಬಂದ ನೋಡೆ
ಭಜಿಸಿ ಗೋಪಾಲ ಕೃಷ್ಣನ ಬಂದ ನೋಡೆ
ಭಾರಿ ಗ್ರಂಥಗಳನೆ ರಚಿಸಿ ಬಂದ ನೋಡೆ	2
ಮಂದ ಭಾಗ್ಯರ ಭಾಗ್ಯ ದೇವ ಬಂದ ನೋಡೆ
ಮಂಕುಹರಿಸಿ ಜ್ಞಾನವನೀವ ಬಂದ ನೋಡೆ
ಮಂಗಳಾಂಗಹರಿವಿಠಲನ ತೋರ್ವ ನೋಡೆ
ಮಂತ್ರಾಲಯದಿ ನಿಂತ ಯೋಗಿ ಬಂದ ನೋಡೆ	3								
							

349 ಬೇಡುವೆ ವರಗಳ ಮಂತ್ರಾಲಯ ಪ್ರಭುವೆ

349.	ರಾಗ: ಕಲ್ಯಾಣಿ	ತಾಳ: ಏಕ
ಬೇಡುವೆ ವರಗಳ ಮಂತ್ರಾಲಯ ಪ್ರಭುವೆ	ಪ
ನೀಡು ಸನ್ಮತಿಯ ಸಂತರ ನಿಜ ಗುರುವೆ	ಅ.ಪ
ಜನುಮಜನುಮದ ಪಾಪಗಳನೆ ಅಳಿದು
ಅನುದಿನ ಬಾಧಿಪ ಆಧಿವ್ಯಾಧಿಗಳಳಿದು
ತನುವಿಗಾಶ್ರಯವಾದ ತ್ರಯತಾಪವಳಿದು
ಹನುಮನಯ್ಯನಲ್ಲಿ ಮನನಿಲ್ಲಿಸೆಂದು	1
ಅಷ್ಟಮದಗಳಳಿದು ಇಷ್ಟ ಪೂರ್ತಿಗೈದು
ಕಷ್ಟ ಸುಖ ಮೊದಲಾದ ದ್ವಂದ್ವ ನಾಶನಗೈದು
ಶಿಷ್ಯನೆಂದೆನಿಸೆನ್ನ ಭ್ರಷ್ಟ ಗುಣಗಳ ಬಡಿದು
ಇಷ್ಟದಾಯಕನೆ ಅನಿಷ್ಟಗಳಳಿಸೆಂದು	2
ಭಂಗಗಳ ಪರಿಹರಿಸಿ ಹಿಂಗಿಸಿಜನುಮಗಳ
ಮಂಗಳಾಂಗಹರಿವಿಠಲನ ದ್ವಂದ್ವ ಪಾದಂಗಳ
ಕಂಗಳಿಂದಲಿ ಕಾಂಬ ಮನದ ಹಂಬಲಗಳ
ಅಂಗಜನಗೆಲಿದಯತಿಯೇ ಪೂರೈಸು ಇಚ್ಛೆಗಳ	 3
							

350 ರಾಗದಿ ಭಜಿಪರ ಪಾಲಿಪ ಪ್ರಭುವೆ

350.	ರಾಗ: ರೀತಿಗೌಳ	ತಾಳ: ಆದಿ
ರಾಗದಿ ಭಜಿಪರ ಪಾಲಿಪ ಪ್ರಭುವೆ
ಘನ ಭಕುತರ ನೀ ಸಂತತ ಸಲಹುವೆ	
ವೇಂಕಟೇಶನ ಪಾದ ಪದುಮ ಪೂಜಿಸುವೆ
ದ್ರವಿತನಾಗಿ ದರಿದ್ರರ ಮೊರೆ ಲಾಲಿಸುವೆ	ಪ
ರಾಶಿರಾಶಿಗೈದ ಪಾಪಗಳಳಿದು
ಘನಸುಜ್ಞಾನ ಗ್ರಂಥಗಳೊರೆದು
ವೇಂಕಟನ ಕಿಂಕರ ಸಂಕಟ ಕಳೆದು
ದ್ರವಿತ ಘೃತ ಧಾರೆಯಂತೆ ಭಕ್ತಿಯನೆರೆದು	1
ರಾಮನ ಮೂರ್ತಿಯನುರಾಗದಿ ಭಜಿಸುವ 
ಘನವಾದ ಮಹಿಮೆ ಪವಾಡವ ತೋರಿಸುವ
ವೇಂಕಟಭಟ್ಟನೆ ರಾಘವೇಂದ್ರ ಮುನಿಪ
ದ್ರವ್ಯ ಧನ ವಸ್ತ್ರದಾಸೆಯೆ ನೀಗಿಪ	2
ರಾಘವನಂಘ್ರಿ ಸರೋಜ ಭ್ರಮರ
ಘನಶ್ಯಾಮ ಸುಂದರನ ಚರಣ ಚಕೋರ
ವೇಂಕಟನಾಥ ವೈಣಿಕಚತುರ
ದ್ರಷ್ಟವ್ಯ ಮಂಗಳಾಂಗಹರಿವಿಠಲನ ಪ್ರಿಯಕರ	3
80. ಮಧ್ವೇಶವಿಠಲ 
							

351 ಕೂಸಿನ ಕಂಡೀರ ಸುಪ್ರಹ್ಲಾದನ ಕಂಡೀರ

351.	ರಾಗ: ನಾದನಾಮಕ್ರಿಯ	ತಾಳ: ಆದಿ
ಕೂಸಿನ ಕಂಡೀರ ಸುಪ್ರಹ್ಲಾದನ ಕಂಡೀರ	ಪ
ರಾಕ್ಷಸಕುಲದಲಿ ಜನಿಸಿತು ಕೂಸು
ರಾಧಾಕೃಷ್ಣರ ಭಜಿಸಿತು ಕೂಸು
ರಾಗದ್ವೇಷಗಳ ಬಿಟ್ಟಿತು ಕೂಸು
ರಾಮನಪಾದವ ನೆನೆಯುವ ಕೂಸು	1
ಘನಹರಿ ಕಂಭದಿ ತೋರಿತು ಕೂಸು
ಗಳಿಸಿತು ಕೃಷ್ಣನ ಪ್ರೇಮವ ಕೂಸು
ಘನಮಂತ್ರಾಲಯದಿವಾಸಿಪ ಕೂಸು
ವೇಣುಗೋಪಾಲನ ಪ್ರೀತಿಯ ಕೂಸು	2
ಪ್ರಸಿದ್ಧ ವ್ಯಾಸರಾಯರೆಂಬೊ ಕೂಸು
ಪ್ರವೀಣ ವಿದ್ಯೆಯೊಳೆನಿಸಿದ ಕೂಸು
ಪ್ರಹ್ಲಾದನೆಂಬ ಆಹ್ಲಾದ ಕೂಸು
ಪ್ರಸನ್ನ ಮಧ್ವೇಶವಿಠಲನ ಕೂಸು	3
							

352 ಬಂದ ದುರಿತಗಳ ಕಳೆಯೊ ತಂದೆ

352.	ರಾಗ: ಭೀಮ್‍ಪಲಸ್	ತಾಳ: ಝಂಪೆ
ಬಂದ ದುರಿತಗಳ ಕಳೆಯೊ ತಂದೆ ಗುರುರಾಯ
ಕಂದನ ಬವಣೆಯ ಇಂದು ನೋಡದಿರಯ್ಯ	ಪ
ನಿನ್ನ ಹೃದಯವಾಸಿ ನರಹರಿಯ ನಾಮವನು
ಅನುದಿನವು ಬಿಡದೆ ಭಜಿಸುತಿರಲು
ಇನಕಂಡಹಿಮದಂತೆ ತನುಬಾಧೆ ಓಡುವುದು
ಅನುಭವಕೆ ತಂದು ಕೊಡುವ ಮುನಿಶಿಖಾಮಣಿಯೆ	1
ನಿನ್ನ ಬಾಧೆಯನು ಶ್ರೀನರಹರಿಯು ಸಹಿಸದಲೆ
ಸನ್ನುತದಿ ಬಂದಂತೆ ಸುಧೀಂದ್ರಕರಜ
ಖಿನ್ನನಾಗಿಪ್ಪೆನ್ನ ಚೆನ್ನಾಗಿ ಸಲಹಯ್ಯ
ಅನ್ಯನೆನಿಸದೆಲೆ ಶ್ರೀಮೋದಾರ್ಯಮತಚಂದ್ರ	2
ಪ್ರಹ್ಲಾದನೆಂದೆನಿಸಿ ತಂದೆ ಶಾಪವಕಳೆದ
ಒಳ್ಳೆ ಶಾಸ್ತ್ರವಪೇಳಿ ಓಡಿಸಿದೆ ಮಾಯಿಗಳ
ಬಲ್ಲಿದ ಮಧ್ವೇಶವಿಠಲನ ಕೀರುತಿಯ
ಮೇಲಾಗಿ ಪೊಗಳುವ ಮಂತ್ರಾಲಯವಾಸಿ	3
							

353 ಬಂದಾನು ರಾಘವೇಂದ್ರ ಇಂದಿಲ್ಲಿಗೆ

353.	ರಾಗ: ಹಿಂದೂಸ್ಥಾನಿ ಕಾಪಿ	ತಾಳ: ಆದಿ/ತ್ರಿ
ಬಂದಾನು ರಾಘವೇಂದ್ರ ಇಂದಿಲ್ಲಿಗೆ	ಪ
ಕಂದನಮೊರೆ ಕೇಳಿ ಜನನಿಯು ಬರುವಂತೆ	ಅ.ಪ
ಗಜವೇರಿಬಂದ ಜಗದಿ ತಾನಿಂದ
ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ	1
ಹರಿಯ ಕುಣಿಸುತ ಬಂದ ನರಹರಿಪ್ರಿಯ ಬಂದ
ಶರಣಾಗತರ ಕರವ ಪಿಡಿವೆನೆಂದು	2
ಪ್ರಹ್ಲಾದ ವ್ಯಾಸಮುನೀಂದ್ರ ರಾಘವೇಂದ್ರ
ನಿಲಿಸುತಮನವ ಮಧ್ವೇಶವಿಠಲನಲ್ಲಿ	3
							

354 ಬಾರೊ ನಮ್ಮ ಮನೆಗೆ ಶ್ರೀರಾಘವೇಂದ್ರ

354.	ರಾಗ: ಕಮಾಚ್	ತಾಳ: ಅಟ/ತ್ರಿ
ಬಾರೊ ನಮ್ಮ ಮನೆಗೆ ಶ್ರೀರಾಘವೇಂದ್ರ	ಪ
ಬಾರೂ ದುಃಖಾಪಹಾರ ಬಾರೋ ದುರಿತದೂರ
ಬಾರಯ್ಯ ಸನ್ಮಾರ್ಗ ತೋರುವ ಗುರುವೆ	ಅ ಪ
ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ
ಲೋಲ ಶ್ರೀನರಹರಿಯ ಕಾಲರೂಪವ ತೋರ್ದೆ	1
ವ್ಯಾಸನಿರ್ಮಿತಗ್ರಂಥ ಮಧ್ವಕೃತಭಾಷ್ಯವ
ಬೇಸರದೆ ಓದಿ ಮೆರೆವ ವ್ಯಾಸಮುನಿಯೆ	2
ಮಂತ್ರಗೃಹದಲಿ ನಿಂತ ಸುಯತಿವರ್ಯ
ಅಂತತಿಳಿಯದೊ ನೀಅಂತರದೊಳು	3
ಭೂತಪ್ರೇತಗಳನು ಘಾತಿಸಿಬಿಡುವಂಥ
ಖ್ಯಾತಿಯುತ ಯತಿನಾಥನೆ ತುತಿಸುವೆ	4
ಕುಷ್ಟರೋಗಾದಿಗಳ ನಷ್ಟ ಮಾಡುವಂಥ
ಅಷ್ಟಮಹಿಮೆಯುತ ಶ್ರೇಷ್ಠಮುನಿಯೆ	5
ಕರೆದರೆ ಬರುವಿಯೆಂಬೊ ಕೀರುತಿಕೇಳಿ ನಾ
ಕರೆದೆನೊ ಕರುಣದಿ ಕರವಪಿಡಿಯೊ	6
ಭಕ್ತವತ್ಸಲನೆಂಬ ಬಿರುದುನಿಂದಾದರೆ ಆ-
ಸಕ್ತನ ಮೊರೆಕೇಳೊ ಮಧ್ವೇಶವಿಠಲದಾಸ	7
							

355 ರಾಘವೇಂದ್ರ ತೀರ್ಥನೀತ ರಾಜಿಸುವಾತ

355.	ರಾಗ: ಜಂಜೂಟಿ	ತಾಳ: ರೂಪಕ
ರಾಘವೇಂದ್ರತೀರ್ಥನೀತ ರಾಜಿಸುವಾತ	ಪ
ಪಾಪೌಘಗಳೆಲ್ಲವನೋಡಿಸಿ ಪುಣ್ಯಗಳೀವಾತ	ಅ.ಪ
ಬಣ್ಣಬಣ್ಣದಿಂದ ಬಹಳ ಬೋಧಿಸುತ ಬಹಳ
ಸಣ್ಣದೊಡ್ಡಭೀಷ್ಟಗಳ ಸಾಧಿಸುವಾತ
ಪುಣ್ಯವಂತರಿಂದ ಬಹು ಪೂಜೆಗೊಂಬಾತ ನಮಗೆ
ಕಣ್ಣ ಹಬ್ಬವಾಗುವಂತೆ ಕಾಣಿಸುವಾತ	1
ಕಾಮಕ್ರೋಧಾದಿಗಳನೆ ಕಾಲಲೊದ್ದಾತ ಈತ
ವ್ಯೋಮಕೇಶನಂತೆ ನಾಲ್ಕುವೇದಪ್ರಖ್ಯಾತ
ಭೂಮಿಯೊಳು ದುರ್ವಾದಿಗಳನೆ ಭೂರಿಗೆದ್ದಾತ ಪ್ರೌಢ
ಶ್ರೀಮದ್ಯೋಗೀಂದ್ರ ತೀರ್ಥರೇ ಶಿಷ್ಯನೆಂದಾತ	2
ಸಿದ್ಧವಿದ್ಯೆಗಳಲಿ ಬಹುಪ್ರಸಿದ್ಧನಾದಾತ ನಮ್ಮ
ಮಧ್ವಶಾಸ್ತ್ರಗಳನೆ ಮಾಡಿಕೊಟ್ಟಾತ
ಮಧ್ವೇಶವಿಠಲನ ಧ್ಯಾನದಲಿದ್ದಾತ ತುಂಗ-
ಭದ್ರತೀರದಲ್ಲಿ ತಾನು ವಾಸವಾದಾತ	3
81. ಮೂಲನಾರಾಯಣ 
							

356 ತುಂಗಾತೀರ ನಿವಾಸ

356.	ರಾಗ: ಹಿಂದೂಸ್ಥಾನಿ ಕಾಪಿ 	ತಾಳ: ತ್ರಿ
ತುಂಗಾತೀರನಿವಾಸ 
ಮಂಗಳಾಂಗಗುರು ಮಹಿಮಾವಿಶೇಷ 	ಪ
ಹಿಂಗಿಸುಭವ ನಿನ್ನ ಸಂಗಸುಖವನಿತ್ತು 
ರಂಗನಪಾದದಿ ಭಕ್ತಿಯನ್ನಿತ್ತು
ಸಂಗಡವಿರು ಗುರು ಸರ್ವಕಾಲದಲಿ 
ಕಂಗೆಟ್ಟಿಹೆ ಕರುಣೆಯ ತೋರಿನ್ನು 	1
ಶರಣರಸುರಧೇನುವೆ ಗುರುರಾಜ 
ಕರುಣೆಯದೋರೆಮ್ಮೊಳು ಸುರಭೂಜ
ಸ್ಮರಿಪೆ ಧರಿಪೆ ಶಿರದಲಿ ಪಾದರಜ
ಸ್ಮರಣೆಯಿತ್ತು ಪೊರೆಯೈ ಯತಿರಾಜ 	 2
ಬಾಲರೂಪದಿ ನರಹರಿಯ ಪೂಜಿಸಿ 
ಬಾಲಕೃಷ್ಣಪೂಜೆಯ ಯತಿಯಾಗಿ
ಮೂಲರಾಮನ ರಾಘವೇಂದ್ರನಾಮದಿ 
ಮೂರುರೂಪದಿ ನೀ ಸೇವಿಸುತಿರುವೆ 	3
ವೀಣೆನುಡಿಸೆ ಹರಿ ಕಾಣಿಪ ನಿನಗೆ 
ತಾನೆ ಮುರಳಿ ಮೇಳವಿಪನು ಕೊನೆಗೆ 
ಕಾಣೆನು ನಿನಗೆಣೆ ಗುರು ಜಗದೊಳಗೆ ಮೂ-
ಲನಾರಾಯಣನಿಹ ನಿನ್ನೊಳಗೆ 	4
82. ಮೋದವಿಠಲ 
							

357 ಮಂತ್ರಾಲಯದೊಳು ನಿಂತಿಹ ಯತಿವರ

357.	ರಾಗ: [ಹಂಸಾನಂದಿ]	ತಾಳ: [ಆದಿ]
ಮಂತ್ರಾಲಯದೊಳು ನಿಂತಿಹ ಯತಿವರ-
ರೆಂತು ಬಣ್ಣಿಸಲಿ ಎನ್ನಳವೆ	ಪ
ಯಂತ್ರೋದ್ಧಾರಕ ಪ್ರಾಣಪತಿಯೆ ತಾ
ನಿಂತು ನುಡಿಸುವನು ಕೇಳ್ಮನವೆ	ಅ.ಪ
ಮೂಲರಾಮನಾರಾಧಕ ಗುರು ಶ್ರೀ-
ಲೋಲನ ಸನ್ನಿಧಿವುಳ್ಳವರು
ಕಾಲಮೀರದಲೆ ಜಪಗಳಮಾಳ್ಪರು
ಸ್ಥೂಲರಕಣ್ಣಿಗೆ ಕಾಣಿಸರು	1
ಮಧ್ವಮತಾಬ್ಧಿಗೆ ಚಂದ್ರಮರಿವರು
ಅದ್ವೈತರಿಗೆದೆಕಿಚ್ಚಹರು
ಶುದ್ಧಪದ್ಧತಿಯು ತಪ್ಪಲಿಗೊಡದೆ
ಈಧರೆ ಸುಜನರ ಸಲಹುವರು	2
ಪರಿಮಳಗ್ರಂಥದಿ ಪಾರಂಗತರಿವ-
ರರವಿದೂರನಿಗೆ ಅತಿಪ್ರಿಯರು
ಸರುವದ ಶ್ರೀಶನಅರ್ಚಿಸಿ ಮೆಚ್ಚಿಪ
ಗರುವಿಕೆಯಲಿ ತಾವಿರುತಿಹರು 	3
ಕೃತಯುಗದಲಿ ತಾ ಹುತವಹಗುಣಿಸಿದ 
ಸುತಪದ ಸ್ಥಳವೆಂದ್ಹರುಷದಲಿ
ಸಥಿಯಿಂದ ಈ ಮತಿವಂತರು ಶಾ-
ಶ್ವತವಾಗಿರುವರೀ ಕ್ಷೇತ್ರದಲಿ	4 
ಪ್ರತಿಪ್ರತಿವತ್ಸರ ಶ್ರಾವಣಮಾಸದಿ
ದ್ವಿತೀಯ ಕೃಷ್ಣಸುಪಕ್ಷದಲಿ
ಮಿತಿಯಿಲ್ಲದೆ ಜನ ಬಂದು ಪೂಜಿಪಾ-
ದ್ಭುತ ಮಹಿಮೆಂತೆಂತೋರ್ಣಿಸಲಿ	5
ಸಂತರು ಬಹುಜನ ನಿಂತರ್ಚಿಸುತ 
ಅಂತರಂಗದಲಿ ಶ್ರೀಹರಿಯ
ತಂತುನಾವರಿಯೆವು ಎಂತೊಲಿದಿಹ ನಿವ-
ರಂತು ಬಲ್ಲವರು ಆರಯ್ಯಾ 	6
ಸರ್ವತೀರ್ಥಗಳು ಸರ್ವಕ್ಷೇತ್ರಗಳು
ಸರ್ವದೇವತೆಗಳು ಸನ್ನಿಧರು
ಸರ್ವಜ್ಞರು ತಾವು ಪೂರ್ಣವಮಾಡಿಸಿ
ಶರ್ವವಂದ್ಯನ ಕೂಡಿರುತಿಹರು	7
ಆದಕಾರಣ ಈ ಯಾತ್ರೆಯೆ ಮುಖ್ಯವು
ಸದಮಲರಾಗಿ ಪೋಗುವರಾ
ಬದಿಯಲಿದ್ದು ಹರಿಸದನದ ಸುಖವನು
ಒದಗಿಸಿ ಬೇಗನೆಕೊಡುತಿಹರು	8
ಇಂತೀಪರಿಯಲಿ ಗುರುಗಳ ಮಹಿಮೆಯ
ಸಂತತಕೊಂಡಾಡುವ ಜನರ
ಕಂತುಪಿತ ಶ್ರೀಮೋದವಿಠಲನು
ಅಂತವಿಲ್ಲದೆ ರಕ್ಷಿಪನವರ	9
83. ರಘುನಾಥವಿಠಲ 
							

358 ಗುರು ರಾಘವೇಂದ್ರನೆ

358.	ರಾಗ: ತೋಡಿ	ತಾಳ: ತ್ರಿಪುಟ
ಗುರು ರಾಘವೇಂದ್ರನೆ ಕರುಣಿ ನೋಡಬಾರದೆ
ಮೊರೆಯಾರಿಗಿಡಲೊ ಕರುಣಾಶರಧೆ	ಪ
ಸ್ಮರಿಸಿದವರ ಪೊರೆವೆನೆಂಬ ಬಿರುದು ನಿನ್ನದೆ
ವರಶರಣರ ಕಲ್ಪತರುವೆ ಎನ್ನ್ಯಾಕೆಮರೆತೆ	1
ಕರವಮುಗಿದು ನಮಿಸಿ ನಿಮಗೆ ಬಾಯಿತೆರೆದೆ ಇದು
ಸರಿಯೆ ನಿನ್ನ ಮನಸು ಲೇಶವಾದರು ಕರಗದೆ	2
ಸತತ ಎನ್ನವಗುಣಗಳನು ಮನಕೆತಾರದೆ ನೀ ಬಂದು
ಪೊರೆಯೊ ರಘುನಾಥವಿಠಲನ ಕೃಪೆಯುಬಾರದೆ	3
							

359 ದರುಶನವೆ ಘನ

359.	ರಾಗ: ಬೆಹಾಗ	ತಾಳ: ಆದಿ
ದರುಶನವೆ ಘನ ಸಂದರುಶನವೆ ಘನ	ಪ
ದರುಶನವೆ ಘನ ದುರಿತವನ ದಹನ
ಗುರು ರಾಘವೇಂದ್ರರ ಚರಣಸೇವಕರ ಸಂದರುಶನ	ಅ.ಪ
ಪರಮಭಕುತಿ ಪುರಸ್ಸರದೊಳಿವರ ಪದ-
ಸರಸಿಜ ಧೂಳಿಯ ಧರಿಸಿದವರ ಸಂ-	1
ಭ್ರಮರದಂತೆ ಪದಕಮಲದಿ ಸರ್ವರ
ವಿಮಲಮನವಿರುವ ಸುಮ್ಮಹತ್ಮರ ಸಂ-	2
ಶ್ರೀ ರಘುನಾಥವಿಠಲಾರಾಧಕ ಗುರು-
ಸಾರ್ವಭೌಮರ ಪದಸಾರಿಭಜಿಪರ ಸಂ-	3
							

360.ನೋಡು ಕೊಂಡಾಡುತ

360.	ರಾಗ: ಕೇದಾರಗೌಳ	ತಾಳ: ಅಟ
ನೋಡು ಕೊಂಡಾಡುತ ಮಾಡುನತಿ ವರ
ಬೇಡೊ ಶ್ರೀ ಗುರು ರಾಘವೇಂದ್ರರನಾ	ಪ.
ಶ್ರೀಕರ ಪರಮಕೃಪಾಕರ ಪ್ರಣತ ರ-
ತ್ನಾಕರ ಪೂರ್ಣಸುಚಂದ್ರನ	1
ರಾಜವದನಹಂಸ ರಾಜಕುಜನ ಗಜ-
ರಾಜಭಂಜಕಸುಮೃಗೇಂದ್ರನ	2
ಪಟುತರ ರಘುನಾಥವಿಠಲಪದಾಂಬುಜ
ಷಟ್ಪದ ರಾಯಮುನೀಂದ್ರನ	3
84. ರಘುನಾಯಕ/ರಘುರಾಮ (ಅನೇಕ)
							

361 ಆನಂದಮಹುದೆನೆಗೆ

361.	ರಾಗ: ಆನಂದಭೈರವಿ	ತಾಳ: [ಆದಿ]
ಆನಂದಮಹುದೆನೆಗೆ ನಿನ್ನ ನಾಮಸ್ಮರಣೆ 	ಪ
ಮಾನನಿಧಿ ಗುರುವರ್ಯ ರಾಘವೇಂದ್ರ 	ಅ. ಪ
ನೀ ನುಡಿದುದೇ ವೇದ ನೀ ನಡೆದುದೇ ಧರ್ಮ
ಮಾನವರ್ಗದೆ ಮಾರ್ಗ ಚರಿತಾರ್ಥವು
ಮೌನಿಮಣಿ ನಿನ್ನಮೃತವಾಣಿಯೊಂದೇ ಸಾಕು
ಕಾಣಿಪುದು ಮುಕ್ತಿಯನು ನಿತ್ಯ ಸತ್ಯ 	1
ಅನವರತ ಭಕ್ತಿಯಿಂ ಭಜಿಸುವರ ಕರುಣದಿಂ
ಕನಸಿನಲಿ ಪೋಷಿಸುವೆ ತಂದೆ ಗುರುವೆ
ಮುನಿಸು ನಿನಗಿನಿಸಿಲ್ಲ ಎಲ್ಲಿರಲಿ ಎಂತಿರಲಿ 
ಮುನಿರಾಯ ಬಂದೊದಗಿ ಕಾಪಾಡುವೆ 	2
ಅದುವೆ ಭೂವೈಕುಂಠ ಅಲ್ಲಿರುವ ರಘುರಾಮ
ಅದೆಕೊ ಮಂತ್ರಾಲಯಂ ಪುಣ್ಯನೆಲೆಯು
ಅದುವೆ ಶ್ರೀ ರಾಘವೇಂದ್ರರು ನಿಂದ ನೆಲೆವೀಡು
ಒದಗಿ ಭಜಿಸೈ ಮನುಜ ಗುರುರಾಯರ 	3
							

362 ಒಲಿದು ಪಾಲಿಸಬೇಕು/h2>

362.	ರಾಗ: ಕಾಂಬೋಜಿ	ತಾಳ: ಝಂಪೆ
ಒಲಿದು ಪಾಲಿಸಬೇಕು ನಿನ್ನ ನಂಬಿದ ನರನ 	ಪ
ಒಲಿಯದಿದ್ದರೆ ಯಾರ ಬೇಡಲಯ್ಯ 	ಅ. ಪ
ಕಾಲಕಾಲಕೆ ನಿನ್ನ ನಾಮ ಭಜನೆಯ ಮಾಡೆ
ಹಾಳುಮನ ಚಂಚಲದಿ ಕೈಬಿಡುತಿದೆ
ಏಳು ಬೇಗನೆ ಗುರುವೆ ನೀ ನೋಡದಿರಲೆನ್ನ
ಬಾಳು ಹಾಳಾಗುವುದು ಕರುಣದೊರೆಯೆ 	1
ಮೊರೆಹೊಕ್ಕವರನೆಲ್ಲನುದ್ದರಿಸುವುದೆ ಕೃತಿಯು
ಹೊರಗಾದೆ ನಾನೊಬ್ಬ ನಿನ್ನ ದಯೆಗೆ
ಕರುಣಾಳು ನೀನೆಂಬ ಬಿರುದ ಹೋಗಾಡದಿರು
ಪೊರೆಯನ್ನ ಶೀಘ್ರದಲಿ ರಾಘವೇಂದ್ರ 	2
ನೊಂದೆನೈ ಹಲವುಪರಿ ಇನ್ನಿದನು ತೊಲಗಿಸುತ
ತಂದೆ ನೀ ಭವ ವೈದ್ಯ ಸಲಹೆನ್ನನು
ಇಂದಿರಾರಮಣ ರಘುಪತಿಪಾದ ಸುಮಭೃಂಗ
ಬಂದು ಪಾಲಿಸು ದಯದಿ ತಡಮಾಡದೆ 	3
							

363 ಮಂತ್ರಾಲಯ ಚಂದ್ರೋದಯ

363.	ರಾಗ: ಮಾಂಡ್ 	ತಾಳ: ರೂಪಕ
ಮಂತ್ರಾಲಯ ಚಂದ್ರೋದಯ ಪರಿಪಾಲಯ ಸದಯ 	ಪ
ಮಂತ್ರೇಕ್ಷಣ ಗುಣಲಕ್ಷಣ ಖಳಶಿಕ್ಷಣ ಕೃಪಯಾ 	ಅ. ಪ
ಚರಣಾನತ ಜನಪೋಷಕ ಬೃಂದಾವನನಿಲಯ
ಕರುಣಾವನ ಯತಿಭೂಷಣ ಮೃದುಮಂದರ ಹೃದಯ
ಗುರುಪಾವನ ಹರಿಪೂಜನ ವರದಕರ ಪ್ರೀಯ
ಪರವೋತ್ತಮ ಜಗಮೋಹನ ಗುಣಪೂರಣ ರಾಯ 	1
ತುಂಗಾನದಿ ತೀರಾಶ್ರಿತ ರೋಗಾಹರಚತುರ
ಮಂಗಳಕರ ದಿವ್ಯಾಂಕುರ ವೈಷ್ಣವ ಕುಲ ಪ್ರಖರ
ರಘುನಾಯಕ ವರಪೂಜಕ ಹರಿಸೇವಾನಿರತ
ಅಘನಾಶನ ಜನರಕ್ಷಣ ಕೃಪಯಾಪರ ಚರಿತ 	2
ಕಾಷಾಯ ದುಕೂಲಾವೃತ ರಾಮಾಮೃತ ಪ್ರೀತ
ಭೇಷಜ ವರ ಮಹಿಮಾನ್ವಿತ ಆನತಕುಲ ದಾತ
ದ್ವೇಷಾವನ ನಾಶಾನಲ ವೀಣಾಧೃತ ವಿನುತ
ತೋಷಾನನ ಮಂದಸ್ಮಿತ ಮುನಿಮಾನಸ ಭರಿತ 	3
							

364 ಮಂತ್ರಾಲಯ ನಿಲಯ

364.	ರಾಗ: ಮಾಂಡ್	ತಾಳ: [ಆದಿ]
ಮಂತ್ರಾಲಯನಿಲಯ ಗುರುವರ
ಕರುಣಾಮೃತ ಹೃದಯ 	 ಪ
ಶಾಪಾನುಗ್ರಹ ಶಕ್ತ ಸಮರ್ಥಾ
ಪಾಪಾತ್ಮರ ಪೊರೆವಾತುರ ನಿರತಾ 	 1
ವೀಣಾವಾದನ ನಿಪುಣ ಸುಗೇಯಾ
ಭಕ್ತಜನಾವನ ಕರುಣಾಹೃದಯಾ 	2
ರಘುವರ ಚರಣಸರೋರುಹ ಭೃಂಗಾ
ಕಾಮಿತ ಫಲಪ್ರದ ಮುನಿಕುಲೋತ್ತುಂಗಾ 	3
							

365 ಮಂತ್ರಾಲಯ ಪುರಮಂದಿರ

365.	ರಾಗ: ಶಂಕರಾಭರಣ 	 ತಾಳ: ರೂಪಕ
ಮಂತ್ರಾಲಯ ಪುರಮಂದಿರ ಬೃಂದಾವನ ಶಯನ 	ಪ
ವರಭೇಷಜ ಮುನಿಮಾನಿತ ಕೃಪಯಾಕರ ಗುರುವೆ
ಕರೆದಾಕ್ಷಣ ಬಹಲಕ್ಷಣ ಜನಪೋಷಣ ಧೊರೆಯೆ
ಪೊರೆವಾತುರ ಗುಣಭಾಸ್ಕರ ಚರಿತಾನಘ ರಾಯ
ಕರೆಕೇಳದೆ ಬರಬಾರದೆ ಕರುಣಾವನ ಹೃದಯ 	1
ವೀಣಾಧೃತ ಗೇಯಾಮೃತ ಶಿಷ್ಯಾವೃತ ದಾತ
ಜ್ಞಾನೇಕ್ಷಣ ಕವಿ ಭೂಷಣ ಯತಿ ಚೂತಕೆ ಚೈತ್ರ 
ದೀನಾತ್ಮರ ಪರಿಪಾಲನ ಬಿರುದಾಂಕಿತ ತ್ರಾತ
ಮಾನಿತ ಗುಣ ವೈಷ್ಣವ ಕುಲ ಬೃಂದಾರಕ ಚರಿತ  	2
ಕಾಷಾಯ ದುಕುಲಾವೃತ ಮಾನವಕುಲ ಜ್ಯೋತಿ
ಭಾಸುರವರ ಧೃತ ದಂಡ ಕಮಂಡಲ ಕರ ವಿರತಿ
ಭೇಷಜವರ ಕರುಣಾಕರ ಜನಪಾವನ ಕೀರ್ತಿ
ನೇಸರಕುಲ ರಘುನಾಯಕ ಪದ ಪೂಜಕ ಮೂರ್ತಿ 	3
							

366 ವರದಾಯಕ ಮಂತ್ರಾಲಯ

366.	ರಾಗ: ಭೂಪಾಳಿ	ತಾಳ: ರೂಪಕ
ವರದಾಯಕ ಮಂತ್ರಾಲಯ ಗುರುವರ ಮಾಂ ಪಾಹಿ 	ಪ
ಶರಣಾನತ ಪದ ಪಾವನ ರಘುವರ ಪದ ಮೋಹಿ 	ಅ. ಪ
ಯತಿ ಭಾಸ್ಕರ ಕೃಪಯಾಕರ ಮುನಿಮಾನಿತ ದಾತ
ನುತ ಭೂಸುರ ಚರಿತಾಮೃತ ಭಕ್ತಾರ್ಚಿತ ಪ್ರೀತ
ಧೃತದಂಡ ಕಮಂಡಲ ಕರ ದುರಿತಾದ್ರಿ ವಿಜೇತ
ಹಿತರಂಜನ ಭವಭಂಜನ ಮಹಿಮಾವನ ತ್ರಾತ 	 1
ಬೃಂದಾವನ ಜಗಪಾವನ ಜನಮೋಹನ ತಾನ
ಬೃಂದಾರಕ ವೃಂದಾಶ್ರಮ ಮಂತ್ರಾಲಯ ಮೌನ
ಇಂದೀವರ ಸಶ್ಯಾಮಲ ಉದ್ಯಾನ ನಿದಾನ 
ಚಂದ್ರೇಕ್ಷಣ ರಿಪುವಾರಣ ಸಿಂಹಾದ್ಭುತ ಬಾಣ 	2
ರೋಗಾಹರ ನಾಗಾಧಿಪ ರೂಪಾಧೃತ ಶಕ್ತಿ
ನಿಗಮಾಗಮ ಧರ್ಮಂಚರ ಪರಿಪಾಲ ವಿರಕ್ತಿ
ಅಘನಾಶನ ನತಪಾಲನ ವೈಷ್ಣವಕುಲ ಕೀರ್ತಿ
ರಘುನಾಯಕ ಭಜನಾಮೃತ ಹೃದಯಾಮಲ ಮೂರ್ತಿ 	3
							

367 ಶರಣಜನ ಕಲ್ಪತರು

367.	ರಾಗ: ಶಂಕರಾಭರಣ	ತಾಳ: ಝಂಪೆ
ಶರಣಜನ ಕಲ್ಪತರು ಯತಿರಾಜ ಲೋಕಗುರು	ಪ
ವರದ ಕಾಮಿತ ಫಲದ ರಾಘವೇಂದ್ರ	ಅ. ಪ
ಕನಸಿನಲಿ ಕರುಣದಲಿ ದರುಶನವ ನೀಡುವನು
ಮುನಿಮಾನಿತನು ತಾನೆ ಮುದದೊಳೊಲಿವ
ವಿನಯದಲಿ ನಮಿಸಿದರ ಕಾಮಿತಾರ್ಥಗಳೀವ
ಜನುಮಜನುಮಾಂತರದ ದೋಷ ತೊಳೆವ	1
ರಾಕ್ಷಸನ ಮಗನಾಗಿ ನರಸಿಂಹನನ್ನೊಲಿಸಿ
ರಕ್ಷಿಸಿದ ಕುಹ ರೋಗದಿಂದ ನೃಪನ
ಪಕ್ಷಿವಾಹನ ವೇಣುಗೋಪಾಲ ಕೃಪೆವಡೆದು 
ರಕ್ಷನಾದನು ಸರ್ವ ಭಕ್ತಕುಲಕೆ	2
ವಾರಿನಿಧಿ ಗಂಭೀರ ಶರಣಜನ ಮಂದಾರ
ಸೂರಿಜನ ಸುಮ್ಮಾನ ರಾಘವೇಂದ್ರ
ಶ್ರೀರಮಣ ರಘುವೀರ ಪದ ಸರೋರುಹ ಭೃಂಗ
ಕಾರುಣ್ಯ ಗುಣಪೂರ್ಣ ಗುರುವರೇಣ್ಯ	3
85. ರಮಾಕಾಂತವಿಠಲ
							

368 ಕರೆದಲ್ಲಿ ಬರುವ ಸುರತರು ಕರುಣಾಸಾಂದ್ರ

368.	ರಾಗ: ಕಾಂಬೋಜಿ	ತಾಳ: ಝಂಪೆ
ಕರೆದಲ್ಲಿ ಬರುವ ಸುರತರು ಕರುಣಾಸಾಂದ್ರ	ಪ
ಗುರು ಸಾರ್ವಭೌಮ ಯತಿವರ ರಾಘವೇಂದ್ರ	ಅ
ಹಿಂದೆ ನರಹರಿಯನಲವಿಂದ ಅರ್ಚಿಸಿದ ಕ-
ರ್ಮಂದಿಗಳಿಗೊಡೆಯ ವರ ಪ್ರಹ್ಲಾದನಾ
ಸುಂದರಾಂಶದಿ ಜನಿಸಿ ವಸುಂಧರೆಯ ಮೇಲಿನ್ನು
ಗಂಧವಾಹನ ಮತವ ಛಂದದಲಿ ಬೀರಿದೆಯೊ	1
ಮೂರನೆಯ ರೂಪದಲಿ ಯತಿಯಾಗಿ ಅವತರಿಸಿ 
ಚಾರುತರ ಮಧ್ವಮತ ಸಾರ ತತ್ತ್ವಗಳ
ಮೂರು ಮೇಲೊಂದು ದಶದಾರು ಗ್ರಂಥಗಳಿಂದ
ಧಾರುಣಿಯ ಸುರನಿಕರಕರುಹಿದೆಯೊ ದೇವಾಂಶ	2
ರಾಮ ನರಹರಿ ಕೃಷ್ಣ ವೇದವ್ಯಾಸರ ನಿತ್ಯ-
ಧಾಮರೆನಿಸುತಲವರ ಕರುಣದಿಂದ1
ಕಾಮಿತಾರ್ಥವ ಸಲಿಸಿ ಕೀರುತಿಯನೆ ಪೊಂದಿ
ಭೂಮಿಯಲಿ ಮೆರೆಯುತಿಹ ಮಂತ್ರಾಲಯ ಪ್ರಭುವೆ	3
ಗಳದಲ್ಲಿ ಪದ್ಮಾಕ್ಷಿ ತುಳಸಿ ಮಾಲೆಯ ಧರಿಸಿ
ಪೊಳೆವ ದ್ವಾದಶನಾಮ ಅಕ್ಷತೆಗಳಿಂದ
ಚೆಲುವ ಗೋಪಾಲನ್ನ ಹೃದಯದೊಳು ನೆಲಗೊಳಿಸಿ
ಇಳೆಯೊಳಗೆ ಅಳವಡದ ಮಹಿಮೆಯಿಂದಲಿ ಮೆರೆದೆ	4
ಮಾಸ ಐದರಲಿ ಪರ ಮೂರನೆಯ ದಿನದಲ್ಲಿ
ಆಶಿಸಲು ತವ ಪಾದ ಸೇವೆಯೆನೆ ಇತ್ತು
ದಾಸನಾದೆನ್ನ ಮನದಾಸೆಯೆನೆ ನೀ ಸಲಿಸಿ
ಪೋಷಿಸಿದೆ ಶ್ರೀ ರಮಾಕಾಂತವಿಠಲನ ಪ್ರಿಯ	5
1 ರಾಮ ನರ ಮೃಗರೂಪಿ ವೇದವ್ಯಾಸರು | ಸತ್ಯಭಾಮೆ ಅರಸನು ನಿತ್ಯ ಸನ್ನಿಹಿತನಾಗೀ - ಪಾಠ
							

369 ಕೈಯ ಬಿಡುವರೇ ಗುರು ರಾಘವೇಂದ್ರ

369.	ರಾಗ: ಆನಂದಭೈರವಿ	ತಾಳ: ಆದಿ
ಕೈಯ ಬಿಡುವರೇ ಗುರು ರಾಘವೇಂದ್ರ
ಕೈಯ ಬಿಡುವರೇ	ಪ
ಕೈಯ ಬಿಡುವರೇನೊ ಗುರುವೆ
ಹೇಯ ಭವದಿ ನೋಯುವವನ
ಕಾಯದಿರೆ ಇನ್ಯಾರು ಎನಗೆ
ಜೀಯ ನಿನ್ನನೆ ಮೊರೆಯ ಹೊಕ್ಕನೊ	ಅ.ಪ
ತೊಳಲಿ ಬಳಲಿದೆ ಬೇಸತ್ತು ಬಂದೆ
ನೆಲೆಯ ಕಾಣದೆ ಕೃಪಾಳೊ ನಿನ್ನ ನೆಳಲ ಸೇರಿದೆ
ಹಲವು ಜನರ ಹಂಬಲಗಳ
ಸಲಿಸಿ ಪೊರೆವ ಗುರುವೆ ನಿನ್ನ
ಬಳಿಗೆ ಬಂದ ಬಳಿಕ ಇನ್ನು
ಒಲಿದು ಸಲಹದಿರಲಿನ್ಯಾರು	1
ಎಷ್ಟು ಪೊಗಳಲಿ ನಿಮ್ಮ ಕೀರುತಿ
ಕೃಷ್ಣ ಕೃಪೆಯಲಿ ಮೆರೆಯುತಿದೆ ಯಥೇಷ್ಟ ಜಗದಲಿ
ಶಿಷ್ಟಪೋಷಕ ನಿನ್ನ ಪದವ
ಮುಟ್ಟಿ ಬೇಡಿಕೊಂಬೆ ಎನ್ನ
ಕಷ್ಟಗಳನು ಕಳೆಯದಲೆ ಕ-
ನಿಷ್ಠನೆಂದು ಎಣಿಸಬೇಡ	2
ಲೆಕ್ಕವಿಲ್ಲದೆ ಆರ್ತಜನರ ದುಃಖ ಹರಿಸಿದೆ
ಇದಕೇಳಿ ಬಂದಿಹೆ ದಿಕ್ಕು ತೋಚದೆ
ಅಕ್ಕರೆಯಲಿ ಕರೆದು ನಿಮ್ಮ
ಮಕ್ಕಳಲ್ಲಿ ಒಬ್ಬನೆಂದು
ರಕ್ಷಿಸೊ ರಮಾಕಾಂತವಿಠಲನ
ಭಕ್ತಾಗ್ರಣಿ ಶ್ರೀ ಯತಿಶಿರೋಮಣಿ	3
							

370 ರಾಘವೇಂದ್ರ ಗುರುವೆ

370.	ರಾಗ: ಕಲ್ಯಾಣಿ	ತಾಳ: ಮಿಶ್ರಛಾಪು
ರಾಘವೇಂದ್ರ ಗುರುವೆ ನಿಮ್ಮಯ ಅನು-
ರಾಗವ ನಾ ಬೇಡುವೆ	ಪ
ಬಾಗಿ ನಮಿಪೆ ದಯಾಸಾಗರ ಯತಿವರ
ಜಾಗು ಮಾಡದೆ ಎನ್ನ ಬೇಗ ಸಲಹಿರಿ ಎಂದು	ಅ.ಪ
ನಿಮ್ಮ ಆಶ್ರಯ ಜನಕೆ ಸಕಲ ವಿಧ
ನೆಮ್ಮದಿಯನೆ ಈವುದು
ಅಮ್ಮೈಸಿದವರ ದುಷ್ಕರ್ಮರಾಶಿಗಳನ್ನು
ಹಿಮ್ಮೆಟ್ಟಿಸುವ ವರ ಸುಮ್ಮನಸಾಗ್ರಣಿ	1
ಶ್ರೀ ರಾಘವೇಂದ್ರ ನಮೋ ಎಂಬುವ ಒಂದೇ
ದಾರಿ ನಂಬುತ ಬಂದಿಹೆ
ಸಾರ ಸದ್ಭಕ್ತಿ ಶರೀರ ದಂಡನೆಯಲ್ಲಿ
ಧೀರನಲ್ಲದ ಎನ್ನ ಗಾರು ಮಾಡಲು ಸಲ್ಲ	2
ಮೊದಲೆರಡವತಾರದಿ ರಾಜರು ಎನಿಸಿ
ಮುದದಿ ಮೂರನೆಯ ರೂಪದಿ
ಸದಮಲ ಯತಿಸಾರ್ವಭೌಮ ಪಟ್ಟವನಾಳ್ದು
ನಿಧಿಯಾಗಿ ನಿಂತಿರಿ ಬದಿಗ ಭಕ್ತರಿಗೆಲ್ಲ	3
ಶಾಪಾನುಗ್ರಹಶಕ್ತರೆ ಬಲ್ಲೆನೆ ನಿಮ್ಮ
ಅಪಾರ ಮಹಿಮೆಯನು
ಸಾಪೇಕ್ಷೆಯಲಿ ನಿಮ್ಮ ಶ್ರೀಪಾದವನು ಸೇರ್ದೆ
ಆಪತ್ತುಗಳ ಹರಿಸಿ ಕಾಪಾಡಿರಿ ಎಂದು	4
ಮಂತ್ರಾಲಯ ಪ್ರಭುವೆ ವಾಂಛಿತಪ್ರದ
ಚಿಂತಾ ರತುನ ಸಮರೆ
ಎಂತುಂಟೊ ನಿಮ್ಮೊಳು ಸಂತಸದಲಿ ರಮಾ-
ಕಾಂತವಿಠಲ ನಿಂತು ಪಂಥ ಪೂರೈಸುವ	5
							

371 ರಾಯರೆಂದು ಕರೆದ ಮಾತ್ರದೀ ನಿರುತ

371.	ರಾಗ: [ಬಿಲಹರಿ]	ತಾಳ: [ತಿಶ್ರನಡೆ ಆದಿ]
ರಾಯರೆಂದು ಕರೆದ ಮಾತ್ರದೀ ನಿರುತನಮ್ಮ
ಕಾಯುವಂಥ ಕರುಣಾಪೂರ್ಣರು	ಪ
ತೋಯಜಾಕ್ಷನಮಲಗುಣದಿ
ತೋಯುವಂತೆ ಮಾಡಿ ಭವದಿ
ನೋಯಗೊಡದುದ್ಧರಿಪ ಲೋಕ-
ಪ್ರಿಯ ಯತಿ ಶ್ರೀ ರಾಘವೇಂದ್ರ	ಅ. ಪ
ಮಧ್ವಮತದ ಸಾರತತ್ತ್ವ ಸುಜ್ಞಾನಿಜನಕೆ
ಶುದ್ಧಭಾವದಿಂದ ಬೋಧಿಸಿ
ಉದ್ಧರಿಸುತ ಮಂದಜನಕೆ
ಭದ್ರಗತಿಯ ತೋರಿ ಭವ ಸ-
ಮುದ್ರದಿಂದ ಪಾರುಗೈವ ಪ್ರ-
ಸಿದ್ಧ ಪರಿಮಳಾರ್ಯರಿವರು	1
ಜೀಯ ನೀನೆ ಗತಿಯು ಎನ್ನುತ ಮೊರೆಯನಿಡಲು
ತಾಯಿಯಂತೆ ಕರೆದು ಪೋಷಿಪ
ವಾಯು ಒಲುಮೆ ಪಡೆದ ವಜ್ರ-
ಕಾಯರಿವರು ಆರ್ತಜನರ
ಕಾಯುವಂಥ ಕರುಣಿ ಭಕ್ತ
ಪ್ರಿಯರೆಂದು ಖ್ಯಾತಿಗೊಂಡ	2
ಏನು ದಯವೊ ಭಕ್ತ ಜನರೊಳು ಜ್ಞಾನಿಯರಸ
ದೀನರಾಗಿ ಬರುವ ಸುಜನರ
ನಾನಾಪರಿಯ ಈಪ್ಸಿತಗಳ 
ಪೂರ್ಣಗೊಳಿಸಿ ಪ್ರತಿಭೆಯಿಂದ
ಮೌನಿಕುಲ ಸನ್ಮಾನ್ಯನೆಂದು
ನಾನಾಸ್ತುತಿಯ ಕೊಳುತ ಮೆರೆವ	3
ಮಂಗಳಾಂಗರಿವರ ನೋಡಿರೊ ಅಘವಹರಿವ
ತುಂಗಭದ್ರನದಿಯ ತೀರದಿ
ಶೃಂಗರಿಸಿದ ವೃಂದಾವನದಿ
ಕಂಗೊಳಿಸುತ ದಾಸಜನರ
ಸಂಗ ಮಧ್ಯವರ್ತಿ ಶೋಭ-
ನಾಂಗ ದಿವ್ಯ ದಂಡಧಾರಿ	4
ಕರ್ತೃ ರಮಾಕಾಂತವಿಠಲನ ದಯಕೆ ಸ-
ತ್ಪಾತ್ರ ಮಂತ್ರಮನೆ ನಿವಾಸನ
ಅರ್ಥಿಯಿಂ ಸೇವಿಸಲು ಕಾಮಿ-
ತಾರ್ಥವ ಕೊಡುವ ಕಲ್ಪತರುವು
ಭಕ್ತಿಲಷ್ಟಾಕ್ಷರದಿ ನಮಿಸೆ
ಮುಕ್ತಿ ಕೊಡುವ ಶಕ್ತರಿವರು	5
							

372 ಲಾಲಿ ಪಾಡುವೆ ರಾಜ

372.	ರಾಗ: [ನೀಲಾಂಬರಿ]	ತಾಳ: [ಮಿಶ್ರನಡೆ]
ಲಾಲಿ ಪಾಡುವೆ ರಾಜ ಯತಿಕುಲ ಸುತೇಜ
ಲಾಲಿಸುತ ಜೋಗುಳದಿ ಮಲಗು ಗುರುರಾಜ	ಪ
ಅಗಣಿತ ಮಹಿಮ ಸದ್ಗುಣ ಖಣಿಯೆ ಲಾಲಿ
ಜಗದಿ ಭಕುತರ ಪೊರೆವ ಸುರತರುವೆ ಲಾಲಿ
ಮಿಗೆ ಕಾಮಧೇನುಸಮ ಕರುಣಾಳು ಲಾಲಿ
ಹಗಲಿರುಳು ಚಿಂತಿಪರ ಚಿಂತಾಮಣಿಯೆ ಲಾಲಿ	1
ಜೊ ಜೊ ನರಹರಿಪ್ರಿಯ ಪ್ರಹ್ಲಾದರಾಯ
ಜೊ ಜೊ ಬ್ರಹ್ಮಣ್ಯ ಕರಸಂಜಾತ ಜೀಯ
ಜೊ ಜೊ ಮಂತ್ರಾಲಯಸ್ಥಿತ ವಜ್ರಕಾಯ
ಜೊ ಜೊ ಗುರುಸಾರ್ವಭೌಮ ಬುಧಗೇಯ	2
ಸಾರಿ ಸೇವಿಪರನ್ನು ಸಂತೈಸಿ ನಿಂದ
ಸೇರಿ ಪಾಡುತ ಧಣಿಪರೈ ದಾಸವೃಂದ
ಆರಮಿಸಿ ಮಲಗೆಂದು ತೂಗುವುದೆ ಚೆಂದ
ಶ್ರೀರಮಾಕಾಂತವಿಠಲನ ಪ್ರೀತಿಯ ಕಂದ 	3
							

373 ಶ್ರೀದ ಹರಿ ಸರ್ವೋತ್ತಮತ್ವವ

373.	ಶ್ರೀ ರಾಯರ ಸ್ತೋತ್ರ (ಭಾಮಿನಿ ಷಟ್ಪದಿ)
ಶ್ರೀದ ಹರಿ ಸರ್ವೋತ್ತಮತ್ವವ
ವಾದಿಸುತ ಪಿತ ಕನಲಿ ಬಾಧಿಸಿ
ಕ್ರೋಧದಿಂದಲಿ ಸರ್ವವ್ಯಾಪ್ತನ ತೋರು ಎನಲಾಗ
ಛೇದಿಸುತ ಕಂಭವನು ನರಹರಿ
ಆದರದಿ ರಕ್ಷಿಸಿದ ವರ ಪ್ರ-
ಹ್ಲಾದರಾಜರು ಪೊರೆಯಲೆಮ್ಮನು ಸತತ ಕರುಣದಲಿ	1
ಶಿಶುತನದಿ ಬ್ರಹ್ಮಣ್ಯತೀರ್ಥರ
ವಶದಿ ಬೆಳೆಯುತ ಬ್ರಹ್ಮ ವಿದ್ಯೆಗೆ
ಅಸಮ ಯತಿ ಶ್ರೀಪಾದರಾಜರ ಶಿಷ್ಯರೆಂದೆನಿಸಿ
ಎಸೆವ ಗ್ರಂಥತ್ರಯದಿ ಮಧ್ವರ
ಕುಶಲಮತ ಉದ್ಧರಿಸಿ ಮೆರೆದರು
ಬಿಸಲಜಸಖ ಪ್ರತಿವಾದಿ ತಿಮಿರಕೆ ವ್ಯಾಸಮುನಿವರ್ಯ	2
ಕ್ಷೋಣಿಯೊಳಗಪ್ರತಿಮ ಯತಿವರ
ಜ್ಞಾನಿಗಳ ಸನ್ಮಾನ್ಯ ಮುನಿಸುರ-
ಧೇನು ಸುಮನಸ ತರುವು ಚಿಂತಾಮಣಿಯು ದೀನರಿಗೆ
ಆನತರ ಸಂತೈಸಿ ಸಲಹುವ
ಗಾನ ಕೋವಿದ ಮಂತ್ರಮನೆಯಲಿ
ಸಾನುರಾಗದಿ ನೆಲೆಸಿರುವ ಗುರು ರಾಘವೇಂದ್ರಾರ್ಯ	3
ಪ್ರಥಮದಲಿ ಪ್ರಹ್ಲಾದರಾಜರೆ
ದ್ವಿತಿಯದಲಿ ಶ್ರೀ ವ್ಯಾಸತೀರ್ಥರು
ತೃತೀಯದಲಿ ಗುರು ರಾಘವೇಂದ್ರರ ನಾಮದಿಂ ಮೆರೆವ
ಸತತ ಹೃದಯಾವಾಸ ಸೀತಾ-
ಪತಿಯು ನರಹರಿ ಕೃಷ್ಣ ವ್ಯಾಸರ
ಅತಿಶಯಾನಂದದಲಿ ನೋಳ್ಪರ ಕೃಪೆಯು ನಮಗಿರಲಿ	4
ರಾಘವೇಂದ್ರರ ಖ್ಯಾತಿ ಅಗಣಿತ
ಬಾಗಿ ಭಕ್ತಿಲಿ ವಂದಿಪರ ತನು-
ರೋಗ ಬಾಧೆಯ ಬಿಡಿಸಿ ಕಾಮಿತವಿತ್ತು ಸಲಹುವರು
ಯೋಗಿ ತಾರಾಗಣಕೆ ಶಶಿಧರ-
ರಾಗಿ ಶ್ರೀ ರಮಾಕಾಂತವಿಠಲನ
ಸಾಗರೋಪಮ ಕೃಪೆಲಿ ವರ್ಧಿಪ ಯತಿಗೆ ಆನಮಿಪೆ	5
86. ರಮಾಪತಿವಿಠಲ 
							

374 ಈತನೆ ಶ್ರೀ ಪ್ರಹ್ಲಾದನು ಆಹ್ಲಾದಕರನು

374.	ರಾಗ: ಪೂರ್ವಿ	ತಾಳ: ಅಟ
ಈತನೆ ಶ್ರೀ ಪ್ರಹ್ಲಾದನು ಆಹ್ಲಾದಕರನು 	 ಪ
ಈತನೆ ಪ್ರಹ್ಲಾದ ಜಗನ್ಮಾತಾ ಲಕುಮಿ ಪತಿಯ ಗುಣವ
ಭೂತಳದಲ್ಲಿ ತೋರಿ ಬಹು ನಿರ್ಭೀತಿಯಿಂದ ಮೆರೆದ ಗುರು	ಅ.ಪ
ದುಷ್ಟ ಹಿರಣ್ಯಕ ಬಹು ವಿಧದಲ್ಲಿ ನಿಷ್ಕರುಣಿಯಾಗೆ
ಕಷ್ಟ ಬಡಿಸೆ ಸುತಗೆ ಜವದಲಿ
ಸೃಷ್ಟಿಗೊಡೆಯ ಸ್ತಂಭದಿಂದ ದೃಷ್ಟನಾಗಿ ಶ್ರೇಷ್ಠ ನಖದಿಂ ಬಗೆಯೆ 
ನಿಷ್ಠೆಯಿಂದ ನಮಿಸಿದ ಅಸುರನಂದನ ಗುರು 	1 
ಶೂರ ಬಾಹ್ಲೀಕನೆನಿಸಿದ ಬ್ರಹ್ಮಣ್ಯಮುನಿ ಪಾ-
ದಾರವಿಂದ ದಯದಿ ಭಜಿಸಿದ
ಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾ-
ಸಾರಪಾನ ಮಾಡಿ ವಿಬುಧ ಚಾರು ಚಂದ್ರಿಕಾ ರಚಿಸಿದ ಗುರು 	2
ಸಿಂಧುಶಯನ ಶ್ರೀ ರಮಾಪತಿವಿಠ್ಠಲನ ಭಕುತಿ-
ಯಿಂದ ಭಜಿಪ ರಾಘವೇಂದ್ರಯತಿ
ಎಂದೆನಿಸುತ ಮಂತ್ರನಿಲಯ ಮಂದಿರವನು ಮಾಡಿ ಭಕುತ
ವೃಂದದ ಪುರುಷಾರ್ಥಗಳನು ತಂದು ಕೊಡುವ ಕಲ್ಪದ್ರುಮನು 	3
							

375 ಗುರುರಾಯ ಗುರುರಾಯ ದುರಿತ ಕಳೆಯೊ

375.	ರಾಗ: ಕಾಪಿ	ತಾಳ: ಆದಿ
ಗುರುರಾಯ ಗುರುರಾಯ	ಪ
ದುರಿತ ಕಳೆಯೊ ದಯಾಸಾಂದ್ರ ರಾಘವೇಂದ್ರ	ಅ.ಪ
ನಮಿಸುವೆ ನಿನ್ನಡಿಗಮಿತ ವಿಧದಿ
ಮಮ ಶ್ರಮಗಳ ಕಳೆಯೊ ಹೇ ವಿಮಲ ಸುತೇಜ	1
ಆರ್ತ ಜನರ ಇಷ್ಟಾರ್ಥಗಳನೆಲ್ಲ
ಪೂರ್ತಿಗೊಳಿಸಿ ಕೃತಾರ್ಥರ ಮಾಡುವಿ	2
ಪವನನ ವರಮತ ಪ್ರವರನೆನಿಸಿ
ಶ್ರೀವರನರ್ಚಿಸುತಿಹ ಯತಿಕುಲ ತಿಲಕ	3
ಸರ್ವತ್ರದಿ ಹರಿ ಇರುವುದ ನೋಡಿ
ಪೂರ್ವ ದೇವತೆಗಳ ಗರ್ವಹರನೆ ಮದ್ಗುರುರಾಯ	4
ನೀನೆ ಗತಿಯೊ ಹೇ ದೀನವತ್ಸಲನೆ
ಜ್ಞಾನವನು ಕೊಡು ನಾನೆಂಬುದ ಕಳೆ	5
ಪತಿತನು ನಾ ನಿಮ್ಮತಿಶಯ ಗುಣಗಳ
ತುತಿಸಬಲ್ಲೆನೆ ಯತಿಕುಲವರ್ಯ	6
ಮಾರುತಿವರದ ರಮಾಪತಿವಿಠಲನ
ತಾರತಮ್ಯ ತಿಳಿಸ್ಯಾರಾಧನೆ ಕೊಡು	7
87. ರಮಾವಲ್ಲಭವಿಠಲ 
							

376.ವೃಂದಾವನದೊಡೆಯ ಸ್ವಾಮಿ ಮಂತ್ರಾಲಯನಿಲಯ

376.	ರಾಗ: [ಕಾಪಿ]	ತಾಳ: [ಆದಿ]
ವೃಂದಾವನದೊಡೆಯ ಸ್ವಾಮಿ ಮಂತ್ರಾಲಯನಿಲಯ
ಚಂದದಿ ಬಂದು ದರುಶನವಿತ್ತರು ಸ್ವಾಮಿ ಯತಿರಾಯ	ಪ.
ಮೂಢಮತಿಯು ನಾನು ಎನ್ನ ಗಾಢ ನಿದ್ರೆಯಲಿ
ಮಾಡುತ ಪೂಜೆಯ ಎನಗಾನಂದ ಪಡಿಸಿದನು	1
ಗುರುನಾರದ ದಿನದಿ ಸ್ವಾಮಿ ಹರಿದಾಸರ ಗೃಹದಿ
ಕರುಣ ತೋರಿ ದರುಶನವಿತ್ತು ಎನಗಾನಂದ ಪಡಿಸಿದರು	2
ಕರಿರಾಜವರದಾ ಗುರುರಾಜರಿಗೊಲಿದು
ಪರಮಭಕ್ತರ ಮಂದಿರದಿ ಎನಗಾನಂದ ಪಡಿಸಿದರು	3
ತುಂಗಾತೀರದಲಿ ತಾವು ಚಂದದಿ ನಿಂತು
ಮಂಗಳ ರಾಮನ ಪೂಜೆಯ ಮಾಡಿ 
ಎನಗಾನಂದ ಪಡಿಸಿದರು	4
ರಾಮ ಪೂಜೆಯ ಮಾಡಿ ರಾಮಧ್ಯಾನದಿ ನಿರಂತರ
ರಮಾವಲ್ಲಭವಿಠಲ ಭಜಿಸುವ ಪ್ರಿಯರಿವರು	5
88. ರಾಜಗೋಪಾಲ 
							

377 ಬಾಗಿ ಬೇಡುವೆ ಸರ್ವಾಘವಳಿಯಿರೆಂದು

377.	ರಾಗ: [ಧನ್ಯಾಸಿ] 	ತಾಳ: [ರೂಪಕ]
ಬಾಗಿ ಬೇಡುವೆ ಸರ್ವಾಘವಳಿಯಿರೆಂದು 	ಪ
ರಾಘವೇಂದ್ರನೆಂಬಾ ಗುರುಪಾದ ಪ- 
ರಾಗ ಪೊರೆಯಲೆಂದು ಹೀಗೆ ಮನದಲಿ 	1
ದೋಷಹಾರಿ ವಿಘ್ನೇಶಾಂತರ್ಗತ
ಶ್ರೀಶ ಈಶ ಅಭಿಲಾಷೆ ಪೂರಿಸೆಂದು 	2
ಪಾಲಕ ರಾಜಗೋಪಾಲ ಬ್ರಹ್ಮನ ಆ
ಲಲನೆಯು ಎನ್ನ ನಾಲಿಗಿರಲೆಂದು 	3
89. ರುಕ್ಮಿಣೀಶವಿಠಲ 
							

378 ಬಾರೈ ಬಾರೈ ಗುರು ಸಾರ್ವಭೌಮನೇ

378.	ರಾಗ: [ಬಿಲಹರಿ] 	ತಾಳ: [ಆದಿ]
ಬಾರೈ ಬಾರೈ ಗುರು ಸಾರ್ವಭೌಮನೇ	 ಪ.
ಉಟ್ಟವಸನವು ತೊಟ್ಟ ಆವಿಗೆ
ಇಟ್ಟ ದ್ವಾದಶ ಊಧ್ರ್ವ ಪುಂಡ್ರವು
ದಿಟ್ಟತನದಿ ಇಟ್ಟು ಕೊರಳೊಳು
ಕಟ್ಟಿ ತುಳಸೀ ಮಣಿ ಮನೋಭೀಷ್ಠವ ಸಲಿಸುತ	1
ದಂಡ ಕಮಂಡಲ ಕೈಯಲಿ ಪಿಡಿದು
ಕಂಡ ಕಂಡದ ಪೂಜೆಗೊಂಬುವ
ಕೊಂಡ ಜನರ ಪರಿಪಾಲಿಸುತಲಿ
ಕಂಡ ಕಂಡವರ ಕಾಯುವ ಕರುಣಿ	2
ಭೂತ ಪ್ರೇತ ಭಯ ನಾಶಗೊಳಿಸಿ
ಭೀತಿಯ ಬಿಡಿಸಿ ಮಂತ್ರಾಲಯದಿ
ಖ್ಯಾತಿವಂತ ರುಕ್ಮಿಣೀಶವಿಠಲನ ಕರುಣದಿ
ಪ್ರೀತಿಪ ಜನರ ಮನೋಭೀಷ್ಠವೊಲಿದ	 3
90. ಲಕುಮೀಶ 
							

379 ಅನುಗಾಲ ನಿನ್ನ ದಯವು ನಮಗಿರಲಿ

379.	ರಾಗ: [ವಲಚಿ]	ತಾಳ: [ಆದಿ]
ಅನುಗಾಲ ನಿನ್ನ ದಯವು ನಮಗಿರಲಿ ಗುರುವೆ
ಗುಣನಿಧಿಯೆ ಶ್ರೀ ರಾಘವೆಂದ್ರ ಕಲ್ಪತರುವೇ 	ಪ
ಮನ ನಿನ್ನ ಹೃದಯದಲಿ ಇನಕುಲೇಶನ ಕಾಂಬ
ಕ್ಷಣಕ್ಷಣಕೆ ಸ್ಥಿರಗೊಳಿಸಿ ನೀ ತೋರು ಪ್ರಭುವೇ 	ಅ ಪ
ಕಲಿಜನರ ನಾ ಸೇರಿ ಮಲಿನ ಕರ್ಮವಗೈದು
ಹಲವು ಬವಣೆಯ ದುಷ್ಟ ಸುಳಿಯೊಳಗೆ ಬಿದ್ದೆ
ಎಳೆಯನಪರಾಧಗಳ ನೀ ಮರೆದು ಕರಪಿಡಿದು
ಚಲ್ವನಿಲಶಾಸ್ತ್ರಸುಧೆ ಪರಿಮಳವ ತಿಳಿಸೋ 	1
ಬುದ್ಧಿಗೇಡಿಯು ನಾನು ಹದ್ದುಮೀರಿ ನಡೆದೆ
ಪದ್ಮನಿನ್ನಂಘ್ರಿ ಬಿಡೆ ಉದ್ಧರಿಸಬೇಕಯ್ಯ
ಮಧ್ವರಾಯರ ಮತದ ದುಗ್ದಾಬ್ಧಿ ಪೂರ್ಣಶಶಿ
ಮುದ್ದು ವೃಂದಾವನದಿಂದ ಎದ್ದೋಡಿ ಬಂದು ಸಲಹೈ 	2
ಹೆತ್ತಪಿತ ಖಳ ಹಿಂದೆ ಚಿತ್ರಹಿಂಸೆ ನಿನಗೀಯೆ
ಚಿತ್ತದುಗುಡವ ತರದೆ ಮತ್ತವಗೆ ಗತಿಯ ಕೇಳ್ದೆ
ಪ್ರತ್ಯರ್ಥಿ ಗಜ ಸಿಂಹ ಎತ್ತಿ ಕರಗಳ ಮುಗಿವೆ
ಸುತ್ತುವಾಪದ ನಿರುತ ಕಿತ್ತುತಲಿ ಸಲಹೋ 	3
ಮೂರರಾಶೆಯ ಬಿಡಿಸು ಮೂರನ್ನೆ ಕರುಣಿಸು
ಮೂರೆರಡು ಅರಿ ಗೆಲಿಸು ಮೂರು ಭ್ರಮೆಗಳ ಓಡಿಸು
ಮೂರ್ಮೂರುಗಳ ಕೊಡಿಸು ಮೂರ್ಲೋಕ ದೊರೆಯಲ್ಲಿ
ಮೂರೊಂದುಅವತಾರಿ ಮೂರುಕಾಲದಿ ನಿತ್ಯ 	4
ನಿನ್ನಂಥ ಕರುಣಿಗಳ ಇನ್ನೆಲ್ಲಿ ನಾ ಕಾಣೆ
ಎನ್ನಂಥ ಪಾಪಿಗಳು ಇನ್ನಿಲ್ಲ ಜಗದಲ್ಲಿ
ಮನ್ನಿಸೆನ್ನಪರಾಧ ಮಂತ್ರಾಲಯಾಧೀಶ
ಚನ್ನ ಶ್ರೀಲಕುಮೀಶನ್ನ ಉನ್ನಂತ ಭಕುತಾ 	5
ಮೂರರಾಶೆ=ಹೆಣ್ಣು, ಹೊನ್ನು, ಮಣ್ಣು; 
ಮೂರನ್ನೆ=ಜ್ಞಾನ, ಭಕ್ತಿ, ವೈರಾಗ್ಯ; 
ಮೂರೆರಡು ಅರಿ=ಅರಷಡ್ವರ್ಗಗಳು-ಕಾಮ, 
ಕ್ರೋಧ, ಲೋಭ, ಮೋಹ, ಮದ, ಮತ್ಸರ; 
ಮೂರು ಭ್ರಮೆ=ಈಷಣತ್ರಯ-ಸತಿಮೋಹ, 
ಸುತಮೋಹ, ಅತಿದ್ರವ್ಯ ಮೋಹ, 
(ದಾರೇಷಣ, ಪುತ್ರೇಷಣ, ವಿತ್ತೇಷಣ); 
ಮೂರ್ಮೂರುಗಳು=ನವವಿಧ ಭಕ್ತಿ-ಶ್ರವಣ, 
ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, 
ವಂದನ, ದಾಸ್ಯ, ಸಖ್ಯ, ಆತ್ಮನಿವೇದನ; 
ಮೂರೊಂದುಅವತಾರಿ=ಪ್ರಹ್ಲಾದ, ಬಾಹ್ಲೀಕ, 
ವ್ಯಾಸರಾಜ, ರಾಘವೇಂದ್ರ; ಮೂರುಕಾಲ=ಪ್ರಾತಃ, 
ಮಧ್ಯ, ಸಾಯಂಕಾಲ;
							

380 ಗುರುರಾಜಾ ಗುರುರಾಜಾ

380.	ರಾಗ: [ಮಾಯಾಮಾಳವಗೌಳ]	   ತಾಳ: [ಆದಿ]
ಗುರುರಾಜಾ ಗುರುರಾಜಾ ಮಂತ್ರಾಲಯಪ್ರಭು 
ಶರಣಜನರ ಶ್ರೀಸುರರಮಹೀಜ	ಪ
ಬಾಗಿ ಭಜಿಪೆ ಭವರೋಗವ ಓಡಿಸಿ
ಭಾಗವತರ ಸಂಗ ಸಂತತ ಕರುಣಿಸು 	1
ಆದಿಯುಗದಿ ಪ್ರಹ್ಲಾದ ನೀನೆನಿಸುತ
ಬಾಧೆ ಸಹಿಸಿ ಪಿತಗೆ ಶ್ರೀದನ ತೋರಿದ 	2
ವ್ಯಾಸರಾಜರಾಗಿ ವ್ಯಾಸತ್ರಯಗೈದೆ
ದಾಸ ಪುರಂದರರ ಭಾಸುರ ಗುರುವೆ 	3
ತಿಮ್ಮಣ್ಣ ದಂಪತಿ ತಿಮ್ಮನ ಭಜಿಸಲು
ಜನ್ಮವ ತಾಳಿದೆ ಎಮ್ಮನು ಪೊರೆಯಲು 	4
ಸುಖಮುನಿವಾಸ ಶ್ರೀ ಲಕುಮೀಶನಂಘ್ರಿಯ
ಸುಕರುಣದಿ ನಿತ್ಯ ಸಕಲೇಷ್ಠದಾಯಕ 	5
							

381 ಪರಿಮಳಾರ್ಯರ ದಿವ್ಯಚರಣ

381.	ರಾಗ: [ಮುಖಾರಿ]	ತಾಳ: [ತ್ರಿಪುಟ]
ಪರಿಮಳಾರ್ಯರ ದಿವ್ಯ ಚರಣ ಭಜಿಸೋ ನಿತ್ಯ 
ದುರಿತಗಳು ಪೋಪವು 	ಪ
ಹರಿಗೆ ಪ್ರಿಯರು ರಾಘವೇಂದ್ರರು ಶರಣಜನರ
ಕರಪಿಡಿದು ಕರುಣದಿಂದಲಿ ವರಗಳೀಯುತ
ನಿರುತ ಮಂತ್ರಗೃಹದಿ ಮೆರೆಯುವ 	ಅ ಪ
ದಿತಿಜಾವಂಶದೊಳು ಪ್ರಥಮಯುಗದಿ ಜನಿಸಿ
ಚತುರ ಪ್ರಹ್ಲಾದನೆನಿಸಿ ರತಿಪತಿಪಿತನಂಘ್ರಿ ಸ್ತುತಿಸಲು
ಪಿತನು ಸಿಟ್ಟಲಿ ಖಡ್ಗತೋರಿ 
ದೈತ್ಯಕುಲಹಗೆ ಹರಿಯ ತೋರೆನೆ 
ರತುನಸ್ತಂಭದಿ ಹರಿಯ ತೋರಿದ  	1
ಕಾಷಾಯವಸನದಿ ಭಾಸ್ಕರ ತೇಜದಿ 
ವ್ಯಾಸರಾಜಾಎಂದೆನಿಸಿ ಶ್ರೀಶನಂಘ್ರಿಯ ಬಿಡದೆ ಪೊಗಳುತ 
ದಾಸರೆನಿಪ ಪುರಂದರಾರ್ಯಗೆ
ಸೂಸಿ ಹರಿಯುವ ಜ್ಞಾನ ಭಕ್ತಿಯೋಳ್
ಮೇಶನೆ ಪರನೆಂದು ತಿಳಿಸಿದ 	2
ದೃಢಮನದಲಿ ತನ್ನ ಬಿಡದೆ ಸೇವಿಪರಿಗೆ
ಕೊಡುವ ಸಕಲೇಷ್ಟಗಳ ತಡಮಾಡದೆ 
ಒಡೆಯ ಶ್ರೀ ಲಕುಮೀಶ ದೇವನ ಅಡಿಗಳಾರ್ಚನೆ ಸತತ 
ಮಾಡುತ ಪಡೆದ ಕೀರ್ತಿಯ ಪೊಡವಿಯೊಳು ತಾ
ಒಡನೆ ಪರಿಮಳ ರಚಿಸಿದಾ ಗುರು 	3
							

382 ಪಾಲಿಸು ಎನ್ನನು ಬಾಲಕನೆನುತಲಿ

382.	ರಾಗ: [ಆರಭಿ]	ತಾಳ: [ಆದಿ]
ಪಾಲಿಸು ಎನ್ನನು ಬಾಲಕನೆನುತಲಿ ರಾಘವೇಂದ್ರ ರಾಘವೇಂದ್ರ 	ಪ
ಭೂಲೋಲಸುತೆ ತುಂಗಕೂಲ ಸು-
ನಿಲಯನೆ ರಾಘವೇಂದ್ರ ರಾಘವೇಂದ್ರ 	 ಅ ಪ
ಶ್ರೀಶನ ಪೊಂದಿದ ದಾಸರ ಸಂಗಾಬ್ಧಿ 
ಈಸುವಂದದಿ ಮಾಡೋ ರಾಘವೇಂದ್ರ ರಾಘವೇಂದ್ರ 
ಹೇಸಿ ಜನರ ಸಹವಾಸ ಬಿಡಿಸಿ ಶ್ರೀನಿವಾಸನ ತೋ-
ರಿಸೋ ರಾಘವೇಂದ್ರ ರಾಘವೇಂದ್ರ 	1
ಈರನಶಾಸ್ತ್ರ ಪೇಳಿ ಕೀರನ ತಂದಿಯ 
ಸಾರುವ ಭಾಗ್ಯವ ಕೊಡು ರಾಘವೇಂದ್ರ ರಾಘವೇಂದ್ರ 
ಬಾರಿಬಾರಿಗೆ ಕಂಸಾರಿಯೇ ಜಗದ್ರಥ 
ಸಾರಥಿ ಎಂದು ತಿಳಿಸೋ ರಾಘವೇಂದ್ರ ರಾಘವೇಂದ್ರ 	2
ಮೂರೆರಡುರೂಪ ಹರಿಯ ಮೂರೆರಡುಭೇದವ
ಮೂರುಕಾಲದಿ ತಿಳಿಸೋ ರಾಘವೇಂದ್ರ ರಾಘವೇಂದ್ರ
ಮೂರಿಂದ ಸುಖವಿಲ್ಲ ಮೂರು ಮಾತ್ರ ನೀಡಯ್ಯ
ಮೂರೊಂದವತಾರಿ ರಾಘವೇಂದ್ರ ರಾಘವೇಂದ್ರ	3
ಹಿಂದೆ ಪ್ರಹ್ಲಾದನಾಗಿ ತಂದೆಗೆ ನರಹರಿಯ 
ಅಂದು ಸ್ತಂಭದಿ ತೋರ್ದ ರಾಘವೇಂದ್ರ ರಾಘವೇಂದ್ರ 
ನಂದನಂದನ ಪದ ಛಂದದಿ ದ್ವಾಪರದಿ 
ವಂದಿಸಿದ ಬಾಹ್ಲೀಕ ರಾಘವೇಂದ್ರ ರಾಘವೇಂದ್ರ 	4
ಕಲಿಯುಗದಲಿ ಬುದ್ಧಿ ಕಲಿಸಲು ಪುಟ್ಟಿ ಹರಿಯ
ಒಲಿಸಿದ ವ್ಯಾಸರಾಜ ರಾಘವೇಂದ್ರ ರಾಘವೇಂದ್ರ
ಚಲುವ ವ್ಯಾಸತ್ರಯಗಳ ರಚಿಸಿ ಜ್ಞಾನದ 
ಹೊಳೆ ಹರಿಸಿದ ಸಿರಿ ರಾಘವೇಂದ್ರ ರಾಘವೇಂದ್ರ 	5
ಹರಿಬಿಲದಿ ವಾಸಗೈದ ಹರಿವರದಿಂದ ಪುಟ್ಟಿ 
ವರ ವೆಂಕಟಾಖ್ಯನಾದ ರಾಘವೇಂದ್ರ ರಾಘವೇಂದ್ರ
ಮರುತಶಾಸ್ತ್ರಾಬ್ಧಿ ಮಚ್ಛ ಗುರುಸುಧೀಂದ್ರರ ಕರ- 
ಸರಸಿಜೋದ್ಭವನಾದ ರಾಘವೇಂದ್ರ ರಾಘವೇಂದ್ರ 	6
ಜಡಮತಿ ಮತರನು ಪುಡಿಪುಡಿ ಮಾಡಿ ಸುಧೆಗೆ
ಬಿಡದೆ ಪರಿಮಳಗೈದ ರಾಘವೇಂದ್ರ ರಾಘವೇಂದ್ರ
ಪೊಡವಿಜ್ಯಾಣ್ಮ ಮೂಲ ಒಡೆಯ ಲಕುಮೀಶ 
ಅಡಿದಾವರೆಭೃಂಗ ರಾಘವೇಂದ್ರ ರಾಘವೇಂದ್ರ 	7
ಮೂರೆರಡುರೂಪ=3+2=ಪಂಚ ರೂಪ-ಅನಿರುದ್ಧ, 
ಪ್ರದ್ಯುಮ್ನ, ಸಂಕರ್ಷಣ, ವಾಸುದೇವ, 
ನಾರಾಯಣ; ಮೂರೆರಡು ಭೇದ=ಪಂಚಭೇದÀ; 
ಮೂರಿಂದ=ಹೊನ್ನು, ಹೆಣ್ಣು, ಮಣ್ಣು; 
ಮೂರು ಮಾತ್ರ=ಜ್ಞಾನ, ಭಕ್ತಿ, ವೈರಾಗ್ಯ; 
ಮೂರೊಂದವತಾರಿ=ಪ್ರಹ್ಲಾದ, ಬಾಹ್ಲೀಕ, 
ವ್ಯಾಸರಾಜ, ರಾಘವೇಂದ್ರ;
							

383 ಪಾಲಿಸುವದು ಎನ್ನ

383.	ರಾಗ: [ಶುದ್ಧಸಾವೇರಿ]	ತಾಳ: [ತ್ರಿಪುಟ] 
ಪಾಲಿಸುವದು ಎನ್ನ ಪಾವನ್ನ ಶ್ರೀ ಗುರು ಪರಿ-
ಮಳಾರ್ಯನೆ ರನ್ನ ನಿರ್ದಯವ ಮಾಡದೆ 
ಕೇಳೊ ಮೊರೆ ನೀ ಮುನ್ನ ನಂಬಿದೆನೊ ನಿನ್ನ 
ಕೇಳೋ ವಿಷಯದ ಸುಖ ಸಮುದ್ರದಿ
ಏಳಲಾರದೆ ಬಾಧೆ ಬಡುವೆನು 
ಗೋಳು ಅಂತಕನಿಂದ ಬಿಡಿಸಿ
ಶ್ರೀಲೋಲನಂಘ್ರಿಯ ತೋರಿ ಗುರುವರ 	ಪ
ಆಚಾರಗಳ ನಾ ಬಿಟ್ಟೆ ಜೀವೇಶ ಸರ್ವಜ್ಞ
ಆಚಾರ್ಯರ ಗ್ರಂಥಗಳಾ ಗುಟ್ಟೆ ಕ್ಷಣ ಕಾಲಾವಾದರು
ಯೋಚಿಸದಲೆ ನಾ ಕೆಟ್ಟೆ ಭವದೊಳಗೆ ಅನುದಿನ
ನಾಚಿಕಿಲ್ಲದೆ ವ್ಯಥೆಪಟ್ಟೆ ಬವಣೆ ಇನ್ನಿಷ್ಟೆ
ತೋಚದಾಯಿತು ಗುರುವೆ ನಿನ್ನೊಳು 
ಯಾಚಿಸುವೆ ಸಂತಸದಿ ಸಂತತ 
ಕೀಚಕಾರಿ ಪ್ರಿಯನ ದಾಸ್ಯ ವಿವೇಚನೆಯ ಕೊಟ್ಹರುಷದಲಿ 	1
ಅಕ್ಷಮ್ಯ ಅಪರಾಧಿಯ ಕ್ಷಮಿಸುತಲಿ ತಂದೆಗೆ
ಪಕ್ಷಿವಾಹನನಂಘ್ರಿಯ ಸ್ತಂಭದಲಿ ತೋರುತ
ಮೋಕ್ಷ ಕೊಡಿಸಿದೆ ಜೀಯ ಪಿಡಿ ಎನ್ನ ಕೈಯ್ಯ
ದಕ್ಷಿಣಾದ್ರಿಯ ಅರಸ ಇತ್ತಂತ 
ಅಕ್ಷಯ ಬೆಲೆ ಸರಕೆ ಕೋಪಿಸೆ 
ತಕ್ಷಣ ಜ್ವಾಲೆಯೊಳು ಹಸ್ತದಿ
ಲಕ್ಷವಿರುತಿರೆ ಸರವನಿತ್ತವ 	2
ದುಷ್ಟಾನ್ನಗಳ ನಾಸವಿದು ಪರವನಿತೆಯರ ಕಂಡು
ಕೆಟ್ಟ ಭಾವನೆ ಕವಿದು ಹಿಂದಾದ ಜನ್ಮಗ-
ಳೆಷ್ಟಂಬುದನ್ನೇ ಮರೆದು ಇದ್ದೆನ್ನ ಕರೆದು 
ಕುಟ್ಟಿ ಅಘಗಳ ಥಟ್ಟನೋಡಿಸಿ
ಶಿಷ್ಟಜನರೊಡನಿಟ್ಟು ಶುಭಮತಿ 
ಕೊಟ್ಟು ಶ್ರೀ ಲಕುಮೀಶನಂಘ್ರಿಯೋಳ್ 
ದೃಷ್ಟಿ ಚಲಿಸದ ಭಾಗ್ಯ ಕೊಡುತಲಿ 	3
							

384 ಬಂದಾ ಶ್ರೀ ರಾಘವೇಂದ್ರ

384.	ರಾಗ: [ಕಮಾಚ್]	ತಾಳ: [ಆದಿ]
ಬಂದಾ ಶ್ರೀ ರಾಘವೇಂದ್ರ ಭಕುತರ ಪೊರೆವ 	ಪ
ಬಂದಾ ಭಕುತರ ಪಾಪವೃಂದವ ಕಳೆದು ಆನಂದ
ನಂದನತೋರಿ ನಂದವಗರೆವ ಗುರು 	ಅ ಪ
ಧರೆಯ ಚೋರಾರಿ ಸುತೆಯಾದ ತುಂಗಾನದಿಯ 
ತೀರದಿ ರಾಜಿಪ ವರ ಮಂತ್ರಸದನದಿ ಹರಿಯ ಧ್ಯಾನಿಸುತ 
ನೆರೆನಂಬಿ ತುತಿಪರ ಕರುಣಾದಿ ಪೊರೆಯಲು 	1
ದುರಿತವೆಂಬುವ ಸರ್ಪಕೇ ಗುರುರಾಜಾ
ಗರುಡನೆಂದರಿಯೋ ಮನುಜ ಮರೀಯದವರ
ಚರಣವಾರಿಜಗಳ ಸ್ಮರಿಸುವರಾ ಭವಶರಧಿ ದಾಟಿಸಲೀಗಾ 	2
ತನಯರಿಲ್ಲದ ಜನರು ಯತಿರಾಜರ
ಮನಮುಟ್ಟಿ ಸೇವಿಸಲು ಘನತನಯರ ಇತ್ತು ಅನು-
ದಿನ ರಕ್ಷಿಸಿ ಇನಕುಲೇಶನ ಒಲಿಸಿ ಹನುಮನಾವೇಶದಿ 	3
ಹಲವು ಕ್ಷೇತ್ರಗಳೇತಕೇ ಎಲೆ ಮರುಳೇ 
ಸುಲಭ ಮುಕ್ತಿಗೆ ಈತನು ಒಲಿಯುತ ನಲಿಯುತ 
ಫಲನೀವ ಸುರತರು ಸುಜನರಭೀಷ್ಟ ಫಲವೀವ ಓಡ್ಯೋಡಿ 	4
ಶ್ರೀಸುಯಮೀಂದ್ರಯತಿವರ ತಪಸಿಗೆ ಮೆಚ್ಚಿ
ನಸುನಗುತಲಿ ಒಲಿದು ರಾಶಿಮಹಿಮೆ ಪ್ರಕಾಶದಿ ತೋರುತ 
ಬಿಸಜಾಕ್ಷ ಲಕುಮೀಶ ವಾಸುದೇವನ ಧ್ಯಾನದಿ 	5 
							

385 ಬಂದಾನು ರಾಘವೇಂದ್ರ

385.	ರಾಗ: [ಹಿಂದೋಳ]	ತಾಳ: [ಆದಿ]
ಬಂದಾನು ರಾಘವೇಂದ್ರ ಮಹಾರಥದೀ 
ಬಂದಾನು ರಾಘವೇಂದ್ರ ಮಂತ್ರಾಲಯದಿ 	ಪ
ಸುಂದರ ವದನಾರವಿಂದ ಮುನೀಂದ್ರನು
ವಂದಿಪಸುಜನಕೆ ಸಂದೋಹವರವೀವ 	ಅ ಪ
ಸುಶಮೀಂದ್ರ ಕೃತ ದಿವ್ಯ ಮುನ್ನೂರ ಮೂವತ್ತ
ವಿಷು ಅಬ್ದ ಆರಾಧನೆ ಶ್ರಾವಣ ಕೃಷ್ಣಪಕ್ಷದೀ
ಎಸೆವ ತದಿಯ ಶ್ರೇಷ್ಠ ಕುಜವಾರ ದಿನದಂದು
ದಶಗ್ರೀವ ವೈರಿ ಧ್ಯಾನ ಹಸನಾಗಿ ಮಾಡುತಾ
ಕಸಿವಿಸಿ ನಾನಾ ವ್ಯಸನ ಭವಾಬ್ಧಿಯ
ನಸುನಕ್ಕು ದಾಟಿಸಿ ಸುಜನರ ರಕ್ಷಿಸೇ 	 1
ಮುಂಭಾಗದಲಿ ಬಲು ಗಾಂಭೀರ್ಯ ಗಮನದಿ
ಅಂಬಾರಿ ಗಜದಿಂದ ತುಂಬಾ ಜನಕೆ ಶೋಭಿಸೇ
ಕೊಂಬು ಕಹಳೆನಾದ ತಂಬಟಿ ನಾನಾ ವಾದ್ಯ
ಇಂಪಾದ ನಾಗಸ್ವರ ಸಂಭ್ರಮ ಛತ್ರಿ ಶೋಭಿಸೇ
ಕುಂಭಿನಿಸುತೆ ಶೀ ರಾಮಲಕ್ಷ್ಮಣ ವಾಯು
ಹಂಬಲ ವೇಷದಿ ತುಂಬೆ ಶೃತಿಯ ಘೋಷಾ 	2
ಪ್ರಹ್ಲಾದ ವ್ಯಾಸರಾಜ ಉಲ್ಹಾಸದಿ ವರನೀಡೆ
ಚೆಲ್ವರಾಯರ ನಾಮ ಜಯ ಘೋಷದೀ
ಅಲ್ಲಲ್ಲಿ ಗುಂಪು ಭಕ್ತೆರಲ್ಲಾಭೀಷ್ಟಗಳ
ಸಲ್ಲಿಸುಯಂತೆಂದು ತಂಡೋಪ ತಂಡ ಪ್ರಾರ್ಥಿಸೇ
ಮಲ್ಲರಮುರಿದ ಶ್ರೀ ಲಕುಮೀಶ ದೇವನ
ನಿಲ್ಲದೆ ಪ್ರಾರ್ಥಿಸೆ ಅಭಯವ ನೀಡುತಾ 	3
							

386 ಬಂದೀಗ ಎನ್ನ ರಕ್ಷಿಸೋ

386.	ರಾಗ: [ನಾಗಸ್ವರಾವಳಿ]	ತಾಳ: [ಆದಿ] 
ಬಂದೀಗ ಎನ್ನ ರಕ್ಷಿಸೋ ಶ್ರೀ ರಾಘವೇಂದ್ರ 	ಪ
ಬಂದೀಗ ರಕ್ಷಿಸು ಕುಂದೆಂದು ಎಣಿಸದೆ
ವೃಂದಾಮಯದ ಬಾಧೆಯಿಂದ ಬೆಂದೆನು ತಂದೆ 	ಅ ಪ
ಹಿಂದಾದ ಅವತಾರದಿ ನಿನಗೆ ಬಾಧೆ ತಂದೆ ಕೊಡಲು ಮುದದೀ
ಸುಂದರಕಂದನಾದ ಪ್ರಹ್ಲಾದರಾಜನೆನಿಸಿ
ಸಂದೋಹ ಬಾಧೆಗಳಿಂದ ದೂರಾದೆ
ಅಂದು ನಿನ್ನ ಕಿರಿ ತಂದೆಯ ಕೊಂದ
ಹಂದಿಯರೂಪದ ಹರಿಯ ತೋರಿಸೆನೆ
ಮಂದದೈತ್ಯನಿಗೆ ತೋರಿದೆ ಸ್ತಂಭದಿ
ಬಂದನು ನರಹರಿ ಕೊಂದನು ತಂದೆಯ 	1
ಬ್ರಹ್ಮಣ್ಯತೀರ್ಥ ಕುವರಾ ಶ್ರೀ ವ್ಯಾಸರಾಜ ಬ್ರಹ್ಮಜಾಂಶಗೆ ಗುರುವರಾ
ಸನ್ಮೌನಿ ಮಧ್ವರೊಲಿಸಿ ಸದ್ಗ್ರಂಥ ನ್ಯಾಯಾಮೃತ 
ಸನ್ಮುದ ಸುರಿಸುವ ಚಂದ್ರಿಕೆ ತರ್ಕತಾಂಡವ
ಸನ್ಮನದಲಿ ನೀ ರಚಿಸಿ ಸುಜನಗಿತ್ತೆ
ಮನ್ಮಥಪಿತನಂಘ್ರಿ ಸಂತತ ಪೂಜಿಸಿ
ದುರ್ಮತ ದುರ್ವಾದಿ ತತಿಗಳ ಜಯಿಸಿ
ಬ್ರಹ್ಮನಪಿತ ಸರ್ವೇಶನೆಂದ ಗುರು 	2
ಮಂದನ ಮೊರೆ ಕೇಳದೆ ಶ್ರೀ ಪರಿಮಳಾರ್ಯ ವೃಂದಾವನವ ಸೇರಿದೆ
ಎಂದೆಂದು ನಿನ್ನ ಪದ ದ್ವಂದ್ವವ ಬಿಡೆನಯ್ಯ
ಮಂದಾರ ಸುರತರುವೆಂದೂ ನಂಬಿದೆ ಗುರುವೆ
ಅಂದಸುನೀಗಿದ ಕಂದನ ಉಳುಹಿದೆ
ಬೆಂದ ಪ್ರಸೂತಿಯ ಬಿಸಿಲಿಂದ ಕಾಯ್ದವ
ವಂದಿಪೆ ದಶರಥ ನಂದನ ಲಕುಮೀಶ
ಮಂದಜಾಂಘ್ರಿ ಭೃಂಗ ಓಡ್ಯೋಡಿ ತ್ವರಿತ 	3
							

387 ಬಂದು ನೆಲೆಸಿಹ ನೊಡಿ

387.	ರಾಗ: [ಅಭೋಗಿ]	ತಾಳ: [ಆದಿ]
ಬಂದು ನೆಲೆಸಿಹ ನೊಡಿ ಶ್ರೀ ರಾಘವೇಂದ್ರನು 	ಪ
ಅಂದು ಭೂಮಿಯ ಕದ್ದ ದೈತ್ಯನ 
ಕೊಂದ ವರಹಗೋವಿಂದದೇವನ 
ಛಂದದ ಕೋರೆಯಿಂದ ಜನಿಸಿದ 
ಸುಂದರ ತುಂಗಾನದಿಯ ತೀರದಿ 	ಅ ಪ
ಪ್ರಥಮ ಯುಗದೊಳು ಈತ ಜಾತರೂಪ ಕಶ್ಯಪ
ಜಾತನೆನಿಸಿ ಮೆರೆದಾತ ಮತಿಗೆಟ್ಟ ಪಿತನ
ಅತುಳ ಭಾದೆಗಳ್ ಗೆದ್ದಾತ ಕೃತಿಪತಿಗೆ ಪ್ರೀತ
ವೀತಿಹೋತ್ರನ ಜನಕನ ಸತತ ನಲಿಯುತ ನ-
ಗುತ ಭಜಿಸುತ ರತುನಸ್ತಂಭದಿ ಪಿತಗೆ ನರಮೃಗ
ತತಿಯ ಪತಿಯನು ಜಿತದಿ ತೋರುತ 	1
ಬ್ರಹ್ಮನಯ್ಯ ಸರ್ವೆಶಾ ಎಂದರುಹಿದಾ ಭಾವಿ 
ಬ್ರಹ್ಮದೇವನ ಆವೇಶದಿಂದ ಪುಟ್ಟಿ ಈ
ಬ್ರಹ್ಮಾಂಡದೊಳಗೆ ವ್ಯಾಸರಾಜ ಯತಿಯ ರವಿಭಾಸ
ಬ್ರಹ್ಮಣ್ಯತೀರ್ಥರ ಕುವರನೆನಿಸುತ 
ಬ್ರಹ್ಮಜಾಂಶಗೆ ಗುರುವು ಎನಿಸುತ ಬ್ರಹ್ಮತಾನೆಂಬ 
ಕುಮತಿಗಳ ಮನ ಹಮ್ಮು ಮುರಿಯುತ ದುಂದುಭಿ ಹೊಡೆಸುತ 2
ನಾಗಾದ್ರೀಶನ ದಯದಿ ತಿಮ್ಮಣ್ಣಭಟ್ಟರ
ಮಗುವೆನಿಸೀಜಗದೀ ವೇಂಕಟೇಶನಾಮದಿ
ನಿಗಮಾಗಮಗಳೋದಿ ವೀಣೆ ಗಾನ ವಿದ್ಯಾದಿ
ಮಿಗೆ ಪ್ರವೀಣನು ಎನಿಸೆ ಹರುಷದಿ ಸುಗುಣನಿಧಿ 
ಶ್ರೀಗುರುಸುಧೀಂದ್ರರು ರಾಘವೇಂದ್ರನೆಂದು ನಾಮ ನೀಡಲು
ನಗಧರ ಲಕುಮೀಶನೊಲಿಸುತ 	3
							

388 ಮಂತ್ರಮಂದಿರೇಶನ ಸಂತರ ಒಡೆಯನ ನೋಡಮ್ಮ

388.	ರಾಗ: [ಮೋಹನ]	ತಾಳ: [ಆದಿ]
ಮಂತ್ರಮಂದಿರೇಶನ ಸಂತರ ಒಡೆಯನ ನೋಡಮ್ಮ
	ನೋಡೆ ಈತನ ಪಾಡಮ್ಮ ಪಾಡೆ	ಪ
ಕಂತುಪಿತನ ಪದಚಿಂತನೆ ನೀಡಿ ದು- 
ಶ್ಚಿಂತೆ ಕಳೆದು ನಿಶ್ಚಿಂತಮಾಡುವ 	ಅ.ಪ
ಬಂಗಾರ ಕಶ್ಯಪಗೆ ಸುತನು ಹಿಂದಕೆ ಈತನು 
ರಂಗನ ಪದಪದ್ಮ ಭೃಂಗನಾದವನು
ಸಂತತ ಇವನು ಪಿಂಗಳಕೋಟಿನಿಭಾಂಗನ ಸ್ತಂಭದಿ
ಹಿಂಗದೆ ಜನಕನ ಕಂಗಳಿಗೆ ತೋರಿದ 	1
ಗುರವೀಗೆ ಗುರುವೆನಿಸುತ್ತಾ ಧರೆಯೋಳ್ ಪುಟ್ಟುತ್ತ
ಧರಣೀಪನಘ ತರಿಯುತ್ತ ಚಂದ್ರಿಕೆ ರಚಿಸುತ್ತಾ
ಸಿರಿವ್ಯಾಸರಾಜ ಉರಗಾರಿಧ್ವಜನ 
ಕರುಣಾಬ್ಧಿಜ ಕಲ್ಪತರುವೆನಿಸಿ ಮೆರೆವಾ 	2
ವೇಂಕಟೇಶನ ವರದಿಂದ ತಿಮ್ಮಣ್ಣಭಟ್ಟರ ಕಂದ
ವೇಂಕಟೇಶನೆನಸಿ ಸುಧೀಂದ್ರಕರಜಾತನಾದ ರಾಘವೇಂದ್ರ
ಪಂಕಜೋದ್ಭವ ಕರ ಪಂಕಜಾರ್ಚಿತ ಮೂಲ
ಪಂಕಜಾಕ್ಷನ ಪದಪಂಕಜ ಭಜಿಸಿದ 	3
ಕ್ಷಿತಿತಸ್ಕರಾರಿಜ ತಟದಿ ನಿಂತೀಪ ಬೃಂದಾವನದಿ ನತಭಕ್ತ
ಸ್ತುತಿಗೆ ಹಿತದಿ ಮಿತಿಮೀರಿ ವರವೀವ ಮುದದಿ ಚತುರೇಕ
ಮೂರ್ತಿಯ ಚತುರತನದಿ ಸ್ತುತಿಪ ಮತಿಯನೆ ಕೊಟ್ಟು ಸ-
ದ್ಗತಿಯನೆ ತೋರುವ 	4
ಮೂಕಾಂಧವಂಧ್ಯರಿಗೀತ ಮಾತು ಕಣ್ಣು ಸುತರ ಕೊಡುವಾತ 
ನಾಕಾಣೆ ಮಹೀಮಗೆಣೆಮಾತ ಭೀಕರ ಭವಜಲದಿ ಪೋತ 
ಪಾಕಶಾಸನ ತಮ್ಮ ಲಕುಮೀಶದೇವನೆ ನಾಕ್ಹತ್ತು 
ಲೋಕಪತಿ ಏಕದೈವವೆಂದು ಪೇಳ್ದ 	5 
							

389 ಮಂದನ ಮೊರೆಗೆ ಮಂತ್ರಮಂದಿರ

389.	ರಾಗ: [ರೇವಗುಪ್ತಿ]	ತಾಳ: [ಆದಿ]
ಮಂದನ ಮೊರೆಗೆ ಮಂತ್ರಮಂದಿರ ಶ್ರೀ ರಾಘ-
ವೇಂದ್ರ ನೀ ಓಡ್ಯೋಡಿ ಬಂದು ರಕ್ಷಿಸಯ್ಯಾ 	ಪ
ಹಿಂದೆ ತಂದೆಯ ನಾನಾ ಅಪರಾಧ ಒಂದೂ ಎಣಿಸದೆ ಮೋಕ್ಷಕೊಡಿಸಿದೆ
ಎಂದು ಕೇಳಿದೆ ದೀನಜನಬಂಧುವೆಂದು ನಂಬಿ ವಂದಿಪೆ 	ಅ ಪ
ಮಲಿನಜನರ ಸೇರಿ ಕೆಟ್ಟೆ ವರ್ಣಾಶ್ರಮ ಧರ್ಮ ತಿಳಿದಾಚರಿಸದೆ ಬಿಟ್ಟೆ 
ಹಲವು ನಾನಾ ಬಗೆಯ ರೋಗದ ಸುಳಿಯ ಶೂಲದ ಬಲೆಗೆ ಒಳಗಾದೆ
ಇಳಿಯೊಳಿನ್ನ ಕರುಣಿಗಳ ಕಾಣೆ ಛಲವು ತೋರದೆ ಒಲಿದು ದಯದಲಿ 	1
ಚೂತರಸದಿ ಬಿದ್ದ ಶಿಶುವು ಅಸುನೀಗಲಾಕ್ಷಣ ಮಾತರಿಶ್ವನಮಂತ್ರವ
ಖ್ಯಾತ ಜಪಿಸಿ ಅವನ ಉಳುಹಿದೆ ಭೀತಳಾದ ಪ್ರಸೂತಿ ಕಾಯ್ದವ
ಪ್ರಾರ್ಥಿಸೆ ಭೂನಾಥಜಾತೆಗೆ ನೀತಮಹಿಮನೆ ಪ್ರಾಣದಾತನೆ 	2
ಪ್ರಹ್ಲಾದ ಗುರುರಾಜಾ ಅವತರಿಸಿ ಬಂದೆ ಬಾಹ್ಲೀಕ ವ್ಯಾಸರಾಜಾ
ಚೆಲ್ವ ನ್ಯಾಯಾಮೃತವ ಮತ್ತೆ ಒಳ್ಳೆ ಚಂದ್ರಿಕಾ ತರ್ಕತಾಂಡವ
ಮಲ್ಲ ರಚಿಸಿದ ರಾಘವೇಂದ್ರನೆ ಕಳ್ಳ ಶ್ರೀಲಕುಮೀಶನೂಲಿಸಿದ 	3
							

390 ರಥವೇರಿ ಬಂದಾ ನೋಡೆ

390.	ರಾಗ: [ಕೇದಾರಗೌಳ]	ತಾಳ: [ಆದಿ] 
ರಥವೇರಿ ಬಂದಾ ನೋಡೆ ಶ್ರೀ ರಾಘವೇಂದ್ರನು 	ಪ
ರಥವೇರಿ ಭಕುತರ ಜಿತಸ್ತುತಿಗೊಲಿದು ಸುಗತಿಯಗೋಸುಗ
ಮಾಪತಿಯ ಧ್ಯಾನವಿತ್ತು ಪತಿತ ಕುಚ್ಛಿತವಾದಿ ಅತಿತತಿ ಗೆಲ್ಲುತ	ಅ.ಪ
ಪೂರ್ವಾದಿ ಈತನು ಮಾತೃಗರ್ಭದಿ ಇದ್ದು
ನಾರಾಯಣ ಶ್ರೀಮಂತ್ರ ನಾರಾದರಿಂದ ತಿಳಿದೂ
ಮಾರಜನಕನಂಘ್ರಿ ಸಾರಿ ಸ್ತುತಿಸಿ ದಯಾವಾರಿಧಿ
ಈಜುತ ಘೋರ ರಕ್ಕಸ ಪಿತಗೇ ನಾರಸಿಂಹನನು
ತೋರುತ ಸ್ತಂಭದಿ ಬಾರಿಬಾರಿಗೆ ತನ್ನನ್ನಾರಾಧಿಪರ
ಮೀರಿದ ಅಘಮರ ಬೇರ ಕೀಳಿ ಭಯ ದೂರಗೈದು
ಹರಿ ವಾರಿಜನಾಭನ ತೋರಲು ಪ್ರಹ್ಲಾದ	1
ಯದುರಾಜ ಕೃಷ್ಣನ ಮುದದಿಂದ ಭಜಿಸಲು
ಮುದಮುನಿಮತ ನೀರಧಿಗೆ ಶಶೀಎನಿಸೀ
ಬುಧ ಬ್ರಹ್ಮಣ್ಯಯತಿ ಪದುಮಾಕರೋದ್ಭವ
ವಿಧಿಕುಲಕುಮುದಕೆ ಸದಮಲ ಹರುಷ ಕೊಡುತಾ
ಅಧಮ ಕುಹಕಮತ ಕದಳಿವನಕೆ ಈತ ಮದಗಜನೆನಿಸುತ
ವಿಧಿಸುತನಂಶಗೆ ಅಬ್ಧಿಶಯ್ಯನ ತೋರಿ ನದಿಪಿತ
ಪದಪದ್ಮ ಮಧುಪ ವ್ಯಾಸರಾಜ 	2
ಈ ಮಹಾಮಹಿಮ ಮತ್ತೆ ಸ್ವಾಮಿ ಗುರುರಾಘವೇಂದ್ರನ
ನಾಮಾದಿ ಮೆರೆದು ಮೂಲರಾಮಾದೇವಾನ ಅರ್ಚಿಸಿ
ಶ್ರೀಮತ್ ಸುಧಾ ಸುಮದ ಕಾಮಿತ ಪರಿಮಳವ
ತಾ ಮಂದಮಾರುತನಂತೆ ಭೂಮಿಸುರರಿಗೆ ಬೀರುತಾ
ಶ್ರೀಮಂತ್ರಗೃಹಪಾದ ಕಾಮಧೇನುವೆನಿಸಿ ಪ್ರೇಮದಿ ತನ್ನನು 
ನೇಮದಿ ಭಜಿಸುವ ಪಾಮರರನು ಉದ್ಧಾರಗೈದು ಬಲು 
ಕಾಮಿತವೀಯುತ ಸಾಮಜಪಾಲ ಲಕುಮೀಶನ ಸ್ತುತಿಸುತ 	3
							

391 ಶ್ರೀ ಗುರುರಾಜನೆ ಪಾಲಿಸೋ

391.	ರಾಗ: [ಕಾನಡ]	ತಾಳ: [ಆದಿ]
ಶ್ರೀ ಗುರುರಾಜನೆ ಪಾಲಿಸೋ ಎನ್ನನು 	ಅ
ಬಾಗಿ ನಿನ್ನನು ಬಗೆಬಗೆ ಪೊಗಳುವೆ 
ಜಾಗುಮಾಡದೆ ಪದ ಈಗಲೇ ತೋರಿಸೋ 	ಅ ಪ
ತುಂಗಾತಟನಿಲಯ ಶ್ರೀನರಸಿಂಗಮೂರ್ತಿಯ
ಹಿಂಗದೆ ಧ್ಯಾನಿಪ ಮಹಿಮನೆ
ಭಂಗಪಡಿಪ ದುಸ್ಸಂಗವ ಕಳೆಯೋ 	1
ಬೃಂದಾವನದಿಂದಲಿ ಮಂತ್ರಮಂದಿರನೆ ಸದನ-
ಎಂದೆನಿಸುತ ಸಲೆ ಬಂದ ಭಕುತರಿಗೆ ತಂದೆ ನೀ 
ಅಂದದಿ ವರವಿತ್ತು ಪೋಷಿಪ 	2
ಮೂಲರಾಮರ ರಾಜಿಪ ಪದಕೀಲಾಲಜ ಭ್ರಮರ
ಕೇಳೊ ಮೊರೆಯ ವಿಶಾಲ ಶುಭಗುಣನೆ
ಕಾಳಿಮಥನ ಲಕುಮೀಶನ ತೋರೋ 	3
							

392 ಸಡಗರದಲಿ ಬಂದಾ ಶ್ರೀ ರಾಘವೇಂದ್ರ

392.	ರಾಗ: [ಕುಂತಲವರಾಳಿ]	ತಾಳ: [ಆದಿ] 
ಸಡಗರದಲಿ ಬಂದಾ ಶ್ರೀ ರಾಘವೇಂದ್ರ 	ಪ
ಸಡಗರದಲಿ ಬಂದಾ ಒಡೆಯ ರಾಘವೇಂದ್ರ
ದೃಢಭಕುತಿಲಿ ತನ್ನಡಿ ಭಜಿಪರ ಭವ
ಕಡಲ ದಾಟಿಸುವ ನಾವಿಕ ತಾನೆಂದು 	ಅ ಪ
ಒಂದನೇ ಯುಗದಿ ಗೋವಿಂದನಾಜ್ಞೆಯಿಂದ
ಬಂದಾ ಕಯಾದುಗರ್ಭದಿಂದ ಪ್ರಹ್ಲಾದನೆನಸಿ
ನಂದನಂದನಪಾದ ಒಂದೇ ಮನದಿ ಭಜಿಸೆ 
ತಂದೆ ಕೋಪದಿಂದ ಕಂದಗೆ ಇಂತೆಂದನು 
ಅಂದು ನಿನ್ನ ಕಿರಿತಂದೆಯ ಕೊಂದ ಹಂದಿರೂಪಿ ಹರಿ 
ಎಂದು ನಿಂದಿಸಲು ತಂದೆಗೆ ನರಹರಿಯ ಅಂದು 
ಸ್ತಂಭದಿ ತೋರಿ ವಂದಿಸಿ ನಲಿದಾನಂದದಾಯಕನೆ 	1
ರವಿತೇಜದಿ ಈತ ಭುವಿಯೊಳಗೆ ಜನಿಸಿ
ಸುವ್ಯಾಸರಾಜನೆನಿಸಿ ಪವನೇಶರಾ ಒಲಿಸಿ 
ಸುವರ್ಣ ರತ್ನಮಯ ಸಿಂಹಾಸನೇರಿ ಮೆರದು
ಅವನೀಪತಿಗೆ ಬಂದ ಕುಹಯೋಗವ ತರಿದು
ಭಾವಜನಯ್ಯನ ಭಾವಭಕುತಿಲಡಿದಾವರೆ ಭಜಿಸುತ
ಅದ್ವೈತಾಹಿಗೆ ಗೋವಕಾವನ ವಾಹನನೆನಸಿಸುತ 
ಪಾವನಚಂದ್ರಿಕೆ ಕೋವಿದರಿಗೆ ಸುಶ್ರಾವ್ಯದಿ ಪೇಳುತ 	2
ಸುಂದರವಾದ ಮಂತ್ರಮಂದೀರದಲ್ಲಿ ರಾಘವೇಂದ್ರಮುನಿನಾಮ-
ದಿಂದ ವಿರಾಜಿಸುತ ತಂದೆ ಲಕುಮೀಶನಾನಂದದಿ ಪಾಡುತ
ವಂದಾರುನೂರುವರ್ಷ ಬೃಂದಾವನದಿ ಇದ್ದು
ಬಂದ ಭಕ್ತರ ದೋಷವೃಂದವ ಕಳೆಯುತ ವಂದಿಪ
ವಂಧ್ಯಗೆ ಕಂದರ ಕೊಡುತಲಿ ಸುಂದರ ಕಂಗಳ
ಅಂಧಕರಿಗೆ ಇತ್ತು ಒಂದುನವಸ್ಯಂದನನಂದನನರ್ಚಿಸಿ
ಮಂದಜಾಸನಮತ ಛಂದದಿ ಸಾರುತ 	3
							

393 ಸುಧೀಂದ್ರಕಂದ ಛಂದದಿಂದ ಬಂದ

393.	ರಾಗ: [ಶಿವರಂಜಿನಿ]	ತಾಳ: [ಆದಿ]
ಸುಧೀಂದ್ರಕಂದ ಛಂದದಿಂದ ಬಂದ ಬೃಂದಾವನದಿಂದ
	ಬಂದಾ ಬೃಂದಾವನದಿಂದ 	ಪ
ಒಂದೇ ಮನದಿಂದ ವಂದಿಪ ಜನರಿಗಾ-
ನಂದವ ನೀಡಲು ನಂದನಂದನ ಪ್ರಿಯಾ 	1
ಇಂದಿರೆಯರಸ ಗೋವಿಂದನ ಒಲಿಸುತ
ಗಂಧ ತುಲಸಿ ಮಾಲದಿಂದೊಪ್ಪುತಲಿ ಗುರು 	2
ಪರಿಮಳ ರಚಿಸುತ ಧರೆಯೊಳು ಬೀರುತ
ಹರುಷದಿ ಸುಜನರ ಪೊರೆಯುತಲಿ ಯತಿ 	 3
ಪರಮಪಾವನಚರಿತ ದುರಿತಗಳ ತರಿವಾತ
ವರಮಂತ್ರಗೃಹನಾಥ ಶ್ರೀ ರಾಘವೇಂದ್ರದಾತ 	4
ಹಿಂದಕೆ ಪ್ರಹ್ಲಾದ ಎಂದೆನಿಸಿ ಪಿತಗೆ
ಸಿಂಧೂರವರದ ಮುಕುಂದಾನ ತೋರಿದ 	5
ವ್ಯಾಸರಾಜನೆನಿಸಿ ಭೂಸುರರ ಪೋಷಿಸಿ
ಶ್ರೀಸುಧಾಮಸಖ ವಾಸುದೇವನ ಭಜಿಸಿ 	6
ಸುಕುಮಾರ ಸುಂದರ ಲಕುಮೀಶ ದೇವನೆ
ಲೊಕಗಳಿಗೆಲ್ಲ ಏಕದೈವವೆನುತ 	7
							

394 ಹರುಷದಲಿ ಕರಪಿಡಿಯೋ

394.	ರಾಗ: [ದ್ವಿಜಾವಂತಿ]	ತಾಳ: [ಖಂಡಛಾಪು]
ಹರುಷದಲಿ ಕರಪಿಡಿಯೋ ಗುರು ರಾಘವೇಂದ್ರ 	ಪ
ಕರುಣದಿಂದಲಿ ನಿನ್ನ ಚರಣಸೇವೆಯ ನೀಡೀ
ದುರಿತರಾಶಿ ತರಿದು ಹರಿಯ ಹೃದಯದಿ ತೋರಿ 	ಅ ಪ
ಮೊದಲ ಯುಗದೊಳು ನೀನು ಉದಯಿಸುತ ಸಂತಸದಿ
ವಿಧಿಪಿತನಭಕುತ ಪ್ರಹ್ಲಾದನೆನಿಸಿ ಅಧಮ ನಿನ್ನ ಪಿತನು 
ಬದಿಯ ಸ್ತಂಭವ ಬಡಿದು ವದಗಿಸೋ ಹರಿ ಎನಲು 
ಮುದದಿಂದ ನರಹರಿಯ ತೋರಿದಿಯೋ ನೀನು 	1
ವಸುಧೆಯೊಳಗೇ ಮತ್ತೆ ವ್ಯಾಸರಾಜನೆನಿಸಿ
ಶ್ರೀಸಮೀರಮತಾಬ್ಧಿ ಭೇಶನೆನಿಸೀ 
ಅಸಮ ಪಂಡಿತನೆನಿಸಿ ನೀ ಸಚ್ಚಂದ್ರಿಕೆ ರಚಿಸಿ
ಅಸುರಾರಿ ಹರಿಪಾದ ಬಿಸಜಕರ್ಪಿಸಿದಾತ 	2
ಪರಿಮಳಾರ್ಯನೆ ನಿನ್ನ ನಿರುತ ಸೇವಿಪರಿಷ್ಟ-
ಗರೆಯುತಲಿ ಮಂತ್ರಮಂದಿರದಿನೆಲಸಿ
ಸುರಗಂಗೆಪಿತ ನಮ್ಮ ಸಿರಿಲಕುಮೀಶನೆ
ಸರ್ವೋತ್ತಮನೆಂದು ಧರೆಯೊಳಗೆ ಬೀರಿದಾ ಗುರು 	3
							

395 ಹಿಡಕೋ ಬಿಡಬೇಡ

395.	ರಾಗ: [ಬಹುದಾರಿ]	ತಾಳ: [ಆದಿ] 
ಹಿಡಕೋ ಬಿಡಬೇಡ ಶ್ರೀ ರಾಘವೇಂದ್ರರ ಪಾದ 	ಪ
ಪೊಡವಿಜ ರಮಣನ ದೃಢ ಕರುಣಕವಚವ
ಎಡೆಬಿಡದೆ ಧರಿಸಿದ ಒಡೆಯ ರಾಯರಪಾದ 	ಅ ಪ
ಕೃತಯುಗದಲಿ ಈತ ಮಾತೆ ಗರ್ಭದಲಿರೆ
ಚತುರವದನಸುತ ಇವರಿಗೆ ಶೃತಿನುತ ತತ್ತ್ವ
ಮಂತ್ರವ ಪೇಳಲು ತನ್ನ ಪಿತಗೆ ಹರಿಯ ತೋರಿ
ಗತಿಕೊಡಸಿದರಂಘ್ರಿ 	1
ವಸುಧಿಲಿ ವ್ಯೆಷ್ಣವ ಬಿಸಜಕೆ 
ವ್ಯಾಸರಾಜ ಭಾಸುರತೇಜದ ಭಾಸ್ಕರನೆಂದೆನಿಸಿ 
ಸಾಸಿರನಾಮನ ಲೇಸಾಗಿ ಪಾಡುತ 
ರಾಶಿ ರತ್ನದಭಿಷೇಕಗೊಂಡವರಂಘ್ರಿ 	2
ಗುರುಸುಧೀಂದ್ರರ ದಿವ್ಯಕರಕಮಲಜರೆನಿಸಿ
ವರಹಜತಟದೊಳಗೆ ಎಸೆವಾ ವರಮಂತ್ರಗೃಹದೊಳು
ನರಹರಿಯ ಧ್ಯಾನದಿ ಶರಣರ ಕಲ್ಪ-
ತರುವೆನಿಸಿದರಂಘ್ರಿ	3
ಭಾರತಿಪತಿಶಾಸ್ತ್ರವಾರಿಧಿ ಈಜುತ ಪರಿಮಳ ಸದ್ಗ್ರಂಥ
ವಿರಚಿಸುತ ಮೊರೆಹೊಕ್ಕ ಭಕುತರ 
ಕರಪಿಡಿದು ಕಾಯುತ ಹರಿಭಕ್ತಿಇತ್ತು ಮುಕ್ತಿಪಥವ ತೋರುವರಂಘ್ರಿ 	4
ಪ್ರತಿದಿನ ಪ್ರತಿಕ್ಷಣಕೆ ಅತಿವೈಭವದಿಂದ 
ಭಕ್ತರಿಂದಲಿ ಸೇವೆ ಕೈಗೊಳುತ ಯತಿಯಲಿ ಲಕುಮೀಶ
ಚತುರರೂಪದಿ ನಿಂತು ಅತಿಶಯ ವರವೀವಕಥೆ ತಿಳಿದವರಂಘ್ರಿ 	5
91. ಲಕ್ಷ್ಮೀಪತಿವಿಠಲ 
							

396 ಈತನೇ ಗುರು ರಾಘವೇಂದ್ರಾಖ್ಯಾತ

396.	ರಾಗ: ಶಂಕರಾಭರಣ	ತಾಳ: ಅಟ
ಈತನೇ ಗುರು ರಾಘವೇಂದ್ರಾಖ್ಯಾತ ಕಾಣಿರೋ	ಪ
ವಾತಮತದುಗ್ಧಾಬ್ಧಿಚಂದ್ರ ಸು-
ಖಾತಿಶಯಗಳನೀವ ನಿರುತ	ಅ.ಪ
ಹಿಂದೆ ಹೇಮಕಶ್ಯಪನಸುತ-
ನೆಂದು ಕರೆಸಲು ಓಂ ನಮಃ ಶಿವ
ಎಂದು ಬರೆಯಲು ಹೇಳಲಾಪಿತನು
ನಾರಾಯಣನೆ ಪರನೆಂದು ಬರೆಯಲು ರೋಷದಲಿ ಖಳನು
ತೋರೆಲವೊ ಸ್ತಂಭದಿ ಇಂದು ನಿನ್ನನು
ಕಾವದೇವರನು ಎಂದೆನ್ನಲವನು
ಇಂದಿರೇಶನ ದ್ವಂದ್ವರೂಪವ
ಅಂದು ತೊರಿದ ಮಹಿಮನು	1
ವ್ಯಾಸಮುನಿಯಾಗವತರಿಸಿ ಜೀ-
ವೇಶರೊಂದೆಂಬ ಮಾಯಿಗಳ ಕು- 
ಭಾಷ್ಯಗಳೆಲ್ಲ ತಾ ಕೆಡಿಸಿ ಸರ್ವಜ್ಞಶಾಸ್ತ್ರವ 
ಲೇಸಿನಲಿ ಸಜ್ಜನಕೆ ಬೋಧಿಸಿ ದುವಾರ್ದಿಗಳ ಸ-
ಚ್ಛಾಸ್ತ್ರವೆಂಬಸಿಯಲ್ಲಿ ಖಂಡ್ರೀಸಿ
ಹರಿಪ್ರೀತಿಗೊಳಿಸಿ
ಕೇಶವನೆ ಪರನೆಂದುಸಾರುತ 
ದಾಶರಥಿ ನಿಜದಾಸ್ಯ ಪಡೆದ	2
ವರಹದಂಷ್ಟ್ರಜಯಳಸು-
ತೀರದಲಿರುವ ಮಂತ್ರಾಲಯದ ಸ್ಥಳದೀ
ವರಸುವೃಂದಾವನದಿ ರಾಜಿಸುತ ಭೂ-
ಸುರರು ಮಾಡುವ ಪರಮ ಆರಾಧನೆಯ ಕೈಗೊಳುತಾ
ತ್ರಿವಿಧರ್ಗೆ ತಕ್ಕ ವರಗಳನುದಿನದಲ್ಲಿ ನೀಡುತ್ತ
ಜಗದೊಳು ಪುನೀತಾ
ಗುರುಸುಧೀಂದ್ರಸುತೀರ್ಥರ ಸಿರಿ
ಕರಕಮಲಸಂಜಾತ ಪ್ರೀತಾ	3
ಮೆರೆವ ದ್ವಾದಶನಾಮ ಮುದ್ರೆಯು
ಕರದಿ ದಂಡಕಮಂಡಲವು ಶ್ರೀ
ತರಳತುಳಸೀಸರವು ಕೊರಳಲ್ಲಿ ಶ್ರೀ-
ಹರಿಯ ಧ್ಯಾನವು ನಿರುತಮಾಡುತ ಮನದಲ್ಲಿ
ಸುಕ್ಷೇತ್ರತೀರ್ಥಕ್ಕೆ ಸರಿಮಿಗಿಲು ಎನಿಸುತ್ತಲಿಹರಿಲ್ಲಿ
ಇವರ ಅಂಘ್ರಿಯಲೀ
ನಿರುತ ಸೇವೆ ಮಾಳ್ಪ ಜನರಿಗೆ
ಪರಮ ಸುಖಗಳನೆ ಕೊಡುವರಿಲ್ಲಿ	4
ಚತುರವಿಧ ಫಲಗಳನು ಕೊಡುತ
ಯತಿಶಿರೋಮಣಿನಾಮದಲಿ ಶ್ರೀ-
ಪತಿಯು ತಾನೇ ಚಕ್ರರೊಪದಲೀ ಇವರಲಿ ನಿಂತು
ಕೃತಿಯನಡೆಸುವ ಸರ್ವಕಾಲದಲೀ ಈ ಮಹಿಮೆಯನು ನಾ
ತುತಿಸಬಲ್ಲೆನೆ ಅಲ್ಪಮತಿಯಲ್ಲೀ
ಸದ್ಭಕ್ತಿಯಲೀ
ತುತಿಸುವರ ಪಾಲಿಸುವ ಲಕ್ಷ್ಮೀ-
ಪತಿವಿಠಲ ಸತ್ಕರುಣದಲ್ಲಿ	5
92. ವರದೇಂದ್ರವಿಠಲ 
							

397.ರಾಘವೇಂದ್ರರೆ ನಿಮ್ಮ ಪಾದವ ಬಾಗಿ ಭಜಿಸುವೆ

 397.	ರಾಗ: ಶ್ರೀ	ತಾಳ: ತ್ರಿವಿಡಿ
ರಾಘವೇಂದ್ರರೆ ನಿಮ್ಮ ಪಾದವ
ಬಾಗಿ ಭಜಿಸುವೆ ತೋರುವದೈ	ಪ
ನಾಗಶಯನ ತುತಿಸಿ ಸುಖಿಪ
ಭಾಗವತರೊಳಗಾಡಿಸೈ	ಅ.ಪ
ಶ್ರೀಸುಧೀಂದ್ರಕರಜರೆನಿಪ
ಶ್ರೀಸಮೀರಮತಚಂದ್ರಮಾ
ಶೇಷಶಯನನ ಪೂಜಿಸುವ ನಿ-
ರ್ದೋಷ ಗುರುಕುಲಸುರದ್ರುಮಾ	1
ಮಂಗಳಾಂಗರೆ ನಿಮ್ಮ ದರ್ಶನ
ಕಂಗಳಿಗೆ ಇತ್ತು ಬೇಗನೆ
ಹಿಂಗಿಸೈ ಭವತಾಪ ಗುರುವರ
ತುಂಗತೀರನಿವಾಸನೆ	2
ಪರಮತೋಕ್ತಿಯ ಖಂಡಿಸುತ
ಪರಿಮಳಾಖ್ಯ ಗ್ರಂಥವಾ
ವಿರಚಿಸಿ ಧರಾಸುರರಿಗೆಲ್ಲಾ
ಹರುಷ ನೀಡಿದಿ ಮುನಿವರ	3
ನಿನ್ನ ಪಾದೋದಕವ ಕೊಳ್ಳಲು
ಬನ್ನಬಡಿಪವೆ ದುರಿತವು
ಜನ್ಮಜನ್ಮಾಂತರದ ಪಾತಕ
ಮುನ್ನ ಪೋಗ್ವದು ಸತ್ಯವು	4
ಅಂಧ ಕುಷ್ಠಾವ್ಯಾಧಿಗ್ರಸ್ತರು
ಚಂದದಿಂದಲಿ ಪ್ರತಿ ದಿನಾ
ವೃಂದಾವನವನಂಬಿ ಯಜಿಸೆ
ಬಂದ ಬಂಧ ವಿನಾಶನಾ	5
ಮಾಸ ಶ್ರಾವಣ ವದ್ಯ ದ್ವಿತಿಯದಿ
ಸಾಸಿರಾರು ಭೂದಿವಿಜರು
ಸೋಸಿನಿಂದಲಿ ಪಾಡಿ ಪೀಡಿಪ
ಕ್ಲೇಶಪಾಶ ಕೀಳ್ವರೋ	6
ಗುರುವೆ ನಿಮ್ಮಯ ಸ್ತೋತ್ರರತ್ನವ
ಸರುವಕಾಲದಿ ಪಠಿಸಲು
ಕರುಣದಿಂದಲಿ ಪೊರೆವನವರ
ಸಿರಿವರದೇಂದ್ರವಿಠಲನು	7
93. ವರದೇಶವಿಠಲ
							

398 ವಿನಯದಿಂದಲಿ ನಮಿಸುವೆನಾ

398.	ರಾಗ: ಧನಶ್ರಿ	ತಾಳ: ಅಟ
ವಿನಯದಿಂದಲಿ ನಮಿಸುವೆನಾ ವೃಂದಾ
ವನದಿ ರಾಜಿಪ ರಾಘವೇಂದ್ರ ಗುರುವರನ	ಪ
ದುರಿತವಾರಣ ಪಂಚಾನನನ ನರ-
ಹರಿರೂಪ ಸ್ತಂಭದಿಪ್ರಕಟಗೈಸಿದನ
ಹರಿಭಕ್ತಾಗ್ರಣಿಯೆಂದೆನಿಪನ ನಾರ-
ದರ ಉಪದೇಶ ಗರ್ಭದಿಕೈಕೊಂಡಿಹನ	1
ಸಿರಿವ್ಯಾಸತೀರ್ಥರೆನಿಪನ ಪುರಂ-
ದರ ದಾಸಾರ್ಯರಿಗುಪದೇಶಗೈದವÀನ
ವರಚಂದ್ರಿಕಾ ರಚಿಸಿದನ ದುಷ್ಟ
ಪರಮತಾದ್ರಿಗಳಿಗೆ ಕುಲಿಶನೆನಿಪನ	2
ಶ್ರೀ ಸುಧೀಂದ್ರ ಕರಾಬ್ಜಜನ ದಿವ್ಯ
ಭಾಸುರ ಪರಿಮಳ ಗ್ರಂಥಕರ್ತರನ-
ಮೀಸಲ ಮನದಿ ಭಜಿಪರನ ದೋಷ-
ನಾಶನ ಗೈಸಿ ಪೋಷಿಸುವಶಕ್ತರನ	3
ವರ ಮಂತ್ರಸದ್ಮನಿಲಯನ ಶ್ರೀ
ಗುರು ಮಧ್ವಮತ ದುರಂಧರನೆನಿಸುವನ
ಹರಿ ಪ್ರೀತಿ ಪೂರ್ಣ ಪಾತ್ರರನ ಈ
ಧರೆಯೊಳು ಬಹುಪರಿ ಮೆರೆವ ಮುನಿಪನ	4
ತುಂಗಭದ್ರತೀರವಾಸನ ಶುಭ
ಮಂಗಳಚರಿತ ಕಮಂಡಲಧರನ
ರಂಗವರದೇಶವಿಠಲನ ಪದ
ಭೃಂಗ ಯತಿಕುಲ ಕಂಜಾರ್ಕ ಸನ್ನಿಭನ	5
94. ವಾಸುದೇವಕೃಷ್ಣವಿಠಲ 
							

399 ಕಂಡೆ ಕಂಡೆ ಬೃಂದಾವನವನು ಕಂಡೆ

399.	ರಾಗ: ಮೋಹನ	ತಾಳ: ಆದಿ
ಕಂಡೆ ಕಂಡೆ ಬೃಂದಾವನವನು ಕಂಡೆ	ಪ
ಕಂಡೆ ಕಂಡೆ ಶ್ರೀರಾಘವೇಂದ್ರಯತಿಗಳ ಪ್ರ-
ಚಂಡ ಮಾರುತನ ಎದುರಿಗೆ ನಿಂತವರ	ಅ. ಪ
ಕರದೊಳು ಜಪಮಣಿ ಧ್ಯಾನದೊಳಿರುವ
ಕೊರಳಲಿ ತುಳಸಿಯಮಾಲೆಯನು
ಕೋರಿದವರಿಗೆ ಕರೆದು ಅಭಯನೀವ
ಕರುಣಾಸಾಗರ ನಮ್ಮ ಗುರುರಾಜರ ನಾ 	1
ಚಂದದಿ ಕಾವಿಯ ಧರಿಸಿ
ಚಂದ್ರಿಕೆ ಬರೆದ ಕುಂದಣಕಾಯದ ಮುನಿಯನು ಕಂಡೆ
ಕುಂದದೆ ರಾಜನ ಕುಹಯೋಗವ ಹರಿಸಿದ 
ಚಂದ್ರವದನ ನಮ್ಮ ವ್ಯಾಸರಾಜರ ನಾ 	2
ಹುಸಿಯಮಾತಲ್ಲ ಈ ಕೂಸಿನ ಮಹಿಮೆಯು
ವಿಷವನು ಕುಡಿಸಿದ ಪಿತನ ಮಾತಿಗೆ 
ವಾಸುದೇವಕೃಷ್ಣವಿಠಲನ ತೋರಿದ
ಲೇಸಾಗಿ ಪ್ರತಿದಿನ ಉತ್ಸವದಲಿ ಮೆರೆಯುವ ಪ್ರಹ್ಲಾದರಾಜರ ನಾ 	3
95. ವಿಠಲೇಶ
							

400 ಎಂದು ಕಾಂಬೆ ಗುರುವೆ ದೊರೆಯೆ

400.	ರಾಗ: ದುರ್ಗ	ತಾಳ: ಆದಿ
ಎಂದು ಕಾಂಬೆ ಗುರುವೆ ದೊರೆಯೆ	ಪ
ಎಂದು ಕಾಂಬೆ ನಿನ್ನ ಚಂದಿರಮುಖಸಿರಿ
ತಂದೆ ಶ್ರೀ ರಾಘವೇಂದ್ರ ಇಂದು ದಯವ ತೋರೊ	ಅ.ಪ
ಘೋರಸಂಸಾರದಲ್ಲಿ ಜಾರಿಹೋಯಿತು ಕಾಲ
ಸಾರಿ ಕೇಳುವೆ ಸುಕುಮಾರ ಪ್ರಹ್ಲಾದ ನಿನ್ನ ಎಂದು	1
ನಾನಾರೋಗಗಳಲ್ಲಿ ಕ್ಷೀಣವಾಯಿತು ದೇಹ
ಏನು ಸ್ಥಿರವೋ ತನು ಮೌನಿವ್ಯಾಸನೆ ನಿನ್ನ ಎಂದು	2
ಕ್ಲೇಶಕಷ್ಟಗಳಲ್ಲಿ ಮಾಸಿಹೋಯಿತು ಬುದ್ಧಿ
ದೈಶಿಕವರ ವಿಠಲೇಶದಾಸನೆ ನಿನ್ನ ಎಂದು	3
							

401 ಕಾಯೋ ಶ್ರೀ ಗುರುರಾಯಾ ದೇವಾ

401.	ರಾಗ: ಮಿಶ್ರ	ತಾಳ: ಕವ್ವಾಲಿ
ಕಾಯೋ ಶ್ರೀ ಗುರುರಾಯಾ ದೇವಾ ಕಾಯೋ ಶ್ರೀ	ಪ
ಮಂತರಮಂದಿರ ರಾಘವೇಂದ್ರರಾಯಾ
ಕಂತುಪಿತನ ಕೃಪೆ ಸಂಪದ ಶ್ರೇಯಾ
ಶಾಂತಿ ಕಡಲ ದಯವಂತ ಸುದೇವಾ
ಚಿಂತೆಯ ಪರಿಹರಿಸೆದೋ(?) ದೇವಾ ಕಾಯೋ ಶ್ರೀ	1
ತುಂಗಾತೀರದಿ ತಂಗಿದ ರಾಯಾ
ಪೊಂಗಳಲೂದುವ ರಂಗನ ಪ್ರೀಯಾ
ಇಂಗಿತಗರೆವ ಸುಮಂಗಳ ಕಾಯಾ
ಹಿಂಗಿಸೋ ತಾಪಗಳಾ ದೇವಾ ಕಾಯೋ ಶ್ರೀ	2
ಬೃಂದಾವನದೊಳು ನಿಂದಿಹ ರಾಯಾ
ಸುಂದರ ಸುರಪನ ಮಂದಿರ ಛಾಯಾ
ಕುಂದದೆ ಹರಿವಿಠಲೇಶ ಸುಧ್ಯೇಯಾ
ಬಂಧನ ಬಿಡುಗಡಿಸೋ ದೇವಾ ಕಾಯೋ ಶ್ರೀ	3
							

402 ಕೋರಿ ಕರೆವೆ ಗುರು ಶ್ರೀ ರಾಘವೇಂದ್ರನೆ

402.	ರಾಗ: ಮಧ್ಯಮಾವತಿ	ತಾಳ: ಆದಿ
ಕೋರಿಕರೆವೆ ಗುರು ಶ್ರೀ ರಾಘವೇಂದ್ರನೆ
ಬಾರೋ ಮಹಾಪ್ರಭುವೇ	ಪ
ಚಾರುಚರಣಯುಗ ಸಾರಿ ನಮಿಪೆ ಬೇಗ
ಬಾರೊ ಹೃದಯಸುಜಸಾರ(?)ರೂಪವ ತೋರೊ	ಅ.ಪ
ಎಲ್ಲಿ ನೋಡಲು ಹರಿ ಅಲ್ಲಿ ಕಾಣುವನೆಂದು
ಕ್ಷುಲ್ಲ ಕಂಭವನೊಡೆದು
ನಿಲ್ಲದೆ ನರಹರಿ ಚೆಲ್ವಿಕೆತೋರಿದ
ಫುಲ್ಲಲೋಚನ ಶಿಶು ಪ್ರಹ್ಲಾದನಾಗಿ ಬಾರೋ	1
ದೋಷಕಳೆದು ಸಿಂಹಾಸನವೇರಿದ
ದಾಸಕುಲವ ಪೊರೆದ
ಶ್ರೀಶನರ್ಚಕನಾಗಿ ಪೋಷಿಸಿ ಹರಿಮತ
ವ್ಯಾಸತ್ರಯವಗೈದ ವೇಶತಳೆದು ಬಾರೋ	2
ಮೂಜಗಮಾನಿತ ತೇಜೋವಿರಾಜಿತ
ಮಾಜದ ಮಹಮಹಿಮ
ಓಜಗೊಳಿಸಿ ಮತಿ ರಾಜೀವ ಬೋಧದಿ
ಪೂಜೆಗೊಂಬುವ ಗುರುರಾಜರೂಪದಿ ಬಾರೋ	3
ಮಂತ್ರಸದನದೊಳು ಸಂತಸುಜನರಿಗೆ
ಸಂತೋಷ ಸಿರಿಗರೆದು
ಕಂತುಪಿತನಪದ ಸಂತತಸೇವಿಪ
ಶಾಂತಮೂರುತಿ ಎನ್ನಂತರಂಗದಿ ಬಾರೋ	4
ಈಸಮಯದಿ ಎನ್ನಾಶೆ ನಿನ್ನೊಳು ಬಲು
ಸೂಸಿ ಹರಿಯುತಿಹುದು
ಕೂಸಿಗೆ ಜನನಿ ನಿರಾಶೆಗೊಳಿಸುವಳೆ
ದೋಷಕಳೆದು ವಿಠಲೇಶಹೃದಯ ಬಾರೋ	5
							

403 ಗುರುರಾಘವೇಂದ್ರ ನಮೊ

403.	ಜಾನಪದಗೀತೆ
ಗುರುರಾಘವೇಂದ್ರ ನಮೊ
ಗುರುರಾಘವೇಂದ್ರ ನಮೋ ಗುರುರಾಘವೇಂದ್ರ ನಮೋ 	ಪ
ಗುರುರಾಘವೇಂದ್ರ ವರಯೋಗಿ
ಗುರುರಾಘವೇಂದ್ರ ವರಯೋಗಿ ಸುಗುಣವೈರಾಗಿ ಭಕುತ ಹಿತಕಾಗಿ
ಅವತರಿಸಿ ಬಂದೆ ಯತಿಚಂದ್ರಾ ಗುರುರಾಘವೇಂದ್ರ ನಮೋ 	1
ಪಿತನಿಂದ ಬಹಳ ವ್ಯಥೆಯಾಗಿ
ಪಿತನಿಂದ ಬಹಳ ವ್ಯಥೆಯಾಗಿ ಹರಿಯನೆರೆಕೂಗಿ ಕಂಬಗುಡುಗಾಡಿ
ನರಹರಿಯ ತಂದ ಹಸುಳೇಂದ್ರಾ ಗುರುರಾಘವೇಂದ್ರ ನಮೋ 	2
ಕುಹಯೋಗವಕಳೆದ ದಿವಿಯೋಗಿ
ಕುಹಯೋಗವಕಳೆದ ದಿವಿಯೋಗಿ ಧರೆಗೆ ಧೊರೆಯಾಗಿ ಧರ್ಮಪ್ರಭುವಾಗಿ
ಕರಿನಾಡನಾಳ್ದ ರಾಜೇಂದ್ರಾ ಗುರುರಾಘವೇಂದ್ರ ನಮೋ 	3
ಸುರಧೇನು ಕಲ್ಪತರುವಂತೆ
ಸುರಧೇನು ಕಲ್ಪತರುವಂತೆ ಭಕುತಮನದಂತೆ ಸೌಖ್ಯದೊರೆವಂತೆ
ಸತಿಕಾಯ್ವ ಕೀರ್ತಿಕಳೆಚಂದ್ರಾ ಗುರುರಾಘವೇಂದ್ರ ನಮೋ 	4
ಗುರುಸಾರ್ವಭೌಮ ಜಗಜ್ಯೋತಿ 
ಗುರುಸಾರ್ವಭೌಮ ಜಗಜ್ಯೋತಿ ಮಧ್ವಮತಕೀರ್ತಿ ಕಾವ್ಯಕಲಾಮೂರ್ತಿ
ಹರಿಕೃಪಾಛತ್ರ ಮಹಿಮೇಂದ್ರಾ ಗುರುರಾಘವೇಂದ್ರ ನಮೋ 	5
ಸುಜಯೀಂದ್ರಸೇವ್ಯ ಗುರುರಾಜ
ಸುಜಯೀಂದ್ರಸೇವ್ಯ ಗುರುರಾಜ ನಿತ್ಯನವತೇಜಸಂಭ್ರಮವಿ-
ರಾಜಾ ಹೊಳೆಹೊಳೆವ ಚಿನ್ಮಯಮಣೀಂದ್ರ ಗುರುರಾಘವೇಂದ್ರ ನಮೋ	6
ಶಿರಬಾಗಿ ಮಣಿವೆ ಗುರುದೇವಾ
ಶಿರಬಾಗಿ ಮಣಿವೆ ಗುರುದೇವಾ ಕೊಡುಗೆಮತಿಭಾವ(?)ದಿವ್ಯತವಸೇವಾ
ವಿಠಲೇಶಪ್ರೀತ ಪ್ರಭುಚಂದ್ರ ಗುರುರಾಘವೇಂದ್ರ ನಮೋ 	7
							

404 ಚಂದ್ರಿಕಾ ಚಿನ್ಮಯವು ಸಾಂದ್ರವಾಗಿದೆ ಪ್ರಭುವೇ

404.	ರಾಗ: ಸೂರಮಲ್ಹಾರ	ತಾಳ: ಝಂಪೆ
ಚಂದ್ರಿಕಾ ಚಿನ್ಮಯವು ಸಾಂದ್ರವಾಗಿದೆ ಪ್ರಭುವೇ
ಇಂದ್ರನೀಲಚ್ಛವಿಯ ವೃಂದಾವನದೊಳೆಸೆವ	ಪ
ಮಾಯಿಮತಗಳನಳಿದು ನ್ಯಾಯಾಮೃತವ ಸುರಿಸಿ
ಶ್ರೀಯರಸ ಸನ್ನಿಧಿಯ ರಾಯರಂಜಿಸಿ ಮೆರೆವ	1
ತಂಡತಂಡದಿ ಬರುವ ಪುಂಡವಾದಿಗಳೆಲ್ಲ
ದಿಂಡುಗೆಡಹುತ ತರ್ಕತಾಂಡವಾಡಿಸುತಿರುವ	2
ಉದಧಿ ವೇದಾಂತದೊಳು ಉದಯಿಸಿದ ಸುಧೆಯೊಳಗೆ
ಮುದದಿ ಪರಿಮಳವೆರಸಿ ಬುಧರ ತೋಷಿಸುತಿರುವ	3
ಸೀತಾಪತಿಯ ಮಹಿಮೆ ಭೂತಳದಿ ಬೆಳಗಿಸಿದ
ನೂತನ ಪ್ರಕಾಶಮಯ ಗೀತಾವಿವೃತ್ತಿಯುತ	4
ನರಹರಿಯ ತೋರಿಸಿದ ಧೊರೆತನದಿ ಶೋಭಿಸಿದ
ವರದವಿಠಲೇಶಪ್ರಿಯ ಗುರು ರಾಘವೇಂದ್ರ ಮುಖ	5
							

405 ಜೈ ಜೈ ! ಜೈ ಜೈ ! ಜೈ !

405.	ರಾಗ: ಆನಂದಭೈರವಿ	ತಾಳ: ಆದಿ
ಜೈ ಜೈ ! ಜೈ ಜೈ ! ಜೈ !
ಶ್ರೀ ಗುರುರಾಜಾ ಜೈ ಜೈ	ಪ
ಶ್ರೀಸುಧೀಂದ್ರಕರಜಾತ ವರದೇಂದ್ರ
ರಾಘವೇಂದ್ರ ಸಿರಿಸದ್ಗುಣಸಾಂದ್ರ
ಭೂಸುರೇಂದ್ರ ಭವತಾಪಚಂದ್ರ ಜೈ
ದಾಶರಥಿಯ ದಯ ಭಾಗ್ಯಜ್ಯೋತಿ ಜೈ	1
ತುಂಗಭದ್ರೆಸಿರಿತೀರವಿರಾಜಾ
ತುಂಗವಿಕ್ರಮತಪೋನಿಧಿ ತೇಜಾ
ಮಂಗಲಂ ಕೊಡುವ ಕೀರ್ತಿಕಾಂತಿ ಜೈ	
ರಂಗನಾಥಪದಧ್ಯಾನಮೂರ್ತಿ ಜೈ	2
ಮಂತ್ರಸದನ ಬೃಂದಾವನವಾಸಿ
ಸಂತಸಾಧುಜನ ಸಂಭ್ರಮತೋಷಿ
ತಂತ್ರ ಸರ್ವ ಸ್ವಾತಂತ್ರ್ಯಮೂರ್ತಿ ಜೈ
ಶಾಂತಿದಾತ ವಿಠಲೇಶದೂತ ಜೈ	3
							

406 ದಯ ದೋರೋ ದೇವ ಗುರುರಾಜನೆ

406.	ರಾಗ: ಕಾಪಿ	ತಾಳ: ಕವ್ವಾಲಿ 
ದಯ ದೋರೋ ದೇವ ಗುರುರಾಜನೆ
ಭಯವಾದುದೆನಗೆ ಭವ ಸಾಗದಾಗಿ	ಪ
ಮೋಹಜಾಲದಲ್ಲಿ ಮಂದ ಬುದ್ಧಿಯಾಗಿ
ದೇಹ ಕೊರಗಿತಯ್ಯಾ ರಾಘವೇಂದ್ರ ರಾಯಾ	1
ಅನ್ನ ವಸ್ತ್ರಕಾಗಿ ಅನ್ಯ ದಾಸನಾಗಿ
ಬನ್ನಬಟ್ಟೆನಯ್ಯಾ ಘನ್ನ ವ್ಯಾಸರಾಯಾ	2
ಹಟವೇಕೆ ಜೀಯಾ ದಿಟ ಯೋಗಕಾಯಾ
ವಿಠಲೇಶ ಪ್ರೀಯಾ ಪ್ರಹ್ಲಾದರಾಯಾ	3
							

407 ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೊ

 407.	ರಾಗ: ಸಾರಂಗ	ತಾಳ: ಝಂಪೆ
ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೊ
ಘನ್ನ ಗುರು ಶ್ರೀರಾಘವೇಂದ್ರ ಸಂಪನ್ನಾ	ಪ
ವರುಷವರುಷಕೆ ನಿನ್ನ ದರುಶನವ ದಯಮಾಡೊ
ದುರಿತನಾಶನಗೈದು ಪರಿಶುದ್ಧಗೊಳಿಸೊ
ಅರಿತುಅರಿಯದೆಗೈದ ಪಾಪಕರ್ಮವ ಕಳೆದು
ನಿರುತ ಶ್ರೀಹರಿಕೃಪೆಗೆಪಾತ್ರನಾಗಿರಿಸೊ	1
ನಿನ್ನ ಭಕುತರ ಪಾದರಜದೊಳೀಡಾಡಿಸೊ
ನಿನ್ನ ಗುಣಕೀರ್ತನೆಯ ಕಿವಿಗಳಲಿ ನಿಲಿಸೊ
ನಿನ್ನ ಪಾದೋದಕದಿ ಪಾವನ್ನ ಮಾಡೆನ್ನ
ನಿನ್ನ ರಘುಪತಿ ದಿವ್ಯದರುಶನವ ಕೊಡಿಸೊ	2
ಮಂತ್ರಸದನ ನಿನ್ನ ಸಂತಸ ಮಹೋತ್ಸವದಿ
ಶಾಂತಿ ಸುಖ ಸಂಭ್ರಮದ ಸನ್ನಿಧಿಯೊಳಿರಿಸೊ
ಸಂತ ಶರಣರ ಭಕುತಿ ನೃತ್ಯಗೀತೆಗಳಲ್ಲಿ
ನಿಂತು ನಲಿಯುವ ಭಾಗ್ಯ ಕೊಡು ಎನಗೆ ಪ್ರಭುವೆ	3
ಪ್ರಹ್ಲಾದರಾಜ ನೀ ಬಲ್ಲಿದನು ಜಗದೊಳಗೆ
ನಿಲ್ಲದೇ ಕಾಯ್ವ ನರಹರಿ ದೂತನಹುದೊ
ಎಲ್ಲ ರಾಜರರಾಜ ವ್ಯಾಸರಾಜನೆ ಸತ್ಯ
ಇಲ್ಲಿ ಶ್ರೀ ಪರಿಮಳಾರ್ಯರ ಮಹಿಮೆ ಸ್ತುತ್ಯ	4
ಏನು ಬೇಡಲಿ ನಾನು ದಾನಿ ಕರ್ಣನೆ ನಿನ್ನ
ಜ್ಞಾನಿಸದ್ಗುರು ಕಲ್ಪವೃಕ್ಷ ಸುರಧೇನು
ದೀನರಕ್ಷಕ ವಿಠಲೇಶ ಕರುಣಾಭರಣ
ಸಾನುರಾಗದಿ ನಿನ್ನ ಸೇವಕರೊಳಿರಿಸೊ	5
							

408 ಪರಿಮಳ ಪಾದ ಪಂಕಜಾ

408.	ರಾಗ: ಪಹಾಡಿ	ತಾಳ: ದಾದರಾ
ಪರಿಮಳ ಪಾದಪಂಕಜಾ	ಪ
ನೆರೆನಂಬಿದೆ ಗುರುರಾಜಾ	
ಪರಿಪಾಲಿಸು ಗುರು ಸುಧೀಂದ್ರಜಾ	 ಅ.ಪ
ನಿರುತ ನಿನ್ನ ನೆನೆದು
ಮೊರೆಯಿಡುವೆ ಮುನಿರಾಯಾ
ಪರಿಮಳಾರ್ಯ ಪ್ರಭುದೇವಾ
ಪರಿತೋಷಿಸು ಕರುಣಾಸಾಗರಾ	1
ತಂದೆ ನೀನೆ ತಾಯಿಯು ನೀ
ಎಂದು ನಿನ್ನ ಪೊಂದಿದೆನೊ
ಚಂದ್ರಿಕಾರ್ಯ ಕವಿಗೇಯಾ
ಕುಂದದ ಕೃಪೆದೋರು ಶ್ರೀ ಗುರು	2
ಎಲ್ಲಿ ಕಾಣೆ ಕಾಯುವರಾ
ಪ್ರಹ್ಲಾದನೆ ನಿನ್ನುಳಿದು
ಚೆಲ್ವವಿಠಲೇಶಪ್ರಿಯಾ-
ನಲ್ಮೆಯ ಮೊರೆಗಾಣಿಸೋ ಪ್ರಭು	3
							

409 ಬಂದ ಚಂದ್ರಾ ಚಂದದಿಂದ ಬಂದ ನೋಡೈ

409.	ರಾಗ: ಜುಂಜೂಟಿ 	ತಾಳ: ದಾದರಾ
ಬಂದ ಚಂದ್ರಾ ಚಂದದಿಂದ ಬಂದ ನೋಡೈ
ಬೃಂದಾವನದಿಂದ ಮೆರೆದುಬಂದ ನೋಡೈ ಅಕೋ !! 	ಪ
ರಾಘವೇಂದ್ರನೆಂಬ ಚಂದ್ರ ಬಂದ ನೋಡೈ
ರಾಘವೇಶನಂಘ್ರಿಧ್ಯಾನದಿಂದ ನೋಡೈ
ಯೋಗಕೀರ್ತಿಕಾಂತಿಯಿಂದ ಬಂದ ನೋಡೈ
ತ್ಯಾಗರಾಜ ರಥವನೇರಿ ಬಂದ ನೋಡೈ ಅಕೋ !! 	1
ಬಾಲ ಪ್ರಹ್ಲಾದ ಚಂದ್ರ ಬಂದ ನೋಡೈ
ಲೀಲೆಯಿಂದ ಗರಳಕುಡಿದ ಕಂದ ನೋಡೈ
ಖೂಳಪಾಪಿಖಳನಗತಿಸಿ ಬಂದ ನೋಡೈ
ಲೋಲ ನಾರಸಿಂಹನನು ತಂದ ನೋಡೈ ಅಕೋ !! 	2
ವ್ಯಾಸರಾಜೇಂದ್ರ ಚಂದ್ರಾ ಬಂದ ನೋಡೈ
ವೇಷತಾಳಿ ರಾಜ್ಯಭಾರದಿಂದ ನೋಡೈ
ದೋಷಕಳೆವ ದಿವ್ಯಬೋಧದಿಂದ ನೋಡೈ
ರಾಶಿಗ್ರಂಥರಚನೆಗೈದು ತಂದ ನೋಡೈ ಅಕೋ !! 	3
ಕರೆವ ಕಾಮಧೇನುವೆನಿಸಿ ಬಂದ ನೋಡೈ
ಮೆರೆವ ಕಲ್ಪವೃಕ್ಷನಾಗಿ ನಿಂದ ನೋಡೈ
ಮೊರೆಯ ಕೇಳಿ ಭಕ್ತಜನಕೆ ಬಂದನೋಡೈ
ಧರೆಯಭಾಗ್ಯ ಜ್ಯೋತಿಯೆನಿಸಿ ನಿಂದ ನೋಡೈ ಅಕೋ !! 	4
ಧರಮರಾಜ್ಯಚಕ್ರವರ್ತಿ ಬಂದ ನೋಡೈ
ಪರಮಪೂಜ್ಯ ಕಾವ್ಯಮೂರ್ತಿ ನಿಂದ ನೋಡೈ
ದುರುಮತಾದ್ರಿಕುಲಿಶ ಕೀರ್ತಿಚಂದ್ರ ನೋಡೈ
ಪರಿಮಳಾರ್ಯ ಸಾರ್ವಭೌಮ ಬಂದ ನೋಡೈ ಅಕೋ !! 	5
ಸುರರು ಪುಷ್ಪವೃಷ್ಟಿಗೈವ ಸಿರಿಯು ನೋಡೈ
ಮೊರೆವ ವಾದ್ಯ ವೇದಘೋಷಸ್ವರವ ಕೇಳೈ
ಕರವಮುಗಿದು ಕುಣಿವ ಪರಿಯ ನೋಡೈ
ಸುರಪನಂತೆ ಶೋಭಿಸುವನು ತ್ವರದಿ ನೋಡೈ ಅಕೋ !! 	6
ಭವದತಾಪದಿಂದ ಗುರುವೆ ನೊಂದೆ ನೋಡೈ
ಕವಿದ ತಾಮಸಾಂಧನಾಗಿ ನಿಂದೆ ನೋಡೈ
ಆವಿದು ಕಂದನೆಂದು ಕರುಣದಿಂದ ನೋಡೈ
ಜವದಿ ವಿಠಲೇಶನೊಲ್ಮೆ ತಂದ ನೋಡೈ ಅಕೋ !! 	7
							

410 ಮುನೀಂದ್ರಾ ನೋಡಿ ನಲಿದಾಡಿದೆ

410.	ರಾಗ: ವಿಶ್ರಕಾಪಿ 	ತಾಳ: ಕವ್ವಾಲಿ
ಮುನೀಂದ್ರಾ ನೋಡಿ ನಲಿದಾಡಿದೆ
ತನುವನೀಡಾಡಿ ಮನದಿ ಕೊಂಡಾಡಿ ನೋಡಿ 	ಪ
ಗುರುರಾಘವೇಂದ್ರಾ ಸುರಮುನಿಚಂದ್ರ
ಕರುಣಕಟಾಕ್ಷದ ಕಾಂತಿಕೋಮಲಾ
ದುರಿತವಿನಾಶಕ ದಿನಕರತೇಜಾ
ಪರಮಪಾವನ ಸಿರಿಗರೆವಮುಖಾಂಬುಜ ನೋಡಿ 	1
ಯತಿವರದೇಂದ್ರಾ ಪೃಥಿವಿಸುರೇಂದ್ರಾ
ಹಿತದ ಹಸನ್ಮುಖಜ್ಯೋತಿ ಚಂದಿರಾ
ಪ್ರತಿಭೆಪ್ರಕಾಶದಿ ಕ್ಷಿತಿಗೆ ಶುಭೋದಯ
ನತಜನವಾಂಛಿತ ಪತಿಕರಿಸುವ ಪ್ರಭೆ ನೋಡಿ 	2
ರಾಜರಾಜೇಂದ್ರ ರಾಜ್ಯಮಣೀಂದ್ರ 
ತೇಜತಪೋಮಯ ಶಾಂತಿಸಾಗರ
ನೈಜದಿ ಶ್ರೀ ವಿಠಲೇಶ ಸುಸನ್ನಿಧಿ
ಯೋಜಿಸಿದೋರ್ವ ಮಹಾತ್ಮ ಪ್ರಸನ್ಮುಖ ನೋಡಿ 	3
							

411 ಮೂರ್ತಿಮಂತ ಮೋದಚಂದ್ರಾ

411.	ರಾಗ: ಸಿಂಧುಕಾಪಿ 	ತಾಳ: ಕವ್ವಾಲಿ
ಮೂರ್ತಿಮಂತ ಮೋದಚಂದ್ರಾ
ಕೀರ್ತಿಕಾಂತಿ ರಾಘವೇಂದ್ರಾ ತೋರು ದಾರಿಯ ದೇವಾ 	ಪ
ಘನಘೋರಭವಕೆ ಬಲಿಯಾಗಿ
ಮನಸಿಜನ ಬೇಟೆಮೃಗವಾಗಿ
ತನುಮನದಾವಾಗ್ನಿ ಬಲುತಾಗಿ
ಹೊಣೆಗಾಣದೆ ಕಣ್‍ಕುರುಡನಾದೆ. . . . ತೋರು 	1
ದಿನದಿನಕೆ ಮೋಸ ಮನೆಮಾಡಿ
ಧನಕಾಗಿ ತನುವನೀಡಾಡಿ
ಕೊನೆಯಲಿ ಮೃತ್ಯುವೆಡೆ ನೋಡಿ
ಮನನಡುಗಿತು ಶ್ರೀಗುರುರಾಜಾ. . . . ತೋರು 	2
ಹಗಲಿರುಳು ಪಾಪಕರ್ಮದಲಿ
ಮಿಗೆ ದ್ರೋಹಿಯಾದೆ ಮುನಿರಾಯಾ
ಬಗೆಯಾವುದಯ್ಯಾ ಸುಗುಣೇಂದ್ರಾ
ನಿಗಮಾರ್ಥಮಹನ್ಮತಿಸಾಂದ್ರಾ. . . . ತೋರು 	3
ಅಪರಾಧಿ ಎಂದು ಕುಪಿಸಿದೊಡೆ
ಉಪಜೀವಿ ಎನಗೆ ಬಾಳುವೆಯೇ
ಅಪರೋಕ್ಷಜ್ಞಾನಿ ಕೃಪೆಮಾಡೈ
ಅಪಣಾರ್ಯಗೊಲಿದ ಗುರುರಾಯಾ. . . . ತೋರು 	4
ನಿನ್ನೊರತು ಅನ್ಯಗತಿ ಯಾರೈ
ಎನ್ನೊಡೆಯ ದಾಸಕುಲದೈವಾ
ಚಿನ್ಮಣಿ ವಿರಾಜ ವಿಠಲೇಶಾ
ಇನ್ನಾದರು ಜ್ಞಾನವನೀಡೈ. . . . ತೋರು 	5
							

412 ಶಾಂತಿ ಚಂದ್ರ ಜ್ಯೋತಿ ಪ್ರಭುವರ

412.	ರಾಗ: ಕಾಪಿ	ತಾಳ: ತ್ರಿ
ಶಾಂತಿಚಂದ್ರ ಜ್ಯೋತಿ ಪ್ರಭುವರ
ಕಾಂತಿಚಂದ್ರಿಕೆಯುತ ಚಂದ್ರಾಮ ಜಗಕೆ	ಪ
ಅಖಿಲಕಲಾಂಶಾ ಸುರಮುನಿಸಾಂಶಾ
ಸುಕಲ ಸುಧೀಂದ್ರಸುತ ಚಂದ್ರಾಮ ಜಗಕೆ	1
ಯೋಗಿಕುಲೇಂದ್ರ ಶ್ರೀ ರಾಘವೇಂದ್ರಾ
ಮೋಘ ಮಹಿಮ ಜ್ಯೋತಿ ಚಂದ್ರಾಮ ಜಗಕೆ	2
ಪರಮವಿಖ್ಯಾತ ಪರಿಮಳದಾತಾ
ಹರಿವಿಠಲೇಶದೂತ ಚಂದ್ರಾಮ ಜಗಕೆ	3
							

413 ಶೃಂಗಾರ ವದನಾ ಪ್ರಭುವರ

 413.	ರಾಗ: ತೆಲಂಗ್	ತಾಳ: ತ್ರಿ
ಶೃಂ. . .ಗಾ. . ರ ವದನಾ ಪ್ರಭುವರ
ಮಂಗಳಾಂಗ ನರಸಿಂಗ ಪ್ರಿಯತಮಾ	ಪ
ಸುಜನರ ಶುಭೋದಯ ಭಾಸ್ಕರಾ
ಭಜಕರ ಹೃದಾಂಗಣ ಚಂದಿರಾ
ಧ್ವಜಪತಾಕೆ ಮೊದಲಾದ ವೈಭವ
ವಿಜಯಮೂರ್ತಿ ರಾಜಾಧಿರಾಜ ಗುರು	1
ರಘುಪತಿಪದಾಶ್ರಯಸಂಪದಾ
ಮೊಗದೊಳು ಸರಸ್ವತಿ ಶುಭಪದಾ
ನಿಗಮಶಾಸ್ತ್ರ ಸಂಗೀತ ಜಾಣ್ಮೆಯಿಂ
ಜಗದಿ ಖ್ಯಾತ ಶ್ರೀ ರಾಘವೇಂದ್ರಗುರು	2
ಮುದಮುನಿ ಮಹಾಸನಮಂಡಿತಾ
ಬುಧರಿಗೆ ಸುಧಾರಸಸಂಚಿತಾ
ಹೃದಯವಾಸ ವಿಠಲೇಶನೊಲ್ಮೆಯಿಂ
ಮುದಿತನಾದ ಪ್ರಹ್ಲಾದರಾಜ ಗುರು	3
							

414 ಶ್ರೀ ರಾಘವೇಂದ್ರ ಚಂದ್ರ

 414.	ರಾಗ: ಮಿಶ್ರಪಹಾಡಿ	ತಾಳ: ಕೇರವ
ಶ್ರೀ ರಾಘವೇಂದ್ರ ಚಂದ್ರ 
ಬಾರೈ ಮಹಾಮುನೀಂ. . . ದ್ರ	ಪ
ನೂರಾರು ತಾಪದಿಂದ 
ಮೀರಿರ್ದ ಖೇದದಿಂದ
ಕಾರುಣ್ಯಸಿಂಧುವೆಂದು 
ಸಾರಿದೆನೋ ನಿನ್ನೊಳಿಂದು	1
ರೋಗಾದಿ ಭೋಗದಿಂದ 
ತಾಗಿದ ಭವಾಗ್ನಿಯಿಂದ
ಯೋಗೀಶ ನೊಂದೆನಿಂದು 
ಬಾಗುವೆನೊ ಪೊರೆಯೋ ಬಂದು	2
ಪಾಪಾತ್ಮ ದ್ರೋಹಿ ಎಂದು 
ಕೋಪಿಸಿದೊಡೆನ್ನೊಳಿಂದು
ಶ್ರೀಪಾದ ಬಾಳ್ವೆನೆಂದು 
ನೀ ಪೊರೆಯದಿರ್ದೊಡಿಂದು	3
ಅನುಗಾಲ ನಂಬಿ ನಿನ್ನ 
ದಿನರಾತ್ರಿ ನೆನೆದು ನಿನ್ನ
ಮುನಿರಾಯ ಜೀವಿಪೇಂ ನಾ 
ಕನಿಕರದಿ ನೋಳ್ಪುದೆನ್ನ	4
ಎಂದಾದರೊಮ್ಮೆ ಬಂದು 
ಮುಂದೆಸೆದು ಶೋಭಿಸೆಂದು
ತಂದೆ ವಿಠಲೇಶಗಿಂದು 
ವಂದಿಸುವೆ ರಕ್ಷಿಸೆಂದು	5
							

415 ಶ್ರೀ ಸುಧೀಂದ್ರ ತನಯ

ರಾಗ: ತಿಲಂಗ್	ತಾಳ: ದಾದರಾ
ಶ್ರೀಸುಧೀಂದ್ರತನಯ ನಿನ್ನ
ದಾಸ ಜನರೊಳಾಡಿಸೆನ್ನ
ದೋಷ ತೊಳೆದು ಕಾಯೊ ಘನ್ನ
ವಾಸುದೇವನೊಲಿದ ಧನ್ಯ	ಪ
ಏಸು ಜನುಮ ಭಾಗ್ಯ ನಿನ್ನ
ಈಸು ಸೇವೆಗೆಳೆಸಿತೆನ್ನ
ವಾಸವಾಗಿ ಮನದೊಳಿನ್ನು
ಲೇಸುಗೊಳಿಸು ದಿನಗಳನ್ನು	1
ಮುನ್ನಗೈಯ್ದ ನಿನ್ನ ಪಾಪ 
ಇನ್ನು ತೀರಿತೆನ್ನಬೇಡ
ಪುಣ್ಯರಾಶಿ ನಿನ್ನ ಎಡೆಯೊ-
ಳನ್ಯಗತಿಯೆ ಘನ್ನ ಮಹಿಮೆ	2
ಆಗ ಈಗ ಎನ್ನಬೇಡ
ಯೋಗಿಚಂದ್ರ ರಾಘವೇಂದ್ರ
ಬೇಗ ವಿಠಲೇಶನೊಲ್ಮೆ
ಯೋಗ ಭಕುತಿ ಭಾಗ್ಯ ತೋರೊ	3
							

416 ಸಾಗಿ ಬಂದೆ ಪ್ರಭುವೆ ಶ್ರೀಪಾದಕೆ

416.	ರಾಗ: ಪಹಾಡಿ	ತಾಳ: ಕವ್ವಾಲಿ
ಸಾಗಿ ಬಂದೆ ಪ್ರಭುವೆ ಶ್ರೀಪಾದಕೆ 	ಪ 
ಸಾಗಿ ಬಂದೆ ಭವನೀಗದೆ ನೊಂದು
ಬೇಗ ಕೈಪಿಡಿ ಗುರುರಾಘವೇಂದ್ರಾರ್ಯ 	ಅ
ದೇವಸ್ವಭಾವ ದಿವ್ಯಪ್ರಭಾವಾ
ಭಾವಿಕ ಭಕುತರ ತಾರಕ ತೇಜಾ
ಆವ ಪಥವೊ ಪ್ರಭು ತೀವಿದೆ ತಮವು
ಠಾವುಗಾಣಿಸು ಗುರುದೇವವರೇಣ್ಯಾ 	1
ಸುಧೆಯಸೌರಭವಾ ಬುಧರಿಗೆ ಬೀರಿದ
ಪದುಮನಾಭನಪ್ರಿಯ ಸದಮಲಕಾಯಾ
ಅಧಮನಾದೆ ನಿನ್ನ ಸದನವ ಮರೆದು
ಒದಗಿಬಾರೋ ಪ್ರಭು ಯದುವರಹೃದಯಾ 	2
ದುರುಮತಕರಿಭಕೆ ವರಮಹಕೇಸರಿ
ಧರಮ (?) ಪರಾಕ್ರಮಿ ಪರಮದಯಾಳು
ಅರಮನೆಗಾಣದೆ ಸೆರೆಮನೆ ಸಾರ್ದೆ
ಮೊರೆಯ ಕೇಳೋ ಪ್ರಭು ಗುರುಮಹರಾಜ 	3
ಕಾಮಿತವೀಯುವ ಕೋಮಲಹೃದಯಾ
ಶ್ರೀಮಂತ್ರಾಲಯ ಸೋಮ ನಿಸ್ಸೀಮಾ
ನಾಮವ ನೆನೆಯದೆ ತಾಮಸಿಯಾದೆ
ನೀ ಮತಿಗಾಣಿಸೋ ಹೇ ಮಹಾಸ್ವಾಮಿ 	4
ಸೂರಿಸುಧೀಂದ್ರರ ವೀರಕುಮಾರಾ
ಚಾರುಪದಾಂಬುಜ ಸಾರಿದೆ ಧೀರಾ
ಸಾರಭಕುತಿಪಥ ತೋರಿಸೋ ಪ್ರಭುವೆ
ಪಾರುಮಾಡೋ ವಿಠಲೇಶ ಸುಧ್ಯೇಯಾ 	5
							

417 ಸುಜನರ ಶುಭಚಂದ್ರ ಶ್ರೀ ರಾಘವೇಂದ್ರ

417.	ರಾಗ: ಬೃಂದಾವನಸಾರಂಗ	ತಾಳ: ತ್ರಿ
ಸುಜನರಶುಭಚಂದ್ರ ಶ್ರೀ ರಾಘವೇಂದ್ರ	ಪ
ಭಜಿಸುವೆ ನಿಮ್ಮನು ನಿಜಮತಿ ಪಥದೋರೋ	ಅ.ಪ
ಮನವು ನಿಶ್ಚಲ ನಿಲ್ಲದೋ ಸುಧೀಂದ್ರಜಾ
ತನುವು ಸ್ಥಿರಕೆ ಒಲ್ಲದೋ
ಘನಮಹಿಮನೆ ನಿನ್ನಾಪನಿತು ಭಜಿಪುದೆಂತು
ಅನುರಾಗದಿ ನೋಡೋ ಫಣಿಶಯನನ ಪ್ರಿಯಾ	1
ವೇದಶಾಸ್ತ್ರಗಳನರಿಯೆ ಹೇ ಧೊರೆಯೇ
ಬೋಧತತ್ತ್ವವತಿಳಿಯೇ
ಸಾಧಿಸಿ ನಿಮ್ಮಯ ನಾಮ ಒಂದೆ ಬಲ್ಲೆ
ನೀ ದಯದೋರಿ ಸುಮಾರ್ಗ ತೆರೆದು ಕಾಯೋ	2
ಮನಕೆ ಕಣ್ಣುಗಳಿರಿಸೋ ನಿನ್ನಯ ನಾಮ
ಧ್ವನಿಯ ಅಮೃತ ಉಣಿಸೋ
ಕ್ಷಣಕ್ಷಣ ಚಿಂತನೆ ಚಿತ್ತಶುದ್ಧಿಯನಿತ್ತು
ಅನುದಿನ ಪಾಲಿಸೋ ವಿಠಲೇಶ ವರದೂತ	3
96. ವೆಂಕಟವಿಠಲ 
							

418 ವೃಂದಾವನ ನೋಡಿರೋ

418.	ರಾಗ: ಕಲ್ಯಾಣಿ	ತಾಳ: ಆದಿ
ವೃಂದಾವನ ನೋಡಿರೋ ಗುರುಗಳ
ವೃಂದಾವನ ಪಾಡಿರೋ	ಪ
ವೃಂದಾವನ ನೋಡಿ ಆನಂದ ಮದವೇರಿ
ಚೆಂದದಿ ದ್ವಾದಶಪೌಂಡ್ರಾಂಕಿತಗೊಂಬ	ಅ. ಪ
ತುಂಗಭದ್ರಾನದಿಯತೀರದಿ ಇದ್ದ
ತುಂಗಮಂಟಪಮಧ್ಯದಿ
ಶೃಂಗಾರ ತುಳಸಿ ಪದ್ಮಾಕ್ಷ ಸರಗಳಿಂದ
ಮಂಗಳಕರ ಮಹಾ ಮಹಿಮೆಯಿಂದೊಪ್ಪುವ	1
ದೇಶದೇಶದಿ ಮೆಚ್ಚುತ ಇಲ್ಲಿಗೆ ಬಂದು
ವಾಸವಾಗಿ ಸೇವಿಪ
ಭಾಷೆಕೊಟ್ಟಂದದಿ ಬಹುವಿಧ ವರಗಳ
ಸೂಸುವ ಕರ ಮಹಾಮಹಿಮೆಯಿಂದೊಪ್ಪುವ	2
ನಿತ್ಯ ಸನ್ನಿಧಿ ಸೇವಿಪ ಭಕ್ತರಿಗೆಲ್ಲ
ಮತ್ತಭೀಷ್ಟವ ಕೊಡುತ 
ಸತ್ಯಾದಿಗುಣಸಿಂಧು ವೆಂಕಟವಿಠಲನ 
ನಿತ್ಯ ಸನ್ನಿಧಿಯಿಂದ ನಿರುತ ಪೊಜೆಯಗೊಂಬ	3
97. ವೆಂಕಟೇಶ 
							

419 ಪಾಲಿಸೊ ಸದ್ಗುಣಸಾಂದ್ರ ಶ್ರೀ ರಾಘವೇಂದ್ರ

419.	ರಾಗ: ಸುರಟಿ	ತಾಳ: ಅಟ
ಪಾಲಿಸೊ ಸದ್ಗುಣಸಾಂದ್ರ ಶ್ರೀ ರಾಘವೇಂದ್ರ	ಪ
ಯತಿಕುಲತಿಲಕ ಸದ್ಗತಿದಾಯಕನೆ ದು-
ರ್ಮತಖಂಡನ ಘೋರದುರಿತಹರ ಕಲುಷಹಾರ	1
ಭಕ್ತಸ್ತೋಮ ಭವಭಯ ಪರಿಹಾರ ವಿ-
ರಕ್ತ ಮುನೇಂದ್ರ ಶ್ರೀ ಗುರುಸಾರ್ವಭೌಮ ಸುಜ್ಞಾನಾಬ್ಧಿಸೋಮ	2
ದೋಷವರ್ಜಿತ ವೆಂಕಟೇಶನ ದೂತ
ದಾಸ ನಿನ್ನವನೆಂದು ಪೋಷಿಸು ತ್ವರಿತ ಬಿನ್ನೈಸುವೆ ನಿರುತ	3
98. ವೆಂಕಟೇಶವಿಠಲ (2)
							

420 ಈ ಪರಿಯ ಮಹಿಮೆ ಇನ್ಯಾವ ಯತಿಗಳಿಗುಂಟು

420.	ರಾಗ: ಮಾಂಡ್	ತಾಳ: ಆದಿ
ಈ ಪರಿಯ ಮಹಿಮೆ ಇನ್ಯಾವ ಯತಿಗಳಿಗುಂಟು
ಈಡಿಲ್ಲವೊ ಗುರು ರಾಘವೇಂದ್ರರಿಗೆ	ಪ
ಪಾಪರಾಶಿಗಳನೆಲ್ಲ ಪರಿಹಾರ ಮಾಡುವರೊ
ಭೂತಳದೊಳಿವರ ದಿವ್ಯ ಸೇವೆಯನು ಮಾಡುವರ	ಅ. ಪ
ರಾ ಎಂದು ನುಡಿದರೆ ರೋಗಗಳು ಬಾರವೊ
ಘ ಎಂದು ನುಡಿದರೆ ದುಷ್ಕರ್ಮ ಹಾನಿ
ವೇ ಎಂದು ನುಡಿದರೆ ವೈಕುಂಠ ತೋರ್ಪರೊ
ಇಂದ್ರನೆಂದರೆ ಸಕಲ ಭೋಗಗಳ ಕೊಡುತಿಹರೊ	1
ವರತುಂಗತೀರದಲಿ ವೈಷ್ಣವ ಮತೋದ್ಧಾರ
ಪರಮಶೋಭಿತರಿವರ ನೋಡಿದವನೆ ಧನ್ಯ
ಕರಿರಾಜವರದನ ಕರುಣ ಪಡೆದವರಿವರೊ
ಕುಲಕೋಟಿ ಉದ್ಧಾರಮಾಡುತಲಿಹರೊ	2
ಪರಿಪರಿಯ ದೈವದೊಳು ವೆಂಕಟೇಶವಿಠಲನೆ ಅಧಿಕ
ಗುರುಗಳೊಳು ಕರುಣಾಳು ಶ್ರೀ ರಾಘವೇಂದ್ರರು
ನಂಬಿದ ಭಕ್ತರ ಕೈಬಿಡದೆ ಸಲಹುವರು
ಶೇಷಗಿರೀಶನ ದಾಸರು ಇವರು	3
99. ಶರಧಿಪುರೇಶ/ವಾರಿಧೀಶ
							

421 ಬರಿಯ ಒಣ ಮಾತಲ್ಲವಿದು

421.	ರಾಗ: [ಸಾರಂಗ]	ತಾಳ: [ಆದಿ]
ಬರಿಯ ಒಣ ಮಾತಲ್ಲವಿದು ಶುದ್ಧಸಾಧನ
ಗುರುಸಾರ್ವಭೌಮನ ದಿವ್ಯ ತಪೋಧನ 	ಪ
ಕಾರ್ಯಕಿಳಿಯುವ ನವ್ಯ ಪರಿಮಳ ಬೋಧನ
ನೂತನಕತಿನೂತನ ಕೃಪೆ ಗುರುದೇವನ 	1
ಅತಿ ಪತಿತರನುಗೈವುದು ಪಾವನ
ಗತಜೀವಿಗಳಿಗೀವುದು ನವ ಚೇತನ 	2
ತಾತ ಶರಧಿಪುರೇಶನ ಮಾತೆಲ್ಲಗೀತರತುನ 
ಸಾರ್ಥಖ್ಯಗೊಳಿಪುದು ಸಾಧಕರ ಜೀವನ 	3
							

422 ಶ್ರೀನಾಥ ದೂತ ಸಿರಿವಂತನೀತ

422.	ರಾಗ: [ಕೇದಾರಗೌಳ]	ತಾಳ: [ಆದಿ]
ಶ್ರೀನಾಥ ದೂತ ಸಿರಿವಂತನೀತ ಶ್ರೀಮಂತ ಸಂತ ಶ್ರೀ
ಪೂರ್ಣಬೋಧ ಸ್ತೋತ್ರ ಫಲದಾತ ಮಂತ್ರಾಲಯದಿ ನಿಂತ 	ಪ
ಬೃಂದಾವನದಿ ವ್ಯಾಪ್ತ ಭುವಿಗೆ ಚಲುವ ಚಂದ್ರಾಮನೀತ
ಸಂದರ್ಶನಕೆ ಮಾತ್ರ ನರನ ಸಕಲ ಪಾಪರಾಶಿ ನಾಶ 	1
ಶ್ರೀಹರಿಯ ಪ್ರೀತಿಪಾತ್ರ ಹರಿದಾಸ ಬಂಧು ಭಾಗ್ಯವಂತ
ಅಹರ್‍ನಿಶೆ ಅತಿಥಿ ಅಭ್ಯಾಗತ ಸೇವಿತ ಅವ್ಯಾಹತ 	2
ಸಕಲಕುಲಕಾಕರ್ಷಿತ ಸತತ ಭಕುತಿ ಮಾರ್ಗಕೊಲಿವಾತ
ಅಖಿಲಗುಣಗಣಿ ಖ್ಯಾತ ಪ್ರಖ್ಯಾತ ಮಾನಿತ ಮಂಚಾಲಿತಾತ 	3
ಸತ್ಕುಲದ ಸಂಜಾತ ಹೃತ್ಕಮಲ ವಿಕಸಿತ ವಿಖ್ಯಾತ ವಿನೂತ
ಉತ್ಕಲೆಯ ಊರ್ಜಿತ ಉಜ್ವಲ ಭವಿಷ್ಯದ ಪ್ರಜ್ವಲಿತ ಪ್ರಕಾಶಿತ 	4
ನಿತ್ಯನಿರ್ಮಲ ಚಿತ್ತ ಸತ್ಯಧರ್ಮರತ ಸತ್ಕಾರ್ಯ ಕರ್ಮಠ
ಅತ್ಯಪೂರ್ವ ಫಲಪ್ರಾಪ್ತ ಪ್ರತ್ಯಕ್ಷನಿಂತ ಕ್ಷೇತ್ರ ವಾರಿಧೀಶರ ಸತ್ಪಾತ್ರ 	5
100. ಶಿರಿಗೋವಿಂದವಿಠಲ 
							

423 ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ

423.	ರಾಗ: [ಕಾಪಿ]	ತಾಳ: [ಪೀಲು]
ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ 
ಸುಂದರ ಕಾಯ ಆನಂದದ ನಿಧಿಯ	ಪ
ತಾಯಿಯಂದದಿ ನಮ್ಮ ಕಾಯುವ ಧಣಿಯಾ
ನ್ಯಾಯ ಸದ್ಗುಣಪೂರ್ಣ ಮಾಯಿಗಜ ಹರಿಯಾ	1
ಮಾಯಾ ರಮಣನ ನಾಮ ಗಾಯನ ಪರನ
ದಾಯಾದಿ ಕುಲವೈರಿ ಶ್ರೇಯ ಬಲಯುತನಾ	2
ನರರೂಪ ಧರಿಸಿದ ವಾನರÀ ಭಕ್ತವರನಾ
ವರಶೌರಿ ಪ್ರಿಯ ದೀನರ ಕಾಯುತಿಹನಾ	3
ಜನರನ ಪೊರೆವನೆಂದೆನುತ ಭೂಮಿಯಲಿ
ಜನಿಸಿದ ತನ್ನವನ್ನ ವನುತೆ ಸಹಿತದಲಿ. . (?)	4 
ದುರಿತ ವನಕೆ ತಾ ಮರುತನಾಗಿಪ್ಪ
ಗರುವೆಂಬ ಗಿರಿಗೆ ಇವ ನಿರಂತರದಿ ಸುರಪಾ	5
ಭಕ್ತರ ಬಯಕೆ ಪೂರೈಪ ಸುರತರುವೆ
ಶಕ್ತ ವಿರಕ್ತ ಹರಿಭಕ್ತ ಮದ್ಗುರುವೆ	6
ಭುವನದಿಂ ದಾಟಿಸೆ ನೌಕವಾಗಿಹನಾ
ನವ ಭಕುತಿಯನೀವ ಕವಿಕುಲ ವರನಾ	7
ದಿವಿಜೇಶನಂತೆ ಪೃಥ್ವಿಯೊಳು ಮೆರೆವಾ	
ಇವನೇ ಗತಿಯೆನೆ e್ಞÁನ ತವಕದಿ ಕೊಡುವಾ	8
ನಿಂದಿಪ ಜನರಲ್ಲಿ ಪೊಂದಿಪ ಪ್ರೇಮ
ವಂದಿಪ ಜನರಿಗೆ ಸತತ ಶ್ರೀರಾಮ	9
ಶ್ರೀನಿವಾಸನ ಪುತ್ರ ಪರಮ ಪವಿತ್ರಾ
e್ಞÁನಿ ಜನರ ಮಿತ್ರ ವಿಹಿತ ಚರಿತ್ರಾ	10
ನಷ್ಟ ತುಷ್ಟಿಗೆ ಅಂಜಾ ದುಷ್ಟರಿಗೆ ದೊರೆಯ
ಕಷ್ಟ ಕಳೆಯುವ ನಮ್ಮ ಕೃಷ್ಣ ಪಾರಿಜಾತ	11
ಪೊಳಲುರಿ ಸಖನಾ ಘನಪೊಳೆಯುವ ಪಾದಯುಗವಾ
ಘಳಿಗಿ ಬಿಡದಲೆ ನೋಡುತ ನಲಿಯುತಿರುವ	12
ಅಂದು ಈತನೇಯನ್ನ ಗುರುವೆಂಬಗೆ ರುದ್ರಾ
ಧುರದೊಳು ಭೀಮ ಗುರು ವಿಗತದಾರಿದ್ರ್ಯಾ	13
ಅನಿಮಿತ್ತ ಬಂಧು ಬ್ರಾಹ್ಮಣ ವಂಶಜಾ
ಅನಘಾತ್ಮ ಹರಿಭಕ್ತ ಜನಕಾ ಭವ ತ್ರಾತಾ 	14
ತಪ್ಪು ನೋಡದಲೆ ಕಾಯುತಿಪ್ಪ ನಮ್ಮಪ್ಪ
ಸರ್ಪ ತಲ್ಪನ ಧ್ಯಾನದಿಪ್ಪ ಅಪ್ಪ	15
ಅರುಣಾಬ್ಜ ಚರಣತಲ ಬೆರಳು ಪಂಕ್ತಿಗಳಾ
ಸರಸಿಜ ಪೋಲ್ವ ಮುದ್ರತರ ಪಾದಯುಗಳಾ	16
ಇಳೆಯಾ ಸುರತತಿ ಪಾಪ ಕಳೆದ ಘನ ಪಾದ
ಒಲಿದು ಭಕ್ತರಿಗಿಷ್ಟ ಸಲಿಸುವ ಪಾದ	17
ಸಕಲ ರೋಗವ ಕಳೆವ ಅಕಳಂಕ ಪಾದ
ನಿಖಿಲೈಶ್ವರ್ಯದ ಸುಖದಾಯಕ ಪಾದ	18
ಹರಿಯಂತೆ ಹರನೊಲ್ ಸಾಸಿರನಯನನಂತೆ
ಶಿರಿಯಂತೆ ತೋರ್ಪ ಭಾಸ್ಕರನ ರೀತಿ	19
ಸುಳಿರೋಮಗಳುಳ್ಳ ಚಲುವ ಜಾನುಗಳಾ
ಎಳೆ ಬಾಳೆ ತೆರ ಊರು ಹೊಳೆವ ಸುಚೈಲ 	20
ತಟಿತ ಸನ್ನಿಭವಾದ ಕಟಿಗಿಪ್ಪ ಸೂತ್ರ
ನಟಿಸಿಹವು ತ್ರಿವಳಿ ತಾವು ಪುಟಿದು ಉದರ	21
ಎದೆಯಲಿಪ್ಪುದÀು ನಮ್ಮ ಪದುಮೇಶನ ಮನೆಯು
ಒದಗಿ ಭಕ್ತರಿಗೆ ಕರುಣದಿ ಕಾಯ್ವ ಖಣಿಯ	22
ಹುತವಹನನಂತೆ ಭಾರತೀಕಾಂತನಂತೆ
ಚತುರಾಶ್ಯ ಈ ಕ್ಷಿತಿಯಂತೆ ಇಹನಂತೆ	23
ಹಸುವಿನಂದದಲಿಪ್ಪಾಗಸದ ಓಲಿಹನು
ವಸುಧಿಯೊಳಿಂದೊಮ್ಮೆ ವಸು ಎನಿಸಿದನಾ	24
ಭೂಧರನಂತೆ ವಸುಧರನಂತೆ
ಭೂಧರನಂತೆ ಸೋದರನಂತೆ	25
ಚಂದನ ಚರ್ಚಿತ ಸುಂದರ ರೂಪದಿಂದೊಪ್ಪುವ ಕಂಬುತೆರ 
ಕಂಧರಾಯುತನ ಬಂಧುರ ಭ್ರೂಲತಯುಗ ನಂದದ ಶಿರನಾ	26
ಕರೆದು ಭಕ್ತರಿಗಿಷ್ಟಗರಿಯುವ ಚೆಲ್ವಾ
ವರ ರೇಖೆಯುತ ಶಿರಕರದಾ ವೈಭವನಾ	27
ಮಂಗಳದಾಯಕ ಅಂಗೈಯುಗಳಾ
ಬಂಗಾರದುಂಗುರ ಇಟ್ಟಿಹ ಬೆರಳು	28
ಕೆಂದುಟಿ ಮೊದಲಾಗಿ ಛಂದಿಪ್ಪ ವದನಾ
ಪೊಂದಿದ ದಂತಗಳಿಂದೊಪ್ಪಿದಾ ರಚನಾ	29
ಹಸನಾದ ಮುಕುರದಂತೆಸೆವ ಗಲ್ಲಗಳಾ
ಬಿಸಜದಂತೆ ರಾಜಿಸುವ ನೇತ್ರಗಳಾ	30
ನಾಸಿಕದಡಿಲಿಪ್ಪ ಮೀಸಿ ದ್ವಂದ್ವಗಳಾ (?)
ದೇಶಾದಿ ಪಾಲ್ಮೂರು ವಾಸಿ ಕರ್ಣಗಳಾ	31
ಗಿಳಿಗೆ ವಾಚ್ಯಾಪದೊಳು ಹೊಳೆವಾ ಪುಚ್ಛಗಳು
ತಿಲಕಾ ಮುದ್ರೆ ಪುಂಢ್ರಗಳು ಉಳ್ಳ ಫಾಲಾ	32
ಹರಿಪಾದ ಜಲವನ್ನು ಧರಿಸಿದ ಶಿರವಾ
ಶಿರಿಗೋವಿಂದವಿಠಲನ್ನಡಿಗೆ ಎರಗುವಾ ಶಿರವಾ	33
101. ಶ್ಯಾಮಸುಂದರ (ಮಣಿಧಾಳ್ ದೇಸಾಯಿಯವರು)
							

424 ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿಪ

424.	ರಾಗ: ಮಧ್ಯಮಾವತಿ/ಭೈರವಿ	ತಾಳ: ಆದಿ/ಝಂಪೆ
ಸ್ಮರಿಸುವೆನು ಗುರುರಾಯ ವರಮಂತ್ರಪುರಾಧಿಪ
ಪೊರೆಯೊ ಎನ್ನನು ಜೀಯ ತವಮಹಿಮೆ ವರ್ಣಿಸ-
ಲರಿಯೆ ಮುರಹರಪ್ರಿಯ ಅಧಮಾಧಮನು ಮಮ-
ಪರಿಯ ನೀ ಬಲ್ಲೆಯಯ್ಯ ತೋರಯ್ಯ ದಯ 	ಪ
ವರದಚರಿತೆಯ ಅರುಹುವದಕೆ 
ವರವಾಕ್ಸರಣಿಯನು ಪಾಲಿಸಿ 
ನಿರುತ ಹರಿಗುರುಚರಣದಲಿ ರತಿ 
ತ್ವರಿತ ಕರುಣಿಸು ರಾಘವೇಂದ್ರನೆ	ಅ.ಪ
ಹಿಂದೆ ಕೃತಯುಗದಲ್ಲಿ ಪ್ರಹ್ಲಾದನಾಮದಿ
ತಂದೆ ಹಿರಣ್ಯಕನಲ್ಲಿ ಸರ್ವೋತ್ತಮನು ಹರಿ
ದ್ವಂದ್ವ ಕರ್ಮವನಲ್ಲಿ ಅರ್ಪಿಸಲು ಮಹದಾ-
ನಂದ ಪೊಂದುವರಲ್ಲಿ ಎಂದು ಪೇಳುತಲಿ
ಮಂದ ದೈತ್ಯವನಂದಮಾತಿಗೆ 
ಬಂಧನಾದಿಗಳಿಂದಶಿಕ್ಷಿಸೆ 
ಬಂದದುರಿತವನಂದು ಕಳೆದಾ-
ಕಂದನನು ಹರಿಪೊರೆಯೆ ದಿತಿಜನು
ಒಂದು ತಿಳಿಯದೆ ಮಂದಿರದಿ ಗೋ-
ವಿಂದನೆಲ್ಲಿಹನೆಂದು ಕೇಳಲು 
ಮಂದರೋದ್ಧರನಿಲ್ಲದಿಹ ಸ್ಥಳ
ಒಂದು ಇಲ್ಲವೊ ಎಂದು ಸಾರಿದೆ
ತಂದುತೋರಿಸು ಸ್ತಂಭದಲಿ ತವ 
ಇಂದಿರಾಪತಿಯ ಎಂದು ಗರ್ಜಿಸೆ 
ಕಂದನಾಡಿದ ಮಾತುಗಳನು ನಿಜ-
ವೆಂದು ನರಹರಿ ಬಂದು ಪೊರೆದುದ	1
ಶ್ರೀಶನಾಜ್ಞೆಯವಹಿಸಿ ದ್ವಿತೀಯಾವತಾರದಿ
ವ್ಯಾಸರಾಯರೆಂದೆನಿಸಿ ಬ್ರಹ್ಮಣ್ಯರÀಲಿ ಸಂ-
ನ್ಯಾಸವನುಸ್ವೀಕರಿಸಿ ಸರ್ವಜ್ಞ ಶಾಸ್ತ್ರಾ-
ಭ್ಯಾಸವನುಪೂರೈಸಿ ವ್ಯಾಸತ್ರಯವರಚಿಸಿ 
ದೇಶದೇಶಗಳನ್ನು ಚರಿಸುತ
ಆ ಸಮಸ್ತ ಕುವಾದಿಗಳ ಮತ 
ನಾಶಗೊಳಿಸಿ ರಮೇಶ ಶ್ರೀವೆಂಕ-
ಟೇಶನನು ಬಹು ದಿನವು ಪೂಜಿಸಿ
ವಾಸಿಸುತ ಗಜರಾಮಪುರದ-
ಧೀಶರಾಯನ ಕುಹಯೋಗವ
ನಾಶಗೊಳಿಸುತ ಕನಕ ಪುರಂದರ 
ದಾಸರಿಂದೊಡಗೂಡಿ ಕೃಷ್ಣನು-
ಪಾಸನೆಯ ಭಕ್ತಿಯಲಿಗೈಯುತ 
ವಾಸುದೇವನ ಶಿಲ್ಪಶಾಸ್ತ್ರದ
ಶಾಸನಕೆ ಪ್ರತಿಯಾಗಿ ನಿಲ್ಲಿಸಿ 
ತೋಷಿಸಿದ ಸೌಭಾಗ್ಯ ವೈಭವ	2
ಮದನಜನಕನದೂತ ವಿಜಯೀಂದ್ರಯತಿ ಕರ-
ಪದುಮಸಂಭವಜಾತ ಶ್ರೀ ರಾಘವೇಂದ್ರ ಸು-
ಪದವ ಪಡೆದ ಪ್ರಖ್ಯಾತ ಜಯತೀರ್ಥಮುನಿಕೃತ
ಸುಧೆಗೆ ಪರಿಮಳ ಗ್ರಂಥ ರಚಿಸಿ ಮೆರೆದಾತ
ಬಧಿರ ಪಂಗು ಮೂಕಾಂಧ ವ್ಯಂಗರು 
ವಿಧವಿಧದ ಘನರೋಗಗ್ರಸ್ತರು
ಸದಯ ನೀ ಗತಿಯೆಂದು ಸೇವಿಸೆ 
ತ್ರಿದಶಭೂರುಹದಂತೆ ಸಲಹುವಿ
ಕುಧರದೇವನದಿವ್ಯರದನಜ 
ನದಿಯತೀರದಿ ಮೂಲರಘುಪತಿ
ಪದವ ಪೂಜಿಸುತಲಿ ಸಜೀವದಿ 
ಮುದದಿ ವೃಂದಾವನಪ್ರವೇಶಿಸಿ
ಪದುಮನಾಭ ಶ್ರೀಶ್ಯಾಮಸುಂದರ 
ಮಧು ವಿರೋಧಿಯ ಧ್ಯಾನಿಸುತ ಸಿರಿ
ಸದನನನು ಒಲಿಸುತ್ತ ಕರುಣಾ 
ನಿಧಿಯೆ ಭಜಕರ ಪೊರೆವ ಮಹಿಮೆಯ	3
102. ಶ್ಯಾಮಸುಂದರ (ಕುರುಡಿ)
							

425 ಇಂಥಾ ಗುರುಗಳ ಕಾಣೆ ನಾ ಭೂತಳದೊಳು

425.	ರಾಗ: ಮೋಹನ/ಭೂಪ	ತಾಳ: ಆದಿ/ಕವ್ವಾಲಿ
ಇಂಥಾ ಗುರುಗಳ ಕಾಣೆ ನಾ ಭೂತಳದೊಳು
ಇಂಥಾ ಯತಿಗಳ ಕಾಣೆ ನಾ 	ಪ
ಇಂಥಾ ಗುರುಗಳ ಕಾಣೆ ಮಂತ್ರಮಂದಿರದಲ್ಲಿ
ನಿಂತು ಭಜಕರಿಗೆ ಚಿಂತೆ ಕಳೆವ ಕರುಣಿ	ಅ.ಪ
ದೇವಸ್ವಭಾವನೀತನು ಸತತ ಪವನ-
ದೇವನಾವೇಶಯುಕ್ತನು 
ಆವಸಂಶಯವ್ಯಾಕೆ ದೇವಾಧಿದೇವ ನರಮೃಗ-
ದೇವನೀತನ ಭಕ್ತಿಗೆ ಧಾವಿಸಿ ಬಂದ ಸ್ತಂಭದಿ
ಭಾವಭಕ್ತಿಯಲಿ ಸೇವಿಪರಿಗೆ ಭವ
ನೋವು ಕಳೆದು ಸುರಗೋವಿನ ತೆರ ವರ-
ವೀವನು ಕರುಣದಿ ಕಾವನು ಪರಮ
ಪಾವನ ಚರಿತನು ಕೋವಿದರೊಡೆಯನು	1
ವರಹಜತಟದಲ್ಲಿರುವ ಭಕ್ತರು ಕೂಗಿ
ಕರೆದಲ್ಲಿಗೋಡಿಬರುವ 
ಮರುತಶಾಸ್ತ್ರದ ಮರ್ಮಭರಿತವಾದಂಥ ದಿವ್ಯ
ಪರಿಮಳಗ್ರಂಥವ ವಿರಚಿಸಿ ಬುಧರಿಗೆ
ಗರೆದನು ಕರುಣದಿ ಪೊರೆದನು ಪರಮತ
ಮುರಿದನು ಜಗದೋಳ್ ಮೆರೆದನು ಹೊಸ ಹೊಸ
ಪರಿ ಸುಮಹೋತ್ಸವ ಹರುಷದಿ ಪ್ರತಿದಿನ
ಗುರುಸುಯಮೀಂದ್ರರ ಕರದಿಂ ಗೊಂಬರು	2
ಮಂದಜಾಸನಜನಕ ಶ್ರೀವರಶ್ಯಾಮ-
ಸುಂದರನಂಘ್ರಿ ಸೇವಕ 
ಕಂದರ್ಪಶರಕರಿವೃಂದಕೇಸರಿಎನಿಸಿ
ಗಂಧವಾಹನಮತಸಿಂಧುವಿಗೆ ಶಶಿ-
ಯಂದದಿ ರಾಜಿಸಿ ವೃಂದಾವನವನು
ಒಂದೆ ಮನದಲಿ ವಂದಿಸಿ ನಮಿಸುವ
ವಂದ್ಯಾಂಧಕರಿಗೆ ಕಂದರಕ್ಷಿಗಳ
ಕುಂದದೆ ಕೊಡುವ ಕರ್ಮಂದಿಕುಲಾಗ್ರಣಿ	3
							

426 ಎಂಥ ದಯವಂತನೋ ಮಂತ್ರ ಮುನಿನಾಥನೊ

426.	ರಾಗ: [ಬೈರವಿ/ಸಿಂಧುಭೈರವಿ]	ತಾಳ: [ಆದಿ]
ಎಂಥ ದಯವಂತನೋ ಮಂತ್ರ ಮುನಿನಾಥನೊ
ಸಂತತದಿ ತನ್ನನು ಚಿಂತಿಪರಿಗೆ ಸುರಧೇನು 	ಪ
ವರಪ್ರಹ್ಲಾದನು ಮರಳಿಬಾಹ್ಲೀಕನು 
ಗುರುವ್ಯಾಸರಾಯನೊ ಪರಿಮಳಾಚಾರ್ಯನೊ	1
ಇರುವ ತುಂಗಾತಟದಲ್ಲಿ ಬರುವ ತಾನು ಕರೆದಲ್ಲಿ
ಕರವ ಪಿಡಿದು ಪೊರೆವಲ್ಲಿ ಸರಿಗಾಣೆ ಧರೆಯಲ್ಲಿ	2
ಮರುತಾವೇಶಯುಕ್ತನು ದುರಿತಕಳೆವ ಶಕ್ತನು
ತರಣಿನಿಭಗಾತ್ರನು ಪರಮಸುಚರಿತ್ರನು	3
ಶಿಶುವಿಗಸುವಗರೆದನು ವಸುಧಿಸುರರ ಪೊರೆವನು
ಅಸಮ ಮಹಾಮಹಿಮನೊ ಸುಶೀಲೇಂದ್ರವರದನೊ	4
ಭೂಮಿಯೊಳು ಖ್ಯಾತನು ಶ್ಯಾಮಸುಂದರ ಪ್ರೀತನು
ಕಾಮಿತಾರ್ಥದಾತನು ಸ್ವಾಮಿ ನಮಗೆ ಈತನು	5
							

427 ಕರುಣದಿ ಪಿಡಿ ಕೈಯ್ಯ ಗುರುಪರಿಮಳಾರ್ಯ

427.	ರಾಗ: ಮಧ್ಯಮಾವತಿ	ತಾಳ: ದೀಪಚಂದಿ
ಕರುಣದಿ ಪಿಡಿ ಕೈಯ್ಯ ಗುರು ಪರಿಮಳಾರ್ಯ	ಪ
ವರಹಸುತೆಸುತರಂಗಿಣೀನಿಲಯ 
ಮೊರೆಹೊಕ್ಕೆ ತ್ವತ್ಪದ ತ್ವರಿತದಲಿ ನೀ ಬಿಡಿಸೊ ಭವಮಾಯ 
	ವರಸುಕವಿಗೇಯ	ಅ.ಪ
ಮೋದತೀರ್ಥಮತಾಬ್ಧಿಚಂದಿರನೇ
ಭೇದಬೋಧಕ ಸಾಧುವರಪ್ರಹ್ಲಾದಬಾಲಕನೆ
ವಾದಿಜನಮದಛೇದಿಸಿದ ಭೂದೇವವಂದಿತನೆ ಅಗಾಧಮಹಿಮನೆ	1
ಪರಮಪಾವನಚರಿತ ಮಂತ್ರಾಗಾರಪುರಧಣಿಯೆ
ನೆರೆನಂಬಿ ಸೇವಿಪ ಶರಣರಿಗೆ ಸುರಧೇನುತರುಮಣಿಯೆ
ನಿರುತ ಮಹವೈಭವದಿ ಮೆರೆಯುವ ಮುನಿಕುಲಾಗ್ರಣಿಯೆ ನಿನ-
	ಗಾರು ಎಣೆಯೆ	2
ಶ್ಯಾಮಸುಂದರಸ್ವಾಮಿಚರಣಸುತಾಮರಸ ಭೃಂಗ
ಕಾಮಕಾರ್ಮುಕಕದಳಿಕೋಮಲವನಕೆ ಮಾತಂಗ
ಪ್ರೇಮದಿಂದಲಿ ಪಾಲಿಸೆನಗೆ ಸತತ ಸತ್ಸಂಗ ರವಿಸನ್ನಿಭಾಂಗ	3
							

428 ಕರುಣಿಸೊ ಗುರುವರ ಪರಿಮಳಾಚಾರ್ಯ

428.	ರಾಗ: ಭೈರವಿ	ತಾಳ: ದೀಪಚಂದಿ
ಕರುಣಿಸೊ ಗುರುವರ ಪರಿಮಳಾಚಾರ್ಯ	ಪ
ಕರುಣಾಬ್ಧಿಯೆ ಜಿತಕಾಯಜಾತ
ವರಶುಭಚರಿತ ನೀ	1
ಕನಕಶಯ್ಯನ ಜಾತ ನಮಿಪೆ
ಅನುದಿನ ಪೊರೆವುದು ನೀ	2
ಶ್ಯಾಮಸುಂದರನನಾಮಸುಧೆಯ
ಮಮತೆಯಲಿಗರೆವುದು ನೀ 	3
							

429 ಕೋಲದೇವ ತನಯ ಕೂಲ ಸುನಿಲಯ

429.	ರಾಗ: ಪೂರ್ವಿ	ತಾಳ: ಆದಿ
ಕೋಲದೇವ ತನಯ ಕೂಲ ಸುನಿಲಯ
ಪಾಲಿಸೊ ಜೀಯ	 ಪ
ದೇವಸ್ವಭಾವ ಮಹಿದೇವ ಸಂಸೇವಿತ
ಪಾವನ ಸುಚರಿತ ದೇವಮುನಿಗತಿಪ್ರೀತ 	1
ದೈಶಿಕ ಕುಲನಾಥ ಪೂಶರ ನಿರ್ಜಿತ 
ಭಾಸುರ ಕಾಷಾಯ ವಾಸ ಭೂಪ ವ್ಯಾಸರಾಯ	2
ಶ್ಯಾಮಸುಂದರ ಮೂಲರಾಮಪದಾರ್ಚಕ
ಕಾಮ ಕಾರ್ಮುಕ ಗಜಸ್ತೋಮ ಸಿಂಗ ಮಂಗಳಾಂಗ	3
							

430 ಗುರುರಾಯನೆ ಪಾಹಿ ಪಾಹಿ

430.	ರಾಗ: [ಬೆಹಾಗ್]	ತಾಳ: [ಮಿಶ್ರನಡೆ]
ಗುರುರಾಯನೆ ಪಾಹಿ ಪಾಹಿ 
ಕರುಣದಲಿ ಬಾರೋ ನಿ ಬೇಗನೆ	 ಪ
ದಯಾಸಾಗರ ಭಯದೂರ ಧೀರ
ಸುಯಮೀಂದ್ರ ಪ್ರಿಯ	1
ಮಂತ್ರಾಲಯಾ ಆಲಯಾಧ್ವಾಂತಾರಿ ತೇಜ
ಶಾಂತದಿ ಶೀಲಾ	2
ವರ ಶ್ಯಾಮಸುಂದರನಂಘ್ರಿಯ
ನೆರೆ ಪೂಜಿಸುವ ಶ್ರೀ ರಾಘವೇಂದ್ರ 	3
							

431 ತುಂಗಾತೀರದಿ ಕಂಗೊಳಿಸುವ ಮುನಿ

431.	ರಾಗ: ಭೂಪ	ತಾಳ: ತ್ರಿ
ತುಂಗಾತೀರದಿ ಕಂಗೊಳಿಸುವ ಮುನಿ-
ಪುಂಗವರಾಯರ ನಯನದಿ ನೋಡೆ ಮನದಿ
ಕೊಂಡಾಡೆ ವರಗಳ ಬೇಡೆ 	ಪ
ಆದಿಯುಗದಿ ಪ್ರಹ್ಲಾದನೆನಿಸಿ ಕ-
ಯಾದುವಿನುದರದಿ ಜನಿಸುತಲಿಸಖಿ ಜನಿಸುತಲಿ
ವಾದಿಸಿ ಪಿತನೊಳು ಮಾಧವ ಪರನೆಂದು
ಮೋದದಿ ಸ್ತಂಭದಿ ತೋರಿದ ಧೀರನೆ	1
ಅದ್ವೈತಾಟವಿ ದಗ್ಧಕೃತಾನಲ
ಮಧ್ವಮತಾಬ್ಧಿಗೆ ಭೇಶನೆಂದೆನಿಸಿ ಭೇಶನೆಂದೆನಿಸಿ
ಸದ್ವೈಷ್ಣವರುದ್ಧಾರಕನಾದ ಪ್ರ-
ಸಿದ್ಧನಾದ ವ್ಯಾಸ ಕರ್ಮಂದಿಕುಲೇಂದ್ರನೆ	2
ಧರಣಿತಳದಿ ರಾಘವೇಂದ್ರ ಸುನಾಮದಿ
ಮರಳಿ ಜನಿಸಿ ದಿವ್ಯ ಪರಿಮಳ ರಚಿಸಿ ಪರಿಮಳ ರಚಿಸಿ
ಕರುಣದಿ ದ್ವಿಜರಿಗೆ ಎರದು ಪೊರೆದ ಗುರು
ಮರುತಾವೇಶದ ದೇವಸ್ವಭಾವನೆ	3
ಸ್ವಾಂತÀದಿ ಭಜಿಪರ ಚಿಂತೆಯ ಕಳೆಯಲು
ಚಿಂತಾಮಣಿಯಂತೆ ಸಂತತ ಸಖಿಯೆ ಸಂತತ ಸಖಿಯೆ
ಮಂತ್ರನಿಕೇತನಕ್ಷೇತ್ರದಿ ಸ್ಥಿರವಾಗಿ
ನಿಂತ ಪರಮಸುಶಾಂತಮೂರುತಿಯೆ	4
ವಂದಿಸಿ ಸ್ತವಿಸುವ ವಂಧ್ಯಾಂಧಕರಿಗೆ
ಕಂದರಕ್ಷಿಗಳ ಕರುಣಿಸುತಿಹರೆ ಕರುಣಿಸುತಿಹರೆ
ಇಂದುಧರಾಮರವಂದಿತ ಶ್ಯಾಮ-
ಸುಂದರವಿಠಲನ ದಾಸೋತ್ತಮರೆ	5
							

432 ಪಾಲಿಸು ರವಿತೇಜ ಮಂತ್ರಾಲಯ ಗುರುರಾಜ

432.	ರಾಗ: [ಕೇದಾರಗೌಳ]	ತಾಳ: [ಏಕ/ಆದಿ]
ಪಾಲಿಸು ರವಿತೇಜ ಮಂತ್ರಾಲಯ ಗುರುರಾಜ	ಪ
ಶ್ರೀಸುಖತೀರ್ಥ ಮತಾಂಬುಧಿಗೆ ಭೇಶ
ಭಾಸುರವರವೃಂದಾವನ ನಿವಾಸ
ಭೂಸುರ ಸಂಸೇವಿತ ನತಜನ ಪೋಷಕ ಮುನಿವ್ಯಾಸ	1
ತುಂಗಭದ್ರ ಸುತರಂಗಿಣಿ ತೀರ ನಿಲಯ
ಸಂಗೀತಪ್ರಿಯ ಸತ್ಕವಿಜನಗೇಯ
ತುಂಗಮಹಿಮ ಕುಮತದ್ವಿರದ ಸಿಂಗನೆ ಪಿಡಿಕೈಯ್ಯ	2
ಶ್ಯಾಮಸುಂದರ ಮೂಲಶ್ರೀರಾಮಚಂದ್ರನ ಚರಣ 
ತಾಮರಸಯುಗ್ಮಂಗಳಿಗೆ ಷಟ್‍ಚರಣ
ಕಾಮಿತಶುಭದಾಯಕ ನಿಸ್ಸೀಮ ಕರುಣಾಭರಣ	3
							

433 ಯತಿರಾಜ ಯತಿರಾಜ

433.	ರಾಗ: ಪೂರ್ವಿ/ದೇಶಕಾರ	ತಾಳ: ಅಟ/ತ್ರಿ
ಯತಿರಾಜ ಯತಿರಾಜ	ಪ
ಕ್ಷಿತಿದೇವತತಿನುತ ರಾಘವೇಂದ್ರ	ಅ.ಪ
ಆದಿಯುಗದಿ ಪ್ರಹ್ಲಾದಸುನಾಮದಿ
ಮೋದದಿ ಭಜಿಸುತ ಮಾಧವನೊಲಿಸಿದ 	 1
ಘನವೀರಾಗ್ರಣಿ ಜನಪತಿ ಬಾಹ್ಲೀಕ-
ನೆನಿಸಿ ದ್ವಾಪರದಿ ಜನಿಸಿದ ಗುಣನಿಧಿ	2
ವಾಸವನಾಮಕ ದಾಸಾರ್ಯರಿಗುಪ-
ದೇಶಗೈದ ಗುರುವ್ಯಾಸ ಪೋಷಿಸೈ	3
ಕ್ಷೋಣಿಯೊಳಗೆ ಕುಂಭಕೋಣಸುಕ್ಷೇತ್ರದಿ
ವೀಣೆವೆಂಕಟಭಿಧಾನದಿ ಜನಿಸಿದ	4
ದೀನಜನಾಮರಧೇನು ಸುಧೀಂದ್ರರ
ಪಾಣಿಪದ್ಮಭವ ಮಾಣದೆ ಕಾಯೊ	5
ತುಂಗಭದ್ರಸುತರಂಗಿಣಿತೀರದಿ
ಕಂಗೊಳಿಸುವ ಶತಪಿಂಗಳತೇಜ	6
ಕಲುಷಕುಲಾದ್ರಿಗೆ ಕುಲಿಶನೆಂದೆನಿಸಿದ 
ಅಲವಬೋಧಮತಜಲಧಿಶಶಾಂಕ	7
ಬಾಲನ ಬಿನ್ನಪ ಲಾಲಿಸಿ ಪ್ರೇಮದಿ
ಪಾಲಿಪುದೈ ಮಂತ್ರಾಲಯನಿಲಯ	8
ಪರಿಮಳಗ್ರಂಥವ ವಿರಚಿಸಿ ದುರ್ಮತ
ಮುರಿದು ಸಜ್ಜನರಿಗೊರೆದ ಮಹಾತ್ಮ	9
ಪರಿಪರಿಭವದೊಳು ಪರಿತಪಿಸುವೆನೈ
ಪರಮಕರುಣದಲಿ ಪರಕಿಸಿ ಪೊರೆಯೊ	10
ಕಾಮಿತದಾಯಕ ಭೂಮಿಜೆನಾಯಕ
ಶ್ಯಾಮಸುಂದರನ ಪ್ರೇಮದ ಸೇವಕ	11
							

434 ಯೋಗಿಕುಲಪುಂಗವ ಸಲಹೊ

434.	ರಾಗ: ಮಾಲ್‍ಕೌಂಸ್	ತಾಳ: ತ್ರಿ
ಯೋಗಿಕುಲಪುಂಗವ ಸಲಹೊ 	ಪ
ಕೋಲತನಯೆತಟಸದನ ಸದಯ
ವಿಬುಧವೃಂದ ನುತ ಪ್ರೇಮಸಾಗರ	ಅ. ಪ
ದೈಶಿಕಾಗ್ರಣಿ ಸುಜನಪಾ¯ ವಿಜಿತಾನಂಗ
ಭಾಸುರ ಮಹಿಮ	1
ಪಾವನಾತ್ಮಕ ಪಾಪವಿದೂರ
ಕಾವುದೈ ಸದಾ ಕೋವಿದರೊಡೆಯ	2
ಶ್ಯಾಮಸುಂದರ ಪ್ರೇಮಸುಪಾತ್ರ 
ಸ್ವಾಮಿ ಶ್ರೀಗುರುರಾಘವೇಂದ್ರಾರ್ಯ	3
							

435 ರಾಘÀವೇಂದ್ರ ಗುರುರಾಯ ಬಾಗಿ ನಮಿಸುವೆ

435.	ರಾಗ: ಬಾಗೇಶ್ರಿ	ತಾಳ: ಝಂಪೆ
ರಾಘÀವೇಂದ್ರ ಗುರುರಾಯ ಬಾಗಿನಮಿಸುವೆ ಕೈಯ್ಯ
ಬೇಗ ಪಿಡಿದು ಪಾಲಿಸಯ್ಯ ಭಾಗವತಜನಪ್ರಿಯ	ಪ
ಮಧ್ವಮತ ಪಾರಾವಾರ ಶುದ್ಧಪೂರ್ಣಸುಧಾಕರ
ಅದ್ವೈತಾದ್ರಿಶತಧರ ಉದ್ಧರಿಸಯ್ಯ ಯೋಗೀಶ್ವರ	1
ಭಾಸುರಶ್ರೀಮಂತ್ರಾಗಾರವಾಸ ಸುಕಾಷಾಯಾಂಬರ- 
ಭೂಷ ಭೂಸುರಪರಿವಾರ ಪೋಷ ಪ್ರಹ್ಲಾದನವತಾರ	2
ತುಂಗಾಭದ್ರಾಸುತೀರದಿ ಶೃಂಗಾರಸದ್ವøಂದಾವನದಿ
ಪಿಂಗಳಸನ್ನಿಭಾಂಗದಿ ಕಂಗೊಳಿಪ ದಯಾಂಬುಧಿ  	3
ಮರುತಾವೇಶ ಯಮಿವಂiÀರ್i ದುರಿತಾಹಿವೈನತೇಯ 
ಪರಮೋದಾರಿ ಪರಿಮಳಾರ್ಯ ತರಳನೆಂದು ಕರುಣಿಸಯ್ಯ	4
ಶ್ಯಾಮಸುಂದರಭಕ್ತಾಗ್ರಣಿ ಭೂಮಿಯೊಳು ನಿನಗಾರೆಣೆ |
ಕಾಮಿತಾರ್ಥಚಿಂತಾಮಣಿ ಸ್ವಾಮಿ ಶ್ರೀವ್ಯಾಸಸನ್ಮೌನಿ	5
							

436 ರಾಘವೇಂದ್ರ ಗುರುರಾಯ ಶುಭಕಾಯ

436.	ರಾಗ: ಕಾಪಿ	ತಾಳ: ತ್ರಿ
ರಾಘವೇಂದ್ರ ಗುರುರಾಯ ಶುಭಕಾಯ ಕವಿಗೇಯ ಪಿಡಿ ಕೈಯ್ಯ	ಪ
ಪ್ರಥಮಯುಗದಿ ಶ್ರೀಪತಿಯ ಸ್ಥಂಬದಲಿ
ಪಿತನಿಗೆ ತೊರಿಸಿದ ಶ್ರೀಪಾದಪ್ರಹ್ಲಾದ ಕೊಡು ಮೋದ	1
ಶ್ರೀ ಸಮೀರಸುಮತಾಂಬುನಿಧಿಗೆ ಪೂರ್ಣ
ಭೇಶ ಮಂತ್ರಾಲಯವಾಸ ನತಪೋಷ ಮುನಿವ್ಯಾಸ ಭಯನಾಶ	2
ಕಾಮಧೇನುಸಮ ಕಾಮಿತಗರೆವಂಥ
ಶ್ಯಾಮಸುಂದರನಿಜದೂತ ವರದಾತ ಪ್ರಖ್ಯಾತದ್ವಿಜನಾಥ	3
							

437 ರಾಯರೇ ಗತಿಯು ನಮಗೆ

437.	ರಾಗ: ಕಾಂಬೋಜಿ	ತಾಳ: ಝಂಪೆ
ರಾಯರೇ ಗತಿಯು ನಮಗೆ 
ವಾಯುಸುಮತೋದ್ಧಾರ ಶ್ರೀ ರಾಘವೇಂದ್ರಗುರು 	ಪ
ಶುಕಪಿಕಮೊದಲಾದ ವಿಕುಲಕ್ಕೆ ಮಧುರಫಲ 
ಯುಕುತಮಾಗಿಹ ಚೂತಸುಕುಜ ಗತಿಯು 
ಮುಕುತಿಗೆ ಸುe್ಞÁನ ಭಕುತಿ ವಿರಕುತಿ ಗತಿಯು 
ಅಕಳಂಕಶ್ರೀಮಂತ್ರಮಂದಿರದಿ ನೆಲೆಸಿಪ್ಪ	1
ಋಷಿಗಳಿಗೆ ಪ್ರಣವವೇಗತಿ ಝಷಗಳಿಗೆ ಜಲವೆ ಗತಿ
ಸಸಿಗಳಭಿವೃದ್ಧಿಗೆ ಶಶಿರವಿ ಗತಿಯೊ
ಶಿಶುಗಳಿಗೆ ಜನನಿ ಗತಿ ಪಶುಗಳಿಗೆ ತೃಣವೆ ಗತಿ
ಅಸಮಮಹಿಮೆಲಿ ಮೆರೆವ ಮಿಸುನಿಶಯ್ಯಜರಾದ	2
ಕಾಮಿನಿಮಣಿಯರಿಗೆ ಕೈಪಿಡಿದ ಕಾಂತಗತಿ
ಭೂಮಿಬುಧರಿಗೆ ಮಧ್ವಶಾಸ್ತ್ರಗತಿಯೊ
ತಾಮರಸಸಖಸುತನ ಭಯಪೋಪುದಕೆ 
ಶ್ಯಾಮಸುಂದರವಿಠಲಸ್ವಾಮಿ ನಾಮವೆ ಗತಿಯೊ	3
							

438 ಶ್ರೀ ರಾಘವೇಂದ್ರ ಗುರುರಾಜ

438.	ರಾಗ: ಪೂರ್ವಿ	ತಾಳ: ಆದಿ
ಶ್ರೀ ರಾಘವೇಂದ್ರ ಗುರುರಾಜ 
ಬಾರಯ್ಯ ಭಕ್ತಾಮರಭೂಜ	ಪ
ತುಂಗಾತೀರದಿ ಪಿಂಗಳತೇಜದಿ
ಕಂಗೊಳಿಸುವ ಸನ್ಮುನಿರಾಯ
ಬಂಗಾರಶಯ್ಯಜ ಶುಭಕಾಯ
ರಂಗನಪಾದ ತೋರಯ್ಯ	1
ಮಂಗಳಮಹಿಮನೆ ಸಂಗೀತಪ್ರಿಯನೆ
ಅಂಗಜದೂರನೆ ಯತಿವರನೆ
ಶೃಂಗಾರ ವೃಂದಾವನನಿಲಯ
ಡಿಂಗರಪಾಲ ಕವಿಗೇಯ	2
ಶ್ರೀ ಶ್ಯಾಮಸುಂದರಪ್ರಿಯದಾಸ
ಕ್ಲೇಶನಾಶನ ವ್ಯಾಸಾರ್ಯ ನತಪೋಷ
ದೈಶಿಕನಾಥ ಭಾಸುರಚರಿತ ವರ-
ಕಾಷಾಯಭೂಷಿತ ಮಾಂಪಾಹಿ	3
							

439 ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರ

439.	ರಾಗ: ಕಾಂಬೋಜಿ	ತಾಳ: ಝಂಪೆ
ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರ 
ಪತಿತಪಾವನ ಪವನಸುತಮತಾಂಬುಧಿಚಂದ್ರ	ಪ
ನಂಬಿದೆನೊ ನಿನ್ನ ಚರಣಾಂಬುಜವ ಮನ್ಮನದ
ಹಂಬಲವ ಪೂರೈಸೊ ಬೆಂಬಿಡದಲೆ 
ಕುಂಭಿಣೀಸುರನಿಕುರುಂಬವಂದಿತ ಜಿತ-
ಶಂಬರಾಂತಕ ಶಾತಕುಂಭಕಶ್ಯಪತನಯ	1
ಕ್ಷೋಣಿಯೊಳು ನೀ ಕುಂಭಕೋಣಕ್ಷೇತ್ರದಿ ಜನಿಸಿ
ವೀಣವೆಂಕಟ ಅಭಿಧಾನದಿಂದ
ಸಾನುರಾಗದಿ ದ್ವಿಜನ ಪ್ರಾಣಉಳುಹಿದ ಮಹಿಮೆ
ಏನೆಂದು ಬಣ್ಣಿಸಲಿ e್ಞÁನಿಕುಲತಿಲಕ	2
ಮಂದಮತಿಗಳ ಸಂಗದಿಂದ ನಿನ್ನಯ ಚರಣ
ಇಂದಿನತನಕ ನಾ ಪೊಂದಲಿಲ್ಲ
ಕುಂದು ಎಣಿಸದೆ ಕಾಯೊ ಕಂದರ್ಪಪಿತಶ್ಯಾಮ-
ಸುಂದರನ ದಾಸ ಕರ್ಮಂದಿಕುಲವರ್ಯ	3
103. ಶ್ರೀಕರವಿಠಲ
							

440 ಸಲಹೊ ಸಲಹೊ ಕರುಣಾ ಶರಧಿಯೆ

440.	ರಾಗ: ಶಹನ	ತಾಳ: ತ್ರಿ
ಸಲಹೊ ಸಲಹೊ ಕರುಣಾಶರಧಿಯೆ
ಕೋಲಜಾತತೀರನಿವಾಸ	ಪ
ಬೃಂದಾವನದಿ ನಿಂದ ಮುನೀಂದ್ರ
ಮಂದಜನೌಘಕೆ ಕಲ್ಪ ಸುಭೂಜ	1
ದೇವಸ್ವಭಾವ ಭೂದೇವವರೇಣ್ಯ
ಕೋವಿದ ಪಂಡಿತ ಪಾವನಕಾಯ	2
ಶ್ರೀಮಹಿವಲ್ಲಭ ಶ್ಯಾಮಸುಂದರ
ಪ್ರೇಮ ಪಡೆದ ನಿಷ್ಕಾಮಿ ಪ್ರಹ್ಲಾದನೆ	3
							

441 ಈ ಪರಿಯ ಸೊಬಗಾವಯತಿಗಾದರುಂಟೆ

441.	ರಾಗ: ಕಾಂಬೋಜಿ	ತಾಳ: ಝಂಪೆ
ಈ ಪರಿಯಸೊಬಗಾವಯತಿಗಾದರುಂಟೆ
ತಾಪಸೋತ್ತಮ ರಾಘವೇಂದ್ರ ಮುನಿಗಲ್ಲದೆ	ಪ
ಖುಲ್ಲ ನಿನ್ನಯ ಹರಿಯು ಎಲ್ಲಿಹನು ತೋರೆನಲು
ಬಲ್ಲಿದನು ಸ್ತಂಭದೊಳಗಲ್ಲೆ ತೊರಿದ
ಜಲಜಸಂಭವ ಪ್ರಮುಖರೆಲ್ಲ ತುತಿಸಲು ಸಿರಿಯ-
ನಲ್ಲನೊಲಿಮೆಯ ಪ್ರಹ್ಲಾದಗಲ್ಲದೆ	1
ಭೂಪ ಕುಂತಿಜನಿಂದ ತಾ ಪಡೆದು ಘನವರವ
ಗೋಪಿಕಂದನ ಒಲಿಸಿ ಬಲುತುತಿಸಿದ
ಶ್ರೀಪುರಂದರದಾಸರಾಪೇಕ್ಷ ಸಲ್ಲಿಸಿದ
ತಾಪಸೋತ್ತಮಜನರ ತಾ ಪುನೀತರಗೈದ	2
ತಂದೆ ಶ್ರೀಕರವಿಠಲನಿಂದಾಜ್ಷೆ ಕೈಗೊಳುತ
ಚೆಂದದಿಂದಲಿ ವರಮಂತ್ರಮಂದಿರದಿ ನಿಂದು
ಒಂದಾರುಶತವರುಷ ವಂಧ್ಯಾಂಧಕರಿಗೆಲ್ಲ
ಕಂದರಕ್ಷಿಗಳಿತ್ತು ಕುಂದಿಲ್ಲದಲೆ ಪೊರೆವ	3
							

442 ಕರುಣಿಸಿ ಪಿಡಿಯೋ ಕೈಯ್ಯಾ ಗುರು

442.	ರಾಗ: ಮಿಶ್ರ ನಾಟ	ತಾಳ: ಆದಿ
ಕರುಣಿಸಿ ಪಿಡಿಯೋ ಕೈಯ್ಯಾ ಗುರು ರಾಘವೇಂದ್ರರಾಯಾ	ಪ
ನರಸಿಂಧೂರಾರಿ ದಯದಿ ವರ ಪಡೆದು ಕ್ಷೋಣಿತಳದಿ
ಪೊರೆಯುವ ಕರುಣಿ ಎಂದು ಮೊರೆಹೊಕ್ಕೆ ದೀನಬಂಧೂ	1
ಕೋರಿದರಭೀಷ್ಟವಗರೆದು ಆರೊಂದುನೂರುವರುಷ
ಸಾರಿದಾ ಜನರಾ ಪೊರೆವ ಸೂರಿಸುಧೀಂದ್ರತನಯಾ	2
ನೀನೊಲಿದಮಾತ್ರ ಮನದಿ ಮಾವಾರಿ ಪೊರೆವ ದಯದಿ
ದೇವಸ್ವಭಾವ ಜನದೀ ನೋವಾಗಗೊಡದೆ ಭವದೀ	3
ನಾ ಮಾಡಿದಪರಾಧ ನೀ ಮಾತ್ರ ಕ್ಷಮಿಸು ಬಿಡದೆ
ನಾ ಮನದಿ ಬೇಡಿಕೊಂಬೆ ಹೇ ಮಂತ್ರಮುನಿಯೆ ಧೊರೆಯೇ	4
ಜಪತಪವ ಮಾಡಲರಿಯೆ ಕುಪಥಾದೊಳಿರುವ ಎನ್ನ
ಸುಪಥವ ತೋರಿ ಸಲಹೋ ಅಪ್ಪಣಾರ್ಯಗೊಲಿದ ಪ್ರಭುವೇ	5
ನಿನ್ಹೊರತು ಪೊರೆವರನ್ನು ಇನ್ನಾರ ಕಾಣೆ ಜಗದಿ
ಮನ್ನಿಸಿ ಪೊರೆವ ದಾತ ಎನ್ನಾಣೆ ಮುನಿವರ್ಯ	6
ಸಾಗಿ ನೀ ಬಾರೊ ಎಂದು ಕೂಗುತ ಕರೆಯಕೇಳಿ
ಬೇಗಾನೆಬಂದು ಪೊರೆವೆ ಬಾಗುವೆ ನಿನ್ನ ಪದಕೆ	7
ಜನನಿಯು ತನಯನನ್ನು ಅನುನಯದಿ ಪೊರೆಯುವಂತೆ
ಮುನಿವರ್ಯ ಪ್ರಾರ್ಥಿಸುವೆ ಕ್ಷಣಬಿಡದೆ ಸಲಹೂ ತಂದೆ	8
ವಟುವೇಷಧಾರಿ ಶ್ರೀಕರವಿಠಲಾನೆ ಪರನು ಜಗದಿ
ಧಿಟನೆಂದು ಸಾರಿದಂಥಾ ವಿಠಲಾರ್ಯಗೊಲಿದಮೌನಿ	9
							

443 ಕಾಯೊ ಮಂತ್ರಮುನಿರಾಯ ನಿರಂತರ

443.	ರಾಗ: ಪೀಲು	ತಾಳ: ಕೇರವ
ಕಾಯೊ ಮಂತ್ರಮುನಿರಾಯ ನಿರಂತರ
ಕಾಯೊ ಎನ್ನ ಶುಭಕಾಯ	ಪ
ಖುಲ್ಲ ನಿನ್ನ ಹರಿ ಎಲ್ಲಿಹ ತೋರೆನೆ
ಅಲ್ಲೆ ಸ್ತಂಭದಲಿ ತೋರ್ದೆ	1
ತಾಳಗತಿಗೆ ಕೃಷ್ಣ ಲೀಲೆಯಿಂದಲಿ ಕುಣಿದ
ಶೀಲ ನಿನ್ನಲಿ ದಯವೆಂತೊ	2
ಮಾರುತಶುಭಮತವಾರಿಧಿಚಂದಿರ
ಸೂರಿವರ್ಯ ರಾಘವೇಂದ್ರ	3
ರಾಮನ ಪದಯುಗ ನೇಮದಿ ಭಜಿಸುವ
ಹೇ ಮಮಸ್ವಾಮಿ ಕೃಪಾಳೊ	4
ಈ ಸಮಯದಿ ಎನ್ನ ನೀ ಸಲಹುವುದಯ್ಯ
ಶ್ರೀಶಶ್ರೀಕರವಿಠಲಪ್ರಿಯ	5
							

444 ಕೂಗಿದರು ಧ್ವನಿ ಕೇಳದೆ

444.	ರಾಗ: ಅಠಾಣ/ಧನಶ್ರಿ	ತಾಳ: ಆದಿ/ತ್ರಿವಿಡ
ಕೂಗಿದರು ಧ್ವನಿ ಕೇಳದೆ ಶಿರ
ಬಾಗಿದರು ದಯಬಾರದೆ ಗುರುವೆ	ಪ
ಯೋಗಿವರ್ಯ ಕೃಪಾಸಾಗರ ನಿನ್ನಯ
ಆಗಮವೆಂದಿಗೆ ಆಗುವುದೊ ಪ್ರಭುವೆ	ಅ.ಪ
ಸುಂದರ ವೃಂದಾವನ ಮಂದಿರ ಘನ್ನ
ಮುಂದಾರಿಗಾಣದೆ ಪೊಂದಿದೆ ದ್ವಂದ್ವಚರಣ
ಒಂದುದಿನವಾದರೂ ಬಂದು ನೀ ಸ್ವಪ್ನದಿ
ಸಂದರುಶನವನು ಕರುಣಿಸು ತವಕದಿ	1
ಶರಣರಸುರತರು ನೀನಲ್ಲವೆ ಖರೆ
ಕರಿಕರಿಗಾರದೆ(?) ಇಡುವೆ ನಿನಗೆ ಮೊರೆ
ಮೊರೆಹೊಕ್ಕವರಿಗೆ ಮರೆಯಾಗುವರೆ
ಸರಿಯೆ ನಿನಗಿದು ಗುರುಪರಿಮಳಾರ್ಯ	2
ನಾ ಕೈಸೋತವ ವಾಕುಲಾಲಿಸೊ ಎನ್ನ
ನೀ ಕೈ ಪಿಡಿದು ಬಂದು ಸಾಕದಿದ್ದರೆ ಎನ್ನ
ನಾಕಾಧಿಪನುತ ಶ್ರೀಕರವಿಠಲನು
ತಾ ಕರಪಿಡಿಯನು ಪುಸಿಯಲ್ಲ ಎನ್ನಾಣೆ	3
							

445 ಕೈ ಪಿಡಿ ಬಾ ಪ್ರಭೊ

445.	ರಾಗ: ಕಮಾಚ್	ತಾಳ ಆದಿ
ಕೈಪಿಡಿ ಬಾ ಪ್ರಭೊ ಶ್ರೀಪತಿಪದಪದುಮ ಷಟ್ಪದ	ಪ
ಮಂತ್ರವನರಿಯದ ಪಾಮರ ನಾ ಘನ
ಮಂತ್ರಸದನ ಮೊರೆಆಲಿಸಿ ಕೇಳೆನ್ನ	1
ನಿನ್ಹೊರತನ್ಯರ ಕಾಯ್ವರ ಕಾಣೆನೊ
ಎನ್ನುದಾಸಿಸದಲೆ ಕಾಯೊ ಕರುಣಿ	2
ಸ್ವೀಕರಿಸುತ ಸೇವೆ ನೀ ಕೊಡುತಲಿ ವರ
ಶ್ರೀಕರವಿಠಲನದಾಸಾಗ್ರೇಸರ	3
							

446 ಗುರುವರನೆ ಪಾಹಿ ಪರಿಪಾಹಿ

446.	ರಾಗ: ಪಹಡಿ	ತಾಳ: ಆದಿ
ಗುರುವರನೆ ಪಾಹಿ ಪರಿಪಾಹಿ	ಪ
ಶ್ರೀಮಂತ್ರಾಲಯಸೋಮ ನಿಸ್ಸೀಮ
ರಾಮಾರಾಧಕ ಹೇ ಮಮಸ್ವಾಮಿ	1
ಯೋಗಿಗಳರಸನೆ ಭಾಗವತರಪ್ರಿಯ
ಕೂಗಿಕರೆಯಲತಿವೇಗದಿ ಬರುವ	2
ಶ್ರೀಕರವಿಠಲ ಲೋಕದೊಳಗೆಲ್ಲ
ಶೇಖರನೆಂಬ ಸೊಲ್ಲಸಾರ್ದ ಶೀಲ	3
							

447 ಪತಿತನಾದೆ ಎನ್ನ ಪೊರೆಯೊ ಯತಿ

447.	ರಾಗ: ಕಾಂಬೋಜಿ	ತಾಳ: ಝಂಪೆ
ಪತಿತನಾದೆ ಎನ್ನ ಪೊರೆಯೊ ಯತಿರಾಘವೇಂದ್ರರಾಯ
ಗತಿಯಾರಕಾಣೆ ಮೊರೆಯನಾಲಿಸಯ್ಯ	ಪ
ಮುಂದೆ ದಾರಿಗಾಣೆನೆಂದು ಬಂದುನಿಂದ ಭಕ್ತ-
ವೃಂದ ಪಾಲಿಸುವ ಧೊರೆಯೆ ಚಂದದಿಂದಲಿ ಗುರುವೆ	1
ಒಂದಾರುನೂರುವರುಷ ಅಂದವಾದ ವೃಂದಾವನದಿ
ನಿಂದು ತೋರುತಿಪ್ಪ ಮಹಿಮ ಮಹಾಮುನಿವರ್ಯನೆ	2
ಮೋದತೀರ್ಥವ್ಯಾಸಹೃದಯನಾದ ಶ್ರೀಕರವಿಠಲರೇಯ
ಬೋಧಿಸಿದೆ ಪರನು ಎಂದು ಭಕುತಬಂಧುವೆ ಕರುಣಾಸಿಂಧುವೆ	3
							

448 ಪಾಲಯಮಾಂ ಪರಿಪಾಲಯಮಾಂ

448.	ರಾಗ: ಮಿಶ್ರಕಾಪಿ	ತಾಳ: ತೀನ್/ತ್ರಿ
ಪಾಲಯಮಾಂ ಪರಿಪಾಲಯಮಾಂ	ಪ
ಕೋಲಜತಟ ಮಂತ್ರಾಲಯನಿಲಯ	ಅ.ಪ
ಬಲುಬಳಲಿಸೆ ಖಳ ನರಹರಿ ನಿನ್ನಾ-
ಛಲ ಗೆಲಿಸಿದ ತೆರ ವಲಿಯುತ ಎನ್ನ	1
ಹಿಂದೆ ವ್ಯಾಸರುನೀನೆಂದೆನಿಸಿದೆ ತಂದೆ
ಸಂದೇಹ ಸಲ್ಲದೊ ಬಂಧುರಮಹಿಮ	2
ಇಂದು ಧರಾಮರವಂದ್ಯ ಶ್ರೀಕರವಿಠಲ-
ನೆಂದುಸಾರಿದೆ ಪರ ಕುಂದೆಣಿಸದೆ ತ್ವರ	3
							

449 ಪಾಹಿ ಪಾಹಿ ಸುಧೀಂದ್ರಜ

449.	ರಾಗ: ಮಾಂಡ್	ತಾಳ: ಕವ್ವಾಲಿ
ಪಾಹಿ ಪಾಹಿ ಸುಧೀಂದ್ರಜ	ಪ
ಪಾಹಿ ನಮೋ ಪಾಹಿ ನಮೋ
ಪಾಹಿ ಶರಣರಸುರಭೂಜಾ	ಅ.ಪ
ಸಹ್ಲಾದನಣ್ಣ ಪ್ರಹ್ಲಾದ ನೀನೇವೆ
ಬಾಹ್ಲೀಕ ದ್ವಾಪರಯುಗದೊಳು	1
ಭೂಪ ಕುಂತಿಜನಿಂದ ನೀ ಪಡೆಯುತ ವರ
ತಾಪಸಿಯೆನಿಸಿದೆ ಇಳೆಯೊಳು	2
ಶ್ರೀಪಾದರಾಜರ ನೀ ಪಡೆದೊಲುಮೆಯ
ಗೋಪಿಕಂದನ ಕುಣಿಸಿದೆ	3
ಮರಳಿ ಪರಿಮಳವಿರಚಿಸಿ ಧರೆಯೊಳು
ಮೆರೆಯುವ ಗುರು ರಾಘವೇಂದ್ರಾರ್ಯ	4
ವಂಧ್ಯಾಂಧರಿಗೆ ಸುಕಂದರಕ್ಷಿಗಳ
ಕುಂದದೆ ಕೊಡಿತಿಪ್ಪ ಯತಿವರ	5
ವಾತಜಾತನ ಮಾತು ಮಾತಿಲಿ ನೀ ಗೆಲಿದೆ
ಭೂತನಾಥನೆಪರನೆಂಬರಾ	6
ಸ್ವೀಕರಿಸುತಸೇವೆ ಮೂಕ ಬಧಿರರಿಗೆ	
ಬೇಕಾದ ವರವಿತ್ತು ಪೊರೆಯುವೆ	7
ಚೂತರಸದಿ ಬಿದ್ದ ಪೋತನ ಸಲಹಿದ
ಖ್ಯಾತನೆ ಬಿನ್ನಪ ಲಾಲಿಸೋ	8
ಎಲ್ಲಿ ಕರೆಯೆ ನೀನಲ್ಲಿ ಬಂದೊದಗುವೆ
ಬಲ್ಲಿದ ಮಹಿಮನೆ ಬಹುಬೇಗ	9
ಇನಕುಲೇಶನ ಪಾದವನಜಾರಾಧಕ ಎನ್ನ
ಮನದಭಿಲಾಷೆಯ ಸಲಿಸಯ್ಯಾ	10
ಒಂದರಿಯದ ಬಲು ಮಂದಮತಿಯು ನಾನು
ತಂದೆ ಎನ್ನಪರಾಧ ಕ್ಷಮಿಸಯ್ಯಾ	11
ದಂಡಕಾಷಾಯಕಮಂಡಲಭೂಷಿತ
ಮಂಡೆಯ ಬಾಗಿ ನಾ ನಮಿಸುವೆ	12
ಮಾತುಮಾತಿಗೆ ನೆನೆವಾತುರ ಕೊಡು ನಿನ್ನ
ವಾತಜಸುಮತಾಬ್ಧಿಚಂದಿರ	13
ಸಂತತ ನಿನ್ನನು ಚಿಂತಿಪರಿಗೆ ಬಹು
ಚಿಂತೆ ಕಳೆವ ಮಂತ್ರಮಂದಿರಾ	14
ತಾಪಸರೊಡೆಯ ಹೃತ್ತಾಪ ನಿವಾರಿಸೋ
ನಾ ಪಾದಪಿಡಿವೆ ಕೃಪಾಕರ	15
ಕಂಡವರನು ಬೇಡಿ ಬೆಂಡಾದೆ ತವಪಾದ
ಪುಂಡರೀಕದಿ ಮನ ನಿಲ್ಲಿಸಯ್ಯಾ	16
ಮುಂದಾರಿಗಾಣದೆ ನೊಂದೆನೋ ತವಪಾದ
ಸಂದರುಶನವನು ನೀಡಯ್ಯಾ	17
ಶೆರಗೊಡ್ಡಿ ಬೇಡುವೆ ಪರಿಮಳಾರ್ಯನೆ ನಿನ್ನ
ಕರುಣಬಾರದೆ ಇನ್ನು ಎನ್ನೊಳು	18
ನಿನ್ನನೆ ನಂಬಿನ್ನು ಅನ್ಯರಿಗಾಲ್ಪರಿಯೆ
ಎನ್ನಮನವ ನೀನರಿಯೆಯಾ	19
ಮೋದದಿ ದಾಸರ ಪಾದಧೂಳಿಯಲಿ
ಸಾಧುವರಿಯ ಹೊರಳಾಡಿಸೋ	20
ತುಂಗಾತಟದ ಯತಿಪುಂಗವ ಹೃದ-
ಯಾಂತರಂಗದಲ್ಲಿಪ್ಪನ ತೋರಯ್ಯ	21
ಕರಕರಿಗಾರದೆ(?) ಮೊರೆಹೊಕ್ಕೆ ಎನ್ನನು
ಮರೆಯುವುದುಚಿತವೆ ಗುರುವರನೆ	22
ಜನನಿಜನಕ ನೀನೆ ವಿನಯದಿ ಬೇಡುವೆ
ಘನಮಹಿಮನೆ ದಯವಿರಲಯ್ಯಾ	23
ಕೂಸಿನ ಜನನಿ ನಿರಾಶೆಗೊಳಿಪಳೆ
ದೊಷದೂರನೆ ಆಸೆಪೂರ್ತಿಸೋ	24
ಅನ್ಯರ ಭಜಿಸದೆ ನಿನ್ನನೆ ಭಜಿಸುವೆ
ಮನ್ನಿಸದಿರುವರೆ ಗುರುವರ	25
ಕುಂಭಿಣಿಯೊಳು ನಿನ್ನ ನಂಬಿದಜನ ಬಲು
ಸಂಭ್ರಮದೊಳಗಿರುತಿಹರಯ್ಯಾ	26
ಏಕಮನದಿ ನಮ್ಮ ಶ್ರೀಕರವಿಠಲನ್ನ
ಲೋಕದೊಳ್ ಪರನೆಂದು ಸಾರಿದಾ	27
							

450 ಬಾರೈ ಬಾರೈ ಕೋರಿ ಕರೆವೆ ಗುರು

450.	ರಾಗ: ಅಠಾಣ	ತಾಳ: ಆದಿ
ಬಾರೈ ಬಾರೈ ಕೋರಿ ಕರೆವೆ ಗುರು
ಸೂರಿಸುಧೀಂದ್ರಜನೆ ದೇವ	ಪ
ದೇವಸ್ವಭಾವ ಬಾರೊ ಕಾವಕರುಣಿ ಬಾರೊ
ಭಾವಭಕುತಿಯನಿತ್ತು ಸೇವೆಕೊಳ್ಳಲು ಬಾರೊ	1
ಕರೆದಲ್ಲಿಗೆ ಬರುವೆ ಬಾರೊ ಕರುಣಾವಾರಿಧಿ ಬಾರೊ
ಸೆರಗೊಡ್ಡಿ ಬೇಡುವೆ ಪರಿಮಳಾರ್ಯನೆ ಬಾರೊ	2
ಶ್ರೀಕರವಿಠಲನಪಾದ ಕೋಕನದ ಮಧುಪ ಬಾರೊ
ನಾ ಕರವ ಮುಗುವೆನೊ ನೀ ಕರುಣಿ ಬಾರೊ	3
							

451 ಬಾರೊ ಗುರುರಾಜ ಸುರಭೂಜ

451.	ರಾಗ: ಬಿಲಾವಲ್	ತಾಳ: ಕೇರವ
ಬಾರೊ ಗುರುರಾಜ ಸುರಭೂಜ	ಪ
ಸಂತತ ನಿನ್ನನು ಚಿಂತಿಪರಿಗೆ ಬಹು
ಚಿಂತೆ ಕಳೆವ ಪ್ರಭೊ ಮಂತ್ರಮಂದಿರದಿಂದ	1
ಕರೆದಲ್ಲಿಗೆ ಬರುವ ಘನ್ನ ಬಿರುದು ಕೇಳಿದೆ ನಿನ್ನ 
ಕರುಣಾಕರ ತವಚರಣವ ನಂಬಿದೆ	2 
ಶ್ರೀಕರವಿಠಲನೆ ತಾ ಖರೆ ಪರನೆಂದು
ಲೋಕದೊಳ್ ಸಾರಿದ ಹೇ ಕರುಣಾಕರ	3
							

452 ರಾಜ ಬಾರೊ ಗುರುರಾಜ ಬಾರೊ

452.	ರಾಗ: ಮಿಶ್ರಕಾಪಿ	ತಾಳ: ಕವ್ವಾಲಿ/ಏಕ
ರಾಜಬಾರೊ ಗುರುರಾಜ ಬಾರೊ
ರಾಜಾಧಿರಾಜ ಗುರು	ಪ
ಸಹ್ಲಾದನಣ್ಣ ಬಾರೊ ಪ್ರಹ್ಲಾದರಾಜ
ಬಾಹ್ಲೀಕ ವ್ಯಾಸನಾಗಿ ಉಲ್ಹಾಸದಿಂದ ಬಾರೊ	1
ತುಂಗನಿವಾಸ ಮುನಿಪುಂಗವ ನೀ ಭಕ್ತ
ಜಂಗುಳಿ ಪಾಲಿಸಲು ಸಂಗೀತಪ್ರಿಯ ಬಾರೊ	2
ಚೂತರಸದಿ ಬಿದ್ದ ಪೋತನ ಸಲಹಿದ
ವಾತಸುಮತಾಭ್ಧಿಸಿತಾಕಿರಣ ಬಾರೊ	3
ವಂಧ್ಯಾಂಧರಿಗೆ ಸುಕಂದರಾಕ್ಷಿಗಳ
ಕುಂದದೆ ಕೊಡುತಿಪ್ಪ ಸುಂದರವದನನೆ ಬಾರೊ	4
ನೀ ಕರುಣಾಸಿಂಧು ಬೇಕಾದ್ದು ಕೊಡುತಿರೆ
ಬೇಕೆಂದು ಬೇಡೆ ಪರರ ಶ್ರೀಕರವಿಠಲನಾಣೆ 	5
							

453 ಶ್ರೀ ಗುರುಪದ ಯುಗ ಸ್ಮರಿಸುವೆ

453.	ರಾಗ: ಜಯಜಯವಂತಿ	ತಾಳ: ತೀನ್/ತ್ರಿ
ಶ್ರೀ ಗುರುಪದಯುಗ ಸ್ಮರಿಸುವೆ
ರಾಗಾದಿ ಪ್ರತಿದಿನ	ಪ
ಯೋಗಿಗಳರಸನಿವ ಶಿರ
ಬಾಗಿದವರ ಪೊರೆವ	ಅ.ಪ
ಕೋಲಜತಟಸದನ ಸುವಿಶಾಲ ಮಹಿಮೆಯುತನ
ಆಲಿಸಿ ಮೊರೆಕೇಳ್ವನ ಬಲು ಮೇಲು ಕರುಣಿ ಇವನ	1
ಬಂಡಿಯಬೋವನ ಒಲಿಸಿಕೊಂಡ ಸುಯತಿವರನ
ತೊಂಡರ ಪೊರೆಯುವನ ಭೂಮಂಡಲದೊಳು ಖ್ಯಾತನ	2
ದೂತಶ್ರೀಕರವಿಠಲನಿಜವೀತಾನು ಗುಣಶೀಲ
ದಾತಾನು ಅನುಗಾಲ ನಮಗೀತಾನೆ ಬೆಂಬಲ	3
							

454 ಶ್ರೀ ಸುಧೀಂದ್ರಜ ಪೊರೆಯೊ ಎನ್ನ

454.	ರಾಗ: ಜಂಜೂಟಿ	ತಾಳ: ಆದಿ
ಶ್ರೀಸುಧೀಂದ್ರಜ ಪೊರೆಯೊ ಎನ್ನ 
ದಾಶರಥಿಯಪ್ರಿಯ
ಭಾಸುರಚರಿತನೆ ದೈಶಿಕರೊಡೆಯ	ಪ
ಒಂದು ಅರಿಯದ ಬಲು ಮಂದಮತಿಯು ನಾನು
ವಂದಿಸುವೆ ದ್ವಂದ್ವಚರಣ ಕರುಣಾಸಿಂಧುವೆ
ಒಂದು ದಿನವಾದರು ಬಂದು ಸಂದರುಶನವಿತ್ತು
ಕುಂದೆಣಿಸದೆ ಮಂತ್ರಮಂದಿರ ಕೈಪಿಡಿ ಚಂದಿರವದನ	1
ಗಳದೊಳು ನಳಿನತುಳಸಿಯಮಾಲೆಧರ
ತಿಲಕವನು ಫಣೆಯೊಳಿಟ್ಟ ಚೆಲುವಯತಿಯೆ
ಸುಲಲಿತ ದಂಡಕಮಂಡಲವನ್ನೆ ಪಿಡಿಯುತ
ಸಲೆತುಂಗಾತಟದಲ್ಲಿದ್ದು ಸಲಿಸಿದ ಸೇವೆಯಕೊಳುತ	2
ಶ್ರೀಕರವಿಠಲನಿಂದ ವರಪಡೆದು ಭಕ್ತವೃಂದವನ್ನು ಪಾಲಿಸುತ್ತ
ಚೆಂದದಿದಲಿ ವೃಂದಾವನದೊಳುನಿಂದು
ವಂಧ್ಯಾಂಧಕರಿಗೆ ಸುಕಂದರಕ್ಷಿಗಳನಿತ್ತು
ಕುಂದದೆ ಪೊರೆಯುವ ಬಂಧುರಮಹಿಮ	3
							

455 ಸಾಗಿ ಬಾರೊ ಗುರು ರಾಘವೇಂದ್ರ

455.	ರಾಗ: ಯದುಕುಲಕಾಂಬೋಜಿ	ತಾಳ: ಆದಿ 
ಸಾಗಿಬಾರೊ ಗುರು ರಾಘವೇಂದ್ರರಾಯ ಮುಗಿವೆನು ಕರಉಭಯ	ಪ
ಬಾಗಿಭಜಿಪೆ ಅನುರಾಗದಿ ಕೋರಿಕೆಯ ಸಲಿಸಲು ಮುನಿರಾಯ	ಅ.ಪ
ಮಾಗಧರಿಪುಮತ ಸಾಗರದೊಳಗಿರುವ ಮೀನನೆಂದೆನಿಸುವ
ಯೋಗಿವರ್ಯ ಕೃಪಾಸಾಗರ ಸಲ್ಲಿಸುವ ಸೇವೆಯ ಕೈಗೊಳುವ
ಕೂಗಿಕರೆಯಲತಿವೇಗದಿ ಬಂದು ಪೊರೆವ ಬಿರುದನೆ ಧರಿಸಿರುವ	1
ನೇಮದಿಂದಲಿ ತವ ನಾಮ ಸ್ಮರಣೆಯ ಮಾಡುವ ಬಹುಪರಿಯ
ಸ್ವಾಮಿ ನಿನಗೆನ್ನ ಮನಸಿನಸ್ಥಿತಿಯು ತಿಳಿಯದೆ ಮಹರಾಯ
ನೀ ಮಾಡದೆ ತಡ ನೀಡೆನಗಭಯವರಕವಿಜನಗೇಯ	2
ಶ್ರೀಕರವಿಠಲನ ವಾಕುಲಾಲಿಸಿ ಬಂದ ಯತಿರೂಪದಲಿಂದ
ಬೇಕಾದ ವರವನು ಪಡೆದ ಭಕ್ತವೃಂದನಿನ್ನಯ ದಯದಿಂದ
ಯಾಕೆ ನಿರ್ದಯವಿಷ್ಟು ಬಾರಯ್ಯ ತ್ವರದಿಂದ ಮಂತ್ರಾಲಯದಿಂದ	3 
							

456 ಸೇವಿಸು ನೀ ಮಂತ್ರಸದನಾದಿರುತಿಹನ

456.	ರಾಗ: ಭೀಮ್‍ಪಲಸ್	ತಾಳ: ಆದಿ
ಸೇವಿಸು ನೀ ಮಂತ್ರಸದನಾದಿರುತಿಹನ ಯ-
ತಿವರನ ಯತಿವರನ ಪ್ರತಿದಿನ	ಪ
ಸಾಗಿಬಾಯೆಂದು ಕೂಗಿಕರೆಯಲತಿ-
ವೇಗದಿ ಬರುವ ಚೆನ್ನಾಗಿ ಘನ-
ತ್ಯಾಗಿ ಘನತ್ಯಾಗಿ ವರಯೋಗಿ	1
ದಂಡಕಾಷಾಯಕಮಂಡಲಭೂಷಿತ
ತಂಡತಂಡದ ಸೇವೆಕೊಳುತ ತಾನಿರುತ
ಬಲುಖ್ಯಾತ ಬಲುಖ್ಯಾತ ವರದಾತ	2
ಭವಶರಧಿಗೆ ಅನುಭವನಾವಿಕನಿವ
ಪವನನಯ್ಯನ ಸ್ತುತಿಸುವ ಮನವೀವ
ಅಘತರಿವ ಅಘತರಿವ ತಾ ಪೊರೆವ	3
ತುಂಗಾತಟದಿಹ ಸಂಗೀತಪ್ರಿಯ
ಮಂಗಳಕರ ಮೃದುಹೃದಯ ಕೇಳ್ಮೊರೆಯ
ಘನದಯ ಘನದಯ ಎಮ್ಮದೊರೆಯ	4
ಶ್ರೀಕರವಿಠಲನ ಸ್ವೀಕೃತ ಆಜ್ಞದಿ
ಈ ಕಲಿಯುಗದಿ ತಾ ಬರೆವಸುಕೃತವ
ಮಾಡಿದವ ಮಾಡಿದವ ತಾ ನಂಬುವ	5
104. ಶ್ರೀಕಾಂತ / ಲಕುಮೀಕಾಂತ 
							

457 ಗುರುರಾಘವೇಂದ್ರರ ಚರಣವ ಸ್ಮರಿಸಿರೊ

457.	ರಾಗ: ಬೇಹಾಗ್	ತಾಳ: ಆದಿ
ಗುರುರಾಘವೇಂದ್ರರ ಚರಣವ ಸ್ಮರಿಸಿರೊ	ಪ
ಗುರುರಾಘವೇಂದ್ರರ ಚರಣವ ಸ್ಮರಿಸಲು
ದುರಿತ ರಾಶಿಗಳೆಲ್ಲ ಕರಗಿ ಪೋಗುವುವು	ಅ.ಪ.
ಮಧ್ವ ಮತಾಬ್ಧಿಯೊಳುದ್ಭವಿಸಿದಂಥ
ಮಧ್ವ ಮತಾಬ್ಧಿಯೊಳುದ್ಭವಿಸಿದಂಥ
ಶುದ್ಧ ಪೂರ್ಣಿಮ ಚಂದ್ರ ಸದ್ಗುಣ ಸಾಂದ್ರ	1
ಸುಧೀಂದ್ರ ಯತಿ ಕರ ಪದುಮ ಸಮುದ್ಭವ
ಸುಧೀಂದ್ರ ಯತಿ ಕರ ಪದುಮ ಸಮುದ್ಭವ
ಸದಯ ಸದಾರ್ಚಿತ ಪದನುತ ಖ್ಯಾತ	2
ಬಂದಂಥ ಭಕುತರ ವೃಂದವ ಪೊರೆಯಲು1 
ಬಂದಂಥ ಭಕುತರ ವೃಂದವ ಪೊರೆಯಲು1 
ಕುಂದದೆ ವರಮಂತ್ರ ಮಂದಿರದೆಸೆವ	3
ನರಹರಿ ಮುರವೈರಿ ರಘುವರ ವ್ಯಾಸರ 
ನರಹರಿ ಮುರವೈರಿ ರಘುವರ ವ್ಯಾಸರ 
ನಿರುತದಿ ಭಜಿಸುವ ವರಗಳ ಕೊಡುವ 	4
ಸಕಲಾಂತರ್ಯಾಮಿಯು ಲಕುಮಿಕಾಂತನೆಂದು
ಸಕಲಾಂತರ್ಯಾಮಿಯು ಲಕುಮಿಕಾಂತನೆಂದು
ಪ್ರಕಟಿಸಿ ಮೆರೆದರ್ಭಕನಂಶಜರೆಂದು	5
1 ಚೆಂದದಿ ಪೊರೆಯುವ - ಪಾಠ
							

458 ಗುರುರಾಯರ ನಂಬಿರೊ

458.	ರಾಗ: ಕಲ್ಯಾಣಿ	ತಾಳ: ಆದಿ
ಗುರುರಾಯರ ನಂಬಿರೊ ಶ್ರೀ ರಾಘವೇಂದ್ರ ಗುರುರಾಯರ	ಪ
ವರಮಂತ್ರಾಲಯದಲ್ಲಿ ನಿರುತ ಸೇವೆಯಗೊಂಬ	ಅ.ಪ
ಗ್ರಾಸ ಬೇಡಿದ ಮುನಿಯಾಶೆಯ ತಣಿಸಿದ
ದಾಶರಥಿಯ ಭಕ್ತ ದೇಶಿಕವರ್ಯರ	1
ಸಂತಾನಸೌಭಾಗ್ಯ ಚಿಂತಿತಾರ್ಥವನೀವ
ಕಂತುಪಿತನ ಪಾದ ಸ್ವಾಂತದಿ ಭಜಿಸುವ	2
ಅe್ಞÁನ ತಿಮಿರಕ್ಕೆ ಸುe್ಞÁನಪರಿಪೂರ್ಣ
ಪ್ರಾಜ್ಞರ ಗುರುವ್ಯಾಸರಾe್ಞÁಧಾರಕರಾದ	3
ಸ್ಮರಣೆಮಾತ್ರದಿ ಸಕಲ ದುರಿತ ಪರಿಹರಿಸುವ
ನರಹರಿ ಚರಣಾಬ್ಜ ವರ ಭೃಂಗರೆನಿಸುವ	4
ಭೂತ ಬೇತಾಳದ ಭೀತಿಯ ಬಿಡಿಸುವ
ಪೂತಾತ್ಮ ವಿಖ್ಯಾತ ಶ್ರೀಕಾಂತ ಸುಪ್ರೀತಾ	5
105. ಶ್ರೀರಾಘವೇಂದ್ರ
							

459.ಇದಿರಾರೋ ಗುರುವೆ ಸಮರಾರೊ

459.	ರಾಗ:[ಬೃಂದಾವನಿ] 	ತಾಳ: [ಆದಿ]
ಶ್ರೀ ಗುರುರಾಜರ ಸೇವಿಸಿರೋ
ದಂಡಕಮಂಡಲ ಪಿಡಿದು ನಿಂದಿಹ ಹಸ್ತ ಭೂ-
ಮಂಡಲವೆಲ್ಲಾ ತಿರುಗಿ ಬಂದಿಹ ಹಸ್ತ
ಬಿಡದೆ ಭಕುತರಾ ಸಲಹುವ ಹಸ್ತ
ಪೊಡವಿಪತಿ ಶ್ರೀ ರಘುರಾಮರ ಸೇವಿಪ ಹಸ್ತಾ
ಭಕ್ತಲಿ ತುತಿಪರ ಎತ್ತಿ ಸಲಹುವ ಹಸ್ತಾ 
ಮತ್ತೆ ಭೂಸುರರಿಗೆಲ್ಲಾ ಅಭಯವೀಯುವ ಹಸ್ತ
ಮುಕ್ತಿಮಾರ್ಗಕೆ ದಾರಿತೋರುತಿಹ ಹಸ್ತ
ಚಿತ್ತಜನಯ್ಯನ ನೆನೆದು ಮನದಲ್ಲಿ ನಲಿಯುವ ಹಸ್ತಾ
ಭೂತಪ್ರೇತಗಳನೆಲ್ಲ ಓಡಿಸುತಿಹ ಹಸ್ತ
ಸಕಲವ್ಯಾಧಿಗಳ ಹರಿಸಿರಕ್ಷಿಪ ಹಸ್ತ
ಸುಜನರ ಉದ್ಧಾರಗೈಯುವ ಹಸ್ತ
ಸರುವದಾ ಶಿರಿಪತಿಯ ಕೊಂಡಾಡುವ ಹಸ್ತಾ
ಕನಸಿಲಿ ಬಂದು ಕಣ್ಣಪೊರೆ ತೆಗೆದಿಹ ಹಸ್ತ
ಮುದದಲಿ ಮಗಿವಿಗೆ ಮಾತಕಲಿಸಿದ ಹಸ್ತ
ರಸದಿಮುಳುಗಿ ಜೀವಕಳೆದ ಕಂದಗೆ 
ಜೀವಕಳೆತುಂಬಿದ ಹಸ್ತ
ಪರಮಪಾವನವಾದ ಶ್ರೀಗುರುರಾಜರ ಹಸ್ತಾ
ಜಗವೆಲ್ಲ ನೋಡೆ ಪ್ರಖ್ಯಾತಿ ಪಡೆದಿಹ ಹಸ್ತ
ನಗುತ ಮಂತ್ರಾಲಯದೊಳು ಬಂದು ನಿಂದಿಹ ಹಸ್ತ
ಅಗಣಿತಮಹಿಮೆ ತೋರಿ ಮೆರೆಯುತಿಹಾ ಹಸ್ತ
ಸರಿಗಾಣೆ ಧರೆಯೊಳು ಶ್ರೀರಾಘವೇಂದ್ರರ ದಿವ್ಯ ಹಸ್ತಾ
106. ಶ್ರೀರಾಮವಿಠಲ
							

460 ಇದಿರಾರೋ ಗುರುವೆ ಸಮರಾರೊ

460.	ರಾಗ: ಆನಂದಭೈರವಿ	ತಾಳ: ಅಟ
ಇದಿರಾರೋ ಗುರುವೆ ಸಮರಾರೊ	ಪ
ಸದಮಲ ವೈರಾಗ್ಯ ನಿಧಿಯೆ ಅ-
ಸ್ಮದ್ಗುರು ರಾಘವೇಂದ್ರ ನಿನಗೆ ಜಗದಿ	ಅ.ಪ
ಅಲವಬೋಧರಮತದ ಹಲವು ಶಾಸ್ತ್ರವ ರಚಿಸಿ
ಕಲಿಮಾಯಿಗಳ ಮತಗಳ ಖಂಡ್ರಿಸಿ
ಜಲಜನಾಭನ ಜಗದೇಕನೆಂದರುಹಿ
ಭಲೇ ಮಧ್ವಮತಧ್ವಜವ ಜಗದಿನಿಲಿಸಿರುವಿ	1
ವೆಗ್ಗಳ ಪುಣ್ಯವ ಅಗ್ಗಮಾಡುತ ನೀನು
ಬಗ್ಗಿಬರುವ ಭಕ್ತರ ಪೊರೆವೆ
ಹೆಗ್ಗಳವೆಂದರೆ ಕರೆದಲ್ಲಿ ನೀ ಬರುವಿ ನಿನಗೆ
ಬಗ್ಗದ ಕಲಿಗಳ ಬಗ್ಗುಬಡಿಯುವೆ	2
ಭೀತಿಭೂತಗಳ ಬಾಧೆಯ ಬಿಡಿಸಬಲ್ಲಿ
ಸೋತು ಬಂದವರನ್ನು ಸಲಹಬಲ್ಲಿ
ವಾತಸುತನಾವೇಶ ಬಲಪೂರ್ಣ ನೀನಿದ್ದು
ಸೀತಾಪತಿಶ್ರೀರಾಮವಿಠಲನ ಪೂಜಿಸುವ	3
							

461 ನಿನ್ನ ದರುಶನವಿತ್ತು ಎನ್ನ ಧನ್ಯಮಾಡೊ

461.	ರಾಗ: ಕಾಂಬೋಜಿ	ತಾಳ: ಝಂಪೆ
ನಿನ್ನ ದರುಶನವಿತ್ತು ಎನ್ನ ಧನ್ಯಮಾಡೊ
ಘನ್ನಮಂತ್ರಾಲಯದ ಗುರು ರಾಘವೇಂದ್ರ	ಪ
ಇನ್ನು ಈ ಭವಪಾಶ ಬಂಧಮುಕ್ತನಮಾಡಿ ಪ್ರ-
ಪನ್ನರಕ್ಷಕ ಶ್ರೀರಾಮರ ದರುಶನ ಕೊಡಿಸೊ	1
ಇಹಜನ್ಮ ಸಾಧನದ ಸಹಜಮಾರ್ಗವ ತೋರಿ
ಅಹಿಶಯನ ನರಹರಿಯ ಚರಣಭಜಕನಮಾಡಿ	2
ಚಿರಋಣಿಯು ನಾ ನಿನಗೆ ಪೊರೆಯಬೇಕೈ ಎನ್ನ
ಗುರುವಂತರ್ಯಾಮಿ ಶ್ರೀರಾಮವಿಠಲನಭಜಕ	3
							

462 ಪೊಂದಿ ಬದುಕಿರೊ ಗುರು ರಾಘವೇಂದ್ರರ

462.	ರಾಗ: [ಯದುಕುಲಕಾಂಭೋಜಿ]		ತಾಳ: [ತಿಶ್ರನಡೆ]
ಪೊಂದಿ ಬದುಕಿರೊ ಗುರು ರಾಘವೇಂದ್ರರ	ಪ
ಸಂದೇಹವಿಲ್ಲದೆ ಸರ್ವರನ್ನು ಕರೆದು ಪೊರೆವರ	ಅ.ಪ
ಇಷ್ಟಭಕ್ತರ ಅನಿಷ್ಟಕಳೆವರ ಸ-
ರ್ವೇಷ್ಟದಾಯಕ ಶ್ರೀರಾಮಚರಣ ತೋರ್ವರ	1
ಪೂರ್ಣಬೋಧರಮತಸುಶರಧಿಚಂದಿರ 
ಪ್ರಣತಭಕ್ತ ಕಾಮಧೇನು ರಾಘವೇಂದ್ರರ	2
ಬಂದ ಭಕ್ತರ ಕಾಮಿತಗಳ ಇಂಗಿತವ ತಾವ್ ತಿಳಿಯುತ
ಸುಂದರ ಶ್ರೀರಾಮವಿಠಲನ ಇಂಗಿತದಂತೀವರ	3
							

463 ಬಾರೊ ಗುರು ರಾಘವೇಂದ್ರ

463.	ರಾಗ: [ಮಧ್ಯಮಾವತಿ]	ತಾಳ: [ಮಿಶ್ರನಡೆ]
ಬಾರೊ ಗುರು ರಾಘವೇಂದ್ರ
ಯತಿಸಾರ್ವಭೌಮ	ಪ
ವೀರ ಗುಣಗಂಭೀರ ಕರುಣಾಪೂರ್ಣ ಸಂಯುತ ದ್ವೈತ
ಗುರು ಮಧ್ವಾರ್ಯಚರಣಸರೋಜ ಸೇವಕ	ಅ.ಪ
ಮಂತ್ರಾಲಯದ ಗುರುವೆ ಮನದಂತರಂಗದಿ
ಕಂತುಪಿತನ ತೋರಿಸೊ
ಸಂತಭಕ್ತರ ಸಂಗದಲಿ ನಾ
ನಿಂತು ಚರಣಸರೋಜಗೊಂದಿಪೆ	1
ಕರೆದಲ್ಲಿ ಬರುವನೆಂಬೊ ಬಿರುದುಳ್ಳ ಯತಿವರ
ತ್ವರಿತದಿ ವರವ ನೀಡೊ
ಪರಮ ಮಾನಸ ಮಂಟಪದಿ ನಾ
ಸ್ಮರಿಪ ಹರಿಯ ಸುಮೂರ್ತಿ ತೋರಲು	2
ಆಶ್ರಯದಾತ ಬಾರೊ ಸದಾಶಯ
ಭೂಸುರೇಂದ್ರನೆ ಬಾರೊ
ವಸುಧಿಜೆಯ ಕರಸೇವ್ಯ ಶ್ರೀರಾಮವಿಠಲನ ಮಾ-
ನಸಾಬ್ಧಿಸುಚಂದಿರನೆ	3
107. ಶ್ರೀಶಕೇಶವ 
							

464 ಕರುಣಾಸಾಗರ ಬಾ ಗುರುವೆ

464.	ರಾಗ: ಕುರಂಜಿ	ತಾಳ: ಆದಿ
ಕರುಣಾಸಾಗರ ಬಾ ಗುರುವೆ 
ಚರಣಕಮಲವನು ಸಾರಿದೆನೈ ಸ್ವಾಮಿ	 ಪ
ಏನೆಂದು ಬಣ್ಣಿಪೆ ದೀನವತ್ಸಲ ಪ್ರಭುವೆ 
ಸಾನುರಾಗದಿ ನಿನ್ನ ಧ್ಯಾನಿಪೆನೈ ಜೀಯ	1
ಗುರುರಾಘವೇಂದ್ರನೆ ಶರಣರಸುರತರುವೆ 
ನಿರುತ ಎಮ್ಮೊಳು ಕೃಪೆಯ ತೋರೈ ಸ್ವಾಮಿ 	2
ಶ್ರೀಸುಧೀಂದ್ರಾರ್ಯರ ಭಾಸುರಪ್ರಿಯತನಯ 
ಶ್ರೀಶಕೇಶವನೊಲುಮೆ ಯಾಚಿಸುವೈ ಪ್ರಭುವೆ 	3
							

465 ಚರಣಕಮಲಯುಗಕೆ ನಮಿಪೆ ನಿರುತವನುದಿನ

465.	ರಾಗ: ಹಂಸಧ್ವನಿ / ಕಾನಡ	ತಾಳ: ರೂಪಕ
ಚರಣಕಮಲಯುಗಕೆ ನಮಿಪೆ ನಿರುತವನುದಿನ 
ಶ್ರೀ ರಾಘವೇಂದ್ರ 	ಪ
ಪರಿಪರಿ ಶರಣರಪೊರೆಯುವ 
ಕರುಣಾಸಾಂದ್ರ ಯತಿಕುಲೇಂದ್ರ 	ಅ.ಪ
ವೇನಮತವಿದಾರ ಸುಂದರe್ಞÁನದಾತ ಗುರುವರ 
ಶ್ರೀನಾಥನ ಪದಪಂಕಜ ಧ್ಯಾನ ನಿರತ ಸುಗುಣಭರಿತ 	1
ಮಧ್ವಶಾಸ್ತ್ರ ಪಠಿಸಿ ಬಹು ಪ್ರಸಿದ್ಧ ಟೀಕೆ ರಚಿಸುತ 
ಸದ್ವೈಷ್ಣವಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರ	2
ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು 
ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ 	3
ವಾರಾಹಿಸುಕ್ಷೇತ್ರನಿಲಯ ಚಾರುಚರಿತ ಗುಣಮಯ 
ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ	4
ಶ್ರೀಶಕೇಶವಾಂಘ್ರಿದೂತ ದಾಸಜನನುತ 
ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ 	5
							

466 ಧನ್ಯನಾದೆ ನಾ ಗುರುರಾಜರ ನೋಡಿ

466.	ರಾಗ: ನೀಲಾಂಬರಿ	ತಾಳ: ಆದಿ
ಧನ್ಯನಾದೆ ನಾ ಗುರುರಾಜರ ನೋಡಿ 	ಪ
ಸನ್ನುತಾಂಗ ಗುರುರಾಜರ ನೋಡಿ 	ಅ.ಪ
ಘನ್ನಮಹಿಮರಿವರು ವರಪಾವನ್ನಚರಿತರಿವರು 
ಮುನ್ನ ಮಾಡಿದಪರಾಧಗಳೆಣಿಸದೆ ಉನ್ನತ ಸುಖಗಳನೀವರ ನೋಡಿ 	1
ಬುಧರ ಮಹಾತ್ಪ್ರಭುವೋ ಭಜಿಪರ ಮಧುರ ಸುರದ್ರುಮವೋ
ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು
ಅಧಮರ ಮುರಿದಿಹ ಧೀರರ ನೋಡಿ 	2
ಶ್ರೀಶಕೇಶವನ್ನ ಮನದೊಳುಪಾಸನೆಗೈವರನು 
ಭಾಸುರಾಂಗಯತಿ ರಾಘವೇಂದ್ರರನು 
ಈ ಸಮಯದಿ ಕೊಂಡಾಡುತ ನೋಡಿ 	3
							

467 ಪರಮ ಸುಗುಣಸಾಂದ್ರ ಗುರುರಾಘವೇಂದ್ರ

467.	ರಾಗ: ಶಂಕರಾಭರಣ	ತಾಳ: ಆದಿ
ಪರಮಸುಗುಣಸಾಂದ್ರ ಗುರುರಾಘವೇಂದ್ರ	ಪ
ಕರುಣಾಳು ಮುನಿವಂಶಸುಧಾಕರ 
ಗುರುರಾಜಪ್ರಭೋ ಶ್ರೀ ರಾಘವೇಂದ್ರ 	ಅ.ಪ
ಮುರುಕು ಮಂಟಪದೊಳು ಹರಕು ಚಿಂದಿಯನ್ಹೊದ್ದು 
ಉರಿಯ ಬೆಳಕಿನಲ್ಲಿ ಪರಿಮಳ ರಚಿಸಿದೆ 
ಗುರುಗಳಾಕ್ಷಣಕಂಡು ಪರಮಸಂಭ್ರಮದಿಂದ 
ಪರಿಮಳಾಚಾರ್ಯನೆಂಬಬಿರುದಿತ್ತು ಕರೆದರೊ	1
ಜಡಮತಿಬ್ರಾಹ್ಮಣ ಮಿಡುಕಿನಿರೂಪಿಸೆ 
ಒಡನೆ ಗಂಧವತೇದೆ ಅನಲನಜಪಿಸುತೆ 
ಒಡಲಬೇಗೆಯಿಂ ಜನರುಬಡಬಡಿಸಿದಕಂಡು 
ಕಡಲರಸನದಯದಿ ಕಡುಶಾಂತಿಇತ್ತೆಯೊ	2
ಬಾದರಾಯಣಮುನಿ ಭೇದಮತವಬಿತ್ತಿ
ಮೋದತೀರ್ಥರು ಮತವಸಾದರಗೈದರೊ 
ಸ್ವಾದಫಲಂಗಳು ನಿನ್ನಿಂದ ತೋರ್ದವು 
ಸಾಧುಜನಾರ್ಚಿತ ಶ್ರೀಶಕೇಶವಪ್ರಿಯ	3
							

468 ಶ್ರೀಯತಿವರ ನಮಿಪರ ಸುರತರುವೆ ಮಮ ಗುರುವೆ

468.	ರಾಗ: ಯಮನ್	ತಾಳ: ಝಂಪೆ
ಶ್ರೀಯತಿವರ ನಮಿಪರ ಸುರತರುವೆ ಮಮಗುರುವೆ 
ನಿರುತದಿ ಭಕುತರ ಪೊರೆವೆ	 ಪ
ದಯಾಸಾಂದ್ರ ರಾಘವೇಂದ್ರ ಸುರುಚಿರ ಮಂತ್ರಾಲಯೇಂದ್ರ 
ಭಕುತವೃಂದ ಕುಮುದಚಂದ್ರ	1
ಭಾಸುರಾಂಗ ಜಿತಾನಂಗ ರಘುವರ ಪದಮಲಭೃಂಗ 
ಕಾವಿವಸನಭೂಷಿತಾಂಗ	2
ಶ್ರೀಸುಧೀಂದ್ರವರಕುಮಾರ ಶ್ರೀಶಕೇಶವಾಂಘ್ರಿ ರುಚಿರ 
ದೋಷನಾಶ ಮುನಿಕುಲೇಶ	3
108. ಶ್ರೀಶಕೇಶವವಿಠಲ 
							

469 ಗುರುವೆ ಕರುಣದಿಂದ ನೊಡೋ ನಿನ್ನ

469.	ರಾಗ: ಸಾವೇರಿ 	ತಾಳ: ಆದಿ
ಗುರುವೆ ಕರುಣದಿಂದ ನೊಡೋ ನಿನ್ನ
ತರಳನೆಂದು ದಯಮಾಡೊ	ಪ
ದುರುಳರೊಳತಿದುರುಳ ನರ ನಾ
ಮೊರೆಯ ಪೋಗುವೆನು ಪೊರೆಯೊ ಅಸ್ಮದ್ಗುರುವೆ	ಅ.ಪ
ಸುಧೀಂದ್ರಕರಕಂಜಜಾತ ಈ ವ-
ಸುಧೆಯೊಳು ಪರಮಪ್ರಖ್ಯಾತ
ಸದಮಲ ಶುಭಗುಣನಿಧಿ ನಿರ್ಮಲಜ್ಞಾನ-
ಪ್ರದಪ್ರೇರಕನಾಗಿ ಮದಡಮತಿಯ ಬಿಡಿಸೊ
ಪದುಮನಾಭನ ಪದಪದುಮ ಪದೋಪದೆಗೆ
ಹೃದಯದಿ ಮುದದಿ ಧೇನೀಪ ಮುದಮುನಿಮತಉದಧಿಗೆಚಂದ್ರ	1
ಪಂಚಬಾಣನ ನಿರಾಕರಿಸಿ ಪಂಚ-
ಪಂಚಕರಣವ ಸ್ವೀಕರಿಸಿ 
ಪಂಚಮುಖನೆ ಪರನೆಂಬ ವಾದಿಯ ಮತ
ಮುಂಚೆ ಮುರಿದನೆಂದು ಸಂಚಕಾರವ(?) ಪಿಡಿದು
ಸಂಚರಿಸಿ ಅವರುಕುತಿ ನಿಲ್ಲಿಸಿ ಪ್ರಪಂಚದೊಳಗಿಹ ಸರ್ವಜನ ಮನೋ
ವಾಂಛಿತವಗರೆದವ ನೀ ಮುನ್ನ ಪೊರೆದಂತೆ ಎನ್ನ	2
ದೇಶದೇಶದಿ ತವಕೀರ್ತಿ ತುಂಬಿ
ಸೂಸಿಪರಿವುದೆಂಬವಾರ್ತಿ
ಲೇಸಾಗಿ ಕೇಳಿ ಬಂದಾಸುಜನರ ಮನ-
ದ್ಹಾಸೆ ಪೂರೈಸು ವಿಶೇಷಫಲವ ನಿತ್ಯ
ಮಾಸರೊಜ ವ್ಯೋಮಕೇಶಾಮರೇಶ ಮುಖರಿಗೆ
ಈಶನೆನಿಸುವ ಶ್ರೀಶಕೇಶವವಿಠಲನದಾಸಾ ತುಂಗಾನಿವಾಸ	3
							

470 ನೆರೆ ನಂಬಿ ಪಡೆಯಿರೋ ಸ್ಥಿರವಾದ ಕರುಣವ

470.	ರಾಗ: ನಾಯಕಿ 	ತಾಳ: ಅಟ
ನೆರೆನಂಬಿ ಪಡೆಯಿರೋ ಸ್ಥಿರವಾದ ಕರುಣವ
ಗುರು ರಾಘವೇಂದ್ರರಾಯರ ಚಾರುಚರಣವ	ಪ
ವರಹದಂಷ್ಟ್ರಜಲಸುತ್ಸರಿತತೀರದಿನಿಂದು
ಶರಣರ ದುರಿತವತರಿದು ಕಾಯ್ವನೆಂದು	1
ಕರವಮುಗಿದು ಬಂದ ಪರಮಪಾಮರರಾ
ಪೊರೆವ ಕರುಣಕೃಪಾಕರ ಯತಿವರರ	2
ಶ್ರೀಶಕೇಶವವಿಠಲೇಶನದೂತ-
ರಾಸೆಪೂರೈಸುವ ಗುಣನಿಧಿ ಸತತ	3
							

471 ರಾಘವೇಂದ್ರ ಗುರುರಾಜಾ ಸುತೇಜಾ

471.	ರಾಗ: ಧನಶ್ರೀ	ತಾಳ: ಅಟ
ರಾಘವೇಂದ್ರ ಗುರುರಾಜಾ ಸುತೇಜಾ	ಪ
ಸಾನುರಾಗದಿ ನಿನ್ನ ಧ್ಯಾನಮಾಡದ 
ಹೀನಮಾನವವಲ್ಲೆ ಅನುಮಾನವಿಲ್ಲದೆ ನಾ
ಮಾನಗೈಯಲಿಬೇಕೆಂದನುಮಾನದಲಿ ನಿ-
ದಾನಿಸಲಾಗೆ ಬಂದು ಸತ್ವರದಿಂದ
ನೀನೆ ಹೃದಯದಿನಿಂದು ಆಕ್ಷಣ ಎನ್ನ
ಜ್ಞಾನಾಂಧಕಾರಕೆ ಭಾನುರೂಪನಾದಿ	1
ಕರುಣಾಸಾಗರ ನಿನ್ನ ಚರಣ ಸೋಕಲು ಲೋಹ
ಪರಶು ತಾಕಲು ಚಾಮಿಕರನಾದ
ತೆರÉ ಎನ್ನ ದುರಿತರಾಶಿಯತರಿದು ದೂತನಮೇಲೆ
ಪರಮಾನುಗ್ರಹಗರೆದು ಪೊರೆದನೆಂಬ ಬಿರುದು
ಲೋಕದಿ ಮೆರೆದು ಸಾರುತಲಿದೆ
ಪರಮಹಂಸಗುರು	2
ಶ್ರೀಶಕೇಶವವಿಠಲನ ಕರುಣಾವಿಲಾಸ-
ದಿ ಸುಖಿಸುವರೀಸಮಯದಲೆನ್ನ
ದೋಷ ವಿಚಾರಿಸದೆ ಮಮತೆಯಿಂದ
ಪೋಷಿಪರೆಂದರಿದೆ ಕಂಡಕಡೆ 
ಆಶೆಯಿಂದಲೆ ಬರಿದೆ ಚಲಿಸಲು ಉದಾಸಿಸದಲೆ ಪೊರೆದು ಸುಕೃತವೀಯುವ	3
109. ಶ್ರೀಶಪ್ರಾಣೇಶವಿಠಲ 
							

472 ರಾಯರ ನೋಡಿರೈ

472.	ರಾಗ: ಭೈರವಿ	ತಾಳ: ಆದಿ
ರಾಯರ ನೋಡಿರೈ ಶ್ರೀ ಗುರು 
ರಾಯರ ಪಾಡಿರೈ 
ಶ್ರೀಯರಸನಪ್ರಿಯ ಕಂಜಾಪ್ತಾಶುಭ
ಕಾಯಾ ಕವಿಜನಗೇಯಾ 	ಪ
ಶ್ರೀಸುಧೀಂದ್ರಕರಕಮಲಸಂಭೂತಾ ಬಹುವಿಖ್ಯಾತಾ 
ಶ್ರೀಶನ ಗುಣಗಳ ತುತಿಸುವ ಯತಿಶಿರೋಮಣಿಯೊ ಚಿಂತಾಮಣಿಯೊ 
ಈಸುಜನರ ಮನಸಿಗೆ ತೋರುವದಹ್ಲಾದಾ ಶಿರಿಪ್ರಹ್ಲಾದಾ 	1
ದಂಡಕಮಂಡಲ ಕಾಷಾಯವು ಸೂವಸನಾ ವೇದವ್ಯಸನಾ 
ಪುಂಡರೀಕ ಪದಭೃಂಗಾ ಮುನಿಕುಲೋತ್ತುಂಗಾ ಕರುಣಾಪಾಂಗಾ 
ಮಂಡಲದೊಳು ಬಹುತೋಂಡರ ಪರಿಪಾಲಕಾ ವರಬಾಹ್ಲೀಕಾ 	2
ತುಂಗಾತೀರದಿ ಮಂತ್ರಾಲಯದೊಳಗಿರುವೊ ಕಲ್ಪತರುವೊ 
ಗಂಗಾಜನಕ ವಿಹಂಗವಾಹನ ಇಲ್ಲಿಹನು ನತಸುರಧೇನು 
ಮಂಗಳಮಹಿಮರ ದರುಶನಮಾತ್ರಾ ಅಫನಾಶಾ ಶ್ರೀಗುರುವ್ಯಾಸಾ 	3
ಪರಿಮಳವಿರಚಿಸಿ ಬುಧರಿಗೆ ಬೀರಿದಧೀರಾ ಗುಣಗಂಭೀರಾ 
ಪರಿಪರಿ ಚರಿತೆಯ ತೋರ್ದ ಭೂದೇವರದೇವಾ ದೇವಸ್ವಭಾವಾ 
ನರ ಇವರನು ಕ್ಷಣಬಿಡದಲೆ ಭಜಿಸಲು ಸುಖವೂ 	ಅಹಿಕಾಮುಕವೊ1 4
ದುಷ್ಟ ಮತವ ಖಂಡಿಸಿ ಹರಿಪರನೆಂದೊರೆದಾಭೀಷ್ಟಿಯಗರದಾ
ಸೃಷ್ಠಿಯೊಳಗೆ ಶ್ರೀಶಪ್ರಾಣೇಶವಿಠ್ಠಲನ ದಾಸಾ ಮುನಿಕುಲೋತ್ತಂಸಾ 
ಎಷ್ಟು ಪೊಗಳಲಾಶಕ್ಯವು ಸದ್ಗುಣ ಸಾಂದ್ರಾ ಶ್ರೀ ರಾಘವೇಂದ್ರಾ	5
1 ಅಘ ಪರಿಹರವೂ - ಪಾಠ
							

473.ಶ್ರೀ ಗುರುರಾಜರಿಗೆ ಆರುತಿ

473.	ರಾಗ: ಪೂರ್ವಿ	ತಾಳ: ಆದಿ
ಶ್ರೀ ಗುರುರಾಜರಿಗೆ ಆರುತಿ ಬೆಳಗಿರೆ 	ಪ
ಶ್ರೀ ರಾಘವೇಂದ್ರರಾಯಾ ಸೂರಿ ಪರಾಕು 
ಪರಿಮಳ ವಿರಚಿಸಿದವನೆ ಪರಾಕು 
ಧರೆಯೊಳು ಮಂತ್ರಾಲಯ ನಿಲಯ ಪರಾಕು 
ಗುರು ಸುಧೀಂದ್ರರ ಕುವರ ಪರಾಕೆಂದು 
ಹರದೇರಾರುತಿಯಾ ಬೆಳಗೀರೆ 	1
ದಂಡಕಮಂಡಲಧರ ಪರಾಕು 
ಪಂಡಿತರೊಡೆಯ ವಿಕ್ರಮನೆ ಪರಾಕು 
ಚಂಡ ದುರ್ವಾದಿ ಮತ ಮುರಿದ ಪರಾಕು 
ಗಂಡುಗಲಿ ಹರಿಯಾ ಪರಾಕೆಂದು 
ಪುಂಡಲೀಕದಾರುತಿಯಾ ಬೆಳಗೀರೆ 	2
ಶ್ರೀಶಪ್ರಾಣೇಶವಿಠಲದೂತ ಪರಾಕು 
ಶ್ರೀಶನ ಗುಣಗಳ ತುತಿಪ ಪರಾಕು 
ಆಸೇತು ಹೇಮಂತ ಮೆರೆವ ಪರಾಕು 
ದೇಶಿಕ ಶ್ರೇಷ್ಠ ನಿರ್ದುಷ್ಟ ಪರಾಕೆಂದು 
ಸಾಸಿರ ಆರುತಿಯ ಬೆಳಗೀರೆ 	3
110. ಶ್ರೀಶ್ರೀನಿವಾಸ 
							

474 ಗುರುರಾಯರ ನಂಬಿರೋ

474.	ರಾಗ: [ರೀತಿಗೌಳ]	ತಾಳ: [ಆದಿ]
ಗುರುರಾಯರ ನಂಬಿರೋ ರಾಘವೇಂದ್ರ
ಗುರುರಾಯರ ನಂಬಿರೋ ಜಗದೊಳು	ಪ.
ಗುರುರಾಯರ ನಂಬಿ ವರಗಳ ಬೇಡಿರೊ
ನರಹರಿ ಪದ ಧ್ಯಾನಿಪ ಕರುಣವ ಬೀರುವಂಥ	1
ಆದಿ ಪ್ರಹ್ಲಾದರು ಮೋದದಿ ಹರಿಪದ
ಆದರದಿಂದ ಜಗಕೆ ಸಾಧಿಸಿ ಬೀರಿದರೊ	2
ದ್ವಿತೀಯ ವ್ಯಾಸರಾಜ ಸ್ತುತ ಬ್ರಹ್ಮಣ್ಯಾರ್ಯ ಕರ
ಗತ ಪುರುಷೋತ್ತಮ ಗುಹ ಪಥದೊಳಗಿಪ್ಪರ 	3
ತೃತೀಯ ರಾಘವೇಂದ್ರ ಪತಿತ ಪಾವನ ನಾಮ
ರತ್ನ ಖಚಿತವಾಗಿದೆ ಭಕ್ತ ಸುಚರಿತರೆಲ್ಲ(?) ಬೇಗ	4
ಭೂತ ಪ್ರೇತಗಳ ಪ್ರೀತಿಯೊಳಳಿದು
ಶ್ವೇತ ಕುಷ್ಠಗಳ ದೂರ ಮಾಳ್ಪವರ	5
ಸ್ಮರಣೆ ಮಾಡುತ ನರಹರಿ ಪಾದ ಪಂಕಜ
ದುರಿತ ದೂರ ಶ್ರೀಶ್ರೀನಿವಾಸನ ಭಜಿಪ ಗುರು	6
111. ಶ್ರೀಹರಿವಿಠಲೇಶ 
							

475 ಪಾಲಿಸೋ ದಯಪಾಲಿಸೋ

475.	ಪ್ರಾರ್ಥನಾಷ್ಟಕ
ಪಾಲಿಸೋ ದಯಪಾಲಿಸೋ ಗುರುಪಾಲಿಸೋ ಪರಿಪಾಲಿಸೋ
ಮೂಲರಾಮ ಪದಾಬ್ಜಭೃಂಗ ಸುಶೀಲ ಮೂರುತಿ ಪಾಲಿಸೋ	ಪ
ಮಂದಹಾಸ ಮುಕುಂದ ಮಾನಸದಿಂದ ರಾಜಿಪ ಸುಂದರ
ಇಂದಿರೇಶನ ಪೊಂದಿದಾಹೃದಯದಿಂದ ಶೋಭಿಪ ಚಂದಿರಾ
ಬಂದುಬೇಡಿದ ತಂದುನೀಡುವ ವೃಂದಾವನಧುರಂಧರಾ
ತಂದೆ ಕಾಯುವುದೆಮ್ಮ ಶ್ರೀಗುರು ಮಂತ್ರಾಲಯಮಂದಿರಾ	1
ನಂದತೀರ್ಥರ ದುಂದುಭಿ ಧ್ವನಿಯಿಂದ ಪೂರಿತ ಕಂಧರಾ
ನಂದಗೋಪನಕಂದ ಕೃಷ್ಣಮುಕುಂದ ಆಜ್ಞೆಗೆ ಬಂದರಾ
ಎಂದಿಗಾದರು ತಂದೆ ನೀ ಗತಿ ಎಂದರೊಳ್ ಕೃಪಾಸಿಂಧುರಾ
ಪೊಂದಿದೆ ಪದವೃಂದವಂ ಗುರುಮಂತ್ರಾಲಯಮಂದಿರಾ	2
ಸಾಧುಸಂತರ ಮೋದ ಚಿಂತಕ ಶ್ರೀಧರಾ ಸ್ವಜನೋದರಾ
ಯಾದವೇಶನಗಾಧ ಲೀಲೆ ವಿನೋದವಾದ ಯಶೋಧರಾ
ಬಾಧೆಯೊಳ್ ಭವಬಾಧೆ ತಾಳದೆ ಪಾದ ನಂಬಿರಲೀತೆರಾ-
ಗೈದ ಮುನ್ನ ಅಪರಾಧ ನೋಳ್ಪರೆ ಮಂತರಾಲಯಮಂದಿರಾ 	3
ಶ್ರೀಶನಿಂದಪರೋಕ್ಷ ಭೂಷಿತ ಭಾಸುರಾಮರ ಭೂಸುರಾ
ದೋಷರಾಶಿವಿನಾಶ ನೇತ್ರ ಯತೀಶ್ವರಾ ನತಧೀಶ್ವರಾ
ಆಶೆಪಾಶೆದುರಾಶೆಯೊಳ್ ಬಲುಘಾಸಿಯಾದೆ ಮುನೀಶ್ವರಾ
ಕೂಸಿನಂದದಿ ಪೋಷಿಸೆನ್ನನು ಮಂತರಾಲಯಮಂದಿರಾ 	4
ರಾಘವೇಂದ್ರ ಸದಾಗಮ ಶ್ರುತಮೇಘ(ಮೋಘ?) ಬೋಧ ಮಹಾಸ್ಮೃತಾ
ರಾಘವೇಶನ ಪಾದ ಸಂಸ್ಕೃತ ಯೋಗದೊಳ್ ಬಲುವಿಸ್ತೃತಾ
ನೀಗಲಾರದ ಭೋಗದೊಳ್ ಭವ ಸಾಗದಂತಿದೆ ಶ್ರೀ ಗುರೋ
ಬಾಗಿಬೇಡುವೆ ಬೇಗ ಕೈಪಿಡಿ ಮಂತರಾಲಯಮಂದಿರಾ 	5
ವಾಣಿಯಿಂದಭಿಮಾನಿ ತಾನನ ಗಾನಸಂಪದ ಸಾಧನಾ
ಭಾನು ಚಿನ್ಮಯ ಧೇನು ಚಿಂತಿತ ಜ್ಞಾನ ಕೀರ್ತಿ ಮಹಾ ಘನ
ಧ್ಯಾನ ಚಿಂತನ ಗಾನಕೀರ್ತನೆ ಏನು ಇಲ್ಲದ ಹೀನ ನಾ
ಜ್ಞಾನಿ ನೀ ಮತಿಗಾಣಿಸೆನ್ನನು ಮಂತರಾಲಯಮಂದಿರಾ 	6
ರಾಮನಾರ್ಚನೆ ನೇಮದಿಂಕೃತ ಶ್ರೀಮಹಾಕರಯುಗ್ಮನೆ
ಕಾಮಿತಾರ್ಥವನೀವ ಕಾರ್ಯ ವಿರಾಮವಿಲ್ಲದ ಭಾಗ್ಯನೆ
ನೀ ಮಹಾತ್ಮನು ನಾ ದುರಾತ್ಮನು ತಾಮಸಾಂದಧಿ ಪಾತನಾ
ಪ್ರೇಮದಿಂ ಪಥಗಾಣಿಸೋ ಪ್ರಭುವೆ ಮಂತರಾಲಯಮಂದಿರಾ 	7
ತೀರ್ಥಗಂಗೆಯು ಸಾರ್ಥ ಸಾಧನೆ ತೀರ್ಥ ತೋಯ ಪದಾಂಬುಜಾ
ಆರ್ತರಂ ಸುಕೃತಾರ್ಥಗೈಯುವ ಕೀರ್ತಿ ಕಲ್ಪಧ್ರುಮಂ ನಿಜಾ
ಸ್ವಾರ್ಥದೊಳ್ ದಿನ ಜಾರ್ದು ಪೋದವು ತೀರ್ಥಪಾದ ಸುಧೀಂದ್ರಜಾ
ಪ್ರಾರ್ಥಿಸೆ ಪದ ಭಕ್ತಿಯಿಂ ಕೊಡು ಮಂತರಾಲಯಮಂದಿರಾ 	8
ತೀರ್ಥ ಶ್ರೀ ಗುರು ರಾಘವೇಂದ್ರರ ಪ್ರಾರ್ಥಿಸಲ್ ಪದಕೋಮಲಾ
ಮೂರ್ತಿಗೊಂಡಿತು ಪ್ರಾರ್ಥನಾಷ್ಟಕ ಕೀರ್ತನಾಕೃತ ನಿರ್ಮಲಾ
ಪ್ರಾರ್ಥನಾಷ್ಟಕ ಪಾಡಿ ಶ್ರೀಗುರುಚಂದ್ರಿಕಾಮುಖ ಮಂಗಳಾ
ಕೀರ್ತಿ ಶ್ರೀಹರಿವಿಠಲೇಶಗೆ ಸಾಂದ್ರಮಾ ನಿರಲೀಕಲಾ	9
112. ಸಿರಿಗಂಗಾಕನಕ 
							

476 ಗುರು ರಾಘವೇಂದ್ರರ ಚರಣ

476.	ರಾಗ: [ಸಿಂಹೇಂದ್ರಮಧ್ಯಮ] 	ತಾಳ: [ಆದಿ]
ಗುರು ರಾಘವೇಂದ್ರರ ಚರಣಕಮಲಕೆ
ಎರಗು ಭಕ್ತಿಯಿಂದ ಮುಕ್ತಿಪಥದೊರಕುವುದು	ಪ
ಸರಸದಿ ಸರಿಗಮ ನುಡಿವ ಸರಸಿಗಳು
ಪರಮಪುರುಷ ಹರಿಯ ಪರಮಸೇವಕರಿವರು	ಅ.ಪ
ಸದಮಲರು ಸದಗುಣರು ಸಾರಸರ್ವಸ್ವ
ಮುದಮನವ ಕರುಣಿಪರು ತಿಳಿ ರಹಸ್ಯ
ವಿಧವಿಧದಿ ಭಜಿಸಿ ಭಕುತಿದೋರೆ
ಒದಗುವರು ನಿನ್ನ ಸಂಕಷ್ಟಕೆ	1
ವಿಪರೀತಮಹಿಮರು ತಪಶಾಂತಿಗೊಲಿವರು
ಕುಪಿತರಾಗದ ಗುಪಿತರಿವರು ಗಹನರು
ಅಪರಾಧಿ ನೀನೆಂದು ಹಪಹಪಿಸಬೇಡ
ಉಪಶಾಂತಿ ಇವರಿಂದ ಖರೆ ನೀ ತಿಳಿ	2
ತುಂಗಾತಟವಿಹಾರಿಗಳು ಹರಿಯಂತರಂಗವ್ಯಾಪ್ತರು
ಬಂಗಾರದಂಥ ಮಂತ್ರಾಲಯದಿ ನೆಲೆಸಿಹರು
ಶೃಂಗಾರಮೂರುತಿ ಸಿರಿಗಂಗಾಜನಕನ ಅಂತ-
ರಂಗಭಕ್ತರು ಜೀವನ್ಮುಕ್ತರಿವರು	3
							

477 ಮಧುರಾವೀಣಾ ಗಾನಾಲಂಕಾರ

477.	ರಾಗ: [ಸಾರಮತಿ]	ತಾಳ: [ಆದಿ]
ಮಧುರಾವೀಣಾ ಗಾನಾಲಂಕಾರ ಶ್ರೀ
ಸುಧೀಂದ್ರಕರಸರೋಜಶೃಂಗಾರ	ಪ
ನಿನ್ನ ಮಧುಕರ ಮಿಡಿವ ನಾದಲಹರಿ
ಮುನ್ನ ಸುಧೆಗರೆವುತಿದೆ ಶ್ರೀಹರಿ ಶ್ರೀಹರಿ	ಅ ಪ
ಕೃಷ್ಣನ ಮಧುರಮೋಹಕರೂಪು
ಕೃಷ್ಣನೊಲವಿನ ಮುರಳಿ
ಕೃಷ್ಣನ ತಂಟೆತುಂಟಾಟಗಳೆಲ್ಲವ
ಕೃಷ್ಣಾ ಎಂದು ಕರೆದು ಕಂಡಿದ್ದೆ ವ್ಯಾಸತೀರ್ಥ	1
ಹರಿಯ ಒಲವಿನ ಕಂದ ಸಿರಿಯ 
ಮರುಳುಗೊಳಿಸಿ ಮಂಗಳೆಗೆ 
ವರವಿತ್ತ ಕರುಣಾಭರಣ
ಸರಿಗಮವ ನುಡಿಸುತಿಹ ನೀನೆ ಧನ್ಯ	2
ಹರಿಸರ್ವೋತ್ತಮನೆಂಬ ನಿನ್ನ ಗಾನಕ್ಕೆ 
ಸರಿಯುಂಟೆ ಮೂರುಲೋಕದೊಳಗೆ
ಸಿರಿಗಂಗಾಜನಕ ಮೆಚ್ಚಿ ಒಲಿದಿಹ ನಿನ್ನ ಈ-
ಪರಿ ಭಕುತಜನಕಚ್ಚರಿ	3
ಮಂಗಳೆಗೆÉ=ಶ್ರೀ ರಾಘವೇಂದ್ರಸ್ವಾಮಿಗಳ ಪೂರ್ವಾಶ್ರಮದ ಪತ್ನಿಗೆ;
113. ಸಿರಿನಾರಾಯಣ
							

478 ಗತಿಗೋತ್ರ ನೀ ಸುಯತೀಂದ್ರ

478.	ರಾಗ: ಧಾನಿ 	ತಾಳ: ತ್ರಿ
ಗತಿಗೋತ್ರ ನೀ ಸುಯತೀಂದ್ರ
ಪಥ ತೋರೊ ಶ್ರೀರಾಘವೇಂದ್ರ 	ಪ
ಸ್ತುತಿಸಲು ಶ್ರೀ ಹರಿ ದಯಾಸಾಂದ್ರ
ಮತಿ ನೀಡು ಸುತ ಶ್ರೀಸುಧೀಂದ್ರ 	ಅ.ಪ
ಒಂದೇ ಸುಮನದಿ ನಿನ್ನ ಸ್ಮರಣ
ವಂದಿಸುವರಘರಾಶಿ ಹರಣ
ಪೊಂದುವರು ಸಕಲೇಷ್ಟ ಪೂರ್ಣ
ತಂದೆ ಉದ್ಧರಿಸು ಕಂದಳನ 	1
ಪ್ರತಿ ದಿನ ಮೃತ್ತಿಕಾ ತೀರ್ಥಪಾನ
ಅತಿ ಸುಲಭ ವಿರಿಜಾ ನದಿ ಸ್ನಾನ
ಯತಿ ಸಾರ್ವಭೌಮಗೈದಾನ
ಸುತೆಗೆ ಶ್ರೀಪತಿ ಭಕ್ತಿ ಜ್ಞಾನ 	2
ವರ ಮಂತ್ರಾಲಯ ತುಂಗವಾಸ
ಸಿರಿನಾರಾಯಣ ಮರುತ ದಾಸ
ಸುರಧೇನು ತರುಭಕ್ತ ಪೋಷ
ಗುರುರಾಜ ಭುವನೈಕ ಭೂಷ 	3
							

479 ಪೊರೆಯೋ ಶ್ರೀರಾಘವೇಂದ್ರ

479.	ರಾಗ: ಜಯಜಯವಂತಿ 	ತಾಳ: ಕೇರವಾ
ಪೊರೆಯೋ ಶ್ರೀರಾಘವೇಂದ್ರ ಸದ್ಗುಣ ಸಾಂದ್ರ
ತ್ವರಿತದಿ ಭಜಿಪೆನು ಸುರಗುರು ಕುಲಚಂದ್ರ 	ಪ
ಪಾಪವ ಕಳೆದೆನ್ನ ಶ್ರೀಪತಿ ಧ್ಯಾನಕೆ 
ಲೋಪವಾಗದ ಜ್ಞಾನ ದೀಪವ ಹಚ್ಚಿ ನೀ 	1
ನಾನು ಎಂಬುದ ಬಿಟ್ಟು ಜ್ಞಾನಿಗಳೊಡಗೂಡಿ
ಶ್ರೀನಿಧಿ ನಾಮಾಮೃತ ಪಾನವ ಮಾಡಿಸೆ 	2
ವರ ಮಂತ್ರಾಲಯ ವಾಸ ಸಿರಿನಾರಾಯಣ ದಾಸ
ಸ್ಮರಿಪ ಭಕ್ತರ ಪೋಷ ಸ್ಥಿರ ಕರುಣಿಸು ತೋಷ 	3
							

480 ಮಧ್ವ ಮತಾಬ್ಧಿ ಸುಚಂದ್ರ

480.	ರಾಗ: ಕಾಪಿ 	ತಾಳ: ತ್ರಿ
ಮಧ್ವ ಮತಾಬ್ಧಿ ಸುಚಂದ್ರ ರಾಘವೇಂದ್ರ ಶ್ರೀ ಗುರು
ಶುದ್ಧ ಜ್ಞಾನ ಸಂಪೂರ್ಣ ಸುಯತೀಂದ್ರ 	ಪ
ಕರುಣ ಪೂರ್ಣವರಪ್ರದ ಶರಣ್ಯ 
ಹರಿಸುರ ಗುರುದೇವದಾಸವರೇಣ್ಯ 	1
ಭೂಸುರ ರಾಜ ಶ್ರೀಶ ಪ್ರಿಯ ಪ್ರಜಾ
ಭಾಸುರ ಗುಣ ಗಣ ಭವ್ಯ ಮಹೋಜ 	2
ವರ ಪ್ರಹ್ಲಾದ ಧರೇಶ ಬಾಹ್ಲೀಕ
ಗುರುವ್ಯಾಸತೀರ್ಥ ಸಿರಿನಾರಾಯಣ ಪದಾರ್ಥ 	3
							

481 ರಾಘವೇಂದ್ರರ ನೋಡುಣು ನಡಿ ನಡಿ

481.	ರಾಗ: ಜಂಜೂಟಿ 	ತಾಳ: ಕೇರವ
ರಾಘವೇಂದ್ರರ ನೋಡುಣು ನಡಿ ನಡಿ
ಬಾಗಿ ವಂದಿಸಿ ಭಕ್ತಿ ಪಡಿ ಪಡಿ 	ಪ
ಯೋಗಿವರನ ನಾಮ ನುಡಿ ನುಡಿ ಭವ
ರೋಗಹರನ ಧ್ಯಾನ ಮಡಿ ಮಡಿ 	ಅ. ಪ
ಪರಮೇಷ್ಠಿಯ ಸೇವಕ ಶಂಕುಕರ್ಣನು
ಹರಿಪೂಜೆಗೆ ಹೂವ ತರೆ ತರೆ
ಸರಿ ವೇಳೆಗೆ ಬರದಲೆ ಶಾಪದಿ ದೈತ್ಯ
ಹಿರಣ್ಯಕ ಸುತನೆಂದು ಕರೆ ಕರೆ 	1
ತರಳ ಪ್ರಹ್ಲಾದಗೆ ದುರುಳ ಪಿತನು ಬಾಧೆ
ಪರಿ ಪರಿ ವಿಧದಲಿ ಕೊಡೆ ಕೊಡೆ
ಹರಿ ಸರ್ವತ್ರದಲಿ ಇರುವನೆಂಬುದು ಸತ್ಯ
ಭರದಿ ತೋರಿದ ಕಂಬ ವಡೆ ವಡೆ 	2
ದ್ವಾಪರದಲಿ ಬಾಹ್ಲೀಕ ರಾಜರು
ಪಾಪಿ ಕೌರವ ಪಕ್ಷದಿರೆ ಇರೆ
ಭಾಪು ಭೀಮನಿಂ ಮರಣ ಪ್ರಾರ್ಥಿಸುತ
ಶ್ರೀಪತಿ ಚರಣವ ಬೆರೆ ಬೆರೆ 	3
ಯತಿ ವ್ಯಾಸರಾಯರು ಪ್ರತಿದಿನ ಪ್ರಾಣರ
ಸತತ ಸ್ಥಾಪಿಸಿ ಬಹು ಮೆರೆ ಮೆರೆ
ರತಿಪತಿ ಪಿತನ ಪ್ರತಿಮೆ ಕುಣಿಸುತಲಿ
ಶೃತಿ ಚಂದ್ರಿಕೆಗಳನು ಬರೆ ಬರೆ 	4
ಗುರು ರಾಘವೇಂದ್ರರು ವರ ಮಂತ್ರಾಲಯದಿ
ಸುರಧೇನು ತರುವೆಂದು ಕರೆ ಕರೆ
ಸಿರಿನಾರಾಯಣ ವಾಯು ಸುರರಿಗ್ವಾಸನಾಗಿ
ಸ್ಮರಿಪ ಸದ್ಭಕ್ತರ ಧೊರೆ ಧೊರೆ 	5
							

482 ವೃಂದಾವನ ರೂಪ

482.	ರಾಗ: ತೋಡಿ 	ತಾಳ: ರೂಪಕ
ವೃಂದಾವನ ರೂಪ ವರ
ವೃಂದಾರಕ ವೃಂದ ಸನ್ಮಂದಿರ ಶ್ರೀ 	ಪ
ಸತ್ಯಧರ್ಮ ಸುಮತ ನಿರತ
ನಿತ್ಯಮಂಗಲ ಕಾರ್ಯ ಚರಿತ
ಭೃತ್ಯಜನಕಾನಂದಭರಿತ
ಸ್ತುತ್ಯ ಪುಣ್ಯ ಶ್ಲೋಕ ಮಹಿತ 	1
ಕಾಮಿತಪ್ರದ ಕರುಣಾರ್ಣವ
ಸ್ವಾಮಿ ಭಕುತರ ಭವ ತಾಪವ
ಹೋಮಿಸುವ ಸ್ವಪುಣ್ಯ ಪ್ರಭಾವ
ಸೀಮರಹಿತ ಸಂಯಮಿ ಸುದೇವ 	2
ನಾನಾಮಯ ರೋಗ ನಿತ್ಯದಿ ನಿವಾರಕ
ಜ್ಞಾನ ಪೂರ್ಣ ಮಧ್ವಮತೋದ್ಧಾರಕ
ಧ್ಯಾನ ಮಂತ್ರದಿ ಭವಸಂತಾರಕ
ದಾನಶೂರ ಸಿರಿನಾರಾಯಣ ಸೇವಕ 	3
114. ಸಿರಿವಿಠಲ 
							

483 ಜೋ ಜೋ ಶ್ರೀ ರಾಘವೇಂದ್ರರ ಜೋಗುಳ ಪದ

483.	ರಾಗ: [ನವರೋಜû] 	ತಾಳ: [ತಿಶ್ರನಡೆ]
ಜೋ ಜೋ ಜೋ ಶ್ರೀ ರಾಘವೇಂದ್ರರ 
ಜೋಗುಳ ಪದ ಜೋ ಜೋ	ಪ.
ಜೋ ಜೋ ಜೋ ಜೋ ಗುರು ರಾಘವೇಂದ್ರಾ
ಜೋ ಜೋ ಶುಭಗುಣಸಾಂದ್ರ ಯತೀಂದ್ರಾ 	ಅ. ಪ
ನರಹರಿಯೊಲಿಸಿದ ಬಾಲ ಪ್ರಹ್ಲಾದ
ಸಿರಿಕೃಷ್ಣನರ್ಚಕ ವ್ಯಾಸ ಯತೀಂದ್ರ ಜೋ ಜೋ 	1
ಗುರು ಮಧ್ವಮತವನುದ್ಧರಿಸಿದ ಮಹಿಮಾ
ಸಿರಿ ರಾಮ ಸೇವಕ ಗುರು ಸಾರ್ವಭೌಮ ಜೋ ಜೋ 	2
ತಂದೆ ಸಿರಿವಿಠಲನ ಆಜ್ಞೆಯಿಂ ಬಂದೂ 
ನಿಂದೆ ವೃಂದಾವನದಿ ನಿಜ ಭಕ್ತ ಬಂಧು ಜೋ ಜೋ 	3
115. ಸೀತಾರಾಮವಿಠಲ
							

484 ಗುರುರಾಯ ನಮ್ಮ ಗುರುರಾಯನೇ

484.	ರಾಗ: ಧನ್ಯಾಸಿ	ತಾಳ: ಆದಿ
ಗುರುರಾಯ ನಮ್ಮ ಗುರುರಾಯನೇ ಶ್ರೀ ರಾಘವೇಂದ್ರ
ಗುರುರಾಯ ನಮ್ಮ ಗುರುರಾಯನೇ	ಪ
ಬರುವವರ ಕಾಯುತ ಸರುವೇಷ್ಟವೀಯುತ
ಅರಳಿಸಿ ಮನಸುಮ ಪರಿಮಳ ಸುರಿಯುವ	1
ಪರಿತಾಪದಿಂದ ಬಂದ ಭಕುತರ ಮನ ಬೇಗೆ
ಕರಗಿಸುವುದು ನಿನ್ನ ನವನೀತ ಸಮ ಮನ	2
ಕರಗಲು ಮನವದು ಘೃತ ಸಮ ಕರುಣೆಯ
ಸುರಿವುದು ಗುರು ನಿನ್ನ ವರಪ್ರದ ಹಸ್ತ	3
ಪರಿಕಿಸಿನಿನ್ನ ಬಂದ ನಾಸ್ತಿಕ ಮರಳುವ
ಹರಿಹರಿಯೆನ್ನುತ ಹರಿಭಕ್ತಿ ಸವಿಯುತ	4
ನರಹರಿ ಸೀತಾರಾಮವಿಠಲಕೃಷ್ಣರ
ವರದಿಂದ ವರಗಳ ಸುರಿಸುವ ಗುರುವರ	5
							

485 ಚರಣ ಸೇವೆಯ ನೀಡು ಗುರು ರಾಘವೇಂದ್ರ

485.	ರಾಗ: ಪೂರ್ವಿಕಲ್ಯಾಣಿ	ತಾಳ: ಆದಿ
ಚರಣಸೇವೆಯ ನೀಡು ಗುರು ರಾಘವೇಂದ್ರ	ಪ
ಚರಣಸೇವೆಯ ನೀಡು ಕರುಣವನು ನೀ ಮಾಡು
ಶರಣುಬಂದೆನು ನನ್ನ ದುರಿತಗಳನೀಡ್ಯಾಡು	ಅ.ಪ
ಅಸುರಕುಲಲತೆಯ ಹೊಸ ಕುಸುಮ ನೀನರಿದು
ಎಸೆವ ಪರಿಮಳವೆಲ್ಲ ದಿಸೆಗಳಲಿ ನೀ ಸುರಿದು
ವಸುಧೆಯಲಿ ನರಹರಿಯ ಕಂಭದಲಿ ನೀ ಕರೆದು
ಅಸಮಗುರು ನಿಂದಿರುವೆ ವರಗಳನು ಮಳೆಗರೆದು	1
ಯತಿಚಂದ್ರ ನೀನಾಗಿ ಹಿತದಿ ಚಂದ್ರಿಕೆ ಬೀರಿ
ಮತಿವಂತ ಮಹಿಮರಿಗೆ ಮಾರ್ಗವನು ತೋರಿ
ಅತಿಕ್ರೂರ ಕುಹುಯೋಗನೀಗೆ ಸಿಂಹಾಸನವೇರಿ
ಪ್ರತಿರಹಿತ ಶ್ರೀಕೃಷ್ಣಭಕ್ತಿ ಮೆರೆಸಿದ ಸೂರಿ	2
ಕಾಮಿತಾರ್ಥವ ಬೇಡಿ ಹೊಕ್ಕು ಮಂತ್ರಾಲಯವ
ನೇಮದಿಂದಲಿ ಬಂದ ಭಕ್ತರೆಲ್ಲರ ಭಯವ
ಸ್ವಾಮಿ ಸೀತರಾಮವಿಠಲ ಕಳೆಯುತ ದಯವ
ತಾ ಮಾಡಿ ತಂದೀವ ನಿನಗೆ ಕೀರ್ತಿಯ ಜಯವ	3
							

486 ಚಿತ್ತಪಹಾರಕನೇ ಅತ್ಯಂತ ಕರುಣಾಳು

486.	ರಾಗ: ದರ್ಬಾರ್	ತಾಳ: ಆದಿ
ಚಿತ್ತಪಹಾರಕನೇ ಅತ್ಯಂತ ಕರುಣಾಳು
ಉತ್ತಮೋತ್ತಮ ಗುರುವೇ ಶ್ರೀ ರಾಘವೇಂದ್ರ	ಪ
ನಿತ್ಯ ಮಂತ್ರಾಲಯಕೆ ಎಲ್ಲಿಂದಲೋ ಬಂದು
ಎತ್ತಿ ಕೈಮುಗಿವರಿಗೆ ಉತ್ತಮ ವರವೀವ	ಅ. ಪ
ಚಿತ್ತವಹರಿಸುತ ವಿತ್ತಭಾಗ್ಯವನೀವೆ
ಇತ್ತುದವೆಲ್ಲವ ಮತ್ತೆ ನೂರ್ಮಡಿಮಾಡಿ
ಸ್ತುತ್ಯಗುರುವೆ ನಿನಗೆ ಎತ್ತಲೂ ಸರಿಗಾಣೆ
ಸತ್ಯವೋ ಸತ್ಯವೋ ಸತ್ಯ ಭಕ್ತವತ್ಸಲ ಸ್ವಾಮಿ	1
ಈಕ್ಷಿಸಿ ಕರುಣಕಟಾಕ್ಷದಿ ಭಕುತರ
ತಕ್ಷಣ ವರವಿತ್ತು ಪ್ರತ್ಯಕ್ಷವಾಗುತ
ಸೂಕ್ಷ್ಮದೃಷ್ಟಿಯ ಭಕ್ತಪಕ್ಷಪಾತಿಯೇ
ರಕ್ಷಾರಸದ ದಿವ್ಯ ಅಕ್ಷಯ ಪಾತ್ರೆಯೋ	2
ವರುಷಮುನ್ನೂರರಿಂ ನಿನ್ನ ಬೃಂದಾವನ
ವರಗಳ ಧಾರೆಯಸೂಸಿ ಸುರಿಯುತಲಿದೆ
ವರವಾತದೂತನೆ ಮಂತ್ರಾಲಯಪ್ರಭು ನಮ್ಮ
ಮರೆಯಬೇಡವೊ ಸೀತಾರಾಮವಿಠಲದೂತ	3
							

487 ಜೋ ಜೋ ರಾಘವೇಂದ್ರ…….ಯತಿಚಂದ್ರ

487.	ರಾಗ: ಸೌರಾಷ್ಟ್ರ	ತಾಳ: ಅಟ
ಜೋ ಜೋ ಜೋ ಜೋ ಜೋ ರಾಘವೇಂದ್ರ
ಜೋ ಜೋ ಜೋ ಜೋ ಜೋ ಯತಿಚಂದ್ರ	ಪ
ನರಹರಿ ಶ್ರೀರಾಮಕೃಷ್ಣರು ಈಗ
ಭರದಿಂದ ನಿದ್ರೆ ಮಾಡಿಹರಯ್ಯ
ಗುರುರಾಯ ನೀನೀಗ ಮಲಗಯ್ಯ ಬೇಗ
ಅರುಣೋದಯ ಮುನ್ನ ನೀ ಏಳಲಾಗ	1
ವರಬೇಡಿ ಬಂದಂಥ ಭಕುತರು ಈಗ
ಸ್ಮರಿಸುತ್ತ ನಿನ್ನನು ಮಲಗಿದರಯ್ಯ
ಭರದಿಂದ ಭಕ್ತರ ಸ್ವಪ್ನದಿ ಬರಲು
ಗುರುರಾಯ ಮಲಗಲು ಅನುವಾಗು ಬೇಗ	2
ವರಗಳ ನೀ ನಾಳೆ ಸುರಿಸುವುದಕ್ಕೆ
ವರರಾಶಿ ಅಣಿಯಾಗಿ ಇಟ್ಟಿಹುದಯ್ಯ
ಸ್ಮರಿಸಿ ಸೀತಾರಾಮವಿಠಲನ್ನ ಈಗ
ಪರಿಮಳಾಚಾರ್ಯನೆ ಮಲಗೋ ನೀ ಬೇಗ	3
							

488 ತಂದೆ ತಾಯಿ ಬಂಧು ಬಳಗ ನೀನೇ

488.	ರಾಗ: ಹಂಸಾನಂದಿ 	ತಾಳ: ರೂಪಕ
ತಂದೆ ತಾಯಿ ಬಂಧು ಬಳಗ ನೀನೇ ಎಂದು ನಂಬಿ ಬಂದೆ
ಇಂದಿನಿಂದ ನಿನ್ನದೆನ್ನ ಯೋಗಕ್ಷೇಮ ರಾಘವೇಂದ್ರ 	 ಪ
ಮಂದಮತಿಯು ಆದ ನಾನು ಜನ್ಮದಲ್ಲಿ ಸಾರ್ಥಕತೆಯ
ಒಂದು ನಿಮಿಷ ಕಾಣದಾಗಿ ಬಂದೆನಿಂದು ನಿನ್ನ ಬಳಿಗೆ
ತಂದೆಯಾಗಿ ನೀನು ನನ್ನ ಹೊಂದಿಸಯ್ಯ ಭಕ್ತಿಜಗಕೆ
ಎಂದು ಹೊಸತು ಜನ್ಮ ಬಯಸಿ ಬಂದೆನಿಂದು ರಾಘವೇಂದ್ರ 	 1
ಸುಗುಣ ನಿನ್ನ ಕೀರ್ತಿ ಕೇಳಿ ಚಿಗುರಿ ಮನದ ಆಶೆ ಬಂದೆ
ಜಿಗಿದು ತಾಯ ಬಳಿಗೆ ಮಗುವು ಬರುವ ತೆರದಲಿ
ಬಿಗಿದು ಅಪ್ಪಿ ಮೇಲಕ್ಕೆತ್ತಿ ಜ್ಞಾನಕ್ಷೀರ ಬಾಯಿಗುಣಿಸಿ
ಮಗುವು ನಿನ್ನದೆಂದು ಕಾಯೋ ಸುಗುಣಿ ರಾಘವೇಂದ್ರರಾಯ 	2
ದುಷ್ಟಕರ್ಮಋಣವ ಹರಿಸೆ ಇಷ್ಟಬಂಧುವಾಗಿ ಒದಗೋ
ಶ್ರೇಷ್ಠಜ್ಞಾನಧನವ ನೀನೇ ಕೊಟ್ಟು ನನ್ನ ಕರುಣಿಸೋ
ಇಷ್ಟಮೂರ್ತಿ ಸೀತಾರಾಮವಿಠಲನ್ನ ನೆನಹು ಸದಾ
ಕೊಟ್ಟು ನೀನೇ ಕಾಯಬೇಕೋ ಶ್ರೇಷ್ಠಗುರುವೆ ರಾಘವೇಂದ್ರ 	3
							

489 ಬಂದನಿಂದು ಕಣ್ಣಮುಂದೆ ರಾಘವೇಂದ್ರನು

489.	ರಾಗ: ವಸಂತ	ತಾಳ: ಏಕ
ಬಂದನಿಂದು ಕಣ್ಣಮುಂದೆ ರಾಘವೇಂದ್ರನು 
ತಂದು ಶುಭವ ಭೂರಿಸುಖವ ಸುಮ್ಮುನೀಂದ್ರನು	ಪ
ಶೀಲಮೂರ್ತಿ ನಾರಸಿಂಹದೇವನೆದುರಲಿ 
ಬಾಲನಾಗಿ ನಿಂದು ರೂಪ ನೋಡಿ ಮೆರೆದನು	1 
ಲೋಲಕೃಷ್ಣ ಮುಂದೆ ಕುಣಿಯೆ ಸಾಲಿಗ್ರಾಮವ 
ತಾಳಮಾಡಿ ನೋಡಿ ನಲಿದ ಯತಿಯು ಬಂದನು	2
ಎರಡು ರಾಜ್ಯವಾಳಿ ಮೆರೆದ ರಾಯ ಬಂದನು
ಎರಡು ವೃಂದಾವನದಿ ಇರುವ ಸ್ವಾಮಿ ಬಂದನು	3
ತಂಪತೋರಿ ಕಂಪಬೀರಿ ಮನವನರಳಿಸಿ
ಸಂಪದವನಿತ್ತು ಹರಸಿ ಕಾಯಬಂದನು	4
ದಾತಸೀತಾರಾಮವಿಠಲನ ಭಜಕನು
ಪ್ರೀತನಾಗಿ ಬಂದು ನಿಂದ ರಾಘವೇಂದ್ರನು	5
ಎರಡು ರಾಜ್ಯ=ವಿಜಯನಗರ ಮತ್ತು 
ವಿದ್ಯಾಸಾಮ್ರಾಜ್ಯಗಳಿರಬಹುದು; ಎರಡು 
ವೃಂದಾವನ=ನವವೃಂದಾವನದಲ್ಲಿರುವ 
ಮತ್ತು ಮಂತ್ರಾಲಯದಲ್ಲಿರುವ ಬೃಂದಾವನಗಳಿರಬಹುದು;
							

490 ಬೇಡುವೆನು ಮುಗಿದು ಕರವ

490.	ರಾಗ: ಭೈರವಿ 	 ತಾಳ: ಆದಿ
ಬೇಡುವೆನು ಮುಗಿದು ಕರವ ನೋಡುವೆನು ಮನದಣಿಯ
ಮೂಡಿಬಾರಯ್ಯ ಮನದಿ ರಾಘವೇಂದ್ರ ಗುರುರಾಯ 	ಪ
ಸಜ್ಜನರು ಬಂದು ತುಂಗಭದ್ರೆದೇವಿಯನ್ನು ಸಾರಿ
ಮಜ್ಜನವಮಾಡಿ ಪರಿಶುದ್ಧರಾಗಿ ನಡೆತಂದು
ಕಜ್ಜಲಕಾಂತಿ ವೃಂದಾವನದಲಿ ಕಂಡು ನಿನ್ನ
ಹೆಜ್ಜೆಹೆಜ್ಜೆಗೆ ನಮಿಸಿ ನಲಿಯುತಿರುವರೋ 	1
ನೋಡುತ ನಿಂತ ಭಕ್ತಗಡಣ ನೇತ್ರಗಳಿಂದ
ಕೋಡಿ ಹರಿಸುವುದಾನಂದಭಾಷ್ಪವ ಸುರಿಸಿ
ಬೇಡುವುದನೆಲ್ಲ ಮರೆತು ಹಾಡಿಹೊಗಳಿ ಕೀರ್ತಿಯನ್ನು
ನೋಡಿ ದಣಿಯದು ವೃಂದಾವನದಲಿ ಗುರುವೆ ನಿನ್ನ 	2
ಮೂಡೀಬಾರಯ್ಯ ಸೀತರಾಮವಿಠಲಪ್ರಿಯ
ಓಡಿ ಮನಕೆ ನೀನು ಬೇಗ ಬೇಡುವೆನು ಗುರುವರ್ಯ
ಹಾಡಿ ನಾನು ಕುಣಿಯುವೆ ನೋಡಿ ಮನವ ತಣಿಸುವೆ
ಬೇಡುವೆನೀಗ ಬಾರೋ ಸುಜನರಪ್ರಿಯ ಗುರುವೇ 	3
							

491 ಮಂಗಳ ಗುರು ರಾಘವೇಂದ್ರನಿಗೆ

491.	ರಾಗ: ಸುರಟಿ	ತಾಳ: ಛಾಪು
ಮಂಗಳ ಗುರು ರಾಘವೇಂದ್ರನಿಗೆ
ಮಂಗಳ ಸುಖಪೂರ್ಣ ಚಂದ್ರನಿಗೆ	ಪ
ನಂಬಿಕೆ ಛಲವನು ಪ್ರಕಟಿಸುತ
ಕಂಭದಿ ನರಹರಿ ಕರೆದವಗೆ
ಕಂಬನಿಗರೆವರ ಕಾಯುವಗೆ ಭಕ್ತಿ
ಒಂಬತ್ತುವಿಧಬಲ್ಲ ನಿಪುಣನಿಗೆ	1
ಮೋದದಿ ನರಹರಿ ಬಾರೆಂದು ಕರೆಯೆ
ಮೋದದ ತಾಣಕೆ ಹೋಗದಲೆ
ಮೋದವಗರೆಯಲು ಸುಜನರಿಗೆಲ್ಲ
ತಾ ದಯದಿ ಇಲ್ಲೆ ನಿಂದವಗೆ	2
ಸೀತಾರಾಮವಿಠಲದೇವಗೆ
ಪ್ರೀತಿಯ ದೂತನಾದವಗೆ
ಖ್ಯಾತ ಶ್ರೀತುಂಗೆಯತಟದಲ್ಲಿ ತಾ ನಿಂದು
ದೂತರ ಸಲಹುತಲಿರುವವಗೆ	3
							

492 ಮರೆವರೇನೋ ನನ್ನ ಗುರುವರನೆ

492.	ರಾಗ: ತೆಲಂಗ 	 ತಾಳ: ಆದಿ
ಮರೆವರೇನೋ ನನ್ನ ಗುರುವರನೆ ರಾಘವೇಂದ್ರ 	ಪ
ಮರೆಯಬೇಡ ಗುರುವೆ ನನ್ನ ಮರೆಯೊ ನನ್ನ ಪಾಪವನ್ನ 	ಪ
ನರಹರಿಯಪ್ರಿಯನಾದ ದೊರೆಯೆ ಪ್ರಹ್ಲಾದರಾಜ 	1
ಸಿರಿಕೃಷ್ಣ ಕುಣಿದು ಒಲಿದ ರಾಜ ರಾಜ ವ್ಯಾಸರಾಜ 	2
ಸೀತಾರಾಮವಿಠಲಭಜಕ ಸಕಲದಾತ ರಾಘವೇಂದ್ರ 	3
							

493 ವೃಂದಾವನವು ಇರುವೆಡೆ ನೋಡಿ ಬರುವೆ

493.	ರಾಗ: ಸಾರಂಗ	ತಾಳ: ಆದಿ
ವೃಂದಾವನವು ಇರುವೆಡೆ ನೋಡಿ ಬರುವೆ ನಾ ಓಡೋಡಿ
ವಂದ್ಯ ಯತಿಗಳ ದರುಶನಮಾಡಿ ಕುಣಿಯುವೆ ನಲಿದಾಡಿ ಗುರು	ಪ
ಚಿತ್ತವಮಾಡುತ ಚಂದದ ಗಾಡಿ ಇಷ್ಟಾಶ್ವವಹೂಡಿ	
ಹತ್ತುತಲದನು ಸೇರುವೆ ಗುರುವಡಿ ಕ್ಷಣಮಾತ್ರದಿ ನೋಡಿ	1
ರಾಯರು ಭಕ್ತರು ಕರೆದೆಡೆ ಓಡಿ ನಿಲ್ಲುವ ಆ ಮೋಡಿ
ಕಾಯುತಲವರನು ಹರಸಿ ಕಾಪಾಡಿ ಪಾಲಿಪರ್ಗೆಲ್ಲಿದೆ ಜೋಡಿ	2
ಬರುವರು ಭಕ್ತರು ಚಿಂತೆಲಿ ಬಾಡಿ ಮನದಳಲನು ತೋಡಿ
ಹರಿಸಿರಿ ತಾಪವ ಕರುಣವ ಮಾಡಿ ಎನ್ನುತ ತನುವನು ಈಡ್ಯಾಡಿ	3
ಆಯವುತಪ್ಪದ ತೆರದಿ ಕಾಪಾಡಿ ಮೆರೆವುದ ನಾ ಹಾಡಿ
ರಾಯರ ಸ್ಮರಿಸುತ ಹರಿಸುವೆ ಕಾಲಡಿ ಆನಂದ ಬಾಷ್ಪದ ಕೋಡಿ	4
ಗುರು ರಾಘವೇಂದ್ರರು ಹಿಡಿಯುತ ನಾಡಿ ದಿವ್ಯೌಷಧ ನೀಡಿ
ಹರಿವುದು ರೋಗವ ಸಂತಸವೂಡಿ ಈ ಮಹಾವೈದ್ಯರ ರೂಢಿ	5
ಭಕ್ತಿಯ ಬತ್ತಿಯ ಮನದಲಿ ತೀಡಿ ಸಂಭ್ರಮದಾಜ್ಯವ ನೀಡಿ
ಹಚ್ಚಿದ ಜ್ಯೋತಿಲಿ ಬೆಳಗುತ ಗುರುವಡಿ ಕುಣಿಯುವೆ ನಾ ಹಾಡಿ	6
ತಿಳಿಯದು ಆಗುತ ಮನಸಿನ ರಾಡಿ ಬಯಕೆಯು ಕೈಗೂಡಿ
ಹೊಳೆಯುವ ಸೀತಾರಾಮವಿಠಲಡಿ ಗುರುಮೂರ್ತಿ ನೋಡಿ	7
							

494 ಹರಿಪದ ಮಾರ್ಗ ಸುಲಭದಿ ತೋರುವ

494.	ರಾಗ: ಕಾನಡ	ತಾಳ: ಆದಿ
ಹರಿಪದ ಮಾರ್ಗ ಸುಲಭದಿ ತೋರುವ
ಗುರು ರಾಘವೇಂದ್ರರ ಕರುಣೆಯ ಬೇಡುವೆ	ಪ
ಗುರುಗಳ ಸ್ಮರಣೆಯ ಮರೆಯದೆ ಮಾಡಲು
ಹರಿಯ ಪ್ರಸಾದಕೆ ಸಾಧನ ನಿಶ್ಚಯ	ಅ.ಪ
ನರಹರಿ ಸಿರಿದೇವಿ ಕರುಣಾಮೃತವು
ಹರಿಯಿತು ಧರೆಯಲಿ ಪ್ರಹ್ಲಾದನಿಂದ ಆ-
ವರ ರಸಕಲಶವೊ ಗುರುವೃಂದಾವನ
ಸುರಿವುದು ಶಿರದಿ ಸ್ಮರಿಸಲು ಗುರುಗಳ	1
ಕಳೆಯುತ ಕುಹುಯೋಗ ಉಳಿಸುತ ದೊರೆಯ
ಇಳೆಯನು ಆಳಿದ ಗುರುವ್ಯಾಸರಾಜ
ಬಳಿಯಲಿ ಬರುವರ ತಾಪವ ಕಳೆಯಲು
ಹೊಳೆದಿದೆ ಚಂದ್ರಿಕೆ ವೃಂದಾವನದಿ	2
ಅಕ್ಕರೆಯಿಂದ ಸ್ಮರಿಸಲು ಗುರುಗಳ
ರಕ್ಕಸ ಬಾಧೆಯ ಭಕ್ಷಿಪ ಯೋಗವ
ತಕ್ಷಣ ಕಳೆಯುತ ಹರಿಯೆಡೆ ನಡೆಪರು
ಸಾಕ್ಷಿ ಸೀತಾರಾಮವಿಠಲನೆಂದಿಹರೋ	3
116. ಸುಧಾಮವಿಠಲ 
							

495 ನೋಡಿರಿವರು ರಾಘವೇಂದ್ರರು

 495.	ರಾಗ: [ರೇವತಿ]	 ತಾಳ: [ಮಿಶ್ರನಡೆ]
ನೋಡಿರಿವರು ರಾಘವೇಂದ್ರರು ನಾಡಿನೊಳಗೆ ಬೆಳಗುತಿಹರು
ನೋಡಿರಿವರು ರಾಘವೇಂದ್ರರು 	ಪ
ನೋಡಿರಿವರು ರಾಘವೇಂದ್ರರು ನಾಡಿನೊಳಗೆ ಬೆಳಗುತಿಹರು
ಕಾಡಿ ಬೇಡಿ ಸೇವೆ ಮಾಳ್ಪರ ನೋಡಿ ದಯದಿ ಪಾಲಿಸೂವರೂ 	ಅ. ಪ.
ಕುಂದನೊಂದನೆಣೆಸದಿರುವರೂ ಸೇವಿಸುವರ ತಮ್ಮ
ಬಂಧುವೆಂದು ತಿಳಿದು ಪೊರೆವರೂ ಆನಂದವೀಯುತ
ತಂದ ಕಾಣಿಕೆ ಹರಿಕೆಗಳನು ಇಂದಿರಾಪತಿಗೆಂದು ಪಡೆದು
ಸುಂದರಾಂಗ ಸ್ಮರಣೆ ಮಾಡಿ ತಂದೆ ಸಲಹು ಇವರನೆಂದು
ವಂದಿಸುತ ಬೇಡಿಕೊಂಡು ಮಂದಿಗಳನು ಪೊರೆಯುವವರು 	 1
ಶ್ರೀಸುಧೀಂದ್ರ ಯತಿಕುವರರೂ ವಿಜಯೀಂದ್ರತೀರ್ಥರ ಪರಮ
ಶಿಷ್ಯರೂ ಮಾತು ಮಾತಿಗೂ ಹರಿಯ ಸ್ಮರಿಸಿ ದುರಿತರಾಸಿಗಳನು
ಹರಿಸಿ ಹರಿಸಿ ಶಿಷ್ಯರ ಸಲಹಿಕೊಳ್ಳುತ ಕರೆದು ಮಂತ್ರಾಕ್ಷತೆಯನಿತ್ತು
ಕರುಣದಿಂದಲಿ ಕಾಯುತಲಿರುವ ಪರಮಹಂಸರು ಯತಿರಾಘವೇಂದ್ರರು 2
ಮನೆಮಾಡಿ ಮಂತ್ರಾಲಯದಿ ನಿಂತರು ಶ್ರೀಕಾಂತನನ್ನು
ಕರೆದು ಪ್ರಾರ್ಥಿಸಿ ನಿಲಿಸಿಕೊಂಡರು ಕಲಿಯ ಕಲ್ಮಷ ದೋಷವಳಿಸಿ
ಸೇವಿಸುವರ ಪೊರೆಯೊ ಎಂದು ಕರುಣದಿಂದಲಿ ಬೇಡಿಕೊಂಡು
ಹರಿಯ ಕರುಣ ಪಡೆದು ತಮ್ಮ ಭಾಗ್ಯವಿತ್ತು ಶರಣರನ್ನು
ಪೊರೆಯುತಿರುವ ಶ್ರೀ ಸುಧಾಮವಿಠಲನ ಪ್ರೀತಿ ಪಾತ್ರರು 	 3
117. ಹನುಮನಯ್ಯ 
							

496 ಕಾಯೋ ಎನ್ನನು ಗುರುರಾಯ

496.	ರಾಗ: ಆರಭಿ 	ತಾಳ: ಅಟ
ಕಾಯೋ ಎನ್ನನು ಗುರುರಾಯರಾಘವೇಂದ್ರ 
ಜೀಯ ಬೇಡುವೆ ದಯದಿ 	ಪ
ವಾಯುಮತದಿ ಜ್ಞಾನವೀಯೋ ತವಚರಣ
ತೋಯಜಕೆರಗುವೆನೊ ನಾನು 	ಅ. ಪ
ಪವನಮತವನಿಂದಿಸುವರ ಮುರಿದು ಸುಗ್ರಂ-
ಥವೆನಿಪ ಪರಿಮಳವ
ತವಕದಿರಚಿಸುತೆ ಭುವನದೊಳಗೆ ದ್ವೈ-
ತವೆ ನಿಜವೆನಿಸಿರುವೆ ಏ ಗುರುವೆ 	1
ರಾಘವಭಕ್ತ ಸರ್ವರೋಗಹರನೆ ಭವ
ರೋಗ ಬಿಡಿಸಿ ಪೊರೆಯೊ
ಮೂಗನ ವಾಗ್ಮಿಯ ಮಾಡಿದವನೆ ಶಿರ
ಬಾಗುವೆ ಚರಣದೊಳು ಕೃಪಾಳು 	2
ಜನುಮಜನುಮದೊಳು ಎನಗಿದೆ ಪಾಲಿಸೋ
ನಿನಗೆ ಶರಣೆನ್ನುವೆನೊ
ಹನುಮನಯ್ಯನಪದವನಜಭೃಂಗನೆ ಮಾರು-
ತನಮತದೊಳು ಸ್ಥಿರವ ಏದೇವ 	3
ಶ್ರೀಮದ್ರಾಘವೇಂದ್ರ ವಿಜಯಸಾರ ಭಜನೆ
							

497 ಪಾಹಿ ಪಾಹಿ ರಾಘವೇಂದ್ರ ಗುರೋ

497.	ರಾಗ: [ಸಾವೇರಿ]	ತಾಳ: [ತ್ರಿಪುಟ]
ಪಾಹಿ ಪಾಹಿ ರಾಘವೇಂದ್ರ ಗುರೋ
ತ್ರಾಹಿ ತ್ರಾಹಿ ಗುಣಸಾಂದ್ರ ಗುರೋ 	ಪ
ಕನಕ ಕಶಿಪುತನಯಾಂಶ ಗುರೋ
ಜನಕಜೆಪತಿಪದ ಭಕ್ತ ಗುರೋ 	1
ಮಧ್ವಮತಾಂಬುಧಿಸೋಮ ಗುರೋ
ಸದ್ವೈಷ್ಣವ ಪರಿಪಾಲ ಗುರೋ 	 2
ವ್ಯಾಸರಾಜಮೌನೀಂದ್ರ ಗುರೋ
ವಾಸುಕಿಶಯನನೊಲಿಸಿರುವೆ ಗುರೋ 	3
ಸುಧೀಂದ್ರ ಸುಕುಮಾರಾಖ್ಯ ಗುರೋ
ಬುಧಾವಳೀಸಂಸೇವ್ಯ ಗುರೋ 	4
ವರಮಂತ್ರಾಲಯಪುರದಿ ಗುರೋ
ಸುರುಚಿರ ಮಂದಿರಗೈದ ಗುರೋ 	5
ತುಂಗಭದ್ರಾತಟವಾಸ ಗುರೋ
ಸಂಗೀತಪ್ರಿಯನಾದ ಗುರೋ 	6
ಕಾವಿವಸ್ತ್ರ ಕರದಂಡ ಗುರೋ
ಭಾವಶುದ್ಧದಿ ಧರಿಸಿರ್ಪ ಗುರೋ 	7
ತಪ್ತಮುದ್ರಧರದೇಹ ಗುರೋ
ಕ್ಲಪ್ತ ಮೀರಿ ವರವೀವ ಗುರೋ 	8
ಕರ್ಮಜ ದೇವತೆಯಾದ ಗುರೋ
ಕರ್ಮೇಂದಿಗಳರಸೆನಿಪ ಗುರೋ 	9
ಮೂಕನ ವಾಗ್ಮಿಯಗೈದ ಗುರೋ 
ಮಾಕಳತ್ರನ ನಿಜದಾಸ ಗುರೋ 	10
ಕುಷ್ಟರೋಗ ಪರಿಹಾರ ಗುರೋ
ಶಿಷ್ಟಜನರ ಉದ್ಧಾರಿ ಗುರೋ 	11
ಅಂಧಗೆ ಕಂಗಳನೀವ ಗುರೋ
ಮಂದಮತಿಗೆ ಜ್ಞಾನವೀವ ಗುರೋ 	12
ಭೂತಪ್ರೇತ ಭಯನಾಶ ಗುರೋ
ತಾ ತರುಣಿಯೆ ಸಾಕ್ಷಿದಕೆ ಗುರೋ 	13
ಸರ್ವ ರೋಗ ಪರಿಹಾರ ಗುರೋ
ಊರ್ವೀಸುರರಭಿಮಾನಿ ಗುರೋ 	14
ಮಾಯಿಮತವನಕುಠಾರ ಗುರೋ
ವಾಯುಸುತಮತವಿಹಾರ ಗುರೋ 	15
ಸರ್ವೇಶಪದಾಕ್ರಾಂತ ಗುರೋ
ಸರ್ವಾರಿಷ್ಟಕೃತಾಂತ ಗುರೋ 	16
ಶೋಧಿಸಿ ಸಚ್ಚಾಸ್ತ್ರಾರ್ಥ ಗುರೋ
ಮೋದದಿ ಸುಲಲಿತಗೈದ ಗುರೋ 	17
ಮಧುವೈರಿಯ ನಿಜದಾಸ ಗುರೋ
ಸುಧೆಗೆ ಪರಿಮಳವನ್ನಿತ್ತ ಗುರೋ 	18
ಕುಮತಿಗಳನು ನೀ ಗೆಲಿದೆ ಗುರೋ
ಸುಮತಿಗಳಿಗೆ ಬೋಧಿಸಿದೆ ಗುರೋ 	19
ಹರಿನಿಂದಕರನು ಸದೆದೆ ಗುರೋ
ಹರಿಭಕುತರ ನೀ ಪೊರೆದೆ ಗುರೋ 	20
ವೃಂದಾವನದೊಳು ನಿಂದ ಗುರೋ
ಚಂದ್ರಿಕಾರ್ಯ ರಾಘವೇಂದ್ರ ಗುರೋ 	21
ಪಾಪಕದಳಿ ಮಾತಂಗ ಗುರೋ
ಶಾಪಾನುಗ್ರಹಶಕ್ತ ಗುರೋ 	22
ರಾಮಪದಕಮಲಭೃಂಗ ಗುರೊ
ಈ ಮಹಿಮೆಯೊಳು ಪ್ರಖ್ಯಾತ ಗುರೋ 	23
ಐದೊಂದರಿಗಳ ಗೆಲಿದೆ ಗುರೋ
ಐದೊಂದು ಶಾಸ್ತ್ರ ತಿಳಿಸುವ ಗುರೋ 	24
ಶರಣರ ಪಾಲಿಪ ನಮ್ಮ ಗುರೋ
ಕರುಣಾ ಸಾಗರ ನೀನೆ ಗುರೋ 	25
ತಾಮಸಮತಿಗಳ ಕಳೆವ ಗುರೋ
ಕಾಮಿತಫಲಗಳನೀವ ಗುರೋ 	26
ಎಂತಾದರು ಸ್ಮರಿಸುವರ ಗುರೋ
ಭ್ರಾಂತಿಜ್ಞಾನ ಪರಿಹರಿಪ ಗುರೋ 	27
ಸಂಸಾರಾಬ್ಧಿಗೆ ಪೋತ ಗುರೋ
ಕಂಸಾಂತಕನಿಜಭಕುತ ಗುರೋ 	28
ಯೋಗಭ್ಯಾಸಾಸಕ್ತ ಗುರೋ
ಭಾಗೀರಥಿಪಿತಭಕ್ತ ಗುರೋ 	29
ಹರಿಸರ್ವೊತ್ತಮನೆನುತ ಗುರೋ
ಮೆರೆಸಿ ಡಂಗುರ ಹೊಯ್ಸಿರುವೆ ಗುರೋ 	30
ವಾಯು ಜೀವೋತ್ತಮನೆನುತ ಗುರೋ
ಮಾಯಿಗಳಲಿ ಸ್ಥಾಪಿಸಿದ ಗುರೋ 	31
ಗಣನೆಗೆ ಶಕ್ಯವೆ ಮಹಿಮೆ ಗುರೋ
ಮಣಿದು ನುತಿಪೆ ಪಾಲಿಪುದು ಗುರೋ 	32
ನುಡಿಸಿದಂತೆ ನುಡಿಸಿರುವೆ ಗುರೋ
ಜಡಮತಿ ನಾನೇಂ ಬಲ್ಲೆ ಗುರೋ 	33
ಬೇಡುವೆ ಸೆರಗೊಡ್ಡುತಲಿ ಗುರೋ
ನೀಡುವುದೆನಗಿದೆ ವರವ ಗುರೋ 	34
ಜನುಮ ಜನುಮದೊಳಗೆನಗೆ ಗುರೋ
ನಿನ್ನ ನಾಮವ ಸ್ಮರಿಸುವುದ ಗುರೋ 	35
ಹರಿಗುರುಗಳ ದೃಢಭಕುತಿ ಗುರೋ
ಕರುಣಿಸಿ ಕಾವುದು ಎಮ್ಮ ಗುರೋ 	36
ಹನುಮನಯ್ಯನ ನಿಜದಾಸ ಗುರೋ
ಘನಕರುಣಾನಿಧಿಕಲ್ಪತರೋ 	37
ಜಯಮಂಗಳ ರಾಘವೇಂದ್ರ ಗುರೋ
ಶುಭ ಮಂಗಳ ರಾಘವೇಂದ್ರ ಗುರೋ 	38
ಮಂಗಳ ಸದ್ಗುಣ ಸಾಂದ್ರ ಗುರೋ
ತುಂಗಾತೀರ ನಿವಾಸ ಗುರೋ 	39
118. ಹನುಮೇಶವಿಠಲ 
							

498 ಎಲ್ಲಿರುವೆ ತಂದೆ ಬಾರೊ ಗುರುರಾಯನೆ

498.	ರಾಗ: [ಬೆಹಾಗ್]	ತಾಳ: [ಆದಿ]
ಎಲ್ಲಿರುವೆ ತಂದೆ ಬಾರೊ ಗುರುರಾಯನೆ	 ಪ
ಬಳಲುವೆ ಭವದಿ ತಳಮಳಿಸುವೆನೊ
ಕಳವಳಿಕೆಯ ಬಿಡಿಸೊ ಗುರುರಾಯನೆ	1
ತಡ ನೀ ಮಾಡಲು ತಡೆಯದಾಗದೊ
ಗಡ ಬಾ ಇಡು ದಯವಾ	2
ಸಕಲರಲ್ಲಿ ವ್ಯಾಪಕನೆಂದ್ಹರಿಯನು
ಪ್ರಕಟಿಸಿದಿ ಜಗದಿ	3
ಹರಿನಾಮವು ಸರ್ವ ತಾರಕವೆಂಬÉೂೀದು
ಮೆರಸಿದಿ ಧರೆಯೊಳಗೆ	4
ಧೀರನಾದ ಹನುಮೇಶವಿಠಲನಾ
ಧ್ಯಾನದಿ ಮನ ನಿಲ್ಲಿಸೋ	5
							

499 ಗುರು ರಾಘವೇಂದ್ರ ತವ ಚರಣ ದರುಶನಕೆ

499.	ರಾಗ: [ನವರೋಜುó]	ತಾಳ: [ಆದಿ]
ಗುರು ರಾಘವೇಂದ್ರ ತವ ಚರಣ ದರುಶನಕೆ
ಬರಲಿಲ್ಲವೆಂದು ಕೋಪವ ಮಾಡ್ವದ್ಯಾಕೊ 	 ಪ
ಧನವಿಲ್ಲ ಕೈಯೊಳಗೆ ತನುವಿನಲಿ ಬಲವಿಲ್ಲಾ
ಅನುಕೂಲವಿಲ್ಲವೊ ಎನ್ನ ಮನೆಯೊಳಗೆ
ಘನ ಸುಪ್ರಯಾಸ ನಿನ ದಾಸಗೊದಗಿದ ಮೇಲೆ
ಎನ ಮೇಲೆ ದೋಷವೇನಿರುವದಿದರೊಳಗೆ	1
ಗೆಲುವಿಲ್ಲ ಮನದೊಳಗೆ ಫಲವಿಲ್ಲ ಸಂಸಾರ
ಬಲೆಯೊಳಗೆ ಸಿಲುಕಿ ನಾ ಬೇಸತ್ತೆನೋ
ಹಲುಬುವೆನೊ ದಾರಿದ್ರ್ಯ ಬವಣೆಯನು ತಪ್ಪಿಸಿ
ಸುಲಭ ಸಾಧನೆ ಪೇಳಿ ಸಲಹೊ ಗುರುವರನೆ	2
ಒಂದು ಬಗೆಯನು ತೋರೋ ಇಂದೇ ನಾ ಹೊರಡುವೆನೂ
ಛಂದದಿಂದಲಿ ಪರಿವಾರ ಸಹಿತಾ
ತಂದೆ ಹನುಮೇಶವಿಠಲನ ಕಂದನೆ ನಿನ್ನ
ಬಂದು ನೋಡುವೆ ಮಾಡ್ವೆ ಸೇವೆ ತವ ದೂತಾ	3
							

500 ನೀ ಕರುಣಿಸದಿರೆ ಸಾಕುವರ್ಯಾರು

500.	ರಾಗ: [ಪಂತುವರಾಳಿ]	ತಾಳ: [ಆದಿ]
ನೀ ಕರುಣಿಸದಿರೆ ಸಾಕುವರ್ಯಾರು ದ-
ಯಾಕರ ಮೂರುತಿ ರಾಘವೇಂದ್ರ	 ಪ
ಪಾರು ಮಾಡೊ ಸಂಸಾರ ಭವದಿ ಅ-
ಪಾರ ಮಹಿಮ ಗುರು ರಾಘವೇಂದ್ರಾ
ದೂರ ನೋಡದಲೆ ಬಿಡಿಸೊ ತವ ಚರ-
ಣಾರವಿಂದಕೆ ಕೊರಳನು ಕಟ್ಟಿಸೊ	1
ಒಡವೆ ವಸ್ತುಗಳ ಮಡದಿ ಮಕ್ಕಳ
ಕೊಡು ಎನುತಲಿ ಬೇಡುವುದಿಲ್ಲ
ಒಡೆÉಯನೆ ನಿನ್ನಯ ಅಡಿಗಳಲಿ
ದೃಢ ಭಕುತಿಯ ಕೊಡದಿರೆ ಬಿಟ್ಟವನಲ್ಲ	2
ನರರ ಸೇವೆಯಾ ಬಿಡಿಸೊ
ಹರಿವಾಯುಗಳ ಸೇವೆಯಾ ಹಿಡಿಸೊ
ವರದ ಹನುಮೇಶವಿಠಲನಾ
ಸರ್ವೋತ್ತಮನೆಂದು ಕರೆದವನೆ	3
							

501 ಮಂಗಳ ಶ್ರೀ ಯತಿವರಗೆ

501.	ರಾಗ: [ಸುರುಟಿ]	ತಾಳ: [ಆದಿ]
ಮಂಗಳ ಶ್ರೀ ಯತಿವರಗೆ ಮಂಗಳ ಶ್ರೀ ಹರಿಸುತಗೆ
ಮಂಗಳ ಶೋಣಿತ ಪುರಧೀಶÀಗೆ ಮಂಗಳ ಗುರುವರಗೆ	 ಪ
ಹರಿಸರ್ವೋತ್ತಮನೆಂದು ಪರಮ ಭಕ್ತಯಲಿಂದು
ಹರುಷದಿ ಶ್ರೀ ನರಹರಿಯನು ಕಂಭದಿ ತ್ವರದಲಿ ಕರೆದವಗೆ	1
ಪರಿಮಳ ಗ್ರಂಥವ ಮಾಡಿ ಹರಿಯ ಪಾದಕೆ ನೀಡಿ
ಪರಮ ಸುಧೀಂದ್ರರ ಕರದಲಿ ಯತಿ ಆಶ್ರಮ ಪಡೆದವಗೆ	2
ಭಕ್ತರ ಭಾಗ್ಯನಿಧಿಗೆ ನಿತ್ಯಸುಖಾ ಪಡೆದವಗೆ
ಮುಕ್ತಿಯ ದ್ವಾರವ ತೋರುವ ಗುರುರಾಘವೇಂದ್ರನಿಗೆ	3
ಕರುಣಾಸಾಗರನೀತಾ ಕರೆದಲ್ಲೆ ಬರುವಾತಾ
ಪೊರೆಯಂದೊದರಲು ಭಕ್ತರ ಪಿಡಿಯುವ ಮೀರದೆ ಕಾಯ್ವವಗೆ	4
ವರಧೀರ ಹನುಮೇಶವಿಠಲನಾ ನಿಜದಾಸಾ
ಸರಸದಿ ಅರ್ಚನೆಗೊಳ್ಳುವ ಮಂತ್ರಾಲಯ ಪುರವಾಸನಿಗೆ	5
119. ಹರಿಕಡಲಗಿರೀಶ 
							

502 ಎಂಥಾ ದಯವಂತರೋ

502.	ರಾಗ: [ಸಿಂಧುಬೈರವಿ]	ತಾಳ: [ಆದಿ]
ಎಂಥಾ ದಯವಂತರೋ ಮಂತ್ರ ನಿವಾಸರೋ
ಕಂತು ಜನಕನ ಚರಣ ಕಮಲದ ಚಿಂತನೆಯಲ್ಲಿರುವಂಥವರೋ 	ಪ
ರಾಘವೇಂದ್ರ ರಾಯರೋ ಭೋಗೀಯ ಅಂಶಜರೋ
ಭಾಗವತರಿಗೀಶರೋ ಭಾನುಪ್ರಕಾಶರೋ 	1
ಕುಷ್ಟರೋಗವ ಕಳೆಯುವರೋ ದುಷ್ಟರ ಸಂಗ ಬಿಡಿಸುವರೋ
ಶಿಷ್ಟರ ಸಂಗದೋಳಿರಿಸುವರೋ ಇಷ್ಟ ಫಲಪ್ರದಾತರೋ 	2
ಹರಿತತ್ತ್ವದ ವಿಚಾರವ ಮಾಡುತ ಹರಿ ಮಹಿಮೆಯನು ಪೇಳಿದರೋ
ಹರಿಕಡಲಗಿರೀಶನ ಕಂಬದಿ ಸುರರಿಗೆಲ್ಲಾ ತೋರಿದರೋ	3
							

503 ರಾಘವೇಂದ್ರ ಗುರುವೇ ಬೇಗ ಬಾರೊ

503.	ರಾಗ: [ಅಭೋಗಿ]	ತಾಳ: [ರೂಪಕ]
ರಾಘವೇಂದ್ರ ಗುರುವೇ ಬೇಗ ಬಾರೊ ದೊರೆಯೆ
ಕೂಗಿ ಕೂಗಿ ಕರೆವೆ ಬಾಗಿ ಕರಮುಗಿವೆ	ಪ
ಮದಡ ನಾನಯ್ಯ ಮುದವ ಬೀರಯ್ಯ
ಪದುಮಾಕ್ಷ ಮಾಲೆಯ ಧರಿಸಿದ ಕಾಯಾ	1
ದೀನ ಜನರ ತಾತ ಜ್ಞಾನ ಪ್ರದಾತ
ದಾನವ ಕುಲಜಾತ ಮಂತ್ರನಿಕೇತ	2
ನರಹರಿಯ ತೋರಿ ತುರಿಯಾಶ್ರಮ ಧಾರಿ
ಹರಿಕಡಲಗಿರೀಶನ ಭಜಕರೆಂದು ಹೊಡೆದು ಭೇರಿ 	3